Tag: ತುಟಿ

  • ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ – ಪೊಲೀಸಪ್ಪನ ಮೂಗು, ಕಿವಿ, ತುಟಿ ಕಟ್

    ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ – ಪೊಲೀಸಪ್ಪನ ಮೂಗು, ಕಿವಿ, ತುಟಿ ಕಟ್

    ಇಸ್ಲಾಮಬಾದ್: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ಪೊಲೀಸ್ ಕಿವಿ, ತುಟಿ ಮತ್ತು ಮೂಗನ್ನು ಕಟ್ ಮಾಡಿದ ಸುದ್ದಿಯೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

    ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯಲ್ಲಿ ಆರೋಪಿ ಮುಹಮ್ಮದ್ ಇಫ್ತಿಕರ್ ತನ್ನ ಸಹಚರರೊಂದಿಗೆ ಪೊಲೀಸ್ ಕಾನ್‍ಸ್ಟೆಬಲ್ ಖಾಸಿಂ ಹಯಾತ್‍ಗೆ ತೀವ್ರ ಚಿತ್ರಹಿಂಸೆ ಕೊಟ್ಟಿದ್ದಾನೆ. ನಂತರ ಆತನ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ

    ಇಫ್ತಿಕಾರ್, ಹಯಾತ್‍ಗೆ ತನ್ನ ಪತ್ನಿಗೆ ಬ್ಯಾಕ್‍ಮೇಲ್ ಮಾಡುತ್ತಿರುವುದು ತಿಳಿದು ಕಳೆದ ತಿಂಗಳು ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಆದರೆ ಅದರಿಂದ ಏನು ಪ್ರಯೋಜನವಾಗಿಲ್ಲ. ಅದಕ್ಕೆ ಇಫ್ತಿಕಾರ್, 12 ಮಂದಿ ಸಹಚರರೊಂದಿಗೆ ಸೇರಿಕೊಂಡು ಹಯಾತ್ ಮನೆಗೆ ಹಿಂದಿರುಗುತ್ತಿದ್ದಾಗ ಆತನನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆತನಿಗೆ ತೀವ್ರ ಚಿತ್ರಹಿಂಸೆ ನೀಡಿ ನಂತರ ಆತನ ದೇಹದ ಭಾಗಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ತಿಂಗಳು, ಪಾಕಿಸ್ತಾನ ದಂಡ ಸಂಹಿತೆಯ(ಪಿಪಿಸಿ) ಸೆಕ್ಷನ್ 354(ಮಹಿಳೆಯ ಮೇಲೆ ಹಲ್ಲೆ), 384 (ಸುಲಿಗೆ) ಮತ್ತು 292(ಅಶ್ಲೀಲತೆ) ಅಡಿಯಲ್ಲಿ ಕಾನ್‍ಸ್ಟೆಬಲ್ ಹಯಾತ್ ವಿರುದ್ಧ ಇಫ್ತಿಕರ್ ಪ್ರಕರಣ ದಾಖಲಿಸಿದ್ದ.

    POLICE JEEP

    ಆಸಲಿ ಕಾರಣವೇನು?
    ಹಯಾತ್ ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾಗ ನನ್ನ ಹೆಂಡತಿಯನ್ನು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ. ಮಗನಿಗಾಗಿ ಆಕೆ ಹಯಾತ್‍ನನ್ನು ಭೇಟಿಯಾದಾಗ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿದ್ದ. ಈ ವೇಳೆ ಆತ ಕೃತ್ಯದ ವೀಡಿಯೋ ಮಾಡಿ ನನ್ನ ಪತ್ನಿಗೆ ಬ್ಲಾಕ್‍ಮೇಲ್ ಮಾಡಲು ಆರಂಭಿಸಿದ್ದ ಎಂದು ಇಫ್ತಿಕರ್ ದೂರಿನಲ್ಲಿ ತಿಳಿಸಿದ್ದ. ಇದನ್ನೂ ಓದಿ: ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ

    Rajasthan: Woman arrested for killing husband by slitting his throat - India News

    ಪೊಲೀಸರು ಈ ಕುರಿತು ಮಾತನಾಡಿದ್ದು, ಹಯಾತ್‍ನನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಜಾಂಗ್‍ಗೆ ರವಾನಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಪ್ರಸ್ತುತ ನಾವು ಆರೋಪಿ ಇಫ್ತಿಕರ್ ಮತ್ತು ಆತನ ಸಹಚರರನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡನ ಮನೆಗೆ ಬರಲೊಪ್ಪದ ಪತ್ನಿಯ ತುಟಿ, ಮೂಗು ಕತ್ತರಿಸಿದ..!

    ಗಂಡನ ಮನೆಗೆ ಬರಲೊಪ್ಪದ ಪತ್ನಿಯ ತುಟಿ, ಮೂಗು ಕತ್ತರಿಸಿದ..!

    ಬೆಳಗಾವಿ: ತವರು ಮನೆಯಿಂದ ಗಂಡನ ಮನೆಗೆ ಬರಲು ಒಪ್ಪದ ಪತ್ನಿಯ ತುಟಿ ಹಾಗೂ ಮೂಗನ್ನು ಕತ್ತರಿಸಿ ಪಾಪಿ ಪತಿ ವಿಕೃತಿ ಮೆರೆದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುನಿತಾ ಸುರೇಶ್ ನಾಯಿಕ್(27) ಅವರು ಪತಿ ಸುರೇಶ್ ಪರಶುರಾಮ್ ನಾಯಿಕ್ ನಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ.

    ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೆಡಶ್ಯಾಳ ಗ್ರಾಮದ ನಿವಾಸಿ ಸುರೇಶ್ ಜೊತೆ ಸುನಿತಾಗೆ 2 ವರ್ಷದ ಹಿಂದೆ ವಿವಾಹವಾಗಿತ್ತು. ಆದ್ರೆ ಮದುವೆಯಾದಾಗಿನಿಂದ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿತ್ತು. ಹೀಗಾಗಿ ಸುನಿತಾ ತನ್ನ ತವರು ಮನೆಗೆ ಹೋಗಿದ್ದರು.

    ಪತ್ನಿ ತವರು ಮನೆಗೆ ಹೋಗಿ ವಾಪಸ್ಸಾಗದಿದ್ದರಿಂದ ಆಕೆಯನ್ನು ಕರೆದುಕೊಂಡು ಬರಲೆಂದು ಸುರೇಶ್, ಭಾನುವಾರ ಪತ್ನಿ ಮನೆಗೆ ತೆರಳಿದ್ದ. ಈ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ಸುರೇಶ್, ಸುನಿತಾ ಅವರ ತುಟಿ ಹಾಗೂ ಮೂಗನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಸುನಿತಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.


    ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ರೇಕಪ್ ಎಂದಿದ್ದಕ್ಕೆ ಪ್ರೇಯಸಿಯ ತುಟಿ ಕಚ್ಚಿ ಬಿಸಾಕಿದ ಪಾಗಲ್ ಪ್ರೇಮಿ

    ಬ್ರೇಕಪ್ ಎಂದಿದ್ದಕ್ಕೆ ಪ್ರೇಯಸಿಯ ತುಟಿ ಕಚ್ಚಿ ಬಿಸಾಕಿದ ಪಾಗಲ್ ಪ್ರೇಮಿ

    ವಾಷಿಂಗ್ಟನ್: ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಆತ ಆಕೆಯ ತುಟಿ ಕಚ್ಚಿ ಬಿಸಾಕಿದ ಪ್ರಕರಣವೊಂದು ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ನಡೆದಿದೆ.

    ಕಾಯಲಾ ಒಂದು ವರ್ಷದ ಹಿಂದೆ ನಡೆದ ಘಟನೆಯನ್ನು ಈಗ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನೆಟ್ಟಿಗರು ಮಾಜಿ ಪ್ರಿಯಕರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಪ್ರಕರಣ ದಾಖಲಾಗಿ ಕೋರ್ಟ್ ಈಗ ಆರೋಪಿ ಹಾರೂನ್ ಫ್ಲೇರಿಗೆ 12 ವರ್ಷ ಜೈಲು ಶಿಕ್ಷೆ ನೀಡಿದೆ.

    ಪೋಸ್ಟ್ ನಲ್ಲಿ ಏನಿದೆ?
    2016ರಲ್ಲಿ ಶ್ರೀಮಂತ ವ್ಯಕ್ತಿಯ ಮಗ ಹಾರೂನ್ ಫ್ಲೇರಿ ಜೊತೆ ನಾನು ಡೇಟಿಂಗ್ ಮಾಡುತ್ತಿದ್ದೆ. ಆಗ ನನಗೆ ಕೇವಲ 17 ವರ್ಷವಾಗಿತ್ತು. 1 ವರ್ಷ ಲಿವಿಂಗ್ ರಿಲೇಷನ್ ಬಳಿಕ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂತು.

    ಫ್ಲೇರಿ ನನ್ನನ್ನು ಆತನ ಆಸ್ತಿಯಂತೆ ಉಪಯೋಗಿಸಿಕೊಳ್ಳುತ್ತಿದ್ದ. ನನಗೆ ಇದು ತುಂಬಾ ಬೇಗ ಅನುಭವವಾಯಿತು. ಫ್ಲೇರಿ ಕೆಟ್ಟ ಉದ್ದೇಶದಿಂದ ನನ್ನ ಹತ್ತಿರ ಬರುತ್ತಿದ್ದನು. ಆತ ನನ್ನನ್ನು ಎಂದಿಗೂ ಪ್ರೀತಿಸಲಿಲ್ಲ. ನನ್ನನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದನು. ಆತ ಚಿಕ್ಕ- ಚಿಕ್ಕ ವಿಷಯಕ್ಕೂ ನನ್ನ ಮೇಲೆ ಕೋಪ ಮಾಡಿಕೊಂಡು ಜಗಳವಾಡುತ್ತಿದ್ದನು. ಹಾಗಾಗಿ ನಾನು ಆತನ ಜೊತೆ ಬ್ರೇಕಪ್ ಮಾಡಿಕೊಂಡೆ.

    ಬ್ರೇಕಪ್ ಆಗಿ ಕೆಲವು ವಾರದ ನಂತರ ಫ್ಲೇರಿ ನನ್ನನ್ನು ಭೇಟಿಯಾಗಲು ಬಂದಿದ್ದ. ನಾನು ಆತನನ್ನು ಭೇಟಿಯಾಗಲು ನಿರಾಕರಿಸಿದೆ. ಆದರೆ ಅವನು ಕಾರಿನಲ್ಲಿ ಬಂದು ನನ್ನ ಮನೆಯ ಹೊರಗೆ ನನಗಾಗಿ ಕಾಯುತ್ತಿದ್ದ. ಆತನನ್ನು ನೋಡಿ ನನಗೆ ಸ್ವಲ್ಪ ಹೆದರಿಕೆ ಆಯಿತು. ಆ ದಿನ ಒಂದು ಕೈಯಲ್ಲಿ ಹೂಗುಚ್ಚ ಹಾಗೂ ಕಾರ್ಡ್ ಹಿಡಿದುಕೊಂಡು ನಿಂತಿದ್ದ ಫ್ಲೇರಿ ಕಾರ್ಡ್ ನಲ್ಲಿ ‘ವಾಪಸ್ ಬಾ’ ಎಂದು ಬರೆದು ನನ್ನ ಹತ್ತಿರ ಮನವಿ ಮಾಡಿಕೊಂಡಿದ್ದ.

    ಆತನ ಮನವಿಯನ್ನು ತಿರಸ್ಕರಿಸಿ ಹೋದಾಗ ಆತ ನನ್ನನ್ನು ಜೋರಾಗಿ ಎಳೆದು ಆತನ ಹಲ್ಲಿನಿಂದ ನನ್ನ ತುಟಿಯನ್ನು ಕಚ್ಚಿದ. ಕಚ್ಚಿದ ತೀವ್ರತೆಗೆ ತುಟಿ ಹರಿದು ಕೆಳಗೆ ಬಿತ್ತು. ಇದನ್ನು ನೋಡಿ ಸಂತಸಗೊಂಡ ಆತ, ನಿನ್ನ ಮುಂದಿನ ಬಾಯ್‍ಫ್ರೆಂಡ್‍ಗಾಗಿ ಈ ಗುರುತನ್ನು ಮಾಡಿದ್ದೇನೆ ಎಂದು ಹೇಳಿ ಕೃತ್ಯದ ಬಗ್ಗೆ ಸಮರ್ಥನೆ ನೀಡಿದ. ನಾನು ನೋವಿನಲ್ಲಿ ಅಳುತ್ತಿದ್ದಾಗ ಆತ ಜೋರಾಗಿ ನಗುತ್ತಿದ್ದ. ಬಳಿಕ ಆತ ಅಲ್ಲಿಂದ ಹೊರಟು ಹೋದನು.

    ನಾನು ನೋವಿನಲ್ಲೇ ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಕೊಂಡೆ. ಈಗ ವೈದ್ಯರು 300 ಹೊಲಿಗೆ ಹಾಕಿ ತುಟಿಯನ್ನು ಸರಿ ಮಾಡಿದ್ದಾರೆ. ನನ್ನ ನೋವಿನ ಕಥೆ ಕೇಳಿದ ಆಸ್ಪತ್ರೆ ಸಿಬ್ಬಂದಿ ಬ್ಲೇಕ್ ನನಗೆ ಧೈರ್ಯ ತುಂಬಿದರು. ಅವರ ಉತ್ತಮ ಮನಸ್ಸಿಗೆ ನಾನು ಸೋತು ಈಗ ಅವರನ್ನೇ ಪ್ರೀತಿಸುತ್ತೇನೆ ಎಂದು ಕಾಯಲಾ ಎಫ್‍ಬಿಯಲ್ಲಿ ಹೇಳಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv