Tag: ತಿರುಪತಿ

  • ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    – ಪ್ರಯೋಗಾಲಯದ ಪರೀಕ್ಷೆಯಲ್ಲಿ ಪ್ರಾಣಿಗಳ ಕೊಬ್ಬು, ಮೀನೆಣ್ಣೆ ದೃಢ

    ಹೈದರಾಬಾದ್‌: ತಿರುಪತಿ ದೇವಸ್ಥಾನದಲ್ಲಿ (Tirupati Temple) ಭಕ್ತರಿಗೆ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ (Laddus) ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ (Beef Fat, Fish Oil) ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ.

    ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಆರೋಪಿಸಿದ್ದರು.

    ಈ ಆರೋಪದ ಬೆನ್ನಲ್ಲೇ ಪಶು ಆಹಾರ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯ NDDB CALF ನ ವರದಿಯು ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಲ್ಯಾಬ್ ವರದಿಯಲ್ಲಿ ಏನಿದೆ?
    ಲಡ್ಡುಗೆ ಬಳಸಿದ ತುಪ್ಪದಲ್ಲಿ ಮೀನೆಣ್ಣೆ,ಹಂದಿಯ ಕೊಬ್ಬು, ತಾಳೆ ಎಣ್ಣೆ ಕೊಬ್ಬು, ತೆಂಗಿನ ಎಣ್ಣೆಯ ಕೊಬ್ಬು ಪತ್ತೆಯಾಗಿದೆ. ಸೋಯಾ, ಸೂರ್ಯಕಾಂತಿ, ಆಲಿವ್, ಹತ್ತಿ ಬೀಜದೆಣ್ಣೆ ಸಿಕ್ಕಿದೆ. ತುಪ್ಪದಲ್ಲಿ ವ್ಹೀಟ್ ಜೆರ್ಮ್ ಆಯಿಲ್, ಮೇಜ್ ಜೆರ್ಮ್ ಆಯಿಲ್ ಪತ್ತೆಯಾಗಿದೆ.

    ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ. ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ, ಚಂದ್ರಬಾಬು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ.

    ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

    ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ಸಿಹಿ ತಯಾರಿಸಲು ನಿಜವಾಗಿಯೂ ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಾಯ್ಡು ಅವರ ಆರೋಪಗಳು ವೆಂಕಟೇಶ್ವರನನ್ನು ಪೂಜ್ಯ ದೇವತೆ ಎಂದು ಪರಿಗಣಿಸುವ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಶರ್ಮಿಳಾ ಹೇಳಿದ್ದಾರೆ.

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು

    ಅಮರಾವತಿ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ (Thawarchand Gehlot) ಅವರು ತಿರುಪತಿಗೆ (Tirupati) ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ.

    ಬುಧವಾರ ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಕುಟುಂಬ ಸಮೇತರಾಗಿ ಕರ್ನಾಟಕದ ರಾಜ್ಯಪಾಲ ಗೆಹ್ಲೋಟ್ ಅವರು ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ಪ್ರಸಂಗ ಬಂದ್ರೆ ನಾನೇ ಸ್ಪರ್ಧೆ ಮಾಡ್ತೀನಿ: ಶಾಮನೂರು ಶಿವಶಂಕರಪ್ಪ

    ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಅಧಿಕಾರಿಗಳು ಮತ್ತು ಅರ್ಚಕರು ರಾಜ್ಯಪಾಲರನ್ನು ಸ್ವಾಗತಿಸಿದರು. ಪೂಜೆಯ ನಂತರ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ರಾಜ್ಯಪಾಲರನ್ನು ಗೌರವಿಸಿದರು. ನಂತರ ತಿಮ್ಮಪ್ಪ ಸ್ವಾಮಿ ಪ್ರಸಾದವನ್ನು ರಾಜ್ಯಪಾಲರಿಗೆ ದೇವಾಲಯದ ವತಿಯಿಂದ ನೀಡಲಾಯಿತು.

  • ತಿರುಪತಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಭೇಟಿ – ವೆಂಕಟರಮಣನಿಗೆ ವಿಶೇಷ ಪೂಜೆ

    ತಿರುಪತಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಭೇಟಿ – ವೆಂಕಟರಮಣನಿಗೆ ವಿಶೇಷ ಪೂಜೆ

    ಅಮರಾವತಿ: ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಗುರುವಾರ ಬೆಳಗ್ಗೆ ತಿರುಪತಿಗೆ (Tirupati) ಭೇಟಿ ನೀಡಿ ವೆಂಕಟೇಶ್ವರ ದೇವರ ದರ್ಶನ ಪಡೆದಿದ್ದಾರೆ.

    ತಿರುಪತಿಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ ಅವರು, ನಮ್ಮ ದೇಶದ ಜನರು ಸಂತೋಷ ಮತ್ತು ಸಮೃದ್ಧಿಯಾಗಿರಲು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ದೇಶದ ಅಭಿವೃದ್ಧಿಗೆ ಕೆಲಸ ಮಾಡಲು ಸ್ಫೂರ್ತಿ, ಶಕ್ತಿ ನೀಡುವಂತೆ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳಿ ತಪ್ಪಿದ ರೈಲು – ಉತ್ತರ ಪ್ರದೇಶದಲ್ಲಿ ಭೀಕರ ದುರಂತಕ್ಕೆ ನಾಲ್ವರು ದುರ್ಮರಣ

    ಇದಕ್ಕೂ ಮೊದಲು ಜೂ.30 ರಂದು ಶ್ರೀಲಂಕಾದ ನ್ಯಾಯ, ಜೈಲು ವ್ಯವಹಾರಗಳು ಮತ್ತು ಸಾಂವಿಧಾನಿಕ ಸುಧಾರಣೆಗಳ ಸಚಿವ ವಿಜಯದಾಸ ರಾಜಪಕ್ಷೆ ಅವರು ತಮ್ಮ ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

    ಜೂ.15 ರಂದು ಕೇಂದ್ರ ಬೃಹತ್‌ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಕೇಂದ್ರ ಸಚಿವನಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೆಚ್‌ಡಿಕೆ ತಿಳಿಸಿದ್ದರು. ಇದನ್ನೂ ಓದಿ: NEET: ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು: ಸುಪ್ರೀಂ ಕೋರ್ಟ್

  • ತಿರುಪತಿಯಲ್ಲಿ ದೇವರ ದರ್ಶನಕ್ಕೆ 3 ಕಿ.ಮೀ.ವರೆಗೆ ಸರತಿ ಸಾಲು

    ತಿರುಪತಿಯಲ್ಲಿ ದೇವರ ದರ್ಶನಕ್ಕೆ 3 ಕಿ.ಮೀ.ವರೆಗೆ ಸರತಿ ಸಾಲು

    ತಿರುಮಲ: ಶನಿವಾರ, ಭಾನುವಾರದ ರಜೆ ಹಾಗೂ ಸೋಮವಾರ ಬಕ್ರೀದ್ ರಜೆ ಹಿನ್ನೆಲೆಯಲ್ಲಿ ತಿರುಮಲದ ವೆಂಕಟೇಶ್ವರ ಸ್ವಾಮಿಯ (Venkateswara Temple, Tirumala) ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.

    ಶನಿವಾರ ಮತ್ತು ಭಾನುವಾರ ಭಾರೀ ಜನದಟ್ಟಣೆ ಕಂಡುಬಂದಿದ್ದು, ಭಕ್ತಾದಿಗಳು ದೇವರ ದರ್ಶನಕ್ಕಾಗಿ ಸುಮಾರು 3 ಕಿ.ಮೀ.ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ದರ್ಶನ್‌ಗೂ ಆರೋಪಿಗೂ ಸಂಬಂಧವೇ ಇಲ್ಲ – ಸ್ನೇಹಿತನ ಮಾತು ಕೇಳಿ ಶೆಡ್‌ನಲ್ಲಿ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಿಕ್ಕಿಬಿದ್ದ

     

    ಚುನಾವಣೆ ಮುಕ್ತಾಯ, ವಾರಾಂತ್ಯ ರಜೆ, ಬಹುತೇಕ ಪರೀಕ್ಷೆಗಳು ಮುಗಿದಿರುವುದು ಜೊತೆ ಬಕ್ರೀದ್‌ ರಜೆಯೂ (Bakrid) ಸೇರಿದ್ದರಿಂದ ತಿರುಪತಿಗೆ ಹೆಚ್ಚಿನ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸೋಮವಾರವೂ ಈ ದಟ್ಟಣೆ ಮುಂದುವರಿಯುವ ಸಾಧ್ಯತೆಯಿದೆ.

  • ತಿರುಪತಿಗೆ ತೆರಳಿ ದೇವರ ದರ್ಶನ ಪಡೆದ ಹೆಚ್‌ಡಿಕೆ

    ತಿರುಪತಿಗೆ ತೆರಳಿ ದೇವರ ದರ್ಶನ ಪಡೆದ ಹೆಚ್‌ಡಿಕೆ

    ತಿರುಪತಿ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ (Tirupati Temple) ತೆರಳಿ ದೇವರ ದರ್ಶನ ಮಾಡಿದ್ದಾರೆ.

    ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುಪ್ರಭಾತ ಸೇವೆಗಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

     

    ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಚಿವನಾಗಿ ನನ್ನ ಕೆಲಸ ಯಶಸ್ವಿಯಾಗಲು ವೆಂಕಟೇಶ್ವರನ ಆಶೀರ್ವಾದ ಪಡೆಯಲು ನಾನು  ಬಂದಿದ್ದೇನೆ  ಎಂದು ಹೇಳಿದರು.

    ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶುಕ್ರವಾರ ಕುಮಾರಸ್ವಾಮಿ ಬೆಂಗಳೂರಿಗೆ ಶುಕ್ರವಾರ ಆಗಮಿಸಿದರು. ತಿರುಪತಿಯಿಂದ ಇಂದು ಮರಳಿದ ಬಳಿಕ ಸ್ಪೀಕರ್‌ ಕಚೇರಿಗೆ ತೆರಳಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ.

  • ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಸಾಗರ

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಸಾಗರ

    – ದರ್ಶನಕ್ಕೆ 24 ಗಂಟೆ ಕಾಯಬೇಕಿದೆ ಭಕ್ತರು

    ಅಮರಾವತಿ: ರಜೆಗಳು ಮುಗಿಯುವ ಹೊತ್ತಲ್ಲಿ ತಿರುಪತಿ (Tirupathi) ತಿರುಮಲದಲ್ಲಿ ಭಾರೀ ರಶ್ ಕಂಡುಬಂದಿದೆ.

    ತೆಲುಗು ರಾಜ್ಯಗಳ ಜೊತೆಗೆ ಕರ್ನಾಟಕ, ತಮಿಳುನಾಡಿನಿಂದ ಅಧಿಕ ಸಂಖ್ಯೆಯ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬಂದಿರುವ ಕಾರಣ, ಸರಿಸುಮಾರು 3 ಕಿಲೋಮೀಟರ್ ಉದ್ದಕ್ಕೆ ಸರತಿಸಾಲು ಕಂಡುಬಂದಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್, ನಾರಾಯಣಗಿರಿ ಶೆಡ್‍ಗಳು ತುಂಬಿಹೋಗಿವೆ. ರಿಂಗ್ ರೋಡ್‍ನಿಂದ ಆಕ್ಟೋಪಸ್ ಭವನದವರೆಗೂ ಭಕ್ತರ ಸರತಿ ಸಾಲು ಇದೆ.‌

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕನಿಷ್ಠ 24 ಗಂಟೆ ಹಿಡಿಯುತ್ತಿದೆ. ಸರತಿ ಸಾಲಲ್ಲಿ ಇರುವ ಭಕ್ತರಿಗೆ ಕುಡಿಯುವ ನೀರು, ಅನ್ನಪ್ರಸಾದ, ಹಾಲನ್ನು ಟಿಟಿಡಿ ಒದಗಿಸುತ್ತಿದೆ. ಮೂರು ದಿನದ ಮೊದಲು ದಿನಕ್ಕೆ 60ಸಾವಿರ ಭಕ್ತರು ದರ್ಶನ ಪಡೆಯುತ್ತಿದರು. ಇದೀಗ ಭಕ್ತರ ಸಂಖ್ಯೆ 85ರಿಂದ 90ಸಾವಿರ ಇದೆ. ಭಕ್ತರ ರಶ್ ಇನ್ನೂ ಕೆಲವು ದಿನ ಹೀಗೆ ಮುಂದುವರೆಯುವ ಸಂಭವ ಇದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧಾರಾಕಾರ ಮಳೆ; ರಸ್ತೆಗಳಲ್ಲಿ ಹರಿದ ನೀರು

    ಟಿಟಿಡಿ ಮಾಹಿತಿ ಪ್ರಕಾರ, ಬುಧವಾರ ಒಂದೇ ದಿನ 81,930 ಭಕ್ತರು, ಗುರುವಾರ 76,369 ಹಾಗೂ ಶುಕ್ರವಾರ 71,510 ಭಕ್ತರು ದರ್ಶನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಭಕ್ತರನ್ನು ನಿಯಂತ್ರಿಸುವುದು ಟಿಟಿಡಿ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಮ್ ಚರಣ್ ದಂಪತಿ

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಮ್ ಚರಣ್ ದಂಪತಿ

    ಹೆಸರಾಂತ ನಟ ರಾಮ್ ಚರಣ್ ಮತ್ತು ಉಪಾಸನಾ (Upasana) ದಂಪತಿ ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದಿದ್ದಾರೆ. ಶೂಟಿಂಗ್ ನಡುವೆಯೂ ಬಿಡುವು ಮಾಡಿಕೊಂಡು ತಿಮ್ಮಪ್ಪನ ಸನ್ನಿಧಾನಕ್ಕೆ ಆಗಮಿಸಿದ್ದರು ರಾಮ್ ಚರಣ್. ತಿರುಪತಿಗೆ ದಂಪತಿ ಆಗಾಗ್ಗೆ ಬರುತ್ತಲೇ ಇರುತ್ತಾರೆ. ಈ ದಂಪತಿಯು ನಂಬಿರುವ ಅತ್ಯಂತ ಪ್ರಮುಖ ದೇವಸ್ಥಾನ ಇದಾಗಿದೆ.

    ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ನಟ ಶಿವರಾಜ್ ಕುಮಾರ್ (Shivaraj Kumar) ಮತ್ತು ತೆಲುಗಿನ ಹೆಸರಾಂತ ನಟ ರಾಮ್ ಚರಣ್ (Ram Charan) ಕಾಂಬಿನೇಷನ್ ನ ಚಿತ್ರವೊಂದು ಮೂಡಿ ಬರಲಿದೆ ಎಂದು ಹೇಳಲಾಗಿತ್ತು. ಅದು ಈಗ ನಿಜವಾಗಿಯೇ ಈ ಕಾಂಬಿನೇಷನ್ ಚಿತ್ರಕ್ಕೆ ಇದೇ ಮಾರ್ಚ್ 20ಕ್ಕೆ ಮುಹೂರ್ತ ನಡೆದಿದೆ. ಈ ಚಿತ್ರಕ್ಕೆ ಪೆದ್ದಿ ಎಂದು ಹೆಸರಿಡಲಾಗಿದೆ. ಪೆದ್ದಿ ಎಂದರೆ ತೆಲುಗಿನಲ್ಲಿ ದೊಡ್ಡದು ಎಂದರ್ಥ. ಇದು ಸಿನಿಮಾದ ಕಾನ್ಸೆಕ್ಟ್ ಕೂಡ ಆಗಿರಲಿದೆಯಂತೆ.

    ಈ ಸಿನಿಮಾದ ಕುರಿತಂತೆ ಹಲವಾರು ವಿಚಾರಗಳು ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿವೆ. ಈ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಸ್ವತಃ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ‘ತೆಲುಗಿನಲ್ಲಿ ಆಫರ್ ಬಂದಿದ್ದು ನಿಜ. ರಾಮ್ ಚರಣ್ ಅವರ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಬುಚ್ಚಿ ಬಾಬು ನನ್ನನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಆ ಸಿನಿಮಾ ಬಗ್ಗೆ ಸದ್ಯ ಏನೂ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

     

    ಜೈಲರ್ ಒಪ್ಪಿಕೊಳ್ಳುವಾಗಲೇ ಧನುಷ್ (Dhanush) ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೂ ಸಹಿ ಮಾಡಿದ್ದರು ಶಿವರಾಜ್ ಕುಮಾರ್. ನಂತರ ರಾಮ್ ಚರಣ್ ಅವರ ಸಿನಿಮಾದಲ್ಲೂ ನಟಿಸಲು ಮನಸ್ಸು ಮಾಡಿದ್ದರಂತೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎನ್ನುವುದು ಹಲವರ ಲೆಕ್ಕಾಚಾರ.

  • ಬಾಯ್ ಫ್ರೆಂಡ್ ಜೊತೆ ತಿರುಪತಿ ದರ್ಶನಕ್ಕೆ ಬಂದ ನಟಿ ಜಾನ್ವಿ

    ಬಾಯ್ ಫ್ರೆಂಡ್ ಜೊತೆ ತಿರುಪತಿ ದರ್ಶನಕ್ಕೆ ಬಂದ ನಟಿ ಜಾನ್ವಿ

    ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಾಯ್ ಫ್ರೆಂಡ್  ಶಿಖರ್ ಪಹರಿಯಾ (Shikhar Paharia) ಜೊತೆ ಹೋಗಿದ್ದಾರೆ ಬಾಲಿವುಡ್ ನಟಿ ಜಾನ್ವಿ ಕಪೂರ್. ನಿನ್ನೆಯಷ್ಟೇ ಅವರು ಶಿಖರ್ ಜೊತೆ ತಿರುಪತಿಗೆ (Tirupati) ಬಂದು, ಒಟ್ಟಿಗೆ ದೇವರ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮದುವೆಗೂ ಮುಂಚೆ ಏನಿದು? ಎಂದು ಹಲವರು ಪ್ರಶ್ನೆಯನ್ನೂ ಮಾಡಿದ್ದಾರೆ.

    ಒಂದು ಕಡೆ ಜಾನ್ವಿ ಟೆಂಪಲ್ ರನ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅವರು ಮತ್ತೊಂದು ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ (Shivarajkumar) ಹೀರೋಯಿನ್ ಆಗಿ ನಟಿಸಿದ ಬೆನ್ನಲ್ಲೇ ರಾಮ್ ಚರಣ್- ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜಾನ್ವಿ ಕಪೂರ್ (Jhanvi Kapoor) ನಾಯಕಿಯಾಗಿದ್ದಾರೆ.

    ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ರಾಮ್ ಚರಣ್ (Ram Charan) ಜೊತೆ ಬಹುಮುಖ್ಯ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸುತ್ತಿದ್ದಾರೆ. ರಾಮ್ ಚರಣ್ ಜೋಡಿಯಾಗಿ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಕಾಣಿಸಿಕೊಳ್ತಾರೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

    ಕೆಲ ತಿಂಗಳುಗಳ ಹಿಂದೆ ಬುಚ್ಚಿಬಾಬು ಸನಾ ಅವರು ಬೆಂಗಳೂರಿಗೆ ಆಗಮಿಸಿ ಶಿವಣ್ಣಗೆ ಭೇಟಿಯಾಗಿ ಕಥೆ ಹೇಳಿದ್ದರು. ಶಿವಣ್ಣಗೂ ಕಥೆ ಕೇಳಿ ಥ್ರಿಲ್ ಆಗಿ ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.

     

    ರಾಮ್ ಚರಣ್ ಮತ್ತು ಶಿವಣ್ಣ ಸಾಕಷ್ಟು ವರ್ಷಗಳಿಂದ ಪರಿಚಿತರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಸಿನಿಮಾಗಾಗಿ ಮೊದಲ ಬಾರಿಗೆ ಜೊತೆಯಾಗ್ತಿರೋದ್ರಿಂದ ಶಿವಣ್ಣ- ಚರಣ್ ಕಾಂಬೋ ನೋಡಲು ಫ್ಯಾನ್ಸ್ಗೆ ಕಾಯ್ತಿದ್ದಾರೆ.

  • ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಿಂಹದ ಬಾಯಿಗೆ ಸಿಕ್ಕ- ಮುಂದೇನಾಯ್ತು?

    ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಿಂಹದ ಬಾಯಿಗೆ ಸಿಕ್ಕ- ಮುಂದೇನಾಯ್ತು?

    ಭೋಪಾಲ್:‌ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಸಿಂಹಗಳಿರುವ ಆವರಣಕ್ಕೆ ಹೋಗಿ ದುರಂತಕ್ಕೀಡಾದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ (Sri Venkateswara Zoological Park) ನಲ್ಲಿ ಇಂದು ನಡೆದಿದೆ.

    ವ್ಯಕ್ತಿಯನ್ನು ಪ್ರಹ್ಲಾದ್ ಗುಜ್ಜರ್ (34) ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ಪುರಸಭೆಯ ನಿವಾಸಿ. ಈತ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಸೆಲ್ಫಿ (Selfie With Lion) ತೆಗೆದುಕೊಳ್ಳಲು ಸಿಂಹಗಳ ಆವರಣಕ್ಕೆ ನುಗ್ಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವ್ಯಕ್ತಿಯನ್ನು ತಿಂದಿಲ್ಲ: ನಿರ್ವಾಹಕರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಪ್ರವೇಶಿಸಬಹುದಾದ ಜಾಗದಿಂದ ಪ್ರವೇಶ ಕೊಟ್ಟಿದ್ದಾನೆ. ಝೂನಲ್ಲಿರುವ ಪ್ರಾಣಿ ಪಾಲಕರು ಗುಜ್ಜರ್‌ ನಿರ್ಬಂಧಿತ ಸ್ಥಳದಲ್ಲಿ ಪ್ರವೇಶಿಸುವುದನ್ನು ಗಮನಿಸಿ ಎಚ್ಚರಿಕೆ ನೀಡಿದರೂ ಆತ ಕ್ಯಾರೇ ಎಂದಿಲ್ಲ. 6 ಅಡಿ ಎತ್ತರದ ಬೇಲಿಯನ್ನು ದಾಟಿ ಸಿಂಹಗಳ ಆವರಣಕ್ಕೆ ಹಾರಿದ್ದಾನೆ. ಈ ವೇಳೆ ಸಿಂಹ (Lion Attack) ಆತನ ಮೇಲೆ ದಾಳಿ ಮಾಡಿದೆ. ದೇಹದ ಯಾವುದೇ ಭಾಗವನ್ನು ತಿನ್ನಲಿಲ್ಲ. ಆದರೆ ಗಂಭೀರ ಗಾಯಗೊಂಡ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೃಗಾಲಯದ ಕ್ಯೂರೇಟರ್ ಸಿ ಸೆಲ್ವಂ ತಿಳಿಸಿದ್ದಾರೆ. ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ಕೇರ್‌ಟೇಕರ್ ಸ್ಥಳಕ್ಕೆ ದೌಡಾಯಿಸುವ ಮುನ್ನವೇ ಗುಜ್ಜರ್‌ನನ್ನು ‘ಡೊಂಗಲ್‌ಪುರ’ ಎಂಬ ಸಿಂಹವು ಕೊಂದು ಹಾಕಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಘಟನೆಯ ಸಮಯದಲ್ಲಿ ಗುಜ್ಜರ್ ಮದ್ಯದ ಅಮಲಿನಲ್ಲಿದ್ನೋ ಎಂದು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ದಾಳಿಯ ಬಳಿಕ ಸಿಂಹದ ಆವರಣಕ್ಕೆ ಬೀಗ ಹಾಕಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

    ಘಟನೆಯ ಬಳಿಕ ವ್ಯಕ್ತಿಯ ಗುರುತು ಪತ್ತೆಗೆ ಸಿಂಹದ ಆವರಣ ಹುಡುಕಾಡಿದಾಗ ವ್ಯಕ್ತಿಯ ಪರ್ಸ್‌ ಪತ್ತೆಯಾಗಿದೆ. ಅದರಲ್ಲಿ ಆಧಾರ್ ಕಾರ್ಡ್‌ ಹಾಗೂ ಗುರುತಿನ ಚೀಟಿ ಪತ್ತೆಯಾಗಿದೆ. ಬಳಿಕ ಸಿಬ್ಬಂದಿ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ.

  • ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು‌, ಕಾರ್ಯಕರ್ತರಿಗೆ ತಿರುಪತಿ ಯಾತ್ರೆ ಭಾಗ್ಯ

    ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು‌, ಕಾರ್ಯಕರ್ತರಿಗೆ ತಿರುಪತಿ ಯಾತ್ರೆ ಭಾಗ್ಯ

    ಚಿಕ್ಕಬಳ್ಳಾಪುರ: ಇಲ್ಲಿನ ಲೋಕಸಭಾ (Loksabha Election) ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರ ಅಲೋಕ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಮನಗೆಲ್ಲೋಕೆ ಯಲಹಂಕ ಶಾಸಕ ಹಾಗೂ ತಿರುಮಲ‌ ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿರುವ ಎಸ್ ಆರ್ ವಿಶ್ವನಾಥ್ ತಿಮ್ಮಪ್ಪನ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡುತ್ತಿದ್ದಾರೆ.

    ಮಾಜಿ ಸಚಿವ ಡಾ.ಕೆ.ಸುಧಾಕರ್ ರನ್ನೇ ಟಾರ್ಗೆಟ್ ಮಾಡಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Chikkaballapur Vidhanasabha Constituency) ಮೂಲ ಹಾಗೂ ವಲಸಿಗ ಬಿಜೆಪಿಗರಿಗೆ ತಿಮ್ಮಪ್ಪನ ದರ್ಶನದ ವ್ಯವಸ್ಥೆಯನ್ನ ಖುದ್ದು ಅವರೇ ಮುಂದೆ ನಿಂತು ಮಾಡಿಸುತ್ತಿದ್ದಾರೆ. ಹಂತ ಹಂತವಾಗಿ ತಂಡೋಪತಂಡಗಳಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಎಸ್ ಆರ್ ವಿಶ್ವನಾಥ್ ಅವರ ಜೊತೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಇಂದು ಸಹ 20 ಕ್ಕೂ ಹೆಚ್ಚು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದೇವರ ದರ್ಶನ ಪಡೆದು ವಾಪಸ್ ಆಗಮಿಸುತ್ತಿದ್ದಾರೆ.

    ಇದರ ನಡುವೆ ಎಸ್ ಆರ್ ವಿಶ್ವನಾಥ್ (SR Vishwanath) ರವರ ನಡೆ ಬಗ್ಗೆ ತೀರ್ಥಯಾತ್ರೆ ಮಾಡಿಸಿ ನಾನು ಟಿಕೆಟ್ ಗೆ ಲಾಬಿ ಮಾಡಲ್ಲ ಅಂತ ಸ್ವತಃ ಮಾಜಿ ಸಚಿವ ಸುಧಾಕರ್ ಎಸ್ ಆರ್ ವಿಶ್ವನಾಥ್ ವಿರುದ್ಧ ವಾಗ್ದಾಳಿ ಸಹ ನಡೆಸಿದ್ರು. ವಿಶ್ವನಾಥ್ ಜೊತೆ ತಿರುಪತಿಗೆ ಹೋಗಿ ಬಂದಿದ್ದ ತಮ್ಮ ಕೆಲ ಬೆಂಬಲಿಗರಿಗೆ ಕ್ಲಾಸ್ ಸಹ ತಗೊಂಡಿದ್ರು. ಆದರೂ ಈಗ ಮತ್ತೆ ಕೆಲ ಬಿಜೆಪಿ ಮುಖಂಡರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದಾರೆ. ಮುಂದಿನ‌ ದಿನಗಳಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೂ ತಿಮ್ಮಪ್ಪನ ದರ್ಶನ ಭಾಗ್ಯಕ್ಕೆ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.