Tag: ತುರುವರಕೆರರ

  • ಅಂಧನಾದ್ರೂ ಅಂದವಾದ ಬದುಕು – ದಿನಕ್ಕೆ 2 ಸಾವಿರ ತೆಂಗಿನಕಾಯಿ ಸುಲೀತಾರೆ ತುರುವೇಕೆರೆಯ ಕುಮಾರಯ್ಯ

    ಅಂಧನಾದ್ರೂ ಅಂದವಾದ ಬದುಕು – ದಿನಕ್ಕೆ 2 ಸಾವಿರ ತೆಂಗಿನಕಾಯಿ ಸುಲೀತಾರೆ ತುರುವೇಕೆರೆಯ ಕುಮಾರಯ್ಯ

    ತುಮಕೂರು: ಬದುಕುವ ಹಂಬಲ ಎಂಥವರನ್ನೂ ಎಂಥ ಕೆಲಸಕ್ಕೂ ಕರೆದೊಯ್ಯುತ್ತೆ ಅನ್ನೋದಕ್ಕೆ ಈ ವ್ಯಕ್ತಿ ಪತ್ರಕ್ಷ ಸಾಕ್ಷಿ. ಕಣ್ಣು ಕಾಣಿಸದಿದ್ದರೂ ತೆಂಗಿನ ಕಾಯಿ ಸುಲಿಯುವುದರಲ್ಲಿ ನಮ್ಮ ಇಂದಿನ ಪಬ್ಲಿಕ್ ಹೀರೋ ಎಕ್ಸ್‍ಪರ್ಟ್ ಆಗಿದ್ದಾರೆ ಅಂತಲೇ ಹೇಳಬಹುದು.

    ತುಮಕೂರಿನ ತುರುವೇಕೆರೆ ತಾಲೂಕಿನ ಹಿರೇಡೊಂಕಿಹಳ್ಳಿ ನಿವಾಸಿಯಾಗಿರೋ ಕುಮಾರಯ್ಯ ಅವರಿಗೆ ಎರಡು ಕಣ್ಣು ಕಾಣಿಸದಿದ್ದರೂ ದಿನವೊಂದಕ್ಕೆ ಬರೋಬ್ಬರಿ 2 ಸಾವಿರ ತೆಂಗಿನ ಕಾಯಿ ಸುಲೀತಾರೆ. ಒಂದು ಕಾಯಿಗೆ 40 ಪೈಸೆಯಂತೆ 800 ರೂಪಾಯಿ ಸಂಪಾದಿಸ್ತಿದ್ದಾರೆ. ಕಣ್ಣು ಕಾಣುವವರಿಗೂ ನಾಚಿಸುವಂತೆ ಸರಾಗವಾಗಿ ಒಮ್ಮೆಯೂ ದಸಿ ಚುಚ್ಚಿಸಿಕೊಳ್ಳದೆ ಕಾಯಿ ಸುಲಿಯುತ್ತಾರೆ.

    38 ವರ್ಷದ ಕುಮಾರಯ್ಯ ಹುಟ್ಟು ಕುರುಡರಲ್ಲ. 15 ವರ್ಷದ ಹಿಂದೆ ನರಸಂಬಂಧಿ ಕಾಯಿಲೆಯಿಂದ ದೃಷ್ಠಿ ಕಳೆದುಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದರೂ ಪ್ರಯೋಜನವಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ. ಕುಮಾರಯ್ಯಗೆ ಪತ್ನಿ ಮಂಜಮ್ಮ, ಇಬ್ಬರು ಮಕ್ಕಳು ಇದ್ದಾರೆ. ಯಾರಿಗೂ ಯಾವೂದಕ್ಕೂ ಕಡಿಮೆ ಇಲ್ಲದೆ ಸುಂದರವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

    https://www.youtube.com/watch?v=Gs4QWuSAauQ