Tag: ತುಮಕುರು

  • Tumakuru| 4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ – ಹೃದಯಾಘಾತದಿಂದ ವ್ಯಕ್ತಿ ಸಾವು

    Tumakuru| 4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ – ಹೃದಯಾಘಾತದಿಂದ ವ್ಯಕ್ತಿ ಸಾವು

    ತುಮಕೂರು: ಮೈಕ್ರೋ ಫೈನಾನ್ಸ್‌ನಿಂದ (Micro Finance) ಸಾಲ ಪಡೆದಕ್ಕಿಂತ ಹೆಚ್ಚು ಬಡ್ಡಿಯನ್ನೇ (Interest) ಕಟ್ಟಿ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ ಸಾವಿಗಿಡಾದ ವ್ಯಕ್ತಿ. ಇವರು ಫೈಸ್ ಸ್ಟಾರ್ ಫೈನಾನ್ಸ್‌ನಿಂದ 2019ರಲ್ಲಿ 4.66 ಮನೆ ಸಾಲ ಪಡೆದಿದ್ದರು. 2024 ಮೇವರೆಗೆ ಬರೊಬ್ಬರಿ 7.20 ಲಕ್ಷ ಬಡ್ಡಿ ಕಟ್ಟಿದ್ದರು. ಆದರೆ ಅಸಲು ಹಾಗೆಯೇ ಉಳಿದಿತ್ತು. ಮತ್ತೆ ಅಸಲು ಕಟ್ಟುವಂತೆ ಫೈನಾನ್ಸ್‌ನವರು ಕಿರುಕುಳ ಕೊಡುತ್ತಿದ್ದರು. ಈ ಕಿರುಕುಳ ತಾಳಲಾರದೆ ಹೃದಯಾಘಾತದಿಂದ ಸಮೀವುಲ್ಲಾ ಮೇ ತಿಂಗಳಲ್ಲಿ ಸಾವಿಗೀಡಾಗಿದ್ದಾರೆ. ಇವರಿಗೆ ಸುಮಾರು 24.55 % ಬಡ್ಡಿ ಹಾಕಲಾಗಿತ್ತು. ಇದನ್ನೂ ಓದಿ: Kolar| ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಸರ್ಕಾರಿ ಬಸ್ ಚಾಲನೆ – ವೀಡಿಯೋ ವೈರಲ್

    ಈಗ ಫೈನಾನ್ಸ್‌ನವರು ಸಮೀವುಲ್ಲಾ ಮನೆಗೆ ಬಂದು ಅವರ ಪತ್ನಿ ಬಳಿ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಪತಿಯಂತೆ ನಾನೂ ಮಕ್ಕಳೊಂದಿಗೆ ಸಾಯಬೇಕಾಗುತ್ತದೆ ಎಂದು ಪತ್ನಿ ತಬಸಮ್ ಬಾನು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರು| ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಅವಘಡ

     

  • ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇವೆ: ಶ್ರೀರಾಮುಲು

    ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇವೆ: ಶ್ರೀರಾಮುಲು

    ತುಮಕುರು: ಜನರ ಜೀವವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪಾವಗಡದಿಂದ ತುಮಕೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‍ಗಳನ್ನು ರದ್ದು ಮಾಡುತ್ತೇವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಖಾಸಗಿ ಬಸ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳನ್ನು ನಾನು ತನಿಖೆಗೆ ಕಳುಹಿಸಿಕೊಟ್ಟಿದ್ದೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ನನಗೆ ಬಂದಿರುವ ವರದಿಯ ಪ್ರಕಾರ ಲೋಡ್ ಹೆಚ್ಚಾಗಿತ್ತು ಎನ್ನಲಾಗಿದೆ. ಬಸ್ ಟಾಪ್ ಮೇಲೆ ಕೂಡಾ ಜನರು ಕುಳಿತುಕೊಂಡಿದ್ದರು. ಈ ವೇಳೆ ಬಸ್ ಯಾವ ಸ್ಪೀಡ್‍ನಲ್ಲಿ ಓಡಿಸಬೇಕು ಎನ್ನುವ ಜ್ಞಾನ ಚಾಲಕನಿಗೆ ಇರಬೇಕಾಗಿತ್ತು. ಚಾಲಕನೊಬ್ಬನಿಗೆ ಶಿಕ್ಷೆ ಆಗಬೇಕಾದದ್ದು ಅಲ್ಲ, ಖಾಸಗಿ ಬಸ್ ಮಾಲೀಕರು ಇದಕ್ಕೆ ಹೊಣೆಯಾಗಿರುತ್ತಾರೆ. ಆ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡಿದರೆ ಮಾತ್ರ ಅವರಿಗೆ ಬುದ್ದಿ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಮೂರು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

    ಇಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಹೊಣೆ ಯಾರು? ಬೇಜವಬ್ದಾರಿತನದಿಂದ ಕಾನೂನನ್ನು ಉಲ್ಲಂಘಿಸಲು ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ. ನಾನು ಆ ಭಾಗದಲ್ಲಿ ಸಂಚರಿಸುವ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇನೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಖಾಸಗಿ ಅವರು ಬದುಕಬೇಕು. ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದ ಭಾಗಗಳಿಗೆ ಸಂಚರಿಸಬೇಕು. ಅವರು ಸರ್ಕಾರದ ನಿಯಮಾನುಸಾರ ಸಂಚರ ಮಾಡಬೇಕು. ಆದರೆ ಕೇವಲ ಲಾಭದಾಯಕ ಕಾರಣದಿಂದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಜನರ ಪ್ರಾಣಕ್ಕೆ ಕುತ್ತು ತರುವಂತೆ ಮಾಡಿದರೆ, ಕ್ಷಮಿಸುವ ಮಾತಿಲ್ಲ ಎಂದು ಖಾಸಗಿ ಬಸ್ ಮಾಲೀಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ವಿಧಾನಸಭೆ ಟಿಕೆಟ್ ಆಕಾಂಕ್ಷಿತರ ಮಧ್ಯೆ ಫೈಟ್- ಬೀದಿಯಲ್ಲಿ ಬಡಿದಾಡಿಕೊಂಡ ಕಾಂಗ್ರೆಸ್ಸಿಗರು

    ವಿಧಾನಸಭೆ ಟಿಕೆಟ್ ಆಕಾಂಕ್ಷಿತರ ಮಧ್ಯೆ ಫೈಟ್- ಬೀದಿಯಲ್ಲಿ ಬಡಿದಾಡಿಕೊಂಡ ಕಾಂಗ್ರೆಸ್ಸಿಗರು

    – ಮಹಿಳಾ ಆಕಾಂಕ್ಷಿತರ ಮೇಲೆ ದೌರ್ಜನ್ಯ

    ತುಮಕೂರು: ವಿಧಾನಸಭೆ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ತುಮಕೂರು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರಲ್ಲಿ ಈಗ ಜಟಾಪಟಿ ಶುರುವಾಗಿದೆ. ತುರುವೇಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗೀತಾ ರಾಜಣ್ಣ ಅವರ ಮೇಲೆ ವಸಂತಕುಮಾರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.

    ಕಳೆದ ಗುರುವಾರ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ವಸಂತಕುಮಾರ್ ಬೆಂಬಲಿಗರು ಹಲ್ಲೆ ನಡೆಸಿದ ವಿಡಿಯೋ ಈಗ ಬಹಿರಂಗವಾಗಿದೆ. ತಾಲೂಕು ಯೂತ್ ಕಾಂಗ್ರೆಸ್ ಚುನಾಚಣೆಯಲ್ಲಿ ಗೀತಾ ರಾಜಣ್ಣ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ ವಸಂತಕುಮಾರ್ ಬೆಂಬಲಿಗರು ಗೀತಾ ರಾಜಣ್ಣರ ಮೇಲೆ ಹಲ್ಲೆ ನಡೆಸಿದ್ದಾರೆ.

    ಹತ್ತಾರು ಯುವಕರ ಗುಂಪಿನ ದಾಳಿಯಿಂದಾಗಿ ಗೀತಾ ಅಲ್ಲೇ ಕುಸಿದುಬಿದ್ದಿದ್ದಾರೆ. ಬಳಿಕ ಅಲ್ಲಿದ್ದ ಇತರೆ ಕಾರ್ಯಕರ್ತರು ನೀರು ಕೊಟ್ಟು ಸಮಾಧಾನ ಮಾಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ಲಕ್ಷ್ಮೀ ನಾರಾಯಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದ ಸಮಾರಂಭದಲ್ಲಿ ಓರ್ವ ಮಹಿಳಾ ಆಕಾಂಕ್ಷಿತರ ಮೇಲೆ ದೌರ್ಜನ್ಯ ನಡೆದಿದೆ.

    https://youtu.be/UTZVn2T7ZfE