Tag: ತುಷಾರ್‌ ಗಿರಿನಾಥ್‌

  • EVMನಲ್ಲಿ ದೋಷವಿದ್ರೇ ಕೂಡಲೇ ಚೇಂಜ್‌ ಮಾಡ್ತೇವೆ: ತುಷಾರ್‌ ಗಿರಿನಾಥ್‌

    EVMನಲ್ಲಿ ದೋಷವಿದ್ರೇ ಕೂಡಲೇ ಚೇಂಜ್‌ ಮಾಡ್ತೇವೆ: ತುಷಾರ್‌ ಗಿರಿನಾಥ್‌

    – ಚುನಾವಣಾ ಕೆಲಸಕ್ಕೆ 42 ಸಾವಿರ ಸಿಬ್ಬಂದಿ ನಿಯೋಜನೆ
    – 600 ಕಡೆ ಪಾರ್ಕಿಂಗ್ ವ್ಯವಸ್ಥೆ

    ಬೆಂಗಳೂರು: ಇವಿಎಂನಲ್ಲಿ (EVM) ದೋಷ ಕಂಡುಬರಲ್ಲ. ಆ ರೀತಿ ಏನಾದ್ರು ದೋಷ ಕಂಡು ಬಂದರೆ ಕೂಡಲೇ ನಾವು ಬದಲಾವಣೆ ಮಾಡುತ್ತೇವೆ ಎಂದು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ (Tushar Girinath) ತಿಳಿಸಿದರು.

    ಮೇ 10ಕ್ಕೆ ನಡೆಯಲಿರುವ ಚುನಾವಣೆ ಸಿದ್ಧತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಮಂಗಳವಾರ ಸಿಬ್ಬಂದಿ ತೆರಳಲಿದ್ದಾರೆ. 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ. ಮಸ್ಟರಿಂಗ್ ಸೆಂಟರ್‌ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದೇವೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್‌ಗಳಲ್ಲಿ ಇವಿಎಂ ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗೆ ತೆರಳುತ್ತಾರೆ. ನಾವು ಈಗಾಗ್ಲೇ ರೂಟ್ ಮ್ಯಾಪ್ ಫಿಕ್ಸ್ ಮಾಡಿದ್ದೇವೆ ಎಂದು ತಿಳಿಸಿದರು.

    ಒಂದು ಬಸ್‌ನಲ್ಲಿ ಐದರಿಂದ ಆರು ಮತ‌ಕಟ್ಟೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಡ್ರಾಪ್ ಮಾಡಲಾಗುವುದು. ನಾಳೆ ಬೆಳಗ್ಗೆ ಮತಗಟ್ಟೆಗಳಲ್ಲಿ 6 ಗಂಟೆಗೆ ಅಣಕು ಮತದಾನ ನಡೆಯಲಿದೆ. ನಂತರ ಬೆಳಗ್ಗೆ ಏಳು ಗಂಟೆಗೆ ಮತದಾನ (Polling) ಆರಂಭವಾಗಲಿದೆ. ಇವಿಎಮ್‌ಗಳಲ್ಲಿ ದೋಷ ಕಂಡು ಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್‌ಗಳನ್ನು ನಿಯೋಜನೆ ಮಾಡಲಾಗಿದೆ. 30 ನಿಮಿಷಗಳ ಸರಿ ಮಾಡುವಂತಹ ಕೆಲಸ ಮಾಡಲಾಗುವುದು ಎಂದರು.

    ಕ್ಯೂ ಆ್ಯಪ್ ಮೂಲಕ ಮತದಾನಕ್ಕೆ ಸಮಯ ನಿಗದಿ ಪಡಿಸಿಕೊಳ್ಳಬಹುದು. 600 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. ಪ್ರತಿ 15 ರಿಂದ 20 ನಿಮಿಷಕ್ಕೆ ಕ್ಯೂ ಆ್ಯಪ್ ಅಪ್‌ಡೇಟ್ ಆಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮಹಿಳಾ ಮಾದರಿ ಮತಗಟ್ಟೆಗಳಿವೆ. ಉಳಿದಂತೆ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಮಾಡಲಾಗಿದ್ದು, ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೆಜಿಗೆ 50 ರೂ.ಗಿಂತ ಕಡಿಮೆಯಿರುವ ಸೇಬು ಆಮದು ನಿಷೇಧ – ಕೇಂದ್ರ ಸರ್ಕಾರ

    ಮತದಾನದ ದಿನ ಅಭ್ಯರ್ಥಿ ಮತಗಟ್ಟೆಗೆ ಬರುವ ಹಾಗಿಲ್ಲ. ಏಜೆಂಟ್ ಬೂತ್ ಅಂತಾ ನೇಮಕ ಮಾಡಿರುತ್ತೇವೆ. ಅವರು ಇಬ್ಬರು ಬದಲಾವಣೆ ಮಾಡಿಕೊಂಡು ಏಜೆಂಟ್ ಬೂತ್ ನಿರ್ವಹಣೆ ಮಾಡಬೇಕಾಗುತ್ತದೆ. ಇಬ್ಬರು ಏಜೆಂಟ್ ಬೂತ್‌ಗಳು ಬದಲಾವಣೆ ಮಾಡಿಕೊಂಡು ನಿರ್ವಹಣೆ ಮಾಡಬೇಕಾಗುತ್ತದೆ. ಯಾವುದೇ ರೀತಿಯ ಸಡಿಲಿಕೆ ಇಲ್ಲ ಎಂದರು. ಇದನ್ನೂ ಓದಿ: ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರಿಕೆ ಬಿಡುಗಡೆ

  • karnataka Election 2023: ಈ ಬಾರಿ ಬೆಂಗಳೂರಿನ ಎಲ್ಲಾ ಮತಗಟ್ಟೆಗಳಲ್ಲಿ ಹೊಸ EVM ಬಳಕೆ – ತುಷಾರ್‌ ಗಿರಿನಾಥ್‌

    karnataka Election 2023: ಈ ಬಾರಿ ಬೆಂಗಳೂರಿನ ಎಲ್ಲಾ ಮತಗಟ್ಟೆಗಳಲ್ಲಿ ಹೊಸ EVM ಬಳಕೆ – ತುಷಾರ್‌ ಗಿರಿನಾಥ್‌

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಮುಹೂರ್ತ ಫಿಕ್ಸ್ ಆಗಿದ್ದು, ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 10 ಕ್ಕೆ ಮತದಾನ ಹಾಗೂ ಮೇ 13 ಕ್ಕೆ ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ. ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಚುನಾವಣೆ ಘೋಷಣೆ ಮಾಡ್ತಿದ್ದಂತೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ (Tushar Girinath) ಕೂಡ ಸುದ್ದಿಗೋಷ್ಠಿ ಮಾಡಿ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಯಾವ ರೀತಿ ಸಿದ್ಧತೆ ಆಗಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಚುನಾವಣೆ ಕರ್ತವ್ಯ ನಿರ್ವಹಣೆ ಮಾಡಲು 78 ಸಾವಿರ ಸಿಬ್ಬಂದಿ ಅಗತ್ಯವಿದ್ದು, ಈಗಾಗಲೇ 48 ಸಾವಿರ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಈ ಬಾರಿ ಹೊಸ ಇವಿಎಂ (EVM) ಬಳಕೆ ಮಾಡಲಾಗುತ್ತಿದೆ. ಎಲ್ಲ ಮತಗಟ್ಟೆಗಳಿಗೆ ಹೊಸ ಇವಿಎಂ ನೀಡಲಾಗುವುದು ಎಂದು ಆಯುಕ್ತರು ಚುನಾವಣಾ ಸಿದ್ಧತೆ ಬಗ್ಗೆ ವಿವರಣೆ ನೀಡಿದ್ದಾರೆ. ಇದನ್ನೂ ಓದಿ: Karnataka Election 2023- ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ

    ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸುದ್ದಿಗೋಷ್ಠಿ ನಡೆಸಿದರು. ಈಗಾಗಲೇ ಚುನಾವಣೆಗೆ ಬೇಕಾದ ತಂಡದ ರಚನೆ ಆಗಿದೆ. ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಮುಖ್ಯವಾಗಿ ಇಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಒಟ್ಟು ಮತದಾರರ ಸಂಖ್ಯೆ 95,13,830 ಇದ್ದು, ಅವರ ಪೈಕಿ ಪುರುಷ ಮತದಾರರ ಸಂಖ್ಯೆ 49,26,270 ಮತ್ತು ಮಹಿಳಾ ಮತದಾರರು 45,85,824 ಇದ್ದಾರೆ. ಹೊಸ ಮತದಾರರ ಸಂಖ್ಯೆ 1,08,494 ಇದೆ. 28 ವಿಧಾನಸಭಾ ಕ್ಷೇತ್ರಗಳಿಗೂ ರಿರ್ಟನಿಂಗ್ ಆಫೀಸರ್‌ಗಳ ನೇಮಕವಾಗಿದ್ದು , ಒಟ್ಟು ಮತಗಟ್ಟೆಗಳ ಸಂಖ್ಯೆ 8,615 ಗಳನ್ನ ಪಟ್ಟಿಮಾಡಲಾಗಿದೆ. ಚುನಾವಣಾ ಅಕ್ರಮ ತಡೆಯಲು ಸಹ ಸಾಕಷ್ಟು ಕ್ರಿಯಾಯೋಜನೆಗಳನ್ನ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ಅಂತಾ ಒಬ್ಬ ದಡ್ಡ ಇದ್ದಾನೆ, ಅವನಿಗೆ ದಿನವೂ ಹಣ ಎಣಿಸೋದೆ ಕೆಲಸ : ಸಿದ್ದರಾಮಯ್ಯ

    8,615 ಪೈಕಿ 2,217 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಣೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಕೆಲವು ಸಮಸ್ಯೆಗಳು ಆದ ಆಧಾರದ ಮೇರೆಗೆ ಸೂಕ್ಷ್ಮ ಮತಗಟ್ಟೆ ಎಂದು ಗುರುತು ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ Central Para Military Force ನಿಯೋಜನೆ ಮಾಡುತ್ತೇವೆ. ಚುನಾವಣೆ ಸಂಬಂಧ ಒಟ್ಟು 36 ಚೆಕ್‌ಪೋಸ್ಟ್ ಮಾಡಲಾಗಿದ್ದು, ಕರ್ನಾಟಕ-ತಮಿಳುನಾಡು ಬಾರ್ಡರ್‌ನಲ್ಲಿ 8 ಚೆಕ್‌ಪೋಸ್ಟ್ ನಿಯೋಜನೆ ಮಾಡಲಾಗಿದೆ. ಜೊತೆಗೆ ಜಿಲ್ಲೆ ಬಾರ್ಡರ್‌ಗಳಲ್ಲಿ 11 ಚೆಕ್‌ಪೋಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲು

    ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಜ್ವರದಿಂದ ಬಳಲುತ್ತಿದ್ದ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಬೆಂಗಳೂರಿನ (Bengaluru) ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ತುಷಾರ್ ಗಿರಿನಾಥ್ ಅವರು ಸಣ್ಣ ಪ್ರಮಾಣದ ಜ್ವರದಿಂದ ಬಳಲುತ್ತಿದ್ದರು. ಇದರ ಜೊತೆಗೆ ಕಳೆದ ಶನಿವಾರದಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಪರಿಶೀಲನೆಗೆ ಒಳಪಡಿಸಿದಾಗ ಯೂರಿನರಿ ಇನ್‍ಫೆಕ್ಷನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಔಷಧ ಹಾಗೂ ಇಂಜೆಕ್ಷನ್ ನೀಡಲಾಗಿತ್ತು. ಆದರೂ ಜ್ವರ ಕ್ಷೀಣಿಸದ ಕಾರಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತುಷಾರ್ ಗಿರಿನಾಥ್ ಆಪ್ತರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ಇತ್ತ ಚಿಲುಮೆ (Chilume) ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ತೀವ್ರವಾಗಿ ನಡೆಯುತ್ತಿದ್ದು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಈ ಸಮಯದಲ್ಲೇ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕ ಹಾಗೂ ಒತ್ತಡದಿಂದಲೇ ಜ್ವರ ಕಾಣಿಸಿಕೊಂಡಿತೇ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಪಂಡಿತರಿಗೆ ಕೇಂದ್ರದಿಂದ ಗುಡ್‍ನ್ಯೂಸ್ – ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಲು ಚಿಂತನೆ

    Live Tv
    [brid partner=56869869 player=32851 video=960834 autoplay=true]

  • ಗೌರವ್‌ ಗುಪ್ತ ಎತ್ತಂಗಡಿ – ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗ

    ಗೌರವ್‌ ಗುಪ್ತ ಎತ್ತಂಗಡಿ – ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗ

    ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಗೌರವ್‌ ಗುಪ್ತರನ್ನು ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಷಾರ್‌ ಗಿರಿನಾಥ್‌ ಅವರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಈಗ ಒಡೆದ ಮನೆ ಒಂದಷ್ಟು ಬಣ ವಲಸೆರಾಮಯ್ಯರಿಗೆ ಜೈಕಾರ ಹಾಕುತ್ತಿದೆ: ಬಿಜೆಪಿ ವ್ಯಂಗ್ಯ

    ಅಂತೆಯೇ ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆ ಜಿಲ್ಲಾಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ನಿತೇಶ್‌ ಪಾಟೀಲ್‌ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ, ಗುರುದತ್‌ ಹೆಗಡೆ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.