Tag: ತೀರ್ಪು

  • ಆರುಷಿ ಕೊಲೆ ಮಾಡಿದವರು ಯಾರು: ದೇಶಾದ್ಯಂತ ಕೇಳೋ ಪ್ರಶ್ನೆಗೆ ಉತ್ತರ ಸಿಗುತ್ತಾ?

    ಆರುಷಿ ಕೊಲೆ ಮಾಡಿದವರು ಯಾರು: ದೇಶಾದ್ಯಂತ ಕೇಳೋ ಪ್ರಶ್ನೆಗೆ ಉತ್ತರ ಸಿಗುತ್ತಾ?

    ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಆರುಷಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೋಷಕರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರನ್ನು ಅಲಹಾಬಾದ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿತ್ತು. ಆದರೆ ಈಗ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಎದ್ದಿದೆ.

    ಏನಿದು ಪ್ರಕರಣ? 9 ವರ್ಷಗಳ ಹಿಂದೆ ಉತ್ತರ ಪ್ರದೇಶದ ನೊಯಿಡಾದಲ್ಲಿ ಆರಿಷಿ ಕೊಲೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಮೃತ ಯುವತಿಯ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರು ಈ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದರು. ಅಲ್ಲದೇ ವಿಚಾರಣೆ ನಡೆಸಿದ್ದ ಸಿಬಿಐ ನ್ಯಾಯಾಲಯ ಪೋಷಕರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

    ಆದರೆ ಈ ಕುರಿತು ಮೇಲ್ಮನವಿ ಸಲ್ಲಿಸಿದ್ದ ತಲ್ವಾರ್ ದಂಪತಿಯನ್ನು ಗುರುವಾರ ಅಲಹಾಬಾದ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿದೆ. ಅಲ್ಲದೇ ಸಿಬಿಐ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಗೊಳಿಸಿ, ಗಾಜಿಯಾಬಾದ್‍ನ ದಾಸ್ನಾ ಕಾರಾಗೃಹದಲ್ಲಿರುವ ತಲ್ವಾರ್ ದಂಪತಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

    ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿಗಳನ್ನು ಕೇವಲ ಅನುಮಾನದ ಆಧಾರದಲ್ಲಿ ಅಪರಾಧಿಗಳು ಎಂದು ಘೋಷಿಸಲು ಸಾಧ್ಯವಿಲ್ಲ. ಮೃತ ಆರುಷಿ ಪೋಷಕರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ, ಲಭ್ಯವಿರುವ ಸಾಕ್ಷ್ಯಗಳು ಆರೋಪವನ್ನು ಸಾಬೀತು ಮಾಡುವಲ್ಲಿ ವಿಫಲವಾಗಿವೆ ಎಂದು ಅಭಿಪ್ರಾಯ ಪಟ್ಟಿತ್ತು.

    ಪ್ರಸ್ತುತ ನ್ಯಾಯಾಲಯ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ಬುಲ್ಲಾ, ನನಗೆ ಆರುಷಿ ಕೊಲೆ ಮಾಡಿದ್ದ ಯಾರು ಎಂದು ತಿಳಿದಿಲ್ಲ, ಆದರೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಬಾಲಿವುಡ್ ನಟ ಕಬೀರ್ ಬೇಡಿ, ಮೃತ ಅರುಷಿ ಪೋಷಕರು ಬಿಡುಗಡೆಯಾಗಿದ್ದು, ನ್ಯಾಯ ದೊರೆತಿದೆ. ದುಸ್ವಪ್ನ ದೂರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪೋಷಕರು ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಹಲವು ವರ್ಷಗಳು ಜೈಲುಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ ನಮಗೇ ಆಕೆಯನ್ನು ಕೊಲೆ ಮಾಡಿದ್ದು ಯಾರು ಎಂಬುವುದು ತಿಳಿದಿಲ್ಲ. ಎಲ್ಲಿದೆ ನ್ಯಾಯ? ಎಂದು ಕೀರ್ತನ ಕರ್ಮ ಎಂಬವರು ಟ್ವೀಟ್ ಮಾಡಿದ್ದಾರೆ.

    ಹೈಕೋರ್ಟ್‍ನ ತೀರ್ಪಿನ ಅನ್ವಯ ಶುಕ್ರವಾರ ಪೊಲೀಸರು ಅರುಷಿ ಪೋಷಕರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಸಿಬಿಐ ವಕೀಲರು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

  • ಮಹದಾಯಿ ನೀರಿಗೆ ಇನ್ನೂ 1 ವರ್ಷ ಕಾಯ್ಬೇಕು- ಹುಸಿಯಾಯ್ತು ಬಿಜೆಪಿ ನಾಯಕರ ಭರವಸೆ

    ಮಹದಾಯಿ ನೀರಿಗೆ ಇನ್ನೂ 1 ವರ್ಷ ಕಾಯ್ಬೇಕು- ಹುಸಿಯಾಯ್ತು ಬಿಜೆಪಿ ನಾಯಕರ ಭರವಸೆ

    ನವದೆಹಲಿ: ಮಹದಾಯಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ ಉತ್ತರ ಕರ್ನಾಟಕದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್. ಮಹದಾಯಿ ನೀರಿಗಾಗಿ ನೀವು ಇನ್ನೂ ಒಂದು ವರ್ಷ ಕಾಯಲೇಬೇಕು.

    ಹೌದು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಜೀವಜಲ ಮಹದಾಯಿಗಾಗಿ ಭಾರೀ ಹೋರಾಟ ನಡೀತು. ಆ ಕೇಸ್‍ಗಾಗಿ ಜನ ಈಗಲೂ ಕೋರ್ಟು ಕಚೇರಿ ಅಂತ ಅಲೀತಿದ್ದಾರೆ. ಇಷ್ಟಾದ್ರೂ ಮಹದಾಯಿ ನೀರು ಸಿಗೋದು ಅನುಮಾನವೇ ಆಗಿದೆ. ಯಾಕಂದ್ರೆ ಜನಪ್ರತಿನಿಧಿಗಳು, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಜನ ಇನ್ನೂ ಒಂದು ವರ್ಷ ಕಾಯಬೇಕಿದೆ. ಈಗಾಗಲೇ ಎರಡು ಬಾರಿ ಅವಧಿ ವಿಸ್ತರಿಸಿಕೊಂಡಿರುವ ನ್ಯಾಯಾಧಿಕರಣ ದೀರ್ಘವಾದ ವಿಚಾರಣೆ ನಡೆಸುತ್ತಲೇ ಇದೆ. ಮೂರನೇ ಅವಧಿಯಲ್ಲೂ ಸುದೀರ್ಘ ವಿಚಾರಣೆ ನಡೆಸುತ್ತಲೇ ಕುಳಿತರೆ ಮಹದಾಯಿ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗೀ ಮಹದಾಯಿ ನ್ಯಾಯಾಧಿಕರಣ ಮೂರು ರಾಜ್ಯಗಳಿಗೆ ವಿಚಾರಣೆ ಬೇಗ ಮುಗಿಸಲು ಸಹಕರಿಸುವಂತೆ ನೋಟಿಸ್ ಜಾರಿ ಮಾಡಿದೆ.

    ಮಹದಾಯಿ ವ್ಯಾಪ್ತಿಯ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ನೋಟಿಸ್ ನೀಡಿದ್ದು 25 ಪ್ರಮುಖ ಪ್ರಶ್ನೆಗಳನ್ನು ವಿಚಾರಣೆಗೆ ಸೀಮಿತಗೊಳಿಸುವಂತೆ ಹಾಗೂ ಸಾಕ್ಷ್ಯಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಶೀಘ್ರವಾಗಿ ಎಲ್ಲ ರಾಜ್ಯಗಳು ವಾದ ಮಂಡನೆ ಮುಗಿಸಬೇಕು ಅಂತ ನೋಟಿಸ್ ನಲ್ಲಿ ತಾಕೀತು ಮಾಡಿದೆ. 2018ರ ಅಗಸ್ಟ್ 20ಕ್ಕೆ ಮಹದಾಯಿ ನ್ಯಾಯಾಧಿಕರಣ ಅವಧಿ ಮುಕ್ತಾಯಗೊಳ್ಳಲಿದ್ದು ಅಷ್ಟರೊಳಗೆ ಅಂತಿಮ ತೀರ್ಪು ನೀಡಬೇಕು ಎಂಬುದು ನ್ಯಾಯಾಧಿಕರಣದ ಉದ್ದೇಶ. ಈಗಾಗಲೇ ನ್ಯಾಯಾಧಿಕರಣದ ಮುಂದೆ ಗೋವಾ-ಮಹಾರಾಷ್ಟ್ರ ರಾಜ್ಯಗಳು ತಮ್ಮ ಸಾಕ್ಷ್ಯ ನುಡಿದಿದ್ದು, ಕರ್ನಾಟಕದಿಂದ 4 ಮಂದಿಯ ಪೈಕಿ ಇಬ್ಬರಷ್ಟೇ ನ್ಯಾಯಾಧಿಕರಣದ ಮುಂದೆ ಸದ್ಯ ಸಾಕ್ಷ್ಯ ನುಡಿದಿದ್ದಾರೆ. ಮುಂದಿನ ತಿಂಗಳು ಇನ್ನಿಬ್ಬರು ಸಾಕ್ಷ್ಯಗಳನ್ನು ನ್ಯಾಯಾಧಿಕರಣದ ಮುಂದೆ ದಾಖಲಿಸಿದ್ದಾರೆ.

    ಕೆಲ ದಿನಗಳ ಹಿಂದೆ ತಮ್ಮದೇ ಪಕ್ಷದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಜೊತೆ ಮಾತನಾಡಿ ವಿವಾದ ಬಗೆಹರಿಸುವುದಾಗಿ ಮಾತು ನೀಡಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹಿನ್ನಡೆಯಾಗಿದೆ. ರಾಜ್ಯ ಬಿಜೆಪಿ ನಾಯಕರ ಮಾತುಕತೆಗೆ ಪರಿಕ್ಕರ್ ಸೊಪ್ಪು ಹಾಕುತ್ತಿಲ್ಲ. ಕಳೆದ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಣಿಯಲ್ಲೂ ಕೂಡಾ ಇದು ಸಾಬೀತಾಗಿದೆ. ಎಲೆಕ್ಷನ್ ಗೂ ಮುನ್ನ ವಿವಾದ ಬಗೆಹರಿಸಿ ಬೆನ್ನು ತಟ್ಟಿಕೊಂಡು ಮತ ಕೇಳಿಬೇಕೆಂದುಕೊಂಡಿದ್ದ ಬಿಜೆಪಿ ನಾಯಕರು ಪರಿಕ್ಕರ್ ನಡೆ ನೋಡಿ ಸುಮ್ಮನಾಗಿದ್ದಾರೆ.

    ಅತ್ತ ಪತ್ರ ಬರೆದಿದ್ದೇವೆ, ಗೋವಾ ಸಿಎಂ ಮಾತುಕತೆಗೆ ತಯಾರಿಲ್ಲ ಅಂತ ರಾಜ್ಯ ಸರ್ಕಾರ ಹೇಳುತ್ತಿದೆ. ಇದುವರೆಗೂ ಪ್ರಧಾನಿ ಮಧ್ಯಸ್ಥಿಕೆ ವಹಿಸುವ ಲಕ್ಷಣಗಳು ಕಂಡಿಲ್ಲ. ಹೀಗಾಗಿ ಅತ್ತ ಚುನಾವಣೆ ವೇಳೆಗೆ ಸಮಸ್ಯೆ ಬಗಹರಿಹಬಹುದು ಅಂತಾ ಕಾದು ಕುಳಿತಿರುವ ಮಹದಾಯಿ ಹೋರಾಟಗಾರರಿಗೆ ನ್ಯಾಯಾಧಿಕರಣ ಅನಿವಾರ್ಯವಾಗಿದ್ದು ಇನ್ನೂ ಒಂದು ವರ್ಷ ಕಾಲ ತಳ್ಳಲೇಬೇಕಿದೆ.

  • ರಾಮ್ ರಹೀಮ್ ಮೇಲಿನ ಅತ್ಯಾಚಾರ ಆರೋಪ ಸಾಬೀತು- ಸೋಮವಾರ ಶಿಕ್ಷೆ ಪ್ರಕಟಣೆ

    ರಾಮ್ ರಹೀಮ್ ಮೇಲಿನ ಅತ್ಯಾಚಾರ ಆರೋಪ ಸಾಬೀತು- ಸೋಮವಾರ ಶಿಕ್ಷೆ ಪ್ರಕಟಣೆ

    – 100ಕ್ಕೂ ಹೆಚ್ಚು ಕಾರ್‍ಗಳ ಭದ್ರತೆಯೊಂದಿಗೆ ಕೋರ್ಟ್‍ಗೆ ಬಂದಿದ್ದ ರಾಮ್ ರಹೀಮ್

    ಚಂಡೀಗಢ: ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದೆ.

    ಸ್ವಯಂಘೋಷಿತ ಆಧ್ಯಾತ್ಮಿಕ ಗುರು ರಾಮ್ ರಹೀಮ್ 2002ರಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿದ್ದು, ಸೋಮವಾರದಂದು ಶಿಕ್ಷೆ ಪ್ರಕಟವಾಗಲಿದೆ. ಇಂದು ಪ್ರಕರಣದ ವಿಚಾರಣೆಗಾಗಿ ರಾಮ್ ರಹೀಮ್ 100ಕ್ಕೂ ಹೆಚ್ಚು ಕಾರ್‍ಗಳ ಭದ್ರತೆಯೊಂದಿಗೆ ಬಂದಿದ್ರು.

    ಶಿಕ್ಷೆ ಪ್ರಕಟವಾದ ಬಳಿಕ ಹರಿಯಾಣ ಪೊಲೀಸರು ರಹೀಮ್ ರನ್ನು ವಶಕ್ಕೆ ಪಡೆದಿದ್ದಾರೆ. ರೋಹ್ಟಕ್ ಜೈಲಿಗೆ ರಹೀಮ್ ಅವರನ್ನ ಕರೆದುಕೊಂಡು ಹೋಗಲಾಗುತ್ತದೆ ಎಂದು ವರದಿಯಾಗಿದೆ.

    ಪ್ರಕರಣ ಸಂಬಂಧ ಇಂದು ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದ್ದ ಹಿನ್ನೆಲೆಯಲ್ಲಿ ಲಕ್ಷಾಂತರ ಬಾಬಾ ಅನುಯಾಯಿಗಳು ಪಂಚಕುಲಾದ ಕೋರ್ಟ್ ಮತ್ತು ಸಿರ್ಸಾದ ಆಶ್ರಮದ ಬಳಿ ಬಂದು ಸೇರಿದ್ದಾರೆ. ಪಂಚಕುಲಾದ ನಗರದ ರಸ್ತೆಯ ಇಕ್ಕೆಲಗಳು ಬಾಬಾ ಅನುಯಾಯಿಗಳಿಂದಲೇ ತುಂಬಿಹೋಗಿದೆ. ಗುರುವಾರ ರಾತ್ರಿ 10 ಗಂಟೆ ಬಳಿಕ ಪಂಚಕುಲಾವನ್ನು ಸೇನೆಗೆ ವಹಿಸಲಾಗಿದ್ದು, ಅಲ್ಲಿನ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಸೇನೆ ಹೊತ್ತಿದೆ. ಜೊತೆಗೆ ಸಿರ್ಸಾ, ಪಂಚಕುಲಾದಲ್ಲಿ ನಿನ್ನೆ ರಾತ್ರಿಯಿಂದ್ಲೇ ಕಫ್ರ್ಯೂ ಜಾರಿಗೊಳಿಸಲಾಗಿದೆ.

    ಹರಿಯಾಣ ಮತ್ತು ಚಂಡೀಗಢದಲ್ಲಿ ಎಲ್ಲಾ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಂಗಡಿಗಳನ್ನು ಮುಚ್ಚಲಾಗಿದೆ. ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ 72 ಗಂಟೆಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ ಹೈಕೋರ್ಟ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹರಿಯಾಣ ಸರ್ಕಾರ ವಿಫಲವಾಗಿದೆ ಅಂತ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಭಕ್ತರು ಮನೆಗೆ ತೆರಳುವಂತೆ ಮನವಿ ಮಾಡಲು ಸೂಚಿಸಿದ್ದು, ಅದರಂತೆ ಬಾಬಾ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿ, ಮನೆಗೆ ತೆರಳಿ ಅಂತ ಮನವಿ ಮಾಡಿಕೊಂಡಿದ್ದರು.

    2002ರಲ್ಲಿ ಇಬ್ಬರು ಮಹಿಳಾ ಭಕ್ತರು ನಮ್ಮ ಮೇಲೆ ಬಾಬಾ ಅತ್ಯಾಚಾರವೆಸಗಿದ್ದಾರೆ ಅಂತ ಆರೋಪಿಸಿದ್ದರು. ಆದ್ರಂತೆ ಹೈಕೋರ್ಟ್ ಬಾಬಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬಿಐಗೆ ಸೂಚಿಸಿತ್ತು.

    ಏನಿದು ಪ್ರಕರಣ?: ಹರಿಯಾಣದ ಸಿರ್ಸಾದಲ್ಲಿರುವ ಆಶ್ರಮದಲ್ಲಿ ರಾಮ್ ರಹೀಂ ವಿರುದ್ಧ 1999ರಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, 2002ರಿಂದ ಸಿಬಿಐ ತನಿಖೆ ನಡೆಸಲಾಗುತ್ತಿತ್ತು. ಒಂದು ದಿನ ರಾತ್ರಿ ಗುರ್ಮಿತ್ ರಾಮ್ ರಹೀಂ ಸಂತ್ರಸ್ತ ಮಹಿಳೆಯನ್ನು ತನ್ನ ಕೋಣೆಗೆ ಕರೆದಿದ್ದು, ಕೋಣೆಯಲ್ಲಿದ್ದ ಟಿವಿಯಲ್ಲಿ ಸೆಕ್ಸ್ ಮೂವಿ ತೋರಿಸಿದ್ದರು. ಅವರ ಪಕ್ಕದಲ್ಲಿ ಗನ್ ಕೂಡಾ ಇತ್ತು ಎನ್ನಲಾಗಿತ್ತು. ಅಲ್ಲದೇ 3 ವರ್ಷಗಳವರೆಗೆ ನಿರಂತರವಾಗಿ ಅತ್ಯಾಚಾರ, 30-40ರಷ್ಟು ಮಹಿಳಾ ಭಕ್ತರಿಗೂ ಇದೇ ರೀತಿ ಪೀಡಿಸಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳ ಬಗ್ಗೆ ಪಂಚಕುಲಾ ಸಿಬಿಐ ಕೋರ್ಟ್ ವಿಚಾರಣೆ ನಡೆಸಿದ್ದು, ಬಾಬಾ ಮೇಲಿನ ಆರೋಪ ಸಾಬೀತಾಗಿದೆ.

    ರೇಪ್ ಬಗ್ಗೆ ಅಂದಿನ ಪ್ರಧಾನಿ ವಾಜಪೇಯಿಗೆ ಪತ್ರ ಬರೆದಿದ್ದ ವ್ಯಕ್ತಿಯನ್ನೇ ಭಕ್ತರು ಗುಂಡಿಟ್ಟು ಕೊಂದಿದ್ದರು. ಇನ್ನು ಇದೇ ರಾಮ್ ರಹೀಂ ಬಾಬಾ ಈ ಹಿಂದೆ ವಿರಾಟ್ ಕೊಹ್ಲಿ, ಬಾಕ್ಸಿಂಗ್ ಪಟು ವಿಜೇಂದರ್‍ಗೂ ನಾನೇ ಟ್ರೇನಿಂಗ್ ಕೊಟ್ಟಿದ್ದೆ ಅಂತ ಹೇಳಿದ್ದರು. ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ ಹಾಗೇ ಒಮ್ಮೆ ವಿರಾಟ್ ಕೊಹ್ಲಿ ಮತ್ತು ಆಶೀಶ್ ನೆಹ್ರಾ ಈ ಬಾಬಾರನ್ನ ಭೇಟಿ ಕೂಡ ಮಾಡಿದ್ದರು.

    ಏನಿದು ದೇರಾ ಸಚ್ಛಾ ಸೌಧ?: ರಕ್ತದಾನ, ಮಾದಕ ದ್ರವ್ಯ ತಡೆ, ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದ ಇವರು, ದೇರಾ ಸಚ್ಛಾ ಸೌಧ ಎಂಬ ಅತೀ ದೊಡ್ಡ ರಕ್ತದಾನಿ ಸಂಸ್ಥೆಯನ್ನು ಆರಂಭಿಸಿದ್ದರು. ದೇರಾ ಸಚ್ಛಾ ಸೌಧ ಬರೋಬ್ಬರಿ 6 ಕೋಟಿ ಭಕ್ತರಿರುವ ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಯಾಗಿದ್ದು, ಇದು ಹರಿಯಾಣದ ಸಿರ್ಸಾದಲ್ಲಿದೆ. ಆಗಸ್ಟ್ 29, 1948ರಂದು ಬೇಪರವ ಮಸ್ತಾನಜೀ ಮಹಾರಾಜ್‍ರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಅಮೆರಿಕ, ಕೆನಡಾ, ಯುಎಇ, ಬ್ರಿಟನ್, ಆಸ್ಟ್ರೇಲಿಯಾದಲ್ಲೂ ಆಶ್ರಮಗಳ ಸ್ಥಾಪನೆಯಾಗಿದೆ. ಹರಿಯಾಣ, ಪಂಜಾಬ್, ರಾಜಸ್ಥಾನ, ಜಮ್ಮು, ದೆಹಲಿಯಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಪ್ರಭಾವ ಬೀರಿದೆ. ಇಷ್ಟೇ ಅಲ್ಲ ಕರ್ನಾಟಕದ ಮೈಸೂರಿನಲ್ಲೂ ಕೂಡ ದೇರಾ ಆಶ್ರಮ ಇದೆ. 2016ರ ಆಕ್ಟೋಬರ್‍ನಲ್ಲಿ ಕಟ್ಟಡ ನೆಲಸಮಕ್ಕೆ ಶಿಫಾರಸ್ಸು ಮಾಡಲಾಗಿತ್ತು.

    ಯಾರು ಈ ದೇವಮಾನವ?: 1990ರಲ್ಲಿ ದೇರಾ ಸಚ್ಛಾ ಸೌಧದ ಪೀಠವೇರಿದ ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್, `ಸಂತ ಡಾ. ಎಸ್‍ಎಂಜಿ’ (ದೇವರ ಸಂದೇಶಕಾರ) ಎಂದೇ ಕರೆಸಿಕೊಂಡಿದ್ದರು. ಹಾಡುವುದು, ಕುಣಿಯುವುದು, ಸಿನಿಮಾ ನಟನೆ, ನಿರ್ದೇಶನ, ಸಂಗೀತಗಾರ ಹೀಗೆ ಸಕಲ ಕಲಾವಲ್ಲಭ ಸ್ವಾಮೀಜಿ ಪಾಪ್ ಸಂಗೀತಗಾರರಂತೆ ಚಿತ್ರ-ವಿಚಿತ್ರ ಬಟ್ಟೆಗಳನ್ನು ಧರಿಸಿ, ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ತನ್ನನ್ನು ತಾನು ದೇವರ ಅವತಾರೆಂದು ಬಿಂಬಿಸಿಕೊಂಡಿರುವ ಗುರ್ಮಿತ್ ಸಿಂಗ್ `ಎಸ್‍ಎಂಜಿ’ ಚಿತ್ರದ ನಿರ್ದೇಶನ ಕೂಡ ಮಾಡಿದ್ದರು.

    2015ರಲ್ಲಿ ರಿಲೀಸ್ ಆದ ಸಿನಿಮಾಕ್ಕೆ ತಾನೇ ಡೈರೆಕ್ಟರ್, ಕಥೆ, ಸಂಭಾಷಣೆ, ಸಂಗೀತ, ಕುಣಿತ ಎಲ್ಲವೂ ಆಗಿದ್ದರು. ವಿವಾದಕ್ಕೊಳಗಾದ ಈ ಸಿನಿಮಾವನ್ನು ಕರ್ನಾಟಕದ ಕೆಲವು ಭಾಗಗಳಲ್ಲೂ ಶೂಟ್ ಮಾಡಲಾಗಿತ್ತು. ಯೂಟ್ಯೂಬ್‍ನಲ್ಲಿ ಟ್ರೇಲರ್ ರಿಲೀಸ್ ಆದ ಬಳಿಕ 24 ಗಂಟೆಗಳಲ್ಲಿ 10 ಲಕ್ಷ ಮಂದಿ ವೀಕ್ಷಿಸಿದ್ದರು. `ರು-ಬಾ-ರು ನೈಟ್ಸ್’ ಹೆಸರಲ್ಲಿ ಪಾಪ್ ಸಂಗೀತಗಾರರಂತೆ ಆಲ್ಬಂ ಲೈವ್ ಶೋಗಳ ಖಯಾಲಿ ಇವರಿಗಿತ್ತು. ಇವರ `ಹೈವೇ ಲವ್ ಚಾರ್ಜರ್’ ಆಲ್ಬಂನ 30 ಲಕ್ಷ ಪ್ರತಿಗಳು 3 ದಿನಗಳಲ್ಲಿ ಸೇಲಾಗಿತ್ತು.

  • ರೇಪ್ ಕೇಸ್‍ನಲ್ಲಿ ರಾಮ್ ರಹೀಮ್ ಭವಿಷ್ಯ ಇಂದು ನಿರ್ಧಾರ

    ರೇಪ್ ಕೇಸ್‍ನಲ್ಲಿ ರಾಮ್ ರಹೀಮ್ ಭವಿಷ್ಯ ಇಂದು ನಿರ್ಧಾರ

    ಚಂಡೀಗಢ: ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಇಂದು ತೀರ್ಪು ಹೊರಬೀಳಲಿದೆ. ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಈಗಾಗಲೇ ಲಕ್ಷಾಂತರ ಬಾಬಾ ಅನುಯಾಯಿಗಳು ಪಂಚಕುಲಾ ಮತ್ತು ಸಿರ್ಸಾಗೆ ಬಂದು ಸೇರಿದ್ದಾರೆ.

    ಪಂಚಕುಲಾದ ನಗರದ ರಸ್ತೆಯ ಇಕ್ಕೆಲಗಳು ಬಾಬಾ ಅನುಯಾಯಿಗಳಿಂದಲೇ ತುಂಬಿಹೋಗಿದೆ. ಗುರುವಾರ ರಾತ್ರಿ 10 ಗಂಟೆ ಬಳಿಕ ಪಂಚಕುಲಾವನ್ನು ಸೇನೆಗೆ ವಹಿಸಲಾಗಿದ್ದು, ಅಲ್ಲಿನ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಸೇನೆ ಹೊತ್ತಿದೆ. ಜೊತೆಗೆ ಸಿರ್ಸಾ, ಪಂಚಕುಲಾದಲ್ಲಿ ನಿನ್ನೆ ರಾತ್ರಿಯಿಂದ್ಲೇ ಕಫ್ರ್ಯೂ ಜಾರಿಗೊಳಿಸಲಾಗಿದೆ.

    ಹರಿಯಾಣ ಮತ್ತು ಚಂಡೀಗಢದಲ್ಲಿ ಎಲ್ಲಾ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಂಗಡಿಗಳನ್ನು ಮುಚ್ಚಲಾಗಿದೆ. ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ 72 ಗಂಟೆಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ ಹೈಕೋರ್ಟ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹರಿಯಾಣ ಸರ್ಕಾರ ವಿಫಲವಾಗಿದೆ ಅಂತ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಭಕ್ತರು ಮನೆಗೆ ತೆರಳುವಂತೆ ಮನವಿ ಮಾಡಲು ಸೂಚಿಸಿದ್ದು, ಅದರಂತೆ ಬಾಬಾ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿ, ಮನೆಗೆ ತೆರಳಿ ಅಂತ ಮನವಿ ಮಾಡಿಕೊಂಡಿದ್ದಾರೆ. 2002ರಲ್ಲಿ ಬಾಬಾರ ಇಬ್ಬರು ಮಹಿಳಾ ಭಕ್ತರು ನಮ್ಮ ಮೇಲೆ ಬಾಬಾ ಅತ್ಯಾಚಾರವೆಸಗಿದ್ದಾರೆ ಅಂತ ಆರೋಪಿಸಿದ್ದರು. ಆದ್ರಂತೆ ಹೈಕೋರ್ಟ್ ಬಾಬಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬಿಐಗೆ ಸೂಚಿಸಿತ್ತು.

    ಏನಿದು ಪ್ರಕರಣ?: ಹರಿಯಾಣದ ಸಿರ್ಸಾದಲ್ಲಿರುವ ಆಶ್ರಮದಲ್ಲಿ ರಾಮ್ ರಹೀಂ ವಿರುದ್ಧ 1999ರಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, 2002ರಿಂದ ಸಿಬಿಐ ತನಿಖೆ ನಡೆಸಲಾಗುತ್ತಿತ್ತು. ಒಂದು ದಿನ ರಾತ್ರಿ ಗುರ್ಮಿತ್ ರಾಮ್ ರಹೀಂ ಸಂತ್ರಸ್ತ ಮಹಿಳೆಯನ್ನು ತನ್ನ ಕೋಣೆಗೆ ಕರೆದಿದ್ದು, ಕೋಣೆಯಲ್ಲಿದ್ದ ಟಿವಿಯಲ್ಲಿ ಸೆಕ್ಸ್ ಮೂವಿ ತೋರಿಸಿದ್ದರು. ಅವರ ಪಕ್ಕದಲ್ಲಿ ಗನ್ ಕೂಡಾ ಇತ್ತು ಎನ್ನಲಾಗಿತ್ತು. ಅಲ್ಲದೇ 3 ವರ್ಷಗಳವರೆಗೆ ನಿರಂತರವಾಗಿ ಅತ್ಯಾಚಾರ, 30-40ರಷ್ಟು ಮಹಿಳಾ ಭಕ್ತರಿಗೂ ಇದೇ ರೀತಿ ಪೀಡಿಸಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ್ದ ಪಂಚಕುಲಾ ಸಿಬಿಐ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.