Tag: ತುಂಗಭದ್ರ ನದಿ

  • ತುಂಗಭದ್ರ ತಟದಲ್ಲಿ ವಿಜೃಂಭಣೆಯಿಂದ ಜರುಗಿದ ಆರತಿ ಮಹೋತ್ಸವ

    ತುಂಗಭದ್ರ ತಟದಲ್ಲಿ ವಿಜೃಂಭಣೆಯಿಂದ ಜರುಗಿದ ಆರತಿ ಮಹೋತ್ಸವ

    – ಸಚಿವರು, ಸಂಸದರು, ಶಾಸಕರಿಂದ ತುಂಗಭದ್ರೆಗೆ ಬಾಗಿನ ಸಮರ್ಪಣೆ

    ಕೊಪ್ಪಳ: ಇಲ್ಲಿನ ಪೌರಾಣಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮೀಪದ ತುಂಗಭದ್ರ ನದಿ (Tungabhadra River) ತಟದಲ್ಲಿ ವಿರ್ಜಂಭಣೆಯಿಂದ ತುಂಗಾರತಿ (Tunga Aarti) ಮಹೋತ್ಸವ ನಡೆಯಿತು.

    ಇದೇ ಮೊದಲ ಬಾರಿಗೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದ ತುಂಗಭದ್ರ ನದಿತೀರದಲ್ಲಿ ತುಂಗಭದ್ರ ಆರತಿ ಮಹೋತ್ಸವ ನಡೆಯಿತು. ಗಂಗಾ ಆರತಿ ಮಹೋತ್ಸವದಲ್ಲಿ ಭಾಗಿಯಾಗಿದ್ದ 15 ಅರ್ಚಕರು ತುಂಗಭದ್ರಾ ಆರತಿ ಮಹೋತ್ಸವ ನಡೆಸಿಕೊಟ್ಟರು. ಮಹೋತ್ಸವ ಅಕ್ಷರಶಃ ವಾರಣಾಸಿಯ ಗಂಗಾರತಿ ನೆನಪಿಸುವಂತಿತ್ತು. ತುಂಗಭದ್ರಾ ಆರತಿಗಾಗಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದ ವತಿಯಿಂದ ಸುಮಾರು ಎರಡು ಸಾವಿರ ಆರತಿಗಳನ್ನು ಭಕ್ತರಿಗೆ ಉಚಿತ ನೀಡಲಾಗಿತ್ತು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷವಿಕ್ಕಿ 5 ಹುಲಿಗಳ ಸಾವು ಕೇಸ್:‌ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

    ಮಹೋತ್ಸವದ ಪ್ರಯುಕ್ತ ಚಂಡಿಕಾ ಹೋಮ, ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ, ಮಾಹಿಳೆಯರಿಂದ ವಿಶೇಷ ಕುಂಭ ಮೆರವಣಿಗೆ, ನದಿ ತೀರದಲ್ಲಿ ದೇವಸ್ಥಾನದ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಪೂಜೆ ಕಾರ್ಯಕ್ರಮ ನಡೆಯಿತು. ಈ ಮೊದಲು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬಳಿಕ ನದಿ ತಟದ ವೇದಿಕೆಯಲ್ಲಿ ಹೊಸಪೇಟೆಯ ಅಂಜಲಿ ಕಲಾ ತಂಡದಿಂದ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಕೆ.ರಾಜಶೇಖರ ಹಿಟ್ನಾಳ, ಎಂಎಲ್ಸಿ ಹೇಮಲತಾ ನಾಯಕ ಹಾಗೂ ಇತರೆ ಜನಪ್ರತಿನಿಧಿಗಳು ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಮಾಡಿದರು.

  • ತುಂಗಭದ್ರಾ ನದಿ ನಡುಗಡ್ಡೆಯಲ್ಲಿ ಸಿಲುಕಿದ 120 ಕುರಿ, ಕುರಿಗಾರರ ರಕ್ಷಣೆ

    ತುಂಗಭದ್ರಾ ನದಿ ನಡುಗಡ್ಡೆಯಲ್ಲಿ ಸಿಲುಕಿದ 120 ಕುರಿ, ಕುರಿಗಾರರ ರಕ್ಷಣೆ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ದೇವಘಾಟ ಸಮೀಪ ಇರುವ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕುರಿಗಾರರನ್ನು ಹಾಗೂ 120 ಕುರಿಗಳನ್ನು ಶುಕ್ರವಾರ ರಕ್ಷಣೆ ಮಾಡಲಾಗಿದೆ.

    ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕುರಿಗಾರರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ಕಳೆದ 2-3 ದಿನಗಳಿಂದ ಕುರಿಗಾರರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎನ್ನುವ ಮಾಹಿತಿ ಮೇರೆ ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಹಾಯದೊಂದಿಗೆ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇದನ್ನೂ ಓದಿ: ಶರವೇಗದ ಓಟಕ್ಕೆ ಹೆಸರಾಗಿದ್ದ ಹೋರಿ ತಮಿಳುನಾಡಿಗೆ ಬರೋಬ್ಬರಿ 19 ಲಕ್ಷಕ್ಕೆ ಸೇಲ್

    ಎನ್‌ಡಿಆರ್‌ಎಫ್ ತಂಡದ 16 ಜನರ ಹಾಗೂ ಅಗ್ನಿ ಶಾಮಕ ದಳದ 12 ಜನರ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕುರಿಗಾರರು ಹಾಗೂ 120 ಕುರಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದೆ. ಇದನ್ನೂ ಓದಿ: ವಿವಿ ಪುರಂನ ತಿಂಡಿಗಳನ್ನು ಸವಿದು ಬಾಯ್ತುಂಬ ಹೊಗಳಿದ ಕೇಂದ್ರ ಸಚಿವ ಜೈಶಂಕರ್

    Live Tv
    [brid partner=56869869 player=32851 video=960834 autoplay=true]

  • ಶಿಥಿಲಾವಸ್ಥೆ ತಲುಪಿದ ಕಂಪ್ಲಿ ಸೇತುವೆ – ನಿಲ್ಲದ ಲಾರಿಗಳ ಸಂಚಾರ

    ಶಿಥಿಲಾವಸ್ಥೆ ತಲುಪಿದ ಕಂಪ್ಲಿ ಸೇತುವೆ – ನಿಲ್ಲದ ಲಾರಿಗಳ ಸಂಚಾರ

    ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ತುಂಗಭದ್ರಾ ಸೇತುವೆ ನಿರ್ಮಿಸಿ ಸುಮಾರು ವರ್ಷಗಳೇ ಕಳೆದು ಸೇತುವೆ ಶಿಥಿಲಾವಸ್ಥೆ ತಲುಪಿದೆ. ಆದರೆ ಹೊಸ ಸೇತುವೆ ನಿರ್ಮಾಣವಾಗಬೇಕೆಂಬುದು ಕಂಪ್ಲಿ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

    ಈ ಸೇತುವೆ ಮೇಲೆ 16.5 ಟನ್ ಗಿಂತ ಹೆಚ್ಚು ವಾಹನಗಳ ಸಂಚಾರವನ್ನು ನಿಷೇಧ ಮಾಡಿ ಆರು ವರ್ಷಗಳೇ ಕಳೆದಿದೆ. ಆದರು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶವಿದ್ದರು ಪಾಲನೆಯಾಗದೆ ಇರುವುದು ಸಾರ್ವಜನಿಕರ ಆರೋಪವಾಗಿದೆ.

    ತುಂಗಭದ್ರ ನದಿಗೆ ನೀರು ಬಿಟ್ಟ ಕಾರಣ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೊಸ ಬಸ್ ನಿಲ್ದಾಣ ಪ್ರತಿದಿನ ಲಾರಿ ನಿಲ್ದಾಣವಾಗಿ ಮಾರ್ಪಡಾಗಿದೆ. ರಾತ್ರಿ ಹತ್ತು ಗಂಟೆವರೆಗೆ ಲಾರಿಗಳನ್ನು ಪೊಲೀಸರು ನಿಲ್ಲಿಸಿ ನಂತರ ತಹಶೀಲ್ದಾರರ ಆದೇಶವಾಗಿದೆ ಎಂದು ಲಾರಿಗಳನ್ನು ಬಿಡದೆ ಚಾಲಕರಿಂದ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಬಳಿಕ ಲಾರಿಗಳನ್ನು ಬಿಡಲಾಗುತ್ತಿದೆ ಎಂದು ಚಾಲಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಥಳದಲ್ಲಿ ತಹಶೀಲ್ದಾರ ಶರಣಮ್ಮ ಕಾರು ಬಂದ ಸಂದರ್ಭದಲ್ಲಿ ಸಾರ್ವಜನಿಕರು ಕಾರಿಗೆ ಮುತ್ತಿಗೆ ಹಾಕಿ ಅವರ ಜೊತೆ ಮಾತಿನ ಚಕಮಕಿ ಮಾಡಿದ ಘಟನೆಯೂ ನಡೆದಿದೆ.

  • ಸೆಲ್ಫಿ ಸ್ಪಾಟ್ ಆದ ತುಂಗಭದ್ರಾ ಜಲಾಶಯ

    ಸೆಲ್ಫಿ ಸ್ಪಾಟ್ ಆದ ತುಂಗಭದ್ರಾ ಜಲಾಶಯ

    ಕೊಪ್ಪಳ: ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ತತ್ತರಿಸಿಹೋಗಿದ್ದ ತುಂಗಾಭದ್ರಾ ಜಲಾಶಯ ಈ ಭಾರಿ ಮತ್ತೆ ಮೈದುಂಬಿದ್ದು, ಜಲಾಶಯದಿಂದ ನೀರುಬಿಟ್ಟ ದೃಶ್ಯವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯವೀಗ ಮೈದುಂಬಿಕೊಂಡಿದೆ. ಕಳೆದ ದಿನದಿಂದ 32 ಕ್ರಷ್ಟ್ ಗೇಟ್ ಗಳ ಪೈಕಿ 20 ಗೇಟ್ ಗಳಿಂದ 60 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ.

    ಜಲಾಶಯದಿಂದ ನೀರು ಬಿಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ನಾನಾ ಭಾಗಗಳಿಂದ ಜನ ಬಂದು ಜಲಾಶಯದಿಂದ ನೀರು ಬಿಟ್ಟ ದೃಶ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸಾಯಂಕಾಲ ಸಮಯದಲ್ಲಿ ಕಾಣುವ ಕಲರ್ ಕಲರ್ ದೃಶ್ಯವನ್ನ ನೋಡಲು ಸಾವಿರಾರು ಜನ ಜಲಾಶಯಕ್ಕೆ ಲಗ್ಗೆಯಿಡುತ್ತಿದ್ದರೆ.

    ಈ ಬಾರಿ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ತುಂಗಾಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಕೇವಲ ಮೂರು ಅಡಿ ಬಾಕಿ ಇದೆ. ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಕಳೆದ ದಿನದಿಂದ ಜಲಾಶಯದ ಕ್ರಷ್ಟ್ ಗೇಟ್ ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

  • ಬತ್ತಿದ ತುಂಗಭದ್ರ ಜಲಾನಯನ ಪ್ರದೇಶ: ಜಲಚರಗಳ ಸಾವು

    ಬತ್ತಿದ ತುಂಗಭದ್ರ ಜಲಾನಯನ ಪ್ರದೇಶ: ಜಲಚರಗಳ ಸಾವು

    ಕೊಪ್ಪಳ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ನದಿ ಸಂಪೂರ್ಣ ಬತ್ತಿದ್ದು ಜಲಚರಗಳಿಗೆ ಕುತ್ತು ಬಂದಿದೆ. ಭೀಕರ ಬರದಿಂದ ಬತ್ತಿದ ತುಂಗಾಭದ್ರಾ ನದಿಯಲ್ಲಿನ ಮೀನು ಸೇರಿದಂತೆ ಅನೇಕ ಜಲಚರಗಳು ಸಾವನ್ನಪ್ಪುತ್ತಿವೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ನಂದಿಹಳ್ಳಿ ಗ್ರಾಮದ ಜಲಾನಯನ ಪ್ರದೇಶದಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಮೀನು ಹಿಡಿಯುವುದನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ನದಿಯಲ್ಲಿ ಮೀನಿಲ್ಲದೇ ಜೀವನ ಹೇಗಪ್ಪ ನಡೆಸೋದು ಎಂದು ಪರದಾಡುವಂತಾಗಿದೆ.

    ಕಳೆದ ಬೇಸಿಗೆಯಲ್ಲಿ ನದಿಯಲ್ಲಿ ಅಲ್ಪ ಸ್ವಲ್ಪ ನೀರಿತ್ತು. ಆದರೆ ಈ ಬಾರಿ ಬೇಸಿಗೆಯ ಮುನ್ನವೇ ನದಿಯಲ್ಲಿ ನೀರು ಬತ್ತಿ ಹೋಗಿದೆ. ಕೆಲ ಮೀನುಗಾರರು ಸತ್ತ ಮೀನುಗಳನ್ನೇ ಹಿಡಿದು ತಂದು ಮಾರಾಟ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಮೀನು ತಿನ್ನುವರಿಗೆ ವಿವಿಧ ಕಾಯಿಲೆಗಳು ಬರುವ ಆತಂಕವೂ ಇದೆ. ಇಷ್ಟೇ ಅಲ್ಲದೇ ನದಿ ದಡದಲ್ಲಿ ಸತ್ತು ಬೀಳುವ ಮೀನುಗಳಿಂದ ಜಲಾನಯನ ಪ್ರದೇಶದ ಸುತ್ತಲಿನ ಗ್ರಾಮಗಳಲ್ಲಿ ದುರ್ನಾತ ಹೆಚ್ಚಿದೆ.