Tag: ತುಮಕೂರು ವಿಶ್ವವಿದ್ಯಾಲಯ

  • ಗೌರವ ಡಾಕ್ಟರೇಟ್ ನಿರಾಕರಿಸಿದ್ದು ಯಾಕೆ ಎಂದು ಹೇಳಿ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಸುದೀಪ್

    ಗೌರವ ಡಾಕ್ಟರೇಟ್ ನಿರಾಕರಿಸಿದ್ದು ಯಾಕೆ ಎಂದು ಹೇಳಿ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಸುದೀಪ್

    ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯವು (Tumkuru University) ನಟ ಸುದೀಪ್ (Actor Sudeep) ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಡಾಕ್ಟರೇಟ್ (Doctorate) ಘೋಷಣೆ ಮಾಡಿತ್ತು. ಆದರೆ ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ಡಾಕ್ಟರೇಟ್‌ನ್ನು ನಿರಾಕರಿಸಿದ್ದರು. ಅಂದು ಸುದೀಪ್ ಅವರ ಆ ನಡೆ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ನಾನು ಅಂತದ್ದೇನು ಮಾಡಿಲ್ಲ. ಹತ್ತಾರು ಸಿನಿಮಾ ಮಾಡಿದ್ದೀನಿ ಅಷ್ಟೇ, ನಾನು ಇನ್ನೂ ಲೈಫ್‌ಲ್ಲಿ ಮಾಡೋದು ತುಂಬಾ ಇದೆ. ನನ್ನ ಪ್ರಕಾರ ನಾನು ಏನಾದರೂ ಮಾಡಿದ್ದೀನಿ ಅಂತ ಅನಿಸಿದಾಗ ನಾನೇ ಪತ್ರ ಬರೆದು ಡಾಕ್ಟರೇಟ್ ಕೊಡಿ ಎಂದು ಕೇಳ್ತೀನಿ. ಆದರೆ ಅವರು ಕೊಟ್ಟಿರುವ ಡಾಕ್ಟ್ರೇಟ್ ಮೇಲೆ ನನಗೆ ತುಂಬಾ ಗೌರವವಿದೆ ಎಂದರು.ಇದನ್ನೂ ಓದಿ: ಸಿನಿಮಾಗೆ ಬರೋಲ್ಲ, ನೋಡಲ್ಲ ಅನ್ನೋವಾಗ್ಲೆ ಗತ್ತು ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ: ದರ್ಶನ್‌ ಫ್ಯಾನ್ಸ್‌ಗೆ ಕಿಚ್ಚನ ಖಡಕ್‌ ರಿಪ್ಲೈ

    ಸೆ.2 ರಂದು ಮ್ಯಾಕ್ಸ್ ರಿಲೀಸ್ (Max Release) ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು. ಅದೇ ದಿನ ತನ್ನ ಹುಟ್ಟು ಹಬ್ಬ ಇರುವ ಕಾರಣ, ಅದೇ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮನೆಯ ಬಳಿ ಯಾರೂ ಬರ್ತ್ ಡೇ ಆಚರಿಸೋದು ಬೇಡ. ವರ್ಷ ಕಳೆದ ಹಾಗೇ ಮನೆಯ ಬಳಿ ಸೇರುವ ಅಭಿಮಾನಿಗಳು ಜಾಸ್ತಿಯಾಗುತ್ತಿದ್ದಾರೆ. ನನ್ನ ಅಕ್ಕ-ಪಕ್ಕದ ಮನೆಯವರಿಗೆ ಸಮಸ್ಯೆಯಾಗುತ್ತದೆ. ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಈ ಬಾರಿಯ ಬರ್ತ್ ಡೇ ಪ್ಲ್ಯಾನ್‌ ಮಾಡಲಾಗಿದೆ. ಅಂದು ಬೆಳಗ್ಗೆ 10 ರಿಂದ 12 ರವರೆಗೆ ಸಮಯ ಇದೆ. ಆದರೆ ಎಲ್ಲರನ್ನೂ ಮೀಟ್ ಮಾಡುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

    ಕಳೆದ ವರ್ಷ ತುಂಬಾ ಅನಾನುಕೂಲ ಉಂಟಾಗಿ ಬ್ಯಾರಿಕೇಡ್ ಒಡೆದು ಹೋಯಿತು. ಈ ಬಾರಿ ಅದೇ ರೀತಿ ಆಗೋದು ಬೇಡ. ಬರ್ತ್ ಡೇ ದಿನ ಸಿನಿಮಾ ಅನೌನ್ಸ್ ಮಾಡ್ತೀನಿ. ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಸೆ.2ಕ್ಕೆ ಮ್ಯಾಕ್ಸ್ ಅಂತ ಸುದ್ದಿ ಹರಿದಾಡ್ತಿತ್ತು ಅವತ್ತೇ ಬರುತ್ತಾ? ಬರಲ್ವಾ ? ಅನ್ನೋದು ಹೇಳಕ್ಕೂ ಸಾಧ್ಯ ಇಲ್ಲ. ಸದ್ಯದಲ್ಲೇ ಈ ವಿಷಯದ ಬಗ್ಗೆ ಸ್ಷಷ್ಟನೆ ನೀಡುತ್ತೇವೆ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳು ಸೆ.2 ರಂದು ಸುದೀಪ್ ಅವರ ಸಿನಿಮಾಗೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಹೊರಬರಲಿದೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

  • ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ತುಮಕೂರು: ಇಲ್ಲಿನ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ನಿರಾಕರಿಸಿದ್ದಾರೆ.

    ವಿವಿಯ 10 ನೇ ಘಟಿಕೋತ್ಸವದ ಅಂಗವಾಗಿ ಇಬ್ಬರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ವಿವಿ ಸಿಂಡಿಕೇಟ್ ನಿರ್ಧರಿಸಿತ್ತು. ಪವಾಡ ರಹಸ್ಯ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಮತ್ತು ಧಾರ್ಮಿಕ ಕ್ಷೇತ್ರದಿಂದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿತ್ತು.

    ಈ ಇಬ್ಬರಿಗೆ ಡಾಕ್ಟರೇಟ್ ನೀಡಲು ರಾಜ್ಯಪಾಲ ವಿಆರ್ ವಾಲಾ ಅನುಮೋದನೆ ಕೂಡಾ ಮಾಡಿದ್ದರು. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂಬ ಕಾರಣ ನೀಡಿ, ಸಿದ್ಧಲಿಂಗ ಸ್ವಾಮೀಜಿ ಡಾಕ್ಟರೇಟ್ ಪಡೆಯದಿರಲು ನಿರ್ಧರಿಸಿದ್ದಾರೆ.

    ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ದ್ರಾವಿಡ್, ಕ್ರಿಕೆಟ್ ಆಡಿದ್ದಕ್ಕೆ ಡಾಕ್ಟರೇಟ್ ಪದವಿ ನೀಡುವುದು ಬೇಡ. ಕ್ರಿಕೆಟ್‍ಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಪ್ರಬಂಧ ಮಂಡಿಸಿ ನಾನು ಡಾಕ್ಟರೇಟ್ ಪದವಿಯನ್ನು ಪಡೆಯುತ್ತೇನೆ ಎಂದು ವಿವಿಗೆ ತಿಳಿಸಿ ಗೌರವ ಡಾಕ್ಟರೇಟ್ ನಿರಾಕಸಿದ್ದರು.