Tag: ತುರುವೇಕೆರೆ

  • ರೈಲು ನಿಲ್ಲೋದಕ್ಕೂ ಮುನ್ನ ಇಳಿಯಲು ಹೋಗಿ ಅವಘಡ – ಹಳಿಗೆ ಸಿಲುಕಿ 2 ಕಾಲು ಕಟ್, ಯುವಕ ಸಾವು

    ರೈಲು ನಿಲ್ಲೋದಕ್ಕೂ ಮುನ್ನ ಇಳಿಯಲು ಹೋಗಿ ಅವಘಡ – ಹಳಿಗೆ ಸಿಲುಕಿ 2 ಕಾಲು ಕಟ್, ಯುವಕ ಸಾವು

    – 25 ನಿಮಿಷ ಕಳೆದರೂ ಗಾಯಾಳುವನ್ನು ಆಸ್ಪತ್ರೆ ಸಾಗಿಸದ ರೈಲ್ವೆ ಪೊಲೀಸರು

    ತುಮಕೂರು: ರೈಲು ನಿಲ್ಲೋದಕ್ಕೂ ಮುನ್ನವೇ ಇಳಿಯಲು ಹೋಗಿ, ಹಳಿಗೆ ಕಾಲು ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು (Tumakuru) ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಮೃತ ಯುವಕನನ್ನು ತುರುವೇಕೆರೆ ಅಮ್ಮಸಂದ್ರ ಮೂಲದ ಛಾಯಾಂಕ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಅರ್ಧ ಎಂಜಿನ್‌ ಆಪ್‌ ಸರ್ಕಾರದಿಂದ ದೆಹಲಿ ಹಾಳಾಗಿದೆ: ಚಂದ್ರಬಾಬು ನಾಯ್ಡು

    ಸೋಮವಾರ ಬೆಳಗ್ಗೆ ಯುವಕ ಪುಷ್ಪುಲ್ ಟ್ರೈನ್‌ಗೆ ಬಂದಿದ್ದ. ಈ ವೇಳೆ ರೈಲು ನಿಲ್ಲುವ ಮೊದಲು ಇಳಿಯಲು ಹೋಗಿ ಬ್ಯಾಗ್ ರೈಲಿನ ಹ್ಯಾಂಡಲ್‌ಗೆ ಸಿಲುಕಿ ಈ ಅವಘಡ ಸಂಭವಿಸಿದೆ.

    ರೈಲ್ವೆ ನಿಯಮದ ಪ್ರಕಾರ ಸಾರ್ವಜನಿಕರು ಮುಟ್ಟುವ ಹಾಗಿಲ್ಲ, ಹಾಗಾಗಿ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ಈ ವೇಳೆ ಯುವಕ ತಮ್ಮವರಿಗೆ ಕರೆ ಮಾಡಲು ಫೋನ್ ಹುಡುಕಾಡುತ್ತಿದ್ದ. ಆದರೆ 25 ನಿಮಿಷ ಕಳೆದರೂ ಗಾಯಾಳುವನ್ನು ಆಸ್ಪತ್ರೆ ಸಾಗಿಸದೆ, ಪೊಲೀಸರು ವಿಳಾಸ ಪತ್ತೆ ಮಾಡಲು ಕಾಲಹರಣ ಮಾಡಿದ್ದಾರೆ.

    ಕೊನೆಗೆ ಪೊಲೀಸರು ಸ್ಥಳಕ್ಕೆ ಬಾರದೆ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ- 253 ಪ್ರಬೇಧ ಪತ್ತೆ

  • ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಲೋಕಾಯುಕ್ತ ಬಲೆಗೆ

    ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಲೋಕಾಯುಕ್ತ ಬಲೆಗೆ

    ತುಮಕೂರು: ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆಯಿಟ್ಟ ತುರುವೇಕೆರೆ (Turuvekere) ಸರ್ಕಾರಿ ಆಸ್ಪತ್ರೆಯ ವೈದ್ಯನನ್ನು (Doctor) ಲೋಕಾಯುಕ್ತ ಪೊಲೀಸರು (Lokayukta Police) ಬಂಧಿಸಿದ್ದಾರೆ.

    ಡಾ.ಹರಿಪ್ರಸಾದ್ (44) ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದ ವೈದ್ಯಾನಾಗಿದ್ದಾನೆ. ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಹರಿಪ್ರಸಾದ್ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು 3 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಹಿಳೆ ಸಂಬಂಧಿಯೊಬ್ಬರು ದೂರು ನೀಡಿದ್ದರು. ಇದನ್ನೂ ಓದಿ: ಸಚಿವ ಪರಮೇಶ್ವರ್ ಭೇಟಿಯಾಗಿ ನಟ ಸುದೀಪ್ ಮಾತುಕತೆ

    ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ವೈದ್ಯ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಇನ್ಸ್‍ಪೆಕ್ಟರ್ ರಾಮ ರೆಡ್ಡಿ, ಸಲೀಂ ಅಹ್ಮದ್ ಹಾಗೂ ಶಿವರುದ್ರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಬ್ರಿಜ್‌ ಭೂಷಣ್‌ ಆಪ್ತ ಕುಸ್ತಿ ಅಧ್ಯಕ್ಷ: ಶೂ ಬಿಚ್ಚಿಟ್ಟು‌, ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್!

  • ಆಮ್ ಆದ್ಮಿಯಿಂದ ತುರುವೇಕೆರೆಯಲ್ಲಿ ಟೆನ್ನಿಸ್ ಕೃಷ್ಣ ಸ್ಪರ್ಧೆ

    ಆಮ್ ಆದ್ಮಿಯಿಂದ ತುರುವೇಕೆರೆಯಲ್ಲಿ ಟೆನ್ನಿಸ್ ಕೃಷ್ಣ ಸ್ಪರ್ಧೆ

    ತುಮಕೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Election) ತುರುವೇಕೆರೆ (Turuvekere) ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ (Aam Aadmi Party) ಅಭ್ಯರ್ಥಿಯಾಗಿ ಹಾಸ್ಯ ನಟ ಟೆನ್ನಿಸ್ ಕೃಷ್ಣ (Tennis Krishna) ಸ್ಪರ್ಧಿಸಲಿದ್ದಾರೆ.

    ಕಳೆದ ವರ್ಷದ ಆಗಸ್ಟ್‌ನಲ್ಲಿ ಟೆನ್ನಿಸ್ ಕೃಷ್ಣ ಎಎಪಿ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಚುನಾವಣೆ ಸಮಯದಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಅನುಭವ ಇದೆ. ಕಾಂಗ್ರೆಸ್ (Congress), ಬಿಜೆಪಿಯಿಂದ (BJP) ಆಹ್ವಾನ ಬಂದರೂ ನಾನು ಹೋಗಲಿಲ್ಲ. ಎಎಪಿ (AAP) ಮೂಲಕ ಬಡ ಕಲಾವಿದರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

    ರಂಗಭೂಮಿ ಕಲಾವಿದರು ಮತ್ತು ಸಿನಿಮಾದಲ್ಲಿನ ಪೋಷಕ ನಟರು ಅಗತ್ಯ ಸೌಲಭ್ಯಗಳು ಇಲ್ಲದೇ ಪರದಾಡುತ್ತಿದ್ದಾರೆ. ವಾಸಕ್ಕೆ ಯೋಗ್ಯವಾದ ನಿವಾಸ, ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ಎಎಪಿ ಮೂಲಕ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶವಿದೆ. ಕಷ್ಟದಲ್ಲಿರುವ ರಂಗಭೂಮಿ ಕಲಾವಿದರ ಮಕ್ಕಳ ವಿದ್ಯಾಭ್ಯಾಸ, ಕಲಾವಿದರ ಆರೋಗ್ಯಕ್ಕೆ ಇಲ್ಲಿಯವರೆಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿದ್ದೇವೆ ಎಂದರು.

    ಜೆಡಿಎಸ್‌ (JDS), ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳಿಂದ ಕಲಾವಿದರಿಗೆ ಯಾವುದೇ ನೆರವು ದೊರೆಯುತ್ತಿಲ್ಲ. ಎಲ್ಲ ಪಕ್ಷಗಳಲ್ಲಿ ಇರುವ ಸಿನಿಮಾ ನಟರೂ ಕೂಡ ಉಳಿದ ಕಲಾವಿದರಿಗೆ ಅಗತ್ಯ ಸೌಲಭ್ಯ ನೀಡಲು ಆಸಕ್ತಿ ತೋರುತ್ತಿಲ್ಲ. ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಡಿ ಇಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಶಿಂಧೆ ಬಣಕ್ಕೆ ಶಿವಸೇನೆ ಹೆಸರು – ಉದ್ಧವ್‌ಗೆ ಭಾರೀ ಹಿನ್ನಡೆ

    ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್‌, ನಗರ ಘಟಕದ ಅಧ್ಯಕ್ಷ ಮುನೀರ್‌ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್‌ ಇದ್ದರು. ಇದನ್ನೂ ಓದಿ: ಕರ್ನಾಟಕ ತಲಾ ಆದಾಯ: 2.65 ಲಕ್ಷದಿಂದ 3.01 ಲಕ್ಷಕ್ಕೆ ಏರಿಕೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಂಡ, ಮಗನನ್ನ ಪೂಜೆಗೆ ಕೂರಿಸಿ ಮಹಿಳೆ ಮೇಲೆ ಅತ್ಯಾಚಾರ ಯತ್ನ- ಪೂಜಾರಿಗೆ ಗ್ರಾಮಸ್ಥರಿಂದ ಧರ್ಮದೇಟು

    ಗಂಡ, ಮಗನನ್ನ ಪೂಜೆಗೆ ಕೂರಿಸಿ ಮಹಿಳೆ ಮೇಲೆ ಅತ್ಯಾಚಾರ ಯತ್ನ- ಪೂಜಾರಿಗೆ ಗ್ರಾಮಸ್ಥರಿಂದ ಧರ್ಮದೇಟು

    ತುಮಕೂರು: ಮನೆಯಲ್ಲಿ ಶಾಂತಿಯಿಲ್ಲ, ನೆಮ್ಮದಿಯಿಲ್ಲ, ಒಂದು ಪೂಜೆ ಮಾಡಿ ಅಂತ ಪೂಜಾರಿಯನ್ನ ಮನೆಗೆ ಕರೆಸಿದ್ರು. ಆದ್ರೆ ಅದೇ ಪೂಜಾರಿ ಮನೆಗೆ ಬಂದು ಪೂಜೆಗೆ ಕರೆಸಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದು ಗೂಸಾ ತಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅಕ್ಕಳಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗಮಂಗಲ ತಾಲೂಕಿನ ಮುಳಕಟ್ಟಮ್ಮ ದೇವಾಲಯದ ಸ್ವಯಂ ಘೋಷಿತ ಪೂಜಾರಿ, ಮಹೇಶ್ ಪೂಜಾರ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಕಳೆದ ಶುಕ್ರವಾರ ಅಕ್ಕಳಸಂದ್ರ ಗ್ರಾಮದ ಗೃಹಿಣಿ ಮನೆಗೆ ಪೂಜಾರಿ ಕಟ್ಟಲೇ ಮಾಡಲು ಬಂದಿದ್ದ. ಮೊದಲು ಮಹಿಳೆಯ ಗಂಡ ಹಾಗೂ ಮಗನನ್ನ ಕರ್ಪೂರ ಬೆಳಗುತ್ತಾ ಕುಳಿತಿರಬೇಕು ಅಂತ ಕೂರಿಸಿದ್ದಾನೆ. ನಂತರ ಗೃಹಿಣಿಗೆ ಕಟ್ಟಲೆ ಪೂಜೆ ಮಾಡಿಸೋಕೆ ಸ್ನಾನ ಮಾಡ್ಬೇಕು, ನಾನೇ ನೀರು ಹಾಕ್ಬೇಕು ಅಂತ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ವಿಷಯ ತಿಳಿಯುತ್ತಿದ್ದಂತೆ ಜೋರು ಗಲಾಟೆ ಆಗಿದೆ. ಆಮೇಲೆ ಊರಿನ ಜನರೆಲ್ಲಾ ಸೇರಿ ಪೂಜಾರಿ ಮಹೇಶ್‍ಗೆ ಚೆನ್ನಾಗಿ ಥಳಿಸಿದ್ದಾರೆ. ಕೊನೆಗೆ ಗ್ರಾಮದಲ್ಲಿ ಪಂಚಾಯ್ತಿ ಮಾಡಿ ಆರೋಪಿ ಪೂಜಾರಿಗೆ 5 ಲಕ್ಷ ದಂಡವನ್ನೂ ವಿಧಿಸಿದ್ದಾರೆ. ಆದ್ರೆ ಚೆಕ್ ಕೊಟ್ಟು ಹೋಗಿದ್ದ ಆರೋಪಿ ಹಣ ಸಂದಾಯ ಮಾಡಿಲ್ಲ. ಹೀಗಾಗಿ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಮಹೇಶ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.