Tag: ತುಳು ಭಾಷೆ

  • ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    – ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ

    ಬೆಂಗಳೂರು: ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ನಿಮ್ಮ ಬೇಡಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಭರವಸೆ ನೀಡಿದರು.

    ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ʻಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿʼ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

    ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ ಎಂದು ಚಟಾಕಿ ಹಾರಿಸಿದರು.

    ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ ಕೊಟ್ಟವರು, ಧಾರ್ಮಿಕ ಶಕ್ತಿ ಕೊಟ್ಟವರು, ಬ್ಯಾಂಕ್ ವ್ಯವಸ್ಥೆ ಕೊಟ್ಟವರು ಈ ಕರಾವಳಿ ಜನ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಈ ಡಿಕೆ ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ. ನಿಮ್ಮ ಸಂಸ್ಕೃತಿ, ಇತಿಹಾಸ ದೇಶದ ಯಾವುದೇ ಭಾಗದಲ್ಲೂ ಇಲ್ಲ. ನೀವೆಲ್ಲರೂ ಕರ್ನಾಟಕ ರಾಜ್ಯದ ಆಸ್ತಿ ಎಂದು ಗುಣಗಾನ ಮಾಡಿದರು.

    ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನ ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ನಾನು ನಿಮ್ಮ ಭಾಗದ ಶಾಸಕರು, ಸ್ಪೀಕರ್ ಖಾದರ್ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

  • ತುಳುವನ್ನ 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ – ಕಾಂಗ್ರೆಸ್‌ ಶಾಸಕ ಅಶೋಕ್ ರೈ ಒತ್ತಾಯ; ತುಳುವಿನಲ್ಲೇ ಮನವಿ‌

    ತುಳುವನ್ನ 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ – ಕಾಂಗ್ರೆಸ್‌ ಶಾಸಕ ಅಶೋಕ್ ರೈ ಒತ್ತಾಯ; ತುಳುವಿನಲ್ಲೇ ಮನವಿ‌

    ಬೆಂಗಳೂರು: ತುಳು ಭಾಷೆಯನ್ನು (Tulu language) 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ ಎಂದು ಕಾಂಗ್ರೆಸ್ ಶಾಸಕ ಅಶೋಕ್ ರೈ ವಿಧಾನಸಭೆಯಲ್ಲಿ ಒತ್ತಾಯಿಸಿದರು. ತುಳುವಿನಲ್ಲೇ ಮಾತನಾಡಿ ಅಶೋಕ್ ರೈ (Ashok Kumar Rai) ಮನವಿ ಮಾಡಿದರು. ಅತ್ತ ಸ್ಪೀಕರ್ ಯು.ಟಿ ಖಾದರ್‌ (UT Khader) ಸಹ ತುಳುವಿನಲ್ಲೇ ಸ್ಪಷ್ಟನೆ ನೀಡಿದರು.

    ಈ ವೇಳೆ ನೀವಿಬ್ಬರೇ ಮಾತನಾಡಿದ್ರೆ ಹೇಗೆ? ನಮಗೆ ನಿಮ್ಮ ಭಾಷೆ ಹೇಗೆ ಗೊತ್ತಾಗಬೇಕು? ಅಂತ ಹಲವು ಶಾಸಕರು ತಮಾಷೆಗೆಳೆದ ಪ್ರಸಂಗವೂ ಸದನದಲ್ಲಿ ನಡೆಯಿತು. ನೀವು ಏನು ಹೇಳಿದ್ರಿ‌ ನಮಗೆ ಗೊತ್ತಾಗಲಿಲ್ಲ. ನಾವೇನು ಮಂಗಳೂರಿನ (Mangaluru) ಅಧಿವೇಶನದಲ್ಲಿ ಇದ್ದೇವಾ? ಅಂತಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashoka) ಜೋರಾಗಿ ನಕ್ಕು, ಕನ್ನಡದಲ್ಲಿ ಮಾತನಾಡಿ ಎಂದರು.

    ಈ ವೇಳೆ ವೇದವ್ಯಾಸ ಕಾಮತ್‌ ರಿಂದಲೂ (Veda Vyasa Kamath) ತುಳು ಸಂಭಾಷಣೆ ನಡೆಯಿತು. ಶಾಸಕ ಅಶೋಕ್ ರೈ ಹೇಳಿದಂತೆ 2ನೇ ಅಧಿಕೃತ ಭಾಷೆ ಮಾಡಿ ಎಂದು ಸದನದಲ್ಲಿ ಕೈಮುಗಿದು ಮನವಿ ಮಾಡಿದರು. ಇದನ್ನೂ ಓದಿ: ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್‌ ಮ್ಯಾನ್‌ʼ ಜೀವನ ಕಥೆಯೇ ರೋಚಕ!

    ಇದರಿಂದ ತಂಗಡಗಿ ಅನುಪಸ್ಥಿತಿಯಲ್ಲಿ ಪ್ರಿಯಾಂಕ್ ಖರ್ಗೆ ಉತ್ತರ ನೀಡಿ, ಬೇರೆ ರಾಜ್ಯಗಳಲ್ಲಿ ಎರಡು ಭಾಷೆಗಳಿವೆ. ಬಿಹಾರದಲ್ಲೂ ಎರಡು ಭಾಷೆಗಳಿವೆ, ಸ್ವಂತ ಖರ್ಚಿನಲ್ಲಿ ಅಧ್ಯಯನ ಮಾಡಿ ತಂದಿದ್ದಾರೆ. ತುಳು ಭಾಷೆಯ ಪ್ರಾಚೀನತೆ ಇತಿಹಾಸ ಗಮನಕ್ಕಿದೆ. ನನ್ನ ಬಾಲ್ಯ ಸ್ನೇಹಿತ ಶ್ರವಣ್ ಅನ್ನುವವರಿದ್ದರು. ಅವರಿಗೆ ಅವರ ತಾಯಿ ತುಳುವಿನಲ್ಲೇ ಬೈಯ್ಯುತ್ತಿದ್ರು. ಹಾಗಾಗಿ ನೀವೇನು ಹೇಳಿದ್ರಿ ನನಗೂ ಅರ್ಥವಾಗಿದೆ. ನಾನು ಇದರ ಪರವಾಗಿದ್ದೇನೆ. ನಾಳೆಯೇ ಸಚಿವರ ಗಮನಕ್ಕೆ ತರುತ್ತೇನೆ. ಸಭೆ ಮಾಡಿ ನಿರ್ಧಾರ ಮಾಡ್ತೇವೆ, ಅಂತ ಸದನಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದರು.

    ಈ ವೇಳೆ ಲಂಬಾಣಿಯನ್ನೂ ಸೇರಿಸುವಂತೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮನವಿ ಮಾಡಿದರು. 8ನೇ ಪರಿಚ್ಚೇದಕ್ಕೆ ಸೇರಿಸಲು ಮನವಿ‌ ಮಾಡಿದರು. ಇದನ್ನೂ ಓದಿ: ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

  • ತುಳುವನ್ನು ಹೆಚ್ಚುವರಿ ಭಾಷೆಯಾಗಿ ಮಾಡೋದಕ್ಕೆ ಪ್ರಯತ್ನಿಸುತ್ತೇವೆ: ಸಿಎಂ

    ತುಳುವನ್ನು ಹೆಚ್ಚುವರಿ ಭಾಷೆಯಾಗಿ ಮಾಡೋದಕ್ಕೆ ಪ್ರಯತ್ನಿಸುತ್ತೇವೆ: ಸಿಎಂ

    ಬೆಂಗಳೂರು: ತುಳು ಭಾಷೆಯನ್ನ (Tulu Language) ಕರ್ನಾಟಕದಲ್ಲಿ ಹೆಚ್ಚುವರಿ ಭಾಷೆಯಾಗಿ ಮಾಡಬೇಕೆಂಬ ಬೇಡಿಕೆ ಇದೆ. ಹೀಗಾಗಿ ತುಳುವನ್ನು ಹೆಚ್ಚುವರಿ ಭಾಷೆಯಾಗಿ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಇಂದು ಅರಮನೆ ಮೈದಾನದಲ್ಲಿ ನಡೆದ ಕಂಬಳ (Kambala) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಂಬಳವು ಕರಾವಳಿ ಭಾಗದ ಪ್ರಸಿದ್ಧ ಕ್ರೀಡೆಯಾಗಿದೆ. ಈ ಕ್ರೀಡೆ ಪ್ರತಿ ವರ್ಷ ಮುಂದುವರಿಸುವಂತಹ ಕೆಲಸ ಆಗಲಿ ಎಂದು ಹಾರೈಸಿದರು. ಅಲ್ಲದೆ ವಿಶೇಷವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಆಯೋಜನೆ ಮಾಡಿ. ಕಂಬಳ ಕ್ರೀಡೆಯನ್ನ ಉಳಿಸಬೇಕು, ಬೆಳೆಸಬೇಕು ಎಂದರು. ಇದನ್ನೂ ಓದಿ: Bengaluru Kambala- ಕರೆಯಲ್ಲಿ ಕೋಣಗಳ ಕಮಾಲ್ ಕಣ್ತುಂಬಿಕೊಂಡ ಜನ

    ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರೋ ಕಂಬಳದ ಮೊದಲ ದಿನದ ಝಲಕ್ ಅದ್ಭುತವಾಗಿತ್ತು. ಒಂದೆಡೆ ಸಿಂಗಾರ ಮಾಡಿಕೊಂಡ ಕೋಣಗಳು ಕರೆಯಲ್ಲಿ ಶರವೇಗದಲ್ಲಿ ಓಡುತ್ತಿದ್ರೆ,ಮತ್ತೊಂದೆಡೆ ಓಟಗಾರರನ್ನ ಹುರಿದುಂಬಿಸ್ತಿದ್ದ ಜನರಿಂದ ಅರಮನೆ ಮೈದಾನದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

    ಬೆಳಗ್ಗೆ ಕಂಬಳಕ್ಕೆ ಚಾಲನೆ ಸಿಗ್ತಿದ್ದಂತೆ ಅಖಾಡಕ್ಕಿಳಿದ ಕೋಣಗಳು ಕರೆಯಲ್ಲಿ ನೀರು ಚಿಮ್ಮಿಸುತ್ತ ನೆರೆದಿದ್ದವರ ಹಾರ್ಟ್ ಬೀಟ್ ಹೆಚ್ಚುವಂತೆ ಮಾಡಿತ್ತು. ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ತುಳುನಾಡಿನ ಗಂಡುಕಲೆಯನ್ನ ಸಿಲಿಕಾನ್ ಸಿಟಿಯಲ್ಲಿ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ತುಳುವನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಿ – ಮುಲ್ಪ ಪಾತೆರೊಡ್ಚಿ, ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ತುಳುವನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಿ – ಮುಲ್ಪ ಪಾತೆರೊಡ್ಚಿ, ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ತುಳು ಭಾಷೆ (Tulu Language) ಗಮನಸೆಳೆದಿದೆ. ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಮನವಿ ಮಾಡಿದ್ದಾರೆ.

    ತುಳು ಭಾಷೆಯಲ್ಲೇ ಮಾತನಾಡಿ ಅಶೋಕ್ ಕುಮಾರ್ ರೈ ಗಮನಸೆಳೆದಿದ್ದು, ಈ ವೇಳೆ ಸ್ಪೀಕರ್ ಯುಟಿ ಖಾದರ್ (UT Khader) ತುಳು ಭಾಷೆಯಲ್ಲೇ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ತುಳುವಿನಲ್ಲಿ ಮಾತನಾಡಲು ಮುಂದಾದಾಗ ಕನ್ನಡದಲ್ಲಿ ಮಾತನಾಡಿ ಎಂದು ಸ್ಪೀಕರ್ ಖಾದರ್ ಸೂಚನೆ ನೀಡಿದ್ರು.

    ಬಳಿಕ ಕನ್ನಡ ಹಾಗೂ ತುಳುವಿನಲ್ಲಿ ವೇದವ್ಯಾಸ್ ಕಾಮತ್ ಮಾತನಾಡಿದ್ದಾರೆ. ತುಳುವಿನಲ್ಲಿ ಮಾತನಾಡುವುದಕ್ಕೆ ವಿರೋಧ ಇಲ್ಲ. ಆದರೆ ಬರೆದುಕೊಳ್ಳುವವರಿಗೆ ಸಮಸ್ಯೆ ಆಗುತ್ತದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಧ್ವನಿಯೆತ್ತಿದ್ದಾರೆ. ನೀವು ತುಳುವಿನಲ್ಲಿ ಮಾತನಾಡಿದರೆ ನಾನು ಅರ್ಥ ಆಗದೇ ಉತ್ತರ ಕೊಡುವುದು ಹೇಗೆ ಎಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ: ಯತ್ನಾಳ್‌

    ಈ ವೇಳೆ ಸ್ಪೀಕರ್ ಮಾತನಾಡಿ, ತುಳು ಮಾತನಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು. ತುಳು ಮಾತನಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ. ನೀವು ಕೂಡಾ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಿದರು.

    ಆಗ ಶಿವರಾಜ್ ತಂಗಡಗಿ ಮಾತನಾಡಿ ವರದಿಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ಉತ್ತರಿಸಿದರು. ನೀವು ಕಾನೂನು ಇಲಾಖೆ, ಎಲ್ಲಾ ಇಲಾಖೆಗಳ ವರದಿಗಳನ್ನು ತರಿಸಿಕೊಂಡು ತುಳು ಭಾಷೆಯನ್ನು 2ನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಿ ಎಂದು ಸಚಿವರಿಗೆ ಸ್ಪೀಕರ್ ಖಾದರ್ ಸೂಚಿಸಿದರು. ಇದನ್ನೂ ಓದಿ: ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಆರೋಪ – ಬ್ರಿಜ್ ಭೂಷಣ್ ಸಿಂಗ್‌ಗೆ ಮಧ್ಯಂತರ ಜಾಮೀನು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್

    ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್

    ಮುಂಬೈ: ಕರಾವಳಿಯಲ್ಲಿ ಮನೆಮಾತಾಗಿರುವ ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಇದೀಗ ಈ ತುಳು ಭಾಷೆ ವಿಮಾನದಲ್ಲಿ ಮಾರ್ದನಿಸಿದೆ. ಅದೂ ಕೂಡ ವಿಮಾನದ ಪೈಲಟ್ ಬಾಯಲ್ಲಿ. ಇದೀಗ ಪೈಲಟ್‍ನ ತುಳು ಪ್ರಕಟಣೆಯ ವೀಡಿಯೋ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ.‌

    ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ತುಳು ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚು. ಅವರು ಎಲ್ಲೇ ಹೋದರೂ ಕರಾವಳಿಗರು ಸಿಕ್ಕರೇ ತುಳುವಿನಲ್ಲಿ ಮಾತನಾಡಿ ತಮ್ಮ ಭಾಷಾಪ್ರೇಮವನ್ನು ಮೆರೆಯುತ್ತಾರೆ. ಇದೀಗ ವಿಮಾನದಲ್ಲೂ ಕೂಡ ಅಂತಹದ್ದೆ ಸನ್ನಿವೇಶ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನ ತಾಲಿಬಾನ್ ಮಧ್ಯೆ ಬೇಲಿಗಾಗಿ ಘರ್ಷಣೆ – ತಂತಿಯನ್ನೇ ಕದ್ದ ಉಗ್ರರು

    ಇಂಡಿಗೋ ವಿಮಾನ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮುಂಬೈನಿಂದ ಮಂಗಳೂರಿಗೆ ಹೊರಟಿತ್ತು. ಈ ವೇಳೆ ಪೈಲಟ್ ಇಂಗ್ಲಿಷ್ ಬದಲಿಗೆ ತುಳುವಿನಲ್ಲಿ ಅನೌನ್ಸ್‌ಮೆಂಟ್ ಕೊಟ್ಟಿದ್ದಾರೆ. ವಿಮಾನದಲ್ಲಿ ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ರಾಜ್ಯ ಭಾಷೆಯಲ್ಲಿ ಮಾತ್ರ ವಿಮಾನ ಹೊರಡುವಾಗ ಮತ್ತು ಇಳಿಯುವಾಗ ಪ್ರಯಾಣಿಕರಿಗೆ ಸೂಚನೆ ರವಾನಿಸುವ ಪದ್ಧತಿ ಇದೆ. ಈ ನಡುವೆ ಮುಂಬೈನಿಂದ ಮಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಕರಾವಳಿ ಕರ್ನಾಟಕದ ಜನ ಹೆಚ್ಚಿರುವುದನ್ನು ಗಮನಿಸಿದ ಪೈಲಟ್ ‘ಮಾತೆರೆಗ್ಲಾ ಸೊಲ್ಮೆಲು'(ಎಲ್ಲರಿಗೂ ನಮಸ್ಕಾರ) ಎನ್ನುತ್ತಾ ತುಳುವಿನಲ್ಲಿ ಮಾತು ಆರಂಭಿಸಿ ಅಗತ್ಯ ಸೂಚನೆಯನ್ನು ನೀಡಿದ್ದಾರೆ. ಈ ವೀಡಿಯೋ ಇದೀಗ ಕರಾವಳಿಯಾದ್ಯಂತ ಗಮನಸೆಳೆಯುತ್ತಿದೆ.

    ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್‌ಮೆಂಟ್ ಮಾಡಿದ ಪೈಲಟ್ ಪ್ರದೀಪ್ ಪದ್ಮಶಾಲಿ ಮೂಲತಃ ಉಡುಪಿಯವರು ಮುಂಬೈನಲ್ಲಿ ಪೈಲಟ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಇಂಡಿಗೋ ವಿಮಾನ ಪ್ರತಿದಿನ ಮುಂಬೈನಿಂದ ರಾತ್ರಿ 8 ಗಂಟೆಗೆ ಹೊರಡಿ ಮಂಗಳೂರಿಗೆ 9:30ಕ್ಕೆ ಮಂಗಳೂರಿಗೆ ತಲುಪುತ್ತದೆ. ಈ ವಿಮಾನ ಶುಕ್ರವಾರ ಹೊರಡುತ್ತಿದ್ದಂತೆ ಪ್ರದೀಪ್ ತಮ್ಮ ತುಳು ಭಾಷಾ ಪ್ರೇಮ ಮೆರೆದು ತುಳುವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ ಸರ್ಕಾರ ಜಾಹೀರಾತಿಗೆ ವಾರ್ಷಿಕ 2,000 ಕೋಟಿ ಖರ್ಚು ಮಾಡ್ತಿದೆ: ಎಎಪಿ

    ತುಳು ಭಾಷೆ ಕರಾವಳಿ ಭಾಗದಲ್ಲಿ ಹೆಚ್ಚು ಮಾತನಾಡುತ್ತಿರುವುದರಿಂದಾಗಿ ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂಬ ಆಗ್ರಹ ಕೂಡ ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರದ ಮುಂದೆ ಪ್ರತಿ ಬಾರಿ ಈ ಬಗ್ಗೆ ಪ್ರಸ್ತಾಪಗಳು ಕೇಳಿ ಬರುತ್ತಿದೆ.

  • 8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್

    8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್

    ಬೆಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಈ ವಿಚಾರವಾಗಿ ತುಳುವಿನಲ್ಲಿ ಟ್ವೀಟ್ ಮಾಡಿದ ಅವರು ನನ್ನ ಮಾತೃ ಭಾಷೆಗೆ ರಾಜ್ಯ ಭಾಷೆ ಸಂಬಂಧ ನಡೆಯುವ ಆಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಕಟೀಲ್ ಟ್ವೀಟ್‍ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ  ಇನ್ನು ಕೆಲವರು ಮಾತಿನಲ್ಲಿ ಮಾತ್ರ ಈ ಹೇಳಿಕೆ ಬರುತ್ತಿದೆ. ಕೃತಿಯಲ್ಲಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಧರ್ಮಾಧಿಕಾರಿ ಮನವಿ

    ನಮ್ಮ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಮಾಡಬೇಕಾದುದನ್ನು ಪ್ರತಿ ಬಾರಿಯೂ ಟ್ವಿಟ್ಟರಿನಲ್ಲಿ ನಮ್ಮ ಹಾಗೆ ಮನವಿ ಮಾಡುವುದಾದರೆ ಅಧಿವೇಶನದಲ್ಲಿ ತುಳುವಿಗಾಗಿ ಧ್ವನಿ ಎತ್ತುವವರು ಯಾರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

  • ಕರಾವಳಿಯಲ್ಲಿ ಟ್ರೆಂಡ್ ಆಗ್ತಿದೆ #EducationInTulu ಅಭಿಯಾನ- ಏನಿದು ಕ್ಯಾಂಪೇನ್?

    ಕರಾವಳಿಯಲ್ಲಿ ಟ್ರೆಂಡ್ ಆಗ್ತಿದೆ #EducationInTulu ಅಭಿಯಾನ- ಏನಿದು ಕ್ಯಾಂಪೇನ್?

    ಮಂಗಳೂರು: ಲಕ್ಷಾಂತರ ಮಂದಿಯ ಮಾತೃಭಾಷೆಯಾಗಿಯಷ್ಟೇ ಉಳಿದಿರುವ ತುಳು ಭಾಷೆಗೆ ಇನ್ನೂ ಯಾವುದೇ ರೀತಿಯ ಸ್ಥಾನಮಾನ ದೊರೆತಿಲ್ಲ. ಇದೀಗ ತುಳುನಾಡಿನ ಮಕ್ಕಳಿಗೆ ತುಳುವಿನಲ್ಲಿಯೇ ಶಿಕ್ಷಣ ಸಿಗಬೇಕು ಎಂಬ ಅಭಿಯಾನವೊಂದನ್ನು ನಡೆಸಲು ತುಳುವರು ತೀರ್ಮಾನಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಈಗಾಗಲೇ ತುಳುಪರ ಕಾರ್ಯಕ್ರಮಗಳನ್ನು ಮಾಡಿ ಮೆಚ್ಚುಗೆ ಗಳಿಸಿರುವ ಜೈ ತುಳುನಾಡ್ ಸಂಘಟನೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಅಭಿಯಾನದ ನೇತೃತ್ವ ವಹಿಸಿಕೊಂಡಿದೆ. ಅಲ್ಲದೆ ಈಗಾಗಲೇ ಜನರಲ್ಲಿ ಈ ಬಗ್ಗೆ ಜಾಗೃತಿ ಕೂಡ ಮೂಡಿಸಲು ಆರಂಭಿಸಿದೆ.

    ಈ ಹಿಂದೆ ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು. ಹಾಗೂ ತುಳು ಲಿಪಿಯನ್ನು ಸಾರ್ವಜನಿಕರಿಗೆ ಕಲಿಸುವಂತಹ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಇದೇ ಸಂಘಟನೆ ಹಮ್ಮಿಕೊಂಡಿತ್ತು. ಈ ಮೂಲಕ ತುಳುವರ ಪರ ಕಾರ್ಯಕ್ರಮಗಳನ್ನು ಮಾಡಿ ಜನಮನ್ನಣೆ ಗಳಿಸಿದೆ.

    ಏನಿದು ಕ್ಯಾಂಪೇನ್?:
    ಮಹಾಮಾರಿ ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಬಳಿಕ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ನಿರ್ಧರಿಸಿದೆ. ಈ ಹೊಸ ಶಿಕ್ಷಣ ನೀತಿಯಲ್ಲಿ 5ನೇ ತರಗತಿಯವರೆಗೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ಎಂಬ ನಿಯಮವಿದೆ. ಇದರ ಅನ್ವಯ ತುಳುನಾಡಿನ ಮಕ್ಕಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ನಿಯಮ ಸೇರಿಸಬೇಕು ಎಂಬುದು ಕರಾವಳಿ ಜನರ ಮಹತ್ತರವಾದ ಆಶಯವಾಗಿದೆ.

    ತುಳುನಾಡಿನ ಮಕ್ಕಳಿಗೆ ಅವರದ್ದೇ ಭಾಷೆಯಲ್ಲಿ ಶಿಕ್ಷಣ ಸಿಗುವಂತಾದರೆ ತುಳು ಭಾಷೆ ಶೈಕ್ಷಣಿಕ ಭಾಷೆಯಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಬಳಿ ತುಳುವನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸುವ ಬಗ್ಗೆ ಮನವಿ ಮಾಡಬೇಕಾಗಿದ್ದು, ಈ ಮೂಲಕ ಸರ್ಕಾರದ ಗಮನ ಸೆಳೆಯುವ ಅಗತ್ಯತೆ ಇದೆ. ಹೀಗಾಗಿ ತುಳು ಅಭಿಮಾನಿಗಳು ಪಾಲ್ಗೊಂಡು #EducationInTulu ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಎಚ್ಚರಿಸಬೇಕಾಗಿದೆ ಎಂದು ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಸುದರ್ಶನ ಮೂಲ್ಯ ಹೇಳಿದ್ದಾರೆ.