Tag: ತೂತುಕುಡಿ

  • ತಮಿಳುನಾಡಿನಲ್ಲಿ ಭಾರೀ ಮಳೆಗೆ ಓರ್ವ ಬಲಿ – ರೈಲ್ವೇ ನಿಲ್ದಾಣದಲ್ಲಿ ಸಿಲುಕಿದ 500ಕ್ಕೂ ಹೆಚ್ಚು ಪ್ರಯಾಣಿಕರು

    ತಮಿಳುನಾಡಿನಲ್ಲಿ ಭಾರೀ ಮಳೆಗೆ ಓರ್ವ ಬಲಿ – ರೈಲ್ವೇ ನಿಲ್ದಾಣದಲ್ಲಿ ಸಿಲುಕಿದ 500ಕ್ಕೂ ಹೆಚ್ಚು ಪ್ರಯಾಣಿಕರು

    ಚೆನ್ನೈ: ತಮಿಳುನಾಡಿನ (Tamil Nadu) ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ (Rain) ಸುಮಾರು 500ಕ್ಕೂ ಹೆಚ್ಚು ಪ್ರಯಾಣಿಕರು ತೂತುಕುಡಿ ಜಿಲ್ಲೆಯ ಶ್ರೀವೈಕುಂಟಂನ ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಮಳೆಯಿಂದ ತೂತುಕುಡಿಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.

    ರೈಲು (Train) ನಿಲ್ದಾಣದ ಎಲ್ಲಾ ಕಡೆಗಳಲ್ಲೂ ಜಲಾವೃತವಾಗಿದ್ದು, ಭಾರೀ ಮಳೆಯ ಪರಿಣಾಮ ರೈಲು ನಿಲ್ದಾಣದ ಬಳಿಯ ಹಳಿಗಳ ಬಳಿ ಮಣ್ಣಿನ ಸವೆತ ಉಂಟಾಗಿದೆ. ಇದರಿಂದ ಸಿಮೆಂಟ್ ಚಪ್ಪಡಿಗಳು ಹಾನಿಗೊಳಗಾಗಿವೆ. ಇದರಿಂದಾಗಿ ತಿರುಚೆಂದೂರಿನಿಂದ ಚೆನ್ನೈಗೆ ಹೋಗುತ್ತಿದ್ದ ರೈಲನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Security breach in Lok Sabha:  ಮನೋರಂಜನ್ ನಿವಾಸದಲ್ಲಿ ದೆಹಲಿ ಪೊಲೀಸರು ಶೋಧ

    ನಿಲ್ದಾಣದ ಮಾರ್ಗ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯ ಸಹ ವಿಳಂಬವಾಗುತ್ತಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನಿಲ್ದಾಣವನ್ನು ತಲುಪಲು ಪ್ರಯತ್ನಿಸುತ್ತಿದೆ. ಆಹಾರವನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೆಲವೆಡೆ ಮಳೆ ಬಿಡುವು ನೀಡಿದ್ದರೂ, ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮುಂದುವರಿದಿದೆ. ಇದರಿಂದ ಕೆಲವೆಡೆ ನೀರು ನಿಂತಿದೆ. ಮಳೆಯಿಂದ ಕನ್ಯಾಕುಮಾರಿ, ತೂತುಕುಡಿ, ತೆಂಕಶಿ ಮತ್ತು ತಿರುನಲ್ವೇಲಿ ಜಿಲ್ಲೆಗಳು ಅತೀ ಹೆಚ್ಚು ಹಾನಿಗೊಳಗಾಗಿವೆ. ಇದನ್ನೂ ಓದಿ: ಕೋವಿಡ್ ಉಲ್ಬಣವಾಗುತ್ತಿದೆ ಎಂದು ಆತಂಕಗೊಳ್ಳುವುದು ಬೇಡ: ಡಿ.ಕೆ ಶಿವಕುಮಾರ್

  • ತೂತುಕುಡಿ ತಾಮ್ರ ಘಟಕಕ್ಕೆ ಬೀಗ – 30,000 ಮಂದಿ ಉದ್ಯೋಗಕ್ಕೆ ಕುತ್ತು!

    ತೂತುಕುಡಿ ತಾಮ್ರ ಘಟಕಕ್ಕೆ ಬೀಗ – 30,000 ಮಂದಿ ಉದ್ಯೋಗಕ್ಕೆ ಕುತ್ತು!

    ಚೆನ್ನೈ: ವೇದಾಂತ ಕಂಪನಿಯ ಸ್ಟೆರ್ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಈ ತೀರ್ಮಾನದಿಂದಾಗಿ ಸುಮಾರು 30 ಸಾವಿರ ಮಂದಿಗೆ ಉದ್ಯೋಗ ಕಳೆದು ಕೊಳ್ಳುವ ಭೀತಿ ಎದುರಾಗಿದೆ.

    ಸರ್ಕಾರವು ಹಠಾತ್ತಾಗಿ ತಾಮ್ರ ಘಟಕವನ್ನು ಮುಚ್ಚುವ ನಿರ್ಧಾರದಿಂದಾಗಿ ಸುಮಾರು 30 ಸಾವಿರ ಮಂದಿ ಉದ್ಯೋಗ ಕಳೆದುಕೊಂಡು, ದೇಶಕ್ಕೆ 200 ಕೋಟಿ ರೂ. ನಷ್ಟವುಂಟಾಗಿದೆ. ಹಾಗೆಯೇ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುವಂತೆ ಮಾಡಿದ್ದಾರೆಂದು ಸ್ಟೆರ್ಲೈಟ್ ಕಂಪನಿಯ ಮುಖ್ಯಸ್ಥ ಪಿ ರಾಮನಾಥ್ ತಿಳಿಸಿದ್ದಾರೆ.

    ಈ ಘಟಕಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಪನ್ಮೂಲಗಳನ್ನು ಪೂರೈಕೆ ಮಾಡುತ್ತಿದ್ದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಲ್ಲಿನ ಸುಮಾರು 30,000 ಮಂದಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

    ತೂತುಕುಡಿ ಘಟಕವು ಸುಮಾರು 40 ಲಕ್ಷ ಟನ್ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು, ದೇಶದಲ್ಲಿಯೇ ಅತಿಹೆಚ್ಚು ತಾಮ್ರ ಉತ್ಪಾದಿಸುತ್ತಿದ್ದ ಘಟಕವಾಗಿತ್ತು. ವಾರ್ಷಿಕವಾಗಿ ಘಟಕವು 200 ಕೋಟಿಗಳಷ್ಟು ವ್ಯವಹಾರ ನಡೆಸುತ್ತಿತ್ತು. ಕಂಪೆನಿಯು ಇದಲ್ಲದೆ ಪಶ್ಚಿಮ ಭಾರತದಲ್ಲಿ ಫಾಸ್ಪೋರಿಕ್ ಆಮ್ಲ ಘಟಕ, ಸಲ್ಫೂರಿಕ್ ಆ್ಯಸಿಡ್ ಘಟಕ, ತಾಮ್ರ ಘಟಕ ಹಾಗೂ 2 ಬೃಹತ್ ವಿದ್ಯುಸ್ಥಾವರನ್ನು ಹೊಂದಿದೆ.

    ತೂತುಕುಡಿ ಘಟಕದಲ್ಲಿ ಇನ್ನೂ ಹೆಚ್ಚಿನ ಉತ್ಪಾದನೆಗಾಗಿ ಕಂಪನಿಯು ಸುಮಾರು 70 ಕೋಟಿ ಬಂಡವಾಳವನ್ನು ಹೂಡಿ 14 ಕೋಟಿ ಹಣವನ್ನು ಖರ್ಚುಮಾಡಿತ್ತು. ಈ ಯೋಜನೆ ಪೂರ್ಣಗೊಂಡಿದ್ದಲ್ಲಿ ಈ ಘಟಕದಲ್ಲಿ ಒಟ್ಟು 80 ಲಕ್ಷ ಟನ್ ತಾಮ್ರ ಉತ್ಪಾದನೆಯಾಗುತಿತ್ತು.

    ತಾಮ್ರ ಘಟಕದಿಂದ ಪರಿಸರದ ಮೇಲೆ ಮಾರಕವಾಗಿ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಗೋಲಿಬಾರ್‍ಗೆ 13 ಮಂದಿ ಮೃತಪಟ್ಟಿದ್ದರು. ಇದಾದ ನಂತರ ತಮಿಳುನಾಡು ಸರ್ಕಾರ ಸ್ಟೆರ್ಲೈಟ್ ತಾಮ್ರ ಘಟಕವನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನ ಕೈಗೊಂಡಿದೆ.