Tag: ತಿಲಕ

  • ತಿಲಕವಿಟ್ಟು ಶಾಲೆಗೆ ತೆರಳಿದ ವಿದ್ಯಾರ್ಥಿನಿಗೆ ಥಳಿಸಿದ ಮುಸ್ಲಿಂ ಶಿಕ್ಷಕ – ಕ್ರಮಕ್ಕೆ ಮುಂದಾದ ಡೆಪ್ಯೂಟಿ ಕಮಿಷನರ್

    ತಿಲಕವಿಟ್ಟು ಶಾಲೆಗೆ ತೆರಳಿದ ವಿದ್ಯಾರ್ಥಿನಿಗೆ ಥಳಿಸಿದ ಮುಸ್ಲಿಂ ಶಿಕ್ಷಕ – ಕ್ರಮಕ್ಕೆ ಮುಂದಾದ ಡೆಪ್ಯೂಟಿ ಕಮಿಷನರ್

    ಶ್ರೀನಗರ: ಮನೆಯಲ್ಲಿ ಪೂಜೆ ಮುಗಿಸಿ ತಿಲಕವಿಟ್ಟುಕೊಂಡು ಶಾಲೆಗೆ ತೆರಳಿದ ಹಿಂದೂ ವಿದ್ಯಾರ್ಥಿನಿಗೆ ಮುಸ್ಲಿಂ ಶಿಕ್ಷಕರೊಬ್ಬರು ಥಳಿಸಿದ ಘಟನೆ ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ನಡೆದಿದೆ.

    ಹಿಂದೂಗಳ ಪವಿತ್ರ ಚೈತ್ರ ನವರಾತ್ರಿ ಹಬ್ಬ ನಡೆಯುತ್ತಿದೆ. ಹೀಗಾಗಿ ಜಮ್ಮು-ಕಾಶ್ಮೀರದ ಹಿಂದೂಗಳ ಮನೆಯಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ಮನೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡ ಮಗಳು ಹಣೆಗೆ ತಿಲಕವನ್ನಿಟ್ಟು ಶಾಲೆಗೆ ಹೋಗಿದ್ದಳು. ಹಣೆಗೆ ತಿಲಕ ಇಟ್ಟು ಬಂದಿದ್ದಕ್ಕೆ ಶಿಕ್ಷಕ ನಿಸಾರ್ ಅಹ್ಮದ್ ಹೊಡೆದಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಉಗ್ರರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿ: ಉನ್ನತ ಅಧಿಕಾರಿ

    ಈ ಬಗ್ಗೆ ಪಾಲಕರು ದೂರು ನೀಡುತ್ತಿದ್ದಂತೆ ರಾಜೌರಿ ಜಿಲ್ಲೆಯ ಹೆಚ್ಚುವರಿ ಡೆಪ್ಯೂಟಿ ಕಮಿಷನರ್ ಶಿಕ್ಷಕನನ್ನು ಅಮಾನತು ಮಾಡಿದ್ದಾರೆ. ಘಟನೆ ಕುರಿತಾಗಿ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

    ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಕಿಯ ತಂದೆ, ಈ ರೀತಿಯ ಘಟನೆಗಳು ಸಮಾಜಕ್ಕೆ ಮಾರಕ. ಸಾಮಾನ್ಯ ಜನರೂ ಕೂಡ ಧರ್ಮದ ವಿಚಾರಕ್ಕೆ ಕಿತ್ತಾಡುವಂತೆ ಮಾಡಬಾರದು. ಧರ್ಮದ ಹೆಸರಿನಲ್ಲಿ ಹೀಗೆಲ್ಲ ಮಾಡುತ್ತ ಹೋದರೆ, ಮುಂದೊಂದು ದಿನ ಪರಸ್ಪರರ ಕುತ್ತಿಗೆ ಕತ್ತರಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

  • ಐ ಆಮ್ ಪ್ರೌಡ್ ಟು ಬಿ ಹಿಂದೂ, ತಿಲಕ್ ಈಸ್ ಮೈ ರೈಟ್: ಸಿದ್ದುಗೆ ಯತ್ನಾಳ್ ಟಾಂಗ್

    ಐ ಆಮ್ ಪ್ರೌಡ್ ಟು ಬಿ ಹಿಂದೂ, ತಿಲಕ್ ಈಸ್ ಮೈ ರೈಟ್: ಸಿದ್ದುಗೆ ಯತ್ನಾಳ್ ಟಾಂಗ್

    ವಿಜಯಪುರ: ಐ ಆಮ್ ಪ್ರೌಡ್ ಟು ಬಿ ಹಿಂದೂ, ತಿಲಕ್ ಇಸ್ ಮೈ ರೈಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುಖಾಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದ್ದಾರೆ.

    ಸಿದ್ದರಾಮಯ್ಯ ಅವರ ತಿಲಕ ಹೇಳಿಕೆ ಸದ್ಯ ಭಾರೀ ಸುದ್ದಿಯಲ್ಲಿದೆ. ಕುಂಕುಮಧಾರಿಯನ್ನು ಕಂಡರೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಿಜೆಪಿ ನಾಯಕರು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬಿಜೆಪಿಯಿಂದ ತಿಲಕ ಅಭಿಯಾನವೇ ಶುರುವಾಗಿಬಿಟ್ಟಿದೆ. ಒಬ್ಬರ ಮೇಲ್ಲೊಬ್ಬರು ಬಿಜೆಪಿ ನಾಯಕರು ತಿಲಕ ವಿಚಾರಕ್ಕೆ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡುತ್ತ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತಿಲಕ ಅಭಿಯಾನ

    https://www.facebook.com/basanagouda.patilyatnal/posts/2056106134484929

    ಈ ನಡುವೇ ಯತ್ನಾಳ್ ಅವರು ತಾವು ತಿಲಕ ಇಟ್ಟುಕೊಂಡಿರುವ ಫೋಟೋವೊಂದನ್ನು ಫೇಸ್‍ಬುಕ್‍ನಲ್ಲಿ ಹಾಕಿ “I’m proud to be Hindu. Tilak is my right” ಎಂದು ಬರೆದು ಪೋಸ್ಟ್ ಮಾಡಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ತಿಲಕ ಕಂಡರೆ ಭಯವಾಗುತ್ತೆ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯರಿಗೆ ಒಂದು ಡಬ್ಬಿ ಕುಂಕುಮ ಹಾಗೂ ತಿಲಕದ ಮಹತ್ವದ ಪುಸ್ತಕವನ್ನು ಮಹಿಳೆಯರು ಮಾಜಿ ಸಿಎಂಗೆ ಕೊರಿಯರ್ ಮಾಡಿದ್ದಾರೆ. ಸಿದ್ದರಾಮಯ್ಯನವರ ಪತ್ನಿಗೆ ಕೇಳಿದರೆ ಕುಂಕುಮದ ಮಹತ್ವ ಹೇಳುತ್ತಾರೆ. ಅವರು ತಿಲಕ ಹಾಕಲ್ಲವೆ ಎಂದು ಟಾಂಗ್ ಕೊಟ್ಟಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಫಿ ವಿತ್ ತಿಲಕ ಕೂಡ ಟ್ರೆಂಡ್ ಸೃಷ್ಟಿಸಿದೆ. ಇದನ್ನೂ ಓದಿ:ಕುಂಕುಮಧಾರಿಯನ್ನ ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ: ಸಿದ್ದರಾಮಯ್ಯ ಪ್ರಶ್ನೆ

    ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟ್ಟರಿನಲ್ಲಿ, ಹಣೆಗೆ ತಿಲಕವಿಟ್ಟು ಸೆಲ್ಫಿ ತೆಗೆಸಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿ ಅದಕ್ಕೆ, “ತಿಲಕಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ. ಅದು ಭಾರತ ಸಂಸ್ಕೃತಿಯ ಭಾಗ, ತಿಲಕದ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಬರೆದುಕೊಂಡಿದ್ದರು.

    https://twitter.com/ShobhaBJP/status/1103205304840278016?ref_src=twsrc%5Etfw%7Ctwcamp%5Etweetembed%7Ctwterm%5E1103205304840278016&ref_url=https%3A%2F%2Fpublictv.jssplgroup.com%2Fbjp-starts-tilak-abhiyana-against-siddaramaiah%2Famp

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುಶ್ಯಾಸನ ರೀತಿ ಹೆಣ್ಣು ಮಗಳ ಸೆರಗು ಎಳೆದವರು ಯಾರು – ಸಿದ್ದರಾಮಯ್ಯ ಟ್ವೀಟ್ ಗೆ ಬಿಜೆಪಿ ಪ್ರಶ್ನೆ

    ದುಶ್ಯಾಸನ ರೀತಿ ಹೆಣ್ಣು ಮಗಳ ಸೆರಗು ಎಳೆದವರು ಯಾರು – ಸಿದ್ದರಾಮಯ್ಯ ಟ್ವೀಟ್ ಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.

    ಕರ್ನಾಟಕದಲ್ಲಿ ಒಬ್ಬರು ಬಿಳಿ ಅಂಗಿ ಬಿಳಿ ಪಂಚೆ ತೊಟ್ಟ ಮಾಜಿ ಮುಖ್ಯಮಂತ್ರಿ ಇದ್ದಾರೆ. ನೋಡೋಕೆ ತುಂಬಾ ಸಂಭಾವಿತರ ರೀತಿ ಕಾಣುತ್ತಾರೆ ಆದರೆ ಸಭೆ ಸಮಾರಂಭಗಳಲ್ಲಿ ದುಶ್ಯಾಸನ ತರ ಹೆಣ್ಣುಮಕ್ಕಳ ಸೆರಗು ಎಳೆಯುತ್ತಾರೆ. ಸಾಮಾನ್ಯರ ತರ ಕಾಣುತ್ತಾರೆ ಆದರೆ ಕೋಟಿ ಬೆಲೆ ಬಾಳೋ ವಾಚ್ ಕಟ್ಟುತ್ತಾರೆ. ಯಾರಿವರು ಗೊತ್ತೇ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿದೆ. ಇದನ್ನೂ ಓದಿ:ಕುಂಕುಮಧಾರಿಯನ್ನ ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ: ಸಿದ್ದರಾಮಯ್ಯ ಪ್ರಶ್ನೆ

    ಸಿದ್ದರಾಮಯ್ಯ ಉತ್ತರ ಪ್ರದೇಶದಲ್ಲೊಬ್ಬರು ಬಿಜೆಪಿಯ ಮುಖ್ಯಮಂತ್ರಿ ಇದ್ದಾರೆ. ಮೈತುಂಬಾ ಕಾವಿ ಬಟ್ಟೆ, ಮುಖತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್ ಗಳಿವೆ. ಈ ಕುಂಕುಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಬಿಜೆಪಿ ಕರ್ನಾಟಕ ರಿಟ್ವೀಟ್ ಮಾಡಿ ಈ ಮೇಲಿನ ಪ್ರಶ್ನೆಯನ್ನು ಕೇಳಿದೆ. ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತಿಲಕ ಅಭಿಯಾನ

    ಕುಂಕುಮ ನಾಮ, ಕಾವಿ ಬಟ್ಟೆಗಳೆಲ್ಲ ಭಾರತೀಯ ಧಾರ್ಮಿಕ ಪರಂಪರೆಯ ಭಾಗ, ಅದಕ್ಕೊಂದು ಪಾವಿತ್ರ್ಯ ಇತ್ತು. ಆದರೆ ಯಾವಾಗ ಬಿಜೆಪಿ ನಾಯಕರೆಲ್ಲ ಇವುಗಳನ್ನೆಲ್ಲ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳಲು ಹೊರಟರೋ, ಅದ ನಂತರ ಕುಂಕುಮ,ಕಾವಿ ಹಾಕಿಕೊಂಡವರನ್ನು ಜನತೆ ಸಂಶಯ-ಭಯದಿಂದ ನೋಡುವಂತಾಗಿದೆ. ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್ ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದು ಏನಿವಾಗ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ:ಇವರು ತಿಲಕವಿಟ್ಟುಕೊಂಡ ಹಿಂದೂಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ದಣ್ಣ: ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇವರು ತಿಲಕವಿಟ್ಟುಕೊಂಡ ಹಿಂದೂಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ದಣ್ಣ: ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯ

    ಇವರು ತಿಲಕವಿಟ್ಟುಕೊಂಡ ಹಿಂದೂಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ದಣ್ಣ: ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯ

    ಬೆಂಗಳೂರು: ಕುಂಕುಮವನ್ನು ನೋಡಿದರೆ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟತ್ತಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‍ಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಅವರು ಹಿಂದೂ ಹಾಗೂ ಬಿಜೆಪಿ ವಿರುದ್ಧ ಮಾತನಾಡಿರುವುದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಅನಂತ್ ಕುಮಾರ್ ಹೆಗ್ಡೆ ಅವರು ಸಿದ್ದರಾಮಯ್ಯ ಅವರು ಕುಂಕುಮ ಇಟ್ಟಿಕೊಂಡಿರುವ ಫೋಟೋವೊದನ್ನು ಹಾಕಿ “ಅಯ್ಯೋ! ಭಯ, ಭೀತಿಗೊಳ್ಳಬೇಡಿ. ಇವರು ಹಣೆಯಲ್ಲಿ ತಿಲಕವಿಟ್ಟುಕೊಂಡ ಹಿಂದೂಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ದಣ್ಣ #selfie with tilak” ಅಂತ ಬರೆದು ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: ಕುಂಕುಮಧಾರಿಯನ್ನ ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ: ಸಿದ್ದರಾಮಯ್ಯ ಪ್ರಶ್ನೆ

    ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರ ಟ್ವೀಟ್ ಬಗ್ಗೆ ಬಿಜೆಪಿ ನಾಯಕ ಸಿ.ಟಿ ರವಿ ಅವರು ಕೂಡ ರೀ-ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. “ಚುನಾವಣೆ ವೇಳೆ ಇದೇ ಕುಂಕುಮ ತಾನೆ ನಿಮ್ಮ ಹಣೆಮೇಲೆ ಇದ್ದಿದ್ದು. ಆಗ ನಿಮಗೆ ಭಯವಿರಲಿಲ್ಲವೇ? ಬೇಕಾದಾಗ ಕುಂಕುಮ, ತಿಲಕ ಹಚ್ಚಿ ಬೇಡವಾದಾಗ ಅದೇ ಸಂಪ್ರದಾಯದ ವಿರುದ್ಧ ಕೇವಲ ಮತಗಳಿಕೆಗೋಸ್ಕರ ಜನರನ್ನು ಎತ್ತಿಕಟ್ಟುವ ನಿಮ್ಮ ಕೀಳು ಮನಸ್ಥಿತಿಗೆ ಭಾರತದ ಯಾವ ಭಾಗದಲ್ಲೂ ಬೆಲೆ ಇಲ್ಲ. ಇನ್ನೂ ಎಷ್ಟು ನೀಚ ರಾಜಕಾರಣ ಮಾಡುತ್ತೀರ ಸಿದ್ದರಾಮಯ್ಯ ಸಾರ್?” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv