Tag: ತೃತೀಯ ಲಿಂಗಿ

  • ಕಾಣೆಯಾಗಿದ್ದ ಬಾಲಕ ಮಂಗಳಮುಖಿ ವೇಷದಲ್ಲಿ ಪತ್ತೆ ಪ್ರಕರಣ- ಐವರ ಬಂಧನ

    ಕಾಣೆಯಾಗಿದ್ದ ಬಾಲಕ ಮಂಗಳಮುಖಿ ವೇಷದಲ್ಲಿ ಪತ್ತೆ ಪ್ರಕರಣ- ಐವರ ಬಂಧನ

    ಮಂಡ್ಯ: ಜಿಲ್ಲಯ ಕೆ.ಆರ್.ಪೇಟೆ ತಾಲೂಕಿನ ಅಪ್ರಾಪ್ತನನ್ನು ಪುಸಲಾಯಿಸಿ ತೃತೀಯ ಲಿಂಗಿಯಾಗಿ ಪರಿವರ್ತಿಸಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೆ.ಆರ್.ಪೇಟೆ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.

    ಅಪ್ರಾಪ್ತನನ್ನು ತೃತೀಯ ಲಿಂಗಿಯಾಗಿ ಪರಿವರ್ತಿಸಿದ ಆರೋಪದ ಮೇಲೆ ಮಂಗಳಮುಖಿಯರಾದ ಜಯಶ್ರೀ, ಮಂದಾರ, ಮಹೇಶ್ವರಿ ಮತ್ತು ಆತನ ಜೊತೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪ ಮೇಲೆ ಅರವಿಂದ್ ಹಾಗೂ ಅಜಯ್ ಎಂಬವರನ್ನು ಬಂಧಿಸಲಾಗಿದೆ.

    ಏನಿದು ಪ್ರಕರಣ?
    ತಾಲೂಕಿನ ಗ್ರಾಮವೊಂದರಿಂದ ಫೆ. 4ರಂದು ಅಪ್ರಾಪ್ತ ನಾಪತ್ತೆಯಾಗಿದ್ದ. ಈತನನ್ನು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ, ಅಕ್ಟೋಬರ್ ನಲ್ಲಿ ಇದ್ದಕ್ಕಿದ್ದಂತೆ ಗ್ರಾಮಕ್ಕೆ ಬಂದ ಆತ ತೃತೀಯ ಲಿಂಗಿಯಾಗಿ ಪರಿವರ್ತನೆಯಾಗಿದ್ದ. ಇದನ್ನು ಕಂಡು ಕುಟುಂಬದವರು ಗಾಬರಿಗೊಂಡಿದ್ದರು. ಈ ಬಳಿಕ ಅಪ್ರಾಪ್ತನ ಅಜ್ಜಿ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೊಮ್ಮಗನ ಸ್ಥಿತಿಗೆ ಕಾರಣರಾದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಬಳಿಕ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಹೊಸ ವಿಷಯಗಳು ತಿಳಿದುಬಂದಿತು. ಪ್ರಕರಣದಲ್ಲಿ ಹಲವು ಜನರ ಕೃತ್ಯ ಇರುವುದು ಬೆಳಕಿಗೆ ಬಂದಿದೆ.

    10ನೇ ತರಗತಿ ವಿದ್ಯಾಭ್ಯಾಸ ನಿಲ್ಲಿಸಿದ ಅಪ್ರಾಪ್ತ ಬೆಂಗಳೂರಿನ ಹೊಟೇಲ್‍ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಆಗಾಗ ಅಜ್ಜಿ ಹಾಗೂ ಅಪ್ಪನ ಜೊತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದನು. ಈ ವೇಳೆ ಈತನಿಗೆ ಮಂಗಳಮುಖಿಯರ ಪರಿಚಯವಾಗಿದೆ. ಬಡ ಹುಡುಗನ ಕಷ್ಟವನ್ನು ತಿಳಿದ ಅವರು, ಹಣ ಕೊಟ್ಟು ಪುಸಲಾಯಿಸಿದ್ದರು. ಕೆಲ ದಿನದ ನಂತರ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದು, ಬಳಿಕ ಸೀರೆ ಉಡಿಸಿ, ಭಿಕ್ಷಾಟನೆ ಮಾಡಿಸಿದ್ದಾರೆ. ದಿನ ಕಳೆದಂತೆ ಆತನು ಅವರಂತೆಯೇ ಆಡಲು ಪ್ರಾರಂಭಿಸಿದ್ದಾನೆ. ಇದನ್ನೇ ದುರುಪಯೋಗಪಡಿಸಿಕೊಂಡ ಮಂಗಳಮುಖಿಯರು ಜೂ. 29ರಂದು ಬೆಂಗಳೂರಿನ ನಾಗರಬಾವಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

    700ಕ್ಕೂ ಹೆಚ್ಚು ಚಿಕಿತ್ಸೆ:
    ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಸ್ತ್ರಚಿಕಿತ್ಸೆ ಮಾಡಿದ ಖಾಸಗಿ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರನ್ನು ಪತ್ತೆ ಮಾಡಿದ್ದಾರೆ. 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಪ್ರಕಾರ ಅಪ್ರಾಪ್ತರನ್ನು ಬಲವಂತವಾಗಿ ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಅಪರಾಧ. ಆದರೆ, ಕಾನೂನು ಬಾಹಿರವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ ಪೊಲೀಸರು ವೈದ್ಯರೊಬ್ಬರನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ 700ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ಪ್ರಜ್ಞಾಹೀನರಾದ ವೈದ್ಯರನ್ನು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯ ಚೇತರಿಸಿಕೊಂಡ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆಂದು ತಿಳಿದುಬಂದಿದೆ. ಈತ ಅಪ್ರಾಪ್ತನಾದರೂ 19 ವರ್ಷ ವಯಸ್ಸಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ವಕೀಲರೊಬ್ಬರು ನೋಟರಿ ನೀಡಿದ್ದಾರೆ. ಆದರೆ ಶಾಲೆಯಲ್ಲಿ ತನಿಖೆ ನಡೆಸಿದ ವೇಳೆ ಆತನಿಗೆ 16 ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಣೆಯಾಗಿದ್ದ ಬಾಲಕ ಮಂಗಳಮುಖಿ ವೇಷದಲ್ಲಿ ಪತ್ತೆ

    ಕಾಣೆಯಾಗಿದ್ದ ಬಾಲಕ ಮಂಗಳಮುಖಿ ವೇಷದಲ್ಲಿ ಪತ್ತೆ

    -ಬಾಲಕ ಸಿಕ್ಕಿದ್ದು ಹೇಗೆ?

    ಮಂಡ್ಯ: ಸಂಚಾರಿ ವಿಜಯ್ ಅಭಿನಯದ ‘ನಾನು ಅವನಲ್ಲ ಅವಳು’ ಸಿನಿಮಿ ಶೈಲಿಯಲ್ಲಿಯೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಬೆಂಗಳೂರಿನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ನಾಪತ್ತೆಯಾಗಿ, ಮಂಗಳಮುಖಿ ಆಗಿದ್ದಾನೆ.

    ಆಗಿದ್ದೇನು?: ಕೆಆರ್ ಪೇಟೆ ತಾಲೂಕಿನ ಹಳ್ಳಿಯೊಂದರ ಬಾಲಕ ಬೆಂಗಳೂರಿನ ಚಿಕ್ಕಮ್ಮನ ಮನೆಯಲ್ಲಿದ್ದು 10ನೇ ತರಗತಿ ಓದುತ್ತಿದ್ದ. ಆದರೆ ಶಾಲೆಗೆ ರಜೆ ಇದ್ದಿದ್ದರಿಂದ 8 ತಿಂಗಳ ಹಿಂದೆ ಸ್ವಗ್ರಾಮಕ್ಕೆ ಮರಳಿದ್ದ. ಪೋಷಕರು, ಸಂಬಂಧಿಕರು, ಬಾಲ್ಯದ ಸ್ನೇಹಿತರೊಂದಿಗೆ ಕಾಲ ಕಳೆದಿದ್ದ. ರಜೆ ಮುಗಿಸಿ, ಬೆಂಗಳೂರಿಗೆ ಹೋಗುದಾಗಿ ಹೇಳಿ ಹೋಗಿದ್ದ ಬಾಲಕ ನಾಪತ್ತೆಯಾಗಿದ್ದ.

    ಬಾಲಕ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಪೋಷಕರು, ಕೆಆರ್ ಪೇಟೆ ಪಟ್ಟಣದ ಠಾಣೆಗೆ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಾಲಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಸುಮಾರು ದಿನಗಳು ಕಳೆದರೂ ಬಾಲಕ ಸಿಗದಿದ್ದರಿಂದ ಪೋಷಕರು ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದರು.

    ಪೋಷಕರಿಗೆ ಬಾಲಕ ಸಿಕ್ಕಿದ್ದು ಹೇಗೆ?:
    ಬಾಲಕನ ಗ್ರಾಮದ ಮಂಜು ಎಂಬವರು ಎಳೆನೀರು ಮಾರಾಟಕ್ಕೆ ಇಂದು ಕೆಆರ್ ಪೇಟೆಯ ಸಂತೆಗೆ ಬಂದಿದ್ದರು. ಈ ವೇಳೆ ಬಾಲಕ ಮಂಗಳಮುಖಿಯರ ಜೊತೆಗೆ ಅಂಗಡಿಗಳಲ್ಲಿ ಕಲೆಕ್ಷನ್ ಮಾಡುತ್ತಿರುವುದನ್ನು ಮಂಜು ನೋಡಿದ್ದಾರೆ. ಬಾಲಕನನ್ನು ಹಿಡಿಯಲು ಗ್ರಾಮಸ್ಥರು ಸೇರುತ್ತಿದ್ದಂತೆ, ಬಾಲಕ ಹಾಗೂ ಮಂಗಳಮುಖಿಯರು ಆಟೋದಲ್ಲಿ ಹತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರೊಬ್ಬರು ತಮ್ಮ ಬೈಕ್ ಏರಿ, ಆಟೋವನ್ನು ಹಿಂಬಾಲಿಸಿ ಹೊಸ ಕಿಕ್ಕೇರಿ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಕೆಆರ್ ಪೇಟೆ ನಗರ ಠಾಣೆಗೆ ಬಾಲಕ ಹಾಗೂ ಮಂಗಳಮುಖಿಯರನ್ನು ಕರೆತಂದಿದ್ದಾರೆ.

    ಬಾಲಕನನ್ನು ತೃತೀಯ ಲಿಂಗಿಯಾಗಿ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ವಸೂಲಿ ಮಾಡಲು ಬಾಲಕನನ್ನು ಕೆಲ ಮಂಗಳಮುಖಿಯರು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ವ್ಯಾಪಕ ತನಿಖೆ ನಡೆಸಿ, ಸತ್ಯ ಬಯಲಿಗೆಳೆಬೇಕು. ಮುಂದಿನ ದಿನಗಳಲ್ಲಿ ಅಪ್ರಾಪ್ತ ಬಾಲಕರು ಇಂತಹ ಕೃತ್ಯಕ್ಕೆ ಬಲಿಯಾಗದಂತೆ ತಡೆಯಬೇಕು ಎಂದು ಬಾಲಕನ ಪೋಷಕರ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತೃತೀಯ ಲಿಂಗಿಯಾಗಿ ಬದಲಾದ ಬಾಲಕನೊಂದಿಗೆ ಮೂವರು ತೃತೀಯ ಲಿಂಗಿಗಳು ಪೊಲೀಸರ ವಶದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೊಲೀಸರು!

    ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೊಲೀಸರು!

    ತಿರುವನಂತಪುರಂ: ತೃತೀಯಲಿಂಗಿಗಳನ್ನು ಪೊಲೀಸರು ವಿವಸ್ತ್ರಗೊಳಿಸಿ ಅವರ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಕೇರಳದ ಅಲೆಪ್ಪಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕುಡಿದು ಮದ್ಯದ ನಶೆಯಲ್ಲಿ ತೃತೀಯಲಿಂಗಿಗಳು ಗಲಾಟೆ ಮಾಡುತ್ತಿದ್ದರು. ಅವರ ಗಲಾಟೆಯಿಂದ ನೊಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಹೀಗಾಗಿ ಪೆಟ್ರೋಲಿಂಗ್ ತಂಡ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಪೊಲೀಸ್ ಠಾಣೆಯಲ್ಲೂ ತೃತೀಯ ಲಿಂಗಿಗಳು ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಇವರು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ಭಯದಿಂದ ಅಲ್ಲಿದ್ದ ಮಹಿಳಾ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಫೋಟೋ ಹಾಗೂ ವಿಡಿಯೋ ತೆಗೆದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂದು ಪೊಲೀಸ್ ವರಿಷ್ಠಾಧಿಕಾರಿ ಎ. ಸುರೇಂದ್ರ, ಗುರುವಾರ ಈ ಘಟನೆ ನಡೆದಿದ್ದು, ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯಾರೂ ಹಾಕಿದ್ದಾರೆಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಎ. ಸುರೇಂದ್ರ ಹೇಳಿದ್ದಾರೆ.

    ಪೆಟ್ರೋಲಿಂಗ್ ಪೊಲೀಸ್ ತಂಡ ತೃತೀಯ ಲಿಂಗದವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ನಂತರ ಅಲ್ಲಿ ಅವರನ್ನು ವಿವಸ್ತ್ರಗೊಳಿಸಿ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು ಎಂದು ತೃತೀಯ ಲಿಂಗಿಗಳು ತಿಳಿಸಿದ್ದಾರೆ.

  • ಅವಳಾಗಿ ಬದಲಾದ ಅವನು, ಅವನಾಗಿ ಬದಲಾದ ಅವಳು- ಈಗ ಅವನಿಗೂ ಅವಳಿಗೂ ಮದ್ವೆ

    ಅವಳಾಗಿ ಬದಲಾದ ಅವನು, ಅವನಾಗಿ ಬದಲಾದ ಅವಳು- ಈಗ ಅವನಿಗೂ ಅವಳಿಗೂ ಮದ್ವೆ

    ಮುಂಬೈ: ಆಕೆ ಪುರುಷನ ದೇಹದಲ್ಲಿದ್ದ ಮಹಿಳೆ, ಆತ ಮಹಿಳೆಯ ದೇಹದಲ್ಲಿದ್ದ ಪುರುಷ. ಮೂರು ವರ್ಷಗಳ ಹಿಂದೆ ಲಿಂಗ ಪರಿವರ್ತನೆಗೆಂದು ಮುಂಬೈಗೆ ಬಂದಾಗ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರ ಪರಿಚಯ ಕೊನೆಗೆ ಪ್ರೇಮವಾಗಿ ತಿರುಗಿತ್ತು. ಅವನಾದ ಅವಳು ಹಾಗೂ ಅವಳಾದ ಅವನು ಮುಂದಿನ ತಿಂಗಳು ಮದುವೆಯಾಗ್ತಿದ್ದಾರೆ.

    ಚಿಕ್ಕಂದಿನಲ್ಲಿ ಬಿಂದು ಆಗಿದ್ದ 46 ವರ್ಷದ ಆರವ್ ಅಪ್ಪುಕುಟ್ಟನ್ ಮುಂಬೈನಲ್ಲಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆಗೆ ಹೋದಾಗ ತನ್ನ ಬಾಳ ಸಂಗಾತಿಯನ್ನ ಭೇಟಿಯಾದ್ರು. ಇನ್ನು ಚಂದು ಆಗಿದ್ದ 22 ವರ್ಷದ ಸುಕನ್ಯಾ ಕೃಷ್ಣನ್ ಮೊದಲನೇ ಅಪಾಯಿಂಟ್‍ಮೆಂಟ್‍ಗಾಗಿ ಆಸ್ಪತ್ರೆಗೆ ಬಂದಿದ್ರು.

    ಸಂಬಂಧಿಯೊಬ್ಬರಿಂದ ನನಗೆ ಕರೆ ಬಂದಿತ್ತು. ನನ್ನ ಶಸ್ತ್ರಚಿಕಿತ್ಸೆ ಹಾಗೂ ಆರೋಗ್ಯದ ಬಗ್ಗೆ ಅವರೊಂದಿಗೆ ಮಲೆಯಾಳಂನಲ್ಲಿ ಮಾತನಾಡ್ತಿದ್ದೆ. ಅವರೂ ಕೂಡ ಫೋನ್‍ನಲ್ಲಿ ಮತ್ತೊಬ್ಬರೊಂದಿಗೆ ಮಲಯಾಳಂನಲ್ಲೇ ಮಾತನಾಡ್ತಿದ್ರು. ಕಾಲ್ ಕಟ್ ಮಾಡಿದ ನಂತರ ಆರವ್ ನನ್ನ ಬಳಿ ಬಂದು ನಾನು ಕೇರಳದವಳಾ ಎಂದು ಕೇಳಿದ್ರು. ಅನಂತರ ನಮ್ಮ ಮಾತು ಮುಂದುವರೆಯಿತು ಅಂತ ಸುಕನ್ಯಾ ನೆನಪಿಸಿಕೊಳ್ತಾರೆ.

    ಆರವ್ ಹಾಗೂ ಸುಕನ್ಯಾ ವೈದ್ಯರಿಗಾಗಿ 3 ಗಂಟೆಗಳ ಕಾಲ ಕಾಯುತ್ತಿದ್ದ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಸಿಕ್ಕಿತ್ತು. ಕೊನೆಗೆ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಊರಿಗೆ ಹೋದ ನಂತರವೂ ಮೆಸೇಜ್ ಮಾಡುತ್ತಿದ್ರು.

    ಅವರು ಕೇರಳಗೆ ಹೋದ್ರು. ನಾನು ಬೆಂಗಳೂರಿಗೆ ಬಂದೆ. ಉದ್ಯೋಗಕ್ಕಾಗಿ ನಾನು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದೆ. ಬಳಿಕ ಆರವ್ ನನಗೆ ಕರೆ ಮಾಡಿದ್ರು. ನಮ್ಮ ಚಿಕಿತ್ಸೆ ಹಾಗೂ ಸರ್ಜರಿ ಬಗ್ಗೆ ಚರ್ಚಿಸಿದೆವು. ಮೊದಲಿಗೆ ವಾರಕ್ಕೆ ಒಂದು ಬಾರಿ ಮಾತನಾಡುತ್ತಿದ್ದೆವು. ಅನಂತರ ವಾರಕ್ಕೆ ಎರಡು ಬಾರಿ, ಆಮೇಲೆ ಪ್ರತಿದಿನ ಫೋನ್‍ನಲ್ಲಿ ಮಾತನಾಡತೊಡಗಿದೆವು ಎಂದು ಸುಕನ್ಯಾ ಹೇಳಿದ್ದಾರೆ.

    ಒಂದೇ ರಾಜ್ಯದವರು ಹಾಗೂ ಇಬ್ಬರಿಗೂ ಒಂದೇ ರೀತಿಯ ವೈದ್ಯಕೀಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಇಬ್ಬರ ನಡುವೆ ಬಾಂಧವ್ಯ ಮೂಡಿತ್ತು. ಆದರೂ ಇವರನ್ನ ಹತ್ತಿರವಾಗಿಸಿದ್ದೆಂದರೆ ಇಬ್ಬರಿಗೂ ತಮ್ಮಂತೆಯೇ ಇರುವವರಿಗೆ ಸಹಾಯ ಮಾಡಬೇಕೆಂಬ ಇಚ್ಛೆ ಇತ್ತು. ಆರವ್ ಸುಕನ್ಯಾ ಇಬ್ಬರೂ ತೃತೀಯ ಲಿಂಗಿ ಮಕ್ಕಳ ಪೋಷಕರಿಗೆ ಕೌನ್ಸೆಲಿಂಗ್ ಮಾಡುತ್ತಿದ್ರು. ಕೆಲವು ತಿಂಗಳ ಬಳಿಕ ಇಬ್ಬರೂ ಮತ್ತೊಮ್ಮೆ ಭೇಟಿಯಾಗಲು ನಿರ್ಧರಿಸಿ ಒಂದೇ ದಿನ ಮುಂಬೈ ಆಸ್ಪತ್ರೆಯಲ್ಲಿ ಅಪಾಯಿಂಟ್‍ಮೆಂಟ್ ಪಡೆದಿದ್ರು.

    ನಮ್ಮಿಬ್ಬರಿಗೂ ಯಾವಾಗ ಪ್ರೇಮವಾಯ್ತು ಎಂದು ಗೊತ್ತಿಲ್ಲ. ಒಂದು ಸಲ ನಾವಿಬ್ಬರೂ ಕೈ ಹಿಡಿದುಕೊಂಡೆವು. ಅಲ್ಲಿಂದಲೇ ಆರಂಭವಾಯ್ತು. ಈಗ ನಾವು ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ. ನಮ್ಮಿಬ್ಬರ ಕುಟುಂಬಸ್ಥರೂ ಕೂಡ ಖುಷಿಯಾಗಿದ್ದಾರೆ. ನಾವು ಮಗುವೊಂದನ್ನ ದತ್ತು ಪಡೆಯಲು ನಿರ್ಧರಿಸಿದ್ದೇವೆ. ಯಾಕಂದ್ರೆ ಸರ್ಜರಿ ಬಳಿಕ ನಮಗೆ ಮಕ್ಕಳಾಗಲ್ಲ ಎಂಬುದು ಗೊತ್ತು ಅಂತ ಆರವ್ ಹೇಳಿದ್ದಾರೆ.