Tag: ತಿರುಪತಿ

  • ತಿರುಪತಿ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಮಿಶ್ರಣ ಆರೋಪ – ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಿದ ಟಿಟಿಡಿ

    ತಿರುಪತಿ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಮಿಶ್ರಣ ಆರೋಪ – ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಿದ ಟಿಟಿಡಿ

    ಬೆಂಗಳೂರು: ತಿರುಪತಿ ಲಡ್ಡು (Titupati Laddu Row) ಪ್ರಸಾದದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಮಿಶ್ರಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿ ಅಧಿಕಾರಿ ಜೆ. ಶ್ಯಾಮಲಾ ಅವರಿಂದ ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಲಾಗಿದೆ.

    ವೈಎಸ್‌ಆರ್‌ಪಿ (YSRP) ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಲಡ್ಡುಗಳ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ವಿವಾದದ ಬೆನ್ನಲ್ಲೇ ಪ್ರಕರಣವನ್ನು ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪ್ರಕರಣದ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಟಿಡಿಪಿ ಹೇಳಿಕೆ ನೀಡಿತ್ತು. ಇದೀಗ ಸರ್ಕಾರಕ್ಕೆ ಟಿಟಿಡಿ 40 ಪುಟಗಳ ವರದಿ ಸಲ್ಲಿಸಿದೆ. ಇದನ್ನೂ ಓದಿ: Breaking | ಸಿಎಂ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾ – ರಾಜ್ಯಪಾಲರ ಪ್ರಾಸಿಕ್ಯೂಷನ್‌ ಆದೇಶ ಎತ್ತಿಹಿಡಿದ ಹೈಕೋರ್ಟ್‌

    ಟಿಟಿಡಿ ವರದಿಯಲ್ಲಿ ಏನಿದೆ?
    ತಿರುಮಲ ಮತ್ತು ತಿರುಚನೂರು ದೇಗುಲಗಳಲ್ಲಿ ಲಾಡು ಮತ್ತು ಇತರ ಪ್ರಸಾದಗಳನ್ನು ಸಿದ್ಧಪಡಿಸಲು ಆರು ತಿಂಗಳಿಗೊಮ್ಮೆ ಅಗ್‌ಮಾರ್ಕ್ ಗುರುತು ಹೊಂದಿರುವ ಹಸುವಿನ ತುಪ್ಪವನ್ನು ಇ-ಟೆಂಡರ್ ಮೂಲಕ ಖರೀದಿಸಲಾಗುತ್ತದೆ. ಟಿಟಿಡಿ ಮತ್ತು ಎಫ್‌ಎಸ್‌ಎಸ್‌ಎಐ ಮಾನದಂಡಗಳ ಪ್ರಕಾರ ತುಪ್ಪ ಗುಣಮಟ್ಟ ಹೊಂದಿರಬೇಕು ಎಂದು ಟೆಂಡರ್‌ನಲ್ಲಿ ಹೇಳಲಾಗಿರುತ್ತದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ಬೆಂಗಳೂರಿನ ದೇವಸ್ಥಾನದಲ್ಲಿ ಆಗಮಶಾಸ್ತ್ರದಂತೆ ಶುದ್ಧಿಕಾರ್ಯ

    ದಿನಕ್ಕೆ 15 ಸಾವಿರ ಕೆ.ಜಿಯಂತೆ ವಾರ್ಷಿಕ ಸುಮಾರು 200 ಕೋಟಿ ರೂ. ಮೌಲ್ಯದ ತುಪ್ಪ ಖರೀದಿಗೆ ಟೆಂಡರ್ ಕರೆಯಲಾಗುತ್ತದೆ. ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಲಾಗಿದೆಯಾದರೂ, ಅವುಗಳ ಪರೀಕ್ಷೆಗೆ ಅಗತ್ಯವಿರುವ ಸಾಧನಗಳು ಟಿಟಿಡಿಯ ಪ್ರಯೋಗಾಲಯದಲ್ಲಿಲ್ಲ. ಹೀಗಾಗಿ ಕಲಬೆರಕೆ ಕುರಿತು ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ. ಗುತ್ತಿಗೆದಾರರು ಟ್ಯಾಂಕರ್‌ಗಳಲ್ಲಿ ಕಳುಹಿಸಿದ ತುಪ್ಪದ ತೇವಾಂಶ, ಕೊಬ್ಬಿನಾಮ್ಲ, ಮಿಶ್ರಿತ ಬಣ್ಣ, ಕರಗುವ ಬಿಂದು ಸೇರಿದಂತೆ ಕೆಲ ಮೂಲ ಪರೀಕ್ಷೆಗಳನ್ನಷ್ಟೇ ಮಾಡಲಾಗುತ್ತದೆ. ಈ ವೇಳೆ ಏನಾದರೂ ವ್ಯತ್ಯಾಸ ಕಂಡು ಬಂದರೆ, ಆ ಟ್ಯಾಂಕರ್‌ಗಳ ತುಪ್ಪವನ್ನು ತಿರಸ್ಕರಿಸಲಾಗುತ್ತದೆ. ಇದನ್ನೂ ಓದಿ: ಕನ್ನಡಿಗರನ್ನ ಕೆಣಕಿದ್ದ ʻಸುಗಂಧʼ ರಾಣಿ – ಕೆಲಸದಿಂದ ಕಿತ್ತೊಗೆದು ಬಿಸಿಮುಟ್ಟಿಸಿದ ಕಂಪನಿ

     

    ಕಲಬೆರಕೆ ಹೊರತುಪಡಿಸಿ ಇತರ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ 14 ಮಾದರಿಗಳನ್ನು 2022ರಲ್ಲಿ ತಿರಸ್ಕರಿಸಲಾಗಿತ್ತು. ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಕಲಬೆರಕೆಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸಬಹುದಾಗಿದ್ದರೂ ಅದನ್ನು ಎಂದಿಗೂ ಮಾಡಿಲ್ಲ. ತಮಿಳುನಾಡು ಮೂಲದ ಎ.ಆರ್ ಡೈರಿಯ ಶಂತಿಕ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು

  • ತಿರುಪತಿ ಲಡ್ಡು ವಿವಾದ – ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ನೋಟಿಸ್

    ತಿರುಪತಿ ಲಡ್ಡು ವಿವಾದ – ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ನೋಟಿಸ್

    ನವದೆಹಲಿ: ತಿರುಪತಿ ಲಡ್ಡು ವಿವಾದದ (Tirupati Laddoo Row) ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯವು (Health Ministry) ಲಡ್ಡುಗಳನ್ನು ತಯಾರಿಸಲು ತುಪ್ಪದ ಪೂರೈಕೆ ಮಾಡುತ್ತಿದ್ದ ಎಆರ್ ಡೈರಿಗೆ ಶೋಕಾಸ್ ನೋಟಿಸ್ ನೀಡಿದೆ.

    ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ರವಾನಿಸಿದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಡೈರಿ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯ ಒಂದರಲ್ಲಿ ತುಪ್ಪದ ಮಾದರಿ ಪರೀಕ್ಷಿಸಲಾಗಿತ್ತು. ಈ ವೇಳೆ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ, ಬೀಫ್ ಟ್ಯಾಲೋ, ಹಂದಿ ಕೊಬ್ಬು ಸೇರಿದೆ ಎಂದು ವರದಿ ನೀಡಿತ್ತು. ಇದನ್ನೂ ಓದಿ: ಮುನಿರತ್ನ ವಿರುದ್ಧದ ಕೇಸ್‌ಗಳು ಅಧಿಕೃತವಾಗಿ ಎಸ್‌ಐಟಿಗೆ ವರ್ಗ

    ವಿವಾದದ ಬೆನ್ನಲ್ಲೇ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿದ ಆರೋಪದ ಮೇಲೆ ದೇವಾಲಯದ ಮಂಡಳಿಯು ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‍ನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಕಂಪನಿಯ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ಘೋಷಿಸಿದ್ದರು.

    ತಮಿಳುನಾಡು ಮೂಲದ ಎಆರ್ ಡೈರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಲಬೆರಕೆ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ದೇವಾಲಯಕ್ಕೆ ಪ್ರತಿ ದಿನ 10 ಟನ್ ತುಪ್ಪದ ಅವಶ್ಯಕತೆಯಿದೆ. ನಾವು 0.1% ಅಗತ್ಯವನ್ನು ಪೂರೈಸಿಲ್ಲ ಎಂದು ಹೇಳಿಕೊಂಡಿದೆ.

    ಆಂಧ್ರಪ್ರದೇಶದ ಆಡಳಿತಾರೂಢ ಟಿಡಿಪಿ, ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ ತುಪ್ಪ ಬಳಕೆ ಮಾಡಲಾಗಿದೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

  • ತಿರುಪತಿ ಲಡ್ಡು ಟೇಸ್ಟ್‌ ಸೂಪರ್‌: ಲಡ್ಡು ಸವಿದು ಖುಷಿ ಹಂಚಿಕೊಂಡ ಭಕ್ತರು

    ತಿರುಪತಿ ಲಡ್ಡು ಟೇಸ್ಟ್‌ ಸೂಪರ್‌: ಲಡ್ಡು ಸವಿದು ಖುಷಿ ಹಂಚಿಕೊಂಡ ಭಕ್ತರು

    – ನಮ್ಮ ಕೆಎಂಎಫ್‌, ನಮ್ಮ ಹೆಮ್ಮೆ.. ‘ನಂದಿನಿ’ ತುಪ್ಪ ಬಳಸಿ ಸ್ವಾಧಿಷ್ಟ ಲಡ್ಡು ತಯಾರಿಸಿ ಎಂದ ಕನ್ನಡಿಗ ಭಕ್ತ

    ಅಮರಾವತಿ: ನಂದಿನಿ ತುಪ್ಪ ಬಳಸಿ ತಯಾರಿಸಲಾಗುತ್ತಿರುವ ತಿರುಪತಿ ಲಡ್ಡು (Tirupati Laddu Row) ಸವಿದು ಭಕ್ತರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರಸಾದಕ್ಕೆ ಕಲಬೆರಕೆ, ಅಪವಿತ್ರ ವಿವಾದದ ಬೆನ್ನಲ್ಲೇ ದೇವಾಲಯ ಶುದ್ಧೀಕರಿಸಲಾಗಿದ್ದು, ಹೆಚ್ಚೆಚ್ಚು ಜನರು ತಿರುಪತಿಗೆ ಆಗಮಿಸಿ ಶ್ರೀ ವೆಂಕಟರಮಣದ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯಲ್ಲಿ ಲಡ್ಡು ಪ್ರಸಾದ ತೆಗೆದುಕೊಳ್ಳುತ್ತಿದ್ದಾರೆ.

    ಬೆಂಗಳೂರಿನಿಂದ (Bengaluru) ತಿರುಪತಿ ದೇವಾಲಯಕ್ಕೆ (Tirupati Temple) ಬಂದಿದ್ದ ಜಗದೀಶ್‌ ಮಾತನಾಡಿ, ಲಡ್ಡುನಲ್ಲಿ ಏನೇನೊ ಕಲಬೆರಕೆ ಮಾಡಲಾಗಿದೆ ಅಂತಾರೆ. ಸದ್ಯಕ್ಕೆ ಏನೂ ಇಲ್ಲ, ಎಲ್ಲಾ ಬದಲಾಗಿದೆ. ಲಡ್ಡು ಟೇಸ್ಟ್‌ ಮಾಡಿದ್ದೇವೆ. ತುಂಬಾ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    ಮತ್ತೊಬ್ಬರು ಭಕ್ತರು, ನಾವು ಲಡ್ಡು ತೆಗೆದುಕೊಂಡು ತಿಂದೆವು. ಟೇಸ್ಟ್‌ ಸೂಪರ್‌ ಆಗಿದೆ. ನಮ್ಮ ಕೆಎಂಎಫ್‌.. ನಮ್ಮ ಬೆಂಗಳೂರು. ನಮಗೂ ಖುಷಿ ತಂದಿದೆ. ತುಂಬಾ ಚೆನ್ನಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

    ನಮ್ಮ ನಾಡಿನ ನಂದಿನಿ ತುಪ್ಪ ಬಳಸಿ ಲಡ್ಡು ಮಾಡುತ್ತಿರುವುದು ತುಂಬಾ ಖುಷಿ ವಿಚಾರ. ಮಧ್ಯದಲ್ಲಿ ಈ ರೀತಿಯ ವಿವಾದ ಎದ್ದಿದ್ದಕ್ಕೆ ಬೇಜಾರಾಯ್ತು. ನಮ್ಮ ಕರ್ನಾಟಕ ನಮ್ಮ ಹೆಮ್ಮೆ. ನಂದಿನಿ ನಮ್ಮ ಹೆಮ್ಮೆ. ನಂದಿನಿ ಬಳಸಿ ಸ್ವಾಧಿಷ್ಟಕರವಾದ ಲಡ್ಡು ಸವಿಯಿರಿ ಎಂದು ಕರ್ನಾಟಕದವರೇ ಆದ ಇನ್ನೊಬ್ಬರು ಭಕ್ತರು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    ಲಡ್ಡು ಟೇಸ್ಟ್‌ ಬಹಳ ಚೆನ್ನಾಗಿದೆ. ತಾಜಾ ತುಪ್ಪದ್ದೇ ಆಗಿದೆ. ಮೊದಲು ಇದ್ದ ಟೇಸ್ಟ್‌ ಥರಾನೆ ಇದೆ ಲಡ್ಡು. ತಿಂದು ಬಹಳ ಖುಷಿಯಾಯಿತು ನಮಗೆ. ನನ್ನ ಬರ್ತ್‌ಡೇ ಸೆಲಬ್ರೇಷನ್‌ ಇಲ್ಲೇ ಆಯಿತು ಎಂದು ಕುಟುಂಬ ಸಮೇತರಾಗಿ ತಿರುಪತಿಗೆ ಆಗಮಿಸಿದ್ದ ಭಕ್ತೆಯೊಬ್ಬರು ಸಂತಸ ವ್ಯಕ್ತಪಡಿಸಿದರು.

  • ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    – ಸೋಮವಾರ ತಿರುಮಲದಲ್ಲಿ ಮಹಾಶಾಂತಿ ಹೋಮ

    ಅಮರಾವತಿ: ತಿರುಪತಿ ಲಡ್ಡು (Tirupati Laddu Row) ಅಪವಿತ್ರವಾಗಿದೆ ಎಂಬ ಆರೋಪಗಳು ಲಡ್ಡು ಪ್ರಸಾದಕ್ಕೆ ಬೇಡಿಕೆ ಕುಸಿಯಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಅಂಥಾದ್ದೇನು ಆಗಿಲ್ಲ. ಈ ಆರೋಪಗಳು ಭಕ್ತರ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ. ಕಳಂಕರಹಿತ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ.

    ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ. ಇದನ್ನೂ ಓದಿ: ತಿರುಪತಿ ದೇವಾಲಯದ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಿದ ಆಂಧ್ರ ಸರ್ಕಾರ

    ಅಂದ ಹಾಗೇ, ಲಡ್ಡು ಅಪಚಾರ ಸಂಬಂಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಾಳೆ ಮಹಾಶಾಂತಿ ಯಾಗ ನಿರ್ವಹಿಸಲು ಟಿಟಿಡಿ ಅಧಿಕಾರಿಗಳು ಶರವೇಗದ ಸಿದ್ಧತೆಗಳನ್ನು ನಡೆಸಿದ್ದಾರೆ. ನಾಳೆಯ ಶುಭ ರೋಹಿಣಿ ನಕ್ಷತ್ರದಲ್ಲಿ ಮೊದಲಿಗೆ ಮಹಾಶಾಂತಿ ಹೋಮ ನಿರ್ವಹಿಸಿ ನಂತರ ವಾಸ್ತು ಹೋಮವನ್ನು ಆಗಮ ಪಂಡಿತರು ನೆರವೇರಿಸಲಿದ್ದಾರೆ. ಅಂತಿಮವಾಗಿ ಪಂಚಗವ್ಯಗಳಿಂದ ಸಂಪ್ರೋಕ್ಷಣೆ ಮಾಡಲಿದ್ದಾರೆ.

    ತಿಮ್ಮಪ್ಪನ ಆರ್ಜಿತ ಸೇವೆಗಳಿಗೆ ಭಂಗ ಉಂಟಾಗದಂತೆ ನಾಳೆಯೇ ಎಲ್ಲಾ ಯಾಗಗಳನ್ನು ಮುಗಿಸಲಿದ್ದಾರೆ. ಈ ಸಂಬಂಧ ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಟಿಟಿಡಿ ಅಧಿಕಾರಿಗಳು ಮತ್ತು ಆಗಮ ಪಂಡಿತರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹಾಗೆಯೇ, ಬ್ರಹ್ಮೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇನ್ನು, ಡಿಸಿಎಂ ಪವನ್ ಕಲ್ಯಾಣ್ ಇಂದಿನಿಂದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಇದು 11 ದಿನ ಮುಂದುವರಿಯಲಿದೆ. ಈ ಮಧ್ಯೆ, ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಬಿ.ಸುರೇಂದ್ರನಾಥ್ ನೇತೃತ್ವದ ತಜ್ಞರ ಸಮಿತಿ, ಭವಿಷ್ಯದಲ್ಲಿ ಲಡ್ಡುಗೆ ಬಳಸುವ ತುಪ್ಪದ ವಿಚಾರದಲ್ಲಿ ಯಾವುದೇ ಅನಾಹುತಗಳು ಉಂಟಾಗದ ರೀತಿಯಲ್ಲಿ ಹಲವು ಶಿಫಾರಸು ಮಾಡಿದೆ. ಇದನ್ನೂ ಓದಿ: ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ – ಸುರಕ್ಷತೆಗೆ ಜಿಪಿಎಸ್ ಅಳವಡಿಸಲು ಮುಂದಾದ KMF

  • ತಿರುಪತಿ ದೇವಾಲಯದ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಿದ ಆಂಧ್ರ ಸರ್ಕಾರ

    ತಿರುಪತಿ ದೇವಾಲಯದ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಿದ ಆಂಧ್ರ ಸರ್ಕಾರ

    ಅಮರಾವತಿ: ವೈಎಸ್‍ಆರ್‌ಪಿ ಸರ್ಕಾರದ ಅವಧಿಯಲ್ಲಿ ತಿರುಪತಿ (Tirupati) ದೇವಸ್ಥಾನದ ಲಡ್ಡುಗಳ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ (Tirupati Laddu Row) ಎಂಬ ವಿವಾದದ ಬೆನ್ನಲ್ಲೇ ದೇವಾಲಯದ ಅವ್ಯವಹಾರಗಳ ತನಿಖೆಗೆ ಸಿಎಂ ಎನ್.ಚಂದ್ರಬಾಬು ನಾಯ್ಡು (Chandrababu Naidu) ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

    ಈ ಹಿಂದೆ ಆಡಳಿತಾರೂಢ ತೆಲುಗು ದೇಶಂ ಪಕ್ಷವು (TDP), ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಟ್ರಸ್ಟ್‌ನ ಮಾಜಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಕಳೆದ ಐದು ವರ್ಷಗಳಿಂದ ದೇವಾಲಯದ ನಿರ್ವಹಣೆಯಲ್ಲಿ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಿತ್ತು. ಈ ಎಲ್ಲಾ ಪ್ರಕರಣವನ್ನೂ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪ್ರಕರಣದ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಟಿಡಿಪಿ ಹೇಳಿದೆ.

    ಕಳೆದ ಐದು ವರ್ಷಗಳಲ್ಲಿ ತಿರುಮಲದಲ್ಲಿ ಅನೇಕ ಅಪವಿತ್ರ ಕೆಲಸಗಳನ್ನು ಮಾಡಲಾಗಿದೆ. ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ನಿಕಟವರ್ತಿಗಳನ್ನು ಟಿಟಿಡಿ ಮಂಡಳಿಯ ಸದಸ್ಯರನ್ನಾಗಿ ನೇಮಿಸಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದರು ಎಂದು ಟಿಡಿಪಿ ಆರೋಪಿಸಿದೆ.

    ಬುಧವಾರ ಎನ್‍ಡಿಎ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸಿಎಂ ಚಂದ್ರಬಾಬು ನಾಯ್ಡು, ಜಗನ್ ಮೋಹನ್ ರೆಡ್ಡಿ (Jagan Mohan Reddy) ಸರ್ಕಾರದ ಅವಧಿಯಲ್ಲಿ ವೆಂಕಟೇಶ್ವರ ದೇವಸ್ಥಾನದ ಲಡ್ಡೂಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿದ್ದರು. ಇದು ದೇಶದೆಲ್ಲಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಇದಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಜಗನ್ ಮೋಹನ್ ರೆಡ್ಡಿಯವರು, ತಿರುಪತಿ ದೇವಸ್ಥಾನದ ನಿಯಮಗಳ ಅಡಿ ತುಪ್ಪವನ್ನು ಪರಿಶೀಲಿಸಿ ಬಳಿಕ ಲಡ್ಡು ತಯಾರಿಕೆಗೆ ಬಳಸಲಾಗುತ್ತದೆ. ಈ ಪ್ರಕ್ರಿಯೆಯು ಹಲವು ದಶಕಗಳಿಂದ ಜಾರಿಯಲ್ಲಿದೆ. ಅಲ್ಲದೇ ತುಪ್ಪದ ಟ್ಯಾಂಕರ್‌ಗಳನ್ನು ತಿರಸ್ಕರಿಸಿದ ಹಲವಾರು ನಿದರ್ಶನಗಳಿವೆ. ನಾಯ್ಡು ಅವರು ದೇವರನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

  • ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಪ್ರತಿಷ್ಠಾಪನೆ ದಿನ 300 ಕೆಜಿ ತಿರುಪತಿ ಲಡ್ಡು (Tirupati Laddu) ಪ್ರಸಾದ ಬಂದಿತ್ತು ಎಂದು ಅಯೋಧ್ಯೆಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.

    ರಾಮಮಂದಿರದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು. ಜನವರಿಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ತಿರುಪತಿ ದೇವಸ್ಥಾನದಿಂದ 300 ಕೆಜಿ ಪ್ರಸಾದವನ್ನು ಭಕ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯ ಅರ್ಚಕರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಸುದ್ದಿ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ YSRCP, ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

    ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ‘ಪ್ರಸಾದ’ (ಲಡ್ಡು) ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸುತ್ತಿದ್ದ ಬಗ್ಗೆ ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ್ದರೆ ಅದು ಅಕ್ಷಮ್ಯ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ.

  • ತಿರುಪತಿ ಲಡ್ಡು ವಿಚಾರ ತನಿಖೆ ಆಗಲಿ: ಎಂ.ಬಿ ಪಾಟೀಲ್

    ತಿರುಪತಿ ಲಡ್ಡು ವಿಚಾರ ತನಿಖೆ ಆಗಲಿ: ಎಂ.ಬಿ ಪಾಟೀಲ್

    ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬು ಬಳಸಿದ ಪ್ರಕರಣ (Tirupati Laddu row) ತನಿಖೆ ಆಗಲಿ ಎಂದು ಸಚಿವ ಎಂ.ಬಿ ಪಾಟೀಲ್ (M.B Patil) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕವಾಗಿ ಪಾವಿತ್ರ್ಯ ಹೊಂದಿರುವ ತಿರುಪತಿ ಲಡ್ಡುವಿಗೆ ಪ್ರಾಣಿ ಜನ್ಯ ಕೊಬ್ಬನ್ನು ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜವೇ ಆಗಿದ್ದಲ್ಲಿ ತುಂಬಾ ಆಘಾತಕಾರಿಯಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆದು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ಮೊದಲೆಲ್ಲ ಕೆಎಂಎಫ್ ತಿರುಪತಿಗೆ ತುಪ್ಪ ಪೂರೈಸುತ್ತಿತ್ತು. ಆಗ ಕಲಬೆರಕೆ ಇತ್ಯಾದಿ ಏನೂ ಇರಲಿಲ್ಲ. ಈ ಬಗ್ಗೆ ನಾನು ಕೆಎಂಎಫ್ ಅಧ್ಯಕ್ಷರ ಜೊತೆ ಕೂಡ ಮಾತನಾಡಿದ್ದೇನೆ. ಯಾರೇ ಆದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು. ಈ ಪ್ರಕರಣ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು. ಇದನ್ನೂ ಓದಿ: ಚಿಕಿತ್ಸೆ ಪಡೆಯುತ್ತಿದ್ದ 27ರ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಆಸ್ಪತ್ರೆಯಲ್ಲೇ ಸಾವು!

  • ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನ: ರಾಮಲಿಂಗಾ ರೆಡ್ಡಿ

    ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನ: ರಾಮಲಿಂಗಾ ರೆಡ್ಡಿ

    – ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದವನ್ನೂ ಟೆಸ್ಟ್ ಮಾಡಲಿ
    – ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಎಚ್ಚೆತ್ತ ಮುಜರಾಯಿ ಇಲಾಖೆ

    ಬೆಂಗಳೂರು: ತಿರುಪತಿ ಲಡ್ಡು (Tirupathi Laddu) ವಿವಾದವಾದ ಬೆನ್ನಲ್ಲೇ, ರಾಜ್ಯ ಎಚ್ಚೆತ್ತಿದೆ. ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಲ್ಲೇಶ್ವರಂ ಟಿಟಿಡಿ (Malleshwaram TTD) ದೇವಸ್ಥಾನದ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗ್ರಾಮ ತೊರೆದು ಬಂಧನ ಭೀತಿಯಲ್ಲಿ ಯುವಕ ಸಾವು

    ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದ ಟೆಸ್ಟ್ ಮಾಡಲಿ:
    ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಿಸುತ್ತೇನೆ. ನಮ್ಮ ರಾಜ್ಯ 99% ದೇವಾಲಯಗಳು ನಂದಿನಿ ತುಪ್ಪವನ್ನೆ ಬಳಸಿಕೊಳ್ಳುತ್ತಾ ಇದ್ದಾರೆ. ಜನರಿಗೆ ಸಂಶಯ ಬೇಡ ಅಂತಾ ನಂದಿನಿ ತುಪ್ಪ ಬಳಕೆ ಮಾಡಬೇಕು ಅಂತಾ ಆದೇಶ ಮಾಡಿದ್ದೇವೆ. ಕೇಂದ್ರದ ಮಂತ್ರಿ ಒಬ್ಬರು ಪ್ರಸಾದ ಟೆಸ್ಟ್ ಮಾಡಬೇಕು ಅಂತಾ ಹೇಳಿದ್ದಾರೆ. ನನ್ನ ಅಭಿಪ್ರಾಯ ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದ ಟೆಸ್ಟ್ ಮಾಡಲಿ ಎಂದಿದ್ದಾರೆ.

    ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ಎಲ್ಲಿಯೂ ಅಂತಹ ಘಟನೆ ಆಗಿಲ್ಲ. ತಿರುಪತಿ ಲಡ್ಡು ಪ್ರಸಾದದ ಸಂಶಯದ ಬಗ್ಗೆ ತೀರ್ಮಾನ ಆಗೋವರೆಗೂ ಬಳಸಬಾರದು ಅಂತಾ ಚರ್ಚೆ ಆಗ್ತಿರೋ ವಿಷಯ. ನಮ್ಮ ರಾಜ್ಯದ ವಿಚಾರ ಅಲ್ಲ ಇದು ಆಂಧ್ರಪ್ರದೇಶ ವಿಚಾರ ಅಲ್ಲಿನ ಸರ್ಕಾರ ತೀರ್ಮಾನ ಮಾಡಬೇಕು. ಜನ ಬಳಸದೇ ಇದ್ರೆ ಮುಗಿದೇ ಹೋಯ್ತು ಎಂದಿದ್ದಾರೆ.

    ಏನಿದು ವಿವಾದ?
    ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಜಗನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನವು ಪ್ರಸಾದವಾಗಿ ನೀಡುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದರು.

    ಆಂಧ್ರಪ್ರದೇಶದ (Andhrapradesh) ಸಿಎಂ ಎನ್.ಚಂದ್ರಬಾಬು ನಾಯ್ಡು (N Chandrababu Naidu) ಅವರ ಆರೋಪದ ಕುರಿತು ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.ಇದನ್ನೂ ಓದಿ: ಮೀಸಲಾತಿ ಕುರಿತ ಹೇಳಿಕೆಗೆ ಆಕ್ಷೇಪ – ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ದೂರು

    ಇದರ ಬೆನ್ನಲ್ಲೇ ರಾಜ್ಯ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮುಜರಾಯಿ ಇಲಾಖೆ ಎಚ್ಚೆತ್ತಿದೆ. ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ತಿರುಪತಿ: ತಿಮ್ಮಪ್ಪನ ಮಹಾಪ್ರಸಾದ ಲಡ್ಡುನಲ್ಲಿ (Tirupati Laddu Row) ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಸಿಎಂ ಆರೋಪಕ್ಕೆ ಪೂರಕವಾಗಿ ಟಿಟಿಡಿ (TTD) ಇಓ ಶ್ಯಾಮಲರಾವ್ ಹೇಳಿಕೆ ನೀಡಿದ್ದಾರೆ. ತಮಿಳುನಾಡು (Tamilnadu) ಮೂಲದ ಎಆರ್ ಫುಡ್ಸ್ ಸರಬರಾಜು ಮಾಡಿದ ತುಪ್ಪ (Ghee) ಕಲಬೆರಕೆಯಿಂದ ಕೂಡಿತ್ತು. ತಕ್ಷಣವೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ, ಲಡ್ಡುಗೆ ಬಳಸುವ ತುಪ್ಪದ ಗುಣಮಟ್ಟ ಪರೀಕ್ಷೆಗೆ ಟಿಟಿಡಿ ಸ್ವಂತ ಲ್ಯಾಬ್ ಹೊಂದಿಲ್ಲ. ಅಧಿಕಾರಿಗಳು ಈ ಹಿಂದೆ ಪರೀಕ್ಷೆ ಮಾಡಿರಲಿಲ್ಲ. ಬರೀ 411 ರೂಪಾಯಿಗೆ ಕೆಜಿ ತುಪ್ಪ ಸರಬರಾಜು ಮಾಡಿದ್ದಾರೆ. ಈ ದರಕ್ಕೆ ಉತ್ತಮ ಗುಣಮಟ್ಟದ ತುಪ್ಪ ಪೂರೈಕೆ ಸಾಧ್ಯನಾ ಎಂದು ಎಂದು ಶ್ಯಾಮಲರಾವ್ ಪ್ರಶ್ನಿಸಿದ್ದಾರೆ.

    ದೇಗುಲದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಅವರಂತೂ, ಕಳೆದ ಐದು ವರ್ಷದಿಂದ ಈ ಮಹಾ ಪಾಪ ನಡೆಯುತ್ತಿತ್ತು ಎಂದು ಆಪಾದಿಸಿದ್ದಾರೆ. ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪಿಸುವಂತೆ ಕೇಂದ್ರವನ್ನು ಡಿಸಿಎಂ ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ. ಆಡಳಿತಾರೂಢ ಟಿಡಿಪಿ ನಾಯಕರೆಲ್ಲಾ ಜಗನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಂದಿನಿ ತುಪ್ಪ ಕಡ್ಡಾಯ: ಮುಜುರಾಯಿ ಇಲಾಖೆ ಆದೇಶ

    ಕಲಬೆರೆಕೆ ತುಪ್ಪ ಕಳುಹಿಸಿಲ್ಲ:
    ನಾವು ಟಿಟಿಡಿಗೆ ಕಲಬೆರೆಕೆ ತುಪ್ಪ ಕಳುಹಿಸಿಲ್ಲ. ಇಲ್ಲಿಯವರೆಗೆ ನಮ್ಮ ವಿರುದ್ಧ ಯಾವುದೇ ದೂರುಗಳಿಲ್ಲ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ನಾವು ಕಾನೂನು ಸಮರ ನಡೆಸುತ್ತೇವೆ ಎಂದು ಎಆರ್‌ ಫುಡ್ಸ್‌ ಹೇಳಿದೆ.

     

  • ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ನವದೆಹಲಿ: ತಿರುಪತಿಯಲ್ಲಿ ಲಡ್ಡುಗಳನ್ನು (Tirupati Laddoo) ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಆರೋಪದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ (J.P Nadda) ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.

    ಲಡ್ಡೂಗಳನ್ನು ದೇವಾಲಯಕ್ಕೆ ಭೇಟಿ ನೀಡುವ ಕೋಟಿಗಟ್ಟಲೆ ಭಕ್ತರಿಗೆ ನೀಡಲಾಗುತ್ತದೆ. ಇದರಿಂದಾಗಿ ಸಿಎಂ ಏನೇ ಹೇಳಿದರೂ ಅದು ಗಂಭೀರ ಮತ್ತು ಕಳವಳಕಾರಿ ವಿಷಯವಾಗಿದೆ. ಈ ಆರೋಪದ ವಿರುದ್ಧ ಕೂಲಂಕುಷ ತನಿಖೆ ನಡೆಸುವ ಅಗತ್ಯವಿದೆ. ಅಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಡ್ಡಾ ಹೇಳಿದ್ದಾರೆ.

    ಚಂದ್ರಬಾಬು ನಾಯ್ಡು ಅವರು, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರು ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಗುಜರಾತ್‍ನ ಸರ್ಕಾರಿ ಲ್ಯಾಬ್‍ನ ವರದಿಯನ್ನು ಅವರು ಉಲ್ಲೇಖಿಸಿದ್ದರು.

    ಈ ವಿಚಾರವಾಗಿ ನಾಲ್ಕು ವರ್ಷಗಳ ಕಾಲ ಟಿಟಿಡಿಯ ಅಧ್ಯಕ್ಷರಾಗಿದ್ದ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿಯವರು, ದೇವರಿಗೆ ಪ್ರತಿನಿತ್ಯ ಅರ್ಪಿಸುವ ನೈವೇದ್ಯ ಮತ್ತು ಭಕ್ತರಿಗೆ ನೀಡುವ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳುವುದು ಹೇಯ ಕೃತ್ಯ ಎಂದು ಆಂಧ್ರ ಸಿಎಂಗೆ ಎಕ್ಸ್‌ನಲ್ಲಿ ತಿರುಗೇಟು ನೀಡಿದ್ದಾರೆ.

    ಟಿಟಿಡಿ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದ ಪಕ್ಷದ ಹಿರಿಯ ನಾಯಕ ಕರುಣಾಕರ್ ರೆಡ್ಡಿ, ಟಿಡಿಪಿ ಸರ್ಕಾರ ಜಗನ್ ಮೋಹನ್ ರೆಡ್ಡಿ ವಿರುದ್ಧ ರಾಜಕೀಯ ಸೇಡು ತೀರಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

    ವಿವಾದದ ಬೆನ್ನಲ್ಲೇ, ಆಂಧ್ರಪ್ರದೇಶದ ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು, ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಅಥವಾ ಸಿಬಿಐ ತನಿಖೆಗೆ ವಹಿಸಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.