Tag: ತೃತೀಯಲಿಂಗಿಗಳು

  • ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್‌ ಸಹಿ

    ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್‌ ಸಹಿ

    ವಾಷಿಂಗ್ಟನ್‌: ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

    ಮಹಿಳಾ ಕ್ರೀಡೆಗಳಿಂದ ಪುರುಷರನ್ನು ದೂರವಿಡುವುದು ಎಂಬ ಶೀರ್ಷಿಕೆಯ ಮೇಲೆ ಆದೇಶ ಹೊರಡಿಸಲಾಗಿದೆ. ಹುಟ್ಟಿನಿಂದ ಬಂದ ಲಿಂಗತ್ವವನ್ನು ಅಮೆರಿಕ ಸರ್ಕಾರ ಪರಿಗಣಿಸಿದೆ.

    ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿಗಳು ಭಾಗವಹಿಸುವುದಕ್ಕೆ ಮಹಿಳಾ ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

    ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಇದು ಆಡಳಿತದ ಶೀರ್ಷಿಕೆ IX ರ ವ್ಯಾಖ್ಯಾನಕ್ಕೆ ಅನುಗುಣವಾಗಿದೆ. ಹುಡುಗಿಯರು ಮತ್ತು ಮಹಿಳೆಯರ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುತ್ತದೆ.

  • PublicTV Explainer: ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ – ಯಾಕೆ ಗೊತ್ತಾ?

    PublicTV Explainer: ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ – ಯಾಕೆ ಗೊತ್ತಾ?

    ಸಮಾಜದಲ್ಲಿ ರಕ್ತದಾನಕ್ಕೆ (Blood Donation) ಅದರದ್ದೇ ಆದ ಮಹತ್ವವಿದೆ. ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು. ಜೀವಕ್ಕೆ ಸಂಜೀವಿನಿಯಿದ್ದಂತೆ. ಮಾನವ ದೇಹದ ಜೀವಸೆಲೆಯಾಗಿರುವ ರಕ್ತವನ್ನು ದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಬಹುದು. ಕೇವಲ ರಕ್ತ ಪಡೆಯುವವರಿಗಷ್ಟೇ ಅಲ್ಲ, ರಕ್ತದಾನ ಮಾಡುವವರಿಗೂ ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ರಕ್ತದಾನ ಮಾಡಿದರೆ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳನ್ನೂ ನಿಯಂತ್ರಿಸಬಹುದು ಎಂಬುದು ನಿಮ್ಮ ಗಮನಕ್ಕಿರಲಿ.

    ರಕ್ತದಾನ ಮಾಡುವುದಕ್ಕೂ ವೈದ್ಯಕೀಯ ಮಾರ್ಗಸೂಚಿಯಿರುತ್ತೆ. ಇಂತಹವರು ರಕ್ತದಾನ ಮಾಡಬೇಕು, ಮಾಡಬಾರದು ಎಂಬ ನಿಯಮವಿದೆ. ಯಾವುದೇ ದಾನ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕೇ ಹೊರತು ಕೆಡುಕುಂಟು ಮಾಡಬಾರದು. ಹೀಗಾಗಿ ರಕ್ತದಾನ ಮಾಡುವಾಗ ವೈದ್ಯಕೀಯ ನಿಯಮ ಪಾಲಿಸುವುದು ತುಂಬಾ ಮುಖ್ಯ. ಆ ಮಾರ್ಗಸೂಚಿಯೇನು? ಅದನ್ನು ಯಾಕೆ ಪಾಲಿಸಬೇಕು? ಯಾರ‍್ಯಾರು ರಕ್ತದಾನ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನೂ ಓದಿ: PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?

    ಮಾರಕ ಕಾಯಿಲೆಗಳ ವಿಚಾರವಾಗಿ ವೈದ್ಯಕೀಯ ಕ್ಷೇತ್ರ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ರಕ್ತದಾನದ ವಿಚಾರದಲ್ಲೂ ಇಂತಹ ಕ್ರಮಕೈಗೊಂಡಿರುವ ವಿಚಾರವನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ (Supreme Court) ಮುಂದಿಟ್ಟಿದೆ. ಸೋಂಕು ಹರಡುವಿಕೆ ನಿಯಂತ್ರಣ, ಇತರರ ಆರೋಗ್ಯದ ದೃಷ್ಟಿಯಿಂದ ಮಹಿಳಾ ಲೈಂಗಿಕ ಕಾರ್ಯಕರ್ತೆಯರು (Women Sex Workers) ರಕ್ತದಾನ ಮಾಡಬಾರದು ಎಂಬ ಮಾರ್ಗಸೂಚಿಯಿದೆ. ಈ ಸಾಲಿಗೆ ತೃತೀಯಲಿಂಗಿಗಳು (Transgenders) ಹಾಗೂ ಸಲಿಂಗಕಾಮಿಗಳನ್ನೂ (Gay) ಸೇರಿಸಲಾಗಿದೆ. ಯಾಕೆ ಇವರು ರಕ್ತದಾನ ಮಾಡುವಂತಿಲ್ಲ ಎಂಬುದಕ್ಕೆ ವೈದ್ಯಕೀಯ ಪುರಾವೆಗಳನ್ನೂ ಕೇಂದ್ರ, ಸುಪ್ರೀಂ ಮುಂದಿಟ್ಟಿದೆ. ಇದೇನು ಹೊಸ ಮಾರ್ಗಸೂಚಿಯಲ್ಲ. 2017ರಲ್ಲೇ ಈ ಮಾರ್ಗಸೂಚಿ ಹೊರಡಿಸಲಾಗಿತ್ತು. ಹಾಗಾದರೆ, ಈಗ ಏಕೆ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂಬುದನ್ನು ತಿಳಿಯೋಣ.

    ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ
    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಅದರಲ್ಲಿ “ಲಿಂಗಪರಿವರ್ತಕರು, ಸಲಿಂಗಕಾಮಿಗಳು ಮತ್ತು ಮಹಿಳಾ ಲೈಂಗಿಕ ಕಾರ್ಯಕರ್ತರನ್ನು ಎಚ್‌ಐವಿ ʼಅಪಾಯಕಾರಿʼ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿ ಅವರನ್ನು ರಕ್ತದಾನಿಗಳ ವರ್ಗದಿಂದ ದೂರ ಇಡಲಾಗಿದೆ” ಎಂದು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?

    ರಾಷ್ಟ್ರೀಯ ರಕ್ತ ವರ್ಗಾವಣೆ ಕೌನ್ಸಿಲ್ (NBTC) ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು 2017ರ ಅಕ್ಟೋಬರ್‌ 11 ರಂದು “ರಕ್ತದಾನಿ ಆಯ್ಕೆ ಮತ್ತು ರಕ್ತದಾನಿಗಳ ಮಾರ್ಗಸೂಚಿ” 12 ಮತ್ತು 51ನೇ ವಿಧಿ ಅಡಿಯಲ್ಲಿ ಸಲಿಂಗಕಾಮಿ ಮತ್ತು ತೃತೀಯಲಿಂಗಿಗಳು ರಕ್ತದಾನ ಮಾಡುವಂತಿಲ್ಲ ಎಂದಿದೆ. ಇದನ್ನು ವಿರೋಧಿಸಿ ತೃತೀಯಲಿಂಗಿ ಸಮುದಾಯದ ಥಂಗ್‌ಜಮ್ ಸಂತಾ ಸಿಂಗ್ ಎಂಬವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಮಾರ್ಗಸೂಚಿಗೆ ತಡೆ ನೀಡಬೇಕು ಎಂದು ಕೋರಿದ್ದರು. ಅದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

    2017ರ ಮಾರ್ಗಸೂಚಿಗಳು ಏನು ಹೇಳುತ್ತವೆ?
    ರಕ್ತ ವರ್ಗಾವಣೆ ವ್ಯವಸ್ಥೆಯು (ಬಿಟಿಎಸ್) ದೇಶದ ರಕ್ತದಾನ ವಿಧಾನವನ್ನು ಅವಲಂಬಿಸಿದೆ. ದೇಶದಾದ್ಯಂತ ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡು ನಿಯಮಾವಳಿಗಳನ್ನು ರೂಪಿಸಲಾಗಿದೆ. ಸುರಕ್ಷಿತ ರಕ್ತ ಹಾಗೂ ಅದನ್ನು ಸಕಾಲದಲ್ಲಿ ದೊರೆಯುವಂತೆ ಮಾಡುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅತಿದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

    ಯಾಕೆ ರಕ್ತದಾನ ಮಾಡುವಂತಿಲ್ಲ?
    ಮಾರ್ಗಸೂಚಿಗಳ 12 ನೇ ವಿಧಿಯು “ರಕ್ತ ದಾನಿಗಳ ಆಯ್ಕೆ ಮಾನದಂಡ”ದ ಅಡಿಯಲ್ಲಿ ಬರುತ್ತದೆ. ರಕ್ತ ಕೊಡುವ ದಾನಿ ಕಾಯಿಲೆಗಳಿಂದ ಮುಕ್ತವಾಗಿರಬೇಕು. ಮುಖ್ಯವಾಗಿ HIV, ಹೆಪಟೈಟಿಸ್ ಬಿ ಸೋಂಕಿತರು ರಕ್ತದಾನ ಮಾಡುವಂತಿಲ್ಲ ಎಂದಿದೆ. ಇದರಿಂದ ರಕ್ತ ಪಡೆಯುವವರೂ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ 15 ನೇ ವಿಧಿಯು ಸಲಿಂಗಕಾಮಿ ಮತ್ತು ತೃತೀಯಲಿಂಗಿಗಳು ಹಾಗೂ HIV ಸೋಂಕಿನ ಅಪಾಯದಲ್ಲಿರುವವರನ್ನು ರಕ್ತದಾನದಿಂದ ಶಾಶ್ವತವಾಗಿ ದೂರವಿಟ್ಟಿದೆ. ಪರ್ಮನೆಂಟ್ ಡೆಫರಲ್ ಎಂದರೆ ರಕ್ತದಾನ ಮಾಡಲು ಎಂದಿಗೂ ಅವರನ್ನು ಅನುಮತಿಸುವುದಿಲ್ಲ.

    ಸುಪ್ರೀಂನಲ್ಲಿರುವ ಮನವಿ ಏನು?
    ರಕ್ತದಾನ ವಿಚಾರ ಕುರಿತಂತೆ, ಮಣಿಪುರದ ಥಂಗ್‌ಜಮ್ ಸಂತಾ ಸಿಂಗ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, 2021ರ ಮಾ.5ರಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. 2017ರ ಮಾರ್ಗಸೂಚಿಯ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಮಾರ್ಗಸೂಚಿಯಲ್ಲಿ ಗುರುತಿಸಲಾಗಿರುವ ಈ ವರ್ಗದ ಜನರನ್ನು ಎಚ್‌ಐವಿ ಮತ್ತು ಏಡ್ಸ್‌ನ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ವರ್ಗಕ್ಕೆ ಸೇರಿಸಿರುವುದು ಸಂವಿಧಾನದ 14, 15 ಹಾಗೂ 21ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಲಿಂಗ ಹಾಗೂ ಲೈಂಗಿಕತೆ ಆಧಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ‘ನವತೇಜ್ ಜೋಹರ್’ ಮತ್ತು ‘ನಲ್ಸಾ’ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಈ ಮಾರ್ಗಸೂಚಿಗಳು ಉಲ್ಲಂಘಿಸುತ್ತವೆ ಎಂದು ಹೇಳಲಾಗಿತ್ತು.

    ಏನಿದು ನವತೇಜ್‌ ಜೋಹರ್‌, ನಲ್ಸಾ ಪ್ರಕರಣ?
    ಲಿಂಗ ತಾರತಮ್ಯ ಮಾಡುವುದು ಸರಿಯಲ್ಲ ಎಂದು ನಲ್ಸಾ (2014) ಹಾಗೂ ನವತೇಜ್‌ ಸಿಂಗ್‌ ಜೋಹರ್‌ (2018) ಪ್ರಕರಣಗಳಲ್ಲಿ ತೀರ್ಪು ನೀಡಿತ್ತು. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

    ನಮ್ಮ ದೃಷ್ಟಿಯಲ್ಲಿ ಲಿಂಗ ಗುರುತಿಸುವಿಕೆ ಲೈಂಗಿಕತೆಯ ಅವಿಭಾಜ್ಯ ಅಂಗವಾಗಿದೆ. ತೃತೀಯಲಿಂಗಿಗಳನ್ನೂ ಒಳಗೊಂಡಂತೆ ಲಿಂಗ ಗುರುತಿನ ಆಧಾರದ ಮೇಲೆ ಯಾವುದೇ ನಾಗರಿಕರನ್ನು ತಾರತಮ್ಯ ಮಾಡುವುದು ಸರಿಯಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

    ರಕ್ತದಾನದಿಂದ ಇವರನ್ನು ಹೊರಗಿಡುವುದಕ್ಕೆ ಸರ್ಕಾರದ ವಾದವೇನು?
    ತೃತೀಯಲಿಂಗಿಗಳು, ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು (ಎಂಎಸ್ಎಂ) ಮತ್ತು ಲೈಂಗಿಕ ಕಾರ್ಯಕರ್ತೆಯರು ರಕ್ತದಾನ ಮಾಡುವುದನ್ನು ನಿರ್ಬಂಧಿಸಿರುವ 2017ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಈ ಮಾರ್ಗಸೂಚಿಗಳು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದ್ದು, ತಜ್ಞರಿಂದ ಜಾಗತಿಕವಾಗಿ ಮಾನ್ಯತೆ ಪಡೆದಿವೆ ಎಂದು ತಿಳಿಸಿದೆ.

    ಯುರೋಪಿಯನ್ ರಾಷ್ಟ್ರಗಳು ಲೈಂಗಿಕವಾಗಿ ಸಕ್ರಿಯವಾಗಿರುವ ಸಲಿಂಗಕಾಮಿಗಳು ರಕ್ತದಾನ ಮಾಡುವುದನ್ನು ನಿಷೇಧಿಸಿವೆ. ಯುರೋಪಿಯನ್ ಪುರುಷರು-ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಬಗ್ಗೆ ಇಂಟರ್ನೆಟ್‌ ಸಮೀಕ್ಷೆ ಆಧರಿಸಿ ಈ ಕ್ರಮಕೈಗೊಂಡಿವೆ ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ. ಭಾರತದ ರಕ್ತ ವರ್ಗಾವಣೆ ವ್ಯವಸ್ಥೆಯನ್ನು ಬಲಪಡಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಕ್ತದಾನ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿ, ಅದನ್ನು ಬಳಕೆ ಮಾಡುವ ಜನರಲ್ಲಿ ವಿಶ್ವಾಸ ಮೂಡಿಸುವುದು ಬಹಳ ಮುಖ್ಯ. ಜೀವವೊಂದು ಸಂಕಷ್ಟದಲ್ಲಿರುವ ಸಮಯದಲ್ಲಿ ರಕ್ತದಾನ ವ್ಯವಸ್ಥೆಯ ಹೊರತು ಜನರಿಗೆ ಬೇರೆ ಆಯ್ಕೆಗಳಿರುವುದು ಕಡಿಮೆ. ಸಂಗ್ರಹಿಸಲಾದ ರಕ್ತದ ಮಾದರಿಯು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬ ಬಗ್ಗೆ ರಕ್ತದಾನ ಮಾಡುವವರು ಹಾಗೂ ರಕ್ತವನ್ನು ಪಡೆಯುವವರು ಸಂಪೂರ್ಣ ವಿಶ್ವಾಸ ಇರಿಸುವುದು ಅಗತ್ಯ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: Public TV Explainer: ಭಾರತದಲ್ಲಿ ಲ್ಯಾಬ್‌ನಲ್ಲೇ ತಯಾರಾಗುತ್ತಾ ವಜ್ರ? – ಕೃತಕ ವಜ್ರ ಹೇಗೆ ತಯಾರಿಸ್ತಾರೆ ಗೊತ್ತಾ?

    ರಕ್ತ ವರ್ಗಾವಣೆ ವಿಚಾರದಲ್ಲಿ ಪಾಶ್ಚಾತ್ಯ ದೇಶಗಳು ನ್ಯೂಕ್ಲಿಯಿಕ್ ಆ್ಯಸಿಡ್ ಟೆಸ್ಟಿಂಗ್ (ಎನ್‌ಎಟಿ) ವಿಧಾನವನ್ನು ಅನುಸರಿಸುತ್ತವೆ. ಈ ವಿಧಾನದಿಂದ, ವರ್ಗಾವಣೆಯಿಂದ ಹರಡುವ ಸೋಂಕುಗಳನ್ನು (ಟಿಟಿಐ) ಗಣನೀಯವಾಗಿ ಕಡಿಮೆ ಮಾಡಬಹುದು. ಭಾರತದಲ್ಲಿ 3,866 ರಕ್ತನಿಧಿ ಕೇಂದ್ರಗಳಲ್ಲಿ ಮಾತ್ರ ಎನ್‌ಎಟಿ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನವೂ ದುಬಾರಿ. ಇದನ್ನು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿ ಹಾಗೂ ವಿಶೇಷ ಉಪಕರಣಗಳು, ಸರಿಯಾದ ನಿರ್ವಹಣೆ ಅತ್ಯಗತ್ಯ ಎಂದು ಕೇಂದ್ರ ತಿಳಿಸಿದೆ.

  • ಸರ್ಕಾರಿ ವೈದ್ಯರಾಗಿ ಇತಿಹಾಸ ಬರೆದ ತೆಲಂಗಾಣದ ಇಬ್ಬರು ತೃತೀಯಲಿಂಗಿಗಳು

    ಸರ್ಕಾರಿ ವೈದ್ಯರಾಗಿ ಇತಿಹಾಸ ಬರೆದ ತೆಲಂಗಾಣದ ಇಬ್ಬರು ತೃತೀಯಲಿಂಗಿಗಳು

    ಹೈದರಾಬಾದ್: ತೆಲಂಗಾಣ (Telangana) ಮೂಲದ ಇಬ್ಬರು ತೃತೀಯಲಿಂಗಿಗಳು (Transgenders) ತಮ್ಮ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ, ವಿದ್ಯಾಭ್ಯಾಸ ಪೂರ್ಣಗೊಳಿಸಿ ಸರ್ಕಾರಿ ವೈದ್ಯರಾಗುವ (Doctors) ಮೂಲಕ ಹೊಸ ಇತಿಹಾಸವನ್ನೇ ಬರೆದಿದ್ದಾರೆ.

    ಪ್ರಾಚಿ ರಾಥೋಡ್ ಮತ್ತು ರುತ್ ಜಾನ್ ಪಾಲ್ ಇತ್ತೀಚೆಗೆ ಸರ್ಕಾರಿ ಉಸ್ಮಾನಿಯಾ ಜನರಲ್ ಹಾಸ್ಪಿಟಲ್ (ಒಜಿಹೆಚ್)ನಲ್ಲಿ ವೈದ್ಯಕೀಯ ಅಧಿಕಾರಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ರಾಥೋಡ್ ಮಾತನಾಡಿ, ತಮ್ಮ ಬಾಲ್ಯದಿಂದಲೂ ಸಹಿಸಿಕೊಂಡು ಬಂದ ಸಾಮಾಜಿಕ ಕಳಂಕ ಹಾಗೂ ತಾರತಮ್ಯವನ್ನು ಮೆಲುಕು ಹಾಕಿದ್ದಾರೆ.

    ಚಿಕ್ಕ ವಯಸ್ಸಿನಿಂದಲೇ ವೈದ್ಯರಾಗಬೇಕೆಂದು ಕನಸು ಕಂಡಿದ್ದ ರಾಥೋಡ್ 11, 12ನೇ ತರಗತಿಯಲ್ಲಿ ತಮ್ಮ ಸಹಪಾಠಿಗಳಿಂದಲೇ ಕಿರುಕುಳ, ಬೆದರಿಕೆಗೆ ಒಳಗಾಗಿದ್ದರು. ನನ್ನ ಬಾಲ್ಯ ಅತ್ಯಂತ ಕೆಟ್ಟದಾಗಿದ್ದು, ವೈದ್ಯನಾಗುವ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಹೇಗೆ ಬದುಕಬೇಕು, ಹೇಗೆ ಜಯಿಸಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?

    ರಾಥೋಡ್ ಅವರು ಸ್ನಾತಕೋತ್ತರ ಪದವಿ ಪಡೆಯಲು ದೆಹಲಿಗೆ ಹೋಗಿದ್ದರು ಆದರೆ ಪ್ರತಿಕೂಲ ವಾತಾವರಣದಿಂದಾಗಿ ಹೈದರಾಬಾದ್‌ಗೆ ಅವರು ಹಿಂತಿರುಗಬೇಕಾಯಿತು. ಬಳಿಕ ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ಎಮರ್ಜೆನ್ಸಿ ಮೆಡಿಸಿನ್‌ನಲ್ಲಿ (ತುರ್ತು ಔಷಧ) ಡಿಪ್ಲೊಮಾ ಮಾಡಿದ್ದಾರೆ. ಆದರೆ ತೃತೀಯ ಲಿಂಗಿಯಾಗಿದ್ದರಿಂದ 3 ವರ್ಷಗಳ ಕಾಲ ಕೆಲಸ ಮಾಡಿಕೊಂಡು ಬಂದಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಅವರನ್ನು ತೆಗೆದುಹಾಕಲಾಗಿತ್ತು. ನನ್ನಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ ಎಂದು ದೂಷಿಸಲಾಗಿತ್ತು ಎಂದು ಹಳೆಯ ಕಹಿ ಕ್ಷಣಗಳನ್ನು ನೆನಪಿಸಿದ್ದಾರೆ.

    ಇದೆಲ್ಲದರ ಬಳಿಕ ಸರ್ಕಾರೇತರಸಂಸ್ಥೆ (NGO) ನನ್ನ ರಕ್ಷಣೆಗೆ ಬಂದಿತ್ತು. ಎನ್‌ಜಿಒ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಮೊದಲಿಗೆ ಕೆಲಸ ಮಾಡಿ ಬಳಿಕ ಒಜಿಹೆಚ್‌ನಲ್ಲಿ ಇದೀಗ ಕೆಲಸ ಪಡೆದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಇಲ್ಲ: ಶಶಿಕಲಾ ಜೊಲ್ಲೆ

    ತೃತೀಯಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಬಿಂಬಿಸಿದ ರಾಥೋಡ್ ಉದ್ಯೋಗ ಹಾಗೂ ಶಿಕ್ಷಣದಲ್ಲಿ ತಮಗೂ ಸೂಕ್ತ ಮೀಸಲಾತಿಗಳನ್ನು ಒದಗಿಸಲು ಕೇಳಿಕೊಂಡಿದ್ದಾರೆ. ನಮ್ಮನ್ನು ತೃತೀಯಲಿಂಗಿಗಳು ಎಂದು ಪ್ರತ್ಯೇಕಿಸಿರುವ ವ್ಯಕ್ತಿಯನ್ನು ನಾನು ಪ್ರಶ್ನಿಸಲು ಬಯಸುತ್ತೇನೆ. ನಾವು ತೃತೀಯಲಿಂಗಿಗಳಾದರೆ ಮೊದಲ ಹಾಗೂ ದ್ವಿತೀಯ ಲಿಂಗಿಗಳು ಯಾರು ಎಂಬುದನ್ನು ಕೇಳಲು ಬಯಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]