Tag: ತೆಂಗು

  • ತೆಂಗು ಮತ್ತು ಮೆಕ್ಕೆಜೋಳಕ್ಕೆ ರೋಗ – ವಿಶೇಷ ಪ್ಯಾಕೇಜ್ ನೀಡಲು ಕೇಂದ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಒತ್ತಾಯ

    ತೆಂಗು ಮತ್ತು ಮೆಕ್ಕೆಜೋಳಕ್ಕೆ ರೋಗ – ವಿಶೇಷ ಪ್ಯಾಕೇಜ್ ನೀಡಲು ಕೇಂದ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಒತ್ತಾಯ

    ನವದೆಹಲಿ: ಹಾಸನ (Hassan) ಜಿಲ್ಲೆಯಲ್ಲಿ ತೆಂಗು (Coconut) ಮತ್ತು ಮೆಕ್ಕೆಜೋಳ (Maize) ಕೃಷಿ ರೋಗಗಳಿಂದ ಹೆಚ್ಚು ಬಾಧಿತವಾಗುತ್ತಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಂಸದ ಶ್ರೇಯಸ್ ಪಟೇಲ್ (Shreyas Patel) ಮನವಿ ಮಾಡಿದ್ದಾರೆ.

    ಲೋಕಸಭೆಯ (Lok Sabha) ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಫಂಗಲ್ ಕಾಯಿಲೆಯಿಂದ ಮೆಕ್ಕೆಜೋಳಕ್ಕೆ ಭಾರೀ ಹಾನಿ ಆಗಿದೆ. 45 ಸಾವಿರ ಹೆಕ್ಟೇರ್ ಪೈಕಿ 12 ಸಾವಿರ ಹೆಕ್ಟೇರ್ ಈಗಾಗಲೇ ಹಾನಿಗೀಡಾಗಿದೆ. ಐಸಿಎಆರ್ ಸರ್ವೆ ಮಾಡಿ ಪರಿಹಾರ ಕೊಡಬೇಕು ಎಂದು ಸಲಹೆ ನೀಡಿದೆ. ಇದನ್ನೂ ಓದಿ: Tumakuru | ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

    ತೆಂಗು ಬೆಳೆ ನನ್ನ ಜಿಲ್ಲೆಯಲ್ಲಿಯೇ ಹೆಚ್ಚಾಗಿದೆ. 1.18 ಲಕ್ಷ ಹೆಕ್ಟೇರ್ ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕಿನಲ್ಲಿ 82 ಸಾವಿರ ಹೆಕ್ಟೇರ್ ರೋಗಪೀಡಿತವಾಗಿದೆ. ತೆಂಗು ಅಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಇದನ್ನೂ ಓದಿ: ಡಿಕೆಶಿ ಭರವಸೆ ನೀಡಿದ್ದಾರೆ, ನಾನೇ ಮುಂದಿನ KMF ಅಧ್ಯಕ್ಷ: ನಂಜೇಗೌಡ

  • ಮಳೆಯಬ್ಬರಕ್ಕೆ ಮಾವು ಸೇರಿದಂತೆ ವಿವಿಧ ಬೆಳೆಗಳು ನಾಶ

    ಮಳೆಯಬ್ಬರಕ್ಕೆ ಮಾವು ಸೇರಿದಂತೆ ವಿವಿಧ ಬೆಳೆಗಳು ನಾಶ

    ಕೋಲಾರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾವು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ನೆಲ ಕಚ್ಚಿವೆ.

    ಕಳೆದ 3 ದಿನಗಳಿಂದ ಬೆಂಗಳೂರು ಮಾತ್ರವಲ್ಲದೆ ಕೋಲಾರ ಜಿಲ್ಲೆಯಲ್ಲೂ ಮಳೆಯ ಆರ್ಭಟ ಜೋರಾಗಿದೆ. ಈ ಮಧ್ಯೆ ಕಳೆದ ರಾತ್ರಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಕೆಜಿಎಫ್ ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ ಬಿರುಗಾಳಿ ಸಹಿತ ಹೆಚ್ಚು ಮಳೆಯಾಗಿದ್ದು, ಬಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.

    ಶ್ರೀನಿವಾಸಪುರ ತಾಲೂಕಿನ ಕದಿರಂಪಲ್ಲಿ ಗ್ರಾಮದ ಸುತ್ತಮುತ್ತ ಮಳೆಯಿಂದ ಮಾವಿನ ಕಾಯಿ ಮತ್ತು ಮರಗಳು ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಎದುರಾಗಿದೆ. ಗುಡುಗು, ಸಿಡಿಲು, ಬೀರುಗಾಳಿ ಸಹಿತ ಮಳೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮಾವಿನ ಕಾಯಿಗಳು ನೆಲಕಚ್ಚಿವೆ. ವರ್ಷಕ್ಕೆ ಒಂದೆ ಬೆಳೆಯಾಗಿರುವ ಮಳೆಯಿಂದ ರಾತ್ರೋರಾತ್ರಿ ಮಾವಿನ ಫಸಲು ಕಳೆದುಕೊಂಡ ರೈತರು ಕಣ್ಣೀರಿಡುವಂತಾಗಿದೆ. ಇನ್ನು ಒಂದು ತಿಂಗಳಲ್ಲಿ ಮಾವಿನ ಫಸಲು ಮಾರುಕಟ್ಟೆಗೆ ಹೋಗಿ ಒಂದಿಷ್ಟು ಹಣ ನೋಡಲು ಕಾತುರದಿಂದ ಕಾಯುತ್ತಿದ್ದ ರೈತನು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಮಾವಿನ ಫಸಲು ಮಳೆಯಿಂದ ನೆಲಕ್ಕುದುರಿ ಸುಮಾರು 8 ಲಕ್ಷ ರೂ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆ ಹಿಂದೆ ಯಾರೇ ಇರಲಿ, ಎತ್ತಾಕೊಂಡು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

    ಹಲವೆಡೆ ತೆಂಗಿನ ಮರ ಹಾಗೂ ಕರೆಂಟ್ ಕಂಬಗಳು ನೆಲಕ್ಕುರುಳಿವೆ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸುತ್ತಮುತ್ತ ವಿವಿಧ ಹಣ್ಣು ತರಕಾರಿ ಬೆಳೆಗಳು ನಾಶವಾಗಿದೆ. ಶ್ರೀನಿವಾಸಪುರ ಪಟ್ಟಣದ ಪವನ್ ಆಸ್ಪತ್ರೆ ಬಳಿ ಸಿಡಿಲು ಬಡಿದ ಹಿನ್ನೆಲೆ ತೆಂಗಿನ ಮರ ಹೊತ್ತಿ ಉರಿದ ಘಟನೆ ಕೂಡ ನಡೆದಿದೆ.

    ಕುಡಿಚರವು ಗ್ರಾಮದಲ್ಲಿ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಮೇಲ್ಚಾವಣಿ ಹಾನಿಯಾಗಿದೆ. ರಾತ್ರಿ ಸುರಿದ ಗುಡುಗು ಸಹಿತ ಮಳೆ ವೇಳೆ ಸಿಡಿಲು ಬಡಿದು ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದ್ದು, ಸರ್ಕಾರ ರೈತರಿಗೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರಚೋದನಕಾರಿ ಕೃತ್ಯ ಎಸಗಿದವರ ವಿರುದ್ಧ ಕ್ರಮ: ಬೊಮ್ಮಾಯಿ

  • ತೆಂಗಿನ ರೋಗ ತಡೆಗಟ್ಟಲು ಔಷಧಿ ಕೇಂದ್ರ ಆರಂಭ: ಬಿ.ಸಿ ನಾಗೇಶ್

    ತೆಂಗಿನ ರೋಗ ತಡೆಗಟ್ಟಲು ಔಷಧಿ ಕೇಂದ್ರ ಆರಂಭ: ಬಿ.ಸಿ ನಾಗೇಶ್

    ತುಮಕೂರು: ತೆಂಗಿನ ರೋಗಕ್ಕೆ ತಗುಲಿರುವ ವಿವಿಧ ಬಗೆಯ ರೋಗಗಳನ್ನು ತಡೆಗಟ್ಟುವ ಸಲುವಾಗಿ ಪರೋಪ ಜೀವಿಗಳ ಉತ್ಪಾದನಾ ಕೇಂದ್ರವನ್ನು ತಿಪಟೂರು ತಾಲೂಕಿನಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

    ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ದೊಡ್ಡ ಪ್ರಮಾಣದ ಪರೋಪ ಜೀವಿಗಳ ಉತ್ಪಾದನಾ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದ ಅವರು, ಇತ್ತೀಚಿನ ದಿನದಲ್ಲಿ ತೆಂಗು ಬೆಳೆಯಲ್ಲಿ ಬಿಳಿನೊಣದ ಹಾವಳಿ ಹೆಚ್ಚಾಗಿದೆ. ಹಿಂದೆ ಇದ್ದಂತಹ ಕಪ್ಪು ತಲೆ ಹುಳಕ್ಕಿಂತ ವಿಭಿನ್ನವಾಗಿದ್ದು ಫಸಲಿಗೆ, ಮರಕ್ಕೆ ತೊಂದರೆ ನೀಡುತ್ತಿದೆ. ಇದನ್ನು ತಡೆಗಟ್ಟಲು ಇಸರಿಯಾ ಪ್ಯೂಮೋಸೋರೋಸಿಯಾ ಪ್ರಬಲ ಜೈವಿಕ ನಿಯಂತ್ರಕ ಶಿಲೀಂಧ್ರವನ್ನು ಕಂಡು ಹಿಡಿಯಲಾಗಿದೆ. ಅದರ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಿದ್ದು, ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕ ಬಿ.ರಘು, ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ವಿಜಯ, ಪರೋಪ ಜೀವಿಗಳ ಉತ್ಪಾದನಾ ಕೇಂದ್ರದ ಅಧಿಕಾರಿ ಡಾ.ನವೀನ್ ಕುಮಾರ್, ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೊಹನ್, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆರೆಗೋಡಿ ದೇವರಾಜು, ಕೆ.ವಿ.ಕೆ. ಕೊನೆಹಳ್ಳಿ ಕೇಂದ್ರದ ವಿಜ್ಞಾನಿ ಡಾ.ಶ್ರೀನಿವಾಸ್, ತೋಟಗಾರಿಕೆ ಇಲಾಖೆಯ ರೂಪ ಇದ್ದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ