Tag: ತಿರುವನಂಪುರ

  • ನಟಿ ಅಪರ್ಣಾ ಸಾವಿಗೆ ಮತ್ತೊಂದು ತಿರುವು: ದಿನಕ್ಕೊಂದು ಸ್ಫೋಟಕ ಮಾಹಿತಿ

    ನಟಿ ಅಪರ್ಣಾ ಸಾವಿಗೆ ಮತ್ತೊಂದು ತಿರುವು: ದಿನಕ್ಕೊಂದು ಸ್ಫೋಟಕ ಮಾಹಿತಿ

    ಳೆದ ವಾರವಷ್ಟೇ ನೇಣಿಗೆ ಶರಣಾಗಿದ್ದ (Suicide)  ಮಲಯಾಳಂ ಖ್ಯಾತ ನಟಿ ಅಪರ್ಣಾ ನಾಯರ್ (Aparna Nair) ಸಾವಿನ ಸುದ್ದಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತದೆ.  ಅಪರ್ಣಾ ಸಾವಿಗೆ ಪತಿಯ ಮತ್ತೊಂದು ಸಂಬಂಧ ಎಂದು ಹೇಳಲಾಗುತ್ತಿದ್ದು, ಸ್ವತಃ ಅಪರ್ಣಾ ತಂಗಿಯ ಜೊತೆಯೇ ಪತಿ ಅಫೇರ್ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.

    ಅಪರ್ಣಾ ತಂಗಿಯೊಂದಿಗೆ ಪತಿಯು ಸಂಬಂಧ ಇಟ್ಟುಕೊಂಡಿರುವ ವಿಚಾರವಾಗಿ ಹಲವಾರು ಬಾರಿ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ಕುರಿತು ಪೊಲೀಸ್ ಠಾಣೆಗೂ ಅಪರ್ಣಾ ದೂರು ನೀಡಿದ್ದರು. ಆದರೂ ಪತಿ ಸರಿ ಹೋಗಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ನಡೆಯೇ ಅಪರ್ಣಾ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ರಮೇಶ್ ಅರವಿಂದ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಈ ಹಿಂದೆ ಅಪರ್ಣಾ ಅವರ ಪತಿಯ ಕುಡಿತವೇ ಸಾವಿಗೆ ಕಾರಣವೆಂದು ಎಫ್.ಐ.ಆರ್ ನಲ್ಲಿ ದಾಖಲಾಗಿತ್ತು. ಗಂಡನ ಕುಡಿತದ ಚಟಕ್ಕೆ ಅಪರ್ಣಾ ಬೇಸತ್ತು ಹೋಗಿದ್ದರಿಂದ, ಈ ವಿಚಾರವನ್ನು ಹಲವಾರು ಬಾರಿ ತಮ್ಮ ತಾಯಿಯ ಜೊತೆ ಹಂಚಿಕೊಂಡಿದ್ದರಂತೆ. ಸಾವಿಗೂ ಎರಡು ಗಂಟೆ ಮುಂಚೆ ತಾಯಿಗೆ ಕರೆ ಮಾಡಿ, ತನ್ನ ನೋವನ್ನು ಹೇಳಿಕೊಂಡಿದ್ದರು ಎಂದು ಅಪರ್ಣಾ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗಸ್ಟ್ 31ರ ಸಂಜೆ 7.30ರ ಹೊತ್ತಿಗೆ ಅಪರ್ಣಾ ಅವರ ದೇಹ ನೇಣು (Suicide) ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು. ಅವರ ತಾಯಿ ಮತ್ತು ಸಹೋದರಿ ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆ ತಲುಪುವುದರ ಹೊತ್ತಿಗೆ ಅಪರ್ಣಾ ಉಸಿರು ಚೆಲ್ಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

     

    ತಿರುವನಂತಪುರಂ (Thiruvananthapuram) ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳೊಂದಿಗೆ ಅಪರ್ಣಾ ವಾಸಿಸುತ್ತಿದ್ದರು. ಕೇವಲ 31ನೇ ವಯಸ್ಸಿನಲ್ಲೇ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ನಟಿ ಅಗಲಿದ್ದಾರೆ. ತನಿಖೆ (Investigation) ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಅಂತಿಮವಾಗಿ ಅಪರ್ಣಾ ಸಾವಿಗೆ ಕಾರಣ ಏನು ಎನ್ನುವುದು ಕೋರ್ಟಿನಲ್ಲೇ ಅಂತಿಮವಾಗಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

    ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

    ತಿರುವನಂಪುರಂ: ತೊಡುಪುಳ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಲಾಕಪ್‍ನಿಂದ ತಪ್ಪಿಸಿಕೊಂಡು ಹೋಗುವ ವೇಳೆ ಪಕ್ಕದ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಶಫೀ(35) ಮೃತ ದುರ್ದೈವಿಯಾಗಿದ್ದಾನೆ. ಪೊಲೀಸ್ ಠಾಣೆಯ ಪಕ್ಕದಲ್ಲಿ ತೊಡುಪುಳ ನದಿ ಹರಿಯುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಲಾಕ್‍ಅಪ್ ಅನ್ನು ಸರಿಯಾಗಿ ಲಾಕ್ ಮಾಡಿರಲಿಲ್ಲ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ನದಿಗೆ ಹಾರಿದ್ದ ಶಫಿಯನ್ನು ಸ್ಥಳೀಯರೊಂದಿಗೆ ಸೇರಿ ಪೊಲೀಸರು ದಡದ ಮೂಲಕ ಅಟ್ಟಿಸಿಕೊಂಡು ಹೋಗಿದ್ದರು. ಈ ವೇಳೆ ಸುಮಾರು ಒಂದು ಕಿಲೋಮೀಟರ್ ಈಜಿದನು. ಅಷ್ಟರಲ್ಲಿ ಅಲ್ಲಿಗೆ ಅಗ್ನಿಶಾಮಕ ದಳವೂ ಬಂದಿತ್ತು. ನಾವೆಲ್ಲರೂ ಅವನನ್ನು ದಡಕ್ಕೆ ಬರುವಂತೆ ಮನವಿ ಮಾಡಿದ್ದೇವು. ಆದರೆ ಅವನು ನಿರಾಕರಿಸಿದನು. ಸ್ವಲ್ಪ ಸಮಯದ ನಂತ ನೀರಿನಲ್ಲಿ ಮುಳುಗಿದನು ಎಂದು ಪೊಲೀಸರು ಹೇಳಿದರು. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ

    ಶಫಿ ವಿರುದ್ಧ ಸುಮಾರು 18 ಅಥವಾ 19 ಪ್ರಕರಣಗಳು ದಾಖಲಾಗಿದ್ದು, ಹಲ್ಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ

  • ತಂದೆ, ಚಿಕ್ಕಪ್ಪ ಸೇರಿ ಮಗಳ ಪತಿಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು!

    ತಂದೆ, ಚಿಕ್ಕಪ್ಪ ಸೇರಿ ಮಗಳ ಪತಿಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು!

    – ಮಗಳ ಮದುವೆಗೆ ವಿರೋಧ

    ತಿರುವನಂಪುರಂ: ಅಪ್ಪ ಮತ್ತು ಚಿಕ್ಕಪ್ಪ ಸೇರಿ ಮಗಳ ಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಕೇರಳದ ಪಾಲಕ್ಕಾಡ್‍ನಲ್ಲಿ ನಡೆದಿದೆ.

    ಮೃತನನ್ನು ಅನೀಶ್(27) ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕ ಪತ್ನಿಯ ಅಪ್ಪ ಮತ್ತು ಚಿಕ್ಕಪ್ಪನಿಂದ ಹಲ್ಲೆ ಗೊಳಗಾಗಿ ಸಾವನ್ನಪ್ಪಿದ್ದಾನೆ.

    ಅನೀಶ್‍ನನ್ನು ಪತ್ನಿ ತಂದೆ ಹಾಗೂ ಚಿಕ್ಕಪ್ಪ ಸೇರಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅನೀಶ್‍ನನ್ನು ಕೊಂದ ಆರೋಪದ ಮೇಲೆ, ಅನೀಶ್‍ನ ಪತ್ನಿಯ ತಂದೆ ಪ್ರಭುಕುಮಾರ್ ಮತ್ತು ಚಿಕ್ಕಪ್ಪ ಸುರೇಶ್‍ನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನೀಶ್ ಮದುವೆಯಾಗಿರುವ ಹುಡುಗಿ ಶ್ರೀಮಂತ ಕುಟುಂಬಕ್ಕೆ ಸೇರಿದವಳು. ಇಬ್ಬರೂ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಹುಡುಗಿಯ ಪೋಷಕರು ಅವಳ ಮದುವೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದರು. ಈ ಕಾರಣದಿಂದಾಗಿ ಕಳೆದ ಹಲವು ದಿನಗಳಿಂದ ವಿವಾದ ನಡೆಯುತ್ತಿತ್ತು. ನಂತರ ಪೊಲೀಸರು ಬಂದು ಹುಡುಗಿಯ ಪೋಷಕರನ್ನು ಒಪ್ಪಿಸಿದ್ದರು. ಆದರೆ ಒಂದು ದಿನ ಅನೀಶ್ ಮನೆಯ ಹಿಂದೆ ಒಬ್ಬನೇ ಇದ್ದ ವೇಳೆ ಬಂದ ಪತ್ನಿಯ ಅಪ್ಪ ಮತ್ತು ಚಿಕ್ಕಪ್ಪ ಅಳಿಯನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

    ಘಟನೆಯಿಂದ ಗಾಯಗೊಂಡಿದ್ದ ಅನೀಶ್‍ನನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅನೀಶ್ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈಗಾಗಲೇ ಅನೀಶ್ ಪತ್ನಿಯ ಚಿಕ್ಕಪ್ಪ ಮತ್ತು ಅಪ್ಪನನ್ನು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

  • ಮಗನ ಕಣ್ಣೆದುರೇ ಮಣ್ಣಿನಡಿ ಸಿಲುಕಿದ ತಾಯಿ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಮಗನ ಕಣ್ಣೆದುರೇ ಮಣ್ಣಿನಡಿ ಸಿಲುಕಿದ ತಾಯಿ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ತಿರುವನಂತಪುರಂ: ಕೇರಳದ ಮಲಪ್ಪುರಂ ಪ್ರದೇಶದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ವ್ಯಕ್ತಿಯೊಬ್ಬರು ಕೆಲವೇ ಇಂಚುಗಳ ಅಂತರದಿಂದ ಸಾವಿನಿಂದ ಪಾರಾಗಿದ್ದು, ಇದೇ ಸಂದರ್ಭದಲ್ಲಿ ಆತನ ತಾಯಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

    ಸ್ಥಳಿ ಮಾಧ್ಯಮದ ವರದಿಯ ಅನ್ವಯ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಗುಡ್ಡ ಕುಸಿತ ಭಯಾನಕ ದೃಶ್ಯಗಳನ್ನು ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿ ತನ್ನ ಅಮ್ಮನಿಗೆ ಮಣ್ಣು ಕುಸಿತ ಬಗ್ಗೆ ಅನುಮಾನಗೊಂಡು ಎಚ್ಚರಿಕೆ ನೀಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಣ್ಣು ಏಕಾಏಕಿ ಮನೆಯತ್ತ ಹರಿದು ಬಂದಿದೆ.

    ಮಣ್ಣು ಕುಸಿಯುತ್ತಿರುವುದು ಅವರ ಅರಿವಿಗೆ ಬರುವುದೊಳಗೆ ಇಡೀ ಗುಡ್ಡ ಮನೆಯ ಮೇಲೆ ಕುಸಿದಿದೆ. ಕಳೆದ 3 ದಿನಗಳ ಅವಧಿಯಲ್ಲಿ 40 ಮಂದಿ ಮಹಾಮಳೆಗೆ ಕೇರಳದಲ್ಲಿ ಬಲಿಯಾಗಿದ್ದು, 1 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

    ವಯನಾಡು ಮತ್ತು ಮಲಪ್ಪುರಂ ಬಳಿ ಕಳೆದ 2 ದಿನದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಪ್ರಕರಣಗಳು ನಡೆದಿದೆ. ಸಿಎಂ ಪಿಣರಾಯಿ ವಿಜಯನ್ ಅವರು ಅಧಿಕೃತವಾಗಿ ನೀಡಿರುವ ಮಾಹಿತಿಯ ಅನ್ವಯ 40ಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿಕೊಂಡಿದ್ದು, 3 ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಡೆದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಕೇರಳದಲ್ಲಿ ನೀಡಲಾಗಿದ್ದ ರೆಡ್ ಅಲರ್ಟನ್ನು ಮುಂದುವರಿಸಲಾಗಿದ್ದು, ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರವಾಹಕ್ಕೆ ಸಿಲುಕಿರುವ, ಗುಡ್ಡ ಕುಸಿತ ಸಂಭವಿಸಬಹುದಾದ ಪ್ರದೇಶ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿರುವುದರಿಂದ ಹಲವು ಮಂದಿ ಸ್ವಯಂ ಪ್ರೇರಿತವಾಗಿ ನಿವಾಸಿಗಳು ಭಾರೀ ಮಳೆಯಿಂದ ಕೇರಳದಲ್ಲಿ ರೈಲ್ವೇ ಸೇವೆ ಕೂಡ ಬಂದ್ ಆಗಿದೆ.

  • ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ತಿರುವನಂತಪುರಂ: ಕೇರಳ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಪೆರಿಯಾರ್ ನದಿಯು 2013ರ ನಂತರ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಅವಾಂತರಗಳಿಗೆ ಎಡೆಮಾಡಿಕೊಟ್ಟಿದೆ. ಮಾಹಿತಿಗಳ ಪ್ರಕಾರ ಇಡುಕ್ಕಿ ಜಿಲ್ಲೆಯ 11 ಮಂದಿ, ಮಲಪ್ಪುರಂನ 6 ಮಂದಿ, ಕೋಜಿಕೋಡು 2 ಹಾಗೂ ವಯನಾಡ್ ಜಿಲ್ಲೆಯಲ್ಲಿ 1 ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಪಲಕ್ಕಾಡ್, ವಯನಾಡ್ ಹಾಗೂ ಕೋಜಿಕೋಡು ಜಿಲ್ಲೆಗಳಲ್ಲಿ 7 ಮಂದಿ ನಾಪತ್ತೆಯಾಗಿದ್ದರೆಂದು ತಿಳಿದು ಬಂದಿದೆ.

    ನಾಪತ್ತೆಯಾದವರ ಶೋಧಕ್ಕೆ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆ  ನಡೆಸುತ್ತಿದೆ. ರಾಜ್ಯ ಸರ್ಕಾರವು ತುರ್ತು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೇನಾ ಹಾಗೂ ಎನ್.ಡಿ.ಆರ್.ಎಫ್ ಮೊರೆಹೋಗಿದ್ದು, ಸಾಕಷ್ಟು ರಕ್ಷಣಾ ತಂಡಗಳು ಈಗಾಗಲೇ ಕಾರ್ಯಚರಣೆ ನಡೆಸುತ್ತಿವೆ.

    ಇಡುಕ್ಕಿ ಡ್ಯಾಂ ನಿಂದ ನೀರನ್ನು ಹೊರಬಿಟ್ಟ ಪರಿಣಾಮ ಪೆರಿಯಾರ್ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ನೀರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದೊಳಗೂ ನುಗ್ಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಕೊಚ್ಚಿಯಿಂದ ತೆರಳಬೇಕಿದ್ದ ಹಾಗೂ ಆಗಮಿಸುವ ವಿಮಾನಗಳನ್ನು ಮಾರ್ಗಮಧ್ಯೆ ಬದಲಾವಣೆಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಸುರಿಯುತ್ತಿರುವ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಇಂದಿನಿಂದ ಎರ್ನಾಕುಲಂನ ಇಡಮಳಯಾರ್ ಜಲಾಶಯ ಹಾಗೂ ಕೋಜಿಕೋಡುವಿನ ಕಕ್ಕಾಯಂ ಜಲಾಶಯಗಳ ನೀರನ್ನು ಹೊರಬಿಡಲಾಗಿದೆ.

    ರಾಜ್ಯದ ಒಟ್ಟು 22 ಜಲಾಶಯಗಳು ತುಂಬಿದ್ದರ ಪರಿಣಾಮ ಜಲಾಶಯಗಳಿಂದ ಹೆಚ್ಚುವರಿ ಪ್ರಮಾಣದ ನೀರನ್ನು ನೀರನ್ನು ಹೊರಬಿಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಇಡುಕ್ಕಿ ಜಲಾಶಯವು ಬರೊಬ್ಬರಿ 26 ವರ್ಷಗಳ ಬಳಿಕ ತುಂಬಿದ್ದರ ಪರಿಣಾಮ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿದು ಬಿಡಲಾಗಿದೆ.

    ಕೇರಳ ಸರ್ಕಾರವು ಮುಂಜಾಗ್ರತ ಕ್ರಮವಾಗಿ ಕೋಜಿಕೋಡು, ವಯನಾಡ್, ಪಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಯ ಶಾಲಾ-ಕಾಲೇಜುಗಳಿ ರಜೆ ಘೋಷಿಸಿದೆ. ಅಲ್ಲದೇ ಅಲಪುಜಾದಲ್ಲಿ ನಡೆಯಲಿರುವ ಪ್ರಸಿದ್ಧ ದೋಣಿ ಸ್ಪರ್ಧೆಯನ್ನು ಸಹ ಮುಂದೂಡಲಾಗಿದೆ.

    https://twitter.com/pranavkichu10/status/1027470911111229440

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews