Tag: ತುರ್ತು ಲ್ಯಾಂಡಿಂಗ್

  • ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

    ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

    ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

    ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ವೈಫಲ್ಯದಿಂದ ಕಳೆದ ಶನಿವಾರ ನ್ಯೂ ಓರ್ಲಿಯನ್ಸ್‌ನಲ್ಲಿ ತುರ್ತು ಲ್ಯಾಂಡಿಗ್ ಮಾಡಿದೆ.

    ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರು, ಅವರ ಸಲಹೆಗಾರರು ಮತ್ತು ರಹಸ್ಯ ಸೇವೆಯೊಂದಿಗೆ ಸುರಕ್ಷಿತವಾಗಿ ವಿಮಾನವು ತುರ್ತು ಲ್ಯಾಂಡಿಗ್ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?

    ನ್ಯೂ ಓರ್ಲಿಯನ್ಸ್‌ನಲ್ಲಿ ತಮ್ಮ ಫ್ಲೋರಿಡಾ ಎಸ್ಟೇಟ್ ಮಾರ್-ಎ-ಲಾಗೊಗೆ ಹಿಂತಿರುಗುತ್ತಿದ್ದಾಗ ಶನಿವಾರ ರಾತ್ರಿ 11 ಗಂಟೆಗಿಂತ ಸ್ವಲ್ಪ ಮುಂಚೆ ತಾಂತ್ರಿಕ ವೈಫಲ್ಯ ಸಂಭವಿಸಿದೆ. ಘಟನೆಯ ಬಗ್ಗೆ ತಿಳಿದಿರುವ ವ್ಯಕ್ತಿಯ ಪ್ರಕಾರ, ನ್ಯೂ ಓರ್ಲಿಯನ್ಸ್ ಲೇಕ್‍ಫ್ರಂಟ್ ವಿಮಾನ ನಿಲ್ದಾಣವನ್ನು ತೊರೆದ ನಂತರ ಸುಮಾರು 120 ಕಿಲೋಮೀಟರ್ ದೂರದಲ್ಲಿ ಈ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Punjab Election Results 2022: ರಾಷ್ಟ್ರೀಯ ಕಚೇರಿ ಎದುರು ಬ್ಯಾನರ್, ಜಿಲೇಬಿ ರೆಡಿ – ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡ AAP

    ತುರ್ತು ಲ್ಯಾಂಡಿಂಗ್ ಅನ್ನು ದೃಢಪಡಿಸಿದ ನಂತರ ಟ್ರಂಪ್ ವಕ್ತಾರರು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ತುರ್ತು ಲ್ಯಾಂಡಿಂಗ್ ನಂತರ, ಟ್ರಂಪ್ ಅವರ ತಂಡವು ಮತ್ತೊಂದು ಖಾಸಗಿ ವಿಮಾನವನ್ನು ತೆಗೆದುಕೊಂಡು ಅಂತಿಮವಾಗಿ ಮರುದಿನ ಬೆಳಿಗ್ಗೆ ಮಾರ್-ಎ-ಲಾಗೊಗೆ ತೆರಳಿದ್ದಾರೆ.

  • ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ ಇಂಡಿಗೋ ವಿಮಾನ ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌

    ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ ಇಂಡಿಗೋ ವಿಮಾನ ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌

    ಭೋಪಾಲ್‌: ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ 172 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಇಂದು ಬೆಳಗ್ಗೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಆಗಿದೆ.

    ತಾಂತ್ರಿಕ ಕಾರಣಗಳಿಂದಾಗಿ ಇಂಡಿಗೋ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಲು ಭೋಪಾಲ್‌ಗೆ ಕಡೆ ತಿರುಗಿಸಲಾಗಿತ್ತು. ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಇಂಡಿಗೋ ಕಂಪನಿ, “ಸೂರತ್‌ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನವನ್ನು ಮುನ್ನೆಚ್ಚರಿಕೆಯಾಗಿ ಭೋಪಾಲ್‌ ಕಡೆಗೆ ತಿರುಗಿಸಲಾಯಿತು. ಹಾರಾಟದ ಸಮಯದಲ್ಲಿ ಪೈಲಟ್‌ ಗಮನಕ್ಕೆ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಎಚ್ಚರಿಕೆಯಂತೆ ಭೋಪಾಲ್‌ನಲ್ಲಿ ಇಳಿಸಲಾಯಿತು. ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರನ್ನ ಕೋಲ್ಕತ್ತಾಗೆ ಕಳುಹಿಸಲಾಯಿತು. ಸದ್ಯ ಭೋಪಾಲ್‌ನಲ್ಲಿರುವ ವಿಮಾನವನ್ನು ಪರಿಶೀಲನೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ” ಎಂದು ಹೇಳಿದೆ.

    ಒಡಿಶಾದಿಂದ 50 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದ ಕ್ಯಾಬಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಸಂಜೆ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಆಗಿತ್ತು.

  • ಬಾಂಗ್ಲಾದಲ್ಲಿ ವಿಮಾನ ಹೈಜಾಕ್ ಯತ್ನ – ತುರ್ತು ಲ್ಯಾಂಡಿಂಗ್, ಪ್ರಯಾಣಿಕರ ರಕ್ಷಣೆ

    ಬಾಂಗ್ಲಾದಲ್ಲಿ ವಿಮಾನ ಹೈಜಾಕ್ ಯತ್ನ – ತುರ್ತು ಲ್ಯಾಂಡಿಂಗ್, ಪ್ರಯಾಣಿಕರ ರಕ್ಷಣೆ

    ಢಾಕಾ: ಪುಲ್ವಾಮಾ ದಾಳಿಯ ಬಳಿಕ ಭಾರತ ವಿಮಾನ ಹೈಜಾಕ್ ಮಾಡಲಾಗುವುದು ಎನ್ನುವ ಬೆದರಿಕೆ ಬಂದ ಬೆನ್ನಲ್ಲೇ ಬಾಂಗ್ಲಾದೇಶದ ದುಬೈ ಮೂಲದ ವಿಮಾನವನ್ನು ಅಪಹರಿಸುವ ಪ್ರಯತ್ನ ನಡೆದಿದೆ.

    ಹೈಜಾಕ್ ಮಾಡಲು ಯತ್ನಿಸಿದ ಪರಿಣಾಮ ಬಾಂಗ್ಲಾದೇಶದ ಚಿತ್ತಗಾಂಗ್ ಶಾ ಅಮಾನತ್ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ದುಬೈಗೆ ಪ್ರಯಾಣ ಬೆಳೆಸಿದ್ದ ವಿಮಾನ ಇದಾಗಿದೆ ಎಂಬ ಮಾಹಿತಿ ಲಭಿಸಿದೆ.

    145 ಮಂದಿ ಪ್ರಯಾಣಿಕರಿದ್ದ ಬಿಜಿ 147 ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಲಾಗಿದ್ದು, ಈ ವೇಳೆ ವಿಮಾನದ ಸಿಬ್ಬಂದಿಯೊಬ್ಬರನ್ನ ಶೂಟ್ ಮಾಡಲಾಗಿದೆ. ಆದರೆ ಸದ್ಯ ಘಟನೆಯಲ್ಲಿ ಪ್ರಯಾಣಿಕರನ್ನು ರಕ್ಷಣೆ ಮಾಡಿ, ಓರ್ವ ಅಪಹರಣಕಾರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ವಿಮಾನದ ಕ್ಯಾಬಿನ್ ಸಿಬ್ಬಂದಿ ಕೆಲ ವ್ಯಕ್ತಿಗಳ ವರ್ತನೆ ಬಗ್ಗೆ ಅನುಮಾನ ಬಂದ ಕೂಡಲೇ ಎಚ್ಚರಿಕೆ ಸಂದೇಶ ರವಾನಿಸಿದ್ದರು.

    ಢಾಕಾದಿಂದ ಚಿತ್ತಗಾಂಗ್ ಮೂಲಕ ವಿಮಾನ ದುಬೈಗೆ ಪ್ರಯಾಣ ಬೆಳೆದಿದ್ದು, ಈ ವೇಳೆ ಹೈಜಾಕ್ ಮಾಡಿದ ವಿಚಾರ ತಿಳಿದ ಕೂಡಲೇ ಸಂಜೆ 5.15ರ ವೇಳೆಗೆ ತುರ್ತು ಲ್ಯಾಡಿಂಗ್ ಮಾಡಲಾಗಿದೆ. ತಕ್ಷಣವೇ ಪೊಲೀಸ್ ಅಧಿಕಾರಿಗಳು ಹಾಗೂ ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ ಕಾರ್ಯಾಚರಣೆ ಆರಂಭಿಸಿ, ಇಡೀ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿದೆ.

    ಭಾರತದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ವಿಮಾನ ಹೈಜಾಕ್ ಮಾಡುವ ಫೋನ್ ಬೆದರಿಕೆ ಆಗಮಿಸಿದ ಬೆನ್ನಲ್ಲೇ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಮಾಹಿತಿ ರವಾನೆ ಮಾಡಿ ಭದ್ರತೆ ನೀಡಲಾಗಿತ್ತು. ವಿಚಾರಣೆಯ ಬಳಿಕ ಫೋನ್ ಕರೆ ಸುಳ್ಳು ಎಂದು ತಿಳಿದು ಬಂದಿತ್ತು. ಆದರೆ ಇಂತಹ ಸಮಯದಲ್ಲಿ ಅವಕಾಶವನ್ನು ತೆಗೆದುಕೊಳ್ಳಲು ಬಯಸದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆದ(ಸಿಐಎಸ್‍ಎಫ್) ಎಲ್ಲಾ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಸೂಚನೆ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv