Tag: ತೆಂಗಿನ ಕಾಯಿ

  • 50ಕ್ಕೂ ಹೆಚ್ಚು ಜನರ ತಲೆ ಮೇಲೆ ತೆಂಗಿನಕಾಯಿ ಒಡೆದು ದಸರಾ ಆಚರಣೆ

    50ಕ್ಕೂ ಹೆಚ್ಚು ಜನರ ತಲೆ ಮೇಲೆ ತೆಂಗಿನಕಾಯಿ ಒಡೆದು ದಸರಾ ಆಚರಣೆ

    ಕೋಲಾರ : ಜಿಲ್ಲೆಯ ಕೆಜಿಎಫ್‌ ತಾಲೂಕಿನಲ್ಲಿ ವಿಜಯದಶಮಿ ಪ್ರಯಕ್ತ ತಲೆಯ ಮೇಲೆ ತೆಂಗಿನ ಕಾಯಿ (Coconut) ಒಡೆಯುವ ದಸರಾ (Dasara) ಮಹೋತ್ಸವದ ಪೂಜಾ ಕೈಂಕರ್ಯಗಳು ನೆರವೇರಿದವು.

    ಕೋಲಾರ (Kolar) ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದ ತಾತೇನಹಳ್ಳಿ ಬಳಿ ಇರುವ ಅಜ್ಜ ಬೀರೇಶ್ವರ ಸ್ವಾಮಿ‌ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಪ್ರತಿ ವರ್ಷದಂತೆ ವಿಜಯದಶಮಿ ಪ್ರಯುಕ್ತ ಭಕ್ತರು ತಲೆಯ ಮೇಲೆ ತೆಂಗಿನ ಕಾಯಿ ಒಡೆಸಿಕೊಳ್ಳುವ ಮೂಲಕ ತಮ್ಮ ಶಕ್ತಿಯನ್ನ ಪ್ರದರ್ಶಿಸುತ್ತಾರೆ‌. ಅದರಂತೆ ಸುಮಾರು 50ಕ್ಕೂ ಹೆಚ್ಚು ಜನರು ತಲೆಯ ಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವ ಮೂಲಕ ಅಜ್ಜಬೇರೇಶ್ವರ ದೇವರಿಗೆ ತಮ್ಮ ಭಕ್ತಿಯನ್ನ ಸಮರ್ಪಿಸಿದರು‌. ಇದನ್ನೂ ಓದಿ: ಚುನಾವಣೆಗೆ ಟಿಆರ್‌ಎಸ್‌ ಜೊತೆ ಜೆಡಿಎಸ್‌ ಮೈತ್ರಿ – ಎಚ್‌ಡಿಕೆ ಅಧಿಕೃತ ಘೋಷಣೆ

    ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು. ತೆಂಗಿನ ಕಾಯಿ ಒಡೆಯುವುದು ನೋಡಲು ಸಾಕಷ್ಟು ಜನರು ನೆರೆದಿದ್ದರು. ಇನ್ನು ವಿವಿಧೆಡೆಯಿಂದ ಕುರುಬ ಸಮುದಾಯದವರು ಪ್ರತಿವರ್ಷ ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದನ್ನೂ ಓದಿ: ಸೊಂಡಿಲು ಗಾಯದಿಂದ ಬಳಲುತ್ತಿರುವ ಮರಿಯಾನೆ- ಬೊಮ್ಮಾಯಿಗೆ ರಾಹುಲ್ ಗಾಂಧಿ ಪತ್ರ

    Live Tv
    [brid partner=56869869 player=32851 video=960834 autoplay=true]

  • ತೂಕ ಇಳಿಸಲು ತೆಂಗಿನ ಆಹಾರ ಸೇವಿಸಿ

    ತೂಕ ಇಳಿಸಲು ತೆಂಗಿನ ಆಹಾರ ಸೇವಿಸಿ

    ತೆಂಗಿನ ಕಾಯಿಯನ್ನು ಚಟ್ನಿ, ಸಾಂಬಾರ್, ಸಿಹಿತಿಂಡಿಗಳಿಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದಣಿವಾದಾಗ ಅದನ್ನು ನೀಗಿಸಲು ಅದರ ನೀರನ್ನು ಕುಡಿಯುತ್ತಾರೆ. ಇದು ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸಲಷ್ಟೇ ಅಲ್ಲ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದಾಗಿದೆ.

    ಥೈರಾಯ್ಡ್ ಸಮಸ್ಯೆಗೆ ಪರಿಹಾರ: ಇಂದಿನ ಯುಗದಲ್ಲಿ ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸದೇ ಇರುವುದು, ಒತ್ತಡ ಮತ್ತು ಇತರ ಸಮಸ್ಯೆಗಳಂತಹ ಕಳಪೆ ಜೀವನಶೈಲಿಯಿಂದಾಗಿ ಬಹಳಷ್ಟು ಜನರಿಗೆ ಚಿಕ್ಕ ವಯಸ್ಸಿನಲ್ಲೇ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ಇದನ್ನು ಕಡಿಮೆ ಮಾಡಿಕೊಳ್ಳಲು ತೆಂಗಿನಕಾಯಿ ಸೇವನೆ ಅತ್ಯುತ್ತಮ ಥೈರಾಯ್ಡ್ ಆಹಾರವಾಗಿದೆ. ಇದನ್ನು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಬಳಸುವುದರಿಂದ ಥೈರಾಯ್ಡ್ ಗ್ರಂಥಿಯು ದೇಹದ ಚಯಾಪಚಯ ಪ್ರಕ್ರಿಯೆಗಳ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ.

    3 ಬಾರಿಯಾದ್ರೂ ಎಳನೀರು ಕುಡಿಯಿರಿ: ಬೇಸಿಗೆಗಾಲ ಬಂತೆಂದರೆ ಸಾಕು ಜನರು ಸಾಧ್ಯವಾದಷ್ಟು ಎಳನೀರನ್ನು ಕುಡಿಯುತ್ತಾರೆ. ಇದರಿಂದ ತಮ್ಮ ದಣಿವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ. ವಾರಕ್ಕೆ 3 ರಿಂದ 4 ಬಾರಿ ಎಳೆನೀರನ್ನು ಕುಡಿಯುವುರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    ಆರೋಗ್ಯಕ್ಕೆ ಉತ್ತಮ ತೆಂಗಿನ ಎಣ್ಣೆ: ನಮ್ಮ ದೇಹವನ್ನು ಕಾಂತಿಯುತವಾಗಿ ಮಾಡಲು ತೆಂಗಿನ ಎಣ್ಣೆ ಸಹಾಯಮಾಡುತ್ತದೆ. ಜೊತೆಗೆ ಇದು ನಿಮ್ಮ ಕೂದಲನ್ನು ಗಟ್ಟಿ ಮುಟ್ಟಾಗಿ ಬೆಳೆಯಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಕೊಬ್ಬಿನಾಂಶವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಇದು ಬಹುಬೇಗ ಜೀರ್ಣವೂ ಆಗುತ್ತದೆ. ಜೊತೆಗೆ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ತೂಕವು ಗಣನೀಯವಾಗಿ ಇಳಿಯುತ್ತದೆ.  ಇದನ್ನೂ ಓದಿ:  ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಕೊಲೆಸ್ಟ್ರಾಲ್ ನಿಯಂತ್ರಣ: ಸ್ಯಾಚುರೇಟೆಡ್ ಕೊಬ್ಬು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದರಿಂದ ಪ್ರತಿದಿನ ತೆಂಗಿನಕಾಯಿ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣ ಮಾಡಲು ಸಹಕಾರಿಯಾಗುತ್ತದೆ. ತೆಂಗಿನ ಕಾಯಿಯಲ್ಲಿ ಹೇರಳವಾಗಿ ವಿಟಮಿನ್ ಅಂಶಗಳಿವೆ.

    ರೋಗ ನಿರೋಧಕ ಶಕ್ತಿ ಹೆಚ್ಚಳ: ಆಂಟಿಫಂಗಲ್, ಆಂಟಿಬ್ಯಾಕ್ಟಿರಿಯಲ್ ಮತ್ತು ಆಂಟಿ ವೈರಲ್ ಅಂಶಗಳು ತೆಂಗಿನ ಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವದೆ. ಇದು ರೋಗಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ತೆಂಗಿನಕಾಯಿ ಸೇವಿಸುವುದರಿಂದದೇಹದ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಮೂಳೆಗಳು ಬಲಿಷ್ಠವಾಗುತ್ತದೆ.

  • 6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

    6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

    ಬಾಗಲಕೋಟೆ: ತಿಕೋಟಾ ಮೂಲದ ಭಕ್ತರೊಬ್ಬರು 6 ಲಕ್ಷದ 50 ಸಾವಿರ ರೂಪಾಯಿಗೆ ದೇವರ ತೆಂಗಿನಕಾಯಿ ಖರೀದಿಸಿ ಭಾರೀ ಅಚ್ಚರಿ ಮೂಡಿಸಿದ್ದಾರೆ.

    ವಿಜಯಪುರ ಜಿಲ್ಲೆ ತಿಕೋಟಾ ಮೂಲದ ನಿವಾಸಿ ಮಹಾವೀರ ಹರಕೆ 6,50,000 ರೂ. ಸವಾಲು ಕೂಗಿ ತೆಂಗಿನಕಾಯಿ ಪಡೆದ ವ್ಯಕ್ತಿ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಮಾಳಿಂಗರಾಯನ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಮಾಳಿಂಗರಾಯ ಜಾತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಕಾಯಿ ಮಾರಾಟವಾಗಿದೆ.

    ಪ್ರತಿ ವರ್ಷ ಶ್ರಾವಣ ಮಾಸದ ಮುಕ್ತಾಯದ ವೇಳೆ ಮಾಳಿಂಗರಾಯ ಜಾತ್ರೆ ನಡೆಯುತ್ತದೆ. ಜಾತ್ರೆ ಬಳಿಕ ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಹಾಗೂ ಪಲ್ಲಕ್ಕಿ ಮೇಲಿನ ಕಾಯಿಗಳ ಹರಾಜು ನಡೆಯುತ್ತದೆ. ಗದ್ದುಗೆ ಮೇಲಿನ ಪಲ್ಲಕ್ಕಿ ಮೇಲಿನ ಕಾಯಿ ಮನೆಗೆ ಒಯ್ದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಪಲ್ಲಕ್ಕಿ 10 ಕಾಯಿಗಳಿರುತ್ತೆವೆ, ಮಾಳಿಂಗರಾಯನ ಗದ್ದುಗೆ ಮೇಲೆ ಒಂದು ಕಾಯಿ ಇರುತ್ತದೆ. ಇದನ್ನೂ ಓದಿ: ರೈಲು ತಡವಾದರೆ ಪ್ರಯಾಣಿಕರಿಗೆ ಕೊಡಬೇಕು ಪರಿಹಾರ: ಸುಪ್ರೀಂ ಕೋರ್ಟ್

    ಬೀರಲಿಂಗೇಶ್ವರ್ ಪಲ್ಲಕ್ಕಿ ಮೇಲೆ 2 ಕಾಯಿಗಳಿರುತ್ತವೆ. ಅದರಲ್ಲಿ ಮಾಳಿಂಗರಾಯನ ಗದ್ದುಗೆ ಮೇಲೆ ಒಂದು ಕಾಯಿಗೆ ಭಾರೀ ಬೇಡಿಕೆಯಿರುತ್ತೆ. ಮಾಳಿಂಗರಾಯ ಗದ್ದುಗೆ ಕಾಯಿಂದ ಮನೆ ಹಾಗೂ ಉದ್ಯಮಕ್ಕೆ ಶುಭವಾಗಲಿದೆಯೆಂದು ಇದನ್ನು ಖರೀದಿಸುತ್ತಾರೆ.

  • ತೆಂಗು ಸಂಸ್ಕರಣೆ ವ್ಯವಸ್ಥೆ ಖುದ್ದು ವೀಕ್ಷಿಸಿದ ಸಚಿವ ಅಶ್ವತ್ಥನಾರಾಯಣ

    ತೆಂಗು ಸಂಸ್ಕರಣೆ ವ್ಯವಸ್ಥೆ ಖುದ್ದು ವೀಕ್ಷಿಸಿದ ಸಚಿವ ಅಶ್ವತ್ಥನಾರಾಯಣ

    ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದಲ್ಲಿರುವ ರೈತರ ಉತ್ಪಾದಕರ ಸಂಸ್ಥೆಯ ಸಂಸ್ಕರಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರೈತರ ಜತೆ ಸಂವಾದ ನಡೆಸಿದರು.

    ರೈತರ ಉತ್ಪಾದಕರ ಸಂಸ್ಥೆಯು ನೇರವಾಗಿ ರೈತರಿಂದಲೇ ಖರೀದಿಸಿದ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ, ಅವುಗಳನ್ನು ಮಧ್ಯವರ್ತಿಗಳ ಪ್ರಮೇಯವಿಲ್ಲದೆ ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದು, ಈ ಪ್ರಯೋಗ ಯಶಸ್ವಿ ಮತ್ತು ಲಾಭದಾಯಕವೂ ಆಗಿದೆ. ಇಲ್ಲಿ ತೆಂಗಿನ ಕಾಯಿ ಸುಲಿದು ಕ್ರಮಬದ್ಧವಾಗಿ ಸಂಸ್ಕರಣೆ ಮಾಡಿ ಬೇರೆಡೆಗೆ ಪೂರೈಸುವ ವಿಧಾನವನ್ನು ಸಚಿವರು ಖುದ್ದು ವೀಕ್ಷಣೆ ಮಾಡಿದರು.

    ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಈ ಪ್ರದೇಶದಲ್ಲಿ ಮೊದಲಿನಿಂದಲೂ ತೆಂಗು ಬೆಳೆಯನ್ನು ರೈತರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅನೇಕ ದಶಕಗಳಿಂದ ನ್ಯಾಯಸಮ್ಮತ ಬೆಲೆ ಸಿಗದೇ ಕಷ್ಟಕ್ಕೆ ಸಿಲುಕಿದ್ದ ರೈತರು ಸುಲಿದಿರುವ ಒಂದು ಕೆಜಿ ತೆಂಗಿನ ಕಾಯಿಯನ್ನು ಕೇವಲ 25 ರೂ.ಗಳಿಗೆ ಮಾತ್ರ ಮಾರುವಂಥ ಸ್ಥಿತಿ ಇತ್ತು. ಆದರೆ ದಲ್ಲಾಳಿಗಳು ಇದನ್ನೇ ಲಾಭ ಮಾಡಿಕೊಂಡಿದ್ದರು ಎಂದರು.

    ಈಗ ಕೃಷಿ ಕಲ್ಪದಂಥ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿ ತಲೆ ಎತ್ತಿರುವ ರೈತರ ಉತ್ಪಾದಕರ ಸಂಸ್ಥೆಯು ನೇರವಾಗಿ ರೈತರಿಂದಲೇ ಒಂದು ಕೆಜಿ ತೂಕದ ಸುಲಿದಿರುವ ತೆಂಗಿಗೆ 35 ರೂ.ವರೆಗೂ ಬೆಲೆ ಕೊಟ್ಟು ಖರೀದಿ ಮಾಡುತ್ತಿದೆ. ಅಲ್ಲದೆ, ಇಲ್ಲಿನ ತೆಂಗನ್ನು ಅತ್ಯುತ್ತಮವಾಗಿ ಸಂಸ್ಕರಣೆ ಮಾಡಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರಕ್ಕೆ ಪೂರೈಕೆ ಮಾಡುತ್ತಿದೆ. ಇಲ್ಲಿಂದ ವಾರಕ್ಕೊಮ್ಮೆ ಒಂದು ಟ್ರಕ್ ತೆಂಗಿನ ಕಾಯಿ ಅಲ್ಲಿಗೆ ಸರಬರಾಜು ಆಗುತ್ತಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ನಾನು ಕುಡುಕ ಅಲ್ಲ, ಕುಡಿಯುವ ಅಭ್ಯಾಸವೂ ನನಗಿಲ್ಲ: ಸಿ.ಟಿ.ರವಿ

    ಜಿಲ್ಲೆಯಲ್ಲಿ ರೈತರು ಮತ್ತು ಬಳಕೆದಾರರ ನಡುವೆ ರೈತರ ಉತ್ಪಾದಕರ ಸಂಸ್ಥೆ ಮೂಲಕ ಉತ್ತಮ ಲಿಂಕ್ ಏರ್ಪಟ್ಟದ್ದು, ಇದಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ಕೊಡಲಾಗುವುದು ಎಂದ ಅವರು, ಈ ವ್ಯವಹಾರದಲ್ಲಿ ರೈತರ ಉತ್ಪಾದಕರ ಸಂಸ್ಥೆಗೆ ತನ್ನ ಖರ್ಚೆಲ್ಲ ಕಳೆದು ಅತ್ಯಲ್ಪ ಪ್ರಮಾಣದ ಲಾಭ ಇರುತ್ತದೆ ಎಂದರು.

    ಕೃಷಿ ಕಲ್ಪ ಫೌಂಡೇಶನ್ ಅಧ್ಯಕ್ಷ ಪ್ರಶಾಂತ ಪ್ರಕಾಶ್ ಅವರು ಮಾಡಿರುವ ಸಾಧನೆಯನ್ನು ಕೊಂಡಾಡಿದ ಅವರು, ಸುಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕೃಷಿ ಮಾಡದಿದ್ದರೆ ಭವಿಷ್ಯದಲ್ಲಿ ಆಹಾರದ ಅಗತ್ಯವನ್ನು ನೀಗಿಸುವುದು ಕಷ್ಟವಾಗುತ್ತದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಶಾಲಾ-ಕಾಲೇಜು ಆರಂಭಕ್ಕೆ ಸೋಮವಾರ ಮಾರ್ಗಸೂಚಿ

    ಈ ಸಂದರ್ಭದಲ್ಲಿ ಕೃಷಿ ಕಲ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಕೃಷಿ ಕಲ್ಪ ಫೌಂಡೇಷನ್ ಸಿಇಒ ಸಿ.ಎಂ.ಪಾಟೀಲ್, ಅರ್ಕಾವತಿ ಎಫ್ ಪಿ ಒ ಸಿಇಒ ವಿನುತಾ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

  • ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು

    ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು

    ಹಾವೇರಿ: ಮನೆಯ ಮುಂದೆ ಮರ ನೆಟ್ಟಿದ್ದರೆ ಹುಷಾರಾಗಿರಿ. ಮನೆಯ ಮುಂದಿನ ತೆಂಗಿನ ಮರದಿಂದ ಕಾಯಿ ಬಿದ್ದು ಪುಟ್ಟ ಕಂದಮ್ಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಹಂಸಭಾವಿ ಗ್ರಾಮದಲ್ಲಿ ನಡೆದಿದೆ.

    ಮೃತ ಹಸಗೂಸನ್ನ 11 ತಿಂಗಳಿನ ತನ್ವೀತ್ ವಾಲ್ಮೀಕಿ ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಯ ಮಗು. ಸೋಮವಾರ ಬೆಳಗ್ಗೆ ಮನೆಯ ಮುಂದೆ ಮಗುವನ್ನ ಎತ್ತಿಕೊಂಡು ಊಟ ಮಾಡಿಸುತ್ತಿದ್ದ ವೇಳೆ ತೆಂಗಿನಮರದ ಕಾಲ ಕಾಯಿ ಬಿದ್ದು ಈ ದುರ್ಘಟನೆ ನಡೆದಿದೆ.

    ಮಗುವಿನ ತಲೆಯ ಭಾಗದ ಮೇಲೆ ಭಾರವಾದ ತೆಂಗಿನಕಾಯಿ ಬಿದ್ದಿದೆ. ಕೂಡಲೇ ಮಗುವನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ 11 ತಿಂಗಳ ಹಸಗೂಸು ಮೃತಪಟ್ಟಿದೆ. ಮಗು ಕಳೆದುಕೊಂಡ ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಪೆಟ್ರೋಲ್ ಬೆಲೆ 101 ರೂ – 101 ತೆಂಗಿನಕಾಯಿ ಕಾಯಿ ಒಡೆದು ಪ್ರತಿಭಟನೆ

    ಪೆಟ್ರೋಲ್ ಬೆಲೆ 101 ರೂ – 101 ತೆಂಗಿನಕಾಯಿ ಕಾಯಿ ಒಡೆದು ಪ್ರತಿಭಟನೆ

    ಮಡಿಕೇರಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನದಿಂದ ದಿನಕ್ಕೆ 100 ಗಡಿದಾಟುತ್ತಿದೆ. ಸದ್ಯ ಪೆಟ್ರೋಲ್ ಬೆಲೆ 101ರೂ ಆಗಿದ್ದು, ಇದನ್ನು ಖಂಡಿಸಿ ನಾಟ್ ಔಟ್ ಕರ್ನಾಟಕ ಕಾವಲು ಪಡೆ ಸಂಘಟನೆಯ ಕಾರ್ಯಕರ್ತರು ದೇವಾಲಯದಲ್ಲಿ 101 ತೆಂಗಿನಕಾಯಿ ಕಾಯಿ ಒಡೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

    ಕುಶಾಲನಗರದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ, ವಿನೂತನ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ ಆಕ್ರೋಶ ವ್ಯಕ್ತಪಡಿಸಿದರು. ದಿನನಿತ್ಯ ಲಕ್ಷಾಂತರ ಜನರು ಉಪಯೋಗಿಸುವ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಇಂದು ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷರಾದ ಎಂ ಕೃಷ್ಣ ರವರ ನೇತೃತ್ವದಲ್ಲಿ ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಕುಶಾಲನಗರದ ನಗರದ ಹೃದಯ ಭಾಗದಲ್ಲಿ ಇರುವ ಗಣಪತಿ ದೇವಸ್ಥಾನದ ಮುಂಭಾಗ 101 ತೆಂಗಿನಕಾಯಿ ಒಡೆದು ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣರವರು ಪೆಟ್ರೋಲ್ ಬೆಲೆ 200 ದಾಟಿದರೆ 200 ಕಾಯಿಗಳನ್ನು ಒಡೆಯುತ್ತಿವೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಚಿಮ್ಮಲಿ. ನಾವು ಸ್ವಾಗತಿಸುತ್ತೇವೆ ಎಂದು ವ್ಯಂಗ್ಯವಾಗಿ ನುಡಿದರು.

    ಜನ ಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳುವ ಕಾಲ ಸನಿಹದಲ್ಲಿ ಬರುತ್ತದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಾಮಾಜಿಕ ಅಂತರ ಮಾಯ- ಕಿಟ್‍ಗಾಗಿ ಕ್ಯೂ ನಿಂತ ಕಾರ್ಮಿಕರು

  • ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ಚೀನಾದಲ್ಲಿ ಸೃಷ್ಟಿಯಾಗಿ ಇಂದು ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾಗೆ ವಿಜ್ಞಾನಿಗಳು ಔಷಧಿ ಕಂಡು ಹಿಡಿಯಲು ಪ್ರಯತ್ನ ನಡೆಸುತ್ತಿದ್ದು, ಯಶಸ್ವಿ ಆಗುತ್ತದೋ ಇಲ್ಲವೋ ಎನ್ನುವುದು ತಿಳಿದುಬರಬೇಕಿದೆ. ಈ ಮಧ್ಯೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಈ ಕೊರೊನಾವನ್ನು ತಡೆಗಟ್ಟಬಹುದು ಎಂದು ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ.

    ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು ಎಂದಾಗ ಯಾವುದನ್ನು ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚು ಸಿಗುತ್ತದೆ ಎನ್ನುವ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಪ್ರಶ್ನೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಸುಲಭವಾಗಿ ಹೇಳಬಹುದು. ಆದರಲ್ಲೂ ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎನ್ನುವ ವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡಲಾಗಿದ್ದು, ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯಿಂದ ಕೊರೊನಾ ತಡೆಗಟ್ಟಬಹುದು ಎಂದು ಹೇಳುತ್ತಿಲ್ಲ. ಆದರೆ ಇವುಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ರೋಗಗಳನ್ನು ತಡೆಯಬಹದು ಎನ್ನುವುದಷ್ಟೇ ಈ ಲೇಖನದ ಉದ್ದೇಶ.

    ವಿಶ್ವದೆಲ್ಲೆಡೆ ಕೊರೊನಾ ವೈರಸ್ ಮಾರಕ ಸೋಂಕು ಜ್ವರದ ಭೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಾರಕ ಸೋಂಕು ರೋಗಕ್ಕೆ ಯಾವುದೇ ಮದ್ದಾಗಲಿ ಅಥವಾ ಲಸಿಕೆಗಳಾಗಲಿ ಲಭ್ಯವಿಲ್ಲ. ಈ ಮಾರಿ ಜ್ವರ ಹಬ್ಬದಂತೆ ಹಲವಾರು ಜಾಗರೂಕತೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಮುಂಜಾಗೃತಾ ಕಾನೂನು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಎಲ್ಲರಲ್ಲೂ ಈ ಸೋಂಕು ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿ ಇರುತ್ತದೆ. ಇದಕ್ಕೆ ಉದಾಹರಣೆ ಏನೆಂದರೆ ಕೊರೊನಾ ವೈರಸ್ ಸೋಂಕು ಬಂದವರಲ್ಲಿ ಶೇ.90ರಷ್ಟು ಜನ ಜ್ವರ ಲಕ್ಷಣವಿಲ್ಲದೆ ಓಡಾಡುತ್ತಿರುತ್ತಾರೆ. ಅಂದರೆ, ಹಲವಾರು ಕಾರಣಗಳಿಂದ ಶೇ.10ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗಿರುತ್ತದೆ.

    ನಾವು ಉಸಿರಾಡಿದಾಗ ಈ ವೈರಸ್ ಮೂಗಿನ ಮೂಲಕ ಶ್ವಾಸಕೋಶಕ್ಕೆ ಹೋಗಿ ಅಂಗಾಂಶವನ್ನು ಧ್ವಂಸಮಾಡಿ ಉಸಿರಾಡಂತೆ ಮಾಡುತ್ತದೆ. ನಾವು ಉಸಿರಾಡುವುದನ್ನು ನಿಲ್ಲಿಸುವುದು ಅಸಾಧ್ಯ. ಆದುದರಿಂದ ವೈರಸ್ ದೇಹದೊಳಗೆ ಹೋಗದಂತೆ ಅಥವಾ ಹೋದರೆ ಉಸಿರಾಡುವ ಅಂಗಗಳನ್ನು ಹೇಗೆ ರಕ್ಷಿಸುವುದು ಬಗೆ ಚಿಂತನೆ ಮಾಡಬೇಕಿದೆ. ಪ್ರಕೃತಿಯಲ್ಲಿ ಸೋಂಕು ನಿರೋಧಕ ಶಕ್ತಿಯನ್ನು ಮನುಷ್ಯನಲ್ಲಿ ಹೆಚ್ಚಿಸುವ ಗುಣ ವಿಶೇಷವಿರುವ ವಿವಿಧ ಗಿಡ ಮೂಲಿಕೆಗಳಲ್ಲಿ ಮತ್ತು ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಇವೆ.

    ತೆಂಗಿನ ಎಣ್ಣೆ ಕರಾವಳಿ ಪ್ರದೇಶಗಳಲ್ಲಿ ತೆಂಗಿನ ಕಾಯಿ, ಎಣ್ಣೆ ಮತ್ತು ಸಿಯಾಳ ದಿನನಿತ್ಯ ಉಪಯೋಗಿಸುವುದು ವಾಡಿಕೆಯಿತ್ತು. ತೆಂಗಿನ ಮರವನ್ನು ಭೂಲೋಕದ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದ ಶುಭ ಸಮಾರಂಭಗಳಲ್ಲಿ, ಧಾರ್ಮಿಕ ಪೂಜೆ ಪುರಸ್ಕಾರಗಳಲ್ಲಿ ತೆಂಗಿನ ಕಾಯಿ ಮಹತ್ವವಾದ ಸ್ಥಾನ ಪಡೆದಿದೆ. ದೇವರ ನೈವೇದ್ಯಕ್ಕೆ ತೆಂಗಿನ ಕಾಯಿ ಇರಲೇಬೇಕು. ನಮ್ಮ ಪೂರ್ವಜರು ಆರೋಗ್ಯಕ್ಕೆ ಉತ್ತಮವಾದುದ್ದನ್ನು ದೇವರಿಗೆ ಸಮರ್ಪಣೆ ಮಾಡಿ ಮತ್ತೆ ತಾವು ಸೇವಿಸುತ್ತಿದ್ದರು. ಹಾಗೆಯಾದರೂ ಜನರು ಉತ್ತಮ ಕ್ರಮ, ಪದಾರ್ಥಗಳನ್ನು ಅಳವಡಿಸಿಕೊಳ್ಳಿ ಎನ್ನುವ ಉದ್ದೇಶ ಅವರದ್ದು ಇದ್ದಿರಬೇಕು.

    ಆಧುನಿಕ ಜೀವನ ಶೈಲಿ, ಪಾಶ್ಚಿಮಾತ್ಯ ಅನುಕರಣೆ ಮತ್ತು ಹಿಂದೆ ಕೆಲವು ಹಲವು ವೈಜ್ಞಾನಿಕವಾಗಿ ಸರಿಯಾದ ಸಂಶೋಧನೆ ನಡೆಸದಿರುವುದರಿಂದ ಪಾರಂಪರಿಕವಾಗಿ ನಡೆಸುತ್ತಿದ್ದ ಅನುಸರಣೆಯು ಮಾಯವಾಗುತ್ತಿದೆ. ಅದೃಷ್ಟವಶಾತ್ ಇತ್ತೀಚೆಗೆ ವಿಜ್ಞಾನಿಗಳ ಸಂಶೋಧನೆಯಿಂದಾಗಿ ಸತ್ಯಾಸತ್ಯತೆಗಳು ಬೆಳಕಿಗೆ ಬರುತಿದೆ. ತೆಂಗಿನ ಎಣ್ಣೆಯನ್ನು ಹಾಳಾಗದ ಹಾಗೆ ಬಹು ದಿನ ಇಡಲು ಕೃತಕವಾಗಿ (ಹೈಡ್ರೋಜಿನೇಷನ್) ಸಂಸ್ಕರಿಸುತ್ತಾರೆ. ಇದರಿಂದಾಗಿ ಎಣ್ಣೆಯ ಪ್ರಕೃತಿ ಸಹಜವಾದ ಗುಣಗಳು ನಾಶವಾಗುತ್ತದೆ. ಪ್ರಕೃತಿ ಸಹಜವಾದ ಗುಣಗಳು ನಾಶವಾಗಿ ಆರೋಗ್ಯಕ್ಕೆ ಕೆಡುಕು ಉಂಟುಮಾಡುತ್ತದೆ. ಈಗ ತೆಂಗಿನ ಎಣ್ಣೆಯನ್ನು ಹಳೆಯ ಕಾಲದಂತೆ, ಕೋಲ್ಡ್ ಪ್ರೆಸ್ ಮಾಡಿ ತೆಗೆಯುತ್ತಾರೆ. ಇದನ್ನು ವರ್ಜಿನ್ ತೆಂಗಿನ ಎಣ್ಣೆ ಎನ್ನುತ್ತಾರೆ. ಮೊದಲು ತೆಂಗಿನ ಎಣ್ಣೆ ಹೃದ್ರೋಗ ಹೆಚ್ಚಲು ಕಾರಣ ಎನ್ನುವ ವಿಜ್ಞಾನಿಗಳು, ವರ್ಜಿನ್ ತೆಂಗಿನ ಎಣ್ಣೆ ಹೃದ್ರೋಗ ಬರದಂತೆ ತಡೆಯಬಲ್ಲದು ಎಂಬದುನ್ನು ತೋರಿಸಿದ್ದಾರೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ (ಫ್ಯಾಟಿ ಆಸಿಡ್) ಎನ್ನುವ ಕೊಬ್ಬಿನಾಂಶ ಹಲವಾರು ವೈರಸನ್ನು ಜೀವಕೋಶದಲ್ಲಿ ಬೆಳೆಯುದನ್ನು ತಡೆಗಟ್ಟಬಲ್ಲದು ಎಂದು ಹಲವು ಮಂದಿ ತೋರಿಸಿಕೊಟ್ಟಿದ್ದಾರೆ.

    ಲಾರಿಕ್ ಆಸಿಡ್ ಪ್ರಚೋದನೆಯಿಂದ ಜೀವಕೋಶದಲ್ಲಿ 7-10 ಹೆಚ್ಚು ಪಟ್ಟು ಟ್ರೈ ಎಸೈಲ್ ಗ್ಲಿಸರೊಲ್ ಎಂಬ ರಾಸಾಯನಿಕ ಪದಾರ್ಥವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಜೀವಕೋಶಕ್ಕೆ ಏನೂ ತೊಂದರೆಯಾಗುವುದಿಲ್ಲ. ಜೀವಕೋಶದಲ್ಲಿ ಅಧಿಕ ಮಟ್ಟದ ಟ್ರೈ ಎಸೈಲ್ ಗ್ಲಿಸರೊಲ್‍ಇರುವುದರಿಂದ ವೈರಸ್ ಪ್ರ್ರೊಟಿನ್‍ಗಳು ಗಳು ಸಮರ್ಪಕ ರೀತಿಯಲ್ಲಿ ಜೋಡಣೆಯಾಗದೇ ನಿಷ್ಕ್ರಿಯವಾಗುತ್ತದೆ. ಅದು ಅಲ್ಲದೆ ವೈರಸ್ ತನ್ನದೇ ಆದ ಪ್ರೋಟಿನ್ ಸುರಿಸುವಂತೆ ಮಾಡುತ್ತದೆ. ಈ ಪ್ರೋಟಿನ್ಸ್ ವೈರಸನ್ನು ಜೀವಕೋಶದ ಹೊರ ಪದರದಲ್ಲಿ ನೆಲೆಯಾಗಲು ಬೇಕಾಗುತ್ತದೆ. ಆದರೆ ಈ ಕ್ರಿಯೆಯನ್ನು ಲಾರಿಕ್ ಆಸಿಡ್ ತಡೆಗಟ್ಟಿ ವೈರಸ್ ಜೀವಕೋಶದ ಒಳಗೆ ಹೋಗಿ ಹಾನಿ ಉಂಟು ಮಾಡುವುದನ್ನು ತಪ್ಪಿಸುತ್ತದೆ.

    ಲಾರಿಕ್ ಆಸಿಡ್ ತೆಗೆದ ಮೇಲೂ 4-7 ಗಂಟೆಗಳವರೆಗೂ ಮೇಲೆ ವಿವರಿಸಿದ ಪರಿಣಾಮ ಫಲಕಾರಿಯಾಗಿರುತ್ತದೆ. ತೇಗಿನ ಎಣ್ಣೆಯಲ್ಲಿ ಮಾತ್ರ ಲಾರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಇದೆ. ತೆಂಗಿನ ಎಣ್ಣೆಯ ಕೊಬ್ಬಿನಾಂಶದಲ್ಲಿ ಶೇ.50 ರಷ್ಟು ಲಾರಿಕ್ ಆಸಿಡ್ ಇದೆ. ತೆಂಗಿನ ಎಣ್ಣೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀವಕೋಶ ಮತ್ತು ಅಂಗಾಂಶಗಳ ಪುನರ್ ಜೀವನಕ್ಕೆ ಸಹಕಾರಿಯಾಗಿದೆ. ಉದುರಿತವನ್ನು ಕಡಿಮೆಮಾಡುತ್ತದೆ. ಎಣ್ಣೆಯ ಪದರವು ವೈರಸಿಗೆ ತಡೆ ಗೋಡೆಯಾಗಿರುತ್ತದೆ. ಜೀವಕೋಶ, ಅಂಗಾಂಶಗಳಿಗೆ ಎಣ್ಣೆ ಆಹಾರವಾಗಿ ತ್ವರಿತ ಶಕ್ತಿಯನ್ನು ಒದಗಿಸಿ ವೈರಸನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ.

     

    ದೇಹಕ್ಕೆ ಬರುವ ಸೋಂಕನ್ನು ತಡೆಗಟ್ಟಲು ತೆಂಗಿನ ಎಣ್ಣೆ ಹೇಗೆ ಉಪಯೋಗಿಸಬೇಕೆಂದು ತಿಳಿಸುವೆ. ಬೆಳಿಗ್ಗೆ ಎದ್ದ ಮೇಲೆ ಮತ್ತು ಸಂಜೆ ಅಥವಾ ಮಲಗುವುದಕ್ಕೆ ಮೊದಲು ತೆಂಗಿನ ಎಣ್ಣೆಯನ್ನು ತಲೆ ಮೇಲೆ ಮಾಡಿ ಮೂಗಿನ ಎರಡೂ ಹೊಳ್ಳೆಯ ಒಳಗೆ ಹಾಕಿ. ಬಾಯಿಗೆ ಬಂದರೆ ಚಿಂತೆ ಮಾಡಬೇಡಿ. ತಲೆ ಮೇಲೆ ಮಾಡಿ ಹಾಗೆ ಐದು ನಿಮಿಷ ಕುಳಿತುಕೊಳ್ಳಿ. ಎರಡನೆಯದಾಗಿ, ಬರಿಯ ಹೊಟ್ಟೆಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಬರೇ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಅರ್ಧ ಗಂಟೆಯ ನಂತರ ಕುಡಿಯುವುದು, ತಿನ್ನುವುದು ಮಾಡಬಹುದು. ಕಣ್ಣಿಗೂ, ಕಿವಿಗೂ ಒಂದೆರಡು ತೊಟ್ಟು ಹಾಕಬಹುದು. ತೆಂಗಿನ ಕಾಯಿಯನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸಿ.

    ಲೇಖಕರ ಬಗ್ಗೆ:
    ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಡಾ ನಾಗಭೂಷಣ ಅವರು ಪ್ರಸ್ತುತ ಅಮೇರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ. ಮುಂಬೈ ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸಂಶೋಧನೆ ನಡೆಸಿದವರು. ಅಲ್ಲಿಯೇ ಡಾಕ್ಟರೇಟ್ ಪದವಿಯನ್ನು ಗಳಿಸಿ ಅಮೆರಿಕಾದ ಶೇಷ್ಠ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದವರು. ಇವರು ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ಸಂಶೋಧನೆ ಮಾಡಿ ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ (1984) ಅರಶಿನವು ಕ್ಯಾನ್ಸರ್ ಅನ್ನು ತಡೆಗಟ್ಟಬಲ್ಲದೆಂದು ಕಂಡುಹಿಡಿದವರು. ಈ ಸಂಶೋಧನೆಗಾಗಿ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್, ನವದೆಹಲಿಯಿಂದ ಚಿನ್ನದ ಪದಕ ಪಡೆದಿರುತ್ತಾರೆ. ಅಲ್ಲದೆ ದೇಶ ವಿದೇಶಗಳಲ್ಲಿ 20ಕ್ಕೂ ಹೆಚ್ಚು ಪಾರಿತೋಷಕಗಳನ್ನು ಪಡೆದಿದ್ದಾರೆ.

    ಈ ವಿಚಾರದ ಬಗ್ಗೆ ಪ್ರಶ್ನೆ, ಅನುಮಾನಗಳಿದ್ದರೆ digital@writemenmedia.com ಪ್ರಶ್ನೆ ಕೇಳಬಹುದು. ಲೇಖಕರು ಉತ್ತರಿಸುತ್ತಾರೆ.

    [ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]

  • ತೆಂಗಿನ ಕಾಯಿ ಜೊತೆ ಗಾಂಜಾ ಸಾಗಾಟ – 35 ಲಕ್ಷ ಮೌಲ್ಯದ ಗಾಂಜಾ ಜಪ್ತಿ

    ತೆಂಗಿನ ಕಾಯಿ ಜೊತೆ ಗಾಂಜಾ ಸಾಗಾಟ – 35 ಲಕ್ಷ ಮೌಲ್ಯದ ಗಾಂಜಾ ಜಪ್ತಿ

    ಬೀದರ್: ತೆಂಗಿನ ಕಾಯಿ ಮಾರಾಟ ಮಾಡುವ ಸೋಗಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೀದರ್ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

    ಬೀದರ್ ಔರಾದ್ ತಾಲೂಕಿನ ಘಾಮಾ ತಾಂಡದಲ್ಲಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆರೋಪಿಗಳಿದ್ದ ಮನೆಯ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ.

    ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಒಟ್ಟು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 35 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಒಂದು ಕಾರು, ಮೂರು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೀದರ್ ಜಿಲ್ಲೆಯ ಎಸ್‍ಪಿ ಟಿ ಶ್ರೀಧರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ತೆಂಗಿನಕಾಯಿ ಕಟ್ಟಿದ್ರೆ ಸಂತಾನಭಾಗ್ಯ- ಬೀದರ್ ನ ಚಳಕಾಪುರದಲ್ಲಿ ಹನುಮಂತನ ಪವಾಡ

    ತೆಂಗಿನಕಾಯಿ ಕಟ್ಟಿದ್ರೆ ಸಂತಾನಭಾಗ್ಯ- ಬೀದರ್ ನ ಚಳಕಾಪುರದಲ್ಲಿ ಹನುಮಂತನ ಪವಾಡ

    ಬೀದರ್: ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವ ಹನುಮಾನ್ ದೇವಸ್ಥಾನದಲ್ಲಿ ಹಲವು ವಿಸ್ಮಯಗಳು ನಡೆಯುತ್ತಿವೆ. ಎಲ್ಲಾ ದೇವಸ್ಥಾನಗಳು ದಕ್ಷೀಣಾಮುಖಿವಾಗಿ ಇದ್ರೆ ಈ ದೇವಸ್ಥಾನ ಮಾತ್ರ ಉತ್ತರಾಭಿಮುಖಿವಾಗಿರುವುದು ಒಂದು ವಿಶೇಷವಾಗಿದೆ. ಇಲ್ಲಿಗೆ ಹನುಮಂತ ಮತ್ತು ಲಕ್ಷ್ಮಣ ಬಂದ ಪ್ರತೀತಿ ಇದೆ. ಈ ಹನುಮಾನ್ ಎಂದ್ರೆ ಈ ತೆಂಗಿನ ಕಾಯಿ ಪವಾಡ ಎಂದು ಖ್ಯಾತವಾಗಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದಲ್ಲಿರುವ ಈ ಉತ್ತಾರಾಭಿಮುಖಿ ಹನುಮಾನ್ ದೇವಸ್ಥಾನಕ್ಕೆ ಮಕ್ಕಳಾಗದ ಮಹಿಳೆಯರು ಬಂದು ದೇವಾಲಯದ ಗೋಡೆ ಮೇಲೆ ತೆಂಗಿನಕಾಯಿ ಕಟ್ಟಿದ್ರೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ. ಇದರ ಒಳಿತನ್ನು ಕಂಡವರೂ ಇದ್ದಾರೆ.

    ಇದಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿಗೆ ಬರುವ ಭಕ್ತರು ಕಷ್ಟವನ್ನು ಹೇಳಿಕೊಂಡು ತೆಂಗಿನ ಕಾಯಿ ಕಟ್ಟುತ್ತಾರೆ. ಕಷ್ಟ ಪರಿಹಾರವಾದ ಮೇಲೆ ತೆಂಗಿನಕಾಯಿಯನ್ನು ಬಿಚ್ಚಿಕೊಂಡು ಹೋಗ್ತಾರೆ ಅಂತ ಭಕ್ತರಾದ ವಿಮಲಾಬಾಯಿ ಹೇಳಿದ್ದಾರೆ.

    ಈ ಗ್ರಾಮಕ್ಕೆ ಚಳಕಾಪೂರ ಎಂದು ಹೇಸರು ಬರಲೂ ಒಂದು ಕಾರಣವಿದೆ. ಈ ಹಿಂದೆ “ಚಾಳಕಾದೇವಿ” ಎಂಬ ರಾಮನ ಭಕ್ತೆ ಇಲ್ಲಿ ವಾಸವಿದ್ದಳಂತೆ. ಆಕೆಯ ಪತಿ “ಚಳಕಾಸುರ್” ಎಂಬ ರಾಕ್ಷಸನ ಅಟ್ಟಹಾಸ ಜೋರಾಗಿದ್ದಾಗ ರಾಮನಿಂದ ಆ ರಾಕ್ಷಸನ ವಧೆಯಾಗಿತ್ತಂತೆ. ಹೀಗಾಗಿ ಇದಕ್ಕೆ ಚಳಕಾಪುರ ಎಂಬ ಹೆಸ್ರು ಬಂದಿದೆ. ಇನ್ನು ಇಲ್ಲಿನ ಹನುಮಂತ ಉದ್ಭವ ಮೂರ್ತಿಯಾಗಿದ್ದು, ದೇವಸ್ಥಾನದ ಪಕ್ಕದಲೇ ಒಂದು ಗುಡ್ಡವಿದ್ದು ಅದನ್ನು ಸಂಜೀವಿನಿ ಪರ್ವತ ಎಂದು ಕರೆಯಲಾಗುತ್ತೆ ಅಂತ ಭಕ್ತರಾದ ಮೇಘಾ ಕುಲಕರ್ಣಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಧನಾದ್ರೂ ಅಂದವಾದ ಬದುಕು – ದಿನಕ್ಕೆ 2 ಸಾವಿರ ತೆಂಗಿನಕಾಯಿ ಸುಲೀತಾರೆ ತುರುವೇಕೆರೆಯ ಕುಮಾರಯ್ಯ

    ಅಂಧನಾದ್ರೂ ಅಂದವಾದ ಬದುಕು – ದಿನಕ್ಕೆ 2 ಸಾವಿರ ತೆಂಗಿನಕಾಯಿ ಸುಲೀತಾರೆ ತುರುವೇಕೆರೆಯ ಕುಮಾರಯ್ಯ

    ತುಮಕೂರು: ಬದುಕುವ ಹಂಬಲ ಎಂಥವರನ್ನೂ ಎಂಥ ಕೆಲಸಕ್ಕೂ ಕರೆದೊಯ್ಯುತ್ತೆ ಅನ್ನೋದಕ್ಕೆ ಈ ವ್ಯಕ್ತಿ ಪತ್ರಕ್ಷ ಸಾಕ್ಷಿ. ಕಣ್ಣು ಕಾಣಿಸದಿದ್ದರೂ ತೆಂಗಿನ ಕಾಯಿ ಸುಲಿಯುವುದರಲ್ಲಿ ನಮ್ಮ ಇಂದಿನ ಪಬ್ಲಿಕ್ ಹೀರೋ ಎಕ್ಸ್‍ಪರ್ಟ್ ಆಗಿದ್ದಾರೆ ಅಂತಲೇ ಹೇಳಬಹುದು.

    ತುಮಕೂರಿನ ತುರುವೇಕೆರೆ ತಾಲೂಕಿನ ಹಿರೇಡೊಂಕಿಹಳ್ಳಿ ನಿವಾಸಿಯಾಗಿರೋ ಕುಮಾರಯ್ಯ ಅವರಿಗೆ ಎರಡು ಕಣ್ಣು ಕಾಣಿಸದಿದ್ದರೂ ದಿನವೊಂದಕ್ಕೆ ಬರೋಬ್ಬರಿ 2 ಸಾವಿರ ತೆಂಗಿನ ಕಾಯಿ ಸುಲೀತಾರೆ. ಒಂದು ಕಾಯಿಗೆ 40 ಪೈಸೆಯಂತೆ 800 ರೂಪಾಯಿ ಸಂಪಾದಿಸ್ತಿದ್ದಾರೆ. ಕಣ್ಣು ಕಾಣುವವರಿಗೂ ನಾಚಿಸುವಂತೆ ಸರಾಗವಾಗಿ ಒಮ್ಮೆಯೂ ದಸಿ ಚುಚ್ಚಿಸಿಕೊಳ್ಳದೆ ಕಾಯಿ ಸುಲಿಯುತ್ತಾರೆ.

    38 ವರ್ಷದ ಕುಮಾರಯ್ಯ ಹುಟ್ಟು ಕುರುಡರಲ್ಲ. 15 ವರ್ಷದ ಹಿಂದೆ ನರಸಂಬಂಧಿ ಕಾಯಿಲೆಯಿಂದ ದೃಷ್ಠಿ ಕಳೆದುಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದರೂ ಪ್ರಯೋಜನವಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ. ಕುಮಾರಯ್ಯಗೆ ಪತ್ನಿ ಮಂಜಮ್ಮ, ಇಬ್ಬರು ಮಕ್ಕಳು ಇದ್ದಾರೆ. ಯಾರಿಗೂ ಯಾವೂದಕ್ಕೂ ಕಡಿಮೆ ಇಲ್ಲದೆ ಸುಂದರವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

    https://www.youtube.com/watch?v=Gs4QWuSAauQ