Tag: ತೆರವು ಕಾರ್ಯಾಚರಣೆ

  • ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

    ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

    ಬೆಂಗಳೂರು: ನಗರದ ಮಹದೇವಪುರ (Mahadevapura) ವಲಯ ವ್ಯಾಪ್ತಿಯಲ್ಲಿ ಇಂದು ಕಸವನಗಳ್ಳಿಯ ವಲ್ಲಿಯಮ್ಮ ಲೇಔಟ್, ಗ್ರೀನ್ ಹುಡ್ ರೆಸಿಡೆನ್ಸಿ, ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ ಜಲಮಂಡಳಿಯ ಎಸ್.ಟಿ.ಪಿ ಬಳಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಆರ್.ಸಿ.ಸಿ ಸೇತುವೆಯ ತೆರವು ಕಾರ್ಯಾಚರಣೆಯನ್ನು ಮಾಡಲಾಗಿದೆ.

    ಕಸವನಹಳ್ಳಿ ವಲ್ಲಿಯಮ್ಮ ಲೇಔಟ್ ನಲ್ಲಿ ಶೆಡ್ ಗಳನ್ನು ತೆರವುಗೊಳಿಸಲಾಗಿದೆ. ಗ್ರೀನ್ ಹುಡ್ ರೆಸಿಡೆನ್ಸ್ (Green Hood Residency) ಆವರಣದಲ್ಲಿ ಸುಮಾರು 150 ಮೀಟರ್ ಉದ್ದದ ಮಳೆ ನೀರುಗಾಲುವೆಯ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ನ ತೆರವು ಕಾರ್ಯ ಬಹತೇಕ ಪೂರ್ಣಗೊಂಡಿದ್ದು, ಸ್ಲ್ಯಾಬ್ ಗೆ ಅಳವಡಿಸಿದ್ದ ಗ್ರಿಲ್ ತೆರವುಗೊಳಿಸಬೇಕಿರುತ್ತದೆ. ಮಳೆ ನೀರುಗಾಲುವೆ ಮೇಲೆ ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಕೂಡಾ ತೆರವುಗೊಳಿಸಲಾಗಿದೆ.

    ಮಾರತಹಳ್ಳಿ (Marathahalli) ಪೊಲೀಸ್ ಠಾಣೆಯ ಹಿಂಭಾಗ, ಜಲಮಂಡಳಿ ಎಸ್.ಟಿ.ಪಿ ಬಳಿ ರಾಜಕಾಲುವೆಯ ಮೇಲೆ ನಿರ್ಮಾಣ ಮಾಡಿರುವ ಸೇತುವೆ ತೆರವು ಕಾರ್ಯಾಚರಣೆಯು ಬಹುತೇಕ ಪೂರ್ಣಗೊಂಡಿದ್ದು, ನಾಳೆಯೂ ತೆರವು ಕಾರ್ಯಾಚರಣೆ ಮುಂದುವರಿಯಲಿದೆ.

    ಕಸವನಹಳ್ಳಿ, ಹೂಡಿ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯವನ್ನು ಮಾಡುತ್ತಿದ್ದು, ಒತ್ತುವರಿ ಮಾಡಿರುವ ಜಾಗವನ್ನು ಮಾರ್ಕಿಂಗ್ ಮಾಡಿದ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಇದನ್ನೂ ಓದಿ: ಭ್ರಷ್ಟಾಚಾರ ಮುಗಿಸಲು ನಾವು ಬಂದಿದ್ದೇವೆ – ಬಿಜೆಪಿ, ಕಾಂಗ್ರೆಸ್ ನಡುವೆ ವಾಕ್ಸಮರ

    Live Tv
    [brid partner=56869869 player=32851 video=960834 autoplay=true]

  • ತೆರವು ಪ್ರಹಸನಕ್ಕೆ ಬಿತ್ತಾ ಬ್ರೇಕ್..?- ವಿಲ್ಲಾಗಳ ಕಡೆ ಮುಖಮಾಡದ ಜೆಸಿಬಿ!

    ತೆರವು ಪ್ರಹಸನಕ್ಕೆ ಬಿತ್ತಾ ಬ್ರೇಕ್..?- ವಿಲ್ಲಾಗಳ ಕಡೆ ಮುಖಮಾಡದ ಜೆಸಿಬಿ!

    ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ 2ನೇ ವಾರಕ್ಕೆ ಕಾಲಿಟ್ಟಿದೆ. ಶನಿವಾರ-ಭಾನುವಾರ ಬಿಡುವು ನೀಡಿದ್ದ ಬಿಬಿಎಂಪಿ (BBMP) ಅಧಿಕಾರಿಗಳು, ಸೋಮವಾರದಿಂದ ಮತ್ತೆ ರಾಜಕಾಲುವೆ (Rajakaluve) ಒತ್ತುವರಿ ತೆರವಿಗೆ ಮುಂದಾಗಿದ್ದಾರೆ.

    ಹೌದು, ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾಮಗಾರಿಯನ್ನ ಇಂದು ಸಹ ಮುಂದುವರಿಸಿದೆ. ಅದರೇ ಮಹಾದೇವಪುರ ವಲಯದ 7 ಜಾಗದಲ್ಲಿ ಒತ್ತುವರಿ ತೆರವು ಮಾಡ್ತಿವಿ ಅಂತಾ ಹೇಳಿದ್ದ ಪಾಲಿಕೆ ಇಂದು ಮೂರು ಕಡೆ ಮಾತ್ರ ತೆರವು ಕಾರ್ಯಾಚರಣೆ ಮಾಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್

    ನಿನ್ನೆಯ ಕಾರ್ಯಾಚರಣೆ ಅರ್ಧಕ್ಕೆ ನಿಂತಿರೋ ವಿಪ್ರೋ (Wipro) ಸಂಸ್ಥೆ, ಸೊಲ್ಲಪುರಿಯಾ ಕಂಪೌಂಡ್, ಕಾಡುಗೋಡಿ ಬಳಿಯ ವಿಜಯಲಕ್ಷ್ಮಿ ಕಾಲೋನಿ ಮತ್ತು ಪೂರ್ವ ಪಾರ್ಕ್ ರಿಡ್ಜ್ ಕಡೆ ಜೆಸಿಬಿಗಳ ಸುಳಿವೇ ಇರಲಿಲ್ಲ. ರೈನ್ ಬೋಲೇಔಟ್ ಕಡೆಯಂತೂ ಪಾಲಿಕೆ ಹೋಗುವ ಕೆಲಸವೂ ಸಹ ನಡೆದಿಲ್ಲ. ಇದನ್ನೂ ಓದಿ: ಎರಡು ವರ್ಷಗಳಿಂದ ನನ್ನ ಫೈಲನ್ನೇ ಅಧಿಕಾರಿಗಳು ಕ್ಲಿಯರ್ ಮಾಡಿಲ್ಲ: ಮುರುಗೇಶ್ ನಿರಾಣಿ ಅಸಹಾಯಕತೆ

    ಮಾರತ್ತ್‍ಹಳ್ಳಿ ಬಳಿಯ ಬಿಡಬ್ಲೂಎಸ್‍ಎಸ್‍ಬಿ (BWSSB) ಪ್ಲಾಂಟ್‍ನ ಆವರಣದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರೋ ಬ್ರಿಡ್ಜ್ ತೆರವು ಕಾರ್ಯಾಚರಣೆ ನಡೀತು. ಗ್ಯಾಸ್ ಕಟರ್ ಮೂಲಕ ಕಂಬಿಗಳ ಕಟಿಂಗ್ ಕೆಲಸವೂ ನಡೆದಿದೆ. ನಾಳೆ ಬಹುತೇಕ ಬ್ರಿಡ್ಜ್ ತೆರವು ಕಾರ್ಯಾಚರಣೆ ಮುಕ್ತಾಯವಾಗಲಿದೆ. ಕಸವನಹಳ್ಳಿಯಲ್ಲಿ ಕಾರ್ಯಾಚರಣೆ ಮಾಡ್ತಿವಿ ಅಂತಾ ಹೇಳಿದ್ದ ಬಿಬಿಎಂಪಿ ಅಲ್ಲಿ ವಾಸವಾಗಿರೋ ಸ್ಲಂ (Slum) ಗಳಿಗೆ ನೋಟಿಸ್ ನೀಡಿ ನಾಳೆ ಕಾರ್ಯಾಚರಣೆ ಮಾಡೋ ಪ್ಲಾನ್ ಮಾಡಿಕೊಂಡಿದೆ.

    ಒಟ್ಟಿನಲ್ಲಿ ಇವತ್ತು ಜೆಸಿಬಿ (JCB) ಗಳ ಘರ್ಜನೆ ಕಡಿಮೆಯಾಗಿತ್ತು. ನಾಳೆಯೂ ಬಿಬಿಎಂಪಿ ಕಾರ್ಯಾಚರಣೆ ಪ್ಲಾನ್ ಮಾಡಿಕೊಳ್ಳುತ್ತಿದೆ. ನಾಳೆಯಾದ್ರೂ ಶ್ರೀಮಂತರ ಜಾಗಕ್ಕೆ ಜೆಸಿಬಿ ನುಗ್ಗಿಸೋ ಧೈರ್ಯಕ್ಕೆ ಬಿಬಿಎಂಪಿ ಮುಂದಾಗುತ್ತಾ ಕಾದುನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಕಲಬುರಗಿಯಲ್ಲಿ ಬುಲ್ಡೋಜರ್ ಸದ್ದು: 14 ಮನೆಗಳು ಸೇರಿದಂತೆ 17 ಟಿನ್ ಶೆಡ್ ತೆರವು

    ಕಲಬುರಗಿಯಲ್ಲಿ ಬುಲ್ಡೋಜರ್ ಸದ್ದು: 14 ಮನೆಗಳು ಸೇರಿದಂತೆ 17 ಟಿನ್ ಶೆಡ್ ತೆರವು

    ಕಲಬುರಗಿ: ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ 31 ಮನೆಗಳನ್ನು, ಟಿನ್‍ ಶೆಡ್ ಒಳಗೊಂಡಂತೆ ತೆರವು ಕಾರ್ಯಾಚರಣೆ ಜಿಲ್ಲಾಡಳಿತವತಿಯಿಂದ ನಡೆದಿದೆ.

    ನಗರದ ಜಾಫರಾಬಾದ್‍ನಲ್ಲಿರುವ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆಯೂ ಕಲಬುರಗಿ ಎಡಿಸಿ ಭೀಮಾಶಂಕರ್‌ ತೆಗ್ಗಳ್ಳಿ ನೇತೃತ್ವದಲ್ಲಿ ನಡೆಸಲಾಗಿದೆ. ಸರ್ವೇ ನಂಬರ್ 21/1,22 ಎಕರೆಯಲ್ಲಿ ಮೂರುವರೆ ಎಕರೆ ಅನಧಿಕೃತ ಒತ್ತುವರಿ ಮಾಡಲಾಗಿತ್ತು. ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಂತಹ 31 ಮನೆಗಳ 17 ಟಿನ್ ಶೆಡ್ ಸೇರಿದಂತೆ ಮನೆಗಳ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ತೆರವುಗೊಳಿಸಿದೆ. ಇದನ್ನೂ ಓದಿ:  ಪಾಕಿಸ್ತಾನಿ ಎಲ್‍ಇಟಿ ಉಗ್ರ ಎನ್‍ಕೌಂಟರ್ – ಮೂವರು ಅರೆಸ್ಟ್ 

    ಬೆಳಗ್ಗೆ ನಾಲ್ಕು ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಎರಡು ತಿಂಗಳು ಹಿಂದೆಯಷ್ಟೇ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಜಾರಿ ಮಾಡಿದರೂ, ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೂ ಮುನ್ನ ಪೊಲೀಸ್ ಬಂದೋಬಸ್ತ್ ಜೊತೆಗೆ ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ.

    Live Tv

  • ಬೆಂಗಳೂರಿನಲ್ಲಿ 36.50 ಕೋಟಿ ಮೌಲ್ಯದ ಒಟ್ಟು 20.08 ಎಕರೆ ಒತ್ತುವರಿ ಭೂಮಿ ತೆರವು: ಜೆ.ಮಂಜುನಾಥ್

    ಬೆಂಗಳೂರಿನಲ್ಲಿ 36.50 ಕೋಟಿ ಮೌಲ್ಯದ ಒಟ್ಟು 20.08 ಎಕರೆ ಒತ್ತುವರಿ ಭೂಮಿ ತೆರವು: ಜೆ.ಮಂಜುನಾಥ್

    ಬೆಂಗಳೂರು: ಜಿಲ್ಲೆಯಲ್ಲಿ ಇಂದು ಏಕಕಾಲಕ್ಕೆ ನಾಲ್ಕೂ ತಾಲೂಕುಗಳಲ್ಲಿ ಕೈಗೊಳ್ಳಲಾದ ತೆರವು ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಒತ್ತುವರಿಯಾದ ಒಟ್ಟು ರೂ. 36.50 ಕೋಟಿ ಮೌಲ್ಯದ ಸರ್ಕಾರಿ ಕೆರೆ, ಗುಂಡುತೋಪು, ಗೋಮಾಳ ಜಮೀನುಗಳ ಒಟ್ಟು 20.08 ಎಕರೆ ಪ್ರದೇಶವನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ತಿಳಿಸಿದ್ದಾರೆ.

    ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಕಾರ್ಯಾಚರಣೆ ನಡೆಸಿ, ಜಿಲ್ಲೆಯ ವಿಭಾಗಾಧಿಕಾರಿಗಳು, ಬಿ.ಎಂ.ಟಿ.ಎಫ್. ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಂಬಂಧಪಟ್ಟ ತಾಲೂಕು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ವರ್ಗದವರ ಸಹಯೋಗದಿಂದಿಗೆ ತೆರವುಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಅದರಂತೆ ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಕುದುರೆಗೆರೆ ಗ್ರಾಮದ 30-31 ಎ/ಗುಂಟೆ ವಿಸ್ತೀರ್ಣದ ಸರ್ಕಾರಿ ಕೆರೆ ಸರ್ವೆ ನಂ. 100 ರಲ್ಲಿ ಒಟ್ಟು 0-30 ಎಕರೆ ಜಮೀನು ಒತ್ತುವರಿಯಾಗಿದ್ದು, ಅದನ್ನು ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಬಾಲಕೃಷ್ಣ, ಮತ್ತು ಅವರ ಸಿಬ್ಬಂದಿ ಸಹಕಾರದಿಂದ ಇಂದು ತೆರವುಗೊಳಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ದಾಸನಪುರ ಹೋಬಳಿ, ಕುದುರೆಗೆರೆ ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 81 ರಲ್ಲಿ ಒಟ್ಟು 02-30 ಎ/ಗುಂಟೆ ವಿಸ್ತೀರ್ಣದ ಪೈಕಿ 02-30 ಎಕರೆ ಜಮೀನು ಒತ್ತುವರಿಯಾಗಿದ್ದು, ಅಂದಾಜು ರೂ. 06.50 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಯಿತು ಎಂದು ತಿಳಿಸಿದರು.

    ಯಲಹಂಕ ತಾಲೂಕು, ಹೆಸರಘಟ್ಟ ಹೋಬಳಿ, ಕಾಳತಿಮ್ಮನಹಳ್ಳಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ. 25 ರಲ್ಲಿ ಒಟ್ಟು ವಿಸ್ತೀರ್ಣ 18-21 ಎ/ಗುಂಟೆ ಪೈಕಿ 4-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಹೆಸರಘಟ್ಟ ಹೋಬಳಿ, ಮೈಲಪ್ಪನಹಳ್ಳಿ ಗ್ರಾಮದ ಸರ್ಕಾರಿ ಕರೆ ಸರ್ವೆ ನಂ. 91 ರಲ್ಲಿ ಒಟ್ಟು ವಿಸ್ತೀರ್ಣ 11-26 ಎ/ಗುಂಟೆ ಪೈಕಿ 2-11 ಎಕರೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದರು.

    ಹೆಸರಘಟ್ಟ ಹೋಬಳಿ, ಮಾದಪ್ಪನಹಲ್ಳಿ ಗ್ರಾಮದ ಸರ್ಕಾರಿ ಕರೆ ಸರ್ವೆ ನಂ. 73 ರಲ್ಲಿ ಒಟ್ಟು ವಿಸ್ತೀರ್ಣ 2-02 ಎ/ಗುಂಟೆ ಪೈಕಿ 0-20 ಎಕರೆ ಜಮೀನು ಒತ್ತುವರಿಯಾಗಿದ್ದು ಅಂದಾಜು 09-00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತಹಶೀಲ್ದಾರ್ ನರಸಿಂಹಮೂರ್ತಿ ಹಾಗೂ ಅವರ ಸಿಬ್ಬಂದಿಯೊಂದಿಗೆ ತೆರವುಗೊಳಿಸಲಾಯಿತು.

    ಅದರಂತೆ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಅಗರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 31 ರಲ್ಲಿ ಒಟ್ಟು ವಿಸ್ತೀರ್ಣ 14-34 ಎ/ಗುಂಟೆ ಪೈಕಿ 1-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ಅಗರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 73 ರಲ್ಲಿ ಒಟ್ಟು ವಿಸ್ತೀರ್ಣ 91-28 ಎ/ಗುಂಟೆ ಪೈಕಿ 2-00 ಎಕರೆ ಜಮೀನು ಒತ್ತುವರಿಯಾಗಿದ್ದು ತೆರವುಗೊಳಿಸಲಾಯಿತು. ಉತ್ತರಹಳ್ಳಿಯ ಕಗ್ಗಲೀಪುರ ಕೆರೆಯ 34.16 ಎ/ಗುಂಟೆ ಪ್ರದೇಶದ ಪೈಕಿ 1.08 ಎಕರೆ ಜಮೀನು ಒತ್ತುವರಿಯಾಗಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳಾದ ಡಾ|| ಎಂ.ಜಿ.ಶಿವಣ್ಣ, ತಹಶೀಲ್ದಾರ್ ಶಿವಪ್ಪ ಹೆಚ್. ಲಮಾಣಿ , ಹಾಗೂ ಅವರ ಸಿಬ್ಬಂದಿಯೊಡನೆ ಅಂದಾಜು 06-00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಗಿದೆ.

    ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಬೊಮ್ಮೇನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 96 ರಲ್ಲಿ ಒಟ್ಟು ವಿಸ್ತೀರ್ಣ 04-00 ಎ/ಗುಂಟೆ ಪೈಕಿ 04-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 30 ರಲ್ಲಿ ಒಟ್ಟು ವಿಸ್ತೀರ್ಣ 1-10 ಎ/ಗುಂಟೆ ಪೈಕಿ 0-20 ಗುಂಟೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 31 ರಲ್ಲಿ ಒಟ್ಟು ವಿಸ್ತೀರ್ಣ 0-13 ಗುಂಟೆ ಪೈಕಿ 0-02 ಗುಂಟೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ.

    ವರ್ತೂರು ಹೋಬಳಿ ಗುಂಜೂರು ಗ್ರಾಮದ ಸರ್ಕಾರಿ ಖರಾಬು ಸರ್ವೆ ನಂ. 290 ರಲ್ಲಿ ಒಟ್ಟು ವಿಸ್ತೀರ್ಣ 1-07 ಗುಂಟೆ ಪೈಕಿ 0-07 ಗುಂಟೆ ಜಮೀನು ಒತ್ತುವರಿಯಾಗಿದ್ದು ಅಂದಾಜು 15-00 ಕೋಟಿ ಮೌಲ್ಯದ ಈ ಸರ್ಕಾರಿ ಜಮೀನನ್ನು ತಹಶೀಲ್ದಾರ್, ಅಜಿತ್ ರೈ ಸಾರೋಕೆ ಮತ್ತು ಅವರ ಸಿಬ್ಬಂದಿಯೊಡನೆ ತೆರವುಗೊಳಿಸಲಾಯಿತು ಎಂದು ಅವರು ತಿಳಿಸಿದರು.

  • ಸಾಂಸ್ಕೃತಿಕ ನಗರಿಯಲ್ಲಿ ಶುರುವಾಯ್ತು ಒತ್ತುವರಿ ತೆರವು ಕಾರ್ಯಾಚರಣೆ

    ಸಾಂಸ್ಕೃತಿಕ ನಗರಿಯಲ್ಲಿ ಶುರುವಾಯ್ತು ಒತ್ತುವರಿ ತೆರವು ಕಾರ್ಯಾಚರಣೆ

    ಮೈಸೂರು: ಜಿಲ್ಲೆಯ ಮಹಾ ನಗರ ಪಾಲಿಕೆ ಅಧಿಕಾರಿಗಳು ದಿಢೀರನೆ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

    ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡ ಬಗ್ಗೆ ಹಲವು ದೂರುಗಳು ಮಹಾ ನಗರ ಪಾಲಿಕೆಗೆ ಬಂದಿವೆ. ಈ ದೂರುಗಳ ಆಧಾರದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅಕ್ರಮ ಅಂಗಡಿಗಳ ತೆರವು ಶುರು ಮಾಡಿದ್ದಾರೆ. ಅಕ್ರಮವಾಗಿ ತಲೆ ಎತ್ತಿದ್ದ ಫುಟ್‍ಪಾತ್ ಮಳಿಗೆಗಳ ತೆರವು ಕಾರ್ಯಾಚರಣೆ ಇಂದಿನಿಂದ ಶುರುವಾಗಿದೆ.

    ವಿಜಯನಗರದಲ್ಲಿ ಈ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮೈಸೂರು ಮಹಾ ನಗರ ಪಾಲಿಕೆಯ ವಲಯ ಕಚೇರಿ 5ರ ಅಧಿಕಾರಿಗಳು ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಇದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದರು. ಹೆಲ್ತ್ ಇನ್ಸ್​ಪೆಕ್ಟರ್ ಶೃತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಈ ಮಧ್ಯೆ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಂಗಡಿ ಮಾಲೀಕರ ಅಸಮಾಧಾನ ವ್ಯಕ್ತಪಡಿಸಿದರು.

  • ಬಿಡಿಎ ಒತ್ತುವರಿ ತೆರವು ಕಾರ್ಯಚರಣೆ ಚುರುಕು

    ಬಿಡಿಎ ಒತ್ತುವರಿ ತೆರವು ಕಾರ್ಯಚರಣೆ ಚುರುಕು

    ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತೆ ಒತ್ತುವರಿ ತೆರವು ಕಾರ್ಯಚರಣೆ ಆರಂಭಿಸಿದೆ.

    ನಾಗವಾರ ಗ್ರಾಮದ ಸರ್ವೆ ನಂಬರ್ 75ರಲ್ಲಿ ಹೆಚ್‍ಬಿಆರ್ 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರ ನೋಟಿಫಿಕೇಶನ್ ಹೊರಡಿಸಿದ್ದ ಜಾಗದ ಒತ್ತುವರಿಯಾಗಿತ್ತು. ಈ ಒತ್ತುವರಿಯಲ್ಲಿ 3 ಅಂತಸ್ತಿನ ಕಟ್ಟಡ, ಹಲವು ಶೆಡ್‍ಗಳ ನಿರ್ಮಾಣವಾಗಿತ್ತು. ಎಲ್ಲವನ್ನ ಇಂದು ಬಿಡಿಎ ತನ್ನ ವಶಕ್ಕೆ ಪಡೆದಿದೆ. ಸುಮಾರು 6 ಎಕ್ರೆ 3 ಗುಂಟೆ ಬಿಡಿಎಗೆ ಸೇರಬೇಕಾದ ಜಾಗ ಒತ್ತುವರಿಯಾಗಿದ್ದು, ಎಲ್ಲಾ ಜಾಗವನ್ನ ವಶಕ್ಕೆ ಪಡೆಯಲಾಗಿದೆ. ಸುಮಾರು 320 ಕೋಟಿ ರೂ. ಬೆಲೆ ಬಾಳುವ ಜಾಗವನ್ನು ಒತ್ತುವರಿ ಮಾಡಿಕೊಂಡಿರೋ ಸ್ಥಳೀಯರಿಂದ ಜಾಗವನ್ನು ವಶಕ್ಕೆ ಪಡೆಯಲಾಯಿತು.

    ಈ ವೇಳೆ ಮಾತನಾಡಿದ ಬಿಡಿಎ ಆಯುಕ್ತ ಪ್ರಕಾಶ್, ಇಷ್ಟು ದಿನ ನೀತಿ ಸಂಹಿತೆ ಇತ್ತು. ಆದ್ದರಿಂದ ಇಷ್ಟು ದಿನ ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಒಟ್ಟು ನಗರದಲ್ಲಿ 5 ಸಾವಿರ ಕೋಟಿ ರೂ. ಮೊತ್ತದ ಜಾಗ ಒತ್ತುವರಿಯಾಗಿದೆ. ಇನ್ನು 6 ತಿಂಗಳೊಳಗೆ ಬಿಡಿಎಗೆ ಸೇರಬೇಕಾದ ಎಲ್ಲಾ ಜಾಗವನ್ನು ವಶಕ್ಕೆ ಪಡೆಯುತ್ತೇವೆ. ಇಂದಿನಿಂದ ಒತ್ತುವರಿ ತೆರವು ಆರಂಭ ಮಾಡಿದ್ದೇವೆ. ನಾಗಾವಾರದಲ್ಲಿ 6 ಎಕ್ರೆ 17 ಗುಂಟೆ ಜಾಗ ಒತ್ತುವರಿಯಾಗಿದೆ. ಸುಮಾರು 320 ಕೋಟಿ ರೂ. ಬೆಲೆಬಾಳುವ ಜಾಗ ಇದಾಗಿದೆ. ಈ ಜಾಗವನ್ನು ಇಂದು ಇದನ್ನು ವಶಕ್ಕೆ ಪಡೆದಿದ್ದೇವೆ. ಸುಮಾರು 20 ವರ್ಷಗಳಿಂದಲೂ ಈ ಜಾಗ ಹೀಗೇ ಇತ್ತು. ಈ ಹಿನ್ನೆಲೆ ಇಂದು ಜಾಗವನ್ನು ನಮ್ಮ ವಶಕ್ಕೆ ಪಡೆದಿದ್ದೇವೆ ಎಂದರು.