Tag: ತೀರ್ಥಯಾತ್ರೆ

  • ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ಚಂಡಿಗಢ: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇನಲ್ಲಿ (Kundali Manesar Palwal Expressway) ನಡೆದ ಭೀಕರ ಅಗ್ನಿ ಅವಘಡದಲ್ಲಿ 9 ಮಂದಿ ಭಕ್ತರು ಸಜೀವ ದಹನವಾಗಿರುವ ಘಟನೆ ಶನಿವಾರ (ಇಂದು) ನಸುಕಿನ ಜಾವದಲ್ಲಿ ನಡೆದಿದೆ.

    9 ಮಂದಿ ಭಕ್ತರು ಸಜೀವ ದಹನ ಹೊಂದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ (Pilgrimage) ಕೈಗೊಂಡು ಹಿಂದಿರುಗುತ್ತಿದ್ದಾಗ ನುಹ್‌ ಪ್ರದೇಶದ ಬಳಿ ಬಸ್‌ನಲ್ಲಿ ಬೆಂಕಿ (Bus Fire) ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಪಂಜಾಬ್‌ ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

    ನಾವು 10 ದಿನಗಳ ಕಾಲ ಪವಿತ್ರ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದು, ಅದಕ್ಕಾಗಿ ಬಾಡಿಗೆ ಬಸ್‌ ಪಡೆದಿದ್ದವು. ಶನಿವಾರ ನಸುಕಿನ ಜಾವ 1.30ರ ಸುಮಾರಿಗೆ ಮನೆಗೆ ಮರಳುತ್ತಿದ್ದ ವೇಳೆ ಬಸ್‌ನ ಹಿಂಭಾಗದಲ್ಲಿ ಬೆಂಕಿಯ ಕಿಡಿ ಹತ್ತಿಕೊಂಡಿರುವುದು ಗಮನಿಸಿ ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದ್ದೆವು. ಆದರೆ ಅಷ್ಟರಲ್ಲಿ ಅವಘಡ ಸಂಭವಿಸಿತು ಎಂದು ಬದುಕುಳಿದವರು ತಿಳಿಸಿದ್ದಾರೆ.

    ಹೆಚ್ಚುತ್ತಿರುವ ಬೆಂಕಿಯನ್ನು ನೋಡಿದ ಬೈಕ್ ಸವಾರನೊಬ್ಬ ಬಸ್ ಅನ್ನು ಹಿಂಬಾಲಿಸಿ ನಿಲ್ಲಿಸಲು ಚಾಲಕನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬಸ್‌ನ ಮುಂಭಾಗದಲ್ಲಿದ್ದ ಹಲವರನ್ನು ರಕ್ಷಿಸಲಾಯಿತು. ಬೆಂಕಿ ಕಾಣಿಸಿಕೊಳ್ಳಲಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ವೇಳೆ ಬಸ್ ಸಂಪೂರ್ಣ ಸುಟ್ಟು ಕರಕಲಾದ 3 ಗಂಟೆಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಿಮಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

  • ಮೈಸೂರಿನ ಆಧುನಿಕ ಶ್ರವಣ ಕುಮಾರ – ಹಳೆ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ 4 ದೇಶ ಸುತ್ತಿದ

    ಮೈಸೂರಿನ ಆಧುನಿಕ ಶ್ರವಣ ಕುಮಾರ – ಹಳೆ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ 4 ದೇಶ ಸುತ್ತಿದ

    – ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ತೀರ್ಥಯಾತ್ರೆ

    ಕಾರವಾರ: ರಾಮಾಯಣ ಕಾಲದಲ್ಲಿ ಪುತ್ರ ಭಕ್ತಿಗೆ ಹೆಸರಾದವನು ಶ್ರವಣ ಕುಮಾರ. ಇದೀಗ ಮೈಸೂರಿನ ಈ ಕೃಷ್ಣಕುಮಾರ್ ತನ್ನ ತಾಯಿಯನ್ನು ಭಾರತದಾದ್ಯಂತ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿ, ವಿದೇಶಗಳನ್ನೂ ತೋರಿಸಿ ಇದೀಗ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಗೋಕರ್ಣದ ಕಡೆ ಹೊರಟಿದ್ದಾರೆ. ಈ ಮೂಲಕ ಆಧುನಿಕ ಶ್ರವಣ ಕುಮಾರ (Shravan Kumar) ಎನಿಸಿಕೊಂಡಿದ್ದಾರೆ.

    ಹೌದು ಮೈಸೂರಿನ (Mysuru) ಕೃಷ್ಣಕುಮಾರ್ ತಮ್ಮ ಹಳೆಯ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ (Scooter) ವಯೋವೃದ್ಧ ತಾಯಿ ಚೂಡಾಲಮ್ಮ (73) ಅವರನ್ನು ಕರೆದುಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. ಮಾತ್ರವಲ್ಲದೆ 4 ದೇಶಗಳನ್ನು ಕೂಡ ತೋರಿಸಿಕೊಂಡು ಬಂದಿದ್ದಾರೆ. ಇದೀಗ ಬೆಳಗಾವಿ ಮೂಲಕ ಗೋವಾಗೆ ಆಗಮಿಸಿ ನಂತರ ಅಲ್ಲಿಂದ ಕಾರವಾರ, ಗೋಕರ್ಣ ಮಾರ್ಗವಾಗಿ ಸಾಗುತ್ತಿದ್ದಾರೆ.

    ಭೂತಾನ್, ಮೈನ್ಮಾರ್, ನೇಪಾಳ ಮಾತ್ರವಲ್ಲದೆ ಭಾರತದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಇದೇ ಹಳೆ ಸ್ಕೂಟರ್‌ನಲ್ಲಿ ಕೃಷ್ಣಕುಮಾರ್ ತಮ್ಮ ವೃದ್ಧ ತಾಯಿಯನ್ನು ಕೂರಿಸಿಕೊಂಡು ಎಲ್ಲ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಬ್ರಹ್ಮಚಾರಿಯಾಗಿಯೇ ಉಳಿದುಕೊಂಡು ಕೃಷ್ಣಕುಮಾರ್ ತಮ್ಮ ತಾಯಿಗೆ ದೇಶವನ್ನು ಸುತ್ತಿಸುವ ಸಂಕಲ್ಪ ಮಾಡಿದ್ದರು.

    ಬಜಾಜ್ ಚೇತಕ್ ಸ್ಕೂಟರ್ ಅನ್ನು ಕೃಷ್ಣಕುಮಾರ್ ಅವರಿಗೆ ತಮ್ಮ ತಂದೆ ಕೊಡಿಸಿದ್ದರು. ಈ ಸ್ಕೂಟರ್ ಅನ್ನು ತಮ್ಮ ತಂದೆ ಎಂದು ಭಾವಿಸಿಕೊಂಡು ಅದರಲ್ಲಿಯೇ ತಾಯಿಯನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸ್ಕೂಟರ್‌ನಲ್ಲಿಯೇ ತಾಯಿಯನ್ನು ಕೂರಿಸಿಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಇದನ್ನೂ ಓದಿ: ನಟ ಜಗ್ಗೇಶ್ ಪತ್ನಿ ಪೂಜೆ ಮಾಡಿ ಇಟ್ಟಿದ್ದ ಪೆಂಡೆಂಟ್ ಕೊಟ್ಟಿದ್ದಾರೆ: ಅಧಿಕಾರಿಗಳು

    ಈ ಕುರಿತು ಮಾತನಾಡಿದ ಅವರು, ಇದು ಮಾತೃ ಸೇವಾ ಸಂಕಲ್ಪ ಯಾತ್ರೆ. ನಮ್ಮ ಮನೆಯಲ್ಲಿ 10 ಜನ ಇದ್ದರು. ನಮ್ಮ ತಾಯಿ ಇಷ್ಟು ವರ್ಷಗಳು ಕುಟುಂಬ ಸಲಹುವುದರಲ್ಲೇ ಕಾಲ ಕಳೆದರು. ಹೀಗಾಗಿ ಅವರು ಮನೆಯಿಂದ ಎಲ್ಲಿಯೂ ಹೊರಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. 2015 ರಲ್ಲಿ ನಮ್ಮ ತಂದೆಯವರು ವಿಧಿವಶರಾದರು. ನಂತರ ನಾನು ಕಾರ್ಪೊರೇಟ್ ಟೀಂ ಲೀಡರ್ ನೌಕರಿಗೆ ರಾಜೀನಾಮೆ ನೀಡಿ 2018ರ ಜನವರಿ 16 ರಿಂದ ಮೈಸೂರಿನಿಂದ ಯಾತ್ರೆ ಆರಂಭಿಸಿದ್ದೇನೆ. ಇದುವರೆಗೂ ಸ್ಕೂಟರ್‌ನಲ್ಲಿಯೇ 78,162 ಕಿ.ಮೀ ಸುತ್ತಿ ತಾಯಿಯನ್ನು ಕರೆದುಕೊಂಡು ಇಡೀ ಭಾರತ ದರ್ಶನ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೌರಾಷ್ಟ್ರದಿಂದ ಪರಶುರಾಮ ಕುಂಡದವರೆಗೆ ಹಾಗೂ ಇತರ 3 ದೇಶಗಳನ್ನು ಕೂಡ ಇದೇ ಸ್ಕೂಟರ್‌ನಲ್ಲಿ ಸುತ್ತಿ ಬಂದಿದ್ದೇವೆ. ಇದೀಗ ಗೋವಾಕ್ಕೆ ಬಂದು ತಲುಪಿದ್ದೇವೆ. ಗೋವಾದಲ್ಲಿ ಎಲ್ಲ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳನ್ನು ತಾಯಿಗೆ ದರ್ಶನ ಮಾಡಿಸಿಕೊಂಡು ನಂತರ ಕರ್ನಾಟಕದ ಅಂಕೋಲಾ, ಗೋಕರ್ಣ, ಉಡುಪಿ, ಮಂಗಳೂರು ಮಾರ್ಗವಾಗಿ ಎಲ್ಲ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಬಳಿಕ ಮೈಸೂರಿಗೆ ತೆರಳುವ ಸಂಕಲ್ಪ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

    ಒಟ್ಟಿನಲ್ಲಿ ತಂದೆ-ತಾಯಿಯನ್ನು ಬೀದಿಯಲ್ಲಿ ಅನಾಥ ಮಾಡುವ ಮಕ್ಕಳೇ ಹೆಚ್ಚಿರುವಾಗ ರಾಮಾಯಣ ಕಾಲದ ಶ್ರವಣ ಕುಮಾರನಂತೆ ಈ ಆಧುನಿಕ ಶ್ರವಣ ಕುಮಾರ ತಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದು ತೀರ್ಥ ಕ್ಷೇತ್ರ ದರ್ಶನ ಮಾಡಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಇದನ್ನೂ ಓದಿ: ಅಪರಾಧಗಳಲ್ಲಿ ಯಾರೇ ಭಾಗಿಯಾದರೂ ಕಾನೂನು ಕ್ರಮ: ಹುಲಿ ಉಗುರು ವಿವಾದ ಬಗ್ಗೆ ಈಶ್ವರ್ ಖಂಡ್ರೆ ಮಾತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾರ್ ಧಾಮ್ ಯಾತ್ರೆ – ಇಲ್ಲಿಯವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

    ಚಾರ್ ಧಾಮ್ ಯಾತ್ರೆ – ಇಲ್ಲಿಯವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

    ಡೆಹ್ರಾಡೂನ್: ಮೇ 3 ರಂದು ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ದೇಗುಲಗಳಿಗೆ ಹೋಗುವ ಮಾರ್ಗದಲ್ಲಿ ಇಲ್ಲಿವರೆಗೆ 48 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವುಗಳಲ್ಲಿ 46 ಜನರು ಹೃದಯಾಘಾತ ಹಾಗೂ ಇತರ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಧಿಕ ರಕ್ತದೊತ್ತಡ, ಹೃದಯಾಘಾತಗಳಿಂದ ಹೆಚ್ಚಿನ ಚಾರ್‌ಧಾಮ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಉತ್ತರಾಖಂಡ ಸರ್ಕಾರ ಈ ಹಿಂದೆಯೇ ಯಾತ್ರಾರ್ಥಿಗಳಿಗೆ ಚಾರಣವನ್ನು ಪ್ರಾರಂಭಿಸುವುದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸೂಚಿಸಿತ್ತು. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

    ಹೆಚ್ಚುತ್ತಿರುವ ಯಾತ್ರಾರ್ಥಿಗಳ ಸಾವಿನ ಹಿನ್ನೆಲೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಯಾತ್ರಾರ್ಥಿಗಳಿಗೆ ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ, ಬಳಿಕವೇ ತೀರ್ಥಯಾತ್ರೆಗೆ ತೆರಳುವಂತೆ ಮನವಿ ಮಾಡಿದ್ದರು. ಚಾರ್ ಧಾಮ್ ಯಾತ್ರಾ ಸ್ಥಳದಲ್ಲಿ ಅಗತ್ಯ ವಸ್ತುಗಳ ಸೀಮಿತ ವ್ಯವಸ್ಥೆಗಳಿರುವುದರಿಂದ, ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡೇ ಪ್ರಯಾಣವನ್ನು ಪ್ರಾರಂಭಿಸಬೇಕಾಗಿ ಸೂಚನೆ ನೀಡಿದ್ದಾರೆ.

    ಶುಕ್ರವಾರ ಉತ್ತರಾಖಂಡ ಸರ್ಕಾರ ಚಾರ್ ಧಾಮ್ ಯಾತ್ರೆಯ ಆಫ್‌ಲೈನ್ ನೋಂದಣಿ ಅವಧಿಯನ್ನು ಒಂದು ತಿಂಗಳಿಂದ ಒಂದು ವಾರಕ್ಕೆ ಕಡಿತಗೊಳಿಸಿದೆ. ಪ್ರಯಾಣದ ಮಾರ್ಗಗಳಲ್ಲಿ ಸುಮಾರು 20 ಸ್ಥಳಗಳಲ್ಲಿ ನೋಂದಣಿ ಮಾಡಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ. ಇದನ್ನೂ ಓದಿ: ಬಕಲ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ – ಚೆಕ್‌ ಮಾಡೋದು ಹೇಗೆ?

    2 ವರ್ಷಗಳ ಕಾಲ ಕೋವಿಡ್-19 ಕಾರಣದಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಯಾತ್ರೆ ಪ್ರಾರಂಭವಾಗಿರುವುದರಿಂದ ಯಾತ್ರಿಕರ ಸಂಖ್ಯೆಯೂ ಹೆಚ್ಚಾಗಿದೆ.

    ಅಕ್ಷಯ ತೃತೀಯ ಹಿನ್ನೆಲೆ ಮೇ 3ರಂದು ಗಂಗೋತ್ರಿ ಹಾಗೂ ಯಮುನೋತ್ರಿ ಪೋರ್ಟಲ್‌ಗಳನ್ನು ತೆರೆಯಲಾಗಿದೆ. ಮೇ 6ರಂದು ಕೇದಾರನಾಥ ಹಾಗೂ ಮೇ 8ರಂದು ಬದರಿನಾಥ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ.

  • ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಬೆಂಗಳೂರು: ಉತ್ತರಾಖಂಡದ ಜಗತ್ಪ್ರಸಿದ್ಧ ಕೇದಾರನಾಥ ದೇಗುಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಡಿಕೆ ಶಿವಕುಮಾರ್ ಈ ತಿಂಗಳಿನಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಮೇ 13, 14, 15 ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತಕರ ಸಭೆಯಲ್ಲಿ ಡಿಕೆಶಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಪಕ್ಷದ ಕಾರ್ಯಕ್ರಮ ಮುಗಿದ ಬಳಿಕ ಡಿಕೆಶಿ ಉತ್ತರಾಖಂಡದಲ್ಲಿರುವ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಬದರೀನಾಥ, ಹರಿದ್ವಾರಕ್ಕೆ ಡಿಕೆ ಶಿವಕುಮಾರ್ ತೆರಳಲಿದ್ದು, ಎರಡು ದಿನ ಪ್ರವಾಸ ಕೈಗೊಂಡ ಬಳಿಕ ಅವರು ಕರ್ನಾಟಕಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

  • ಮಕ್ಕಳ ಜೊತೆ ತೀರ್ಥಯಾತ್ರೆ ಮಾಡಿದ ಅನಿರುದ್ಧ

    ಮಕ್ಕಳ ಜೊತೆ ತೀರ್ಥಯಾತ್ರೆ ಮಾಡಿದ ಅನಿರುದ್ಧ

    ಬೆಂಗಳೂರು: ಕಿರುತೆರೆಯಲ್ಲಿ ಮಿಂಚುತ್ತಿರುವ ನಟ ಅನಿರುದ್ಧ, ಮಕ್ಕಳ ಜೊತೆಗೆ ತೀರ್ಥಯಾತ್ರೆಯ ಮಾಡಿಕೊಂಡು ಬಂದಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಾವು ವೈಷ್ಣೋದೇವಿಗೆ ಹೋಗಿ ಬಂದೆವು. ಕೀರ್ತಿಯವರು ಕೆಲವು ವರ್ಷಗಳ ಹಿಂದೆ ಹೋಗಿ ಬಂದಿದ್ದಾರೆ. ಈ ಬಾರಿ ನಮ್ಮ ಜೊತೆ ಬಂದಿಲ್ಲ. ಸರ್ವೇ ಜನಃ ಸುಖಿನೋ ಭವಂತು. ತಾಯಿಯ ಅನುಗ್ರಹ ನಮ್ಮೆಲ್ಲರ ಮೇಲೂ ಇರಲಿ ಎಂದು ಅನಿರುದ್ಧ ಬರೆದುಕೊಂಡು ತೀರ್ಥಯಾತ್ರಗೆ ಹೋಗಿ ಬಂದಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:   ನನಗೆ ಅಕ್ರಮ ಸಂಬಂಧ ಇಲ್ಲ- ಟ್ರೋಲಿಗರ ವಿರುದ್ಧ ಕುಟುಕಿದ ಸಮಂತಾ

     

    View this post on Instagram

     

    A post shared by Aniruddha Jatkar (@aniruddhajatkar)

    ನಟ ಅನಿರುದ್ಧ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಶೂಟಿಂಗ್‍ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಅವರು ಪತ್ನಿ ಮತ್ತು ಮಕ್ಕಳಿಗಾಗಿ ಸಮಯ ಮೀಸಲಿಡುತ್ತಾರೆ. ಇತ್ತೀಚೆಗೆ ಮಕ್ಕಳ ಜೊತೆ ಅನಿರುದ್ಧ ತೀರ್ಥಯಾತ್ರೆ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ದೇವಸ್ಥಾನ ಇದೆ. ಶೂಟಿಂಗ್ ನಡುವೆ ಬ್ರೇಕ್ ಪಡೆದುಕೊಂಡ ಅನಿರುದ್ಧ ಅವರು ಮಕ್ಕಳ ಜೊತೆ ಪ್ರಯಾಣ ಬೆಳೆಸಿದ್ದರು. ದೇವರ ಆಶೀರ್ವಾದ ಪಡೆದು ಮರಳಿದ್ದಾರೆ. ಇದನ್ನೂ ಓದಿ:  ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ

    ನಟನೆ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಕಾರಣದಿಂದಲೂ ಅನಿರುದ್ಧ ಅವರು ಆಗಾಗ ಗಮನ ಸೆಳೆಯುತ್ತಾರೆ. ಬೆಂಗಳೂರು ಸೇರಿದಂತೆ ಅನೇಕ ಊರುಗಳ ಸ್ವಚ್ಚತೆಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸೀರಿಯಲ್‍ನಲ್ಲಿ ಅನಿರುದ್ಧ ಮಿಂಚುತ್ತಿದ್ದಾರೆ. ಅವರ ಅಭಿಮಾನಿಗಳ ಬಳಗವು ಅಪಾರ ಪ್ರಾಮಾಣದಲ್ಲಿ ಬೆಳೆದಿದೆ.

  • ತೀರ್ಥಯಾತ್ರೆ ಮುಗಿಸಿ ಬರುತ್ತಿದ್ದ ವಾಹನ ಅಪಘಾತ- 8 ಮಂದಿ ಸ್ಥಳದಲ್ಲೇ ಸಾವು

    ತೀರ್ಥಯಾತ್ರೆ ಮುಗಿಸಿ ಬರುತ್ತಿದ್ದ ವಾಹನ ಅಪಘಾತ- 8 ಮಂದಿ ಸ್ಥಳದಲ್ಲೇ ಸಾವು

    ಚೆನ್ನೈ: ತೀರ್ಥಯಾತ್ರೆ ಮುಗಿಸಿಕೊಂಡು ಟೆಂಪೋನಲ್ಲಿ ಬರುತ್ತಿರುವ ವಾಹನ ಅಪಘಾತಕ್ಕೀಡಾಗಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

    ಮುಂಜಾನೆ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಶ್ರೀಶೈಲಂ ದೇವಸ್ಥಾನ ಮತ್ತು ಇತರ ದೇಗುಲಗಳಿಗೆ ಭೇಟಿ ಕೊಟ್ಟು ಭಕ್ತರು ತೀರ್ಥಯಾತ್ರೆಯ ನಂತರ ಮನೆಗೆ ಬರುತ್ತಿದ್ದಾಗ ತಮಿಳುನಾಡಿನಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಟ್ರಕ್‍ಗೆ ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಟೆಂಪೋ ಡಿಕ್ಕಿ ಹೊಡೆದಿದೆ. ಟೆಂಪೋದಲ್ಲಿ ಒಟ್ಟು 15 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ವಾಹನದಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದಾರೆ. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ನೆಲ್ಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದ ವೇಳೆ ಟೆಂಪೋ ಚಾಲಕ ಸೇರಿದಂತೆ ಮುಂದಿನ ಆಸನಗಳಲ್ಲಿ ಕುಳಿತಿದ್ದ ಇತರ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಇತರ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರಿದ್ದಾರೆ. ಟೆಂಪೋ ಚಾಲಕ ವಾಹನ ಚಲಾಯಿಸುತ್ತಾ ನಿದ್ದೆಗೆ ಜಾರಿರಬಹುದು ಎನ್ನಲಾಗುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

  • ಕಲಿಯುಗದ ಶ್ರವಣಕುಮಾರ ಖ್ಯಾತಿಯ ಮೈಸೂರಿನ ಪುತ್ರನಿಗೆ ಆನಂದ್ ಮಹೀಂದ್ರಾರಿಂದ ಭರ್ಜರಿ ಗಿಫ್ಟ್

    ಕಲಿಯುಗದ ಶ್ರವಣಕುಮಾರ ಖ್ಯಾತಿಯ ಮೈಸೂರಿನ ಪುತ್ರನಿಗೆ ಆನಂದ್ ಮಹೀಂದ್ರಾರಿಂದ ಭರ್ಜರಿ ಗಿಫ್ಟ್

    ಬೆಂಗಳೂರು: ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡುತ್ತಿರುವ ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ಹಾಗೂ ತಾಯಿ ರತ್ನಮ್ಮ ಅವರ ಜರ್ನಿಯ ಕಥೆ ಮಹೀಂದ್ರ ಸಂಸ್ಥೆಯ ಆನಂದ್ ಮಹೀಂದ್ರಾ ವರೆಗೂ ತಲುಪಿದ್ದು, ಅಮ್ಮ-ಮಗನ ಈ ವರದಿಯನ್ನು ಕೇಳಿದ ಆನಂದ್ ಮಹೀಂದ್ರಾ ಅವರು ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ.

    ವೃದ್ಧ ತಂದೆ, ತಾಯಿಯನ್ನು ಭಾರವೆಂದು ವೃದ್ಧಾಶ್ರಮಗಳಿಗೆ ದಾಖಲು ಮಾಡುತ್ತಿರುವ ಮಕ್ಕಳ ನಡುವೆ ಕೃಷ್ಣ ಕುಮಾರ್ ಅವರ ಈ ಕಾರ್ಯ ಹಲವರ ಮೆಚ್ಚುಗೆಗೆ ಕಾರಣವಾಗಿತ್ತು. ಸದ್ಯ ಆನಂದ್ ಮಹೀಂದ್ರಾ ಅವರು ಕೂಡ ಕೃಷ್ಣ ಕುಮಾರ್ ಅವರ ಕಾರ್ಯಕ್ಕೆ ಫಿದಾ ಆಗಿದ್ದು, ತಾಯಿ ಹಾಗೂ ದೇಶದ ಬಗ್ಗೆ ಇರುವ ಪ್ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಅವರಿಗೆ ಮಹೀಂದ್ರ ಕೆಯುವಿ 100 ಎನ್‍ಎಕ್ಸ್‍ಟಿ ಕಾರನ್ನು ಗಿಫ್ಟ್ ನೀಡುವುದಾಗಿ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.

    ಕೃಷ್ಣ ಕುಮಾರ್ ಅವರು ಮಾಧ್ಯಮವೊಂದಕ್ಕೆ ತಮ್ಮ ಕಾರ್ಯದ ಕುರಿತು ಹೇಳಿಕೆ ನೀಡಿದ್ದು, ಈ ವಿಡಿಯೋವನ್ನು ಟ್ವಿಟ್ಟಗರೊಬ್ಬರು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವಿಟ್ಟನ್ನು ರಿಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ನನ್ನನ್ನು ಸಂಪರ್ಕ ಮಾಡಿದರೆ ಕಾರನ್ನು ಗಿಫ್ಟ್ ನೀಡುವುದಾಗಿ ತಿಳಿಸಿದ್ದು, ಮುಂದಿನ ತಮ್ಮ ಪ್ರಯಾಣವನ್ನು ಕಾರಿನಲ್ಲಿ ನಡೆಸಬಹುದು ಎಂದು ಹೇಳಿದ್ದಾರೆ.

    ಯಾರು ಕೃಷ್ಣ ಕುಮಾರ್: ಮೂಲತಃ ಮೈಸೂರಿನವರಾಗಿದ್ದು, ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ತೀರ್ಥಯಾತ್ರೆ ಆರಂಭಿಸಿದ್ದಾರೆ.

    ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಪುದುಚೇರಿ, ಸೇರಿದಂತೆ ನೇಪಾಳ, ಮ್ಯಾನ್ಮಾರ್ ಸೇರಿದಂತೆ ಹಲವು ಸ್ಥಳಗಳಿಗೆ ಸ್ಕೂಟರ್ ಮೇಲೆಯೇ ಭೇಟಿ ನೀಡಿದ್ದಾರೆ.

    ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಅವರಿಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದಿದ್ದಾರೆ.

    ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ಈ ಹಿಂದೆ ತಿಳಿಸಿದ್ದರು.

    ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

    ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

    ಬೆಂಗಳೂರು: ಪುತ್ರನೋರ್ವ ತನ್ನ ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡಿಸುತ್ತಿದ್ದಾರೆ. ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ತಮ್ಮ ತಾಯಿ ರತ್ನಮ್ಮ ಜೊತೆ ತೀರ್ಥಯಾತ್ರೆ ಮಾಡುತ್ತಾ ಇದೀಗ ಛತ್ತೀಸ್ ಗಢದ ದಂತೇವಾಡ ತಲುಪಿದ್ದಾರೆ.

    ಕೃಷ್ಣ ಕುಮಾರ್ ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ಮಾತು ಕೊಟ್ಟಿದ್ದರು.

    ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಾಹಾರಾಷ್ಟ್ರ, ಗೋವಾ, ಪುದುಚೇರಿ ಬಳಿಕ ಇದೀಗ ದಂತೇವಾಡದ ತಲುಪಿದ್ದು, ದಂತೇಶ್ವರಿ ದೇವರ ದರ್ಶನ ಪಡೆಯಲಿದ್ದಾರೆ.

    ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂದು ಕೇಳಿದ್ರೆ, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದು ಕೃಷ್ಣ ಕುಮಾರ್ ಹೇಳುತ್ತಾರೆ.

    ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಇದೂವರೆಗೂ ಎರಡು ಬಾರಿ ಮಾತ್ರ ಮಾರ್ಗ ಮಧ್ಯೆ ಸ್ಕೂಟರ್ ಪಂಚರ್ ಆಗಿದೆ. ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ತಿಳಿಸಿದರು.

    ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

  • ಅಮ್ಮನ ತೀರ್ಥಯಾತ್ರೆ ಆಸೆ-ಸ್ಕೂಟರ್‌ನಲ್ಲೇ ಜೀವ ತುಂಬಿದ ಆಧುನಿಕ ಶ್ರವಣಕುಮಾರ

    ಅಮ್ಮನ ತೀರ್ಥಯಾತ್ರೆ ಆಸೆ-ಸ್ಕೂಟರ್‌ನಲ್ಲೇ ಜೀವ ತುಂಬಿದ ಆಧುನಿಕ ಶ್ರವಣಕುಮಾರ

    ಧಾರವಾಡ: ತಂದೆ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥ ಯಾತ್ರೆ ಮಾಡಿದ ಶ್ರವಣಕುಮಾರ ಬಗ್ಗೆ ನಾವು ಕೇಳಿದ್ದೆವೆ. ಆದರೆ ಇಂದಿನ ಕಾಲದಲ್ಲಿ ಅಂತಹ ಮಕ್ಕಳು ಇಲ್ಲ ಎನ್ನುವರೇ ಹೆಚ್ಚು. ಆದರೆ ಇಲ್ಲೊಬ್ಬರು ತಮ್ಮ ತಾಯಿಯ ಆಸೆ ಪೂರ್ಣಗೊಳಿಸಲು ಸ್ಕೂಟರ್ ಮೇಲೆಯೇ ತೀರ್ಥ ಯಾತ್ರೆ ನಡೆಸಿದ್ದಾರೆ.

    ಹೌದು, ಮೂಲತಃ ಮೈಸೂರಿನವರಾದ ಡಿ ಕೃಷ್ಣಕುಮಾರ ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತಾಯಿ ಚುಡರತ್ನ ಅವರ ಆಸೆಯಂತೆ ತೀರ್ಥಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ 6 ರಾಜ್ಯಗಳ ಪ್ರವಾಸ ಮುಗಿಸಿದ್ದು, ಇಂದು ಧಾರವಾಡಕ್ಕೆ ಆಗಮಿಸಿದ್ದರು.

    ತಂದೆ ಸ್ಕೂಟರ್ ಮೇಲೆಯೇ ಸವಾರಿ: ವಿಶೇಷ ಎಂದರೆ ಕೃಷ್ಣಕುಮಾರ್ ಅವರು ತಂದೆಯ ಬಜಾಜ್ ಚೇತಕ್ ಸ್ಕೂಟರ್ ನಲ್ಲೇ ತೀರ್ಥಯಾತ್ರೆ ನಡೆಸಿದ್ದು, ಇಬ್ಬರು ಸದ್ಯ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇವರಿಗೆ 20 ವರ್ಷಗಳ ಹಳೆಯ ಬಜಾಜ್ ಚೇತಕ್ ಸ್ಕೂಟರ್ ಕೂಡ ಇವರಿಗೆ ಸಾಥ್ ನೀಡಿದೆ.

    ತಂದೆ ಇದ್ದಾಗ ಈ ಪ್ರವಾಸ ಮಾಡಲು ಆಗಲಿಲ್ಲ, ಆದರೆ ತಂದೆ ನಿಧನ ಬಳಿಕ ತಾಯಿಯ ಇಚ್ಛೆಯಂತೆ ಯಾತ್ರೆ ಆರಂಭ ಮಾಡಿದ್ದೇನೆ ಎಂದು ಕೃಷ್ಣಕುಮಾರ್ ತಿಳಿಸಿದ್ದಾರೆ. ಜನವರಿ 16 ರಿಂದ ಆರಂಭವಾಗಿರುವ ಇವರ ತೀರ್ಥಯಾತ್ರೆ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿರುವ ಇವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಇನ್ನು ಪ್ರಯಾಣ ವೇಳೆ ಹಣ್ಣು ಹಂಪಲು ಸೇವಿಸುವ ಇವರು ದೇವಾಲಯ, ಮಠಗಳಲ್ಲಿ ನೀಡುವ ದೇವರ ಪ್ರಸಾದವನ್ನು ಸೇವಿಸುತ್ತಾ ಪ್ರಯಾಣ ಬೆಳೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv