Tag: ತುಕಾಲಿ ಸಂತೋಷ್‌

  • Bigg Boss: ದೊಡ್ಮನೆಯಲ್ಲಿ ಮತ್ತೆ ಕಿರಿಕ್- ತುಕಾಲಿ ಸಂತೂಗೆ ವಿನಯ್ ಅವಾಜ್

    Bigg Boss: ದೊಡ್ಮನೆಯಲ್ಲಿ ಮತ್ತೆ ಕಿರಿಕ್- ತುಕಾಲಿ ಸಂತೂಗೆ ವಿನಯ್ ಅವಾಜ್

    ಬಿಗ್ ಬಾಸ್ ಮನೆಯ (Bigg Boss Kannada 10) ಆಟ ನೂರು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಫಿನಾಲೆ ಹಂತ ತಲುಪೋಕೆ ಕೌಂಟ್‌ಡೌನ್ ಶುರುವಾಗಿದೆ. ಹೀಗಿರುವಾಗ ಟಾಸ್ಕ್‌ಗಾಗಿ ವಿನಯ್ ಮತ್ತು ತುಕಾಲಿ ಸಂತೂ ನಡುವೆ ಕಿರಿಕ್ ಆಗಿದೆ. ವಿನಯ್ (Vinay Gowda) ಅವಾಜ್ ಹಾಕಿದ್ರೆ, ಅಷ್ಟೇ ಖಡಕ್ ಆಗಿ ತುಕಾಲಿ ಸಂತೂ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:Annapoorni: ರಾಮನ ಕುರಿತು ವಿವಾದಾತ್ಮಕ ಡೈಲಾಗ್- ಕೊನೆಗೂ ಮೌನ ಮುರಿದ ನಯನತಾರಾ

    ವಾರಾಂತ್ಯ ಸಮೀಪ ಬಂದ ಹಾಗೆ ಎಲಿಮಿನೇಷನ್ ತೂಗುಗತ್ತಿಯಡಿಯಲ್ಲಿ ಸ್ಪರ್ಧಿಗಳೆಲ್ಲ ನಡುಗುತ್ತಿದ್ದಾರೆ. ಒಬ್ಬರನ್ನೊಬ್ಬರು ಮಣಿಸಲು, ಹಣಿಯಲು ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇದು ಪರಸ್ಪರ ದೂಷಣೆಗೂ, ಜಗಳಕ್ಕೂ ಎಡೆ ಮಾಡಿಕೊಡುತ್ತಿದೆ. ಅದರ ಒಂದು ಝಲಕ್ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

    ಮನೆಯ ಕ್ಯಾಪ್ಟನ್ ಸಂಗೀತಾ, ಈ ಟಾಸ್ಕ್ ಯಾರು ಆಡುತ್ತಿಲ್ಲವೋ ಅವರು ನೆಕ್ಸ್ಟ್ ಟಾಸ್ಕ್ ಆಡಿ ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತುಕಾಲಿ ಸಂತೋಷ್ ಅವರು, ವೋಟಿಂಗ್ ಅಂತ ಸ್ಟಾರ್ಟ್ ಮಾಡಿದ್ರಿ. ಹೋಗ್ತಾ ಹೋಗ್ತಾ ಈಗ ಯಾರಿಗೆ ಅವಕಾಶ ಸಿಗಲ್ವೋ ಅವರು ಆಡಬೇಕು ಅಂತಿರಾ ಇಲ್ಲಿ ವೋಟಿಂಗ್‌ನಿಂದಾನೇ ಎಲ್ಲಾನೂ ಆಗಬೇಕು ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾರೆ.

    ತುಕಾಲಿ ಸಂತೋಷ್ ಮಾತಿಗೆ ಸಿಟ್ಟಿಗೆದ್ದಿರುವ ವಿನಯ್ ತುಕಾಲಿ (Tukali Santhosh) ಜೊತೆಗೆ ಜಗಳಕ್ಕಿಳಿದಿದ್ದಾರೆ. ಏನ್ ಮಾಡ್ತೀಯಾ ನೀನು? ಜೋರಾಗಿ ಮಾತಾಡಿದ ತಕ್ಷಣ ಏನೂ ಕಿತ್ಕೊಳಕ್ಕಾಗಲ್ಲ ಇಲ್ಲಿ. ನೀನು ಫಸ್ಟ್ ಡೇನಿಂದ ಏನು ಮಾಡ್ಕೊಂಡ್ ಬಂದಿದ್ಯಾ ಅಂತ ಎಲ್ಲರಿಗೂ ಗೊತ್ತು ಎಂದು ಕಿರುಚಾಡಿದ್ದಾರೆ. ತುಕಾಲಿ ಕೂಡ ಜಗ್ಗದೇ ಅವರಷ್ಟೇ ಎತ್ತರದ ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಾರೆ.

    ವರ್ತೂರು ಸಂತೋಷ್ ಅವರು, ಅಂಥ ಪದಗಳನ್ನೆಲ್ಲ ಬಳಸಬೇಡಿ ಇಲ್ಲಿ. ಅವರವರ ಗತ್ತು ಅವರವರಿಗೆ ಗೊತ್ತು ಎಂದು ತಮ್ಮದೇ ಸ್ಟೈಲಿನಲ್ಲಿ ಹೇಳಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಯೊಳಗೆ ಮಾಡು ಇಲ್ಲವೇ ಮಡಿ ಎಂಬ ಇದೀಗ ಹೋರಾಟ ಶುರುವಾಗಿರುವುದಂತೂ ಖಚಿತ. ಇದರಲ್ಲಿ ಯಾರು ಗೆಲ್ತಾರೆ. ಯಾರು ಸೋತು ಗೇಟ್‌ಪಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ವಾರಾಂತ್ಯದ ಎಪಿಸೋಡ್‌ನಲ್ಲಿ ಕಾದುನೋಡೇಕು.

  • ತುಕಾಲಿ ಕಳಪೆ, ಜೈಲಿಗಟ್ಟಿದ ಮನೆಮಂದಿ

    ತುಕಾಲಿ ಕಳಪೆ, ಜೈಲಿಗಟ್ಟಿದ ಮನೆಮಂದಿ

    ಬಿಗ್‌ಬಾಸ್ ಮನೆ (Bigg Boss Kannada 10) ಫಿನಾಲೆಯ ಕ್ಷಣಗಣನೆಯಲ್ಲಿ ತೊಡಗಿದೆ. ಅದರ ನಡುವೆಯೇ ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದೆ. ಅದರ ಝಲಕ್ ಹೇಗಿತ್ತು ಎನ್ನುವುದು ಬಿಡುಗಡೆ ಮಾಡಿರುವ ಜಿಯೋ ಸಿನಿಮಾ ಪ್ರೋಮೊದಲ್ಲಿ ಜಾಹೀರಾಗಿದೆ.

    ಕಳಪೆ ಅನ್ನು ನಾನು ತುಕಾಲಿ ಸಂತೋಷ್ ಅವರಿಗೆ ಕೊಡುತ್ತೇನೆ ಎಂದು ಪ್ರತಾಪ್ (Drone Prathap) ಹೇಳಿದ್ದಾರೆ. ಅವರ ಹಾಗೆಯೇ ಮನೆಯ ಹಲವು ಸದಸ್ಯರು ತುಕಾಲಿ ಅವರ ಹೆಸರನ್ನೇ ಹೇಳಿರುವುದರಿಂದ ತುಕಾಲಿ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ. ಇದನ್ನೂ ಓದಿ:ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿದ ದೇವದಾಸ್ ಕಾಪಿಕಾಡ್

    ಆದರೆ ವೋಟಿಂಗ್ ನಂತರದಲ್ಲಿ ವರ್ತೂರು ಸಂತೋಷ್ ಮತ್ತು ಪ್ರತಾಪ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಇಂಥ ವೇದಿಕೆ ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು ಎಂದಿರುವ ವರ್ತೂರು, ನಿನ್ನನ್ನು ಯಾರೂ ನಂಬುವುದಿಲ್ಲ ಎಂದೂ ಪ್ರತಾಪ್‌ಗೆ ತಿವಿದಿದ್ದಾರೆ.

    ಅಷ್ಟೇ ಅಲ್ಲ, ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು ಎಂದೂ ವರ್ತೂರು ಹೇಳಿದ್ದಾರೆ. ಹಾಗಾದರೆ ವರ್ತೂರು ಈ ಮಾತು ಹೇಳಿದ್ದು ಬಿಗ್‌ಬಾಸ್ ಶೋ (Bigg Boss) ಬಗ್ಗೆಯಾ ಅಥವಾ ಜೈಲುಪಾಲಾದ ತುಕಾಲಿ ಸಂತೋಷ್ ಬಗ್ಗೆಯಾ? ಈ ವಾರದ ಉತ್ತಮ ಪಟ್ಟ ಯಾರಿಗೆ ಸಿಕ್ಕಿದೆ? ಯಾರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ? ಮುಂದಿನ ವಾರದ ಕ್ಯಾಪ್ಟನ್ ಯಾರಾಗಿರುತ್ತಾರೆ? ಎಪಿಸೋಡ್ ನೋಡಬೇಕಿದೆ.

  • ಸುದೀಪ್‌ ಕಾಲೆಳೆದ ತುಕಾಲಿ..!

    ಸುದೀಪ್‌ ಕಾಲೆಳೆದ ತುಕಾಲಿ..!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತುಕಾಲಿ ಸಂತುಗೆ ಮಾತಲ್ಲೇ ಚಾಟಿಯೇಟು ಬೀಸಿದ ಕಿಚ್ಚ ಸುದೀಪ್

    ತುಕಾಲಿ ಸಂತುಗೆ ಮಾತಲ್ಲೇ ಚಾಟಿಯೇಟು ಬೀಸಿದ ಕಿಚ್ಚ ಸುದೀಪ್

    ದೊಡ್ಮನೆಯಲ್ಲಿ ಕಂಟೆಸ್ಟೆಂಟ್ ಪೈಕಿ, ಪಕ್ಕಾ ಎಂಟರ್‌ಟೈನರ್ ಅಂದರೆ, ಅದು ತುಕಾಲಿ ಸಂತು. ಇಡೀ ಮನೆಯನ್ನು ಲವಲವಿಕೆಯಲ್ಲಿ ಇಟ್ಟ ಹೆಗ್ಗಳಿಕೆ ಸಂತು ಅವರದ್ದು. ತಮಾಷೆ ಮಾಡ್ತಾ, ಡೈಲಾಗ್ ಹೇಳ್ತಾ, ಮಿಮಿಕ್ರಿ ಮಾಡ್ತಾ ನೋಡುಗರಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ನಡೆಯೇ ಅವರಿಗೆ ಮುಳುವಾಗಿದೆ. ಇಂದು ನಡೆದ ಕಿಚ್ಚನ ಪಂಚಾಯತಿಯಲ್ಲಿ, ಸುದೀಪ್ ಅವರು ಸಂತು ಮೇಲೆ ಹರಿಹಾಯ್ದಿದ್ದಾರೆ. ಒಬ್ಬರ ವ್ಯಕ್ತಿತ್ವವನ್ನು ಕೊಲ್ಲೋಕೆ ನಿಮಗೆ ಅಧಿಕಾರ ಕೊಟ್ಟೋರು ಯಾರು? ಎಂದು ನೇರವಾಗಿಯೇ ಸಂತುಗೆ ಸುದೀಪ್ (Kichcha Sudeep) ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

    ಬಿಗ್ ಬಾಸ್ (Bigg Boss Kannada) ಶುರುವಾಗಿ ಇಂದಿಗೆ ಸರಿಯಾಗಿ ಒಂದು ವಾರ ಕಳೆದಿದೆ. ಮೊದಲ ಕಿಚ್ಚನ ಪಂಚಾಯತಿ ಕೂಡ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಮತ್ತು ಪಂಚಾಯತಿಯಲ್ಲಿ ಹೆಚ್ಚು ಚರ್ಚೆಗೆ ಕಾರಣರಾಗಿದ್ದು ಡ್ರೋನ್ ಪ್ರತಾಪ್. ವಾರವೀಡಿ ಬಿಗ್ ಬಾಸ್ ಮನೆಗೆ ಬಹುತೇಕ ಸದಸ್ಯರು ಡ್ರೋನ್ ಪ್ರತಾಪ್ ಅವರ ಮೇಲೆ ಮುಗಿಬಿದ್ದಿದ್ದರು. ಅವರ ಡ್ರೋನ್ ಸಾಧನೆಯನ್ನು ಅನುಮಾನದಿಂದ ನೋಡಿದ್ದರು. ಕ್ಷಣ ಕ್ಷಣಕ್ಕೂ ಅಪಮಾನ ಮಾಡಿದ್ದರು. ಪ್ರತಾಪ್ (Drone Prathap) ತಿರುಗಿ ಬೀಳಲಿಲ್ಲ ಅನ್ನುವ ಕಾರಣಕ್ಕಾಗಿ ಅದು ನಿರಂತರವಾಗಿ ನಡೆದಿತ್ತು. ಅದಕ್ಕೆ ಸುದೀಪ್ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

    ವಿನಯ್ ಗೌಡ, ತುಕಾಲಿ ಸಂತು (Tukali Santhosh) ಅಂಡ್ ಗ್ಯಾಂಗ್ ಪದೇ ಪದೇ ಡ್ರೋನ್ ಪ್ರತಾಪ್ ಅವರನ್ನು ಕೆಣಕಿದೆ. ಕೀಳು ಮಟ್ಟದಲ್ಲಿ ಜರಿದಿದೆ. ಆ ಹುಡುಗನ ಸಾಧನೆಯನ್ನು ಕೆಳಮಟ್ಟದಲ್ಲಿ ನೋಡಿದೆ. ವೈಯಕ್ತಿಕ ನಿಂದನೆ ಮಾಡಿದೆ. ಖಾಸಗಿ ವಿಚಾರವನ್ನು ಆಡಿಕೊಂಡಿದೆ. ಇದೆಲ್ಲವನ್ನೂ ಸುದೀಪ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹಾಗಾಗಿಯೇ ಒಬ್ಬರ ನೋವು ಇನ್ನೊಬ್ಬರಿಗೆ ತಮಾಷೆ ಆಗತ್ತಾ ಎಂದು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿಯ ಚಾರಿತ್ರ‍್ಯವಧೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ತುಕಾಲಿ ಸಂತುಗೆ ನೇರವಾಗಿಯೇ ಜಡಿಸಿದ್ದಾರೆ ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ನನ್ನ ಮಾತಿಗೆ ಮನೆಯರವಲ್ಲ ನಗುತ್ತಿದ್ದರು, ತಮಾಷೆಯಾಗಿಯೇ ಎಲ್ಲರೂ ಸ್ವೀಕರಿಸಿದ್ದರು. ಹಾಗಾಗಿ ನಾನು ಮಾತನಾಡಿದೆ ಎಂದು ಸಂತು ಸಮಜಾಯಿಸಿ ಕೊಡೋಕೆ ಬಂದರೂ, ಸುದೀಪ್ ಅದನ್ನು ಒಪ್ಪಲಿಲ್ಲ. ಒಬ್ಬರು ಸಾವು ಮತ್ತೊಬ್ಬರಿಗೆ ತಮಾಷೆ ಆಗಬಾರದು ಎಂದು ಖಡಕ್ಕಾಗಿಯೇ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸಂತು & ಗ್ಯಾಂಗ್‌ಗೆ ಚಳಿ ಬಿಡಿಸಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ಬಗ್ಗೆ ಸಿಂಪತಿ ಕ್ರಿಯೇಟ್ ಮಾಡುವಂತಹ ಕೆಲಸವನ್ನು ಸುದೀಪ್ ಮಾಡಿದ್ದಾರೆ. ಬಳಿಕ ಸಂತೂ, ಡ್ರೋನ್ ಪ್ರತಾಪ್‌ಗೆ ಕ್ಷಮೆ ಕೇಳಿದ್ದಾರೆ. ಸುದೀಪ್ ಮಾತು, ಸಾಥ್ ನೀಡಿರುವ ರೀತಿಗೆ ಡ್ರೋನ್ ಪ್ರತಾಪ್‌ಗೆ ಭಾವುಕರನ್ನಾಗಿಸಿದೆ. ಮುಂದಿನ ದಿನಗಳಲ್ಲಿ ಮನೆಯರು ಡ್ರೋನ್ ಪ್ರತಾಪ್ ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

    ಮೂಲಗಳ ಪ್ರಕಾರ, ದೊಡ್ಮನೆಯಿಂದ ಮೊದಲ ವಾರ ಸ್ನೇಕ್ ಶ್ಯಾಮ್ (Snake Shyam) ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]