Tag: ತುಳಸಾಭಾಯಿ

  • ಕೊರೊನಾ ಲಸಿಕೆ ಪಡೆದ 118 ವರ್ಷದ ವೃದ್ಧೆ

    ಕೊರೊನಾ ಲಸಿಕೆ ಪಡೆದ 118 ವರ್ಷದ ವೃದ್ಧೆ

    ಭೋಪಾಲ್: 118 ವರ್ಷದ ವೃದ್ಧೆಯೊಬ್ಬರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

    ಮಧ್ಯಪ್ರದೇಶದ ಸಾಗರ ಜಿಲ್ಲೆಯ ತುಳಸಾಬಾಯಿ(118) ನಿನ್ನೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಪ್ರತಿಯೊಬ್ಬರು ಕೊರೊನಾ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಆತ್ಮವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.

    ಖಿಮ್ಲಾಸಾ ಪ್ರದೇಶದ ಲಸಿಕಾ ಕೇಂದ್ರದಿಂದ ಲಸಿಕೆ ಪಡೆದು ನಗುಮುಖದಲ್ಲಿ ಹೊರ ಬಂದ ವೃದ್ಧೆ, 118ನೇ ವಯಸ್ಸಿನಲ್ಲಿ ನಾನು ಲಸಿಕೆ ಪಡೆದು ಆರೋಗ್ಯವಾಗಿ ಹೊರಬಂದಿದ್ದೇನೆ. ನೀವೂ ಲಸಿಕೆ ಪಡೆಯಬಹುದು ಎಂದು ಹೇಳಿದ್ದಾರೆ. ಕೊರೊನಾ ಲಸಿಕೆಯನ್ನು ಪಡೆದು ಇತರರಿಗೂ ಲಸಿಕೆ ಪಡೆಯಲು ಮಾದರಿಯಾಗಿದ್ದಾರೆ.

    ತುಳಸಾಬಾಯಿ ಅವರ ಆಧಾರ್ ಕಾರ್ಡ್ ಪ್ರಕಾರ 1903ರ ಜನವರಿ 1ರಂದು ಜನಿಸಿದ್ದಾರೆ. ಬುಂದೇಲ್‍ಖಂಡ್ ಪ್ರದೇಶದ ಭಾಗವಾಗಿರುವ ಸಾಗರದ ಸದರ್‍ಪುರ್ ಪ್ರದೇಶದ ನಿವಾಸಿಯಾಗಿದ್ದಾರೆ. ಕೊರೊನಾ ಲಸಿಕೆಯ ಬೃಹತ್ ಅಭಿಯಾನದಲ್ಲಿ ಕೊರೊನಾ ಲಸಿಕೆ ಪಡೆದವರ ಪೈಕಿಯಲ್ಲಿ ತುಳಸಾಭಾಯಿ ಅತ್ಯಂತ ಹಿರಿಯರಾಗಿದ್ದಾರೆ.

    ಕೊರೊನಾ ವೈರಸ್ ಪ್ರಕರಣಗಳ ಆತಂಕಕಾರಿ ಮಟ್ಟವನ್ನು ಹೆಚ್ಚಿಸಿದೆ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮನವಿ ಮಾಡಿದ್ದಾರೆ.