Tag: ತೀವ್ರ ನಿಗಾ ಘಟಕ

  • ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು – ಆಪ್ತರಿಂದ ಮಾಹಿತಿ

    ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು – ಆಪ್ತರಿಂದ ಮಾಹಿತಿ

    ಮುಂಬೈ: ಟಾಟಾ ಸನ್ಸ್ (Tata Sons) ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) (86) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ (Breach Candy Hospital) ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    20ಕ್ಕೂ ಹೆಚ್ಚು ವರ್ಷಗಳಿಂದ ಟಾಟಾ ಸನ್ಸ್ ಕಂಪನಿಯನ್ನು ನಡೆಸಿಕೊಂಡು ಬಂದಿರುವ 86 ವರ್ಷದ ರತನ್ ಟಾಟಾ ಅವರು ಸೋಮವಾರ ತಮ್ಮ ವಯೋಸಹಜ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಇದನ್ನೂ ಓದಿ: ನಿತೀಶ್‌-ರಿಂಕು ಸ್ಫೋಟಕ ಫಿಫ್ಟಿ; ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 86 ರನ್‌ಗಳ ಜಯ

    ಟಾಟಾ ಸಮೂಹದ ಆಪ್ತರೊಬ್ಬರು, ರತನ್ ಟಾಟಾ ಅವರ ಆರೋಗ್ಯ ಪರಿಸ್ಥಿತಿಯ ಕುರಿತು ನೇರ ಮಾಹಿತಿಯನ್ನು ತಿಳಿದು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.

    ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದರು. ವಯೋಸಹಜ ಸಮಸ್ಯೆಗಳಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದೇನೆ. ಆಂತಕಗೊಳ್ಳುವ ಅಗತ್ಯವಿಲ್ಲ. ಸಾಮಾನ್ಯ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದೇನೆ. ನನ್ನ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿವೆ. ಆ ಬಗ್ಗೆ ನನಗೆ ಮಾಹಿತಿ ಇದೆ. ನಾನು ಹಿಂದಿನ ಉತ್ಸಾಹದಲ್ಲೇ ಇರುತ್ತೇನೆ. ತಪ್ಪು ಮಾಹಿತಿ ಹರಡದಂತೆ ಮನವಿ ಮಾಡುತ್ತೇನೆ ಎಂದು ರತನ್ ಟಾಟಾ ಸ್ಪಷ್ಟನೆ ನೀಡಿದ್ದರು.

    ಕಂಪನಿಯ ನಿರ್ವಾಹಕರೊಬ್ಬರು ಮಾತನಾಡಿ, ಮೊದಲಿನಂತೆ ಟಾಟಾ ಅವರು ದಿನನಿತ್ಯದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಲ್ಲ. ಆದರೆ ಟಾಟಾ ಸನ್ಸ್ ನಾಯಕತ್ವದಿಂದ ಕೆಲವು ನಿರ್ಧಾರಗಳ ಕುರಿತು ಸಲಹೆ ನೀಡುತ್ತಾರೆ ಎಂದು ತಿಳಿಸಿದರು.

    ಸದ್ಯ ಇದೀಗ ಅವರು ಟಾಟಾ ಟ್ರಸ್ಟ್ನ ಲೋಕೋಪಕಾರಿ ಸಂಸ್ಥೆಯನ್ನು ನಡೆಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗಳ ಅರೆಸ್ಟ್

  • ಹೆಣ್ಣು ಮಗು ಎಂದು ತಿಳಿಸಿ, ಸತ್ತ ಗಂಡು ಮಗು ನೀಡಿದ್ದಾರೆ : ಆಸ್ಪತ್ರೆಯ ವಿರುದ್ಧ ತಾಯಿ ಆಕ್ರೋಶ

    ಹೆಣ್ಣು ಮಗು ಎಂದು ತಿಳಿಸಿ, ಸತ್ತ ಗಂಡು ಮಗು ನೀಡಿದ್ದಾರೆ : ಆಸ್ಪತ್ರೆಯ ವಿರುದ್ಧ ತಾಯಿ ಆಕ್ರೋಶ

    ಕೊಪ್ಪಳ: ಹೆಣ್ಣು ಮಗು ಜನಿಸಿದೆ ಎಂದು ತಿಳಿಸಿ, ಸತ್ತಿರುವ ಗಂಡು ಮಗು ನೀಡಿರುವ ಘಟನೆ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

    ವಿಜಯನಗರ (Vijayanagar) ಜಿಲ್ಲೆಯ ಹಗರಿಬೊಮ್ಮನಳ್ಳಿ (Hagaribommanahalli) ನಿವಾಸಿಯಾಗಿರುವ ಗೌರಿ ಅವರಿಗೆ ಹೆಣ್ಣು ಮಗು ಜನಿಸಿರುವುದಾಗಿ ತಿಳಿಸಿ ಸತ್ತಿರುವ ಗಂಡು ಮಗುವನ್ನು ನೀಡಿ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.ಇದನ್ನೂ ಓದಿ:

    ಸೆ.23 ರಂದು ಗೌರಿ ಕೊಪ್ಪಳ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಬಳಿಕ ಸೆ.25 ರಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೆರಿಗೆಯಾಗಿತ್ತು. ಆ ವೇಳೆ ಹೆಣ್ಣು ಮಗು ಜನಿಸಿರುವುದಾಗಿ ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದರು. ಬಳಿಕ ಮಗುವಿನ ತೂಕ ಕಡಿಮೆ ಇದೆ ಎಂದು ತೀವ್ರ ನಿಗಾ ಘಟಕದಲ್ಲಿ (Intensive Care Unit) ಇಡಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ನಿಮ್ಮ ಮಗು ಸಾವನ್ನಪ್ಪಿದೆ. ಮಗುವನ್ನು ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರು.

    ಕೊನೆಯ ಬಾರಿ ಮಗುವಿನ ಮುಖ ನೋಡಬೇಕು ಎಂದು ತೀವ್ರ ನಿಗಾ ಘಟಕಕ್ಕೆ ತೆರಳಿದ್ದರು. ಆದರೆ ಆ ಸಮಯದಲ್ಲಿ ಮೃತಪಟ್ಟಿರುವ ಮಗು ಹೆಣ್ಣಲ್ಲಾ, ಗಂಡು ಎನ್ನುವುದಾಗಿ ತಿಳಿದಿದೆ. ಹೀಗಾಗಿ ನಮ್ಮದು ಹೆಣ್ಣು ಮಗು ಆದರೆ ಇಲ್ಲಿ ಸತ್ತಿರುವುದು ಗಂಡು ಮಗು. ನಮ್ಮ ಮಗು ನಮಗೆ ಬೇಕು ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ.

    ನಿಮಗೆ ಆಗಿರುವುದು ಗಂಡು ಮಗುವೇ ಆದರೆ ಕ್ಲರಿಕಲ್ ಎರರ್‌ನಿಂದ ಹೀಗಾಗಿದೆ. ಓಬಿಜಿ (OGC) ವಿಭಾಗದಿಂದ ಎನ್‌ಐಸಿಯು (NCU) ವಿಭಾಗಕ್ಕೆ ಬರುವಾಗ ಕ್ಲರಿಕಲ್ ಎರರ್ (Clerical Error) ಆಗಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.ಇದನ್ನೂ ಓದಿ:

  • ಮಾತೆ ಮಹಾದೇವಿ ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ಮಾತೆ ಮಹಾದೇವಿ ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ಬೆಂಗಳೂರು: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ, ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv