ಹೈದರಾಬಾದ್: ತನ್ನ ಸೋದರ ಮಾವನೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು (Nursing Student) ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತೆಲಂಗಾಣದ ವಿಕಾರಾಬಾದ್ (Vikarabad) ಜಿಲ್ಲೆಯ ಕಾಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಯುವತಿಯನ್ನ ಕಂಡ್ಲಾಪುರ ನಿವಾಸಿ ಸಿರಿಶಾ (19) ಎಂದು ಗುರುತಿಸಲಾಗಿದೆ. ತನ್ನ ಸೋದರ ಮಾವನೊಂದಿಗೆ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದ ಸಿರಿಶಾ ಭಾನುವಾರ ನೀರಿನ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸಿರಿಶಾಳನ್ನ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಗ್ರಾಮದ ನೀರಿನ ಹೊಂಡಕ್ಕೆ ಎಸೆದಿದ್ದಾರೆ. ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿ ಶವವನ್ನ ಹೊರತೆಗೆಯಲಾಗಿದೆ ಎಂದು ಪರಿಗಿ ಸಬ್ ಇನ್ಸ್‌ಪೆಕ್ಟರ್ (SI) ವಿಠ್ಠಲ್ ರೆಡ್ಡಿ ತಿಳಿಸಿದ್ದಾರೆ.
ಘಟನೆ ನಂತರ ವಿಕಾರಾಬಾದ್ ಎಸ್ಪಿ ಎನ್.ಕೋಟಿ ರೆಡ್ಡಿ ಅವರು ತನಿಖೆ ನಡೆಸಲು ವಿಶೇಷ ತಂಡ ರಚಿಸಿದ್ದಾರೆ. ಮೃತ ಸಿರಿಶಾಳ ಸೋದರ ಮಾವನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆ ರಾತ್ರಿ ನಡೆದಿದ್ದೇನು?
ಮೃತ ಸಿರಿಶಾ ಜೂನ್ 10 ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಸೋದರ ಮಾವನೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದಾಳೆ. ಆಕೆ ಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳು ಕೊಂದು ನೀರಿನ ಹೊಂಡಕ್ಕೆ ಎಸೆದು ಎಸ್ಕೇಪ್ ಆಗಿದ್ದಾರೆ. ಕಣ್ಣುಗಳಿಗೆ ಕಬ್ಬಿಣದ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ, ಹರಿತವಾದ ಚಾಕುವಿನಿಂದ ದೇಹದ ಇತರ ಭಾಗಗಳನ್ನ ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಕೇಶ್ವಾರ ಗ್ರಾಮದ ಹೊರವಲಯದಲ್ಲಿ ಸ್ವಯಂ ಘೋಷಿತ ಬುಲೆಟ್ ಬಾಬಾನ ಅಸಲಿ ಮುಖ ಇದೀಗ ಆತನ ಪತ್ನಿಯಿಂದಲೇ ಬಯಲಾಗಿದೆ.
ಬುಲೆಟ್ ಬಾಬಾ ಅಲಿಯಾಸ್ ಜಾನು ರಾಜು, ಶಿವಾರೆಡ್ಡಿ ಎಂಬ ನಾನಾ ಹೆಸರಿನ ಈತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಲೆಟ್ ಬಾಬಾ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದನು. ಬಾಬಾನ ಹತ್ತಿರ ಯಾವುದೇ ಪವಾಡ ನಡೆಸುವ ಶಕ್ತಿಯಿಲ್ಲ. ಆತನೊಬ್ಬ ಮೋಸಗಾರ ಎಂದು ಆತನ ಪತ್ನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಬುಲೆಟ್ ಬಾಬಾ ಅಲಿಯಾಸ್ ಶಿವಾರೆಡ್ಡಿ ಎಂದು ಹೆಸರು ಹೇಳಿಕೊಂಡು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದನು. ಈ ಬಾಬಾ ಮೊದಲಿಗೆ 5 ವರ್ಷಗಳ ಹಿಂದೆ ಯಾನಾಗುಂದಿಗೆ ಬಂದು ಅಲ್ಲಿಯೇ ಆಯುರ್ವೆದ ಔಷಧಿ ನೀಡುತ್ತಾ ಕೇಶ್ವಾರ ಗ್ರಾಮಸ್ಥರೊಬ್ಬರ ಮೂಲಕ ಗ್ರಾಮಕ್ಕೆ ಮಹಿಳೆಯೊಂದಿಗೆ ಬಂದು ವಾಸವಾಗಿದ್ದನು. ತದನಂತರ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ತಾವೊಬ್ಬ ಬಾಬಾ ಆಗಿದ್ದು, ತನ್ನಲ್ಲಿ ಶಕ್ತಿ ಇದೆ ಎಂದು ನಂಬಿಸುತ್ತಿದ್ದನು. ಆತನ ಜೊತೆಗೆ ಬಂದ ಮಹಿಳೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದನು. ಅಲ್ಲದೇ ಹಲವರಿಂದ ಹಣ ವಸೂಲಿ ಮಾಡಿಕೊಂಡಿದ್ದಾನೆ ಎಂಬ ಆರೋಪಗಳಿವೆ.
ಅಷ್ಟೇ ಅಲ್ಲದೇ ಗ್ರಾಮದಲ್ಲಿ ಒಬ್ಬರ ಹೊಲದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿ ಅವರ ಹೊಲದಲ್ಲಿಯೇ ಆಶ್ರಮ ನಿರ್ಮಾಣ ಮಾಡಿದ್ದಾನೆ. ನಿತ್ಯವು ಬುಲೆಟ್ ವಾಹನದಲ್ಲಿ ದಟ್ಟನೆಯ ಕೂದಲು ಬಿಟ್ಟು ಓಡಾಡುತ್ತಿದ್ದನು. ಹೀಗಾಗಿ ಈತ ಬುಲೆಟ್ ಬಾಬಾ ಎಂದು ಪ್ರಸಿದ್ಧಿಯಾಗಿದ್ದನು. ಈತನ ಬಗ್ಗೆ ತಿಳಿದ ಪತ್ನಿ ಇಲ್ಲಿಗೆ ಬಂದು ಗ್ರಾಮಸ್ಥರಿಗೆ ಎಲ್ಲವನ್ನು ಹೇಳಿದ್ದಾರೆ. ಆದರೆ ಪತ್ನಿ ಬರುತ್ತಿದ್ದಂತೆ ನಕಲಿ ಬಾಬಾ ಪರಾರಿಯಾಗಿದ್ದಾನೆ.
ಹಲವರ ಜೊತೆ ಅಕ್ರಮ ಸಂಬಂಧ
ಈ ಬಾಬಾ ಮೂಲತಃ ಆಂಧ್ರ ಪ್ರದೇಶದ ವರಂಗಲ್‍ನ ಲೇಬರ್ ಕಾಲೋನಿಯ ನಿವಾಸಿ. ಈತನ ಹೆಸರು ಜನ್ನು ರಾಜು. 2003ರಲ್ಲಿ ಯುವತಿಯೊಂದಿಗೆ ಅಂತರಜಾತಿ ವಿವಾಹವಾಗಿದ್ದ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದರು. ಸಂಸಾರ ಸರಿಯಾಗಿ ಸಾಗುತ್ತಿರುವಾಗಲೇ ಬೇರೆ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದನು. ಇದರಿಂದ ಇಬ್ಬರ ಮಧ್ಯೆ ಜಗಳವಾಗಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದನು.
ಈ ಕುರಿತು ಮೊದಲ ಪತ್ನಿ 2015ರಲ್ಲಿಯೇ ತೆಲಂಗಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆರೋಪಿ ಬಾಬಾ ಅನೇಕ ಮಹಿಳೆಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ನಂತರ 2016ರಲ್ಲಿ ಮತ್ತು 2019ರಲ್ಲಿಯೂ ಇತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ತೆಲಂಗಾಣ ಪೊಲೀಸರಿಂದ ಮಾನ್ವಿ, ಸಿಂಧನೂರಿನಲ್ಲಿ ತೀವ್ರ ವಿಚಾರಣೆ
ರಾಯಚೂರು: ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೂ ರಾಜ್ಯಕ್ಕೂ ಸಂಬಂಧವಿರುವ ಬಗ್ಗೆ ತೆಲಂಗಾಣ ಪೊಲೀಸರಿಗೆ ಅನುಮಾನ ಕಾಡುತ್ತಿದೆ. ಹೀಗಾಗಿ ರಾಯಚೂರು ಜಿಲ್ಲೆಯ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಕರಣಕ್ಕೆ ಸಂಬಂಧಿಸಬಹುದಾದ ಜಿಲ್ಲೆಯ ಮಾಹಿತಿಗಳನ್ನ ಪಡೆದಿರುವ ತೆಲಂಗಾಣ ಪೊಲೀಸರು ಈಗ ಮಾನ್ವಿ, ಸಿಂಧನೂರಿನಲ್ಲಿ ಕೆಲವರ ವಿಚಾರಣೆ ನಡೆಸಿದ್ದಾರೆ. ತೆಲಂಗಾಣ ಸೈಬರ್ ಕ್ರೈಂ ಡಿವೈಎಸ್ಪಿ ಶಾಮಬಾಬು ನೇತೃತ್ವದ ತಂಡ ಆರೋಪಿಗಳ ಮೊಬೈಲ್ ಕರೆಗಳ ಪಟ್ಟಿ ಹಿಡಿದು, ಮೊಬೈಲ್ ನಂಬರ್ ಆಧರಿಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅತ್ಯಾಚಾರ ಕೊಲೆ ಪ್ರಕರಣ ಆರೋಪಿಗಳು ಹೈದ್ರಾಬಾದ್ ನಿಂದ ಮಾನ್ವಿ ತಾಲೂಕಿಗೆ ಸಾಮಗ್ರಿ ಸಾಗಿಸುವ ವೇಳೆ ಇಲ್ಲಿನ ಅಂಗಡಿ ಮಾಲೀಕರಿಗೆ, ಪೆಟ್ರೋಲ್ ಬಂಕ್ ಮಾಲೀಕರಿಗೆ, ಪಂಚರ್ ಅಂಗಡಿ ಮತ್ತು ಚಿಕನ್ ಅಂಗಡಿ ಯವರಿಗೆ ಮಾಡಿದ ಮೊಬೈಲ್ ಕರೆ ಮೇಲೆ ವಿಚಾರಣೆ ನಡೆಸಿದ್ದಾರೆ. ಕೊಪ್ಪಳ ಗಂಗಾವತಿಯಲ್ಲೂ ವಿಚಾರಣೆ ನಡೆಸಲಿರುವ ಪೊಲೀಸ್ ಅಧಿಕಾರಿಗಳು ಆರೋಪಿಗಳು ಬೇರೆ ಎಲ್ಲಿಯಾದರೂ ಇದೇ ರೀತಿಯ ಕೃತ್ಯಗಳನ್ನ ಎಸಗಿದ್ದಾರಾ ಅನ್ನೋ ತನಿಖೆಯಲ್ಲಿದ್ದಾರೆ.
ಕೊಪ್ಪಳ: ಪಶುವೈದ್ಯೆ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ (ಎ1) ಮಹಮ್ಮದ್ ಪಾಷಾನಿಗೆ ಕೊಪ್ಪಳದ ಗಂಗಾವತಿ ತಾಲೂಕಿನ ಬಸಾಪಟ್ಟಣದ ನಂಟಿದ್ದು, ಅಮಾನುಷ ಘಟನೆ ಜರುಗುವ 3 ದಿನ ಮುನ್ನ ಬಸಾಪಟ್ಟಣಕ್ಕೆ ಬಂದಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ.
ಹೈದರಾಬಾದ್ ಹೊರವಲಯದ ಚೌಟನಪಲ್ಲಿಯಲ್ಲಿ ಜರುಗಿದ ಪಶುವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧ ಪ್ರಮುಖ ಆರೋಪಿ ಮಹ್ಮದ್ ಲಾರಿ ಚಾಲಕನಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಮುಖ ನಗರಗಳಿಗೆ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ. ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ದೊರೆಯುವ ಹಗುರವಾದ ಇಟ್ಟಿಗೆಗಳಿಗೆ ಹೈದರಾಬಾದ್ ಭಾಗದಲ್ಲಿ ಬೇಡಿಕೆಯಿದ್ದು, ಆರೋಪಿ ಕಳೆದ 2 ವರ್ಷಗಳಿಂದ ಬಸಾಪಟ್ಟಣದಿಂದ ಇಟ್ಟಿಗೆಗಳನ್ನು ಕೊಂಡ್ಯೊಯುತ್ತಿದ್ದ. ಅಮಾನುಷ ಘಟನೆ ನವೆಂಬರ್ 27ರಂದು ಜರುಗಿದ್ದು, ಪ್ರಮುಖ ಆರೋಪಿ ಮಹ್ಮದ್ ಆರೋಪಿ ನವೆಂಬರ್ 24ರಂದು ಬಸಾಪಟ್ಟಣದಲ್ಲಿದ್ದ. ಇದನ್ನು ಓದಿ: ಎನ್‍ಕೌಂಟರ್ ನಡೆಸುವ ವೇಳೆ, ನಡೆಸಿದ ನಂತರ ಯಾವೆಲ್ಲ ಪ್ರಕ್ರಿಯೆ ಮಾಡಬೇಕು? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಸ್ಥಳೀಯ ಇಟ್ಟಿಗೆ ಮಾರಾಟದ ದಲ್ಲಾಳಿ ಅಬ್ದುಲ್ ಸೇರಿ ಇತರರನ್ನು ಸಂಪರ್ಕಿಸಿ ಇಟ್ಟಿಗೆಗಳನ್ನು ತನ್ನ ಲಾರಿಗೆ ಲೋಡ್ ಮಾಡಿಕೊಂಡಿದ್ದ. ದಾಸನಾಳದ ಎಡದಂಡೆ ಕಾಲುವೆ ಬಳಿಯಿರುವ ಪ್ರಭು ಎಂಬುವರ ಇಟ್ಟಿಗೆ ಭಟ್ಟಿಯಿಂದಲೇ ಇಟ್ಟಿಗೆಗಳನ್ನು ಲೋಡ್ ಮಾಡಿಕೊಂಡಿದ್ದು, ಹೊರ ರಾಜ್ಯಕ್ಕೆ ತೆರಳುವಾಗ ಟೋಲ್‍ಗೇಟ್‍ನಲ್ಲಿ ಟೋಕನ್ ನೀಡುವ ವ್ಯವಸ್ಥೆಯಿದ್ದು, ಟೋಕನ್ ಇಲ್ಲದಿದ್ದರಿಂದ ಹೈದರಾಬಾದ್ ತಲುಪುವುದು ಒಂದು ದಿನ ತಡವಾಗಿದೆ. ಹೀಗಾಗಿ ಖರೀದಿದಾರ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹೊರವಲಯದಲ್ಲಿ ತಂಗಿದ್ದರು. ಹೊಸ ಆರ್ಡರ್ ದೊರೆತಿದ್ದರಿಂದ ದಲ್ಲಾಳಿ ಅಬ್ದುಲ್, ಮಹ್ಮದ್‍ಗೆ ಪೋನಿನ ಮೂಲಕ ಸಂಪರ್ಕಿಸಲು ಯತ್ನಿಸಿದರು. ಇದನ್ನು ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ
ಬಸಾಪಟ್ಟಣದ ದಲ್ಲಾಳಿಗಳಿಂದ ಆರೋಪಿಗಳ ದೂರವಾಣಿಗೆ ಕರೆ ಹೋಗಿದೆ. ಇದೇ ಆಧಾರದಡಿ ತೆಲಂಗಾಣದ ಪೊಲೀಸರು ಘಟನೆ ನಡೆದ 2 ದಿನದ ನಂತರ ಬಸಾಪಟ್ಟಣಕ್ಕೆ ಮಫ್ತಿಯಲ್ಲಿ ಆಗಮಿಸಿದ್ದಾರೆ. ಎಎಸ್ಪಿ ನೇತೃತ್ವದ ನಾಲ್ವರು ಪೊಲೀಸರ ತಂಡ ಅಬ್ದುಲ್ ಸೇರಿ ಇತರೆ ದಲ್ಲಾಳಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಸಾಪಟ್ಟಣದಿಂದ ಗಂಗಾವತಿವರೆಗಿನ ರಾಜ್ಯಹೆದ್ದಾರಿಯಲ್ಲಿರುವ ಮೂರು ಪೆಟ್ರೋಲ್ ಬಂಕ್, ಎರಡು ಬೈಕ್ ಶೋರೂಂ ಸೇರಿದಂತೆ ಖಾಸಗಿ ವ್ಯಕ್ತಿಗಳ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಕೆಲವಡೆ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪಡೆದಿರುವ ಮಾಹಿತಿಯಿದೆ.
ತೆಲಂಗಾಣ ಪೊಲೀಸರು ಇಟ್ಟಿಗೆ ಭಟ್ಟಿಗೆ ಆಗಮಿಸಿರುವುದನ್ನು ತಯಾರಕರು ಒಪ್ಪಿಕೊಂಡಿದ್ದರೂ, ಈ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸಲು ಹೆದರುತ್ತಿದ್ದಾರೆ. ಮಹ್ಮದ್ ಆಗಾಗ್ಗೆ ಬರುತ್ತಿರುವ ಬಗ್ಗೆ ತಯಾರಕರ ಗುಂಪಿನ ಪ್ರಮುಖರೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರ ನೆರವಿಲ್ಲದೇ 2 ದಿನ ಬಸಾಪಟ್ಟಣ, ದಾಸನಾಳ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ತೆಲಂಗಾಣ ಪೊಲೀಸರು ಸಂಚರಿಸಿದ್ದು ಅಚ್ಚರಿ ಮೂಡಿಸಿದೆ. ಇದನ್ನು ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
ನವದೆಹಲಿ: ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ವಿಚಾರ ರಾಷ್ಟ್ರ ವ್ಯಾಪಿ ಚರ್ಚೆಯಾಗುತ್ತಿದೆ. ಎನ್‍ಕೌಂಟರ್ ಮಾಡಿದ್ದ ಪೊಲೀಸರ ನಡೆಯನ್ನು ಇಡೀ ದೇಶವೇ ಸಮರ್ಥಿಸಿಕೊಂಡರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ತೆಲಂಗಾಣದ ಎನ್‍ಕೌಂಟರ್ ಸಂಬಂಧ ವಕೀಲರು ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ವಕೀಲರಾದ ಜಿ.ಎಸ್.ಮಣಿ ಮತ್ತು ಪ್ರದೀಪ್ ಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 51 ಪುಟಗಳ ಅರ್ಜಿ ಸಲ್ಲಿಸಿರುವ ಇಬ್ಬರು ವಕೀಲರು ತೆಲಂಗಾಣದಲ್ಲಿ ನಡೆದ ಎನ್‍ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ 2014 ರ ಸುಪ್ರೀಂಕೋರ್ಟ್ ನಿಯಮಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.
2014 ರಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಿನ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಆರ್.ಎಂ.ಲೋಧ ಅವರು 16 ಅಂಶಗಳ ಮಾರ್ಗದರ್ಶನಗಳನ್ನು ರೂಪಿಸಿದ್ದು, ಈ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಜಿ.ಎಸ್.ಮಣಿ ಹೇಳಿದ್ದಾರೆ.
ಎನ್‍ಕೌಂಟರ್ ಮಾಡಬೇಕಾದ ವೇಳೆ ಮತ್ತು ಎನ್‍ಕೌಂಟರ್ ಆದ ಬಳಿಕ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು? ಸುಪ್ರೀಂ ಕೋರ್ಟ್ ರೂಪಿಸಿರುವ ಮಾರ್ಗದರ್ಶನಗಳನ್ನು ಇಲ್ಲಿ ನೀಡಲಾಗಿದೆ.
1. ಆರೋಪಿಗಳ ಚಲನವಲನ ಮತ್ತು ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಅದನ್ನು ಬರವಣಿಗೆ ಅಥವಾ ಎಲೆಕ್ಟ್ರಾನಿಕ್ ಫಾರ್ಮ್ ನಲ್ಲಿ ದಾಖಲು ಮಾಡಬೇಕು.
2. ಈ ದಾಖಲೆಯಲ್ಲಿ ಅನುಮಾನ ಇರುವ ಆರೋಪಿ ಮತ್ತು ಆತನ ಸ್ಥಳವನ್ನು ಬಹಿರಂಗ ಪಡಿಸುವ ಅಗತ್ಯ ಇಲ್ಲ.
3. ಎನ್‍ಕೌಂಟರ್ ಪ್ರಕರಣಗಳಲ್ಲಿ ಪೊಲೀಸ್ ಗನ್ ಬಳಕೆಯಾಗಿದ್ದಾರೆ ಎಫ್‍ಐಆರ್ ದಾಖಲು ಆಗಲೇಬೇಕು.
4. ಸಿಐಡಿ ಅಥವಾ ಮತ್ತೊಂದು ಪೊಲಿಸ್ ಠಾಣೆಯ ಪೊಲೀಸರಿಂದ ಸ್ವತಂತ್ರ ತನಿಖೆ ಆಗಬೇಕು. ಈ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿ ಮಾಡಬೇಕು
ಎ. ಎನ್‍ಕೌಂಟರ್ ನಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಗಿಂತ ಮೇಲ್ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಬೇಕು.
ಬಿ. ಎನ್‍ಕೌಂಟರ್ ಮೃತ ಆರೋಪಿಯ ಕಲರ್ ಫೋಟೋ ತೆಗೆಯಬೇಕು.
ಸಿ. ಸ್ಥಳದಲ್ಲಿನ ಪ್ರಮುಖ ದಾಖಲೆಗಳು ಮತ್ತು ಸಾವಿನ ಸಾಕ್ಷಿಗಳನ್ನು ಸಂಗ್ರಹಿಸಬೇಕು (ಬಟ್ಟೆ, ಕೂದಲು, ರಕ್ತ, ಇತ್ಯಾದಿ ಪೂರಕ ಅಂಶಗಳು)
ಡಿ. ಎನ್‍ಕೌಂಟರ್ ನಡೆದ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಮತ್ತು ಸಾರ್ವಜನಿಕರು ಇದ್ದಲ್ಲಿ ಅವರ ಹೆಸರು, ವಿಳಾಸ, ಮೊಬೈಲ್ ನಂಬರ್ ದಾಖಲಿಸಿಕೊಳ್ಳಬೇಕು.
ಇ. ಎನ್‍ಕೌಂಟರ್‍ಗೆ ಕಾರಣ, ಎನ್‍ಕೌಂಟರ್ ಆದ ರೀತಿ, ಸ್ಥಳ ಹಾಗೂ ಸತ್ತ ಸಮಯ ಎಲ್ಲವನ್ನೂ ದಾಖಲಿಸಬೇಕು. ಸನ್ನಿವೇಶವನ್ನು ಸೃಷ್ಟಿಸಿಡಬೇಕು.
ಎಫ್. ಮೃತ ಆರೋಪಿಯೂ ಸೇರಿ ಎನ್‍ಕೌಂಟರ್ ವೇಳೆ ಇದ್ದ ಪೊಲೀಸ್ ಸಿಬ್ಬಂದಿಯ ಬೆರಳಚ್ಚು ಪ್ರತಿ ಪಡೆದು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ತನಿಖೆ ಮಾಡಿಸಬೇಕು.
ಜಿ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ಮಾಡಬೇಕು. ಅದರಲ್ಲಿ ಒಬ್ಬರು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯ ಅಧಿಕಾರಿ ಆಗಿರಬೇಕು. ಮರಣೋತ್ತರ ಪರೀಕ್ಷೆ ವಿಡಿಯೋ ಚಿತ್ರೀಕರಣ ಆಗಬೇಕು ಅದನ್ನು ಸಂರಕ್ಷಿಸಿಡಬೇಕು.
ಎಚ್. ಎನ್‍ಕೌಂಟರ್ ನಲ್ಲಿ ಬಳಕೆಯಾದ ಶಸ್ತ್ರಾಸ್ತ್ರ(ಗನ್ ಬಂದೂಕು, ಪಿಸ್ತೂಲ್, ಗುಂಡು, ಬುಲೆಟ್ ಕಾರ್ಟಿಜ್ಡ್) ಸಂರಕ್ಷಣೆ ಮಾಡಬೇಕು.
5. ಸಹಜವಾಗಿ ಎನ್‍ಕೌಂಟರ್ ನಡೆದಿದೆಯಾ, ಆಕಸ್ಮಿಕವಾಗಿ ಘಟನೆ ನಡೆದಿದ್ದ ಅಥವಾ ಆರೋಪಿ ಪೊಲೀಸ್ ಗನ್ ನಿಂದ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಕೊಲೆಯೋ ಎನ್ನುವುದನ್ನು ಪತ್ತೆ ಹಚ್ಚಬೇಕು.
6. ಮ್ಯಾಜಿಸ್ಟ್ರೇಟ್ ತನಿಖೆ ಆಗಬೇಕು.
7. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ತಕ್ಷಣ ಮಾಹಿತಿ ನೀಡಬೇಕು.
8. ಎನ್ ಕೌಂಟರ್ ಬಗ್ಗೆ ಅನುಮಾನ ಇದ್ದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶ ಮಾಡಬಹುದು.
9. ಎನ್‍ಕೌಂಟರ್ ಆದ ಮೇಲೆ ಆರೋಪಿ ಗಾಯಾಳು ಆದಲ್ಲಿ ಅವನಿಗೆ ವೈದ್ಯಕೀಯ ನೆರವು ನೀಡಬೇಕು ಮತ್ತು ಅವರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಅಥವಾ ಹಿರಿಯ ವೈದ್ಯಾಧಿಕಾರಿ ದಾಖಲಿಸಿಕೊಳ್ಳಬೇಕು.
10. ವಿಳಂಬ ಮಾಡದೆ ಎಫ್‍ಐಆರ್ ದಾಖಲು ಮಾಡಿಕೊಳ್ಳಬೇಕು (ಎಫ್‍ಐಆರ್ ಡೈರಿ ಎಂಟ್ರಿ ಪಂಚನಾಮ, ಸ್ಕೆಚ್ ಗಳನ್ನು ತಕ್ಷಣ ಸಂಬಂಧಿಸಿದ ಕೋರ್ಟ್ ನೀಡಬೇಕು)
11. ವಿಚಾರಣೆ ಅಂತ್ಯದ ಬಳಿಕ ವರದಿಯನ್ನು ಕೋರ್ಟಿಗೆ ನೀಡಬೇಕು.
12. ಮೃತ ಆರೋಪಿಯ ಹತ್ತಿರದ ಸಂಬಂಧಿಗಳಿಗೆ ತಕ್ಷಣ ಮಾಹಿತಿ ನೀಡಬೇಕು.
13. ವರ್ಷಕ್ಕೆ ಎರಡು ಬಾರಿ ಎನ್‍ಕೌಂಟರ್ ಆಗಿರುವ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಡಿಜಿಪಿ ನೀಡಬೇಕು.
14. ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಬಲಿಯಾದ ಕುಟುಂಬಕ್ಕೆ ಪರಿಹಾರ ನೀಡಬೇಕು.
15. ಪೊಲೀಸ್ ಅಧಿಕಾರಿಗಳು ತನಿಖೆ ವೇಳೆ ತಮ್ಮ ಆಯುಧವನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಬೇಕು, ತನಿಖಾಧಿಕಾರಿಗಳು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಎನ್‍ಕೌಂಟರ್ ಆಗಿರುವ ಘಟನೆ ಬಗ್ಗೆ ಪೊಲೀಸ್ ಕುಟುಂಬಕ್ಕೆ ಮಾಹಿತಿ ನೀಡಬೇಕು ಅಗತ್ಯ ಇದ್ದಲ್ಲಿ ಕಾನೂನು ನೇರವು ನೀಡಬೇಕು.
ಎ. ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಗೆ ತಕ್ಷಣಕ್ಕೆ ಯಾವುದೇ ಪ್ರಶಸ್ತಿ ನೀಡಬಾರದು.
ಬಿ. ಬಡ್ತಿ ಅಥವಾ ಶೌರ್ಯ ನೀಡುವಂತಿಲ್ಲ, ತಪ್ಪಿಲ್ಲ ಎನ್ನುವುದು ಸಾಬೀತಾದ ಬಳಿಕ ಮಾತ್ರ ಪ್ರಶಸ್ತಿಗೆ ನೀಡಬೇಕು.
16. ಎನ್‍ಕೌಂಟರ್ ಗೆ ಬಲಿಯಾದ ಕುಟುಂಬಕ್ಕೆ ತನಿಖೆ ಸರಿಯಾಗಿ ನಡೆದಿಲ್ಲ ಎನ್ನುವ ಅನುಮಾನ ಇದ್ದಲ್ಲಿ ಕೋರ್ಟ್ ಮೊರೆ ಹೋಗಬಹುದು.
ಬೆಂಗಳೂರು: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ. ಈ ಬಗ್ಗೆ ನಟಿ ಅದಿತಿ ಪ್ರಭುದೇವ ಕಣ್ಣೀರು ಹಾಕುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ನಟಿ ಅದಿತಿ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಎಲ್ಲರಿಗೂ ನಮಸ್ಕಾರ. ಇಂದು ನನಗೆ ತುಂಬಾ ತುಂಬಾ ಖುಷಿಯಾಗುತ್ತಿದೆ. ತಲಾತಲಾಂತರದಿಂದ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ಇತ್ತೀಚೆಗೆ ಪ್ರಿಯಾಂಕಾ ರೆಡ್ಡಿ ಅವರದ್ದು ಒಂದು ಘೋರವಾದ ಸಾವು. ಆ ಸಮಯದಲ್ಲಿ ನನಗೆ ಏನು ಹೇಳಬೇಕು ಎಂದು ತಿಳಿದಿರಲಿಲ್ಲ. ಒಂದು ರೀತಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಭಯ ಶುರುವಾಗಿತ್ತು. ಹೆಣ್ಣಾಗಿ ಹುಟ್ಟಿದ್ದು ತಪ್ಪಾ ಎಂಬ ಪ್ರಶ್ನೆ ಪದೇ ಪದೇ ನನ್ನ ಕಣ್ಣೇದರು ಬರುತ್ತಿದ್ದವು” ಎಂದರು.
ದೈಹಿಕ ಅತ್ಯಾಚಾರ ಮಾತ್ರವಲ್ಲದೇ, ಪ್ರತಿನಿತ್ಯ ಮಾನಸಿಕವಾಗಿ ದೌರ್ಜನ್ಯ ನಡೆಯುತ್ತಲೇ ಇವೆ. ಆದರೆ ಇಂದು ಪ್ರತಿ ಹೆಣ್ಣು ಮಕ್ಕಳ ತಂದೆ-ತಾಯಂದಿರು ಸೇರಿದಂತೆ ಎಲ್ಲರ ಶಾಪ ತಟ್ಟಿತು ಅನ್ನಿಸುತ್ತದೆ. ಅದೇ ಜಾಗದಲ್ಲಿ ಆ ಪಿಶಾಚಿಗಳ ಎನ್‍ಕೌಂಟರ್ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ತುಂಬಾ ಸಂತಸವಾಗಿದೆ. ಇಡೀ ಪೊಲೀಸ್ ತಂಡಕ್ಕೆ ಧನ್ಯವಾದಗಳು ಎಂದು ಪೊಲೀಸರಿಗೆ ಅದಿತಿ ಸೆಲ್ಯೂಟ್ ಮಾಡಿದರು.
ಇದೇ ವೇಳೆ ಇನ್ನೊಂದು ಮಾತು ಹೇಳೋಕೆ ಇಷ್ಟಪಡುತ್ತೇನೆ, ದಯವಿಟ್ಟು ಎಲ್ಲಾ ಹೆಣ್ಣು ಮಕ್ಕಳು ಮತ್ತು ಕುಟುಂಬದವರು ನಮ್ಮ ಸುರಕ್ಷತೆಯನ್ನು ಮೊದಲು ನೋಡಿಕೊಳ್ಳೋಣ. ಯಾಕೆಂದರೆ ನಮ್ಮ ಒಂದು ಸಣ್ಣ ತಪ್ಪಿನಿಂದ ನಮ್ಮ ಇಡೀ ಕುಟುಂಬ ಜೀವನ ಪೂರ್ತಿ ನೋವನ್ನು ಅನುಭವಿಸುತ್ತದೆ. ಹೀಗಾಗಿ ಮೊದಲು ನಾವು ಸುರಕ್ಷಿತವಾಗಿ ಇರೋಣ, ಆಮೇಲೆ ಬೇರೆಯದರ ಬಗ್ಗೆ ಯೋಚನೆ ಮಾಡೋಣ. ಎಲ್ಲಾ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟು, ನಮ್ಮನ್ನ ಕಾಪಾಡಲು ಸಹಾಯ ಮಾಡುವ ಎಲ್ಲಾ ಹೋರೋಗಳಿಗೂ ಕೋಟಿ ಕೋಟಿ ಧನ್ಯವಾದಗಳು. ಒಂದು ವೇಳೆ ನಮಗೆ ಒಳ್ಳೆಯದು ಮಾಡಲು ಸಾಧ್ಯವಾಗದಿದ್ದರೂ ಕೆಟ್ಟದನ್ನು ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ನವದೆಹಲಿ: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್‍ಕೌಂಟರ್ ಪ್ರಕರಣ ಒಂದು ಯೋಜಿತ ಕೊಲೆ ಎಂದು ಮಾನವಹಕ್ಕುಗಳ ಸಂಸ್ಥೆ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್’ (ಪಿಯುಸಿಎಲ್) ಆರೋಪ ಮಾಡಿ, 4 ಪ್ರಶ್ನೆಗಳನ್ನು ಮುಂದಿಟ್ಟಿದೆ.
ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಮಾನವಹಕ್ಕುಗಳ ಸಂಸ್ಥೆ ಮಾತ್ರ ಪ್ರಕರಣಕ್ಕೆ ಸಂಬಂಧಸಿದಂತೆ 4 ಪ್ರಶ್ನೆಗಳನ್ನು ಮುಂದಿಟ್ಟಿದೆ.
1.ಅಪರಾಧದ ದೃಶ್ಯವನ್ನು ಮರುಸೃಷ್ಟಿ ಮಾಡಲು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಅದು 50ಕ್ಕೂ ಹೆಚ್ಚು ಮಂದಿ ತೆಲಂಗಾಣ ಪೊಲೀಸ್ ನೇತೃತ್ವದಲ್ಲಿ ಏಕೆ ನಡೆಸಲಾಯಿತು?
2. ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಅವರು ಯಾವುದೇ ಶಸ್ತ್ರಗಳನ್ನು ಹೊಂದಿರಲಿಲ್ಲ. ಅಲ್ಲದೇ ಆರೋಪಿಗಳ ಕೈಗೆ ಕೊಳ ಹಾಕಿ, ಮುಖವನ್ನು ಮುಚ್ಚಿ ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ಈ ಮಾರ್ಗ ಬಿಟ್ಟರೇ ಅವರನ್ನು ಕ್ರೈಂ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಲು ಬೇರೆ ದಾರಿಯೇ ಇರಲಿಲ್ಲ. ಆದರೆ ಅವರು ಹೇಗೆ ಪೊಲೀಸರಿಂದ ತಪ್ಪಿಸಿಕೊಂಡು ಅಷ್ಟು ದೂರ ಹೋಗಲು ಸಾಧ್ಯ? ಇದನ್ನು ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
4. ಆರೋಪಿಗಳು ಯಾವುದೇ ಶಸ್ತ್ರ ಹೊಂದಿರಲಿಲ್ಲ. ಒಂದೊಮ್ಮೆ ಪೊಲೀಸರಿಗೆ ಶೂಟ್ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದರು ಕೂಡ ಆರೋಪಿಗಳ ಮೊಣಕಾಲಿನ ಕೆಳಭಾಗಕ್ಕೆ ಶೂಟ್ ಮಾಡಿ ಅವರನ್ನು ತಡೆಯಬಹುದಿತ್ತು. ಆದರೆ ಪೊಲೀಸರು ಆರೋಪಿಗಳ ದೇಹದ ಪ್ರಮುಖ ಅಂಗಾಂಗಗಳಿಗೆ ಶೂಟ್ ಮಾಡಿದ್ದು ಯಾಕೆ?
ಪಿಯುಸಿಎಲ್ ಸಂಸ್ಥೆ ಪೊಲೀಸರ ಈ ಕೃತ್ಯವನ್ನು ಯೋಜಿತ ಕೊಲೆ ಎಂದು ಕರೆದಿದ್ದು, ಎನ್‍ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ. ಅಲ್ಲದೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ. ಇದನ್ನು ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ
ಪೊಲೀಸರ ವಶಕ್ಕೆ ನೀಡಲಾದ ಆರೋಪಿಗಳು ಅವರ ಕೈಯಲ್ಲೇ ಸುರಕ್ಷಿತರಾಗಿಲ್ಲದಿದ್ದರೆ ಅಕ್ರಮವಾಗಿ ಬಂಧಿಸಿರವರನ್ನು ಬಿಟ್ಟುಬಿಡಿ ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ಹೇಳಿದೆ. ಅಲ್ಲದೇ ಪೊಲೀಸರನ್ನು ವೈಭವೀಕರಸುತ್ತಿರುವುದುನ್ನು ನಿಲ್ಲಿಸುವಂತೆ ತಿಳಿಸಿದ್ದು, ಪೊಲೀಸರು ಯೋಜಿತ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದೆ. ಇದನ್ನು ಓದಿ:ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ