ಬಿಗ್ ಬಾಸ್ ಮನೆಯ (Bigg Boss Kannada 10) ಫಿನಾಲೆ ವಾರದಲ್ಲಿ ತುಕಾಲಿ ಸಂತು (Tukali Santhosh) ಔಟ್ ಆಗಿದ್ದಾರೆ. ಫಿನಾಲೆಯ ಅಂತಿಮ ಹಂತದಲ್ಲಿರುವ ದೊಡ್ಮನೆಯ ಆಟದಿಂದ ತುಕಾಲಿ ಸಂತು ಎಲಿಮಿನೇಟ್ (Elimination) ಆಗಿದ್ದಾರೆ.

ಹಾಸ್ಯ ನಟ ತುಕಾಲಿ ಸಂತು ದೊಡ್ಮನೆಗೆ ಕಾಲಿಡುವ ಮೂಲಕ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಸಂತು ಇದ್ದಾರೆ ಅಂದರೆ ಅಲ್ಲಿ ನಗುವಿಗೆ ಕೊರತೆ ಇಲ್ಲ ಎಂದರ್ಥ. ಅಷ್ಟರ ಮಟ್ಟಿಗೆ ತುಕಾಲಿ ಸಂತು ಮೋಡಿ ಮಾಡಿದ್ದಾರೆ. ಹೀಗಿರುವಾಗ ಫಿನಾಲೆಯ ದಿನ ತುಕಾಲಿ ಸಂತು ಆಟಕ್ಕೆ ‘ಬಿಗ್ ಬಾಸ್’ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ:ಕಾರ್ತಿಕ್ ವಿನ್ನರ್ ಎನ್ನುವ ಸುಳಿವು ಬಿಟ್ಟು ಕೊಟ್ರಾ ಸುದೀಪ್?

ಹಳೆಯ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿದ ಸೀಸನ್ ಅಂದರೆ ಅದು ಬಿಗ್ ಬಾಸ್ ಸೀಸನ್ 10 ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಮೂಡಿಸಿದ ಸೀಸನ್ ಎಂದರೆ ತಪ್ಪಾಗಲಾರದು. ಕಳೆದ ವಾರದ ನಮ್ರತಾ ಎಲಿಮಿನೇಷನ್ ನಂತರ ತುಕಾಲಿ ಸಂತು ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ.
ತುಕಾಲಿ ಅವರ ಕಾಮಿಡಿಗೆ ಮತ್ತು ಪಂತು ವರ್ತೂರು ಜೊತೆಗಿನ ಬಾಂಧವ್ಯಕ್ಕೆ ಅಭಿಮಾನಿಗಳು ಹಾಡಿಹೊಗಳಿದ್ದರು.






ದೊಡ್ಮನೆ ವಾತಾವರಣ ಸಂಪೂರ್ಣ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಈಗ ರಿಯಲ್ ಗೇಮ್ ಶುರುವಾಗಿದೆ. ಆಗಾಗ ತುಕಾಲಿ ಸಂತೂ, ತಮಗೆ ಟಾಸ್ಕ್ ಆಡಲು ಸರಿಯಾದ ಅವಕಾಶ ಸಿಗುತ್ತಿಲ್ಲ. ಮೂಲೆಗುಂಪು ಮಾಡ್ತಾರೆ ಎಂದೆಲ್ಲಾ ಕುಟುಕಿದ್ದಾರೆ. ನೊಂದವರು ನಾವು ಎಂದೆಲ್ಲಾ ಅವರು ಮಾತನಾಡಿದ್ದಾರೆ. ಇದು ಕಿಚ್ಚನ ಗಮನಕ್ಕೂ ಬಂದಿದ್ದು, ನೊಂದವರು ಎಂದು ಹಣೆಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದ ತುಕಾಲಿ ಸಂತೋಷ್ ಕಾಣಿಸಿದ್ದಾರೆ. ಇದನ್ನೇ ಒಂದು ಹಾಸ್ಯವಾಗಿ ತೆಗೆದುಕೊಂಡ ಕಿಚ್ಚ ಸುದೀಪ್ ಇಂದು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ತುಕಾಲಿ ಅವರನ್ನು ಕಿಚಾಯಿಸಿದ್ದಾರೆ.











