Tag: ತಿಹಾರ್ ಜೈಲ್

  • ನೀವೆಂದೂ ನನ್ನವರು: ಜಾಕ್ವೆಲಿನ್ ಗೆ ಜೈಲಿನಿಂದ ಮತ್ತೊಂದು ಪತ್ರ ಬರೆದ ಸುಕೇಶ್

    ನೀವೆಂದೂ ನನ್ನವರು: ಜಾಕ್ವೆಲಿನ್ ಗೆ ಜೈಲಿನಿಂದ ಮತ್ತೊಂದು ಪತ್ರ ಬರೆದ ಸುಕೇಶ್

    ಹುಕೋಟಿ ವಂಚನೆ ಆರೋಪಿ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಿಂದ ಮತ್ತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪತ್ರ ಬರೆದಿದ್ದಾನೆ. ಈಸ್ಟರ್ ಹಬ್ಬದ ನೆಪದಲ್ಲಿ ಭಾವನಾತ್ಮಕವಾಗಿ ಪತ್ರ ಬರೆದಿರುವ ಸುಕೇಶ್, ಜೈಲಿನಲ್ಲಿ ಇದ್ದುಕೊಂಡೆ ನಟಿಗೆ ಬರೆದು ಐದನೇ ಪತ್ರ ಇದಾಗಿದೆ. ಜಾಕ್ವೆಲಿನ್ ಗೆ ಈಸ್ಟರ್ ಹಬ್ಬವೆಂದರೆ ಎಲ್ಲಿಲ್ಲದ ಸಂಭ್ರಮ ಎನ್ನುವುದನ್ನು ಈ ಪತ್ರದಲ್ಲಿ ಸುಕೇಶ್ ಬಹಿರಂಗ ಪಡಿಸಿದ್ದಾನೆ.

    ದೆಹಲಿಯ ತಿಹಾರ್ ಜೈಲಿನಿಂದ (Tihar Jail) ನಟಿಗೆ ಬರೆದ ಪತ್ರದಲ್ಲಿ ‘ಮೈ ಬೇಬಿ ಮೈ ಬೊಮ್ಮಾ, ಜಾಕ್ವೆಲಿನ್.. ಬೇಬಿ ಐ ವಿಶ್ ಯು ವೆರಿ ಹ್ಯಾಪಿ ಈಸ್ಟರ್ (Easter). ನಿನ್ನ ನೆಚ್ಚಿನ ಹಬ್ಬಗಳಲ್ಲಿ ಇದು ಒಂದು ಅನ್ನುವುದನ್ನು ನಾನು ಬಲ್ಲೆ. ಈ ಹಬ್ಬದಲ್ಲಿ ನಿಮ್ಮೊಂದಿಗೆ ಇಲ್ಲ ಎನ್ನುವುದು ಬೇಸರ ತರಿಸುತ್ತಿದೆ. ಮುಂದಿನ ವರ್ಷ ಇಬ್ಬರೂ ಒಟ್ಟಿಗೆ ಈ ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳುವೆ. ನೀವೆಂದು ನನ್ನವರು’ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ.

    ಪ್ರತಿ ಕ್ಷಣವೂ ಜಾಕ್ವೆಲಿನ್ ಅವರನ್ನು ನೆನಪಿಸಿಕೊಳ್ಳುವುದಾಗಿಯೂ ತಿಳಿಸಿರುವ ಸುಕೇಶ್, ನನ್ನನ್ನು ನೀನೂ ಅಷ್ಟೇ ನೆನಪಿಸಿಕೊಳ್ಳುತ್ತಿಯಾ ಎಂದು ಗೊತ್ತು. ನೀನು ಮತ್ತು ನಾನು ಎಂದೆಂದಿಗೂ ಶಾಶ್ವತ ಎಂದು ಭಾವನಾತ್ಮಕವಾಗಿ ಪದಗಳನ್ನು ಹೆಣೆದಿದ್ದಾನೆ. ಈ ಪತ್ರವನ್ನು ಜಾಕ್ವೆಲಿನ್ ಓದಿದ್ದಾರೋ ಎಲ್ಲವೋ ಗೊತ್ತಿಲ್ಲ. ಆದರೆ, ನಿರಂತರವಾಗಿ ಪತ್ರಗಳನ್ನು ಸುಕೇಶ್ ಬರೆಯುತ್ತಲೇ ಇದ್ದಾನೆ. ಇದನ್ನೂ ಓದಿ: ನಿಮ್ಮ ಉಪಸ್ಥಿತಿಗೆ ಬೆಲೆ ಕೊಡುವವರನ್ನು ಬಿಟ್ಟೋಗ್ಬೇಡಿ-ರಾಧಿಕಾ ಪಂಡಿತ್ ಹಿಂಗ್ಯಾಕಂದ್ರು?

    ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರೂ ಜೊತೆಯಾಗಿ ಕಳೆದ ಖಾಸಗಿ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಕೋಟಿ ಬೆಲೆಬಾಳುವ ಗಿಫ್ಟ್ ಪಡೆದಿದ್ದಳು ಜಾಕ್ವೆಲಿನ್. ಈ ಉಡುಗೊರೆಗಳೇ ಕೊನೆಗೆ ನಟಿಗೆ ಮುಳುವಾದವು. ಕೋರ್ಟ್ ಮೆಟ್ಟಿಲು ಕೂಡ ಹತ್ತಿಸಿದವು.

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಬಂಧನವಾಗುತ್ತಿದ್ದಂತೆಯೇ ಜಾಕ್ವೆಲಿನ್ ಗೂ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ವಂಚನೆಯ ಹಣದಲ್ಲೇ ನಟಿಗೆ ಉಡುಗೊರೆ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಜಾಕ್ವೆಲಿನ್ ಕೂಡ ಬಂಧನವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಟಿ ಮಧ್ಯಂತರ ಜಾಮೀನು  ಪಡೆದುಕೊಂಡರು. ಆದರೂ, ವಿಚಾರಣೆಗೆ ಹೋಗುವುದು ತಪ್ಪಲಿಲ್ಲ.

    ನಂತರದ ದಿನಗಳಲ್ಲಿ ಸುಕೇಶ್ ಗೂ ತಮಗೂ ಸಂಬಂಧವಿಲ್ಲ. ಅವನಿಂದಾಗಿ ನನ್ನ ಜೀವನ ಹಾಳಾಯಿತು ಎಂದು ಜಾಕ್ವೆಲಿನ್ ಆರೋಪಿಸಿದರು. ಈಕೆ ಏನೇ ಆರೋಪ ಮಾಡಿದರೂ, ಸುಕೇಶ್ ಮಾತ್ರ ಇನ್ನೂ ಜಾಕ್ವೆಲಿನ್ ಜಪ ಮಾಡುವುದನ್ನು ನಿಲ್ಲಿಸಿಲ್ಲ. ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ವಿಶ್ ಮಾಡಿದ್ದ ಆತ, ನಂತರ ಹೋಳಿ ಹಬ್ಬಕ್ಕೂ ಸುಕೇಶ್ ಶುಭಾಶಯಗಳನ್ನು ಹೇಳಿದ್ದ. ಈಗ ಈಸ್ಟರ್ ಹಬ್ಬಕ್ಕೂ ಪತ್ರ ಬರೆದಿದ್ದಾನೆ.

  • ತಿಹಾರ್ ಜೈಲಿಗೆ ಹೋಗಿದ್ದ ಬಗ್ಗೆ ಡಿಕೆಶಿ ಭಾಷಣ ಮಾಡಲಿ: ಈಶ್ವರಪ್ಪ ವ್ಯಂಗ್ಯ

    ತಿಹಾರ್ ಜೈಲಿಗೆ ಹೋಗಿದ್ದ ಬಗ್ಗೆ ಡಿಕೆಶಿ ಭಾಷಣ ಮಾಡಲಿ: ಈಶ್ವರಪ್ಪ ವ್ಯಂಗ್ಯ

    ಬೆಂಗಳೂರು: ಡಿ.ಕೆ. ಶಿವಕುಮಾರ್ (D.K Shivakumar) ಪ್ರತ್ಯೇಕ ಬಸ್ ಯಾತ್ರೆ ವಿಚಾರವಾಗಿ ಮಾಜಿ ಸಚಿವ ಈಶ್ವರಪ್ಪ (KS Eshwarappa) ಕಿಡಿಕಾರಿದ್ದಾರೆ.

    ಅವರು ನಾನು ತಿಹಾರ್ ಜೈಲಿ (Tihar Jail) ಗೆ ಯಾಕೆ ಹೋಗಿದ್ದೆ, ಯಾವ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಮಾಡಿದ್ದೆ..?, ಯಾಕೆ ಇಡಿ (Enforcement Directorate) ಕೇಸ್ ಹಾಕಿದ್ದು..?, ಹೇಗೆ ಕಂತೆ ಕಂತೆ ನೋಟು ಸಿಕ್ಕಿತು ಅಂತಾ ವಿವರಿಸಿ 224 ಕ್ಷೇತ್ರದಲ್ಲಿ ಭಾಷಣ ಶುರು ಮಾಡಲಿ ಅಂತಾ ಡಿಕೆಶಿಗೆ ಟಕ್ಕರ್ ಕೊಟ್ರು. ಇದನ್ನೂ ಓದಿ: ಸಿಡಿ ರಾಡಿ: ರಮೇಶ್ ಜಾರಕಿಹೊಳಿಗೆ ಬೆಂಬಲ- ಮಂತ್ರಿಯೂ ಬೇಡ ಎಂದ ಈಶ್ವರಪ್ಪ

    ಇದೇ ವೇಳೆ ಶಿವಮೊಗ್ಗ (Shivamogga) ದಲ್ಲಿ ಶಾಂತಿ ನೆಲೆಸಬೇಕು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಈಶ್ವರಪ್ಪ ಗರಂ ಆದರು. ಹರ್ಷನ ಕೊಲೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು, ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕಾ ಅಂತಾ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟು ಬಿಡಲಿ. ಪಿಎಫ್ ಐ (PFI) ಗೂಂಡಾ ಕೊಲೆ ಮಾಡಿದ ಬಳಿಕವೂ ಅದನ್ನು ಖಂಡಿಸುವ ಪ್ರಯತ್ನವನ್ನೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ (Siddaramaiah) ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕೊಲೆ ಆದರೆ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನವರಿಗೆ ಖುಷಿ. ಮುಸಲ್ಮಾನ ಕೊಲೆ ಆದರೆ ಬಿಜೆಪಿ ಕಾರ್ಯಕರ್ತರ (BJP Activists) ಮೇಲೆ ಆಪಾದನೆ ಮಾಡುತ್ತಾರೆ. ಹಿಂದೂಗಳ ಕೊಲೆ ಆದರೆ ಅವರಿಗೆ ಏನೂ ಬೇಜಾರು ಇಲ್ಲ. ಶಿವಮೊಗ್ಗ ತಣ್ಣಗಿದೆ, ಅದಕ್ಕೆ ಬೆಂಕಿ ಹಚ್ಚಲು ಡಿ.ಕೆ. ಶಿವಕುಮಾರ್ ಪ್ರಯತ್ನ ಮಾಡಬಾರದು ಅಂತಾ ಈಶ್ವರಪ್ಪ ಕಿಡಿಕಾರಿದ್ರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಿಹಾರ್ ಜೈಲಿಗೆ ಹೆಚ್‍ಡಿಕೆ ಭೇಟಿ- ಇತ್ತ ಡಿಕೆಶಿ ಪತ್ನಿ, ತಾಯಿಗೆ ಸಿಗುತ್ತಾ ರಿಲೀಫ್?

    ತಿಹಾರ್ ಜೈಲಿಗೆ ಹೆಚ್‍ಡಿಕೆ ಭೇಟಿ- ಇತ್ತ ಡಿಕೆಶಿ ಪತ್ನಿ, ತಾಯಿಗೆ ಸಿಗುತ್ತಾ ರಿಲೀಫ್?

    ಬೆಂಗಳೂರು: ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ಭೇಟಿಯಾಗಲಿದ್ದಾರೆ.

    ಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಳ್ಳಲು ಡಿಕೆಶಿಯವರು ಕುಮಾರಸ್ವಾಮಿ ಹೆಗಲಿಗೆ ಹೆಗಲು ಕೊಟ್ಟಿದ್ದರು. ಹೀಗಾಗಿ ಹೆಚ್‍ಡಿಕೆ ಇಂದು ಡಿಕೆಶಿಯನ್ನ ತಿಹಾರ್ ಜೈಲಿನಲ್ಲಿ ಭೇಟಿ ಆಗಲಿದ್ದಾರೆ. ಜೈಲಿಗೆ ಹೋದ ಬಳಿಕ ಇಬ್ಬರ ಮೊದಲ ಭೇಟಿ ಇದಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಭೇಟಿ ನಡೆಯುವ ಸಾಧ್ಯತೆ ಇದ್ದು, ಮಾಜಿ ಸಚಿವರಾದ ಸಾರಾ ಮಹೇಶ್ ಮತ್ತು ಸಿ ಎಸ್ ಪುಟ್ಟರಾಜು ಮಾಜಿ ಸಿಎಂಗೆ ಸಾಥ್ ಕೊಡಲಿದ್ದಾರೆ. ಇದನ್ನೂ ಓದಿ: ಡಿಕೆಶಿ ಭೇಟಿಯಾಗಲಿದ್ದಾರೆ ಸೋನಿಯಾ ಗಾಂಧಿ

     

    ಇಡಿ ಕೊಟ್ಟಿರುವ ಸಮನ್ಸ್ ರದ್ದು ಕೋರಿ ಡಿಕೆಶಿ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟಿನಲ್ಲಿ ನಡೆಯಲಿದೆ. ಕಳೆದ ಸಲ ವಿಚಾರಣೆ ನಡೆದಿದ್ದಾಗ ಕೊಟ್ಟಿದ್ದ ಸಮನ್ಸ್‍ನ್ನು ವಾಪಸ್ ಪಡೆದು ಒಂದು ವಾರದೊಳಗೆ ಹೊಸದಾಗಿ ಸಮನ್ಸ್ ಕೊಡೋದಾಗಿ ಇಡಿ ಹೇಳಿತ್ತು.

    ತಮಗೆ 85 ವರ್ಷ ವಯಸ್ಸಾಗಿದ್ದು, ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಅಧಿಕಾರ ಇಲ್ಲ ಅನ್ನೋದು ಡಿಕೆಶಿ ತಾಯಿ ವಾದವಾಗಿತ್ತು. ಇತ್ತ ದೆಹಲಿ ಬದಲು ಬೆಂಗಳೂರಲ್ಲೇ ವಿಚಾರಣೆಗೆ ಹಾಜರಾಗಲು ಅವಕಾಶ ಕೊಡಬೇಕು ಎಂದು ಡಿಕೆಶಿ ಪತ್ನಿ ಹೇಳಿದ್ದರು.

  • ತಿಹಾರ್ ಜೈಲಿಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಭೇಟಿ

    ತಿಹಾರ್ ಜೈಲಿಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಭೇಟಿ

    ನವದೆಹಲಿ: ಕಾಂಗ್ರೆಸ್ಸಿನ ಇಬ್ಬರು ಪ್ರಭಾವಿ ನಾಯಕರಾದ ಪಿ. ಚಿದಂಬರಂ ಹಾಗೂ ಡಿಕೆ ಶಿವಕುಮಾರ್ ಅವರು ತಿಹಾರ್ ಜೈಲು ಸೇರಿದ್ದು, ಇದೀಗ ಇವರನ್ನು ಕೈ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮಾಡಿದ್ದಾರೆ.

    ಇಂದು ಬೆಳಗ್ಗೆ ತಿಹಾರ್ ಜೈಲಿಗೆ ಭೇಟಿ ನೀಡಿರುವ ಸೋನಿಯಾ ಅವರು ಡಿಕೆಶಿ ಜೊತೆ ಮಾತುಕತೆ ನಡೆಸಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಅಲ್ಲದೆ ಪಕ್ಷ ನಿಮ್ಮ ಜೊತೆಗಿದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಿಹಾರ್ ಜೈಲಿನ ಜೈಲ್ ನಂ.7 ರಲ್ಲಿ ಚಿದಂಬರಂ ಹಾಗೂ ಡಿಕೆಶಿ ಇದ್ದಾರೆ. ಹೀಗಾಗಿ ಅಲ್ಲಿಯೇ ಇಬ್ಬರನ್ನೂ ಸೋನಿಯಾ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಕೂಡ ಸಂಕಷ್ಟದಲ್ಲಿರುವ ನಾಯಕ ಬೆನ್ನಿಗೆ ನಿಲ್ಲುತ್ತದೆ. ಅವರಿಗೆ ಧೈರ್ಯವನ್ನು ಕೊಡುತ್ತದೆ. ಅಲ್ಲದೆ ಮುಂದಿನ ಹೋರಾಟಕ್ಕೆಲ್ಲ ಪಕ್ಷ ನಿಮ್ಮ ಜೊತೆಗಿರುತ್ತದೆ ಎಂಬ ಮೆಸೇಜ್ ಪಾಸ್ ಮಾಡುವ ಪ್ರಯತ್ನ ಮಾಡಿದ್ದಾರೆ.

    ಡಿಕೆಶಿ ಅವರ ಆಸ್ಪತ್ರೆಯಲ್ಲಿರುವಾಗ ರಾಜ್ಯದ ಕೆಲ ನಾಯಕರು ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದರು. ಆದರೆ ಡಿಕೆಶಿ ಜೈಲು ಸೇರಿದ ಬಳಿಕ ಯಾವೊಬ್ಬ ನಾಯಕ ಕೂಡ ಇದೂವರೆಗಹೂ ಭೇಟಿ ಮಾಡಿಲ್ಲ. ಇನ್ನೊಂದು ವಿಚಾರವೆಂದರೆ, ತಿಹಾರ್ ಜೈಲಿಗೆ ಎಲ್ಲರಿಗೂ ಪ್ರವೇಶವಿಲ್ಲ. ಕೇವಲ ಪ್ರಮುಖ ಗಣ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಡಿಕೆಶಿ ಅಥವಾ ಚಿದಂಬರಂ ಭೇಟಿಗೆ ಅವಕಾಶವಿದೆ.