Tag: ತುಳಸಿ

  • ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

    ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

    ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ವಾಸ್ತವವಾಗಿ ತುಳಸಿ ಎಲೆಗಳ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಎಲೆಗಳಿಂದ ಶೀತ ಮತ್ತು ಕೆಮ್ಮು ಸುಲಭವಾಗಿ ಗುಣವಾಗುತ್ತದೆ. ತುಳಸಿ ಎಲೆಗಳು ಮಾತ್ರವಲ್ಲದೆ ಅದರ ಬೀಜಗಳೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

    ತುಳಸಿ ಬೀಜಗಳಿಂದಾಗುವ ಪ್ರಯೋಜನಗಳೇನು..?
    * ತುಳಸಿ ಬೀಜಗಳು (Tulsi Seeds) ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ತುಳಸಿ ಬೀಜಗಳ ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಪ್ರಯೋಜನಕಾರಿಯಾಗಿದೆ.

    * ತುಳಸಿ ಬೀಜಗಳು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಅನೇಕ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನೂ ಓದಿ: ರಾತ್ರಿ ಮಲಗೋ ಮುನ್ನ ಕುಡಿಯುವ 1 ಲೋಟ ಬೆಚ್ಚಗಿನ ನೀರಿನಿಂದ ಆಗುವ ಪ್ರಯೋಜನಗಳು

    * ಮಲಬದ್ಧತೆಯಂತಹ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಬೆಳಗ್ಗೆ ಇದರ ಸೇವನೆಯು ನಿಮ್ಮ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.

    * ದಿನದಿಂದ ದಿನಕ್ಕೆ ನಿಮ್ಮ ತೂಕದಲ್ಲಿ ಹೆಚ್ಚಳ ಕಂಡುಬರುತ್ತಿದ್ದರೆ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹೀಗಾಗಿ ನಿಮಗೆ ದಪ್ಪವಾಗುತ್ತಿದ್ದೇನೆ ಎಂಬ ಭಾವನೆ ಬಂದರೆ ಈ ಬೀಜಗಳನ್ನು ಸೇವಿಸುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ. ಇದರಿಂದಾಗಿ ನಿಮ್ಮ ತೂಕ ಕ್ರಮೇಣ ಕಡಿಮೆಯಾಗುತ್ತದೆ.

    * ಗ್ಯಾಸ್ಟ್ರಿಕ್‌ ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ತುಳಸಿ ಬೀಜಗಳು ನಿಮಗೆ ಪ್ರಯೋಜನಕಾರಿಯಾಗಬಲ್ಲವು. ಒಂದು ಚಮಚ ತುಳಸಿ ಕಾಳುಗಳನ್ನು ಒಂದು ಲೋಟ ನೀರಿಗೆ ಹಾಕಿ ಊದಿಕೊಂಡ ನಂತರ ಕುಡಿಯಿರಿ. ಈ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.

  • ಆಡಂಬರದ ಮದುವೆಗೆ ಬ್ರೇಕ್ – ಸರಳ ವಿವಾಹಕ್ಕೆ ಸಾಕ್ಷಿಯಾದ ಪರಿಸರ ಸ್ನೇಹಿ ಕಪಲ್

    ಆಡಂಬರದ ಮದುವೆಗೆ ಬ್ರೇಕ್ – ಸರಳ ವಿವಾಹಕ್ಕೆ ಸಾಕ್ಷಿಯಾದ ಪರಿಸರ ಸ್ನೇಹಿ ಕಪಲ್

    ನವದೆಹಲಿ: ಮದುವೆ ಎಂದರೆ ವಿಜೃಂಭಣೆ, ಅದ್ಧೂರಿಯಾಗಿ ಹಣ ಖರ್ಚುಮಾಡಿ ಆಗುವುದನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಆದರೆ ದೆಹಲಿಯ ಜೋಡಿಯೊಂದು ಆಡಂಬರದ ಮದುವೆಗೆ ಬ್ರೇಕ್ ಹಾಕಿ ಬಹಳ ಯುನಿಕ್ ಆಗಿ ಸರಳವಾಗಿ ಪರಿಸರ ಸ್ನೇಹಿಗಳಿಬ್ಬರು ವಿವಾಹವಾಗಿದ್ದಾರೆ.

    ಹೌದು, ವರ ಆದಿತ್ಯ ಅಗರ್‍ವಾಲ್(32) ತಮ್ಮ ಮದುವೆಗೆ ಕಾರು ಬೈಕ್‍ನಲ್ಲಿ ಬರದೇ ಯುಲು ಬೈಕ್ ಮೇಲೆ ಬಂದರು. ಮೊದಲಿನಿಂದಲೂ ಕಡಿಮೆ ವೆಚ್ಚದಲ್ಲಿ ಮದುವೆಯಗಬೇಕೆಂಬ ಆಸೆ ಹೊಂದಿದ್ದ, ವಧು ಮಾಧುರಿ ಬಲೋಡಿಯವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಬೆಂಬಲ ನೀಡಿದ್ದಾರೆ.

    ಮಾಧುರಿಯವರ ವಿವಾಹವನ್ನು ಅವರ ಚಿಕ್ಕಪ್ಪನ ಮನೆಯ ಗಾರ್ಡನ್ ನಲ್ಲಿ ಏರ್ಪಡಿಸಲಾಗಿತ್ತು. ಮದುವೆ ಸಮಯದಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ, ಹಳೆಯ ಬಾಟಲಿಗಳಿಗೆ ನ್ಯೂಸ್ ಪೇಪರ್‌ಗಳನ್ನು ಅಂಟಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಅಲಂಕಾರಕ್ಕೆ ಉಪಯೋಗಿಸಲಾಗಿತ್ತು.

    ಮದುವೆಗೆ ಆಹ್ವಾನ ಪತ್ರಿಕೆ ನೀಡಿದರೆ ಜನ ಅದನ್ನು ನೋಡಿ ಬಿಸಾಡುತ್ತಾರೆ. ಹಾಗಾಗಿ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಮಾಡಿಸದೇ ನನ್ನ ಮದುವೆ ಸ್ವತಃ ನಾನೇ ಆಹ್ವಾನ ಪತ್ರಿಕೆಯನ್ನು ವಿನ್ಯಾಸಗೊಳಿಸಿದೆ ಹಾಗೂ ಮದುವೆಗೆ ಪ್ರಿಂಟೆಡ್ ಬ್ಯಾನರ್ ಬಳಸುವ ಬದಲಾಗಿ ನಾವು ಚಾರ್ಕ್ ಬೋಡ್ ಬಳಸಲಾಗಿದೆ ಎಂದು ಮಾಧುರಿ ತಿಳಿಸಿದ್ದಾರೆ.

    ಮದುವೆ ಸಮಯದಲ್ಲಿ ನನ್ನ ಸ್ನೇಹಿತರು ಗಾಜಿಪುರದಿಂದ ತುಳಸಿ ಹಾರವನ್ನು ತರಿಸಿದ್ದು, ನಾವು ಹಾರವಾಗಿ ತುಳಸಿಯನ್ನು ಬಳಸಿದ್ದೇವೆ. ಅಲ್ಲದೇ ಎರಡು ಕುಟುಂಬಗಳು ಯಾವುದೇ ಗಿಫ್ಟ್‍ಗಳನ್ನು ವಿನಿಮಯ ಮಾಡಿಕೊಳ್ಳದೇ, ಬದಲಾಗಿ ಇಬ್ಬರು ಒಂದು ಕೆಜಿ ಹಣ್ಣುಗಳನ್ನು ತಂದಿದ್ದಾರೆ. ಹಿಂದಿನ ಕಾಲದಲ್ಲಿ ಜನರು ಮದುವೆಗೆ ಹೋಗುವಾಗ ತಮ್ಮದೇ ಗುಂಪುಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಇದೀಗ ಜನರ ಮಧ್ಯೆ ಆ ಬಾಂಧವ್ಯ ಕಾಣೆಯಾಗದೆ. ಆದರೆ ನಮ್ಮ ಮದುವೆಗೆ ಎಲ್ಲರೂ ವಿಭಿನ್ನ ರೀತಿಯಲ್ಲಿಯೇ ಕೊಡುಗೆ ನೀಡಿದ್ದಾರೆ.

    ಈ ಜೋಡಿ ವಿವಾಹಕ್ಕೆ ಮಾಧುರಿ ಸೋದರ ಸಂಬಂಧಿಯೊಬ್ಬರು ಪಂಡಿತರ ಪಾತ್ರವನ್ನು ವಹಿಸಿದರೆ, ಸ್ನೇಹಿತರು ಫೋಟೋವನ್ನು ಮದುವೆಯ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಮದುವೆ ವೇಳೆ ಮಾಧುರಿ 2,500 ರೂ ಸೀರೆ ಉಟ್ಟರೆ, ವರ ಆದಿತ್ಯ 3,000 ರೂ ಶೇರ್ವಾನಿ ಧರಿಸಿದ್ದರು. ಅಲ್ಲದೆ ಮದುವೆಯಲ್ಲಿ ಪಾಲ್ಗೊಂಡವರಿಗೆ ತಾಂಬೂಲದ ಬದಲಿಗೆ ಗಿಡವನ್ನು ಉಡುಗೊರೆಯಾಗಿ ನೀಡಲಾಗಿತ್ತು.

  • ಉಪಯುಕ್ತ ಔಷಧಿಗಳ ಸಂಜೀವಿನಿ ತುಳಸಿ

    ಉಪಯುಕ್ತ ಔಷಧಿಗಳ ಸಂಜೀವಿನಿ ತುಳಸಿ

    ಕೆಲವೊಮ್ಮೆ ನಮ್ಮ ಮನೆಯಂಗಳದಲ್ಲಿ ಬೆಳೆದಿರುವ ಸಣ್ಣಪುಟ್ಟ ಔಷಧೀಯ ಸಸ್ಯಗಳ ಉಪಯೋಗಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ನೋಡಲು ಗಾತ್ರ ಚಿಕ್ಕದಿದ್ದರೂ ಅದರ ಲಾಭಗಳು ಹೆಚ್ಚು, ಈ ಸಸ್ಯಗಳು ನಮ್ಮೆಲ್ಲಾ ರೋಗಗಳಿಗೆ ಸಿದ್ಧೌಷಧವಾಗಿರುತ್ತದೆ. ಅಂತಹದ್ದೇ ಒಂದು ಪುಟ್ಟ ಸಸ್ಯವೇ ‘ತುಳಸಿ’.

    ಹೌದು. ಅನೇಕ ಔಷಧೀಯ ಗುಣಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ತುಳಸಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೆ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವನ್ನೂ ಕೂಡ ನೀಡಲಾಗಿದೆ. ಅದರಲ್ಲೂ ಹಿಂದೂಗಳು ತುಳಸಿಯನ್ನು ದೇವರು ಎಂದು ಪೂಜಿಸುತ್ತಾರೆ. ಆಯುರ್ವೇದದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ತುಳಸಿ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರ ಎಲೆಯನ್ನು ಹಾಗೆಯೇ ತಿನ್ನಲು ಇಷ್ಟವಾಗದಿದ್ದರೆ, ಚಹಾ, ಪಾನಕಗಳಲ್ಲಿ ತುಳಸಿ ಎಲೆಗಳನ್ನು ಬೆರೆಸಿ ಸೇವಿಯಬಹುದು.

    ತುಳಸಿ ಸೇವನೆಯ ಲಾಭವೇನು?

    ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ:
    ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಅದು ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಉದರ ಬಾಧೆಗಳನ್ನು ನಿವಾರಿಸಿ, ದೇಹಕ್ಕೆ ಶಕ್ತಿ ಕೊಡುತ್ತದೆ. ಹಾಗಂತ ಹೆಚ್ಚಿನ ಪ್ರಮಾಣದಲ್ಲಿ ತುಳಸಿ ಸೇವನೆ ಮಾಡಬಾರದು, ಮಿತವಾಗಿ ಬಳಸಬೇಕು.

    ಜ್ವರ ಹಾಗೂ ಶೀತಕ್ಕೆ ಒಳ್ಳೆಯ ಮನೆಮದ್ದು:
    ಹೌದು. ತುಳಸಿ ಎಲೆಗಳನ್ನು ಸೇವಿಸುವುದರಿಂದ ಜ್ವರ ಹಾಗೂ ಶೀತ ಕಡಿಮೆಯಾಗುತ್ತದೆ. ಸ್ವಲ್ಪ ತುಳಸಿ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಹಾಗೆಯೇ ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿಯಾಗಿದ್ದು, ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.

    ಜೀರ್ಣಶಕ್ತಿ ಉತ್ತಮಗೊಳಿಸುತ್ತದೆ:
    ಜೀರ್ಣಶಕ್ತಿ ಉತ್ತಮವಾಗಿದ್ದರೆ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಹೀಗಾಗಿ ತುಳಸಿ ಎಲೆಗಳನ್ನು ಸೇವಿಸಿ ಜೀರ್ಣಶಕ್ತಿಯನ್ನು ವೃದ್ಧಿಸಿಕೊಂದು ಆರೋಗ್ಯವಾಗಿ ಇರಬಹುದು.

    ತಲೆನೋವಿಗೆ ಉಪಶಮನ ನೀಡುತ್ತದೆ:
    ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ದೂರವಾಗುತ್ತದೆ. ಹೀಗಾಗಿ ಅನೇಕ ತಲೆನೋವು ಔಷಧಿಗಳಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತದೆ.

    ಡಯಾಬಿಟಿಸ್ ನಿಯಂತ್ರಿಸುತ್ತದೆ:
    ತುಳಸಿ ಗಿಡದ ಬೇರನ್ನು ಒಣಗಿಸಿ, ಪುಡಿಮಾಡಿ ಪ್ರತಿದಿನ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ಬೆರಸಿ ಸೇವಿಸಬೇಕು. ಹೀಗೆ ಮಾಡಿದರೆ ನಿಮ್ಮ ದೇಹದಲ್ಲಿರುವ ಇನ್ಸುಲಿನ್ ಮಟ್ಟವನ್ನು ತುಳಸಿ ನಿಯಂತ್ರಿಸುತ್ತದೆ. ಇದರಿಂದ ನೈಸರ್ಗಿಕವಾಗಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

    ಕಿಡ್ನಿ ಸ್ಟೋನ್ ಕಡಿಮೆ ಮಾಡುತ್ತದೆ:
    ಕಿಡ್ನಿ ಸ್ಟೋನ್ ಕಡಿಮೆ ಮಾಡಿಕೊಳ್ಳಲು ತುಳಸಿ ಎಲೆ ರಸ ಒಂದೊಳ್ಳೆ ಮನೆಮದ್ದಾಗಿದೆ. ತುಳಸಿ ರಸವನ್ನು ಜೇನಿನೊಂದಿಗೆ ಸೇರಿಸಿ, ನಿಯಮಿತವಾಗಿ 6 ತಿಂಗಳು ಸೇವಿಸಿದರೆ ಕಿಡ್ನಿ ಸ್ಟೋನ್ ಕಡಿಮೆಯಾಗುತ್ತದೆ.

    ಹೀಗಿ ಸಾಕಷ್ಟು ಆರೋಗ್ಯಕರ ಅಂಶವನ್ನು ತುಳಸಿ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಹೀಗಾಗಿ ನಿಮ್ಮ ದಿನನಿತ್ಯದ ಆಹಾರದಲ್ಲಿ ಮಿತವಾಗಿ ತುಳಸಿ ಬಳಸಿ, ಆರೋಗ್ಯವನ್ನು ಕಾಯ್ದುಕೊಳ್ಳಿ.