Tag: ತಿಲಕ ಅಭಿಯಾನ

  • ಮಾಜಿ ಸಿಎಂಗೆ ಮಹಿಳೆಯರಿಂದ ಸರ್ಪ್ರೈಸ್, ಸ್ಪೆಷಲ್ ಗಿಫ್ಟ್

    ಮಾಜಿ ಸಿಎಂಗೆ ಮಹಿಳೆಯರಿಂದ ಸರ್ಪ್ರೈಸ್, ಸ್ಪೆಷಲ್ ಗಿಫ್ಟ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳೆಯರಿಂದ ಸರ್ಪ್ರೈಸ್ ಹಾಗೂ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.

    ತಿಲಕ ಕಂಡರೆ ಭಯವಾಗುತ್ತೆ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯಗೆ ಸರ್ಪ್ರೈಸ್ ಗಿಫ್ಟ್ ನ್ನು ಮಹಿಳೆಯರು ಕಳುಹಿಸಿದ್ದಾರೆ. ಒಂದು ಡಬ್ಬಿ ಕುಂಕುಮ ಹಾಗೂ ತಿಲಕದ ಮಹತ್ವದ ಪುಸ್ತಕವನ್ನು ರಣರಾಗಿಣಿ ಟೀಂ ಸಿದ್ದರಾಮಯ್ಯ ಅಡ್ರೆಸ್‍ಗೆ ಕೊರಿಯರ್ ಮಾಡಿದ್ದಾರೆ.

    ಸಿದ್ದರಾಮಯ್ಯನವರ ಪತ್ನಿಗೆ ಕೇಳಿದರೆ ಕುಂಕುಮದ ಮಹತ್ವ ಹೇಳುತ್ತಾರೆ. ಅವರು ತಿಲಕ ಹಾಕಲ್ಲವೆ ಎಂದು ಟಾಂಗ್ ಕೊಟ್ಟಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸೆಲ್ಫಿ ವಿತ್ ತಿಲಕ ಕೂಡ ಟ್ರೆಂಡ್ ಸೃಷ್ಟಿಸಿದೆ.

    ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟ್ಟರಿನಲ್ಲಿ, ಹಣೆಗೆ ತಿಲಕವಿಟ್ಟು ಸೆಲ್ಫಿ ತೆಗೆಸಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿ ಅದಕ್ಕೆ, “ತಿಲಕಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ. ಅದು ಭಾರತ ಸಂಸ್ಕೃತಿಯ ಭಾಗ, ತಿಲಕದ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಬರೆದುಕೊಂಡಿದ್ದರು.

    https://twitter.com/ShobhaBJP/status/1103205304840278016

    ಸಿದ್ದರಾಮಯ್ಯ ತನ್ನ ಟ್ವಿಟ್ಟರಿನಲ್ಲಿ, ಬಿಜೆಪಿಯಯವರು ಕುಂಕುಮ ನಾಮ, ಕಾವಿ ಬಟ್ಟೆಗಳನ್ನು ದುರುಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರಿಗೆ ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಪ್ರಶ್ನೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತಿಲಕ ಅಭಿಯಾನ

    ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತಿಲಕ ಅಭಿಯಾನ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಮ ಇಟ್ಕೊಂಡವರನ್ನು ಕಂಡ್ರೆ ಭಯ ಆಗುತ್ತೆ ಎಂಬ ಹೇಳಿಕೆಯನ್ನು ನೀಡಿದ್ದು, ಇದೀಗ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಬಿಜೆಪಿ ‘ತಿಲಕದೊಂದಿಗೆ ಸೆಲ್ಫಿ’ ಎಂಬ ಅಭಿಯಾನ ಶುರು ಮಾಡಿದೆ.

    ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟ್ಟರಿನಲ್ಲಿ, ಹಣೆಗೆ ತಿಲಕವಿಟ್ಟು ಸೆಲ್ಫಿ ತೆಗೆಸಿಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ತಿಲಕಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ. ಅದು ಭಾರತ ಸಂಸ್ಕೃತಿಯ ಭಾಗ, ತಿಲಕದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.

    https://twitter.com/ShobhaBJP/status/1103205304840278016

    ಶೋಭಾ ಟ್ವೀಟ್‍ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ತಿಲಕ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗುವವರು ನಿಜವಾದ ದೈವ ಭಕ್ತರು. ತಿಲಕ ಇಟ್ಟುಕೊಂಡು ಸೆಲ್ಫಿಗೆ ಮುಖ ಒಡ್ಡುವವರು ಕ_ಭಕ್ತರು” ಎಂದು ರೀ-ಟ್ವೀಟ್ ಮಾಡಿ ಶೋಭಾ ಅವರಿಗೆ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ತನ್ನ ಟ್ವಿಟ್ಟರಿನಲ್ಲಿ, ಬಿಜೆಪಿಯಯವರು ಕುಂಕುಮ ನಾಮ, ಕಾವಿ ಬಟ್ಟೆಗಳನ್ನು ದುರಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರು ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಟ್ಟಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv