Tag: ತೆಂಗಿನಕಾಯಿ

  • 5.71 ಲಕ್ಷ ನೀಡಿ ಮಾಳಿಂಗರಾಯ ಗದ್ದುಗೆಯ ತೆಂಗಿನಕಾಯಿ ಪಡೆದ ಭಕ್ತ

    5.71 ಲಕ್ಷ ನೀಡಿ ಮಾಳಿಂಗರಾಯ ಗದ್ದುಗೆಯ ತೆಂಗಿನಕಾಯಿ ಪಡೆದ ಭಕ್ತ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ (Jamkhandi)  ತಾಲೂಕಿನ ಚಿಕ್ಕಲಕಿ ಗ್ರಾಮದ ನಡೆದ ಮಾಳಿಂಗರಾಯ ಜಾತ್ರೆಯಲ್ಲಿ ದಾಖಲೆ ಮೊತ್ತಕ್ಕೆ ಮಾಳಿಂಗರಾಯ ಗದ್ದುಗೆಯ (Malingaraya-Gadduge)  ತೆಂಗಿನಕಾಯಿ ಹರಾಜು ಆಗಿದೆ.

    ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಭಕ್ತನಾದ (Devotee) ಮಾಹಾವೀರ ಹರಕೆಯವರು ಹರಾಜಿನಲ್ಲಿ ದೇವರ ಮುಂದಿನ ಈ ತೆಂಗಿನಕಾಯಿಯನ್ನು 5,71,001 ರೂ.ಗೆ ಪಡೆದುಕೊಂಡಿದ್ದಾರೆ. ಈ ತೆಂಗಿನಕಾಯಿಯನ್ನು ಪಡೆಯಲು ಚಿಕ್ಕಲಕಿ ಗ್ರಾಮದ ಮುದುಕಪ್ಪ ಮಾಳಪ್ಪ ಪಟೇದ್ದಾರ ಮತ್ತು ಗೋಠೆ ಗ್ರಾಮದ ಸದಾಶಿವ ಮೈಗೂರರವರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಇದನ್ನೂ ಓದಿ: ಬುರುಡೆ ಕೇಸ್ ಎಸ್‌ಐಟಿಯಿಂದ ಸತತ 12 ಗಂಟೆ ತಿಮರೋಡಿ ಮನೆ ಶೋಧ

     

    ತೆಂಗಿನಕಾಯಿಯ ವಿಶೇಷ ಏನು?
    ಮಹಿಮಾಂತ ಮಾಳಿಂಗರಾಯ ದೇವರ ಗದ್ದುಗೆ ಮೇಲೆ ಈ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಒಂದು ತಿಂಗಳ ಕಾಲ ಪೂಜಿಸಲಾಗಿರುತ್ತದೆ. ಇದೇ ತೆಂಗಿನ ಕಾಯಿಯನ್ನು ಹಿಂದೊಮ್ಮೆ ಮಾಹಾವೀರ ಹರಕೆಯವರು ಹರಾಜಿನಲ್ಲಿ 6,50,001 ರೂ.ಗೆ ಪಡೆದುಕೊಂಡಿದ್ದರು. ಈಗ ಮತ್ತೆ ದಾಖಲೆಯ ಮೊತ್ತಕ್ಕೆ ಮಹಾಳಿಂಗರಾಯನ ತೆಂಗಿನಕಾಯಿ ತಮ್ಮದಾಗಿಸಿಕೊಂಡು ವಿಶೇಷ ಭಕ್ತಿ ಪ್ರದರ್ಶಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾಳಿಂಗರಾಯ ಪಟ್ಟದ ದೇವರು ಗುರು ಮುತ್ಯಾ ಬಬಲಾದಿ, ಮಾಳಿಂಗರಾಯ ದೇವರ ಅರ್ಚಕರಾದ ಸಿದ್ದಣ ಪೂಜಾರಿ, ಹಿರಿಯರಾದ ದುಂಡಪ್ಪ ಬಬಲಾದಿ, ಕಲ್ಲಪ್ಪ ಗಿಡಗಿಂಚಿ, ಗ್ರಾಮಪಂಚಾಯತ್ ಸದಸ್ಯರರಾದ ಬಸವರಾಜ ಆಲಗೂರ, ಸಂತೋಷ ಮಮದಾಪೂರ, ಜಾತ್ರೆಯಲ್ಲಿ ನೇರೆದಿದ್ದ ಭಕ್ತ ಸಮೂಹ ಉಪಸ್ಥಿತರಿದ್ದರು.

  • ಸಾರ್ವಕಾಲಿಕ ದಾಖಲೆಯತ್ತ ತೆಂಗಿನಕಾಯಿ ದರ – ಕೆಜಿಗೆ ಬರೋಬ್ಬರಿ 70-80 ರೂ.

    ಸಾರ್ವಕಾಲಿಕ ದಾಖಲೆಯತ್ತ ತೆಂಗಿನಕಾಯಿ ದರ – ಕೆಜಿಗೆ ಬರೋಬ್ಬರಿ 70-80 ರೂ.

    – ಇತಿಹಾಸದಲ್ಲೇ ಮೊದಲ ಬಾರಿಗೆ ಶತಕಕ್ಕೆ ಸಮೀಪಿಸಿದ ತೆಂಗಿನಕಾಯಿ ದರ

    ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ತೆಂಗಿನಕಾಯಿ ದರ (Coconut) ಶತಕ ಸಮೀಪಿಸಿದ್ದು, ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ.

    ಸಾಮಾನ್ಯವಾಗಿ ಒಂದು ಕೆ.ಜಿ ತೆಂಗಿನಕಾಯಿಗೆ 30 ರೂ. ಆಸುಪಾಸಿನಲ್ಲಿರುತ್ತಿತ್ತು. ಆದರೆ ಇದೀಗ ದ್ವಿಗುಣಗೊಂಡಿದ್ದು, ಒಂದು ಕೆ.ಜಿಗೆ ಬರೋಬ್ಬರಿ 70-80 ರೂ.ಗೆ ತಲುಪಿದೆ. ಒಂದೆಡೆ ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದ್ದು, ಇನ್ನೊಂದೆಡೆ ಜನ ಸಾಮಾನ್ಯರಿಗೆ ಹೊರೆಯಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಐದೂವರೆ ವರ್ಷದಲ್ಲಿ 82 ಹುಲಿಗಳ ಸಾವು; ಸಮಗ್ರ ವರದಿ ಕೇಳಿದ ಅರಣ್ಯ ಸಚಿವ

    ಇನ್ನೂ ತೆಂಗಿನಕಾಯಿ ಜೊತೆ ಕೊಬ್ಬರಿ, ಕೊಬ್ಬರಿ ಎಣ್ಣೆ, ಎಳನೀರು ದರದಲ್ಲೂ ಭಾರೀ ಏರಿಕೆಯಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಲೀಟರ್‌ಗೆ 310 ರೂ. ಆದರೆ, ಎಳನೀರು ಒಂದಕ್ಕೆ 70 ರೂ.ಯಾಗಿದೆ. ಈ ಮೂಲಕ ಹಿಂದೆಂದಿಗಿಂತಲೂ ಈ ಸಲ ಭಾರೀ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

    ಶೀಘ್ರದಲ್ಲೇ ಕೆ.ಜಿ ತೆಂಗಿನಕಾಯಿ ಬೆಲೆ 100 ರೂ.ಗೂ ಅಧಿಕವಾಗುವ ಸಾಧ್ಯತೆಯಿದ್ದು, ಇನ್ನೂ 6 ತಿಂಗಳು ದರ ಇಳಿಕೆ ಸಾಧ್ಯತೆ ಇಲ್ಲ ಎನ್ನುತ್ತಿದ್ದಾರೆ. ಗರಿ ರೋಗದ ಎಫೆಕ್ಟ್ನಿಂದಾಗಿ ಇಳುವರಿಯಲ್ಲಿ ಭಾರಿ ಇಳಿಕೆಯಾಗಿದ್ದು, ಇದರಿಂದಾಗಿ ತೆಂಗು ದುಬಾರಿಯಾಗಿದೆ. ಇದರಿಂದ ದರ ಕೇಳಿಯೇ ಸಾಮಾನ್ಯ ಜನರಿಗೆ ಶಾಕ್ ಆಗಿದೆ.

    ಬೆಲೆ ಏರಿಕೆಗೆ ಕಾರಣ:
    – ಕಳೆದ ಕೆಲವು ವರ್ಷಗಳಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರು
    – ಬಹುತೇಕರು ಅಡಿಕೆಯತ್ತ ಒಲವು ತೋರಿದ್ದು, ತೆಂಗು ಬೆಳೆಯುವ ಪ್ರದೇಶವನ್ನು ಅಡಿಕೆ ಆವರಿಸಿಕೊಂಡಿದೆ.
    – ಜೊತೆಗೆ ಗರಿ ರೋಗ ಕೂಡ ತೆಂಗಿಗೆ ಹೆಚ್ಚಾಗಿದೆ.
    – ಪರಿಣಾಮ ಇಳುವರಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.
    – ಈ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಠಿತವಾಗಿದೆ.
    – ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಎಷ್ಟೇ ದುಡ್ಡು ಕೊಟ್ರೂ `ಆ’ ಕೆಲಸ ಮಾಡಲ್ಲವೆಂದ ರಶ್ಮಿಕಾ!

  • ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!

    ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!

    ಲಕ್ನೋ: 1.16ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ರಸ್ತೆ ಉದ್ಘಾಟನೆ ಸಂದರ್ಭದಲ್ಲಿ ಒಡೆದ ತೆಂಗಿನ ಕಾಯಿಯಿಂದ  ರಸ್ತೆ ಬಿರುಕು ಬಿಟ್ಟ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    1.16ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 7ಕಿ.ಮೀ ಉದ್ದ ಹೊಸ ರಸ್ತೆಯ ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ, ಕಾಯಿ ಬದಲು ರಸ್ತೆಯೇ ಬಿರುಕು ಬಿಟ್ಟಿದೆ. ಈ ಘಟನೆಯಿಂದ ಮುಜುಗರಕ್ಕೀಡಾಗಿ ಕೆಂಡವಾಗಿರುವ ಆಡಳಿತಾರೂಢ ಬಿಜೆಪಿ ಶಾಸಕಿ ಸುಚಿ ಮೌಸಂ ಚೌದರಿ, ರಸ್ತೆಯ ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ಕಳಪೆ ಮಟ್ಟದ ಕಾಮಗಾರಿ ತನಿಖೆಗಾಗಿ ರಸ್ತೆ ಮಾದರಿ ಸಂಗ್ರಹಿಸಲು ಅಧಿಕಾರಿಗಳು ಬರುವವರೆಗೆ 3 ಗಂಟೆಗಳ ಕಾಲ ಸ್ಥಳದಲ್ಲೇ ಕಾದರು. ತಮ್ಮ ಕ್ಷೇತ್ರದಲ್ಲಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾಗಿರುವ 7.5 ಕಿಮೀ ರಸ್ತೆ ಕಾಮಗಾರಿ ಕೈಗೊಂಡಿದೆ. ಇದರ ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ ಕಾಯಿ ತುಂಡಾಗದೇ ರಸ್ತೆಯೇ ಹೋಳಾಗಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ಕಾಮಗಾರಿಯಲ್ಲಿ ದಕ್ಷತೆ ಇಲ್ಲದಿರುವುದು ಕಂಡುಬಂದಿದೆ ಎಂದು ಬಿಜನೋರ್ ಶಾಸಕಿ ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

  • ತೆಂಗಿನ ಕಾಯಿಗಳನ್ನು ತೂರಿ ಚಲಿಸುತ್ತಿದ್ದ ಬಸ್ ಗ್ಲಾಸ್ ಪುಡಿಗೈದ ಮಂಗಗಳು!

    ತೆಂಗಿನ ಕಾಯಿಗಳನ್ನು ತೂರಿ ಚಲಿಸುತ್ತಿದ್ದ ಬಸ್ ಗ್ಲಾಸ್ ಪುಡಿಗೈದ ಮಂಗಗಳು!

    ತಿರುವನಂತಪುರಂ: ಚಲಿಸುತ್ತಿದ್ದ ಬಸ್ ಮೇಲೆ ಕೋತಿಗಳು ತೆಂಗಿನಕಾಯಿ ಎಸೆದ ಪರಿಣಾಮ ಮುಂಭಾಗದ ಗಾಜು ಪುಡಿ ಪುಡಿಯಾಗಿದ್ದು, ಪ್ರಯಾಣಿಕರಿಬ್ಬರು ಗಾಯಗೊಂಡಿರುವ ಘಟನೆ ಕೇರಳದ ಇರಿತ್ತಿಯಲ್ಲಿ ನಡೆದಿದೆ.

    ಸೆಂಟ್ ಜೂಡ್ ಹೆಸರಿನ ಖಾಸಗಿ ಬಸ್ ಇರಿತ್ತಿ ಮತ್ತು ನೆರುಂಪೊಯಿಲ್ ನಡುವೆ ಸಂಚರಿಸುವಾಗ ಮಾರ್ಗ ಮಧ್ಯೆ ಮಂಗಗಳ ಗುಂಪು ದಾಳಿ ಮಾಡಿದೆ. ರಸ್ತೆ ಪಕ್ಕದ ತೆಂಗಿನಮರದ ಮೇಲೆ ಮಂಗಗಳು ಬೀಡು ಬಿಟ್ಟಿದ್ದ ವೇಳೆ ಬಸ್ ವೇಗವಾಗಿ ಚಲಿಸಿದೆ. ಇದರಿಂದ ಉದ್ರಿಕ್ತಗೊಂಡ ಮಂಗಗಳ ಗುಂಪು ಬಸ್ಸಿನತ್ತ ತೆಂಗಿನಕಾಯಿಗಳನ್ನು ತೂರಿದೆ. ಇದರಿಂದ ಬಸ್ಸಿನ ಗಾಜು ಪುಡಿಪುಡಿಯಾಗಿದೆ. ಇದನ್ನೂ ಓದಿ:  ಬಾಲಿವುಡ್ ನನ್ನ ಕಪ್ ಆಫ್ ಟೀ ಅಲ್ಲ: ಧೋನಿ

    ಈ ಘಟನೆಯಿಂದ ಬಸ್ ಸೇವೆ ಸುಮಾರು ಅರ್ಧ ದಿನ ಸ್ಥಗಿತಗೊಂಡಿತು. ಬಸ್ ಮಾಲೀಕ ಜಾನ್ಸನ್ ವಿಂಡ್‍ಶೀಲ್ಡ್ ಬದಲಿಸಲು 17 ಸಾವಿರ ರೂಪಾಯಿ ಆಗಿದೆ. ಇತ್ತ ಮಂಗಗಳು ಮಾಡಿದ ಕೆಲಸದ ಹೊಣೆಯನ್ನು ಹೊರಲು ಅರಣ್ಯ ಇಲಾಖೆ ನಿರಾಕರಿಸಿದೆ.

    ಮಂಗಗಳ ನಿರಂತರ ದಾಳಿಯಿಂದಾಗಿ ಈ ಪ್ರದೇಶದ ಮೂಲಕ ಕೇವಲ ಒಂದು ಬಸ್ ಸೇವೆಯನ್ನು ಮಾತ್ರ ನಡೆಸಲಾಗುತ್ತದೆ. ಸ್ಥಳೀಯರು, ಪ್ರಯಾಣಿಕರು ಮತ್ತು ಪಾದಾಚಾರಿಗಳು ಸಹ ದಿನೇ ದಿನೇ ಕೋತಿಗಳ ದಾಳಿಯನ್ನು ಎದುರಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಪರಿಹರಿಸಲು ನಿರ್ಣಾಯಕ ಹೆಜ್ಜೆ  ತೆಗೆದುಕೊಂಡಿಲ್ಲ. ಈಗಲಾದರೂ ಕ್ರಮ ತೆಗೆದುಕೊಳ್ಳಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನೂ ಓದಿ:  ಕಿಂಗ್ ಖಾನ್ ಮಗನ ಡ್ರಗ್ಸ್ ಪ್ರಕರಣದಲ್ಲಿ ಕನ್ನಡಿಗನ ವಕಾಲತ್ತು

  • ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ತಿರುವನಂತಪುರಂ: ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ ಸುದ್ದಿ ದೇಶದ್ಯಾಂತ ಚರ್ಚೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಬಂಧಿತ ಮೊದಲ ಆರೋಪಿಯನ್ನು 40 ವರ್ಷದ ವಿಲ್ಸನ್ ಎಂದು ಗುರುತಿಸಲಾಗಿದ್ದು, ಈತ ರಬ್ಬರ್ ವ್ಯಾಪಾರಿಯಾಗಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈತ ಸ್ಫೋಟಕವನ್ನು ಬೇರೆಯವರಿಗೆ ತಯಾರು ಮಾಡಿಕೊಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ನಾವು ಈಗಾಗಲೇ ಆನೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಮೊದಲ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಇನ್ನಿಬ್ಬರನ್ನು ಪತ್ತೆ ಹಚ್ಚುವ ಸನಿಹದಲ್ಲಿ ಇದ್ದೇವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿಲ್ಲ. ಆನೆ ಸ್ಫೋಟಕ ತುಂಬಿದ ತೆಂಗಿನಕಾಯಿಯನ್ನು ತಿಂದು ಸಾವನ್ನಪ್ಪಿದೆ ಎಂದು ತನಿಖೆ ವೇಳೆ ತಿಳಿದಿದೆ ಎಂದು ಹೇಳಿದ್ದಾರೆ.

    ಕೇರಳದಲ್ಲಿ ಬೆಳೆ ನಾಶ ಮಾಡಲು ಅಥವಾ ತಿನ್ನಲು ಬಂದ ಕಾಡುಹಂದಿಯಂತಹ ಪ್ರಾಣಿಗಳನ್ನು ಹೆದರಿಸಲು ಈ ರೀತಿಯ ಸ್ಫೋಟಕವನ್ನು ಸ್ಥಳೀಯವಾಗಿ ಬಳಸುತ್ತಾರೆ. ಸ್ಫೋಟಕವನ್ನು ಹಣ್ಣು ಮತ್ತು ಪ್ರಾಣಿಗಳ ಮಾಂಸದಲ್ಲಿ ಇಟ್ಟು ಅದನ್ನು ಸ್ಫೋಟಗೊಳಿಸಿ ಪ್ರಾಣಿಗಳನ್ನು ಓಡಿಸಲಾಗುತ್ತದೆ. ಆದರೆ ಇವರು ಆನೆಗೂ ಇದೇ ರೀತಿ ಮಾಡಿದ್ದಾರೆ. ಆದರೆ ಯಾರಿಗೂ ತೊಂದರೆ ಮಾಡದೇ ಆಹಾರವನ್ನು ಅರಸಿ ಬಂದ ಆನೆ ಇಲ್ಲಿ ದುರಂತವಾಗಿ ಸಾವನ್ನಪ್ಪಿದೆ.

    ಅಧಿಕಾರಿಗಳು ಹೇಳಿರುವ ಪ್ರಕಾರ, ಆನೆ ತೆಂಗಿನಕಾಯಿಯ ಒಂದು ಭಾಗವನ್ನು ಮುರಿದುಕೊಂಡು ಬಾಯಿಯೊಳಗೆ ಹಾಕಿಕೊಂಡಿದೆ. ಈ ವೇಳೆ ಅದು ಸ್ಫೋಟಗೊಂಡಿದ್ದು, ಆನೆಯ ಎಡಭಾಗದ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಇದರಿಂದ ಆನೆಗೆ ಆಹಾರ ಮತ್ತು ನೀರನ್ನು ಸೇವಿಸಲು ಆಗಿಲ್ಲ. ಆನೆ ಬಾಯಿಯ ನೋವಿನ ಜೊತೆಗೆ ಒಂದು ದಿನವೆಲ್ಲ ನರಳಿದೆ. ನಂತರ ಅದು ಪಾಲಕ್ಕಾಡ್‍ನ ವೆಲ್ಲಿಯಾರ್ ನದಿಯಲ್ಲಿ ಬಂದು ನಿಂತುಕೊಂಡು ಪ್ರಾಣಬಿಟ್ಟಿದೆ ಎಂದು ಹೇಳಿದ್ದಾರೆ.

    ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

  • ಬೃಹತ್ ಸಾಲಿಗ್ರಾಮ ಶಿಲಾ ಗಣಪನಿಗೆ 150 ಕೆಜಿ ಬೆಣ್ಣೆ, 3,500 ತೆಂಗಿನಕಾಯಿ ಅಲಂಕಾರ

    ಬೃಹತ್ ಸಾಲಿಗ್ರಾಮ ಶಿಲಾ ಗಣಪನಿಗೆ 150 ಕೆಜಿ ಬೆಣ್ಣೆ, 3,500 ತೆಂಗಿನಕಾಯಿ ಅಲಂಕಾರ

    ಕೋಲಾರ: ನಾಲ್ಕು ಯುಗಗಳಲ್ಲಿ ತನ್ನ ಪವಾಡಗಳಿಂದ ಪ್ರಸಿದ್ಧಿಯಾಗಿರುವ ಸಾಲಿಗ್ರಾಮ ಶಿಲಾ ಗಣಪ ಗ್ರಹಣ ಹಾಗೂ ಧನುರ್ಮಾಸ ಅಂಗವಾಗಿ ಇಂದು ಬೆಣ್ಣೆಯಲ್ಲಿ ಅದ್ದೂರಿಯಾಗಿ ಅಲಂಕಾರಗೊಂಡು ಭಕ್ತರ ಕಣ್ಮನ ತಣಿಸಿದ್ದಾನೆ. ಬರೋಬ್ಬರಿ 150 ಕೆಜಿ ಬೆಣ್ಣೆ ಹಾಗೂ 3,500 ತೆಂಗಿನಕಾಯಿಯಿಂದ ಗಣಪನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

    ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ದ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ 14 ಅಡಿ ಏಕಶಿಲಾ ಸಾಲಿಗ್ರಾಮ ಗಣಪನ ವಿಭಿನ್ನ ಅಲಂಕಾರವನ್ನು ಭಕ್ತ ಸಮೂಹ ಕಣ್ತುಂಬಿಕೊಂಡಿತು. ಬೆಣ್ಣೆ ಹಾಗೂ ಒಣಗಿದ ತೆಂಗಿನಕಾಯಿಯಿಂದ ಗರ್ಭಗುಡಿ ಕಂಗೊಳಿಸಿದ್ದು, ಎಲ್ಲರ ಗಮನ ಸೆಳೆಯಿತು. ಮುಜರಾಯಿ ಇಲಾಖೆಗೆ ಸೇರಿರೋ ಕುರುಡುಮಲೆ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತ ಹಾಗೂ ಗ್ರಹಣ ಅಂಗವಾಗಿ ಕೇತುಗ್ರಹಕ್ಕೆ ಅಧಿಪತಿಯಾದ ಗಣಪತಿಗೆ ಕಳೆದ 23 ವರ್ಷಗಳಿಂದ ಬೆಣ್ಣೆ ಅಲಂಕಾರ ಮಾಡಿಕೊಂಡ ಬರಲಾಗಿದೆ.

    ವಿಶ್ವದ ಏಕೈಕ 14 ಅಡಿಯ ಏಕಶಿಲಾ ಸಾಲಿಗ್ರಾಮ ಶಿಲೆಯ ಗಣೇಶನಿಗೆ ಬೆಣ್ಣೆಯ ಅಲಂಕಾರ ಮಾಡಿ, ದೇವರೆದುರು ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡರೆ ಅವರ ಕಷ್ಟಗಳು ಬೆಣ್ಣೆಯಂತೆ ಕರಗುತ್ತದೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಅದಕ್ಕಾಗಿಯೇ ಪ್ರತಿವರ್ಷ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲಾಗುತ್ತದೆ. 14 ಅಡಿಯ ಈ ಬೃಹತ್ ಸಾಲಿಗ್ರಾಮ ಶಿಲಾ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲು 150 ಕೆಜಿ ಬೆಣ್ಣೆ ಬಳಸಿಕೊಂಡು, 10 ಪುರೋಹಿತರು ಶ್ರಮ ವಹಿಸಿ ಅಲಂಕಾರ ಮಾಡಿದ್ದಾರೆ. ಈ ವರ್ಷ ಗಣೇಶನಿಗೆ ಬೆಣ್ಣೆ ಅಲಂಕಾರದ ಜೊತೆಗೆ ವಿಶೇಷವಾಗಿ ದೇವಾಲಯದ ಗರ್ಭಗುಡಿಗೆ 3,500 ಒಣಗಿದ ತೆಂಗಿನ ಕಾಯಿಯಿಂದ ಅಲಂಕಾರ ಮಾಡಲಾಗಿದೆ.

    ಕುರುಡುಮಲೆ ದೇವಸ್ಥಾನಕ್ಕೆ ದೊಡ್ಡ ಇತಿಹಾಸವಿದೆ. ತ್ರಿಪುರಾಸುರ ಎಂಬ ರಾಕ್ಷಸನ ಸಂಹಾರಕ್ಕಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡಿ ಈ 14 ಅಡಿಯ ಏಕಶಿಲಾ ಸಾಲಿಗ್ರಾಮ ಶಿಲಾ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಅದಕ್ಕಾಗಿಯೇ ಈ ಸ್ಥಳಕ್ಕೆ ಕುರುಡುಮಲೆ ಎಂದು ಹೆಸರು ಬಂತು ಅನ್ನೋದು ಪ್ರತೀತಿ. ಈ ಗಣಪ ನಾಲ್ಕು ಯುಗಗಳಲ್ಲಿ ಅಂದರೆ ಕೃತಯಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದಲ್ಲೂ ಪೂಜೆ ಮಾಡಲಾಗುತ್ತಿದೆ.

    ಹೀಗಾಗಿ ಈ ಶಕ್ತಿಶಾಲಿ ಗಣಪನಲ್ಲಿಗೆ ಈಗಲೂ ಲಕ್ಷಾಂತರ ಜನರು ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರು, ಅಧಿಕಾರಿಗಳು, ವ್ಯಾಪಾರಸ್ಥರು ಯಾರೇ ಆಗಲೀ, ಏನೇ ಕೆಲಸ ಆರಂಭಿಸುವ ಮೊದಲು ಈ ಗಣೇಶನಿಗೆ ಪೂಜೆ ಸಲ್ಲಿಸೋದು ಪ್ರತೀತಿ. ಈ ವಿಶೇಷ ದಿನದಂದು ಬೆಣ್ಣೆ ಅಲಂಕಾರದಲ್ಲಿ ಗಣೇಶನನ್ನು ನೋಡಿದ ಭಕ್ತರಂತೂ ಭಕ್ತಿ ಸಾಗರದಲ್ಲಿ ತೇಲಿ ಹೋಗಿದ್ದಾರೆ.

  • ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಚಿಕ್ಕಮಗಳೂರು: ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯಲ್ಲಿ ನಡೆದಿದೆ.

    ನವ್ಯಶ್ರೀ (28) ಸಾವನ್ನಪ್ಪಿದ್ದ ಶಿಕ್ಷಕಿ. ಮೂಲತಃ ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಯಾಗಿದ್ದಾರೆ. ಮದುವೆಯಾಗಿ 5 ವರ್ಷವಾಗಿರೋ ನವ್ಯಶ್ರೀಗೆ 10 ತಿಂಗಳ ಮಗು ಕೂಡ ಇದೆ. ಎಂದಿನಂತೆ ನವ್ಯ ಚಿಕ್ಕಮಗಳೂರು ನಗರದಲ್ಲಿರುವ ಸಾಲುಮರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಸ್ ಬಂದಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ್ದ ತೆಂಗಿನ ಕಾಯಿಯ ಚೂರನ್ನು ತಿಂದಿದ್ದಾರೆ. ನಂತರ ಅದೇನಾಯ್ತೋ ಏನೋ ಗೊತ್ತಿಲ್ಲ. ಅವರ ಅನ್ನನಾಳಕ್ಕೆ ಕಾಯಿಯ ಚೂರು ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

    ನಗರದಲ್ಲಿರೋ ಸಂಜೀವಿನಿ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರೋ ನವ್ಯಶ್ರೀಗೆ ದೇವರು ಎಂದರೆ ಅಪಾರ ಪ್ರೀತಿ-ಗೌರವ. ಶನಿವಾರ ಬೆಳಗ್ಗೆ ಶನಿ ದೇವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಶಾಲೆಗೆ ಬಂದಿದ್ದರು. ಒಂದು ಪಿರಿಯಡ್ ಫ್ರೀ ಇದ್ದ ಕಾರಣ ಶಾಲೆಯ ಪಕ್ಕದಲ್ಲಿರೋ ಸಾಲುಮರದಮ್ಮ ದೇವಸ್ಥಾನಕ್ಕೆ ಸಹಶಿಕ್ಷಕಿಯರ ಜೊತೆ ಹೋಗಿ ಬಂದಿದ್ದಾರೆ. ದೇವಸ್ಥಾನದಿಂದ ಬಂದು ಪೂಜೆ ಮಾಡಿಸಿದ್ದ ತೆಂಗಿನಕಾಯಿ ಚೂರನ್ನ ಎಲ್ಲರಿಗೂ ಹಂಚಿ ತಾನು ಸೇವಿಸಿದ್ದಾರೆ. ಇದನ್ನೂ ಓದಿ: ಇದು ನಿಜಕ್ಕೂ ಆತಂಕ..ಅಚ್ಚರಿ ನ್ಯೂಸ್- ಸೇಬು ತಿಂದ 11 ವರ್ಷದ ಬಾಲಕ ಸಾವು

    ತೆಂಗಿನಕಾಯಿಯ ಚೂರು ತಿನ್ನುತ್ತಿದ್ದಂತೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಶಿಕ್ಷಕರು ಅವರಿಗೆ ನೀರು ಕುಡಿಸಿ, ಎದೆ ಹೊತ್ತುತ್ತಿದಂತೆ ನವ್ಯಶ್ರೀಗೆ ಅನ್ನನಾಳದಲ್ಲಿ ಸಿಲುಕಿದ್ದ ತೆಂಗಿನಕಾಯಿ ಚೂರು ಬಾಯಿಂದ ಹೊರಬಂದಿದೆ. ಆದರೆ ಉಸಿರಿನ ತೊಂದರೆಯಿಂದ ತೀವ್ರವಾಗಿ ಬಳಲುತ್ತಿದ್ದ ನವ್ಯಶ್ರೀಯನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನವ್ಯಶ್ರೀ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಒಟ್ಟಿನಲ್ಲಿ ತೆಂಗಿನಕಾಯಿ ಚೂರಿನಿಂದ ನವ್ಯಶ್ರೀ ಪ್ರಾಣ ಕಳೆದುಕೊಂಡಿರುವುದು ಮಾತ್ರ ದುರಂತ. ಇದೀಗ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಪುಟ್ಟ ಮಗುವನ್ನ ಬಿಟ್ಟು ಅಗಲಿದ ತಾಯಿಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಮಂಡ್ಯ: ತೆಂಗಿನಕಾಯಿ ನಾರು ಹೊತ್ತೊಯ್ತಿದ್ದ ತಮಿಳುನಾಡು ಲಾರಿಯಲ್ಲಿ ಬೆಂಕಿ- ಗ್ರಾಮಸ್ಥರ ನೆರವಿನಿಂದ ತಪ್ಪಿದ ದುರಂತ

    ಮಂಡ್ಯ: ತೆಂಗಿನಕಾಯಿ ನಾರು ಹೊತ್ತೊಯ್ತಿದ್ದ ತಮಿಳುನಾಡು ಲಾರಿಯಲ್ಲಿ ಬೆಂಕಿ- ಗ್ರಾಮಸ್ಥರ ನೆರವಿನಿಂದ ತಪ್ಪಿದ ದುರಂತ

    ಮಂಡ್ಯ: ತೆಂಗಿನಕಾಯಿ ಸಿಪ್ಪೆಯ ನಾರನ್ನು ತುಂಬಿಕೊಂಡು ಹೋಗುತ್ತಿದ್ದ ತಮಿಳುನಾಡು ಮೂಲದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳೇಗಾಲ ಗ್ರಾಮದ ಬಳಿ ನಡೆದಿದೆ.

    ಟಿಎನ್34, ಎಸ್ 3818 ನಂಬರಿನ ಲಾರಿಯಲ್ಲಿ ತಮಿಳುನಾಡಿಗೆ ತೆಂಗಿನಕಾಯಿ ಸಿಪ್ಪೆಯ ನಾರನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ತೆಂಗಿನ ನಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಬೆಂಕಿಯ ಬಗ್ಗೆ ಚಾಲಕನ ಗಮನಕ್ಕೆ ತಂದಿದ್ದಾರೆ.

    ತಕ್ಷಣ ಲಾರಿ ನಿಲ್ಲಿಸಿದ ಚಾಲಕ ಸ್ಥಳೀಯರ ಸಹಾಯದಿಂದ ಅಗ್ನಿ ಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

    ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ವಿಡಿಯೋ: ತೆಂಗಿನಕಾಯಿಯಿಂದ ವ್ಯಕ್ತಿಯ ಬ್ಲಡ್‍ಗ್ರೂಪ್ ಪತ್ತೆ ಮಾಡ್ತಾರಂತೆ ಇವರು!

    ವಿಡಿಯೋ: ತೆಂಗಿನಕಾಯಿಯಿಂದ ವ್ಯಕ್ತಿಯ ಬ್ಲಡ್‍ಗ್ರೂಪ್ ಪತ್ತೆ ಮಾಡ್ತಾರಂತೆ ಇವರು!

    ರಾಯ್ಪುರ್: ತೆಂಗಿನಕಾಯಿಯ ಸಹಾಯದಿಂದ ವ್ಯಕ್ತಿಯ ಬ್ಲಡ್ ಗ್ರೂಪ್ ಯಾವುದು ಎಂದು ಪತ್ತೆ ಮಾಡುವುದಾಗಿ ಛತ್ತೀಸ್‍ಗಢದ ರಾಯ್ಪುರ ಮೂಲದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

    ರಾಜ್ಯ ಕೃಷಿ ಇಲಾಖೆಯ ನೌಕರರಾಗಿರುವ ಬಿ.ಡಿ. ಗುಹಾ, ತೆಂಗಿನಕಾಯಿಯನ್ನು ತನ್ನ ಕೈ ಮೇಲೆ ಇಟ್ಟುಕೊಂಡು ವ್ಯಕ್ತಿಯ ತಲೆ ಮೇಲೆ ಹಿಡಿದು ಅವರ ರಕ್ತದ ಗುಂಪು ಯಾವುದು ಎಂಬುದನ್ನ ನಿಖರವಾಗಿ ಹೇಳ್ತಾರಂತೆ. ಈ ರೀತಿ ತೆಂಗಿನಕಾಯಿಯ ಸಹಾಯದಿಂದಲೇ ಸಾಕಷ್ಟು ಜನರ ಬ್ಲಡ್ ಗ್ರೂಪ್ ಯಾವುದು ಎಂಬುದನ್ನ ಪತ್ತೆ ಮಾಡಿದ್ದಾರಂತೆ. ಗುಹಾ ಅವರು ಹೇಳಿದ್ದು ಸರಿಯೇ ಎಂದು ತಿಳಿದುಕೊಳ್ಳಲು ಗ್ರಾಹಕರು ಲ್ಯಾಬ್‍ನಲ್ಲೂ ಪರೀಕ್ಷೆ ಮಾಡಿಸಿದ್ದಾರೆ.

    ಪರೀಕ್ಷೆಗೆ ಒಳಪಡುವ ವ್ಯಕ್ತಿ ನಿಂತ ಸ್ಥಳದ ಕೆಳಗೆ ನೀರು ಇದ್ದಾಗ ಮಾತ್ರ ತನ್ನ ಊಹೆ ತಪ್ಪಾಗುತ್ತದೆ ಎಂದು ಗುಹಾ ಹೇಳಿದ್ದಾರೆ. ಈ ರೀತಿ ಬ್ಲಡ್‍ಗ್ರೂಪ್ ಪರೀಕ್ಷೆ ಮಾಡೋದಕ್ಕೆ ತುಂಬಾ ಕಡಿಮೆ ಸಮಯ ಬೇಕಾಗೋದ್ರಿಂದ ಗುಹಾ ಅವರ ಗ್ರಾಹಕರೂ ಕೂಡ ಇದನ್ನ ಮೆಚ್ಚಿದ್ದಾರೆ.

    ಆದ್ರೆ ಪ್ಯಾಥೋಲೋಜಿಸ್ಟ್ ದರ್ಶನ್ ಜೈನ್ ಎಂಬವರು ಈ ವಿಧಾನವನ್ನ ತಿರಸ್ಕರಿಸಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ರಕ್ತ ನೀಡುವ ಮತ್ತು ಪಡೆಯುವ ಇಬ್ಬರಿಗೂ ಇದರಿಂದ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

    ಗುಹಾ ಅವರು 2005ರಿಂದ ಈ ವಿಧಾನದ ಬಗ್ಗೆ ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ತೆಂಗಿನಕಾಯಿ ಯಾವ ದಿಕ್ಕನಲ್ಲಿ ಅಲುಗಾಡುತ್ತದೆ ಎಂಬುದನ್ನ ಆಧರಿಸಿ ಈವರೆಗೆ 5 ರೀತಿಯ ಬ್ಲಡ್‍ಗ್ರೂಪ್‍ಗಳನ್ನ ಕಂಡುಹಿಡಿಯುವಲ್ಲಿ ಸಮರ್ಥನಾಗಿದ್ದೇನೆ ಎಂದು ಹೇಳಿದ್ದಾರೆ.

    https://www.youtube.com/watch?v=IUiD0W3eLGo