Tag: ತುಂಗಭದ್ರ ಜಲಾಶಯ

  • ಕಾಲುವೆಗೆ ಬಿಟ್ಟಿರುವ ಕುಡಿಯುವ ನೀರಿಗೂ ಕನ್ನ – ಅಧಿಕಾರಿಗಳ ನಿರ್ಲಕ್ಷ್ಯ

    ಕಾಲುವೆಗೆ ಬಿಟ್ಟಿರುವ ಕುಡಿಯುವ ನೀರಿಗೂ ಕನ್ನ – ಅಧಿಕಾರಿಗಳ ನಿರ್ಲಕ್ಷ್ಯ

    ಕೊಪ್ಪಳ: ರಾಯಚೂರು (Raichur) ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತುಂಗಭದ್ರಾ ಜಲಾಶಯದಿಂದ (Tungabhadra) ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ಈ ಕಾಲುವೆಯ ಅಕ್ಕಪಕ್ಕದ ರೈತರು ಅಕ್ರಮವಾಗಿ ಪಂಪ್‍ಸೆಟ್‍ಗಳ ಮೂಲಕ ನೀರು ಕಳ್ಳತನ ಮಾಡುತ್ತಿದ್ದಾರೆ.

    ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ಸಹ ಮಳೆಯಾಗದೇ ಇರುವುದರಿಂದ ಕೊಪ್ಪಳದ (Koppala) ಕಾರಟಗಿ, ಗಂಗಾವತಿ, ರಾಯಚೂರಿನ ಮಾನ್ವಿ, ಸಿಂಧನೂರು, ಮಸ್ಕಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಳ್ಳುತ್ತಿದೆ. ಇನ್ನೂ ಒಂದು ವಾರದಲ್ಲಿ ಮಳೆಯಾಗದೆ ಇದ್ದರೆ ನೀರಿನ ಸಮಸ್ಯೆ ಹೆಚ್ಚಾಗುವುದರ ಜೊತೆಗೆ ಜನ ಜಾನುವಾರುಗಳಿಗೂ ನೀರು ದೊರೆಯದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕಾಗಿಯೇ ಕುಡಿಯುವ ನೀರಿನ ಮೂಲಗಳಾಗಿರುವ ಕೆರೆಗಳನ್ನು ತುಂಬಿಸಿಕೊಳ್ಳಲು ತುಂಗಭದ್ರ ಎಡದಂಡೆ ಕಾಲುವೆಯ ಮೂಲಕ ನೀರು ಹರಿಸಲಾಗುತ್ತಿದೆ. ಇದನ್ನೂ ಓದಿ: ಡಿವಿಜಿ ಮನೆ ಶಾಲೆಗೆ ಹೈಟೆಕ್ ಟಚ್ – ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಕಟ್ಟಡ

    ಆದರೆ ರೈತರು ಮಾತ್ರ ಕುಡಿಯುವ ಉದ್ದೇಶದರಿಂದ ಹರಿಸುತ್ತಿರುವ ನೀರನ್ನು ಸಹ ಅಕ್ರಮವಾಗಿ ಪಂಪ್‍ಸೆಟ್‍ಗಳ ಮೂಲಕ ಜಮೀನುಗಳಿಗೆ ಹರಿಸಲು ಮುಂದಾಗಿದ್ದಾರೆ. ಇದರಿಂದ ಕಾಲುವೆಯ ಕೆಳಭಾಗದ ರಾಯಚೂರು, ಮಾನ್ವಿ, ಸಿಂಧನೂರು, ಮಸ್ಕಿ ತಾಲೂಕುಗಳಿಗೆ ಬೇಡಿಕೆಯಷ್ಟು ನೀರು ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

    ಎಲ್ಲೆಲ್ಲಿ ಪೈಪ್ ಅಳವಡಿಕೆ: ಮುನಿರಾಬಾದ್, ಬಂಡಿಹರ್ಲಾಪೂರ, ಸಣಾಪೂರ, ರಾಂಪೂರ, ಮಲ್ಲಾಪೂರ, ಸಿದ್ದಿಕೇರಿ, ದಾಸನಾಳ, ರ್ಹಾಳ, ಶ್ರೀರಾಮನಗರ, ಕೆಸರಹಟ್ಟಿ, ಹಣವಾಳ, ಹೊಸ್ಕೇರಾ, ಬಾಪಿರೆಡ್ಡಿ ಕ್ಯಾಂಪ, ಜಂಗಮರ ಕಲ್ಗುಡಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ರೈತರು ಎಡದಂಡೆ ಕಾಲುವೆಗೆ ಪೈಪ್‍ಗಳನ್ನು ಹಾಕಿಸಿ, ರಾಜಾರೋಷವಾಗಿ ಹಗಲು ರಾತ್ರಿ ಎನ್ನದೆ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲ ಪ್ರಭಾವಿ ವ್ಯಕ್ತಿಗಳು ಕಾಲುವೆಗೆ ಮೋಟರ್ ಅಳವಡಿಕೆ ಮಾಡಿ ದೂರದಲ್ಲಿ ಇರುವ ಅವರ ಜಮೀನುಗಳಲ್ಲಿನ ಕೆರೆಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ.

    ರಾಯಚೂರು ಜಿಲ್ಲೆಯ ತಾಲೂಕುಗಳಿಗೆ ಕುಡಿಯುವುದಕ್ಕಾಗಿ ಹರಿ ಬಿಟ್ಟಿರುವ ನೀರನ್ನು ಕೆರೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳುವ ಸೂಚನೆ ಇದ್ದಿದ್ದು, ಕಾಲುವೆಯ ಕೆಳಭಾಗ ಹಾಗೂ ಮೇಲ್ಭಾಗದ ರೈತರು ಜಮೀನುಗಳಿಗೆ ಬಳಕೆ ಮಾಡುವಂತ್ತಿಲ್ಲ. ಅದಕ್ಕಾಗಿಯೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗಸ್ತು ತಿರುಗಾಡಲು ನಿಯೋಜನೆ ಮಾಡಲಾಗಿದೆ. ಕಾಲುವೆಯ ಮೇಲೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಆದರೂ ಈ ರೀತಿ ನೀರನ್ನು ಕಳ್ಳತನ ಮಾಡಲಾಗುತ್ತಿದೆ. ಇದನ್ನೂ ಓದಿ: ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಆದಿ ರಾಜೀನಾಮೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಳುಗಡೆಯಾದ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ: ಮತ್ತೆ ಪ್ರವಾಹದ ಭೀತಿ

    ಮುಳುಗಡೆಯಾದ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ: ಮತ್ತೆ ಪ್ರವಾಹದ ಭೀತಿ

    ಕೊಪ್ಪಳ: ಜಲಾಶಯದಿಂದ ತುಂಗಭದ್ರಾ ನದಿಗೆ ಅಪಾರ ನೀರು ಹರಿದು ಬಂದಿದ್ದು, ಮತ್ತೆ ಪ್ರವಾಹದ ಭೀತಿ ಹೆಚ್ಚಾಗುತ್ತಿದೆ.

    ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಲ್ಲಿರುವ ತುಂಗಭದ್ರಾ ನದಿಗೆ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯಕ್ಕೆ 72,653 ಕ್ಯೂಸೆಕ್ ಒಳಹರಿವು ಇದೆ. ಈ ಹಿನ್ನೆಲೆ ಸಂಪೂರ್ಣವಾಗಿ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ ಮುಳುಗಡೆಯಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ – ಶಾಲಾ, ಕಾಲೇಜುಗಳಿಗೆ ರಜೆ

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಶ್ರೀಕೃಷ್ಣದೇವರಾಯರ ಸಮಾಧಿ ಮಂಟಪವಿದೆ. ನವಬೃಂದಾವನ ಗಡ್ಡೆ ಸಂಪೂರ್ಣ ಜಲಾವೃತಗೊಂಡಿದ್ದು, ನದಿಯ ಮಟ್ಟ ಮೀರಿ ನೀರು ಹರಿಯುತ್ತಿದೆ. ಪರಿಣಾಮ ಮತ್ತೆ ಗಂಗಾವತಿ ಕಂಪ್ಲಿ ಸೇತುವೆ ಮುಳುಗುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಟಿಬಿ ಡ್ಯಾಂನಿಂದ 2.22 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ: ಕಂಪ್ಲಿಯಲ್ಲಿ 25 ಮನೆ ಜಲಾವೃತ

    ಟಿಬಿ ಡ್ಯಾಂನಿಂದ 2.22 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ: ಕಂಪ್ಲಿಯಲ್ಲಿ 25 ಮನೆ ಜಲಾವೃತ

    ಕೊಪ್ಪಳ: ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ತುಂಗಾಭದ್ರಾ ಜಲಾಶಯವು ತುಂಬಿದೆ. ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

    ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಬರದ ನಾಡು ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ತುಂಗಾಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲೆಯ ಮುನಿರಾಬಾದ್ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯವು ಸಂಪೂರ್ಣ ತುಂಬಿದೆ. ಇದರಿಂದಾಗಿ ಜಲಾಶಯದಿಂದ ಗುರುವಾರ ತುಂಗಭದ್ರಾ ನದಿಗೆ 2 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು.

    ಶುಕ್ರವಾರವೂ ಸಹ 33 ಕ್ರಸ್ಟ್ ಗೇಟುಗಳ ಮೂಲಕ ನದಿಗೆ 2.22 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬೀಡಲಾಗಿದೆ. ಕಳೆದ 10 ವರ್ಷಗಳ ಬಳಿಕ ತುಂಗಾಭದ್ರ ನದಿಯು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಕಂಪ್ಲಿ ತಾಲೂಕಿನಲ್ಲಿ ಬರುವ ಅನೇಕ ಸ್ಮಾರಕಗಳು ಮುಳುಗಡೆಗೊಂಡಿವೆ. ಅಲ್ಲದೆ ಕಂಪ್ಲಿ ಸೇತುವೆಯು ಸಹ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ಕಂಪ್ಲಿ ಕೋಟೆ ಪ್ರದೇಶದ 25 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಈಗಾಗಲೇ ತಾಲೂಕು ಆಡಳಿತ ಮಂಡಳಿಯು 80ಕ್ಕೂ ಹೆಚ್ಚು ಮಂದಿ ನಿರಾಶ್ರಿತರಿಗೆ ಕಂಪ್ಲಿ ಸೇತುವೆಯ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ಆರಂಭಿಸಿದೆ.

    ಅಲ್ಲದೇ ಕಂಪ್ಲಿ ಪಟ್ಟಣದಲ್ಲಿಯೂ ಗಂಜಿಕೇಂದ್ರ ತೆರೆಯಲು ಸಿದ್ಧತೆ ನಡೆಸಿದೆ. ಆದರೆ ನದಿ ನೀರು ಮನೆಗಳಿಗೆ ನುಗ್ಗಿದರೂ ಜನರು ಮನೆಯಿಂದ ಹೊರಬರುತ್ತಿಲ್ಲ. ಸ್ವತಃ ಕಂಪ್ಲಿ ತಹಶೀಲ್ದಾರ್ ರೇಣುಕಮ್ಮನವರು ನದಿ ನೀರಿಗಿಳಿದು ಜನರ ಮನವೊಲಿಸುತ್ತಿದ್ದಾರೆ. ಅಲ್ಲದೇ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿಮಾಡಿಕೊಳ್ಳುತ್ತಿದ್ದಾರೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv