Tag: ತೆಂಗಿನಕಾಯಿ ಬಿಸ್ಕಿಟ್

  • ನಾಲ್ಕೇ ಪದಾರ್ಥ ಸಾಕು – ರುಚಿಕರವಾದ ತೆಂಗಿನಕಾಯಿ ಬಿಸ್ಕಿಟ್ ಹೀಗೆ ಮಾಡಿ

    ನಾಲ್ಕೇ ಪದಾರ್ಥ ಸಾಕು – ರುಚಿಕರವಾದ ತೆಂಗಿನಕಾಯಿ ಬಿಸ್ಕಿಟ್ ಹೀಗೆ ಮಾಡಿ

    ತೆಂಗಿನಕಾಯಿ ಬಿಸ್ಕಿಟ್ ಮಾಡಲು ಕೇವಲ ನಾಲ್ಕೇ ಪದಾರ್ಥ ಸಾಕು. ಮಾತ್ರವಲ್ಲದೇ ತುಂಬಾ ಸಿಂಪಲ್ ಕೂಡಾ. ಒಣ ತೆಂಗಿನ ತುರಿಯನ್ನು ಇದಕ್ಕಾಗಿ ಬಳಸಲಾಗಿದ್ದು, ರುಚಿಯೂ ಅದ್ಭುತ ಎನಿಸುತ್ತದೆ. ಸಂಜೆ ವೇಳೆ ಚಹಾಗೆ ಇದು ಒಂದು ಪರ್ಫೆಕ್ಟ್ ಸ್ನ್ಯಾಕ್ಸ್ ಆಗಬಲ್ಲದು. ನಾಲ್ಕೇ ಪದಾರ್ಥ ಬಳಸಿ ತೆಂಗಿನಕಾಯಿ ಬಿಸ್ಕಿಟ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಒಣ ತೆಂಗಿನತುರಿ – ಅರ್ಧ ಕಪ್
    ಅಡುಗೆ ಸೋಡಾ – ಕಾಲು ಟೀಸ್ಪೂನ್
    ಕರಗಿಸಿದ ಬೆಣ್ಣೆ – ಕಾಲು ಕಪ್
    ಮೊಟ್ಟೆ – 5
    ಉಪ್ಪು – ಕಾಲು ಟೀಸ್ಪೂನ್ (ಐಚ್ಛಿಕ) ಇದನ್ನೂ ಓದಿ: ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 350 ಡಿಗ್ರಿ ಪ್ಯಾರಾಹೀಟ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಒಣ ತೆಂಗಿನ ತುರಿ ಮತ್ತು ಕರಗಿದ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಸಂಯೋಜಿಸಿ.
    * ಹಿಟ್ಟನ್ನು ಸುಮಾರು 3 ಟೀಸ್ಪೂನ್ ಗಾತ್ರದಷ್ಟು ಒಂದೊಂದು ಬಿಸ್ಕಿಟ್ ಆಗುವಂತೆ ಬೇಕಿಂಗ್ ಶೀಟ್‌ನಲ್ಲಿ ಜೋಡಿಸಿಕೊಳ್ಳಿ.
    * ಬಳಿಕ ಅದನ್ನು ಓವನ್‌ನಲ್ಲಿ ಇರಿಸಿ, ಸುಮಾರು 20 ನಿಮಿಷ ಬೇಯಿಸಿಕೊಳ್ಳಿ.
    * ಬಳಿಕ ಟೂತ್‌ಪಿಕ್ ಬಳಸಿ ಬಿಸ್ಕಿಟ್ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿ. ಬೆಂದಿಲ್ಲವೆಂದಾದರೆ ಮತ್ತೆ 10 ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಟೇಸ್ಟಿ ತೆಂಗಿನಕಾಯಿ ಬಿಸ್ಕಿಟ್ ತಯಾರಾಗಿದ್ದು, ಟೀ ಟೈಮ್‌ನಲ್ಲಿ ಸವಿಯಿರಿ. ಇದನ್ನೂ ಓದಿ: ಹೀಗೆ ಮಾಡಿ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]