Tag: ತುಂಗಭದ್ರಾ ಅಣೆಕಟ್ಟು

  • ತುಂಗಭದ್ರಾ ಡ್ಯಾಂ ಭರ್ತಿಗಾಗಿ ಉಪವಾಸ ಕುಳಿತ ಸೋಮಶೇಖರ ರೆಡ್ಡಿ

    ತುಂಗಭದ್ರಾ ಡ್ಯಾಂ ಭರ್ತಿಗಾಗಿ ಉಪವಾಸ ಕುಳಿತ ಸೋಮಶೇಖರ ರೆಡ್ಡಿ

    ಬಳ್ಳಾರಿ: ತುಂಗಭದ್ರಾ ಅಣೆಕಟ್ಟು ತುಂಬಲೆಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹರಕೆ ಹೊತ್ತು ಉಪವಾಸ ವೃತ ಆರಂಭಿಸಿದ್ದಾರೆ.

    ಇಂದು ಬೆಳಗ್ಗೆ ಡ್ಯಾಂ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಸೋಮಶೇಖರ ರೆಡ್ಡಿ ಅವರು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಪೂಜೆ ಬಳಿಕ ಉಪವಾಸ ವ್ರತ ಆಚರಣೆ ಆರಂಭಿಸಿದ್ದಾರೆ. ಈ ಹಿಂದೆಯೂ 2009ರಲ್ಲಿ ಡ್ಯಾಂ ತುಂಬಲೆಂದು ರೆಡ್ಡಿ ಉಪವಾಸ ಮಾಡಿದ್ದರು. ಆ ಸಂದರ್ಭದಲ್ಲಿ 18 ದಿನಗಳ ಉಪವಾಸದ ಬಳಿಕ ಡ್ಯಾಂ ತುಂಬಿತ್ತು. ಪರಿಣಾಮ ಸುತ್ತಮುತ್ತಲಿನ ರೈತರಿಗೆ ಒಳ್ಳೆಯ ಬೆಳೆ ಬೆಳೆಯಲು ಸಾಧ್ಯವಾಗಿತ್ತು.

    ಈ ಬಾರಿ ಮಳೆ ಜಿಲ್ಲೆಯಲ್ಲಿ ಸರಿಯಾಗಿ ಬರುತ್ತಿಲ್ಲ. ಮುಂಗಾರು ಮುಕ್ತಾಯವಾದರೂ ಜಿಲ್ಲೆಯಲ್ಲಿ ಮಳೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಉಪವಾಸ ಕುಳಿತರೆ ದೇವರು ಮಳೆಯನ್ನು ಕರುಣಿಸುವನು ಎಂಬ ಭರವೆಸಯಿಂದ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕೊಪ್ಪಳದಲ್ಲಿ ಕೆಸರು ನೀರು ಕುಡಿದು ಹಸುಗಳು ಸಾವು – ತುಂಗಭದ್ರಾ ಹಿನ್ನೀರಿನಲ್ಲಿ ಮನಕಲಕುವ ದುರಂತ

    ಕೊಪ್ಪಳದಲ್ಲಿ ಕೆಸರು ನೀರು ಕುಡಿದು ಹಸುಗಳು ಸಾವು – ತುಂಗಭದ್ರಾ ಹಿನ್ನೀರಿನಲ್ಲಿ ಮನಕಲಕುವ ದುರಂತ

    ಕೊಪ್ಪಳ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗ್ತಿದೆ. ಭೀಕರ ಬರದಿಂದ ಜಾನುವಾರುಗಳಿಗೆ ಕುಡಿಯಲು ಹನಿ ನೀರು, ಮೇವು ಸಿಗ್ತಿಲ್ಲ. ಹೆಚ್ಚಾಗ್ತಿರೋ ಬಿಸಿಲಿನ ತಾಪ ತಾಳಲಾರದೆ ಜಾನುವಾರಗಳು ಬಲಿಯಾಗ್ತಿವೆ. ಬರದ ಮಧ್ಯೆ ರೈತರ ಜಾನುವಾರುಗಳು ಕೂಡ ಬಲಿಯಾಗ್ತಿರೋದ್ರಿಂದ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

    ಗೋಶಾಲೆಯಲ್ಲಿ ಸಮರ್ಪಕವಾಗಿ ಮೇವು, ನೀರು ಪೂರೈಸ್ತಿಲ್ಲ ಅಂತ ಬುಧವಾರ ಉಪ ತಹಸೀಲ್ದಾರ್ ಕಚೇರಿ ಆವರಣಕ್ಕೆ ಜಾನುವಾರು ನುಗ್ಗಿಸಿ ರೈತರು ಪ್ರತಿಭಟನೆ ಮಾಡಿದ್ರು. ಕೊಪ್ಪಳದ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಮೇವಿನ ಸಮಸ್ಯೆ ಆಗ್ತಿದೆ ಅಂತ ಅಧಿಕಾರಿಗಳು ಒಪ್ಪಿಕೊಂಡಿದ್ರು. ಆದ್ರೆ ಇದೇ ಕೊಪ್ಪಳದಲ್ಲೀಗ ಜಾನುವಾರುಗಳ ಮರಣ ಮೃದಂಗ ಶುರುವಾಗಿದೆ.

    ಬಿಸಿಲಿನ ತಾಪಕ್ಕೆ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯಲ್ಲಿ ಜಾನುವಾರುಗಳು ಸಾವನ್ನಪ್ಪಿವೆ. ತುಂಗಭದ್ರಾ ಡ್ಯಾಂನ ಹಿನ್ನೀರು ಪ್ರದೇಶದಲ್ಲಿ ಹನಿ ನೀರು ಇಲ್ದೆ ಕೆಸರು ನೀರು ಕುಡಿದು 30ಕ್ಕೂ ಹೆಚ್ಚು ಹಸುಗಳು ಅಸು ನೀಗಿವೆ.

    ಕೊಪ್ಪಳ ಜಿಲ್ಲಾಡಳಿತ ತೆರೆದಿರೋ ಗೋಶಾಲೆಯಲ್ಲೂ ಬಿಸಿಲಿನ ತಾಪ ತಾಳಲಾರದೆ ಈಚೆಗೆ ಎರಡು ಜಾನುವಾರುಗಳು ಬಲಿಯಾಗಿವೆ. ಬಳ್ಳಾರಿ, ಗದಗ, ಬಾಗಲಕೋಟೆ ಜಿಲ್ಲೆಗಳಿಂದ್ಲೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜಾನುವಾರುಗಳು, ಸಾವಿರಾರು ಕುರಿಗಳು ತುಂಗಭದ್ರಾ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಬೀಡುಬಿಟ್ಟಿವೆ. ಆದ್ರೆ ಇದು ಅಂಥ್ರಾಕ್ಸ್ ರೋಗದಿಂದ ಆಗಿರೋ ದುರಂತ ಅಂತಾ ಅಧಿಕಾರಿಗಳು ಹೇಳುತ್ತಾರೆ.

    ಒಂದೆಡೆ ಅಂಥ್ರಾಕ್ಸ್ ರೋಗಕ್ಕೆ ಬಲಿಯಾದ್ರೆ ಮತ್ತೊಂದೆಡೆ ಬಿಸಿಲಿತಾಪ, ಕುಡಿಯಲು ನೀರು, ಮೇವು ಸಿಗ್ತಿಲ್ಲ. ಅಧಿಕಾರಿಗಳು ಇನ್ನಾದ್ರೂ ತುಂಗಭದ್ರಾ ಡ್ಯಾಂಗೆ ನೀರು ಬಿಟ್ರೆ ಮತ್ತಷ್ಟು ರೈತರು ಕಣ್ಣೀರು ಹಾಕೋದು ತಪ್ಪುತ್ತೆ.