Tag: ತೃತೀಯ ಲಿಂಗಿ

  • Exclusive: ಮುಂದಿನ ತಿಂಗಳಿಂದ ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಹಣ – ಅರ್ಜಿ ಸಲ್ಲಿಕೆ ಯಾವಾಗಾ, ಹೇಗೆ?

    Exclusive: ಮುಂದಿನ ತಿಂಗಳಿಂದ ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಹಣ – ಅರ್ಜಿ ಸಲ್ಲಿಕೆ ಯಾವಾಗಾ, ಹೇಗೆ?

    ಬೆಂಗಳೂರು: ಮುಂದಿನ ತಿಂಗಳಿನಿಂದಲೇ ರಾಜ್ಯದ ತೃತೀಯ ಲಿಂಗಿಗಳಿಗೆ (Third Gender) ಗೃಹಲಕ್ಷ್ಮೀ ಹಣ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಸಹ ಸಿದ್ಧವಾಗುತ್ತಿದ್ದು, ಜಿಲ್ಲಾಧಿಕಾರಿಗಳು ನೀಡಿರುವ ಗುರುತಿನ ಚೀಟಿ ನೀಡಿ ಗೃಹಲಕ್ಷ್ಮಿ (Gruhalakshmi Scheme) ಹಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಏನೆಲ್ಲಾ ದಾಖಲೆಗಳ ಅಗತ್ಯವಿದೆ? ಅರ್ಜಿ ಸಲಿಸುವುದು ಹೇಗೆ ಅನ್ನೋ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ರಾಜ್ಯ ಸರ್ಕಾರದ (Karnataka Govt) ಮಹತ್ವಕಾಂಕ್ಷೆ ಯೋಜನೆ ಗೃಹಲಕ್ಷ್ಮಿಯಿಂದ ಬಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,000 ರೂ. ಸಂದಾಯವಾಗುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಗೃಹಲಕ್ಷಿ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ತೃತೀಯ ಲಿಂಗಿಗಳಿಗೂ ಕೂಡ ಗೃಹಲಕ್ಷ್ಮಿ ಹಣ ನೀಡೋದಕ್ಕೆ ಮುಂದಾಗಿದೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ವಿದೇಶಿ ಗಣ್ಯರು, ಪೌರಕಾರ್ಮಿಕರು- ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

    ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತೃತೀಯ ಲಿಂಗಿಗಳಿಗೆ ಹಣನೀಡಲು ಆದೇಶ ಆಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನ ಅಭಿವೃದ್ಧಿಪಡಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜಿಲ್ಲಾಧಿಕಾರಿಗಳಿಂದ ತೃತೀಯ ಲಿಂಗಿ ಅಂತ ಪಡೆದ ಗುರುತಿನ ಚೀಟಿ, ಇದ್ದರೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ತಿಂಗಳ ಒಳಗಡೆ ಅರ್ಜಿ ಸಲ್ಲಿಕೆಯಾದ್ರೆ ಮುಂದಿನ ತಿಂಗಳಿನಿಂದಲೇ ತೃತೀಯ ಲಿಂಗಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ.

    ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದು, ಅವರ ಅಭಿವೃದ್ಧಿಗೆ ಅಥವಾ ಜೀವನೋಪಾಯಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಲಿದೆ. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿ0ದೆ. ಈಗಾಗಲೇ 1.20 ಕೋಟಿಗೂ ಅಧಿಕ ಮಂದಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಬಹುತೇಕರು ಹಣ ಪಡೆಯುತ್ತಿದ್ದಾರೆ. ಈ ಪೈಕಿ ಒಂದೂವರೆ ಲಕ್ಷ ಮಂದಿ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿದಾರರಾಗಿದ್ದು, ಅವರಿಗೆ ಹಣ ಸಂದಾಯ ಸ್ಥಗಿತ ಮಾಡಲಾಗಿದೆ. ಜೊತೆಗೆ ಮೇ ತಿಂಗಳವರೆಗೂ ಹಣ ಸಂದಾಯ ಆಗಿದ್ದು ಜೂನ್ ತಿಂಗಳ ಹಾಕಬೇಕಿದೆ.

    ಒಟ್ಟಾರೆ ಗೃಹಲಕ್ಷ್ಮಿ ಯೋಜನೆಗೆ ತೃತೀಯ ಲಿಂಗಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಿ ಎರಡು ಸಾವಿರ ಹಣ ಪಡೆಯೋ ವ್ಯವಸ್ಥೆಯನ್ನ ಸರ್ಕಾರ ಮಾಡ್ತಾ ಇದೆ. ಇದನ್ನೂ ಓದಿ: NCP ನಾಯಕ ಪ್ರಫುಲ್‌ ಪಟೇಲ್‌ಗೆ ಬಿಗ್‌ ರಿಲೀಫ್‌ – 180 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಇಡಿ ಆದೇಶ ರದ್ದು!

  • ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್‌

    ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್‌

    – ಪುರುಷರ ಬಟ್ಟೆ ಧರಿಸಿ ಬಂದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಕಂಡಕ್ಟರ್ ಪರದಾಟ 

    ಯಾದಗಿರಿ: ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು ಬಸ್ ಕಂಡಕ್ಟರ್ (Conductor) ಪರದಾಡಿರುವ ಘಟನೆ ಯಾದಗಿರಿ (Yadgiri) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್‌ನಲ್ಲಿ (Bus) ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಕ್ಷ್ಮೀ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.

    ಆಧಾರ್ ಕಾರ್ಡ್‌ನಲ್ಲಿ ಲಕ್ಷ್ಮೀ ಎಂಬ ಹೆಸರಿದ್ರೂ ಲಿಂಗದ ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿತ್ತು. ಅದರ ಜೊತೆಗೆ ಲಕ್ಷ್ಮೀ ಪುರುಷರ ಬಟ್ಟೆ ಹಾಕಿದ್ದರಿಂದ ಕಂಡಕ್ಟರ್ ಕಂಪ್ಲೀಟ್ ಕನ್ಪ್ಯೂಸ್ ಆಗಿದ್ದರು. ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ ಸಂಚರಿಸ್ತಿವೆಯಾ ನಿರುಪಯುಕ್ತ ಬಸ್‌ಗಳು? – ಸಾರಿಗೆ ಅಧಿಕಾರಿಯಿಂದಲೇ ಹೊರಬಿತ್ತು ಸತ್ಯ

    ಹೆಸರು ಲಕ್ಷ್ಮೀ, ಲಿಂಗ ಪುರುಷ ಇದೇನಿದು ಎಂದು ಪ್ರಶ್ನಿಸಿದ ಕಂಡಕ್ಟರ್‌ಗೆ ಸಿಕ್ಕ ಉತ್ತರ ತೃತೀಯ ಲಿಂಗಿ ಎನ್ನೋದು. ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳಲ್ಲ. ಯಾವಾಗಲೂ ಪುರುಷರ ಬಟ್ಟೆನೇ ಧರಿಸುತ್ತೇನೆ ಎಂದು ಹೇಳಿದ್ದು, ಕೊನೆಗೂ ಮನವರಿಕೆ ಮಾಡಿಕೊಂಡ ಕಂಡಕ್ಟರ್ ಶಕ್ತಿ ಯೋಜನೆಯಡಿ (Shakti scheme) ಫ್ರೀ ಟಿಕೆಟ್ ಕೊಟ್ಟು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮಿರ್ಚಿ ಬಜ್ಜಿ ತಿನ್ನೋದಕ್ಕೆ ಅಂಬುಲೆನ್ಸ್‌ ಸೈರನ್‌ ದುರುಪಯೋಗ – ಎಮರ್ಜೆನ್ಸಿ ಅಂತ ಟ್ರಾಫಿಕ್‌ ಕ್ಲಿಯರ್‌ ಮಾಡಿದ್ದ ಪೊಲೀಸರೇ ಶಾಕ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೃತೀಯ ಲಿಂಗಿಗಳಿಗೆ ಕಾನೂನು ಹಕ್ಕು ನೀಡಲಾಗಿದೆ ಆದ್ರೆ ಇನ್ನೂ ಸ್ಥಾನ ನೀಡಿಲ್ಲ: ದೇಶದ ಮೊದಲ ಟ್ರಾನ್ಸ್‌ಜೆಂಡರ್ ಜಡ್ಜ್

    ತೃತೀಯ ಲಿಂಗಿಗಳಿಗೆ ಕಾನೂನು ಹಕ್ಕು ನೀಡಲಾಗಿದೆ ಆದ್ರೆ ಇನ್ನೂ ಸ್ಥಾನ ನೀಡಿಲ್ಲ: ದೇಶದ ಮೊದಲ ಟ್ರಾನ್ಸ್‌ಜೆಂಡರ್ ಜಡ್ಜ್

    ಭೋಪಾಲ್: ಸಮಾಜದಲ್ಲಿ ತೃತೀಯಲಿಂಗಿಗಳಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡಲಾಗಿದೆ. ಆದರೆ ಇನ್ನೂ ಅವರು ಏನನ್ನಾದರೂ ಸಾಧಿಸಲು ಸ್ಥಳ ಪಡೆಯಲು ಸಾಧ್ಯವಾಗಿಲ್ಲ ಎಂದು ಮೊದಲ ತೃತೀಯ ಲಿಂಗಿ ಸಮುದಾಯದ ನ್ಯಾಯಾಧೀಶರಾದ (Transgender Judge) ಜೋಯಿತಾ ಮೊಂಡಲ್ (Joyita Mondal) ತಿಳಿಸಿದರು.

    ಇಂದೋರ್‌ಗೆ ಭೇಟಿ ನೀಡಿದ ಅವರು, ತೃತೀಯ ಲಿಂಗಿಗಳು ಸಮಾನತೆಯನ್ನು ಪಡೆಯಲು ಸರ್ಕಾರವು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಇದರಿಂದಾಗಿ ಸಮಾಜದ ಇತರ ಜನರಿಗೂ ನಮ್ಮ ಬಗ್ಗೆ ಸೂಕ್ಷ್ಮತೆ ಬರುತ್ತದೆ ಎಂದ ಅವರು, ಸುಪ್ರೀಂಕೋರ್ಟ್ ತೃತೀಯ ಲಿಂಗಿಗಳಿಗೆ ಸಮಾನ ಹಕ್ಕು ಸಿಗುತ್ತದೆ ಎಂದು ಹೇಳಿದೆ. ಆದರೆ ಇದಕ್ಕಾಗಿ ಮಂಡಳಿ ರಚನೆಯಾಗಬೇಕು ಎಂದು ಒತ್ತಾಯಿಸಿದರು.

    ಕಳೆದ 8 ವರ್ಷಗಳಲ್ಲಿ ತೃತೀಯಲಿಂಗಿಗಳಿಗಾಗಿ ಸರ್ಕಾರ ಏನನ್ನೂ ಮಾಡಿಲ್ಲ. ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ನಮಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: 2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ಗಡ್ಕರಿ

    ತೃತೀಯಲಿಂಗಿ ಮತ್ತು ಅವರ ವಾರಸುದಾರನ ವಿವಾಹದ ಕುರಿತು ಪ್ರತಿಕ್ರಿಯಿಸಿದ ಅವರು, ವಯಸ್ಸಾದಂತೆ, ತೃತೀಯಲಿಂಗಿಗಳ ಬೆಂಬಲಕ್ಕಾಗಿ ಯಾರಾದರೂ ಇರುವುದು ಅವಶ್ಯಕ. ಇದಕ್ಕಾಗಿ ಅವರ ಉತ್ತರಾಧಿಕಾರಿಗಾಗಿ ಮಕ್ಕಳನ್ನು ದತ್ತು ಪಡೆಯುವುದು ಅವಶ್ಯಕ. ಆದ್ದರಿಂದ ಮನಸ್ಸು ಒತ್ತಡದಲ್ಲಿದ್ದಾಗ ಮಗು ನಿಮ್ಮೊಂದಿಗಿದ್ದರೆ, ಎಲ್ಲಾ ಒತ್ತಡವು ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಚೀನಾ ಯುದ್ಧ ತಯಾರಿ ನಡೆಸುತ್ತಿದೆ – ನಮ್ಮ ಕೇಂದ್ರ ಸರ್ಕಾರ ನಿದ್ರಿಸುತ್ತಿದೆ: ರಾಹುಲ್ ಗಾಂಧಿ

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮಂಗಳಮುಖಿ ಪಾಸ್ – ಛಲ ಬಿಡದೆ ಸಾಧಿಸಿದ ಪೂಜಾ

    ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮಂಗಳಮುಖಿ ಪಾಸ್ – ಛಲ ಬಿಡದೆ ಸಾಧಿಸಿದ ಪೂಜಾ

    ರಾಯಚೂರು: ಮಂಗಳಮುಖಿಯರು (Third Gender) ಎಂದರೆ ದುಡಿದು ತಿನ್ನುವವರಲ್ಲ, ಭಿಕ್ಷಾಟನೆ ಮಾಡಿಕೊಂಡೇ ಬದುಕುತ್ತಾರೆ ಎನ್ನುವ ತಪ್ಪು ತಿಳುವಳಿಕೆಯಿದೆ. ಆದರೆ ರಾಯಚೂರಿನ (Raichur) ಮಂಗಳಮುಖಿ ಪೂಜಾ ಅದನ್ನು ಸುಳ್ಳು ಮಾಡಿದ್ದಾರೆ. ಹಿಡಿದ ಹಠ ಬಿಡದೆ ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಸರ್ಕಾರಿ ನೌಕರಿಯನ್ನೇ ಗಿಟ್ಟಿಸಿಕೊಂಡು ಮಾದರಿಯಾಗಿದ್ದಾರೆ.

    ಮಾನ್ವಿ ತಾಲೂಕಿನ ನೀರಮಾನ್ವಿಯ ಅಶ್ವಥಾಮ ಬೆಳೆಯುತ್ತಾ ಪೂಜಾ ಆಗಿ ಬದಲಾಗಿದ್ದಾರೆ. ಜೀವನದುದ್ದಕ್ಕೂ ಎಷ್ಟೋ ಕಷ್ಟಗಳ ನಡುವೆ ಪದವಿ ಪೂರೈಸಿ, ಮಾರ್ಚ್ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ (Teacher Recruitment Exam) ಪೂಜಾ ಪಾಸ್ ಆಗಿ ಸರ್ಕಾರಿ ನೌಕರಿಯನ್ನು ಪಡೆದಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು, ಗೌರವದಿಂದ ಬದುಕಬೇಕು ಎಂದು ನಿರ್ಧರಿಸಿದ ಪೂಜಾ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು 6 ರಿಂದ 8 ನೇ ತರಗತಿ ಸಮಾಜ ವಿಜ್ಞಾನ ವಿಷಯದ ಟೀಚರ್ (Teacher) ಆಗಿ ಆಯ್ಕೆಯಾಗಿದ್ದಾರೆ. ಶೇಕಡಾ 1% ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಈ ಬಾರಿ 3 ಜನ ತೃತೀಯ ಲಿಂಗ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕೊನೆಯ ದಿನ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ

    1 ರಿಂದ 10 ನೇ ತರಗತಿಯವರೆಗೆ ನೀರಮಾನ್ವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು, ಮಾನ್ವಿ ಪಟ್ಟಣದಲ್ಲಿ ಪಿಯುಸಿ, ಪದವಿಯನ್ನು ಪೂರ್ಣಗೊಳಿಸಿದರು. ರಾಯಚೂರಿನಲ್ಲಿ ಬಿಎಡ್ ಪೂರ್ಣಗೊಳಿಸಿದ ಅಶ್ವಥಾಮ ಓದು ಪೂರ್ಣಗೊಳ್ಳುತ್ತಲೇ ಸಂಪೂರ್ಣವಾಗಿ ಪೂಜಾ ಆಗಿ ಬದಲಾಗಿದ್ದಾರೆ. 14 ನೇ ವಯಸ್ಸಿನ ಬಳಿಕ ತನ್ನ ದೈಹಿಕ ಬದಲಾವಣೆಗಳ ಕಾರಣಕ್ಕೆ 4 ವರ್ಷಗಳ ಕಾಲ ಮನೆ ಬಿಟ್ಟು ಹೋಗಿದ್ದ ಇವರು, ಬಳಿಕ ಮನೆಯವರು ಪ್ರೀತಿಯಿಂದ ಸ್ವಾಗತಿಸಿ ಓದಿಗೆ ಸಹಕರಿಸಿದ್ದಕ್ಕೆ ಮರಳಿ ಬಂದು ಓದು ಮುಂದುವರೆಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪೂಜಾ ಸಾಧನೆಗೆ ಕುಟುಂಬದ ಸದಸ್ಯರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಸಾಧಿಸುವ ಛಲ ಇದ್ದರೆ ಎಂತಹ ಅವಮಾನ, ಲಿಂಗಬೇಧವನ್ನೂ ಮೆಟ್ಟಿ ನಿಲ್ಲಬಹುದು ಎನ್ನುವುದನ್ನು ಪೂಜಾ ಸಾಧಿಸಿ ತೋರಿಸಿದ್ದಾರೆ. ಅವಮಾನ ಮಾಡಿದವರ ಮುಂದೆ ತಲೆ ಎತ್ತಿ ಓಡಾಡಬಹುದು ಅನ್ನೋದನ್ನು ನಿರೂಪಿಸಿದ್ದಾರೆ. ಮಂಗಳಮುಖಿಯರಿಗೆ ಮಾತ್ರವಲ್ಲದೆ ಅಸಹಾಯಕರು ಅಂದುಕೊಳ್ಳುವವರಿಗೆಲ್ಲಾ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಆತಂಕದ ನಡುವೆ ಮಂಗ್ಳೂರಿನ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ತಂದೆಯೊಂದಿಗಿನ ಸಂಬಂಧ ಕಡಿದುಕೊಳ್ಳಲು ಸಿದ್ಧವಾದ ಮಸ್ಕ್ ತೃತೀಯ ಲಿಂಗಿ ಮಗಳು

    ತಂದೆಯೊಂದಿಗಿನ ಸಂಬಂಧ ಕಡಿದುಕೊಳ್ಳಲು ಸಿದ್ಧವಾದ ಮಸ್ಕ್ ತೃತೀಯ ಲಿಂಗಿ ಮಗಳು

    ವಾಷಿಂಗ್ಟನ್: ಖ್ಯಾತ ಉದ್ಯಮಿ ಬಿಲಿಯನೇರ್ ಎಲೋನ್ ಮಸ್ಕ್ ಅವರ ತೃತೀಯ ಲಿಂಗಿ ಮಗಳು ತಮ್ಮ ತಂದೆಯೊಂದಿಗೆ ಸಂಬಂಧ ಕಡಿದುಕೊಳ್ಳಲು ಸಿದ್ಧರಾಗಿದ್ದಾರೆ.

    ಆನ್‍ಲೈನ್‍ನಲ್ಲಿ ಲಭ್ಯವಿರುವ ನ್ಯಾಯಾಲಯದ ದಾಖಲೆಗಳ ಪ್ರಕಾರ, ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ 18 ವರ್ಷ ವಯಸ್ಸಿನ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತನ್ನ ಲಿಂಗ ಗುರುತಿಸುವಿಕೆಯನ್ನು ಪುರುಷನಿಂದ ಮಹಿಳೆಗೆ ಬದಲಾಯಿಕೊಂಡಿದ್ದಾರೆ. ಈ ಹಿನ್ನೆಲೆ ಆಕೆ ತನ್ನ ಮೂಲ ಹೆಸರು, ಹುಟ್ಟಿದ್ದ ಮೂಲ ಮತ್ತು ತಂದೆ ಹೆಸರನ್ನು ಬಿಟ್ಟು, ತನ್ನ ಹೊಸ ಹೆಸರನ್ನು ನೋಂದಾಯಿಸಲು ನ್ಯಾಯಾಲಯವನ್ನು ಕೇಳಿಕೊಂಡಿದ್ದಾಳೆ.

    Tesla CEO Elon Musk`s transgender daughter seeks name change to sever ties with father | International Business News | Zee News
    ಈ ಕುರಿತು ಮಾತನಾಡಿದ ಮಸ್ಕ್ ಮಗಳು, ನಾನು ಇನ್ನೂ ಮುಂದೆ ಯಾವ ಸಂಬಂಧದ ಜೊತೆಗೂ ಇರಲು ಇಷ್ಟಪಡುವುದಿಲ್ಲ. ನನ್ನ ಜೈವಿಕ ತಂದೆಯೊಂದಿಗೆ ಯಾವುದೇ ರೀತಿಯಲ್ಲಿ, ಆಕಾರ ಅಥವಾ ರೂಪದಲ್ಲಿ ಸಂಬಂಧ ಹೊಂದಲು ಬಯಸುವುದಿಲ್ಲ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ: ಆರೋಪಿ ಮೇಲೆ ಫೈರಿಂಗ್ 

    ಈಕೆ ತನ್ನ ಹೊಸ ಲಿಂಗ ಗುರುತನ್ನು ಪ್ರತಿಬಿಂಬಿಸುವ ಹೆಸರು, ಇದರ ಜೊತೆಗೆ ಹೊಸ ಜನನ ಪ್ರಮಾಣಪತ್ರ ಎರಡಕ್ಕೂ ಅರ್ಜಿಯನ್ನು ಏಪ್ರಿಲ್‍ನಲ್ಲಿ ಸಾಂಟಾ ಮೋನಿಕಾದಲ್ಲಿರುವ ಲಾಸ್ ಏಂಜಲೀಸ್ ಕೌಂಟಿ ಸುಪೀರಿಯರ್ ಕೋರ್ಟ್‍ಗೆ ಸಲ್ಲಿಸಲಾಗಿತ್ತು. ಆದರೆ ಇದು ಇತ್ತೀಚೆಗೆ ಬೆಳಕಿಗೆ ಬಂದಿದೆ.

    2008ರಲ್ಲಿ ಆಕೆಯ ತಾಯಿ ಜಸ್ಟಿನ್ ವಿಲ್ಸನ್ ಅವರು ಮಸ್ಕ್ ಜೊತೆ ವಿಚ್ಛೇದನ ಪಡೆದುಕೊಂಡಿದ್ದರು.

    Live Tv

  • ಸ್ಥಳೀಯ ಚುನಾವಣೆಗೆ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿದ ಬಿಜೆಪಿ

    ಸ್ಥಳೀಯ ಚುನಾವಣೆಗೆ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿದ ಬಿಜೆಪಿ

    ಚೆನ್ನೈ: ಸ್ಥಳೀಯ ಚುನಾವಣೆಗೆ ತಮಿಳುನಾಡಿನಲ್ಲಿ ಬಿಜೆಪಿ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿದೆ.

    ತಮಿಳುನಾಡಿನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ಬಿಜೆಪಿ ಮತ್ತು ಎಐಎಡಿಎಂಕೆ  ನಿರ್ಧರಿಸಿದೆ. ಇದೀಗ 2 ಪಕ್ಷಗಳೂ ಮತ್ತೋಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಲವು ವಾರ್ಡ್‍ಗಳಲ್ಲಿ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿದೆ.

    ರಾಜ್ಯದ 12,838 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 1,374 ನಗರಪಾಲಿಕೆ ವಾರ್ಡ್‍ಗಳು, 3,843 ಪುರಸಭೆ ವಾರ್ಡ್‍ಗಳು, 7,621 ಪಟ್ಟಣ ಪಂಚಾಯತ್ ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಸೌಥ್ ಚೆನ್ನೈನಿಂದ ಎಐಎಡಿಎಂಕೆ ಅಭ್ಯರ್ಥಿ ಎನ್,ಜಯದೇವಿ ನಾಮಿನೇಷನ್ ಸಲ್ಲಿಸಿದ್ದಾರೆ. ತಿರುವಿಕಾ ನಗರದ ವಾರ್ಡ್ ನಂಬರ್ 75ರ ಬಿಜೆಪಿ ಅಭ್ಯರ್ಥಿಯಾಗಿ ರಾಜಮ್ಮ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಜಮ್ಮ ಮಾತನಾಡಿ, ನನ್ನ ಸಮುದಾಯಕ್ಕೆ ನಾನು ಒಳ್ಳೆಯ ಮಾದರಿಯಾಗುತ್ತೇನೆ. ನಾನು ಆಯ್ಕೇಯಾದರೆ ಕುಡಿಯುವ ನೀರು, ಚರಂಡಿ ಸಮಸ್ಯೆ ಸೇರಿದಂತೆ ಇಂತಹ ಹಲವುಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ

    ಎಐಎಡಿಎಂಕೆ ಅಭ್ಯರ್ಥಿ ತೃತೀಯಲಿಂಗಿ ಜಯದೇವಿ, ನಾನು ಆಯ್ಕೆಯಾದರೆ ನನ್ನ ವಾರ್ಡ್‍ನ್ನು ಇತರರಿಗೆ ಮಾದರಿಯಾಗುವ ರೀತಿ ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದ್ದಾರೆ.

  • ಹುಡುಗನಾಗಿ ಬದಲಾದ ಖ್ಯಾತ ನಟಿ – ಸಿಕ್ಸ್ ಪ್ಯಾಕ್ ಫೋಟೋ ಶೇರ್

    ಹುಡುಗನಾಗಿ ಬದಲಾದ ಖ್ಯಾತ ನಟಿ – ಸಿಕ್ಸ್ ಪ್ಯಾಕ್ ಫೋಟೋ ಶೇರ್

    – ಸರ್ಜರಿ ಬಳಿಕ ಮರುಜನ್ಮ ಸಿಕ್ಕಂತಾಯ್ತು

    ಲಂಡನ್: ಹಾಲಿವುಡ್ ಖ್ಯಾತ ನಟಿ ಎಲೆನ್ ಶಸ್ತ್ರಚಿಕಿತ್ಸೆ ಬಳಿಕ ಹುಡುಗನಾಗಿ ಬದಲಾಗಿದ್ದಾರೆ. ಸದ್ಯ ಹುಡುಗನಾಗಿ ಸಿಕ್ಸ್ ಮಾಡಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಆಗಿದೆ.

    ಡಿಸೆಂಬರ್ 2020ರಲ್ಲಿ ಎಲಟ್ ಪೇಜ್ ಹೆಸರಿನಲ್ಲಿ ಹೊಸ ಇನ್‍ಸ್ಟಾಗ್ರಾಂ ಖಾತೆ ತೆರೆದಿರುವ ಎಲೆನ್ ಹುಡುಗನಾಗಿರುವ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

    ನನ್ನ ಬಾಲ್ಯ ಎಲ್ಲ ಹುಡುಗಿಯರಂತೆಯೇ ಕಳೆಯಿತು. ಕಾಲೇಜಿನ ಸಮಯದಲ್ಲಿ ದೇಹದ ಬೆಳವಣಿಗೆಯಲ್ಲಿ ಸಹ ಅಸಹಜ ಬದಲಾವಣೆಗಳು ಕಂಡು ಬಂದವು. ಹಾಗಾಗಿ ಕಾಲೇಜಿನ ವೇಳೆ ಟಾಮ್ ಬಾಯ್ ಲುಕ್ ನಲ್ಲಿರಲು ಇಷ್ಟವಾಗುತ್ತಿತ್ತು. ಇತ್ತ ಹಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನ್ಮಾಗಳು ನೀಡಿದ್ರೂ ನನ್ನೊಳಗಿನ ಬದಲಾವಣೆ ನನ್ನನ್ನು ಪ್ರಶ್ನೆ ಮಾಡಿತ್ತು. ನನ್ನ ಖಾಸಗಿ ಬದುಕು ಚಿಂತೆಯನ್ನು ತರಿಸಿತ್ತು ಎಂದು ಸಂದರ್ಶನದಲ್ಲಿ ಎಲೆನ್ ಹೇಳಿಕೊಂಡಿದ್ದರು.

    2007ರಲ್ಲಿ ಜೂನೋ ಸಿನಿಮಾ ಪ್ರಚಾರ ವೇಳೆ ಆಸ್ಕರ್ ರೆಡ್ ಕಾರ್ಪೆಟ್ ನಲ್ಲಿ ಡಿಸೈನರ್ ಡ್ರೆಸ್ ಧರಿಸಿ ವಾಕ್ ಮಾಡಿದ್ದೆ. ಆದ್ರೆ ಆ ಫೋಟೋಗಳನ್ನ ನೋಡಲು ಇಷ್ಟವಾಗಲಿಲ್ಲ. ಅದೇ ರೀತಿ ಇಂಸೆಪ್ಷನ್ ಚಿತ್ರದ ವೇಳೆಯೂ ಧರಿಸಿದ ಕೆಲ ಬಟ್ಟೆಗಳಿಂದ ಪ್ಯಾನಿಕ್ ಆಗಿದೆ ಎಂದು ಎಲೆನ್ ಹೇಳಿದ್ದಾರೆ.

    ಮಹಿಳೆಯರ ಡ್ರೆಸ್ ಗಳು ನನಗೆ ಯಾವತ್ತೂ ಕಂಫರ್ಟ್ ಆಗಿರಲಿಲ್ಲ. ಸರ್ಜರಿ ಬಳಿಕ ನನಗೆ ಮರುಜನ್ಮ ಸಿಕ್ಕಂತೆ ಆಯ್ತು. ಹುಡುಗಿಯಿಂದ ಹುಡುಗನಾಗಿ ಬದಲಾದಾಗ ಮಾನಸಿಕವಾಗಿ ನನ್ನೊಳಗೆ ಸಂಘರ್ಷ ಉಂಟಾಗಿತ್ತು. ಆ ಸಮಯದಲ್ಲಿಯೇ ತೃತೀಯ ಲಿಂಗಿಗಳ ಕಷ್ಟ ಅರಿತುಕೊಂಡೆ.

    2014ರಲ್ಲಿ ಮೊದಲ ಬಾರಿಗೆ ಎಲೆನ್ ತಾವು ಲೆಸ್ಬಿಯನ್ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. 2018ರಲ್ಲಿ ಡ್ಯಾನ್ಸರ್ ಎಮ್ಮಾ ಪೋರ್ಟರ್ ಜೊತೆ ಮದುವೆ ಸಹ ಆಗಿದ್ದು, ಸದ್ಯ ವಿಚ್ಛೇಧನ ಪಡೆಯಲು ಮುಂದಾಗಿದ್ದಾರೆ. ಡಿಸೆಂಬರ್ 2020ರಲ್ಲಿ ಎಲಟ್ ಪೇಜ್ ಹೆಸರಿನಲ್ಲಿ ಇನ್‍ಸ್ಟಾಗ್ರಾಂ ಖಾತೆ ತರೆದು ನಾನು ತೃತೀಯ ಲಿಂಗಿ ಹುಡುಗನಾಗಿ ಬದಲಾಗಿರುವ ಬಗ್ಗೆ ತಿಳಿಸಿದ್ದರು.

  • ಗಂಡು ಮಗುವಿಗೆ ತಾಯಿಯಾದ ತೃತೀಯ ಲಿಂಗಿ

    ಗಂಡು ಮಗುವಿಗೆ ತಾಯಿಯಾದ ತೃತೀಯ ಲಿಂಗಿ

    ಬೆಂಗಳೂರು: ಮಂಗಳ ಮುಖಿಯರು ಎಂದರೆ ಸಾಕು ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ಟ್ರೈನಿನಲ್ಲಿ ಹಣಕ್ಕಾಗಿ ಕಾಡಿಸೋರು ಎಂದು ಹೆಚ್ಚು ಜನರು ಮೂಗು ಮುರಿಯುತ್ತಾರೆ. ಅದೆಷ್ಟೋ ಜನ ತೃತೀಯ ಲಿಂಗಿಗಳಾಗಿ ಹುಟ್ಟಿದ್ದೇ ಶಾಪ ಎಂದುಕೊಳ್ಳುತ್ತಾರೆ. ಇಂಥವರ ನಡುವೆ ಮಂಗಳಮುಖಿಯೊಬ್ಬರು ತಾಯಿಯಾಗಿದ್ದಾರೆ.

    ಮುದ್ದು ಪುಟಾಣಿ ಮಂಗಳಮುಖಿಯಾದ ಡಾ. ಅಕ್ಕೈ ಪದ್ಮಶಾಲಿ ಹಾಗೂ ವಾಸು ದಂಪತಿ ಬಾಳಲ್ಲಿ ಹೊಸ ಬೆಳಕು ತಂದಿದೆ. ಈ ಅಕ್ಕೈ ತೃತೀಯ ಲಿಂಗಿಯಾಗಿದ್ದು, ಕಾನೂನಿನ ಪ್ರಕಾರ ಮಗುವೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ ತಾಯ್ತನದ ಸಿಹಿ ಅಪ್ಪುಗೆಯನ್ನು ಅನುಭವಿಸುತ್ತಿದ್ದಾರೆ.

    ಮೊದಲು ಗಂಡಾಗಿ ಹುಟ್ಟಿ, ನಂತರ ಅಕ್ಕೈ ಅವಳಾಗಿ ಬದಲಾದರು. ತದನಂತ್ರ ವಾಸು ಎಂಬವರನ್ನು ಮದುವೆಯಾದರು. ಆದರೆ ಈ ದಂಪತಿ ಮಗುವನ್ನು ಹೊಂದಬೇಕು, ತಮ್ಮ ವಂಶೋದ್ಧಾರಕನನ್ನು ಹೊಂದಬೇಕೆಂಬ ಮಹಾದಾಸೆಯಿತ್ತು. ಹೀಗಾಗಿ ಅಕ್ಕೈ ಅನಾಥಾಶ್ರಮಗಳಲ್ಲಿ ಮಗು ದತ್ತು ತೆಗೆದುಕೊಳ್ಳಲು ಹೋದಾಗ, ಕೊಂಕು ಮಾತುಗಳನ್ನು ಎದುರಿಸಿದ್ದರು.

    ಕೊಂಕು ಮಾತುಗಳಿಗೆ ಹಾಗೂ ಯಾವುದಕ್ಕೂ ಎದೆಗುಂದದೆ ಕುಟುಂಬದ ಪರಿಚಿತರೊಬ್ಬರಿಂದ ಮಗು ದತ್ತು ಪಡೆದು, ಸಮಾಜಮುಖಿ ದಾರಿಯತ್ತ ಹೆಜ್ಜೆ ಹಾಕಿದ್ದಾರೆ. ಸಮಾಜಕ್ಕೆ ಈ ಮಗುವನ್ನು ಸತ್ಪ್ರಜೆಯಾಗಿ ರೂಪಿಸುತ್ತೇವೆ ಎಂದು ಹೇಳಿದ್ದಾರೆ.

  • ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತಿರುವನಂತಪುರಂ: ತೃತೀಯ ಲಿಂಗಿ ಎಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಕೇರಳ ಸರ್ಕಾರ ಕಮರ್ಷಿಯಲ್ ಪೈಲಟ್ ಮಾಡಲು ಮುಂದಾಗಿದೆ.

    ಕೇರಳದ 20 ವರ್ಷದ ತೃತೀಯ ಲಿಂಗಿ ಆಡಂ ಹ್ಯಾರಿಯನ್ನು ಆತನ ಪೋಷಕರು ಮನೆಯಿಂದ ಹೊರ ಹಾಕಿದ್ದಾರೆ. ಆಡಂ ಈಗ ದೇಶದ ಮೊದಲ ತೃತೀಯ ಲಿಂಗಿ ಕಮರ್ಷಿಯಲ್ ಪೈಲಟ್ ಆಗಲಿದ್ದಾರೆ. ಅಲ್ಲದೆ ಕೇರಳ ಸರ್ಕಾರ ಆಡಂ ಟ್ರೈನಿಂಗ್ ಖರ್ಚು ನೋಡಿಕೊಳ್ಳುವುದಾಗಿ ತಿಳಿಸಿದೆ.

    ಆಡಂ ಬಳಿ ಈಗಾಗಲೇ ಪ್ರೈವೆಟ್ ಪೈಲಟ್ ಲೈಸೆನ್ಸ್ ಇದೆ. ಆದರೆ ಪ್ರಯಾಣಿಕರ ವಿಮಾನವನ್ನು ಚಲಾಯಿಸಲು ಕಮರ್ಷಿಯಲ್ ಲೈಸೆನ್ಸ್ ಬೇಕಾಗಿದೆ. ಕುಟುಂಬಸ್ಥರು ಮನೆಯಿಂದ ಹೊರಹಾಕಿದ ಕಾರಣ ಆಡಂ ಬಳಿ ತರಬೇತಿಯ ಶುಲ್ಕ ಪಾವತಿಸಲು ಹಣವಿರಲಿಲ್ಲ. ಆಡಂನ 3 ವರ್ಷಗಳ ತರಬೇತಿಗಾಗಿ ಕೇರಳ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ 23.34 ಲಕ್ಷ ರೂ. ಬಿಡುಗಡೆ ಮಾಡಿದೆ.

    ಆಡಂ ಈಗ ತಿರುವನಂತಪುರಂನ ರಾಜೀವ್ ಗಾಂಧಿ ಏವಿಯೇಷನ್ ಟೆಕ್ನಾಲಜಿ ಅಕಾಡೆಮಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಅಧ್ಯಯನ ಮಾಡಲಿದ್ದಾರೆ. ಇದನ್ನೂ ಓದಿ:  ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಆಡಂ ಹ್ಯಾರಿ, ಈ ಸಹಾಯಕ್ಕಾಗಿ ಕೇರಳ ಸರ್ಕಾರಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಬಾಲ್ಯದ ಕನಸು ನನಸಾಗುತ್ತಿರುವುದ್ದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

    ಕಮರ್ಷಿಯಲ್ ಲೈಸೆನ್ಸ್ ಬೇಕೆಂದರೆ ಪೈಲಟ್‍ಗೆ 200 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿರುವ ಅನುಭವ ಬೇಕಾಗುತ್ತದೆ. ಆಡಂ ಕೇರಳದ ತ್ರಿಶೂರ್ ಜಿಲ್ಲೆಯವರಾಗಿದ್ದು, ಪ್ರೈವೇಟ್ ಪೈಲಟ್ ಲೈಸೆನ್ಸ್ ಪಡೆದ ದೇಶದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಂ 2017ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ತರಬೇತಿ ಪಡೆದ ನಂತರ ಅವರಿಗೆ ಲೈಸೆನ್ಸ್ ನೀಡಲಾಗಿತ್ತು.

  • ಪ್ರೇಮಿಗಳ ದಿನದಂದು ತೃತೀಯ ಲಿಂಗಿಯನ್ನು ಮದುವೆಯಾದ ಪ್ರೇಮಿ

    ಪ್ರೇಮಿಗಳ ದಿನದಂದು ತೃತೀಯ ಲಿಂಗಿಯನ್ನು ಮದುವೆಯಾದ ಪ್ರೇಮಿ

    ಇಂದೋರ್: ಮಧ್ಯಪ್ರದೇಶ ಪ್ರೇಮಿಯೊಬ್ಬ ತೃತೀಯ ಲಿಂಗಿಯನ್ನು ಪ್ರೀತಿಸಿ ಪ್ರೇಮಿಗಳ ದಿನದಂದು ಮದುವೆಯಾಗಿದ್ದಾನೆ.

    ಇಂದೋರ್ ನ ಜುನೇದ್ ಖಾನ್ ತೃತೀಯ ಲಿಂಗಿ ಜಯ ಸಿಂಗ್ ಪರಮಾರ್ ರನ್ನು ಮದುವೆಯಾಗಿದ್ದಾನೆ. ಈ ಮದುವೆಗೆ ಜುನೇದ್ ಖಾನ್ ಅವರ ಪೋಷಕರು ವಿರೋಧಿಸಿದ್ದರು. ವಿರೋಧದ ನಡುವೆಯೂ ಈ ಜೋಡಿ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಫೆಬ್ರವರಿ 14ರಂದು ಜುನೇದ್ ಹಾಗೂ ಜಯಾ ಸಿಂಗ್ ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು. ಬಳಿಕ ಮುಸ್ಲಿಂ ಸಂಪ್ರದಾಯದಂತೆ ನಿಕಾ ಮಾಡಿಕೊಳ್ಳಲು ಈ ಜೋಡಿ ನಿರ್ಧರಿಸಿತ್ತು.

    2 ವರ್ಷಗಳ ಹಿಂದೆ ಜುನೇದ್‍ಗೆ ಜಯಾ ಸಿಂಗ್ ಮೇಲೆ ಪ್ರೀತಿ ಆಗಿದೆ. ಅಲ್ಲದೇ 15 ದಿನದ ಹಿಂದೆ ಆತ ಜಯಾ ಸಿಂಗ್‍ಗೆ ಪ್ರಪೋಸ್ ಮಾಡಿದ್ದಾನೆ. ಬಳಿಕ ಇಬ್ಬರು ಫೆ. 14ರಂದು ಮದುವೆ ಆಗಲು ನಿರ್ಧರಿಸಿದ್ದರು. ಈ ಜೋಡಿ ಈಗ ಮದುವೆ ಆಗಿದ್ದು, ಜುನೇದ್ ಕುಟುಂಬದವರು ತಮ್ಮ ಮದುವೆಯನ್ನು ಒಪ್ಪಿಕೊಳ್ಳಲಿ ಎಂದು ಇಬ್ಬರು ಇಚ್ಛಿಸುತ್ತಿದ್ದಾರೆ.

    ನನ್ನ ಕುಟುಂಬದವರು ನಮ್ಮಿಬ್ಬರ ಮದುವೆಯನ್ನು ಒಪ್ಪಿಕೊಳ್ಳಬೇಕು. ಅವರು ಒಪ್ಪದಿದ್ದರೆ ನಾನು ಜಯಾ ಸಿಂಗ್ ಜೊತೆಯಲ್ಲಿಯೇ ಇರುತ್ತೇನೆ. ನಾನು ಆಕೆಯನ್ನು ತುಂಬಾ ಇಷ್ಟಪಟ್ಟಿದ್ದೇನೆ ಹಾಗೂ ಆಕೆಯನ್ನು ಯಾವಾಗಲೂ ಖುಷಿಯಾಗಿರುಸುತ್ತೇನೆ ಎಂದು ಮಾಧ್ಯಮಕ್ಕೆ ಹೇಳಿದ್ದಾನೆ.

    ಜುನೇದ್ ಪೋಷಕರು ಈ ಮದುವೆಯನ್ನು ವಿರೋಧಿಸಿದರೂ ಕೂಡ ಅವರು ಅದನ್ನು ಯೋಚಿಸದೇ ನನ್ನನ್ನು ಮದುವೆ ಆಗಿದ್ದಾರೆ. ಜುನೇದ್ ಅವರ ಕುಟುಂಬ ಶೀಘ್ರದಲ್ಲೇ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಜಯಾ ಸಿಂಗ್ ಹೇಳಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv