Tag: ತುಕಾಲಿ ಸಂತೋಷ್‌

  • BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

    BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11)  ಆಟ 70ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದರ ನಡುವೆ ವಾಹಿನಿ ಹೊಸ ಪ್ರೋಮೋವೊಂದನ್ನು ಹಂಚಿಕೊಂಡಿದ್ದು, ಬಹಳ ವಿಶೇಷವಾದ ಸಂಗತಿಗಳಿವೆ. ಅದೇನಪ್ಪ ಅಂದ್ರೆ ‘ಬಿಗ್ ಬಾಸ್’ ಮನೆಗೆ ಈ ಹಿಂದಿನ 10ನೇ ಸೀಸನ್‌ನ (BBK 10) ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಜೊತೆಗೆ ಕಳೆದ ವಾರ ಎಲಿಮಿನೇಷನ್ ಗೊಂದಲಕ್ಕೂ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ಕಳೆದ ವಾರಾಂತ್ಯ ಎಲಿಮಿನೇಷನ್‌ ಟ್ವಿಸ್ಟ್‌ ಇತ್ತು. ಆದರೂ ಚೈತ್ರಾ ಕುಂದಾಪುರ (Chaithra Kundapura) ಅವರನ್ನು ಎಲಿಮಿನೇಟ್ ಮಾಡಿರುವ ರೀತಿಯಲ್ಲಿ ಕರೆದುಕೊಂಡು ಬಂದು ಕನ್ಫೆಷನ್ ರೂಮ್‌ನಲ್ಲಿ ಕೂರಿಸಲಾಗಿತ್ತು. ಆದರೆ ಈಗ ರಿಲೀಸ್ ಆಗಿರುವ ಹೊಸ ಪ್ರೋಮೋದಲ್ಲಿ ಅದು ಗೊತ್ತಾಗಿದೆ. ಚೈತ್ರಾ ಅವರನ್ನು ಪುನಃ ಬಿಗ್ ಬಾಸ್‌ಗೆ ಕಳುಹಿಸಲಾಗಿದೆ.

    ‘ಬಿಗ್ ಬಾಸ್’ ಕನ್ನಡ ಸೀಸನ್ 10ರ ಸ್ಪರ್ಧಿಗಳು ಈಗ ಮನೆಯೊಳಗೆ ಕಾಲಿಟ್ಟಿದ್ದಾರೆ. ತುಕಾಲಿ ಸಂತು, ವರ್ತೂರು ಸಂತೋಷ್ Varthur Santhosh), ತನಿಷಾ ಕುಪ್ಪಂಡ (Tanisha Kuppanda), ಡ್ರೋನ್ ಪ್ರತಾಪ್ (Drone Prathap) ಮುಂತಾದವರು ಆಗಮಿಸಿದ್ದಾರೆ. ಇನ್ನು, ಚೈತ್ರಾಗೆ ಮಾತಿಗೆ ಮುಂಚೆ ಅಣ್ಣ ಅಣ್ಣ ಎನ್ನುವುದು ರೂಢಿ. ಮನೆಗೆ ಬಂದಿರುವ ಡ್ರೋನ್ ಪ್ರತಾಪ್‌ಗೂ ಕೂಡ ಪ್ರತಾಪಣ್ಣ ಅಂತ ಚೈತ್ರಾ ಕರೆದಿದ್ದಾರೆ. ಅದಕ್ಕೆ ಪ್ರತಾಪ್, ಚೈತ್ರಕ್ಕ, ಅಣ್ಣ ಅಂತೆಲ್ಲಾ ಕರೆಯಬೇಡಿ ಎಂದು ಹೇಳಿದ್ದಾರೆ. ಆಗ ಇಡೀ ಮನೆಯ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ.

    ಸಂತೋಷ್ ಅವರನ್ನು ಕಂಡ ಕೂಡಲೇ ಹನುಮಂತು, ಮಾವ ಅಂತ ಬೆನ್ನೇರಿದ್ದಾರೆ. ಆಗ ಅವರು ಮಾವ ಅಂತ್ಹೇಳಿ ನನ್ನ ಮಾನಸನ್ನೇ ಹೊರಗೆ ಕಳಿಸಿದ್ಯಲ್ಲೋ ಎಂದು ಕಾಮಿಡಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಸಂತೋಷ್ ಮತ್ತು ಬೀನ್ ಬ್ಯಾಗ್ ಇಲ್ಲ ಅಂದರೆ ಹೇಗೆ? ಅದು ಸ್ವತಃ ಬಿಗ್ ಬಾಸ್‌ಗೂ ಗೊತ್ತಿದೆ. ಹಾಗಾಗಿ, ವರ್ತೂರು ಸಂತೋಷ್ ಅವರನ್ನು ಕೂಡ ಒಳಗೆ ಕರೆಸಿಕೊಂಡಿದ್ದಾರೆ. ಒಳಗೆ ಬರುವಾಗಲೇ ಎರಡು ಬೀನ್ ಬ್ಯಾಗ್‌ಗಳ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ತುಕಾಲಿ ಸಂತು ಅವರು ವರ್ತೂರು ಸಂತೋಷ್ ಒಳಗೆ ಬರುವುದನ್ನು ಕಂಡೊಡನೆ ಜೋರಾಗಿ ಕೂಗುತ್ತಾ ಅವರನ್ನು ತಬ್ಬಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರೋ ಪ್ರೋಮೋ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    https://youtu.be/2Haq3NSydBU?si=SPGCoHmPzlMdpro3

  • ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ- ಆಟೋ ಚಾಲಕ ದುರ್ಮರಣ

    ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ- ಆಟೋ ಚಾಲಕ ದುರ್ಮರಣ

    ತುಮಕೂರು: ಕನ್ನಡ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ (Tukali Santosh Car Accident) ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಆಟೋ ಚಾಲಕ ಮೃತಪಟ್ಟಿದ್ದಾರೆ.

    ಕುಣಿಗಲ್ ತಾಲೂಕು ಕೋಡಿಹಳ್ಳಿಪಾಳ್ಯ ನಿವಾಸಿ ಜಗದೀಶ್ (44) ಮೃತ ದುರ್ದೈವಿ. ಅಪಘಾತದಲ್ಲಿ ಗಾಯಗೊಂಡಿದ್ದ ಜಗದೀಶ್‌ ಅವರನ್ನು ಕೂಡಲೇ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ.

    ನಡೆದಿದ್ದೇನು..?:ಬುಧವಾರ ರಾತ್ರಿ ಶೂಟಿಂಗ್‌ ಮುಗಿಸಿಕೊಂಡು ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್ ಅವರು ಪತ್ನಿ ಮಾನಸಾ ಜೊತೆ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ಈ ಸಂದರ್ಭದಲ್ಲಿ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

    ಘಟನೆ ಸಂಬಂಧ ದೂರು ಪ್ರತಿದೂರು ದಾಖಲಿಸಲು ಎರಡೂ ಕಡೆಯವರು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಟೋ ಡ್ರೈವರ್ ಕಾರ್‌ಗೆ ಡಿಕ್ಕಿ ಹೊಡೆದಿದ್ದಾರೆ ಅಂತಾ ತುಕಾಲಿ ಸಂತು ಆರೋಪಿಸುತ್ತಿದ್ದರು. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

    ‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

    ‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ತುಕಾಲಿ ಸಂತೋಷ್ (Tukali Santhosh) ಅವರ ಕಾರು ಅಪಘಾತವಾಗಿದೆ. ತುಮಕೂರಿನಲ್ಲಿ ತುಕಾಲಿ ಸಂತೋಷ್‌ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಸದ್ಯ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಘಟನೆ ನಡೆದಿದೆ. ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್ ಅವರು ಪತ್ನಿ ಮಾನಸಾ ಜೊತೆ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ತುಕಾಲಿ ಸಂತೋಷ್ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

    ಸದ್ಯ ದೂರು ಪ್ರತಿದೂರು ದಾಖಲಿಸಲು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಟೋ ಡ್ರೈವರ್ ಕಾರ್‌ಗೆ ಡಿಕ್ಕಿ ಹೊಡೆದಿದ್ದಾರೆ ಅಂತಾ ತುಕಾಲಿ ಸಂತು ಕೂಡ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಅಂದಹಾಗೆ, ತುಕಾಲಿ ಸಂತೋಷ್ ಅವರು ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದರು. ಬಿಗ್ ಬಾಸ್ ಶೋನಿಂದ ಬಂದ ಹಣದಲ್ಲಿ ದುಬಾರಿ ಕಾರು ಖರೀದಿ ಮಾಡಿದ್ದರು.

  • ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ

    ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ

    ‘ಬಿಗ್ ಬಾಸ್ ಕನ್ನಡ ಸೀಸನ್ 10’ರ (Bigg Boss Kannada 10) ಸ್ಪರ್ಧಿ ತುಕಾಲಿ ಸಂತೋಷ್ (Tukali Santhosh) ಅವರ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ. ಹೊಸ ಕಾರನ್ನು ಖರೀದಿಸಬೇಕೆಂಬುದು ತುಕಾಲಿ ಸಂತೋಷ್ ಕನಸಾಗಿತ್ತು. ಇದೀಗ ಅದು ನೆರವೇರಿದೆ. ಹೊಸ ಕಾರಿನ ವಿಡಿಯೋವನ್ನು ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬಿಗ್ ಬಾಸ್ ಶೋ ಮುಗಿದ್ಮೇಲೆ ಹಲವರ ಬದುಕು ಬದಲಾಗಿದೆ. ತುಕಾಲಿ ಸಂತೋಷ್ ಲೈಫ್‌ನಲ್ಲಿಯೂ ಕೂಡ ಹೊಸ ಜರ್ನಿ ಶುರುವಾಗಿದೆ. ರಿಯಾಲಿಟಿ ಶೋ ಮಧ್ಯೆ ಸಿನಿಮಾ ಅವಕಾಶಗಳು ಕೂಡ ಅರಸಿ ಬರುತ್ತಿದೆ. ಇದನ್ನೂ ಓದಿ:ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

    ಬಿಗ್ ಬಾಸ್ ಫಿನಾಲೆವರೆಗೆ ಇದ್ದ ಅವರು ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ದೊಡ್ಮನೆಯಿಂದ ಬಂದ ಸಂಭಾವನೆಯಿಂದ ಅವರು ಕಾರು ಖರೀದಿ ಮಾಡಿದ್ದಾರೆ. ಕಿಯಾ ಕಂಪನಿಯ ಕಾರನ್ನು ಅವರು ಖರೀದಿ ಮಾಡಿದ್ದಾರೆ. ಈ ವೇಳೆ, ಅವರ ಪತ್ನಿ ಮಾನಸಾ ಕೂಡ ಇದ್ದರು.

    ‘ಕಂಡ ಕನಸು ನನಸಾದ ದಿನ’ ಎಂದು ಅಡಿಬರಹ ನೀಡಿ, ತುಕಾಲಿ ಸಂತು ಕಾರು ಖರೀದಿಸುತ್ತಿರುವ ವಿಡಿಯೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ನಟನ ಯಶಸ್ಸಿಗೆ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಸಿನಿತಾರೆಯರ ದಂಡು

    ಕಾಮಿಡಿ ಕಿಲಾಡಿಗಳು 3, ಜೋಡಿ ನಂಬರ್ ಒನ್, ಗಿಚ್ಚಿ ಗಿಲಿ ಗಿಲಿ 3 (Gichi gili gili 3) ಸೇರಿದಂತೆ ಹಲವು ಶೋಗಳ ಮೂಲಕ ತುಕಾಲಿ ಸಂತೋಷ್ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಶೋ ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿದೆ. ಅದರಲ್ಲೂ ವರ್ತೂರು ಸಂತೋಷ್ ಜೊತೆಗಿನ ಒಡನಾಟದ ವಿಚಾರವಾಗಿ ತುಕಾಲಿ ಸಂತು ಹೈಲೆಟ್ ಆಗಿದ್ದರು.

  • ಡ್ರೋನ್ ಪ್ರತಾಪ್ ಮೇಕಪ್ ನೋಡಿ ಬೆಚ್ಚಿಬಿದ್ದ ತುಕಾಲಿ

    ಡ್ರೋನ್ ಪ್ರತಾಪ್ ಮೇಕಪ್ ನೋಡಿ ಬೆಚ್ಚಿಬಿದ್ದ ತುಕಾಲಿ

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಆಟಕ್ಕೆ ತೆರೆಬಿದ್ದಿದೆ. ಬಿಗ್ ಬಾಸ್ ಶೋ ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ (Drone Prathap) ಸ್ಥಾನ ಪಡೆದಿದ್ದಾರೆ. ಈ ಬೆನ್ನಲ್ಲೇ ‘ಗಿಚ್ಚಿ ಗಿಲಿ ಗಿಲಿ-3’ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ಪ್ರತಾಪ್ ಲುಕ್ ನೋಡಿ ತುಕಾಲಿ ಸಂತೋಷ್ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ:ಕನ್ನಡ ಸಿನಿಮಾದಲ್ಲೂ ಸೊಂಟ ಬಳುಕಿಸಿದ್ದ ಯುವಕರ ಫೇವರೇಟ್ ನಟಿ ಪೂನಂ

    ದೊಡ್ಮನೆ ಆಟ ಮುಗಿಯುತ್ತಿದ್ದಂತೆ ಇಶಾನಿ, ತುಕಾಲಿ ಸಂತು, ಡ್ರೋನ್ ಪ್ರತಾಪ್ ಅವರು ‘ಗಿಚ್ಚಿ ಗಿಲಿ ಗಿಲಿ-3’ ಕಾರ್ಯಕ್ರಮದಲ್ಲಿ ನಗಿಸಲು ಮತ್ತೆ ಟಿವಿ ಪರದೆಗೆ ಬರುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಡ್ಯಾನ್ಸ್, ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ಪ್ರತಾಪ್ ಗುರುತಿಸಿಕೊಂಡಿದ್ದರು. ಸಿಂಪಲ್‌ ಆಗಿ ಇರುತ್ತಿದ್ದ ಪ್ರತಾಪ್‌ ಏಕಾಎಕಿ ಮೇಕಪ್ ಮಾಡಿಕೊಂಡು ಕುಣಿದು ಕುಪ್ಪಳಿಸಿದ್ದು, ನೋಡಿ ತುಕಾಲಿ ಸಂತು ಕಂಗಾಲಾಗಿದ್ದಾರೆ. ಇದೇನಿದು ಈಗ ಬಂದಿರೋದು ಪ್ರತಾಪ್ ಅವರೇನಾ ಎಂದು ದಂಗಾಗಿ ನೋಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಶ್ರುತಿ, ಸಾಧು ಕೋಕಿಲ, ಕೋಮಲ್ ಜಡ್ಜ್‌ಗಳಾಗಿ ಇದೇ ಫೆ.3ರಿಂದ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಶೋನ ನಿರಂಜನ್‌ ದೇಶಪಾಂಡೆ ನಿರೂಪಕರಾಗಿದ್ದಾರೆ.

    ಬಿಗ್‌ ಬಾಸ್‌ಗೆ ಬರುವ ಮುನ್ನ ಪ್ರತಾಪ್‌ ಸೋಷಿಯಲ್‌ ಮೀಡಿಯಾದಲ್ಲಿ ಟೀಕೆಗೆ ಒಳಗಾಗಿದ್ದರು. ಟ್ರೋಲ್‌ಗಳಿಂದ ಸಖತ್‌ ಡ್ರೋನ್‌ ಪ್ರತಾಪ್‌ ವೈರಲ್‌ ಆಗಿದ್ದರು. ಆದರೆ ಈಗ ದೊಡ್ಮನೆಯಲ್ಲಿ ಪ್ರತಾಪ್‌ ಆಟ, ವ್ಯಕ್ತಿತ್ವ ಅರಿತ ಮೇಲೆ ಅವರಿಗೆ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಹಾಗಾಗಿ ಈಗ ನಟನೆಯ ಮೂಲಕ ಹೊಸ ಇನ್ಸಿಂಗ್ಸ್‌ ಶುರು ಮಾಡಿದ್ದಾರೆ.

  • ‘ಬಿಗ್ ಬಾಸ್’ ಕನ್ನಡ 11ರಲ್ಲಿ ತುಕಾಲಿ ಪತ್ನಿ- ಅಭಿಮಾನಿಗಳ ಆಗ್ರಹ

    ‘ಬಿಗ್ ಬಾಸ್’ ಕನ್ನಡ 11ರಲ್ಲಿ ತುಕಾಲಿ ಪತ್ನಿ- ಅಭಿಮಾನಿಗಳ ಆಗ್ರಹ

    ‘ಬಿಗ್ ಬಾಸ್’ ಕನ್ನಡ 10ರ ಆಟಕ್ಕೆ ತೆರೆಬಿದ್ದಿದೆ. ಈ ಶೋ ಮುಗಿಯುತ್ತಿದ್ದಂತೆ ಸೀಸನ್ 11ರ ಬಗ್ಗೆ ಅಭಿಮಾನಿಗಳು ಯೋಚನೆ ಮಾಡುತ್ತಿದ್ದಾರೆ. ಬಿಗ್ ಬಾಸ್ ಮುಂದಿನ ಸೀಸನ್‌ನಲ್ಲಿ ತುಕಾಲಿ ಸಂತೋಷ್ (Tukali Santhosh) ಅವರ ಪತ್ನಿ ಮಾನಸ (Manasa) ಇರಲೇಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

    ಈ ಬಾರಿ ‘ಬಿಗ್ ಬಾಸ್’ ಕನ್ನಡ 10 ಭರ್ಜರಿಯಾಗಿ ಸೌಂಡ್ ಮಾಡಿದೆ. ಅದರಲ್ಲಿ ತುಕಾಲಿ ಸಂತೋಷ್ ಅವರ ಕಾಮಿಡಿ ಅಭಿಮಾನಿಗಳ ಗಮನ ಸೆಳೆದಿದೆ. 112 ದಿನಗಳ ತುಕಾಲಿ ಸಂತು ತಮ್ಮ ಕಾಮಿಡಿ ಪಂಚ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಅದರಂತೆ ಅವರ ಪತ್ನಿ ಮಾನಸ ಕೂಡ ಕಾಮಿಡಿ ಮಾಡುವ ರೀತಿಗೆ ಫಿದಾ ಆಗಿದ್ದಾರೆ. ಇದನ್ನೂ ಓದಿ:‘ಬಿಗ್‌ ಬಾಸ್‌’ ಶೋ ಮುಗಿದ ಬಳಿಕ ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸ್ಪರ್ಧಿಗಳು

    ಬಿಗ್ ಬಾಸ್ ಶೋನ ಕೊನೆಯ ವಾರದಲ್ಲಿ ಫ್ಯಾಮಿಲಿ ರೌಂಡ್‌ ಮಾಡಲಾಯ್ತು. ಆಗ ತುಕಾಲಿ ಸಂತು ಪತ್ನಿ ಮಾನಸ ಅವರ ಎಂಟ್ರಿಯಾಗಿತ್ತು. ಈ ವೇಳೆ ತುಕಾಲಿಗೆ ಪತ್ನಿ ಮಾನಸ ಬೆತ್ತದ ರುಚಿ ತೋರಿಸಿದ್ದು, ಅವರ ಕಾಮಿಡಿ ಸೆನ್ಸ್‌ಗೆ ಮನೆಯಲ್ಲಿರುವ ಸ್ಪರ್ಧಿಗಳಿಗೂ ಖುಷಿ ನೀಡಿತ್ತು.

    ಹಾಗಾಗಿಯೇ ಮುಂಬರುವ ‘ಬಿಗ್ ಬಾಸ್’ ಕನ್ನಡ 11ರಲ್ಲಿ ತುಕಾಲಿ ಪತ್ನಿ ಮಾನಸ ಇರಲೇಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಮಾನಸ ಇದ್ದರೆ ನಗುವಿಗೆ ಕೊರತೆ ಇರೋದಿಲ್ಲ ಎಂದು ಈಗಿಂದಲೇ ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಬರ್ತ್‌ಡೇಗೆ ತೃಪ್ತಿ ದಿಮ್ರಿ ಸ್ವೀಟ್ ವಿಶ್

    ಪ್ರೇಕ್ಷಕರ ಆಗ್ರಹಕ್ಕೆ ಮಣಿದು ‘ಬಿಗ್ ಬಾಸ್’ ತಂಡ ಮುಂದಿನ ಸೀಸನ್‌ನಲ್ಲಿ ಮಾನಸರನ್ನು ಸ್ಪರ್ಧಿಯಾಗಿ ತೆಗೆದುಕೊಳ್ತಾರಾ? ಎಂಬುದನ್ನು ಕಾಯಬೇಕಿದೆ.

  • ದೊಡ್ಮನೆಯ ಹೀರೋ, ಹೀರೋಯಿನ್, ವಿಲನ್ ಇವರೇ ಎಂದ ತುಕಾಲಿ

    ದೊಡ್ಮನೆಯ ಹೀರೋ, ಹೀರೋಯಿನ್, ವಿಲನ್ ಇವರೇ ಎಂದ ತುಕಾಲಿ

    ‘ಬಿಗ್ ಬಾಸ್’ ಕನ್ನಡ ಸೀಸನ್ 10ನಲ್ಲಿ (Bigg Boss Kannada 10) ಎಲ್ಲ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯೊಳಗಿನ ಭಿನ್ನಾಭಿಪ್ರಾಯಗಳ ಮೂಲಗಳನ್ನು ಹುಡುಕಿಕೊಂಡು ಹೋದರೆ ಅದರಲ್ಲಿಯೂ ತುಕಾಲಿ ಸಂತೋಷ್ ಅವರ ಕೊಡುಗೆ ಸಣ್ಣದಲ್ಲ. ಹೀಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ತುಕಾಲಿ ಸಂತೋಷ್ ಅವರದ್ದು. ಬಿಗ್ ಬಾಸ್‌ನ 5ನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ (Tukali Santhosh) ಅವರು ಜಿಯೋ ಸಿನಿಮಾ ಜೊತೆಗೆ ನಡೆಸಿದ ಸಂದರ್ಶನ ಇಲ್ಲಿದೆ.

    ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಸಂತೋಷ್ ಕುಮಾರ್ ಎಚ್.ಜಿ. ಅಲಿಯಾಸ್ ತುಕಾಲಿ ಸಂತೋಷ್ ಅವರೇ ನಿಮ್ಮ ಪ್ರೀತಿ ಪಾತ್ರ. ಈ ಸೀಸನ್‌ನಲ್ಲಿ ಟಾಪ್ 6 ಫಿನಾಲೆ ಸ್ಪರ್ಧಿಗಳಲ್ಲಿ ನಾನೂ ಒಬ್ಬ. 5ನೇ ರನ್ನರ್ ಅಪ್ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಜಾಗದಲ್ಲಿದ್ದೀನಿ. ಇದನ್ನೂ ಓದಿ:ನಾನು ಫೇಕ್ ಅಲ್ಲ, ವಿಲನ್ ಅಂದ್ಕೊಂಡರೂ ಪರವಾಗಿಲ್ಲ: ವಿನಯ್ ಗೌಡ

    ಸಿಕ್ಕಾಪಟ್ಟೆ ಎಕ್ಸೈಟ್‌ಮೆಂಟ್ ಇದೆ. ನಾನು ಮನೆಗೆ ಹೋಗುವಾಗಲೇ ಅಂದುಕೊಂಡಿದ್ದೆ. ಶೋ ಮುಗಿಯುವ ದಿನವೇ ಮನೆಯಿಂದ ಹೊರಗೆ ಬರಬೇಕು ಅಂತ. ಹಾಗೇ ಆಗಿದೆ. ಗ್ರ‍್ಯಾಂಡ್ ಫಿನಾಲೆ ದಿನ ವೇದಿಕೆಯ ಮೇಲಿಂದ ಬೀಳ್ಕೊಟ್ಟು ಅಲ್ಲಿಂದ ಹೋಗಿದ್ದೇನೆ. ತುಂಬ ಖುಷಿಯಾಗುತ್ತಿದೆ.

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರತಿಯೊಂದೂ ವಿಷಯವೂ ಸವಾಲೇ. ಆ ಎಲ್ಲ ಸವಾಲುಗಳನ್ನು ಎದುರಿಸಿ ಫಿನಾಲೆಯವರೆಗೆ ಬಂದು ಕಾಮಿಡಿಯಲ್ಲಿ ನನ್ನದೇ ಆದ ಛಾಪು ಮೂಡಿಸಿದ್ದೀನಿ. ಫೇವರೇಟ್ ಮೊಮೆಂಟ್ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಮಾತ್ರೆ ತಂದುಕೊಡುತ್ತಿದ್ದದ್ದು. ಇನ್ಮೇಲಿಂದ ಮಾತ್ರೆ ತಂದ್ಕೊಡೋರು ಯಾರೋ ಅಣ್ಣಾ? ತಿಂದ್ಯಾ ಮಲಗಿದ್ಯಾ ಏನು ಮಾಡ್ದೆ ಅಂತೆಲ್ಲ ಕೇಳೋರು ಯಾರೂ ಇಲ್ಲ ಇನ್ಮೇಲೆ ಎಂದು ತುಕಾಲಿ ಮಾತನಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಅಲಾರ್ಮ್ ರೀತಿಯಲ್ಲಿ ಒಂದು ಹಾಡು ಬರುತ್ತಿತ್ತು. ನಿದ್ದೆಗಣ್ಣಲ್ಲಿದ್ರೂ ಆ ಹಾಡು ಕೇಳಿದ ತಕ್ಷಣ ರಪ್ ಅಂತ ಎಚ್ಚರ ಆಗಿಬಿಡುತ್ತದೆ. ಅದನ್ನು ತುಂಬ ಮಿಸ್ ಮಾಡ್ಕೋತೀನಿ. ಹಾಗೆಯೇ ಎಲ್ಲ ಸ್ಪರ್ಧಿಗಳನ್ನೂ ಮಿಸ್ ಮಾಡ್ಕೋತೀನಿ. ನನ್ನ ಹೆಂಡತಿ ಯಾವ್ದೋ ಲೆಟರ್ ಬರೆದಿದ್ದಾಳೆ ಅಂತ ಹೇಳಿ ತಲೆ ಮೇಲೆ ಡಬ್ಬ ಇಟ್ಕೊಂಡು ಟಾಸ್ಕ್ ಗೆದ್ದೆ. ಆ ಲೆಟರ್ ಬಂದ್ಮೇಲೆ ಗೊತ್ತಾಯ್ತು, ಏನೇನು ಬರ್ದವ್ಳೆ ಅಂತ.

    ಈ ನೂರಾ ಹನ್ನೊಂದು ದಿನಗಳಲ್ಲಿ ಮಿಸ್ ಮಾಡ್ಕೊಳ್ಳೋದು ತುಂಬ ಇದೆ. ಎಲ್ಲವನ್ನೂ ಮಿಸ್ ಮಾಡ್ಕೋತೀನಿ. ಆ ಮೆಮರಿ ಬರೀಬೇಕು ಅಂದ್ರೆ ನೂರಾಹನ್ನೊಂದು ಪಿಚ್ಚರ್ ಸ್ಟೋರಿ ಹೇಳ್ಬೇಕಾಗತ್ತೆ. ಈ ಸಲದ ಸೀಸನ್‌ನಲ್ಲಿ ಕಾರ್ತೀಕ್ (Karthik) ಹೀರೋ ಸಿನಿಮಾದಲ್ಲಿ ಹೀರೋ ಎಷ್ಟು ಮುಖ್ಯನೋ ಹಾಗೆ. ಪ್ರತಾಪ್ ಪೋಷಕ ನಟ. ಸಂಗೀತಾ ಶೃಂಗೇರಿ (Sangeetha Sringeri) ಆ ಸಿನಿಮಾದ ಹೀರೊಯಿನ್ ಇದ್ದ ಹಾಗೆ. ಹೀಯೋ- ಹೀರೋಯಿನ್ ಇದ್ದ ಮೇಲೆ ವಿನಯ್ ವಿಲನ್ ಆಗಿರಲೇಬೇಕಲ್ಲಾ ವರ್ತೂರು ಸಂತೋಷಣ್ಣ ನ್ಯಾಯ ಕೊಡುವ ದೇವರ ಥರ. ಕರ್ಣನ ಥರ ಅವರ ಬಗ್ಗೆ ಹೇಳೋಕೆ ಒಂದಾ ಎರಡಾ ಇರೋದು ತುಂಬ ಹೇಳಬಹುದು.

    ಈ ನೂರಾಹನ್ನೊಂದು ದಿನಗಳ ಮೆಮರಿಯನ್ನು ಒಂದೇ ಸಾಲಿನಲ್ಲಿ ಹೇಳಬೇಕು ಅಂದ್ರೆ, ನೆನಪುಗಳ ಮಾತು ಮಧುರ. ಬಿಗ್ ಬಾಸ್ ಐ ಮಿಸ್ ಯೂ, ಐ ಲವ್ ಯೂ ನಿಮ್ಮ ಧ್ವನಿ ನನ್ನನ್ನು ತುಂಬ ಎಚ್ಚರಗೊಳಿಸ್ತು. ಒಂದು ಅಶರೀರವಾಣಿ ನಮ್ಮನ್ನೆಲ್ಲ ಕಂಟ್ರೋಲ್ ಮಾಡಿತು ಅಂದ್ರೆ ನೀವು ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮನಸ್ಸು ಎಂಥದ್ದಿರಬೇಕು.

    ನನಗೆ ಸ್ಪಷ್ಟವಾಗಿ ಇದ್ದ ಆಸೆಗಳನ್ನು ಪೂರೈಸಿದ್ದಾರೆ. ನಾನು ಅಂದುಕೊಂಡಿದ್ದೆಲ್ಲ ಕೊಟ್ಟಿದೀರಾ. ಅದಕ್ಕಿಂತ ಹೆಚ್ಚು ಕೊಟ್ಟಿದೀರಾ. ನಾನು ನಕ್ಕಾಗ ನೀವೂ ನಕ್ಕಿದ್ದೀರಾ. ನೋವಲ್ಲಿ ನೋವು ಪಟ್ಕೊಂಡಿದ್ದೀರಾ. ನನ್ನ ಜೀವಮಾನದಲ್ಲಿ ಬಿಗ್ ಬಾಸ್ ಅನ್ನೋದು ಒಂದು ಇತಿಹಾಸ.

  • Bigg Boss: ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕು- ವರ್ತೂರು ಸಂತೋಷ್‌

    Bigg Boss: ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕು- ವರ್ತೂರು ಸಂತೋಷ್‌

    ಬಿಗ್ ಬಾಸ್ ಕನ್ನಡದ (Bigg Boss Kannada 10) ಈ ಸೀಸನ್‌ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ವರ್ತೂರು ಸಂತೋಷ್. ಕೆಲವು ಕಹಿ ಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಡಿದ ವರ್ತೂರು (Varthur Santhosh) ಅವರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜಿಯೋ ಸಿನಿಮಾ ನಡೆಸಿದ ಸಂದರ್ಶನದಲ್ಲಿ ಅವರು ಆಡಿದ ಮಾತುಗಳು ಹೀಗಿವೆ. ಇದನ್ನೂ ಓದಿ:ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮ ಸಂಬಂಧ: ಸಂದರ್ಶನದಲ್ಲಿ ಸಂಗೀತಾ ಮಾತು

    ನಮಸ್ಕಾರ ನನ್ನ ಹೆಸರು ಸಂತೋಷ್ ಕುಮಾರ್. ವರ್ತೂರು ಸಂತೋಷ್ ಮತ್ತು ಹಳ್ಳಿಕಾರ್ ಸಂತೋಷ್ ಅಂತ ಕರೀತಾರೆ. ನನಗಂತೂ ರಿಯಾಲಿಟಿ ಶೋಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬಿಗ್ ಬಾಸ್ ಅಂದರೆ ವ್ಯಕ್ತಿತ್ವದ ಆಟ. ಅಂದರೆ ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ತೋರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಒಂದು ರಿಯಾಲಿಟಿ ಶೋ ಕಂಪ್ಲೀಟ್ ಆಗುವುದು ಡೇ ಒಂದರಿಂದ ಲಾಸ್ಟ್ ವೀಕ್‌ವರೆಗೆ ಇರುವುದು. ವೀಕೆಂಡ್‌ನಲ್ಲಿ ಎಲಿಮಿನೇಟ್ ಆಗುವುದು, ಮಿಡ್ ವೀಕ್ ಎಲಿಮಿನೇಟ್ ಆಗುವುದೆಲ್ಲ ಇನ್ನೊಂದು ರೀತಿ. ಆದರೆ ಇಡೀ ಸೀಸನ್ ಕಂಪ್ಲೀಟ್ ಮಾಡುವುದು ಬೆರಳೆಣಿಕೆಯಷ್ಟು ಸ್ಪರ್ಧಿಗಳು. ಅವರಲ್ಲಿ ನಾನು ಅವರಲ್ಲಿ ಒಬ್ಬನಾಗಿದ್ದೇನೆ.

    ಸೋಲು- ಗೆಲುವು ಎರಡನ್ನೂ ಒಂದೇ ರೀತಿ ತಗೊಬೇಕು. ಒಬ್ಬರು ಸೋತಾಗಲೇ ಗೆಲ್ಲಬೇಕು ಅನ್ನೋ ಛಲ ಬಂದಿರೋದು. ನಾನು ಈ ಸೀಸನ್‌ನ ಗೆಲ್ಲದೇ ಇರಬೋದು. ಆದರೆ ಕರ್ನಾಟಕದ ಪ್ರತಿಯೊಬ್ಬರ ಮನೆಮಗನಾಗಿ ಮನಸ್ಸು ಗೆದ್ದಿದ್ದೇನೆ. ಅದರ ಬಗ್ಗೆ ಖುಷಿಯಿದೆ. ನಾನು ಜನರಿಂದ ಬೆಳೆದವನು, ಜನರಿಗೋಸ್ಕರ ಜನರ ಜೊತೆಗೇ ಇರೋನು.

    ನಾನು ಈ ಬಿಗ್ ಬಾಸ್ ಮನೆಯಲ್ಲಿ, ಏನಾದ್ರೂ ಹೊರಗಡೆ ತೆಗೆದುಕೊಂಡು ಹೋಗ್ತಿದೀನಿ ಅಂದ್ರೆ ಅದು ಫ್ರೆಂಡ್‌ಶಿಪ್. ಎಲ್ಲ ಸ್ನೇಹಿತರಿಂದಲೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಆದರೆ ತುಕಾಲಿ ಸಂತೋಷ್ ಅವರ ಕಡೆಯಿಂದ ಒಂದು ಸಹೋದರ ಸ್ನೇಹವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಯಾಕೆಂದರೆ ನನ್ನ ನಗು, ದುಃಖ ಎಲ್ಲವನ್ನೂ ಅವರ ಜೊತೆಗೆ ಹಂಚಿಕೊಂಡಿದ್ದೀನಿ. ಅದಕ್ಕೆ ವಿಶೇಷ ಸ್ಥಾನವಿದೆ. ಮನೆಯ ಸದಸ್ಯರು, ಸುದೀಪಣ್ಣ ಅಷ್ಟೇ ಏಕೆ, ಬಿಗ್ ಬಾಸ್ ಕೂಡ ನಮ್ಮ ಸ್ನೇಹದ ಮೇಲೆ ಯಾರ ಕಣ್ಣೂ ಬೀಳದೆ ಇರಲಿ ಎಂದು ಹಾರೈಸಿದರು. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಭೇಟಿ ಮಾಡಿದ ಕನ್ನಡ ನಟ ಅನೀಶ್

    ನನ್ನ ಫೇವರೇಟ್ ಮೊಮೆಂಟ್ಸ್ ಬಿನ್‌ಬ್ಯಾಗ್‌ದು. ಅಲ್ಲಿ ಕೂತು ನಾವು ಆಡದೇ ಇರುವ ಮಾತುಗಳಿಲ್ಲ. ಮಾಡದೆ ಇರುವ ತಂತ್ರಗಳಿಲ್ಲ. ಹಾಗಾಗಿ ಬಿನ್‌ಬ್ಯಾಗ್ ಅನುಭವ ಅದ್ಭುತವಾದದ್ದು. ಜಿಯೋ ಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳಲ್ಲಿ ಲಗೋರಿ ಆಟ ನನಗೆ ತುಂಬ ಇಷ್ಟವಾಯ್ತು. ಎಲ್ಲರೂ ಬೇರೆ ಬೇರೆ ಹಿನ್ನೆಲೆಯವರು ಬಂದವರು, ಎರಡು ತಂಡಗಳಾಗಿ ಆಡಿದ್ದು ನನಗೆ ಸಾಕಷ್ಟು ಖುಷಿ ಕೊಡ್ತು.

    ಒಂದು ಅರ್ಧಮರ್ಧ ಶಿಲೆಯನ್ನು ತಂದು ಬಿಗ್ ಬಾಸ್ ಮನೆಯಲ್ಲಿ ಬಿಡುತ್ತಾರೆ. ಬಿಗ್ ಬಾಸ್ ವೇದಿಕೆ ಅವರನ್ನು ಪೂರ್ತಿ ಶಿಲ್ಪವಾಗಿ ಕೆತ್ತಿ ಹೊರಗೆ ಕಳಿಸುತ್ತಾರೆ. ಅವರಲ್ಲಿ ಕೆಲವರು ಆಚೆ ಹೋಗಿ ಒಡೆದು ಹೋಗಿರುವುದೂ ಇರುತ್ತದೆ. ಕೆಲವು ಅವರವರ ಸ್ಥಾನ ಪಡೆದುಕೊಳ್ಳುತ್ತವೆ. ಬಿಗ್ ಬಾಸ್ ವೇದಿಕೆ ಯಾರೇ ಬಂದಿದ್ದರೂ ಕೃತಜ್ಞತೆ ಇಟ್ಕೋಬೇಕು. ಯಾಕೆಂದರೆ ಒಂದು ತುತ್ತು ಅನ್ನ ತಿಂದರೂ ಅದರ ಋಣ ನಮ್ಮ ಮೇಲೆ ಇರುತ್ತದೆ. ಹಾಗಾಗಿ ಬಿಗ್‌ ಬಾಸ್ ಧ್ವನಿಗೆ ನಾನು ಚಿರಋಣಿಯಾಗಿರುತ್ತೇನೆ.

  • Bigg Boss: ದೊಡ್ಮನೆಯ ಚಾಣಾಕ್ಷ, ಆದ್ರೂ ಫಿನಾಲೆಯಲ್ಲಿ ಕೈಹಿಡಿಯಲಿಲ್ಲ ‘ತುಕಾಲಿ’ ತಂತ್ರ

    Bigg Boss: ದೊಡ್ಮನೆಯ ಚಾಣಾಕ್ಷ, ಆದ್ರೂ ಫಿನಾಲೆಯಲ್ಲಿ ಕೈಹಿಡಿಯಲಿಲ್ಲ ‘ತುಕಾಲಿ’ ತಂತ್ರ

    ತುಕಾಲಿ ಸಂತೋಷ್ (Tukali Santhosh) ಈ ಹೆಸರು ಕೇಳಿದರೆ ಸಾಕು ಒಮ್ಮೆ ಹುಬ್ಬು ಮೇಲೇರುತ್ತದೆ. ಮರುಗಳಿಗೆ ತುಟಿಗಳಲ್ಲಿ ನಗು ಮೂಡುತ್ತದೆ. ಹುಬ್ಬೇರಿಸುವ ಅಚ್ಚರಿ, ನಗುಮೂಡಿಸುವ ವೈಖರಿ ಇದು ತುಕಾಲಿ ಸಂತೋಷ್ ‘ಬಿಗ್ ಬಾಸ್’ ಸೀಸನ್ 10ನಲ್ಲಿ ಮೂಡಿಸಿರುವ ಹೆಜ್ಜೆಗುರುತಿಗೆ ಪುರಾವೆ. ಇದನ್ನೂ ಓದಿ:‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ಔಟ್- ಚಿತ್ರತಂಡಕ್ಕೆ ಎ.ಹರ್ಷ ಸಾಥ್

    ಈ ಸಲ ಮನರಂಜನೆ ಕಡಿಮೆ ಇದೆ ಎಂಬ ಕೆಲವರ ಗೊಣಗಾಟಕ್ಕೆ ಉತ್ತರವಾಗಿ ತುಕಾಲಿ ಸಂತೋಷ್ ಮನೆಯೊಳಗಿದ್ದರು. ಅಗ್ರೆಶನ್‌ನಲ್ಲಿ ಆಡಲಾಗದ, ಸ್ಪೋರ್ಟ್ಸ್ ಹಿನ್ನೆಲೆ ಇಲ್ಲದ ಅವರು ಮನೆಯೊಳಗೆ ವಾರದಿಂದ ವಾರಕ್ಕೆ ತಮ್ಮ ಜಾಗವನ್ನು ವಿಸ್ತರಿಸುತ್ತ ಬಂದಿದ್ದೊಂದು ಕುತೂಹಲಕಾರಿ ವಿದ್ಯಮಾನ. ಅದೂ ಮನೆಯೊಳಗೆ ಜನರು ಕಡಿಮೆಯಾಗುತ್ತ ಬಂದಷ್ಟೂ ತುಕಾಲಿ ಸಂತೋಷ್ ಪ್ರಭಾವ ಹೆಚ್ಚುತ್ತಲೇ ಹೋಗಿದ್ದು ಇನ್ನೊಂದು ಕುತೂಹಲಕಾರಿ ಬೆಳವಣಿಗೆ. ಎಲ್ಲರೊಳಗೆ ಒಂದಾಗುತ್ತ, ಎಲ್ಲರಿಗೂ ಪಿನ್ನು ಚುಚ್ಚುತ್ತ ತಮ್ಮ ಪಯಣವನ್ನು ಮುಂದುವರಿಸಿಕೊಂಡು ಬಂದಿರುವ ತುಕಾಲಿ ಅವರ ಜರ್ನಿಯ ಕೆಲವು ಮುಖ್ಯಘಟ್ಟಗಳ ನೆನಪು ಇಲ್ಲಿವೆ.

    ಮಾತಿನಲ್ಲೇ ಮನೆಯ ಕಟ್ಟುವ ಮಲ್ಲ:

    ತುಕಾಲಿ ಸಂತೋಷ್ ಅವರು ಮೈಕಟ್ಟಿನಲ್ಲಂತೂ ‘ಮಲ್ಲ’ನಲ್ಲ. ಆದರೆ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೆಯೇ ಮಾತಲ್ಲೇ ಮಹಡಿಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲವು ದಿನಗಳಲ್ಲಿಯೇ ಮನೆಮಂದಿಗೆಲ್ಲ ಪರಿಚಯವಾಗಿತ್ತು. ನನ್ನ ತಾಯಿ ಗರ್ಭಿಣಿಯಾಗಿದ್ದಾಗ, ನಿನ್ನ ಹೊಟ್ಟೆಯಲ್ಲಿ ಮಹಾತ್ಮ ಹುಟ್ತಾನೆ ಅಂತ ಹೇಳಿದ್ರಂತೆ ದೊಡ್ಡವರೊಬ್ಬರು. ನಾನು ಹುಟ್ಟುವಾಗ ಗುಡುಗು ಸಿಡಿಲು ಎಲ್ಲ ಇತ್ತು. ಮಳೆ ಬರ್ತಿತ್ತು. ಆಗ ನಾನು ಹುಟ್ಟಿದೆ. ಎಂದು ತಮ್ಮ ಜನ್ಮವೃತ್ತಾಂತವನ್ನು ಅರುಹುತ್ತ ಹೋದ ಹಾಗೆ ಮನೆಯವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಅವರು ಕಾಗೆ ಹಾರಿಸುತ್ತಿದ್ದಾರೆ ಎಂದು ಗೊತ್ತಿದ್ದೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಬಿಗ್‌ಬಾಸ್ ಮನೆಯ ಸದಸ್ಯರು ಕಾದು ಕೂತಿರುತ್ತಿದ್ದದ್ದು ಸುಳ್ಳಲ್ಲ.

    ಆದರೆ ಆರಂಭಿಕ ಹಂತದಲ್ಲಿ ತುಕಾಲಿ ಅವರು ಮನೆಯ ಸದಸ್ಯರನ್ನು ನಗಿಸಲು ಅನುಸರಿದ ದಾರಿ ಟೀಕೆಗೂ ಒಳಗಾಗಿತ್ತು. ಅವರು ಪ್ರತಾಪ್ ಬಗ್ಗೆ ಆಡಿದ ಮಾತುಗಳು, ಮನೆಯ ಉಳಿದ ಸದಸ್ಯರ ಬಗ್ಗೆ ಆಡಿದ ಮಾತುಗಳ ಬಗ್ಗೆ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಭಾಗ್ಯಶ್ರೀ ಮತ್ತು ಸಿರಿ ಅವರನ್ನು ಮಿಮಿಕ್ ಮಾಡಿದ್ದಕ್ಕಾಗಿ ಸುದೀಪ್ ವಾರವಿಡೀ ತುಕಾಲಿ ಅವರ ಸೊಂಟಕ್ಕೆ ಹಗ್ಗ ಕಟ್ಟಿ ಅದರ ಎರಡುಬದಿಗಳಲ್ಲಿ ಸಿರಿ ಮತ್ತು ಭಾಗ್ಯಶ್ರೀ ಇರುವ ಶಿಕ್ಷೆ ಕೊಟ್ಟಿದ್ದರು. ಇಂಥ ಶಿಕ್ಷೆಯನ್ನು ತುಕಾಲಿ ಕಾಮಿಡಿ ಸೃಷ್ಟಿಗೇ ಬಳಸಿಕೊಂಡರು ಅನ್ನುವುದು ಬೇರೆ ಮಾತು.

    ಅನ್ಯರನ್ನು ನೋಯಿಸಿ ಮತ್ಯಾರನ್ನೋ ನಗಿಸುವುದು ಹಾಸ್ಯನಟನ ಘನತೆಗೆ ತಕ್ಕುದಲ್ಲ ಎಂಬ ಕಿಚ್ಚನ ಮಾತುಗಳನ್ನು ತುಕಾಲಿ ಗಂಭೀರವಾಗಿಯೇ ತೆಗೆದುಕೊಂಡರು. ಆದರೆ ಮನೆಯ ಸದಸ್ಯರು ಮಾತ್ರ ಅವರು ಉಳಿದವರನ್ನು ನೋಯಿಸಿ ಹಾಸ್ಯ ಮಾಡುತ್ತಾರೆ ಎಂದು ಆರೋಪಿಸುವುದನ್ನು ನಿಲ್ಲಿಸಲಿಲ್ಲ. ಇದರಿಂದ ತುಕಾಲಿ ಅವರು ಕೆಲಕಾಲ ಕುಗ್ಗಿದ್ದು, ಮಾತಾಡಲೇ ಹಿಂಜರಿಯುವಂತಾಗಿದ್ದು ಸುಳ್ಳಲ್ಲ.

    ಕ್ಯಾಪ್ಟನ್ ಆಗುವ ಕನಸು:
    ಮನೆಯ ಕ್ಯಾಪ್ಟನ್ ಆಗಬೇಕು ಎಂಬುದು ಈ ಸೀಸನ್ ಉದ್ದಕ್ಕೂ ತುಕಾಲಿ ಸಂತೋಷ್ ಕಂಡಂತ ಕನಸು. ಆ ಕನಸು ಮೊಳೆತಿದ್ದು ಮೊದಲ ವಾರದಲ್ಲಿಯೇ. ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ನೇಹಿತ್ ಮತ್ತು ನಮ್ರತಾ ಅವರ ಜೊತೆಯಲ್ಲಿ ತುಕಾಲಿ ಕೂಡ ರೇಸ್‌ನಲ್ಲಿ ಇದ್ದರು. ತಿರುಗುವ ಚಕ್ರದ ಮೇಲೆ ಅತಿಹೆಚ್ಚು ಕಾಲ ನಿಲ್ಲುವ ಟಾಸ್ಕ್‌ನಲ್ಲಿ ಬರಿಗಾಲಿನಲ್ಲಿ ನಿಂತಿದ್ದ ತುಕಾಲಿ ಎಲ್ಲರಿಗಿಂತ ಮೊದಲೇ ಕೆಳಗಿಳಿದರು. ಮೊದಲ ವಾರದ ಸೋಲು ಕೊನೆಯ ಹಂತದವರೆಗೂ ಬೆನ್ನುಬಿಟ್ಟಿಲ್ಲ. ಹಲವು ಸಲ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲುವಿನ ಹೊಸ್ತಿಲವರೆಗೂ ಹೋಗಿ ಬಂದಿದ್ದಾರೆ. ಆದರೆ ಗೆದ್ದು ಕ್ಯಾಪ್ಟನ್ ಆಗುವ ಕನಸು ಮಾತ್ರ ನನಸಾಗಿಲ್ಲ. 4ನೇ ವಾರದಲ್ಲಿ ಹಳ್ಳಿ ಮನೆ ಟಾಸ್ಕ್‌ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮ ಹಂತದವರೆಗೂ ತುಕಾಲಿ ಬಂದಿದ್ದರು. ಆಗ ಅವರು ಸಿರಿ ಮತ್ತು ವಿನಯ್ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಗಿತ್ತು. ಆಗ ಅವರು ಸಿರಿ ಅವರನ್ನು ಹೊರಗಿಟ್ಟು ವಿನಯ್ (Vinay Gowda) ಅವರನ್ನು ಆಯ್ದುಕೊಂಡರು. ವಿನಯ್ ವಿರುದ್ಧ ಸೋತರು. ಕೊನೆಗೂ ತುಕಾಲಿ ಸಂತೋಷ್ ಕ್ಯಾಪ್ಟನ್ ಆಗಲೇ ಇಲ್ಲ. ಆದರೆ ಅವರು ತಮ್ಮ ಆಸೆ ಈಡೇರಿಸಿಕೊಳ್ಳದೇ ಬಿಡಲೂ ಇಲ್ಲ.

    ನಗುವಿನ ಜೊತೆಯಲಿ ಆಕ್ರೋಶವೂ ಇದೆ:
    ತುಕಾಲಿ ಸಂತೋಷ್ ಅವರ ಬಿಗ್ ಬಾಸ್ ಜರ್ನಿಯಲ್ಲಿ ನಗುವಿನ ಸಿಕ್ವೇಲ್‌ಗಳು ಸಾಕಷ್ಟಿವೆ. ತಾನು ಸದಾ ಎಲ್ಲರನ್ನೂ ನಗಿಸುತ್ತ ಇರುತ್ತೇನೆ ಎಂದು ಹೇಳುವ ತುಕಾಲಿ ಕೆಲವು ಸಲ ತಾಳ್ಮೆಗೆಟ್ಟಿದ್ದೂ ಇದೆ. ಆರಂಭಿಕ ವಾರದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನಾಮಿನೇಷನ್‌ನಿಂದ ಕಾಪಾಡುವ ಟಾಸ್ಕ್‌ನಲ್ಲಿ ಇಶಾನಿ ಜೊತೆಗೆ ಮಾತಿಗೆ ಮಾತು ಬೆಳೆದು ಅದು ದೊಡ್ಡ ಜಗಳವಾಗಿಬಿಟ್ಟಿತ್ತು. ಹಾಗೆಯೇ ಸಂಗೀತಾ ಜೊತೆಗೂ ಅವರಿಗೆ ಹಲವು ಬಾರಿ ಮಾತಿನ ಚಕಮಕಿ ನಡೆದಿದೆ. ಕಳೆದ ವಾರವಷ್ಟೇ ಟಾಸ್ಕ್ ವೋಟಿಂಗ್ ಸಂದರ್ಭದಲ್ಲಿ ವಿನಯ್ ಜೊತೆಗೆ ಜೋರಾಗಿಯೇ ಮಾತಿನ ಚಕಮಕಿ ನಡೆದಿದೆ. ಆದರೆ ಈ ಜಗಳದ ಕಿಡಿ ನಂದಿದ ನಂತರ ಅವರು ಮತ್ತೆ ಆ ಸ್ಪರ್ಧಿಯ ಜೊತೆಗೆ ಕೈ ಜೊಡಿಸುತ್ತಾರೆ. ಅದು ಅವರ ಸ್ವಭಾವ.

    ಸಂತು- ಪಂತು ಫವರ್‌ಫುಲ್ ಫ್ರೆಂಡ್‌ಶಿಪ್:
    ಮತ್ಯಾರಲ್ಲೂ ನೋಡದ, ನಿಷ್ಕಳಂಕವಾದ ಸ್ನೇಹವನ್ನು ನಿಮ್ಮಿಬ್ಬರಲ್ಲಿ ನೋಡಿದ್ದೀನಿ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ಹೀಗೆ ಹೇಳಿದ್ದು ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಸ್ನೇಹದ ಬಗ್ಗೆ. ಎಲಿಮಿನೇಷನ್ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಹಂತದಲ್ಲಿ ಕೂತಿದ್ದಾಗಲೂ ಅವರಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿಯೇ ಮಾತಾಡಿದ್ದರು. ಸಂತು – ಪಂತು ಜೋಡಿಯಾದ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದು ಇದೆ, ಮುನಿಸಿಕೊಂಡಿದ್ದು ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬಿನ್‌ಬ್ಯಾಗ್ ಮೇಲೆ ಕೂತು ಹರಟಿದ್ದಾರೆ. ಈ ಬಿನ್‌ಬ್ಯಾಗ್ ಸ್ಟೋರಿ ಮನೆಯೊಳಗೂ ಹೊರಗೂ ಸಾಕಷ್ಟು ಸದ್ದು ಮಾಡಿತ್ತು. ತುಕಾಲಿ ಅವರ ತಂತ್ರಗಾರಿಕೆ ರೂಪುಗೊಳ್ಳುತ್ತಿದ್ದದ್ದೇ ಈ ಬಿನ್‌ಬ್ಯಾಗ್ ಮೇಲೆ.

    ಸ್ಕೂಲ್ ಟಾಸ್ಕ್‌ನಲ್ಲಿ ಮಾಡಿದ ಮೋಡಿ:
    ತುಕಾಲಿ ಸಂತೋಷ್ ಅವರ ರಂಜನೀಯ ಪ್ರತಿಭೆ ಹೊರಗೆ ಬಂದಿದ್ದು ಸ್ಕೂಲ್ ಟಾಸ್ಕ್‌ನಲ್ಲಿ . ಉಳಿದವರು ತಮ್ಮ ಎದುರಾಳಿಗಳನ್ನು ತಿವಿಯಲು, ದೂರಲುಈ ಅವಕಾಶವನ್ನು ಬಳಸಿಕೊಂಡರೆ, ತುಕಾಲಿ ಸಂತೋಷ್ ಮಾತ್ರ ಬಾಲ್ಯದೊಳಗೆ ಹೋಗಿ ಬಂದಂತಿದ್ದರು. ಹೊಡಿತೀನಿ ಎಂದು ಅವರು ಆಡುತ್ತಿದ್ದ ರೀತಿ ಹಲವು ವಾರಗಳ ಕಾಲ ಆಗಾಗ ಮನೆಯೊಳಗೆ ಪ್ರತಿಧ್ವನಿಸುತ್ತಲೇ ಇತ್ತು. ಅಲ್ಲದೇ ಬೃಂದಾವನ ಧಾರಾವಾಹಿ ತಂಡ ಮನೆಯೊಳಗೆ ಬಂದಾಗ ತುಕಾಲಿ ಸಂತೋಷ್, ವರ್ತೂರು ಸಂತೋಷ್, ಭಾಗ್ಯ, ತನಿಷಾ ಸೇರಿಕೊಂಡು ಮಾಡಿದ್ದ ಕಾಮಿಡಿಸ್ಕಿಟ್ ಕೂಡ ಎಲ್ಲರನ್ನೂ ನಕ್ಕುನಲಿಸಿತ್ತು.

    ಇದೇ ವಾರ ಅವರು ತೆಗೆದುಕೊಂಡ ಇಂಗ್ಲಿಷ್ ಕ್ಲಾಸ್ ಅಂತೂ ಮನೆಯ ಉಳಿದ ಸದಸ್ಯರಿಗೆ ಇಂಗ್ಲಿಷ್ ಕಲಿಸುವ ಬದಲು ಬರುವ ಇಂಗ್ಲಿಷ್ ಅನ್ನೂ ಮರೆಸುವಂತೆ ಮಾಡಿತ್ತು. ವಾರಾಂತ್ಯದಲ್ಲಿಯೂ ಕಿಚ್ಚ ಸುದೀಪ್ ಅವರು ತುಕಾಲಿ ಬಾಯಲ್ಲಿ ಇಂಗ್ಲಿಷ್ ಕೇಳಲು ಇಷ್ಟಪಡುತ್ತಿದ್ದರು.

    ತಂತ್ರದಲ್ಲಿ ಚಾಣಕ್ಯ:
    ಬರೀ ನಗಿಸುವುದನ್ನೇ ನೆಚ್ಚಿಕೊಂಡಿದ್ದರೆ ತುಕಾಲಿ ಸಂತೋಷ್ ಇಷ್ಟು ದಿನಗಳ ಕಾಲ ಮನೆಯೊಳಗೆ ಇರಲು ಸಾಧ್ಯವೇ ಇರಲಿಲ್ಲವೇನೋ. ಆದರೆ ತುಕಾಲಿ ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಅವರೊಳಗೊಬ್ಬ ತಂತ್ರಗಾರನೂ ಇದ್ದ. ಗಾಸಿಪ್ ಮಾಡುತ್ತೇನೆ ಎಂದು ಹೇಳಿಕೊಂಡೇ ಅವರು ಆಡಿದ ಗಾಳಿಸುದ್ದಿಗಳು ಮನೆಯೊಳಗೆ ಬೆಂಕಿ ಹಚ್ಚಿದ್ದೂ ಇದೆ. ಅದರಲ್ಲಿಯೂ ಕಳೆದ ಕೆಲವು ವಾರಗಳಿಂದ ಅವರು ವರ್ತೂರು ಸಂತೋಷ್ ಅವರೊಂದಿಗೆ ಸೇರಿ ಮಾಡಿದ ತಂತ್ರಗಾರಿಕೆಗೆ ಉಳಿದ ಸದಸ್ಯರೆಲ್ಲ ಬೆಕ್ಕಸ ಬೆರಗಾಗಿದ್ದಂತೂ ಹೌದು. ಇತ್ತೀಚೆಗೆ ಕೂಡ, ಫಿನಾಲೆಯಲ್ಲಿ ನಿಮ್ಮ ಜೊತೆ ಇರಬೇಕಾದ ಇನ್ನೊಂದು ಕೈ ಯಾರದು ಎಂಬ ಪ್ರಶ್ನೆಗೆ ತುಕಾಲಿ ಅವರು, ‘ಸಂಗೀತಾ’ ಎಂದಿದ್ದರು. ಆದರೆ ಮುಂದಿನ ವಾರವೇ ಅವರು ಸಂಗೀತಾ ವಿರುದ್ಧ ಕಾರ್ತಿಕ್ ಅವರಿಗೆ ಸಪೋರ್ಟ್ ಮಾಡಿ ಮುಂದೆ ಬಿಟ್ಟರು. ಹೀಗೆ ಕಾಲಕ್ಕೆ ತಕ್ಕ ಹಾಗೆ ತಮ್ಮ ತಂತ್ರಗಾರಿಕೆ ಬದಲಿಸುತ್ತ, ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಾತಾವರಣ ರೂಪಿಸಿಕೊಳ್ಳುವ ಚಾಣಕ್ಯ ಜಾಣತನವೇ ಅವರನ್ನು ಫಿನಾಲೆ ವೇದಿಕೆಗೆ ತಲುಪಿಸತ್ತು.

    ಸವಾಲಿಗೆ ಸವಾಲ್:
    ಆರಂಭಿಕ ದಿನಗಳಲ್ಲಿ ವಿನಯ್ ಅವರ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದ ತುಕಾಲಿ ಅವರು, ಹಳ್ಳಿ ಟಾಸ್ಕ್‌ನಲ್ಲಿ ಅವರ ತಂಡವನ್ನೇ ಸಪೋರ್ಟ್ ಮಾಡಿ ಸಂಗೀತಾ ತಂಡ ಸೋಲುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ವಿನಯ್ ತಂಡದಿಂದ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬೀಳತೊಡಗಿದರು. ಆಗ ತುಕಾಲಿ ಅವರ ತಂಡದಿಂದ ಹೊರಬಿದ್ದು ಸಂಗೀತಾ ಅವರಿಗೆ ಹತ್ತಿರವಾದರು. ಆದರೆ ಎಂಟನೇ ವಾರದಲ್ಲಿ ಸಂಗೀತಾ, ವಿನಯ್ ತಂಡವನ್ನು ಸೇರಿಕೊಂಡಾಗ ತುಕಾಲಿ ಅವರಿಗೆ ಎದುರಾಳಿಯಾದರು. ನಿಮ್ಮ ತಂಡದಿಂದ ಕಾರ್ತಿಕ್ ಮತ್ತು ತುಕಾಲಿ ತಲೆ ಬೋಳಿಸಿಕೊಳ್ಳಬೇಕು ಎಂದು ಸಂಗೀತಾ ಸವಾಲು ಹಾಕಿದಾಗ ಕೊಂಚವೂ ಯೋಚಿಸದೆ ತಲೆಯನ್ನು ಬೋಳಿಸಿಕೊಂಡು ತಮ್ಮ ಬದ್ಧತೆಯನ್ನು ಮೆರೆದರು.

    ನಗುವಿನ ಬುಗ್ಗೆಯ ಹಿಂದೆ ನೋವಿನ ಒರತೆ:
    ಸದಾ ನಗುತ್ತ ನಗಿಸುತ್ತ ಇರುವ ತುಕಾಲಿ ಸಂತೋಷ್ ಅವರು ಮನೆಮಂದಿಯನ್ನೆಲ್ಲ ಭಾವುಕತೆಯಲ್ಲಿ ಮುಳುಗಿಸಿದ್ದೂ ಇದೆ. ಬಿಗ್‌ಬಾಸ್ ಮನೆಯ ಸದಸ್ಯರ ಕುಟುಂಬದವರು ಮನೆಗೆ ಭೇಟಿ ಕೊಡುವ ವಾರದಲ್ಲಿ ತುಕಾಲಿ ಅವರ ಹೆಂಡತಿ ಕೊಟ್ಟ ಎಂಟ್ರಿ ಮಾತ್ರ ತುಂಬ ವಿಚಿತ್ರವಾಗಿತ್ತು. ಎಲ್ಲರೂ ಕೈಯಲ್ಲಿ ತಿನಿಸಿನ ಡಬ್ಬ ಹಿಡಿದು ಬಂದರೆ ಅವರು ಬೆತ್ತ ಹಿಡಿದು ಬಂದಿದ್ದರು. ಎಲ್ಲ ಮನೆಯವರ ಮಂದಿ ಬರುವಾಗ, ಬಿಗ್‌ಬಾಸ್ ದಯವಿಟ್ಟು ನನ್ ಹೆಂಡ್ತಿನ ಮಾತ್ರ ಇಲ್ಲಿಗೆ ಕರೆಸ್ಬೇಡಿ ಎಂದು ಬೇಡಿಕೊಳ್ಳುತ್ತಿದ್ದರು. ಇದನ್ನೇ ಇಟ್ಟುಕೊಂಡು ತುಕಾಲಿ ಹೆಂಡತಿ ಮನೆಯನ್ನೆಲ್ಲ ಅಟ್ಟಾಡಿಸಿಕೊಂಡು ಹೊಡೆದಿದ್ದರು.

    ಅವರನ್ನು ನೋಡಿ ಮನೆಯ ಸದಸ್ಯರೆಲ್ಲ ನಕ್ಕು ನಕ್ಕು ಸುಸ್ತಾಗಿದ್ದರು. ಆದರೆ ತುಕಾಲಿ ಅವರ ಹೆಂಡತಿ, ತುಕಾಲಿ ಅವರ ಒಳ್ಳೆಯ ಗುಣಗಳ ಬಗ್ಗೆ ಹೇಳುತ್ತ, ತಮ್ಮ ಕುಟುಂಬದ ಕಷ್ಟಕ್ಕೆ ಅವರು ಒದಗಿದ ರೀತಿ, ಕಷ್ಟದ ದಿನಗಳನ್ನು ನೆನಪಿಸಿಕೊಂಡಾಗ ಕ್ಷಣಕಾಲದ ಹಿಂದೆ ನಕ್ಕವರೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಬಿಗ್ ಬಾಸ್ ಮನೆಯೊಳಗೆ ಉಳಿದ ಎಲ್ಲ ಸದಸ್ಯರಿಗಿಂತ ಲೂ ತುಂಬ ಭಿನ್ನವಾದ ವ್ಯಕ್ತಿತ್ವ ಹೊಂದಿರುವ ತುಕಾಲಿ ಸಂತೋಷ್, ತಂತ್ರಗಾರಿಕೆ ಮತ್ತು ಮನರಂಜನೆಯ ವಿಶಿಷ್ಟ ಮಿಶ್ರಣ. ಕ್ಯಾಪ್ಟನ್ ಆಗುವ ಕನಸು ನನಸಾಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದ ಹಾಗೆಯೇ ನಡುರಾತ್ರಿ ಕ್ಯಾಪ್ಟನ್ ಕೋಣೆಯ ಒಳಹೊಕ್ಕು, ಹಾಸಿಗೆಯಲ್ಲಿ ಮಲಗಿ ಹೊರಳಾಡಿ, ಆಮೇಲೆ ಕ್ಷಮೆ ಕೇಳುವ ಮುಗ್ಧ ಕೂಡ ಹೌದು.

    ನಿಮ್ಮ ಆಸೆ ಏನು ಎಂದು ಕೇಳಿದಾಗ ಹುಂಡೆ ಕೋಳಿ ಊಟ ಮಾಡಬೇಕು ಎನ್ನಬಲ್ಲ ರಸಾಸ್ವಾದಕ. ಹೀಗೆ ಹಲವು ಗುಣಗಳು ಸೇರಿ ರೂಪುಗೊಂಡಿರುವ ತುಕಾಲಿ ಸಂತೋಷ್ ಬಿಗ್ ಬಾಸ್ ಈ ಸೀಸನ್‌ನ ಯಶಸ್ಸಿಗೆ ಕೊಟ್ಟಿರುವ ಕೊಡುಗೆ ಖಂಡಿತ ಗಮನಾರ್ಹವಾದದ್ದು.

  • Bigg Boss: ದೊಡ್ಮನೆಯಿಂದ ತುಕಾಲಿ ಸಂತು ಎಲಿಮಿನೇಟ್?

    Bigg Boss: ದೊಡ್ಮನೆಯಿಂದ ತುಕಾಲಿ ಸಂತು ಎಲಿಮಿನೇಟ್?

    ಬಿಗ್ ಬಾಸ್ ಮನೆಯ (Bigg Boss Kannada 10) ಫಿನಾಲೆ ವಾರದಲ್ಲಿ ತುಕಾಲಿ ಸಂತೋಷ್ ಔಟ್ ಆಗಿದ್ದಾರೆ. ಫಿನಾಲೆಯ ಅಂತಿಮ ಹಂತದಲ್ಲಿ ದೊಡ್ಮನೆಯ ಆಟದಿಂದ ತುಕಾಲಿ ಸಂತು (Tukali Santhu) ಎಲಿಮಿನೇಟ್ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ನೀಲಿ ಚಿತ್ರಗಳ ತಾರೆ ಬಾಯ್ ಫ್ರೆಂಡ್ ಜೊತೆ ಶವವಾಗಿ ಪತ್ತೆ

    ಹಾಸ್ಯ ನಟ ತುಕಾಲಿ ಸಂತು ದೊಡ್ಮನೆಗೆ ಕಾಲಿಟ್ಟ ದಿನದಿಂದ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಸಂತು ಇದ್ದಾರೆ ಅಂದರೆ ಅಲ್ಲಿ ನಗುವಿಗೆ ಕೊರತೆ ಇಲ್ಲ ಎಂದರ್ಥ. ಅಷ್ಟರ ಮಟ್ಟಿಗೆ ತುಕಾಲಿ ಸಂತು ಮೋಡಿ ಮಾಡಿದ್ದಾರೆ. ಹೀಗಿರುವಾಗ ಫಿನಾಲೆಯ ದಿನ (ಜ.27) ತುಕಾಲಿ ಸಂತು ಬಿಗ್ ಬಾಸ್ ಆಟದಿಂದ ಔಟ್‌ ಆಗಿದ್ದಾರೆ ಎನ್ನಲಾಗುತ್ತಿದೆ.

    ಹಳೆಯ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿದ ಸೀಸನ್ ಅಂದರೆ ಅದು ‘ಬಿಗ್ ಬಾಸ್ ಸೀಸನ್ 10’ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಮೂಡಿಸಿದ ಸೀಸನ್ ಎಂದರೆ ತಪ್ಪಾಗಲಾರದು. ಇನ್ನೂ ಕಳೆದ ವಾರ ನಮ್ರತಾ ಎಲಿಮಿನೇಷನ್ ನಡೆದ ನಂತರ ಇದೀಗ ತುಕಾಲಿ ಸಂತು ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    ತುಕಾಲಿ ಸಂತು ಎಲಿಮಿನೇಷನ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜನಾ ಎಪಿಸೋಡ್ ಪ್ರಸಾರ ಆಗುವವರೆಗೂ ಕಾದುನೋಡಬೇಕಿದೆ.