Tag: ತುಮಕೂರು

  • ನವೆಂಬರ್ 14ರ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸುರೇಶ್ ಗೌಡ

    ನವೆಂಬರ್ 14ರ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸುರೇಶ್ ಗೌಡ

    – ಕಾಂಗ್ರೆಸ್ ಪಕ್ಷವನ್ನು ಅವರ ಶಾಸಕರೇ ಹಾದಿಬೀದಿಯಲ್ಲಿ ಟೀಕಿಸುತ್ತಿದ್ದಾರೆ
    – ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ

    ತುಮಕೂರು: ನವೆಂಬರ್ 14ಕ್ಕೆ ಬಿಹಾರ ಚುನಾವಣೆ (Bihar Election) ನಡೆಯುತ್ತದೆ. ಫಲಿತಾಂಶ ಬಂದ ನಂತರ ಕಾಂಗ್ರೆಸ್ (Congress) ಸರ್ಕಾರ ಪತನ ಆಗುತ್ತದೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ (Suresh Gowda) ಹೇಳಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತಾಡಿ, ಫಂಡಿಂಗ್ ಮಾಡಿ 138 ಸ್ಥಾನ ಗಳಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ವಾಡಿಕೆಯಂತೆ ಅವರೇ ಸಿಎಂ ಆಗಬೇಕಿತ್ತು ಎಂದು ಡಿಕೆಶಿ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಡಿಕೆಶಿ ಅವರ ತಾಖತ್‌ನಿಂದ ಫಂಡ್ ಮೊಬಿಲೈಜ್ ಮಾಡಿರೋದ್ರಿಂದ, ಪರಿಶ್ರಮ ಹಾಕಿರೋದ್ರಿಂದ ಸರ್ಕಾರ ಬಂದಿದೆ. ಆದರೆ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಏನಾದರೂ ಫಂಡಿಂಗ್ ಮಾಡಿದ್ರಾ? ಹಣ ಕೊಟ್ಟರ‍್ಯಾರು ಡಿಕೆಶಿ ಅಲ್ಲವೇ? ಡಿಕೆ ಶಿವಕುಮಾರ್ ಪರಿಶ್ರಮಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಈಗಲೂ ಸಿದ್ದರಾಮಯ್ಯ ಡಿಕೆಶಿಯನ್ನು ಸಿಎಂ ಮಾಡಬಾರದು ಎಂದು ತಂತ್ರ ರೂಪಿಸುತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮಾತ್ರ ತಾನು ನೂರಕ್ಕೆ ನೂರು ಸಿಎಂ ಆಗುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಡಿಕೆಶಿ, ಜಾರಕಿಹೊಳಿ ಅಲ್ಲ.. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಸಿಎಂ ಆಗ್ತಾರೆ: ಯತ್ನಾಳ್ ಬಾಂಬ್

    ಆಗಾಗ ಕೊಕ್ಕೆ ಹಾಕುವ ಸಿದ್ದರಾಮಯ್ಯ, ಜಿ ಪರಮೇಶ್ವರ್, ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ.ಪಾಟೀಲ್‌ಗೆ ನೀವುಗಳೇ ಸಿಎಂ ಆಗಿ ಎಂದು ಎತ್ತಿಕಟ್ಟುತ್ತಿದ್ದಾರೆ. ಸಿದ್ದರಾಮಯ್ಯರ ಎಲ್ಲಾ ಸ್ಟ್ರಾಟಜಿ ಡಿ.ಕೆ.ಶಿವಕುಮಾರ್‌ಗೆ ಗೊತ್ತಾಗಿದೆ. ಇಬ್ಬರು ಮೇಲ್ನೋಟಕ್ಕೆ ಚೆನ್ನಾಗಿದ್ದವರಂತೆ ಕಾಣುತ್ತಾರೆ. ಆದರೆ ಸಿದ್ದರಾಮಯ್ಯ ಡಿಕೆಶಿಯನ್ನು ಗೋಡೆಗೆ ತಳ್ಳಿ ಬಕಾ, ಬಕಾ ಎಂದು ದಿನಕ್ಕೊಬ್ಬರನ್ನು ಬಿಟ್ಟು ಬಾಕ್ಸಿಂಗ್ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಮಾತ್ರ ದೇವರ ಥರ ನಿಂತುಕೊಂಡಿದ್ದಾರೆ. ಏನೇ ಇದ್ದರೂ ನವೆಂಬರ್ 14ರ ಬಳಿಕ ಈ ಸರ್ಕಾರ ಪತನ ಆಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

  • ಕೋರ್ಟ್‌ನಲ್ಲಿ ದಂಡ ಕಟ್ಟುತ್ತೇನೆ ಎಂದಿದ್ದಕ್ಕೆ ಒಪ್ಪದ ಪೊಲೀಸರು – ಸವಾರ, ಟ್ರಾಫಿಕ್ ಪೊಲೀಸರ ನಡುವೆ ವಾಗ್ವಾದ

    ಕೋರ್ಟ್‌ನಲ್ಲಿ ದಂಡ ಕಟ್ಟುತ್ತೇನೆ ಎಂದಿದ್ದಕ್ಕೆ ಒಪ್ಪದ ಪೊಲೀಸರು – ಸವಾರ, ಟ್ರಾಫಿಕ್ ಪೊಲೀಸರ ನಡುವೆ ವಾಗ್ವಾದ

    – ಬೈಕ್‌ ಸವಾರನನ್ನು ವಶಕ್ಕೆ ಪಡೆದು ಎಫ್‌ಐಆರ್‌

    ತುಮಕೂರು: ಮಿರರ್ (Mirror) ಇಲ್ಲದೆ ಬಂದ ಬೈಕ್ ಸವಾರ ಹಾಗೂ ಟ್ರಾಫಿಕ್ ಪೊಲೀಸರ (Traffic Police) ನಡುವೆ ದಂಡ (Penalty) ಕಟ್ಟುವ ವಿಚಾರವಾಗಿ ವಾಗ್ವಾದ ನಡೆದಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ತುಮಕೂರಿನ ರಿಂಗ್ ರಸ್ತೆಯಲ್ಲಿ ಹರ್ಷ ಎಂಬ ಯುವಕ ಬೆಂಗಳೂರಿಂದ ಅರಸಿಕೆರೆಗೆ ಬೈಕಲ್ಲಿ ಹೋಗುತಿದ್ದ. ಯುವಕನ ಬೈಕ್‌ಗೆ ಎರಡೂ ಮಿರರ್ ಇರಲಿಲ್ಲ. ಹೀಗಾಗಿ ರಿಂಗ್ ರಸ್ತೆಯಲ್ಲಿ ನಗರ ಪೂರ್ವ ಸಂಚಾರಿ ಮಹಿಳಾ ಪಿಎಸ್‌ಐ ಸ್ಪಾಟ್ ಫೈನ್ ಹಾಕಿದ್ದಾರೆ. ಆದರೆ ಯುವಕ ತನ್ನ ಬಳಿ ಹಣ ಇಲ್ಲ, ರಶೀದಿ ಕೊಡಿ ಕೋರ್ಟ್‌ನಲ್ಲಿ ಕಟ್ಟುತ್ತೇನೆ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ. ಒಪ್ಪದ ಪೊಲೀಸರು ಸ್ಥಳದಲ್ಲೇ ದಂಡ ಕಟ್ಟಬೇಕು ಎಂದು ತಾಕೀತು ಮಾಡಿದ್ದಾರೆ. ಇದರಿಂದ ಪೊಲೀಸರು ಮತ್ತು ಸವಾರನ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಕುರ್ಚಿ ಕದನ, ಅಭಿವೃದ್ಧಿ ಪತನ – 6 ತಿಂಗಳಲ್ಲಿ ಕೇವಲ ಶೇ.30ರಷ್ಟು ಮಾತ್ರ ಪ್ರಗತಿ

    ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಅಂತ ಯುವಕ ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾನೆ. ಇದರಿಂದಾಗಿ ಸುಮಾರು ಅರ್ಧ ಕಿ.ಮೀ ದೂರದಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾರ್ವಜನಿಕರಿಗೆ ತೊಂದರೆ ಆದ ಹಿನ್ನೆಲೆ ಜಯನಗರ ಪೊಲೀಸರು ಹರ್ಷನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

  • ಸ್ನೇಹಿತನೊಂದಿಗೆ ಸಲುಗೆ ಕಂಡು 4 ಮಕ್ಕಳ ತಾಯಿಯ ಹತ್ಯೆ – ಕೊಂದು ಅದೇ ಗೆಳೆಯನ ಜೊತೆ ಎಸ್ಕೇಪ್ ಆಗಿದ್ದ ಲವ್ವರ್‌ ಅರೆಸ್ಟ್

    ಸ್ನೇಹಿತನೊಂದಿಗೆ ಸಲುಗೆ ಕಂಡು 4 ಮಕ್ಕಳ ತಾಯಿಯ ಹತ್ಯೆ – ಕೊಂದು ಅದೇ ಗೆಳೆಯನ ಜೊತೆ ಎಸ್ಕೇಪ್ ಆಗಿದ್ದ ಲವ್ವರ್‌ ಅರೆಸ್ಟ್

    – ರಾಗಿ ಮುದ್ದೆ ತಿರುಗಿಸುವ ಕೋಲಿನಿಂದ ಕೊಲೆ ಮಾಡಿದ್ದ ಪಾಪಿ ಪ್ರಿಯಕರ
    – ಕೊಲೆಗೆ ಮುನ್ನ ಕುಡಿದು ಮಜಾ ಮಾಡಿದ್ದ ಮೂವರು

    ಬೆಂಗಳೂರು: ತಿಲಕ್ ನಗರದ (Tilak Nagar) ಆಟೋ ಒಂದರಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ನೇಹಿತನೊಂದಿಗೆ ಸಲುಗೆಯಿಂದ ಇರುವುದನ್ನು ಕಂಡು ಮಹಿಳೆಯನ್ನು ಮುದ್ದೆ ತಿರುಗಿಸುವ ಕೋಲಿನಿಂದ ಹತ್ಯೆ ಮಾಡಿ, ಬಳಿಕ ಅದೇ ಗೆಳೆಯನ ಜೊತೆ ಲವ್ವರ್ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

    ಮೃತ ಮಹಿಳೆಯನ್ನು ಸಲ್ಮಾ (35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ಸುಬ್ಬುಮಣಿ ಹಾಗೂ ಸೆಂಥಿಲ್ ಎನ್ನಲಾಗಿದೆ.ಇದನ್ನೂ ಓದಿ:ಜಗಳವಾಡಿ ನಾಲ್ಕು ಮಕ್ಕಳ ತಾಯಿಯ ಹತ್ಯೆಗೈದ ಲವ್ವರ್ – ಕೆಟ್ಟು ನಿಂತಿರೋ ಆಟೋದಲ್ಲಿ ಹೆಣ ಬಿಸಾಕಿ ಎಸ್ಕೇಪ್

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮೃತ ಸಲ್ಮಾಗೆ ಮದುವೆಯಾಗಿ, ನಾಲ್ವರು ಮಕ್ಕಳಿದ್ದರು. ಗಂಡ ಮೃತಪಟ್ಟ ಬಳಿಕ ಆರೋಪಿ ಸುಬ್ಬುಮಣಿ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಆದರೆ ಸುಬ್ಬಮಣಿ ಗೆಳೆಯ ಸೆಂಥಿಲ್ ಮೃತ ಸಲ್ಮಾ ಜೊತೆಗೆ ಸಲುಗೆಯಿಂದಿದ್ದ. ಇದನ್ನು ಕಂಡ ಸುಬ್ಬಮಣಿ ಕೋಪಗೊಂಡು, ರಾಗಿಮುದ್ದೆ ತಿರುಗಿಸುವ ಕೋಲಿನಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಆದರೆ ಕೊಲೆಗೆ ಮುನ್ನ ಮೂವರು ಸೇರಿಕೊಂಡು ಕುಡಿದು ಮಜಾ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಸಲ್ಮಾ ಮೃತದೇಹವನ್ನು ಕೆಟ್ಟು ನಿಂತಿದ್ದ ಆಟೋ ಒಂದರಲ್ಲಿ ಹಾಕಿ, ಬಳಿಕ ಸೆಂಥಿಲ್ ಹಾಗೂ ಸುಬ್ಬುಮಣಿ ಸೇರಿಕೊಂಡು ನಡೆದುಕೊಂಡು ಮೆಜೆಸ್ಟಿಕ್‌ಗೆ ಹೋಗಿ ಅಲ್ಲಿಂದ ತುಮಕೂರಿಗೆ (Tumakuru) ಎಸ್ಕೇಪ್ ಆಗಿದ್ದರು. ಬಳಿಕ ಪಾಂಡಿಚೇರಿ ಹೋಗುವ ಪ್ಲ್ಯಾನ್‌ ಮಾಡಿಕೊಂಡಿದ್ದರು. ಪೊಲೀಸರು ಆರೋಪಿಗಳ ಪತ್ತೆಗಿಳಿದಾಗ ಮೊಬೈಲ್ ಲೊಕೇಶನ್ ತುಮಕೂರಿನಲ್ಲಿ ಪತ್ತೆಯಾಗಿತ್ತು. ಕೂಡಲೇ ಡಿಸಿಪಿ ಸಾರಾ ಫಾತಿಮಾ ತುಮಕೂರಿನ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದರು.

    ಇತ್ತ ತುಮಕೂರು ಪೊಲೀಸರು ಆರೋಪಿಗಳಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಮೃತ ಸಲ್ಮಾ ಉಗುರು ಹಾಗೂ ಬಟ್ಟೆಯಲ್ಲಿ ರಕ್ತ ಪತ್ತೆಯಾಗಿತ್ತು. ಇದನ್ನು ಪರಿಶೀಲನೆ ನಡೆಸಿದಾಗ ಇವರೇ ಆರೋಪಿಗಳು ಎನ್ನುವುದು ತಿಳಿದುಬಂದಿದೆ.

    ಕೂಡಲೇ ತಿಲಕ ನಗರ ಪೊಲೀಸರು ತುಮಕೂರಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಪತಿಯ ಚಿತ್ರಹಿಂಸೆ ತಾಳಲಾರದೇ 3ನೇ ಮಹಡಿಯಿಂದ ಜಿಗಿದ ಮಹಿಳೆ

  • ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

    ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

    ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಯರೇಕಟ್ಟೆ ಗ್ರಾಮದ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಇಂದು ಸಂಜೆ ಸಾವನ್ನಪ್ಪಿದ್ದಾರೆ.

    ಯರೇಕಟ್ಟೆ ಗ್ರಾಮದ ವೆಂಕಟೇಶ್ (47), ಮಗಳು ಶ್ರಾವ್ಯ (12) ಹಾಗೂ ವೆಂಕಟೇಶ್ ಅಣ್ಣನ ಮಗನ ಮಗಳು ಪುಣ್ಯ (11) ಮೃತ ದುರ್ದೈವಿಗಳು. ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ಅವಘಡ – ಬೆಂಗ್ಳೂರಲ್ಲಿ 68 ಮಂದಿ ಕಣ್ಣಿಗೆ ಗಾಯ

    ಸಂಜೆ 6 ಗಂಟೆಗೆ ಗ್ರಾಮದ ಬಳಿಯ ಕೆರೆ ಕಡೆ ಮೂವರು ಹೋಗಿದ್ದಾರೆ. ಕೆರೆಯಲ್ಲಿ ನೀರು ಮುಟ್ಟಲು ಹೋಗಿ ಶ್ರಾವ್ಯ ಹಾಗೂ ಪುಣ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಮತ್ತೊಬ್ಬಳು ಬುದ್ಧಿಮಾಂದ್ಯಳಾಗಿದ್ದು ಮನೆಗೆ ಬಂದು ಕೆರೆಗೆ ಬಿದ್ದಿರುವ ವಿಷಯ ತಿಳಿಸಿದ್ದಾರೆ. ಕೂಡಲೇ ವೆಂಕಟೇಶ್ ಹಾಗೂ ಮಂಜುನಾಥ್ ರಕ್ಷಣೆಗೆ ತೆರಳಿದ್ದಾರೆ. ಈ ವೇಳೆ ವೆಂಕಟೇಶ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ವೆಂಕಟೇಶ್ ಹಾಗೂ ಶ್ರಾವ್ಯ ಮೃತಪಟ್ಟಿದ್ದರೆ, ಪುಣ್ಯ ಹುಳಿಯಾರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಬ್ರಹ್ಮಾಸ್ತ್ರ – ಶೀಘ್ರದಲ್ಲೇ ಮಿಸೈಲ್ ಸಾಮರ್ಥ್ಯ 800 ಕಿಮೀಗೆ ಹೆಚ್ಚಳ

  • ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ – ಮನೆ, ಜಮೀನುಗಳಿಗೆ ನುಗ್ಗಿದ ನೀರು

    ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ – ಮನೆ, ಜಮೀನುಗಳಿಗೆ ನುಗ್ಗಿದ ನೀರು

    – ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ರಾಜ್ಯದಲ್ಲಿ ಮಳೆ (Rain) ಆರ್ಭಟ ಮತ್ತೆ ಮುಂದುವರಿದಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಜನತೆಗೆ ಮಳೆರಾಯ ಕೊಂಚ ಬೇಸರ ತರಿಸಿದ್ದಾನೆ. ಹಾಸನ, ಚಿಕ್ಕಮಗಳೂರು, ಉಡುಪಿ ಸೇರಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸತತ ಮಳೆಯಿಂದ ಬೆಳೆನಾಶವಾಗಿದ್ದು, ಬೆಳೆ ಕಳೆದುಕೊಂಡ ರೈತರು ಕಣ್ಣೀರಿಡುವಂತೆ ಮಾಡಿದೆ.

    ಹಾಸನ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಬಹುತೇಕ ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬಾರಿ ಮಳೆಯಿಂದ ಕೆರೆಯ ಕೋಡಿ ಒಡೆದು ನೂರಾರು ಎಕರೆ ಪ್ರದೇಶದ ರೈತರ ಜಮೀನುಗಳು ಜಲಾವೃತಗೊಂಡಿವೆ. ಅಡಿಕೆ, ತೆಂಗಿನ ತೋಟ, ಹೊಲ, ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.

    ಅರಸೀಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಶಂಕರಲಿಂಗಪ್ಪ ಎಂಬವರ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ತೇಲಿವೆ. ಹೊಳೆನರಸೀಪುರ ಪಟ್ಟಣದ, ಕಾರ್ಖಾನೆ ಬೀದಿಯಲ್ಲಿರುವ ಮಂಜು ಎಂಬವರ ಮನೆಗೂ ನೀರು ನುಗ್ಗಿ ಅಪಾರ ಹಾನಿ ಆಗಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಳೆಗೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿದು ಹೊಲ, ಗದ್ದೆಗಳು ಜಲಾವೃತವಾಗಿವೆ.

    ಅರಸೀಕೆರೆ ತಾಲೂಕಿನಲ್ಲೂ ಮಳೆ ಅಬ್ಬರಿಸಿದ್ದು, ಮಳೆನೀರು ಆಸ್ಪತ್ರೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರೋಗಿಗಳು ಬೆಡ್‌ನಿಂದ ಕೆಳಗೆ ಇಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ರೋಗಿಗಳ ಕಡೆಯವರು ನೀರಿನಲ್ಲೇ ನಿಲ್ಲಬೇಕಾಗಿದೆ.

    ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನವನ್ನ ಅಸವ್ಯಸ್ತಗೊಳಿಸಿದೆ. ದೀಪಾವಳಿ ಹಬ್ಬದಂದೇ ಅಬ್ಬರಿಸಿದ ಮಳೆಗೆ ಮಲೆನಾಡು ಜನರು ಹೈರಾಣಾಗಿದ್ದಾರೆ. ಜಿಲ್ಲೆಯ ಕಳಸ, ಹೊರನಾಡು, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗಿದ್ದು. ಹಳ್ಳದಂತಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ವಾಹನ ಸವಾರರು ಪರದಾಡಿದ್ದಾರೆ.

    ಕರಾವಳಿ ಜಿಲ್ಲೆ ಉಡುಪಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಗೆ ಉಡುಪಿ ಜನರು ಹೈರಾಣಾಗಿದ್ದಾರೆ. ಬಿರುಗಾಳಿ ಸಹಿತ ಮಳೆಯಾದ ಕಾರಣ. ಜಿಲ್ಲೆಯ ವಿವಿಧೆಡೆ ವಿದ್ಯುತ್‌ನಲ್ಲಿ ವ್ಯತ್ಯಯವಾಗಿದೆ.

    ತುಮಕೂರು ಜಿಲ್ಲಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಜನಜೀವನಕ್ಕೆ ಬ್ರೇಕ್ ಹಾಕಿದೆ. ತಿಪಟೂರಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆಗೆ ನುಗ್ಗಿದ ಮಳೆ ನೀರು ಕೃತಕ ಕೆರೆ ಸೃಷ್ಟಿಸಿದೆ. ಕೆರೆಯಂತಾದ ಅಂಡರ್‌ಪಾಸ್‌ನಲ್ಲಿ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣ ಮಾಡಿದೆ. ಅವೈಜ್ಞಾನಿಕ ಕಾಮಗಾರಿಗೆ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

    ಇನ್ನು ಚಿತ್ರದುರ್ಗ ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ಶೀತ ಹೆಚ್ಚಾಗಿ ಹೂವಿನ ಗಿಡಗಳು ಕೊಳೆರೋಗಕ್ಕೆ ತುತ್ತಾಗಿ ಕೊಳೆಯುತ್ತಿವೆ. ದೀಪಾವಳಿಗೆ ಭರ್ಜರಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರು ಕಂಗಲಾಗಿದ್ದಾರೆ. ಮಳೆಯಿಂದಾಗಿ ಸಕಾಲಕ್ಕೆ ಹೂವು ಕೊಯ್ಲು ಮಾಡಲಾಗದೇ ಕಲರ್ ಫುಲ್ ಸೆಂಟಿಲ್ ಹೂವು ಜಮೀನಲ್ಲೇ ಕೊಳೆಯುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನರು ಹೈರಾಣಾಗಿದ್ದಾರೆ.

  • ಕುಣಿಗಲ್‌ ಫ್ಲೈಓವರ್‌ನಲ್ಲಿ ಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ

    ಕುಣಿಗಲ್‌ ಫ್ಲೈಓವರ್‌ನಲ್ಲಿ ಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ

    ನೆಲಮಂಗಲ: ತುಮಕೂರು ಬೆಂಗಳೂರು (Tumakuru- Bengaluru) ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ತಪ್ಪಿಸಲು ಹೋಗಿ ಕಾರು ಎರಡು ಪಲ್ಟಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ (Kunigal) ಬೈಪಾಸ್ ಫ್ಲೈಓವರ್‌ ರಸ್ತೆಯಲ್ಲಿ ನಡೆದಿದೆ.

    ಕಾರಿನಲ್ಲಿದ್ದ ಆರು ಮಂದಿ ಪವಾಡ ಎಂಬಂತೆ ಪಾರಾಗಿದ್ದು ಸಣ್ಣಪುಟ್ಟ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲಮಂಗಲ (Nelamangala) ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರು ದುರ್ಮರಣ

     

    ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಅಪಘಾತವಾಗಿ ಸಾವು ನೋವುಗಳ ಪ್ರಕರಣಗಳು ಸಂಭವಿಸುತ್ತಲೇ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ತೊಂದರೆ ಅನುಭವಿಸುವಂತಾಗಿದೆ.

    ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಚಿವರು, ಶಾಸಕರು, ಅಧಿಕಾರಿಗಳು ಸಂಚಾರ ಮಾಡುತ್ತಿದ್ದು ಯಾರಿಗೂ ಅರಿವಿಗೆ ಬಾರದೇ ಇರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

  • ಈದ್ಗಾ ಮೈದಾನ ಬಳಿ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ, ಪರ್ಮಿಷನ್ ತಗೋತಾರ ಅವ್ರು?: ಕೆ.ಎನ್.ರಾಜಣ್ಣ

    ಈದ್ಗಾ ಮೈದಾನ ಬಳಿ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ, ಪರ್ಮಿಷನ್ ತಗೋತಾರ ಅವ್ರು?: ಕೆ.ಎನ್.ರಾಜಣ್ಣ

    ತುಮಕೂರು: ಆರ್‌ಎಸ್‌ಎಸ್‌ಗೆ (RSS) ಅಂಕುಶ ಹಾಕಲು ಹೊರಟಿದ್ದ ಸರ್ಕಾರದ ಧೋರಣೆಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ‌

    ತುಮಕೂರಿನಲ್ಲಿ (Tumakuru) ಮಾತನಾಡಿದ ರಾಜಣ್ಣ, ಈದ್ಗಾ ಮೈದಾನದಲ್ಲಿ ನಮಾಜ್ ಮಾಡುವಾಗ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ. ಹಾಗಾದರೆ ಅವರೆಲ್ಲ ಪರ್ಮಿಷನ್ ತಗೊಂಡೇ ಅಲ್ಲಿ ನಮಾಜ್ ಮಾಡ್ತಾರಾ ಎಂದು ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾಳೆ RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್‌, ಬಂಟಿಂಗ್‌ ತೆರವು

    ಪರ್ಮಿಷನ್ ಕೊಡಿ ಅಂತ ಅವ್ರು ಬರಲ್ಲಾ. ಅಥವಾ ಪರ್ಮಿಷನ್ ತಗೊಳಿ ಅಂತ ನಾವು ಕೇಳೋದಿಲ್ಲ. ಹೀಗಾಗಿ, ಜಾರಿ ಮಾಡಲು ಸಾಧ್ಯವಾಗುವಂತಹ ಕಾನೂನನ್ನು ಮಾತ್ರ ತರಬೇಕು. ಅದನ್ನು ಬಿಟ್ಟು ಜಾರಿ ಮಾಡಲಾಗದ ಕಾನೂನು ತಂದ್ರೆ ಪುಸ್ತಕದಲ್ಲಿ ಇರಬೇಕು ಅಷ್ಟೇ ಎಂದು ಆರ್‌ಎಸ್‌ಎಸ್‌ಗೆ ನಿರ್ಬಂಧ ಹಾಕುವ ಸರ್ಕಾರದ ಧೋರಣೆಗೆ ರಾಜಣ್ಣ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

    ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಆಗಲಿ ಬೇರೆ ಯಾವುದೇ ಸಂಘಟನೆ ಆಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಅಂತ ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ಜಾರಿ ಆಗುತ್ತೆ ಎನ್ನುವುದನ್ನು ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಲಿಂಗಾಯತ ಧರ್ಮದ ಬಗ್ಗೆ ಅವಹೇಳನ; ಬಾಗಲಕೋಟೆ ತೊರೆಯುವಂತೆ ಕನ್ನೇರಿ ಶ್ರೀಗಳಿಗೆ ನೊಟೀಸ್!

  • ಬಿಹಾರ ಎಲೆಕ್ಷನ್ ತನಕ ಸುಮ್ಮನಿದ್ದುಬಿಡಿ: ರಾಜಣ್ಣ ಮಾರ್ಮಿಕ ನುಡಿ

    ಬಿಹಾರ ಎಲೆಕ್ಷನ್ ತನಕ ಸುಮ್ಮನಿದ್ದುಬಿಡಿ: ರಾಜಣ್ಣ ಮಾರ್ಮಿಕ ನುಡಿ

    ತುಮಕೂರು: ಬಿಹಾರ ಎಲೆಕ್ಷನ್‌ವರೆಗೂ (Bihar Election) ಸುಮ್ಮನೆ ಇದ್ದು ಬಿಡಿ, ಬಿಹಾರ ಎಲೆಕ್ಷನ್ ಕಳೆದು ಹೋಗಲಿ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ಮಾರ್ಮಿಕವಾಗಿ ನುಡಿದಿದ್ದಾರೆ.

    ತುಮಕೂರಿನಲ್ಲಿ (Tumakuru) ಮಾಧ್ಯಮದವರು, ಮತ್ತೆ ನೀವು ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆವರೆಗೂ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ. ಕೆಎನ್ ರಾಜಣ್ಣರ ಈ ಮಾತಿನ ಮರ್ಮ ಹಲವು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಅಲ್ಲದೇ ಸಿಎಂ ಸಿದ್ದರಾಮಯ್ಯರ (Siddaramaiah) ಬಗ್ಗೆ ನನಗೆ ವಿಶ್ವಾಸ ಇದೆ ಎಂದೂ ಮತ್ತೆ ಮಂತ್ರಿಗಿರಿ ಸಿಗಬಹುದು ಅನ್ನೋದನ್ನೂ ಪರೋಕ್ಷವಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಕೊಡಿ ಎಂದು ನಾನು ಕೇಳಿರಲಿಲ್ಲ. 2018 ರಲ್ಲಿ ನಾನು ಸೋತಾಗ ಸಿಎಂ ಸಿದ್ದರಾಮಯ್ಯ ಹೇಳಿದ್ರು ನೀನು ಗೆದ್ದರೆ ಮಿನಿಸ್ಟರ್ ಆಗ್ತಿದ್ದೆ ಕಣಯ್ಯಾ, ನಿನ್ನ ಬದಲು ತುಕಾರಂನನ್ನು ಮಾಡಿದೆ ಎಂದು ಹೇಳಿದರು. ಈ ಬಾರಿ ಅವರೇ ಕರೆದು ಸಚಿವ ಸ್ಥಾನ ಕೊಟ್ಟರು ಎಂದರು. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಅರೆಸ್ಟ್

    ಹೈಕಮಾಂಡ್‌ಗೆ ಸತ್ಯದ ಅರಿವಾಗಿದ್ಯಾ ಎಂಬ ಪ್ರಶ್ನೆಗೂ ಉತ್ತರಿಸಿದ ರಾಜಣ್ಣ, ಎಲ್ಲವೂ ಬಿಹಾರ ಎಲೆಕ್ಷನ್ ಕಳೆದ ಮೇಲೆಯೇ ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ

  • ಹೆಣ್ಣು ಮಗುವಿಗೆ ಜನ್ಮ ನೀಡಿದ 15ರ ಬಾಲಕಿ – ರೇಪ್‌ ಆರೋಪಿ ಅರೆಸ್ಟ್‌

    ಹೆಣ್ಣು ಮಗುವಿಗೆ ಜನ್ಮ ನೀಡಿದ 15ರ ಬಾಲಕಿ – ರೇಪ್‌ ಆರೋಪಿ ಅರೆಸ್ಟ್‌

    ತುಮಕೂರು: 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ವಿನಯ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಕಿ ಮತ್ತು ಯುವಕ ಅಕ್ಕಪಕ್ಕದ ಮನೆಯ ನಿವಾಸಿಗಳು. ‘ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ವಿನಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಕೋರಿ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಕುಣಿಗಲ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಮಗಳ ಆರೋಗ್ಯ ಸರಿ ಇಲ್ಲದಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆಗ 8 ತಿಂಗಳ ಗರ್ಭಿಣಿ ಎಂಬುವುದು ಗೊತ್ತಾಯಿತು. ಆಕೆಯನ್ನು ವಿಚಾರಿಸಿದಾಗ ಎಲ್ಲ ವಿಷಯ ಹೇಳಿದಳು. ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ತುಮಕೂರು ದಸರಾ – ಜಂಬೂ ಸವಾರಿ ಸಂಪನ್ನ

    ತುಮಕೂರು ದಸರಾ – ಜಂಬೂ ಸವಾರಿ ಸಂಪನ್ನ

    ತುಮಕೂರು: ತುಮಕೂರಿನ ಎರಡನೇ ವರ್ಷದ ದಸರಾ (Tumakuru Dasara) ವಿಜೃಂಭಣೆಯಿಂದ ನಡೆಯಿತು. ಅಂಬಾರಿ ಹೊತ್ತ ಆನೆ ಶ್ರೀರಾಮ ಶಾಂತತೆಯಿಂದ ಹೆಜ್ಜೆ ಹಾಕಿ ಎಲ್ಲರ ಕಣ್ಮನ ಸೆಳೆಯಿತು.

    ಮಧ್ಯಾಹ್ನ 12 ಗಂಟೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ನಂದಿ ಧ್ವಜಕ್ಕೆ ಪೂಜೆ ನೆರವೇರಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು, 50ಕ್ಕೂ ಹೆಚ್ಚು ದೇವರುಗಳು, ಪೊಲೀಸ್ ಕುದುರೆ ಸವಾರಿ, ನಾಟಿ ಎತ್ತುಗಳ ಮೆರವಣಿಗೆಯು ನಗರದ ಬಿಜಿಎಸ್ (ಟೌನ್ ಹಾಲ್ ವೃತ್ತ) ವೃತ್ತದಿಂದ ಪ್ರಾರಂಭಗೊಂಡಿತು. ಇದನ್ನೂ ಓದಿ: 5 ವರ್ಷದ ಬಳಿಕ ಭಾರತ, ಚೀನಾ ಮಧ್ಯೆ ನೇರ ವಿಮಾನ ಸೇವೆ ಆರಂಭ

    ಎರಡು ಲಕ್ಷ್ಮಿ ಆನೆಗಳ ಜೊತೆ ಅಂಬಾರಿ ಹೊತ್ತು ಬಂದ ಶ್ರೀರಾಮ ಆನೆಯ ಮೇಲೆ ನಾಡದೇವತೆಗೆ ಗೃಹ ಸಚಿವ ಪರಮೇಶ್ವರ್ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಸೋಯಾಬಿನ್, ಶೇಂಗಾ ಖರೀದಿ: ನೋಂದಣಿ, ಖರೀದಿ ಏಕಕಾಲಕ್ಕೆ ಆರಂಭಿಸಲು ಶಿವಾನಂದ ಪಾಟೀಲ್ ಸೂಚನೆ

    ಅಂಬಾರಿ ಮೆರವಣಿಗೆಯು ಬಿಜಿಎಸ್ ವೃತ್ತದಿಂದ ಕೋಟೆ ಆಂಜನೇಯ ಸ್ವಾಮಿ ಸರ್ಕಲ್‌ನಿಂದ ಕೋತಿತೋಪು, ಅಲ್ಲಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್‌ನಿಂದ ನಗರದ ಹೈಸ್ಕೂಲ್ ಮೈದಾನವನ್ನು ತಲುಪಿತು. ಇದನ್ನೂ ಓದಿ: Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ