ಕೊಪ್ಪಳ/ಬಳ್ಳಾರಿ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯದಿಂದ (TB Dam) 1 ಲಕ್ಷ ಕ್ಯೂಸೆಕ್ ನೀರನ್ನು ರಿಲೀಸ್ ಮಾಡಲಾಗಿದೆ. ಪರಿಣಾಮ ಕಂಪ್ಲಿ ಸೇತುವೆ ಮುಳುಗಡೆಯಾಗಿ ಬಳ್ಳಾರಿ-ಗಂಗಾವತಿ ಸಂಪರ್ಕ ಸ್ಥಗಿತಗೊಂಡಿದೆ.
ಏಕಾಏಕಿ ಅಪಾರ ಪ್ರಮಾಣದ ನೀರು ನದಿಗೆ ರಿಲೀಸ್ ಮಾಡಿರುವುದರಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಬಳ್ಳಾರಿ-ಗಂಗಾವತಿ ಸಂಪರ್ಕ ಕಡಿತವಾಗಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರ ನಿಯೋಜನೆ ಮಾಡಲಾಗಿದೆ.
ಕೊಪ್ಪಳ: ಮಲೆನಾಡಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಟಿಬಿ ಡ್ಯಾಂಗೆ (TB Dam) ಒಳಹರಿವು ಹೆಚ್ಚಾಗಿದೆ. ಹೀಗಾಗಿ ಡ್ಯಾಂನ 26 ಗೇಟ್‌ಗಳಿಂದ 90,893 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಹಂಪಿ (Hampi) ಸ್ಮಾರಕಗಳಿಗೆ ಮುಳುಗಡೆ ಭೀತಿ ಎದುರಾಗಿದೆ.ಇದನ್ನೂ ಓದಿ: ಮಳೆಯಬ್ಬರ – ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಸದ್ಯ ಜಲಾಶಯದಿಂದ 90,893 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಜಲಾಶಯದ 33 ಗೇಟ್‌ಗಳ ಪೈಕಿ 26 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿದೆ.
ಏಕಾಏಕಿ ನೀರನ್ನು ಬಿಡುಗಡೆ ಮಾಡಿದ್ದು, ತುಂಗಭದ್ರಾ ನದಿ (Tungabhadra River) ಪಾತ್ರದಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳ ಜನರು ನದಿ ತೀರಕ್ಕೆ ಹೋಗದಂತೆ ಟಿಬಿ ಬೋರ್ಡ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾದರೆ, ಇನ್ನಷ್ಟು ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ 90,893 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಿರುವುದರಿಂದ ಹಂಪಿಯ ಕೆಲ ಸ್ಮಾರಕಗಳಿಗೆ ಮುಳುಗಡೆ ಭೀತಿ ಎದುರಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್ – ಟಾಯ್ ಗನ್ ತೋರಿಸಿ ಚಿನ್ನ ರಾಬರಿ
ಬಳ್ಳಾರಿ (Ballary) ಜಿಲ್ಲೆಯ ಹೊಸಪೇಟೆ (Hosapete) ಹೊರವಲಯದ ಹಾಗೂ ಕೊಪ್ಪಳದ (Koppal) ಮುನಿರಾಬಾದ್ ಬಳಿಯಿರುವ ಡಿಬಿ ಡ್ಯಾಂ (TB Dam) 105 ಟಿಎಂಸಿ ಗರಿಷ್ಟ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇದೀಗ 77 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದ ಸುರಕ್ಷತಾ ದೃಷ್ಟಿಯಿಂದ 62 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಇದರ ಮನಮೋಹಕ ದೃಶ್ಯ÷ಗಳು `ಪಬ್ಲಿಕ್ ಟಿವಿ’ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕೊಪ್ಪಳ/ಬಳ್ಳಾರಿ: ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ 64 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಪರಿಣಾಮ ಐತಿಹಾಸಿಕ ಸ್ಮಾರಕಗಳು ಮುಳುಗಡೆ ಭೀತಿಯಲ್ಲಿವೆ.
ಬಳ್ಳಾರಿಯ ಹೊಸೆಪೇಟೆ ಹೊರವಲಯ ಹಾಗೂ ಕೊಪ್ಪಳದ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ. ಡ್ಯಾಂನ ಸುರಕ್ಷತಾ ದೃಷ್ಟಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಐತಿಹಾಸಿಕ ಸ್ಮಾರಕಗಳು ಮುಳುಗಡೆ ಭೀತಿಯಲ್ಲಿವೆ.ಇದನ್ನೂ ಓದಿ: ಕಾಟಾಚಾರದ ಸರ್ವೇಗೆ 3.6 ಕೋಟಿ ವೆಚ್ಚ – ಬೇಕರಿ, ಅಂಗಡಿಗಳಿಗೂ ಜಾತಿ ಸಮೀಕ್ಷೆ ಸ್ಟಿಕ್ಕರ್!
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರುವ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪಕ್ಕೆ ಮುಳುಗಡೆ ಭೀತಿ ಎದುರಾಗಿದೆ. ಇದಲ್ಲದೇ ರೈತರಿಗೂ ಕೂಡ ಸಂಕಷ್ಟ ಎದುರಾಗಿದ್ದು, ಪಂಪ್‌ಸೆಟ್‌ಗಳು ಕೊಚ್ಚಿಹೋಗುತ್ತಿವೆ. ಹೀಗಾಗಿ ಪಂಪ್‌ಸೆಟ್, ಪೈಪ್‌ಗಳನ್ನು ತೆರವುಗೊಳಿಸುತ್ತಿದ್ದಾರೆ.
ಕೊಪ್ಪಳ: ರಾಜ್ಯದ ಎರಡನೇ ಅತಿದೊಡ್ಡದಾದ ತುಂಗಭದ್ರಾ ಜಲಾಶಯವು (Tungabhadra Dam) ಅವಧಿಗೂ ಮುಂಚೆಯೇ ಅರ್ಧದಷ್ಟು ಭರ್ತಿಯಾಗಿದ್ದು, ಇದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ಜು.1ರಂದು ಅಣೆಕಟ್ಟೆಯಿಂದ ಎಲ್ಲಾ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಕಳೆದ ವರ್ಷ ಜಲಾಶಯದಲ್ಲಿ 25 ಟಿಎಂಸಿ ಮಾತ್ರ ನೀರು ಇತ್ತು. ಉತ್ತಮವಾಗಿ ಮುಂಗಾರು ಮಳೆಯಾದ ಹಿನ್ನೆಲೆ ಕೆಲವೇ ದಿನಗಳಲ್ಲಿ ಒಳಹರಿವು ಲಕ್ಷಗಟ್ಟಲೇ ಏರಿಕೆಯಾಯಿತು. ಇದರಿಂದ ಅಣೆಕಟ್ಟೆಗೆ ಏಕಾಏಕಿ ನೀರು ಹೆಚ್ಚಾಗಿತ್ತು. ಹಾಗಾಗಿ ಜನಪ್ರತಿನಿಧಿಗಳು ರೈತರ ಬೇಡಿಕೆಯಂತೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ಜು.21ಕ್ಕೆ ನೀರು ಬಿಡಲಾಗಿತ್ತು. ಆದರೆ ಈ ಬಾರಿ ಪಶ್ಚಿಮಘಟ್ಟಗಳಲ್ಲಿ ಭಾರಿ ಮಳೆಯಾಗಿದ್ದು, ತುಂಗಾ ಮತ್ತು ಭದ್ರಾ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿದೆ. ಎರಡು ಜಲಾಶಯಗಳಿಂದಲೂ ನೀರು ನದಿಗೆ ಹರಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಜಲಾಶಯದಲ್ಲಿ 50 ಟಿಎಂಸಿ ನೀರು ಸಂಗ್ರಹವಾಗಿದೆ.ಇದನ್ನೂ ಓದಿ: ಕೋಮುಲ್ ಚುನಾವಣೆಯಲ್ಲಿ ಹಣದ ಹೊಳೆ – ಒಂದೊಂದು ಮತಕ್ಕೆ 5 ರಿಂದ 7 ಲಕ್ಷ ಸಂದಾಯ
ಮುಂಗಾರು ಆರಂಭದಲ್ಲಿಯೇ ತುಂಗಭದ್ರಾ ಜಲಾಶಯದಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತಲೂ 20 ದಿನ ಮುಂಚೆಯೇ ನೀರು ಬಿಡುಗಡೆಗೆ ಸರ್ಕಾರ ನಿರ್ಧರಿಸಿದಂತೆ ಭಾಸವಾಗುತ್ತಿದೆ. ಈ ಹಿನ್ನೆಲೆ ಜೂ.27ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಿಗದಿಪಡಿಸಲಾಗಿದೆ. ಈ ಮೂಲಕ ಜು.1ರಿಂದ ತುಂಗಭದ್ರಾ ಅಣೆಕಟ್ಟೆಯ ಎಡದಂಡೆ, ಬಡಲದಂಡೆ, ವಿಜಯನಗರ, ಹೈಲೆವೆಲ್ ಕಾಲುವೆ ಸೇರಿ ಎಲ್ಲ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ.
ತುಂಗಭದ್ರಾ ಜಲಾಶಯವು 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರವು ತುಂಗಭದ್ರಾ ಜಲಾಶಯದ ಸುರಕ್ಷತಾ ದೃಷ್ಟಿಯಿಂದ 80 ಟಿಎಂಸಿ ನೀರು ಸಂಗ್ರಹ ಮಾಡುವಂತೆ ಸಲಹೆ ನೀಡಿತ್ತು. ಈಗಾಗಲೇ ತುಂಗಭದ್ರಾ ಮಂಡಳಿಯು ತಮ್ಮ ಸಭೆಯಲ್ಲಿ ಚರ್ಚಿಸಿ, ಪ್ರಾಧಿಕಾರದ ಸಲಹೆಯಂತೆ 80 ಟಿಎಂಸಿ ನೀರು ಸಂಗ್ರಹ ಮಾಡಲು ಅನುಮೋದನೆ ಪಡೆದಿದೆ ಎನ್ನಲಾಗಿದ್ದು, ಆದೇಶ ಹೊರಡಿಸುವುದು ಮಾತ್ರ ಬಾಕಿ ಇದೆ.
ಮುಂಗಾರು ಬೆಳೆಗೆ 130 ಟಿಎಂಸಿ ನೀರು ಬೇಕಾಗುತ್ತದೆ. ಪ್ರಸ್ತುತ 50 ಟಿಎಂಸಿ ನೀರು ಸಂಗ್ರಹವಾಗಿದೆ. ನವೆಂಬರ್ ತಿಂಗಳಲ್ಲಿ ಸೈಕ್ಲೋನ್ ಬಂದು, ಮಳೆಯಾಗುವ ಸಾಧ್ಯತೆ ಇದೆ. ಕೇವಲ 11 ಸಾವಿರ ಕ್ಯೂಸೆಕ್ ಒಳಹರಿವು ಬಂದರೂ ಕೂಡಾ 80 ಟಿಎಂಸಿಯಷ್ಟು ತಟಸ್ಥತೆ ಕಾಯ್ದುಕೊಂಡು, ಡೆಡ್ ಸ್ಟೋರೇಜ್, ಆವಿ, ಕುಡಿಯಲು, ಜಲಚರ ಸೇರಿ ಎಲ್ಲ ಸೇರಿ 15 ಟಿಎಂಸಿ ಬೇಕಾಗುತ್ತದೆ. ಇದರ ಹೊರತಾಗಿ 65 ಟಿಎಂಸಿ ನೀರು ಸಂಗ್ರಹವಾದರೆ, ಮತ್ತೊಮ್ಮೆ ರೈತರಿಗೆ ನೀರು ಲಭಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಹೈಲೆವೆಲ್ ಕಾಲುವೆಯ ರೈತರು ಹತ್ತಿ, ಮೆಣಸಿನಕಾಯಿ 6 ತಿಂಗಳ ಬೆಳೆ ಬೆಳೆಯುತ್ತಾರೆ. ಇವರು ಉದಾರತೆ ತೋರಿದರೆ, ಉಳಿದ ಎಲ್ಲ ಕಾಲುವೆಗಳ ರೈತರಿಗೆ ಅನುಕೂಲ ಆಗಲಿದೆ.ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ; ರಣಪ್ರವಾಹಕ್ಕೆ ಇಬ್ಬರು ಬಲಿ, 15-20 ಕಾರ್ಮಿಕರು ಕೊಚ್ಚಿ ಹೋಗಿರುವ ಶಂಕೆ
ಕೊಪ್ಪಳ/ಬಳ್ಳಾರಿ: ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯ ಹಾಗೂ ಕೊಪ್ಪಳದ (Koppal) ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ (Tungabhadra) ಗೃಹ ಸಚಿವ ಡಾ ಜಿ.ಪರಮೇಶ್ವರ್ (G.Parameshwar) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ತೆರಳಿ ಪರಿಶೀಲಿಸಿದರು. ಅಳವಡಿಸಲಾಗಿರುವ ಸ್ಟಾಪ್ ಲಾಗ್ ಗೇಟ್‌ನ್ನು ವೀಕ್ಷಣೆ ಮಾಡಿದರು. ಬಳಿಕ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತರಿಗೆ ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಆಗದಂತೆ ಆದಷ್ಟು ಬೇಗ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಗೃಹ ಸಚಿವರಿಗೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸಾಥ್ ನೀಡಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನನಗೆ ಗೊತ್ತಿಲ್ಲ. ಇನ್ನೂ ಬಿ.ಆರ್.ಪಾಟೀಲ್ ಲಂಚದ ಆರೋಪ ಆಡಿಯೋ ವಿಚಾರವಾಗಿ ಅವರು ಹೇಳಿರುವುದು ಗಂಭೀರ ಆರೋಪ ಅಲ್ಲ. ಅವರು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಲಿ. ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್.ಕೆ ಪಾಟೀಲ್ ಗಣಿ ಅಕ್ರಮ ಪತ್ರದ ವಿಚಾರವಾಗಿ ಮಾತನಾಡಿ, ಗಣಿ ಅಕ್ರಮದಲ್ಲಿ 1.5 ಲಕ್ಷ ಕೋಟಿ ರೂ. ದುರುಪಯೋಗವಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಲೂಟಿ ಮಾಡಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಲಹೆ ನೀಡಿದ್ದಾರೆ. ಈಗ ಪತ್ರ ಬರೆದಿದ್ದಾರೆ. ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಹೊರಟಿದ್ದೇವೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಅವಶ್ಯಕತೆಯಿದ್ದರೆ ಅಲ್ಲಿಯೇ ಸ್ಟೇಷನ್ ಮಾಡುತ್ತೇವೆ. ರಾಯರೆಡ್ಡಿಯವರು ಗಂಗಾವತಿ ಕರ್ನಾಟಕ ಹಬ್ ಆಗಿದೆ ಎಂದಿದ್ದಾರೆ. ಅವರ ಸಲಹೆ ಹಾಗೂ ದೂರನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಹೇಳಿದ್ದೇವೆ. ರಾಜ್ಯ ಸರ್ಕಾರ ಎರಡು ವರ್ಷದಿಂದ ಜನಪರ ಕೆಲಸ ಮಾಡುತ್ತಿದೆ. ಜೊತೆಗೆ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ. ಸಬ್ ಇನ್ಸ್ಪೆಕ್ಟರ್ ಹಗರಣದ ನಂತರ ನೇಮಕಾತಿಯಾಗಿಲ್ಲ. ರಾಜ್ಯದಲ್ಲಿ ಸಾವಿರಾರು ಪಿಎಗಳ ಸ್ಥಾನ ಖಾಲಿಯಾಗಿವೆ ಎಂದು ತಿಳಿಸಿದರು.ಇದನ್ನೂ ಓದಿ: ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ
ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ ಹಾಗೂ ಕೊಪ್ಪಳದ (Koppal) ಮುನಿರಾಬಾದ್ (Munirabad) ಬಳಿಯಿರುವ ತುಂಗಭದ್ರಾ ಜಲಾಶಯ 1,633 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಸದ್ಯ 1,608.23 ಅಡಿ ನೀರಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿರುವುದರಿಂದ ತುಂಗಭದ್ರಾ ನದಿ ಮೂಲಕ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ 105 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇಂದು ಬರೋಬ್ಬರಿ 34.221 ಟಿಎಂಸಿ ನೀರಿದೆ.
ಇನ್ನೂ ಜಲಾಶಯಕ್ಕೆ 51,654 ಕ್ಯುಸೆಕ್ ಒಳಹರಿವಿದ್ದು, 215 ಕ್ಯುಸೆಕ್ ಹೊರಹರಿವಿದೆ. ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ 15 ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. ಜೂನ್ ತಿಂಗಳಲ್ಲೇ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿದೆ.ಇದನ್ನೂ ಓದಿ: ವಯನಾಡಲ್ಲಿ ಮಳೆಯಬ್ಬರ – ಕಬಿನಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ಒಳಹರಿವು
ಬಳ್ಳಾರಿ: ಮೂರು ರಾಜ್ಯ 8 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ (Tungabhadra Reservoir) ಬತ್ತಿ ಬರಿದಾಗಿದ್ದು ಜಲಾಶಯದ ವ್ಯಾಪ್ತಿಯ ರೈತರಿಗೆ ಇದೀಗ ಆತಂಕ ಶುರುವಾಗಿದೆ.
105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲೀಗ ಕೇವಲ 5 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. 3 ಟಿಎಂಸಿ ಡೆಡ್ ಸ್ಟೋರೇಜ್ ಇರೋ ಜಲಾಶಯದಲ್ಲೀಗ ಕೇವಲ 2 ಟಿಎಂಸಿ ನೀರು ಮಾತ್ರ ಹೆಚ್ಚುವರಿ ಇದ್ದು, ಆ 2 ಟಿಎಂಸಿ ನೀರಿನಲ್ಲಿಯೇ ಇನ್ನೊಂದು ತಿಂಗಳು ಕುಡಿಯುವ ನೀರು ಪೂರೈಕೆ ಮಾಡಬೇಕಾದ ಅನಿವಾರ್ಯತೆ ಇದೆ. ಇದನ್ನೂ ಓದಿ: ಮನೆ ಮಾಲೀಕನ ಪತ್ನಿಯನ್ನೇ ಲವ್ ಮಾಡಿ ಮದುವೆಯಾಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!
ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ನಾಲ್ಕು ಜಿಲ್ಲೆಗಳು ಸೇರಿದಂತೆ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಒಟ್ಟು 8 ಜಿಲ್ಲೆಗಳಿಗೆ ಇದೇ ಜಲಾಶಯದ ನೀರು ಅನಿವಾರ್ಯ. ಆದರೆ ನಿರೀಕ್ಷೆಯಂತೆ ಮಳೆ ಆಗದೇ ಕಲ್ಯಾಣ ಕರ್ನಾಟಕದ ನಾಲ್ಕೂ ಜಿಲ್ಲೆಗಳು ಸೇರಿದಂತೆ 8 ಜಿಲ್ಲೆಗಳಿಗೆ ನೀರಿನ ಹಾಹಾಕಾರ ಶುರುವಾಗೋದು ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ ಇರುವ ನೀರನ್ನ ಮ್ಯಾನೇಜ್ ಮಾಡಿ ಬಳಕೆ ಮಾಡೋದೇ ಟಿಬಿ ಬೋರ್ಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: ಉಗ್ರರ ದಾಳಿ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ ಅತುಲ್ ಕುಲಕರ್ಣಿ
ಕೊಪ್ಪಳ: ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ರೈತರಿಗೆ ಸಂಕಷ್ಟ ಎದುರಾಗಲಿದ್ದು, ಮಾ.31ರ ವರೆಗೆ ಮಾತ್ರ ಎಡದಂಡೆ ಕಾಲುವೆಗೆ ನೀರು ಹರಿಸಲು ಸಾಧ್ಯ ಎಂಬ ಮಾತುಗಳು ಅಧಿಕಾರಿಗಳಿಂದ ಕೇಳಿಬಂದಿವೆ.
ತಡವಾಗಿ ಭತ್ತ ನಾಟಿ ಮಾಡಿದ ರೈತರಿಗೆ ಈ ಬಾರಿಯೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ರೈತರು ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಅಗತ್ಯವಿದೆ. ಹೌದು, ಈ ಬಾರಿ ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬಂದಿದ್ದು, ಗೇಟ್ ಕೊಚ್ಚಿ ಹೋಗಿ ಡ್ಯಾಂ ಖಾಲಿಯಾದರೂ ಮತ್ತೇ ಜಲಾಶಯ ಭರ್ತಿ ಆಗಿದೆ. ಹಾಗಾಗಿ ಕೆಲ ರೈತರು ಭರಪೂರ ನೀರು ಸಿಗಬಹುದು ಎಂದುಕೊಂಡು ತಡವಾಗಿ ಭತ್ತ ನಾಟಿ ಮಾಡಿದ್ದಾರೆ. ಕಾಲುವೆಯ ಮೇಲ್ಭಾಗದಲ್ಲಿ ಅನೇಕ ರೈತರು ಜನವರಿ 2ನೇ ವಾರದ ನಂತರವೂ ಭತ್ತ ನಾಟಿ ಮಾಡಿದ್ದಾರೆ. ಇಂತಹ ರೈತರು ಈ ಬಾರಿಗೂ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.ಇದನ್ನೂ ಓದಿ: ಕೈಲಾಸ – ಮಾನಸ ಸರೋವರ ಯಾತ್ರೆ ಪುನರಾರಂಭಕ್ಕೆ ಭಾರತ, ಚೀನಾ ನಿರ್ಧಾರ
ಸದ್ಯ ಡ್ಯಾಂನಲ್ಲಿನ ನೀರಿನ ಲಭ್ಯತೆ ಆಧರಿಸಿ, ಮಾರ್ಚ್ 31ರ ವರೆಗೆ ಮಾತ್ರ ಎಡದಂಡೆ ಕಾಲುವೆಗೆ ನೀರು ನೀಡಲು ಸಾಧ್ಯ ಎಂಬ ಮಾತುಗಳು ಅಧಿಕಾರಿಗಳಿಂದ ಕೇಳಿ ಬಂದಿವೆ. ಇದರಿಂದ ರೈತರು ಮಾರ್ಚ್ 31ರ ಒಳಗಾಗಿ ಭತ್ತ ಕಟಾವು ಮಾಡುವಂತೆ ನಾಟಿ ಮಾಡುವ ಅಗತ್ಯ ಇದೆ. ಒಂದೊಮ್ಮೆ ಮಾರ್ಚ್ 31ರ ಒಳಗೆ ಕಟಾವಿಗೆ ಬಾರದಿದ್ದರೆ ನೀರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.
ಡ್ಯಾಂನಲ್ಲಿ ಎಷ್ಟಿದೆ ನೀರು?
ಸದ್ಯ ತುಂಗಭದ್ರಾ ಜಲಾಶಯದಲ್ಲಿ 57.119 ಟಿಎಂಸಿ ನೀರಿದ್ದು, ಎಡದಂಡೆ ಸೇರಿ ವಿವಿಧ ಕಾಲುವೆ ಮತ್ತು ನದಿಗೆ ಸದ್ಯ 11,136 ಕ್ಯೂಸೆಕ್ ನೀರಿನ ಹೊರಹರಿವು ಇದೆ. ಸದ್ಯ ದಿನಕ್ಕೆ ಬರೋಬ್ಬರಿ 1 ಟಿಎಂಸಿ ನೀರು ಡ್ಯಾಂನಿಂದ ಹೊರಗೆ ಹೋಗುತ್ತಿದೆ. ಈ ಪೈಕಿ ಸದ್ಯ ಎಡದಂಡೆ ಕಾಲುವೆಗೆ 3,800 ಕ್ಯೂಸೆಕ್‌ನಂತೆ ನೀರು ಹರಿಸಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರು ಹೊರಗೆ ಹೋದರೆ ಮುಂದಿನ 60 ದಿನದಲ್ಲಿ ಡ್ಯಾಂ ಬರಿದಾಗಲಿದೆ.
ರಾಯಚೂರು-ಕೊಪ್ಪಳ, ವಿಜಯನಗರ-ಬಳ್ಳಾರಿ ಜಿಲ್ಲೆಗಳಿಗೆ ಬೇಸಿಗೆಯ ಕುಡಿವ ನೀರಿಗೆ ತುಂಗಭದ್ರಾ ಜಲಾಶಯವೇ ಆಧಾರ. ಈ ಹಿನ್ನೆಲೆ ಕುಡಿವ ನೀರು ಮತ್ತು ಡೆಡ್ ಸ್ಟೋರ್‌ಗಾಗಿ ಡ್ಯಾಂನಲ್ಲಿ ಕನಿಷ್ಠ 3 ಟಿಎಂಸಿ ನೀರು ಉಳಿಸಿಕೊಂಡೆ ಕೃಷಿಗೆ ನೀರು ಕೊಡಬೇಕು. ಜೊತೆಗೆ ಬಿಸಿಲಿಗೆ ಆವಿಯಾಗುವುದು, ಸಿಸ್ಟಮ್ ಲಾಸ್ ಸೇರಿದರೆ ಸದ್ಯ ಡ್ಯಾಂನಲ್ಲಿ ಕೇವಲ 57 ಟಿಎಂಸಿ ನೀರು ಮಾತ್ರ ಉಳಿದಂತಿದೆ. ಈ ಹಿನ್ನೆಲೆ ರೈತರು ಮಿತವಾಗಿ ನೀರು ಬಳಕೆ ಮಾಡುವ ಮೂಲಕ ಭತ್ತ ಬೆಳೆಯಬೇಕಿದೆ.
ಪರ್ಯಾಯ ವ್ಯವಸ್ಥೆ ಅತ್ಯಗತ್ಯ
ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಕೆಲ ರೈತರು ಜನವರಿಯಲ್ಲಿಯೂ ಭತ್ತ ನಾಟಿ ಮಾಡುತ್ತಿದ್ದಾರೆ. ಇದರಿಂದ ಬೆಳೆ ಕಟಾವಿಗೆ ಬರಲು ಏಪ್ರಿಲ್‌ವರೆಗೂ ಕಾಯಬೇಕಾಗುತ್ತದೆ. ಆದರೆ, ವಾಸ್ತವದಲ್ಲಿ ಮಾರ್ಚ್ ನಂತರ ನೀರು ಕೊಡುವುದು ಕಷ್ಟ ಸಧ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ. ಈ ಹಿನ್ನೆಲೆ ಜನವರಿ ತಿಂಗಳಲ್ಲಿ ಭತ್ತ ನಾಟಿ ಮಾಡುವ ರೈತರು ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ.ಇದನ್ನೂ ಓದಿ: Kerala | ಕೌಟುಂಬಿಕ ನ್ಯಾಯಾಲಯದಾಚೆ ವಿವಾದ ಇತ್ಯರ್ಥಕ್ಕೆ ‘ಸಾಮರಸ್ಯ ತಾಣ’
ಬೆಂಗಳೂರು/ಕೊಪ್ಪಳ: ಜಿಲ್ಲೆಯ ತುಂಗಭದ್ರಾ ಜಲಾಶಯ (Tundabhadra Dam) ಕರ್ನಾಟಕ (Karnataka) ಸೇರಿ ಮೂರು ರಾಜ್ಯಗಳ ಲಕ್ಷಾಂತರ ಜನರಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಆಧಾರವಾಗಿದೆ. ಸದ್ಯ ಜಲಾಶಯದ ನೀರನ್ನು ಹಂಚಿಕೆ ಮಾಡುವ ವಿಚಾರವಾಗಿ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಿತು.
ಗುರುವಾರ ಬೆಂಗಳೂರಿನ (Bengaluru) ವಿಕಾಸಸೌಧದಲ್ಲಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಜಲಾಶಯದಲ್ಲಿ ಸದ್ಯ ಉಳಿದಿರುವ ನೀರನ್ನು ಹಂಚಿಕೆ ಮಾಡುವ ವಿಚಾರವಾಗಿ ಚರ್ಚೆ ನಡೆಸಲಾಯಿತು. ಜೊತೆಗೆ ಎಡದಂಡೆ ಕಾಲುವೆ, ಎಡದಂಡೆ ವಿಜಯನಗರ ಕಾಲುವೆ, ಬಲದಂಡೆ ಮೇಲ್ಮಟ್ಟದ ಕಾಲುವೆ, ಬಲದಂಡೆ ಕೆಳಮಟ್ಟದ ಕಾಲುವೆ, ರಾಯಬಸಣ್ಣ ಕಾಲುವೆ, ಎಡದಂಡೆ ಮೇಲ್ಮಟ್ಟದ ಕಾಲುವೆಗಳಿಗೆ ಯಾವ ಸಮಯದಲ್ಲಿ ಎಷ್ಟು ನೀರನ್ನು ಬಿಡಬೇಕು ಎನ್ನುವ ಕುರಿತು ನಿರ್ಧರಿಸಲಾಯಿತು.ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಐಸಿಸಿ
ಜಿಲ್ಲೆಯ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯ, ಕರ್ನಾಟಕ ಸೇರಿ ಮೂರು ರಾಜ್ಯಗಳ ಲಕ್ಷಾಂತರ ಜನರಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಆಧಾರವಾಗಿದೆ. ಈ ಜಲಾಶಯ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಜನರಿಗೆ ಜೀವನದಿಯಾಗಿದೆ. ಜೊತೆಗೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದ ಅನೇಕ ಜಿಲ್ಲೆಯ ಜನರು ಕೂಡ ಇದೇ ಜಲಾಶಯದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.
ಈ ಜಲಾಶಯದ ನೀರನ್ನು ನಂಬಿ ಸರಿಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಸುತ್ತಮುತ್ತಲಿರುವ ಅನೇಕ ಪಟ್ಟಣಗಳು, ಗ್ರಾಮಗಳಿಗೆ ಕುಡಿಯುವ ನೀರಿನ ಮೂಲ ಕೂಡ ತುಂಗಭದ್ರಾ ಜಲಾಶಯ. ಜೊತೆಗೆ ಜಲಾಶಯ ನೀರಿನಿಂದ ಹತ್ತಾರು ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಜಲಾಶಯದಲ್ಲಿರುವ ನೀರನ್ನು ಯಾರಿಗೂ ತೊಂದರೆಯಾಗದಂತೆ ಹಂಚಿಕೆ ಮಾಡಬೇಕಾದ ಕೆಲಸ ಇದೀಗ ಆರಂಭವಾಗಿದೆ.
ಇನ್ನು 105.788 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈ ಬಾರಿ ಕ್ರಸ್ಟ್ಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ, ಜಲಾಶಯವನ್ನು ಸಂಪೂರ್ಣವಾಗಿ ಭರ್ತಿ ಮಾಡಿರಲಿಲ್ಲ. ಗರಿಷ್ಟ 102 ಟಿಎಂಸಿ ವರೆಗೆ ಮಾತ್ರ ನೀರನ್ನು ಸಂಗ್ರಹಿಸಲಾಗಿತ್ತು. ಈಗಾಗಲೇ 500ಕ್ಕೂ ಅಧಿಕ ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಸದ್ಯ ಜಲಾಶಯದಲ್ಲಿ ಒಟ್ಟು 96.648 ಟಿಎಂಸಿ ನೀರು ಸಂಗ್ರಹವಿದೆ. ಇದೀಗ ಜಲಾಶಯದಲ್ಲಿ 3,600 ಕ್ಯೂಸೆಕ್ ನೀರಿನ ಒಳಹರಿವು ಹಾಗೂ 4,800 ಕ್ಯೂಸೆಕ್ ನೀರಿನ ಹೊರಹರಿವು ಇದೆ.