Tag: ತಿರುಪತಿ ದೇವಸ್ಥಾನ

  • ತಿರುಪತಿ ದೇವಸ್ಥಾನದಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬೇಕು: ಸಿಎಂ ಚಂದ್ರಬಾಬು ನಾಯ್ಡು

    ತಿರುಪತಿ ದೇವಸ್ಥಾನದಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬೇಕು: ಸಿಎಂ ಚಂದ್ರಬಾಬು ನಾಯ್ಡು

    – ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣಕ್ಕೆ ಪ್ಲ್ಯಾನ್‌

    ಹೈದರಾಬಾದ್‌: ತಿರುಮಲ ತಿರುಪತಿ ದೇವಸ್ಥಾನದಲ್ಲಿ (TTD) ಹಿಂದೂಗಳು ಮಾತ್ರ ಕೆಲಸ ಮಾಡಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಹೇಳಿದ್ದಾರೆ.

    ತಮ್ಮ ಮೊಮ್ಮಗ ದೇವಾಂಶ್ ಹುಟ್ಟುಹಬ್ಬದ ಪ್ರಯುಕ್ತ ಸಿಎಂ ನಾಯ್ಡು ಅವರಿಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ತಿರುಮಲ ದೇವಸ್ಥಾನದಲ್ಲಿ ಹಿಂದೂಗಳು (Hindus) ಮಾತ್ರ ಕೆಲಸ ಮಾಡಬೇಕು. ಒಂದು ವೇಳೆ ಕ್ರೈಸ್ತರು, ಇತರ ಧರ್ಮದ ಜನ ಕೆಲಸ ಮಾಡುತ್ತಿದ್ದರೆ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೌರವಯುತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವೇಳೆ ದೇಶದಾದ್ಯಂತ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸುವ ಯೋಜನೆ ಇದೆ ಎಂದು ಪ್ರಕಟಿಸಿದರು. ದೇವಾಲಯಗಳ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಸಿಎಂ ನಾಯ್ಡು ಘೋಷಿಸಿದರು. ಇದನ್ನೂ ಓದಿ: ರಾಷ್ಟ್ರಗೀತೆ ಗಾಯನದ ವೇಳೆ ನಿತೀಶ್ ಕುಮಾರ್ ಮಾತುಕತೆ – ಬಿಹಾರ ಅಸೆಂಬ್ಲಿಯಲ್ಲಿ ಗದ್ದಲ, ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ

    ಜೊತೆಗೆ ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಂಆರ್‌ಕೆಆರ್‌ ಮತ್ತು ಮುಮ್ತಾಜ್‌ ಹೊಟೇಲ್‌ ನಿರ್ಮಾಣ ಮಾಡುವ ʻದೇವಲೋಕಂʼ ಯೋಜನೆಗಳಿಗೆ 35 ಎಕರೆ ಜಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸುವುದಾಗಿಯೂ ಘೋಷಿಸಿದರು. ಇದನ್ನೂ ಓದಿ: 19ರ ಯುವತಿಗೆ 42ರ ಅಂಕಲ್‌ನಿಂದ ಲವ್‌ ಟಾರ್ಚರ್‌ – ಪಿನಾಯಿಲ್ ಕುಡಿದು ವಿದ್ಯಾರ್ಥಿನಿ ಆತ್ಮಹತ್ಯೆ

    ಕೆಲ ಹಿಂದೂ ಧಾರ್ಮಿಕ ಮುಖಂಡರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು, ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಹೋಟೆಲ್‌ಗಳ ನಿರ್ಮಾಣ ಮಾಡುವುದು ಹಾಗೂ ಇತರ ಚಟುವಟಿಕೆಗಳನ್ನು ಕೈಗೊಂಡಿದೆ. ಇದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು ಈ ಹಿನ್ನೆಲೆ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

  • ತಿರುಪತಿಯಲ್ಲಿ ಭಾರಿ ಅನಾಹುತ – ಕಾಲ್ತುಳಿತಕ್ಕೆ 4 ಮಂದಿ ಸಾವು

    ತಿರುಪತಿಯಲ್ಲಿ ಭಾರಿ ಅನಾಹುತ – ಕಾಲ್ತುಳಿತಕ್ಕೆ 4 ಮಂದಿ ಸಾವು

    ಅಮರಾವತಿ: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ (Tirupati Temple) ಬುಧವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.

    ತಿರುಪತಿಯಲ್ಲಿ ದರ್ಶನಕ್ಕೆ ಟಿಕೆಟ್ ವಿತರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ. ತಿರುಪತಿಯ ವಿಷ್ಣು ನಿವಾಸದ ಬಳಿ ಇರುವ ತಿರುಮಲ ಶ್ರೀವಾರಿ ವೈಕುಂಠ ದ್ವಾರದಲ್ಲಿ ಬುಧವಾರ ರಾತ್ರಿ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಗಡ್ಕರಿ ಭೇಟಿಯಾದ ಹೆಚ್‌ಡಿಕೆ – ಮಂಡ್ಯ ಹೊರವರ್ತುಲ ರಸ್ತೆ ಯೋಜನೆ, ಬೈಪಾಸ್ ಅಭಿವೃದ್ಧಿಗೆ ಮನವಿ

    ನೂರಾರು ಭಕ್ತರು ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ಗಾಗಿ ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.

    ತಿರುಪತಿ ದೇವಸ್ಥಾನದ ಕಾಲ್ತುಳಿತ ಘಟನೆಯ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜ.10ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ದೇಶ-ವಿದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಇದನ್ನೂ ಓದಿ: ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ – ವಿದೇಶಾಂಗ ಸಚಿವ ಜೈಶಂಕರ್

  • VRS ತೆಗೆದುಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

    VRS ತೆಗೆದುಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

    ತಿರುಪತಿ: ಹೊಸದಾಗಿ ರಚನೆಯಾಗಿರುವ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ಉದ್ಯೋಗದಲ್ಲಿರುವ ಹಿಂದೂಯೇತರರು ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕು (VRS) ಅಥವಾ ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯನ್ನು ಆರಿಸಿಕೊಳ್ಳಬೇಕೆಂದು ನಿರ್ಣಯವನ್ನು ಅಂಗೀಕರಿಸಿದೆ.

    ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು (BR Naidu) ಅವರು ಸೋಮವಾರ ಈಗ ನಿರ್ಧಾರವನ್ನು ದೃಢಪಡಿಸಿದ್ದಾರೆ. ಹಿಂದೂಯೇತರ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಮಂಡಳಿಯ 7 ಸಾವಿರ ಖಾಯಂ ಉದ್ಯೋಗಿಗಳ ಪೈಕಿ ಸುಮಾರು 300 ಮಂದಿಗೆ ಈ ಕ್ರಮವು ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ. ಟಿಟಿಡಿಯು ಸುಮಾರು 14,000 ಗುತ್ತಿಗೆ ಕಾರ್ಮಿಕರನ್ನು ಸಹ ನೇಮಿಸಿಕೊಂಡಿದೆ.

     

    ಈ ನಿರ್ಧಾರವು ಆಂಧ್ರಪ್ರದೇಶದ ದತ್ತಿ ಕಾಯ್ದೆಮತ್ತು ಟಿಟಿಡಿ ಕಾಯ್ದೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿರುವ ಟಿಟಿಡಿ ವಿವಿಧ ನೌಕರರ ಸಂಘಗಳಿಂದ ಬೆಂಬಲವನ್ನು ಪಡೆದುಕೊಂಡಿದೆ. ಅಕ್ಟೋಬರ್ 31 ರಂದು ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಾಯ್ಡು ಅವರು ದೇವಸ್ಥಾನವನ್ನು ಹಿಂದೂಗಳು ಮಾತ್ರ ನಡೆಸಬೇಕು ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ!

    ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ನಾಯ್ದು ತಿಳಿಸಿದರು.

    ಹಲವು ವರ್ಷಗಳಿಂದ, ದೇವಸ್ಥಾನ ಮಂಡಳಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಟಿಟಿಡಿ ಕಾಯ್ದೆಯನ್ನು ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ. 1989 ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವು ಟಿಟಿಡಿ-ಆಡಳಿತದ ಹುದ್ದೆಗಳಿಗೆ ನೇಮಕಾತಿಗಳನ್ನು ಹಿಂದೂಗಳಿಗೆ ಸೀಮಿತಗೊಳಿಸಬೇಕೆಂದು ಆದೇಶಿಸಿತ್ತು. ಈ ನಿಬಂಧನೆಗಳ ಹೊರತಾಗಿಯೂ, ಹಿಂದೂಯೇತರರು ದೇವಸ್ಥಾನದ ಒಳಗಡೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ಹೇಳಿವೆ.

     

  • ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು

    ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು

    – ಸಂಪ್ರದಾಯ, ಭಕ್ತರ ನಂಬಿಕೆಗಳನ್ನ ಗೌರವಿಸಿ ಎಂದ ಹಾಲಿ ಸಿಎಂ

    ತಿರುಪತಿ: ಆಂಧ್ರ ರಾಜಕೀಯದಲ್ಲಿ ತಿರುಪತಿ ಲಡ್ಡು ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರೀ ಹೈಡ್ರಾಮಾ, ತೀವ್ರ ವಿರೋಧದ ನಡುವೆ ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್‌ ರೆಡ್ಡಿ (Jagan Mohan Reddy) ತಿರುಪತಿಗೆ ಭೇಟಿಯನ್ನು ರದ್ದು ಮಾಡಿಕೊಂಡರು. ದೇವರ ದರ್ಶನಕ್ಕೆ ಹೋಗ್ತಿದ್ರೆ ನೊಟೀಸ್ ಕೊಟ್ಟು ತಡೆ ಹಿಡೀತಿದ್ದಾರೆ ಎಂದು ಚಂದ್ರಬಾಬು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ದೇವರ ದರ್ಶನಕ್ಕೆ ಹೋಗ್ತಿದ್ದಾಗ ಅಡ್ಡಿಪಡಿಸಿರೋದು ದೇಶದಲ್ಲೇ ಇದು ಮೊದಲ ಕೇಸ್. ಆಂಧ್ರದಲ್ಲಿ ರಾಕ್ಷಸ ರಾಜ್ಯವಿದೆ ಎಂದು ಜಗನ್ ವಾಗ್ದಾಳಿ ನಡೆಸಿದ್ರು.

    ಲಡ್ಡು ವಿವಾದವನ್ನು (Tirupati Laddu Controversy) ಮರೆಮಾಚಲು ಡಿಕ್ಲರೇಷನ್ ವಿಚಾರ ದೊಡ್ಡದು ಮಾಡಿದ್ದಾರೆ. ಬರೆದುಕೊಳ್ಳಿ ನನ್ನ ಮತ ಮಾನವೀಯತೆ.. ನಾಲ್ಕು ಗೋಡೆ ಮಧ್ಯೆ ಬೈಬಲ್ ಓದುತ್ತೇನೆ.. ಹೊರಗೆ ಹೋದ್ರೆ ಎಲ್ಲಾ ಧರ್ಮ ಗೌರವಿಸ್ತೇನೆ.. ಹಿಂದೂ ಆಚರಣೆ ಮಾಡ್ತೇನೆ ಎಂದಿದ್ದಾರೆ. ಧರ್ಮದ ಹೆಸರಲ್ಲಿ ಕೀಳು ರಾಜಕೀಯ ನಡೀತಿದೆ ಎಂದು ಜಗನ್ ಕಿಡಿಕಾರಿದ್ದಾರೆ. ಈ ಮಧ್ಯೆ, ಲಡ್ಡು ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಇದನ್ನೂ ಓದಿ: MUDA Case| ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ: ಕೋರ್ಟ್ ಆದೇಶದಲ್ಲಿ ಏನಿದೆ?

    ಜಗನ್‌ V/S ಚಂದ್ರಬಾಬು ನಾಯ್ಡು:
    ಇನ್ನೂ ಮಾಜಿ ಸಿಎಂ ಜಗನ್‌ ತಿರುಪತಿ ವೆಂಕಟೇಶ್ವರ ದೇವಸ್ಥಾನ ಭೇಟಿಯನ್ನು ಮುಂದೂಡಿದ ಬಳಿಕ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಗನ್‌ ತಿರುಪತಿ ಭೇಟಿ ರದ್ದುಗೊಳಿಸಿದ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಪ್ರತಿಕ್ರಿಯಿಸಿದ್ದಾರೆ. ಜಗನ್ ತಿರುಮಲ ದೇವಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ಸರ್ಕಾರ ಅಡ್ಡಿಪಡಿಸಿದೆ ಎಂದು ಸುಳ್ಳು ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಯಾರಾದರೂ ನಿಮ್ಮನ್ನು ಹೋಗದಂತೆ ತಡೆದಿದ್ದಾರಾ? ನೋಟಿಸ್ ಇದ್ದರೇ ಮಾಧ್ಯಮದವರಿಗೆ ತೋರಿಸಿ, ಏಕೆ ಸುಳ್ಳುಗಳನ್ನು ಹರಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ; 1 ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್‌ಡಿಕೆ

    ಸಾರ್ವಜನಿಕ ಜೀವನದಲ್ಲಿ ಜನರು ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಏನು ಮಾಡಬೇಕೋ ಅದನ್ನು ಮಾಡಲೇಬೇಕು. ಪೂಜಾ ಸ್ಥಳಕ್ಕೆ ಭೇಟಿ ನೀಡಬೇಕಾದ್ರೆ, ಅಲ್ಲಿನ ಸಂಪ್ರದಾಯಗಳನ್ನು ಗೌರವಿಸಬೇಕು. ಸಂಪ್ರದಾಯಗಳನ್ನು ಮತ್ತು ಭಕ್ತರ ನಂಬಿಕೆಗಳನ್ನು ಅಗೌರವಗೊಳಿಸಬಾರದು. ಏಕೆಂದರೆ ಅಲ್ಲಿನ ನಂಬಿಕೆಗಳಿಗಿಂತ ಯಾರೂ ಮೇಲಲ್ಲ, ಯಾರೂ ದೇವರಲ್ಲ ಎಂದು ತಿರುಗೇಟು ನೀಡಿದ್ದಾರೆ.

  • Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

    Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

    ಹೈದರಾಬಾದ್‌: ತಿರುಪತಿ ದೇವಸ್ಥಾನದ (Tirupati Temple) ಲಡ್ಡು (Laddu ) ಪ್ರಸಾದ ವಿವಾದ ಜೋರಾಗುತ್ತಿದ್ದಂತೆ ಮಾಜಿ ಸಿಎಂ ಜಗನ್‌ ರೆಡ್ಡಿ (YS Jagan Mohan Reddy) ಆಂಧ್ರ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

    ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದಾರೆ. ಹೀಗಾಗಿ ಈ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ಹೈಕೋರ್ಟ್ (High Court) ನೇಮಿಸಿದ ಸಮಿತಿ ತನಿಖೆ ನಡೆಸಬೇಕು ಎಂದು ಜಗನ್‌ ಪರ ವಕೀಲರು ಮನವಿ ಮಾಡಿದರು.

    ಈ ವೇಳೆ ಸೆ.25 ರ ಒಳಗಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿ. ಅಂದು ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್‌ ಸೂಚಿಸಿದೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

     

    ಲ್ಯಾಬ್ ವರದಿಯಲ್ಲಿ ಏನಿದೆ?
    ಲಡ್ಡುಗೆ ಬಳಸಿದ ತುಪ್ಪದಲ್ಲಿ ಮೀನೆಣ್ಣೆ, ಹಂದಿಯ ಕೊಬ್ಬು, ತಾಳೆ ಎಣ್ಣೆ ಕೊಬ್ಬು, ತೆಂಗಿನ ಎಣ್ಣೆಯ ಕೊಬ್ಬು ಪತ್ತೆಯಾಗಿದೆ. ಸೋಯಾ, ಸೂರ್ಯಕಾಂತಿ, ಆಲಿವ್, ಹತ್ತಿ ಬೀಜದೆಣ್ಣೆ ಸಿಕ್ಕಿದೆ. ತುಪ್ಪದಲ್ಲಿ ವ್ಹೀಟ್ ಜೆರ್ಮ್ ಆಯಿಲ್, ಮೇಜ್ ಜೆರ್ಮ್ ಆಯಿಲ್ ಪತ್ತೆಯಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

     

    ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ. ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ ಅವರು ಚಂದ್ರಬಾಬು ನಾಯ್ಡು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ.

    ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

     

  • ತಿರುಪತಿಯಲ್ಲಿ ದೇವರ ದರ್ಶನಕ್ಕೆ 3 ಕಿ.ಮೀ.ವರೆಗೆ ಸರತಿ ಸಾಲು

    ತಿರುಪತಿಯಲ್ಲಿ ದೇವರ ದರ್ಶನಕ್ಕೆ 3 ಕಿ.ಮೀ.ವರೆಗೆ ಸರತಿ ಸಾಲು

    ತಿರುಮಲ: ಶನಿವಾರ, ಭಾನುವಾರದ ರಜೆ ಹಾಗೂ ಸೋಮವಾರ ಬಕ್ರೀದ್ ರಜೆ ಹಿನ್ನೆಲೆಯಲ್ಲಿ ತಿರುಮಲದ ವೆಂಕಟೇಶ್ವರ ಸ್ವಾಮಿಯ (Venkateswara Temple, Tirumala) ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.

    ಶನಿವಾರ ಮತ್ತು ಭಾನುವಾರ ಭಾರೀ ಜನದಟ್ಟಣೆ ಕಂಡುಬಂದಿದ್ದು, ಭಕ್ತಾದಿಗಳು ದೇವರ ದರ್ಶನಕ್ಕಾಗಿ ಸುಮಾರು 3 ಕಿ.ಮೀ.ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ದರ್ಶನ್‌ಗೂ ಆರೋಪಿಗೂ ಸಂಬಂಧವೇ ಇಲ್ಲ – ಸ್ನೇಹಿತನ ಮಾತು ಕೇಳಿ ಶೆಡ್‌ನಲ್ಲಿ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಿಕ್ಕಿಬಿದ್ದ

     

    ಚುನಾವಣೆ ಮುಕ್ತಾಯ, ವಾರಾಂತ್ಯ ರಜೆ, ಬಹುತೇಕ ಪರೀಕ್ಷೆಗಳು ಮುಗಿದಿರುವುದು ಜೊತೆ ಬಕ್ರೀದ್‌ ರಜೆಯೂ (Bakrid) ಸೇರಿದ್ದರಿಂದ ತಿರುಪತಿಗೆ ಹೆಚ್ಚಿನ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸೋಮವಾರವೂ ಈ ದಟ್ಟಣೆ ಮುಂದುವರಿಯುವ ಸಾಧ್ಯತೆಯಿದೆ.

  • ಪತ್ನಿ ಜೊತೆಗೆ ತಿರುಪತಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಅಮಿತ್‌ ಶಾ

    ಪತ್ನಿ ಜೊತೆಗೆ ತಿರುಪತಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಅಮಿತ್‌ ಶಾ

    ತಿರುಪತಿ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ ಗೃಹ ಸಚಿವ ಅಮಿತ್‌ ಶಾ (Amit Shah) ಪತ್ನಿ ಸೋನಲ್‌ ಶಾ ಜೊತೆಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಆಂಧ್ರಪ್ರದೇಶದ ತಿರುಮಲದಲ್ಲಿರುವ ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ (Tirupati Balaji Temple) ಅಮಿತ್‌ ಶಾ‌ ಸಾಷ್ಟಾಂಗ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.


    ಭೇಟಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಯು ಪ್ರತಿಯೊಬ್ಬರ ಜೀವನದಲ್ಲಿ ಮೇಲಿರಲಿ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ಧ್ಯಾನಸ್ಥರಾದ ಪ್ರಧಾನಿ ಮೋದಿ – PHOTOS ನೋಡಿ

    ಲೋಕಸಭಾ ಚುನಾವಣೆಯ (Lok Sabha Election) ಕೊನೆಯ ಮತ್ತು 7ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಅಂತ್ಯವಾಗಿದ್ದು ಶನಿವಾರ ಚುನಾವಣೆ ನಡೆಯಲಿದೆ. ಶನಿವಾರ ಸಂಜೆಯಿಂದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿದ್ದು ಜೂನ್‌ 4 ರಂದು ಫಲಿತಾಂಶ ಪ್ರಕಟವಾಗಲಿದೆ.

  • ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟವರು ಮಸಣ ಸೇರಿದರು – ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು!

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟವರು ಮಸಣ ಸೇರಿದರು – ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು!

    ಹಾವೇರಿ: ದೇವರ ದರ್ಶನಕ್ಕೆಂದು ತಿರುಪತಿಗೆ (Tirupati Temple) ಹೋಗುತ್ತಿದ್ದ ಕಾರು ಏಕಾಏಕಿ ನಸುಕಿನಜಾವ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು , 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು (Ranebennur )ತಾಲೂಕಿನ ಹಲಗೇರಿ ಬೈಪಾಸ್ ಬಳಿ ನಡೆದಿದೆ.

    ದೇವರ ದರ್ಶನಕ್ಕೆಂದು ತಿರುಪತಿಗೆ ತೆರಳುತ್ತಿದ್ದ ನಗರದ ಸಮಗಂಡಿ ಮತ್ತು ಬಾರ್ಕಿ ಎಂಬ ಎರಡು ಕುಟುಂಬಗಳು ಹೋಗುತ್ತಿದ್ದ ವೇಳೆ ರಾಣೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿ-4ರ (NH-4) ಹಲಗೇರಿ ಬ್ರಿಡ್ಜ್‌ಬಳಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ (Road Accident) ಕಾರಣ ಎಂದು ಹೇಳಲಾಗಿದೆ. ಮೃತರನ್ನ ಸುರೇಶ ಜಾಡಿ (54), ಐಶ್ವರ್ಯ ಬಾರ್ಕಿ (22), ಚೇತನಾ (7), ಪವಿತ್ರಾ ಸಮಗಂಡಿ (28) ಎಂದು ಗುರುತಿಸಲಾಗಿದೆ. ಮೃತರು ಹಾವೇರಿನಗರದ ನಿವಾಸಿಗಳಾಗಿದ್ದಾರೆ.

    ಗಾಯಗೊಂಡವರನ್ನ ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊನ್ನಪ್ಪ ಬಾರ್ಕಿ, ಪ್ರಭುರಾಜ ಸಮಗಂಡಿ, ಗೀತಾ ಬಾರ್ಕಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನ ಸದ್ಯ ದಾವಣಗೆರೆ ಮತ್ತು ತಾಲ್ಲೂಕು ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಕಾಂಬೋಡಿಯಾದಲ್ಲಿ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರ ರಕ್ಷಣೆ

    ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಣೆಬೆನ್ನೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೆಬೆನ್ನೂರು ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಕಸದ ಬುಟ್ಟಿಯ ಬಗ್ಗೆ ಸಾಕಷ್ಟು ಅನುಭವವಿದೆ: ಆಚಾರ್ಯ ಪ್ರಮೋದ್‌ ಕೃಷ್ಣಂ ಮತ್ತೆ ವಾಗ್ದಾಳಿ

  • ತಿರುಪತಿ ಗರ್ಭಗುಡಿ 8 ತಿಂಗಳು ಬಂದ್ ಇಲ್ಲ – ಮುಖ್ಯ ಅರ್ಚಕರ ಸ್ಪಷನೆ

    ತಿರುಪತಿ ಗರ್ಭಗುಡಿ 8 ತಿಂಗಳು ಬಂದ್ ಇಲ್ಲ – ಮುಖ್ಯ ಅರ್ಚಕರ ಸ್ಪಷನೆ

    ಅಮರಾವತಿ: ಚಿನ್ನಲೇಪನದ ವೇಳೆ ತಿರುಪತಿ ತಿರುಮಲ ದೇವಸ್ಥಾನದ (TTD) ಗರ್ಭಗುಡಿಯನ್ನು 6-8 ತಿಂಗಳು ಮುಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದ್ರೆ ಈ ಬಗ್ಗೆ ದೇಗುಲದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ವೇಣುಗೋಪಾಲ ದೀಕ್ಷಿತುಲು (enugopal Dikshitulu) ಅವರು ಸ್ಪಷ್ಟನೆ ನೀಡಿದ್ದಾರೆ.

    ಗರ್ಭಗುಡಿ ಗೋಪುರಕ್ಕೆ ಚಿನ್ನದ ಲೇಪನ (Gold Painting) ಕಾರ್ಯ ನಡೆದರೂ ತಿಮ್ಮಪ್ಪನ ಮೂಲ ವಿರಾಟ ಮೂರ್ತಿಯ ದರ್ಶನ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫಾರ್ಮ್ ಹೌಸ್‌ನಲ್ಲಿ ವನ್ಯ ಜೀವಿಗಳ ಪತ್ತೆ ಪ್ರಕರಣ- ನಿರೀಕ್ಷಣಾ ಜಾಮೀನು ಕೋರಿದ ಎಸ್‌ಎಸ್ ಮಲ್ಲಿಕಾರ್ಜುನ್

    ಮಾರ್ಚ್ 1 ರಿಂದ ಚಿನ್ನದ ಲೇಪನ ಕಾರ್ಯ ಆರಂಭವಾಗಲಿದೆ. ಚಿನ್ನ ಲೇಪನಕ್ಕೆ 6 ತಿಂಗಳು ಸಮಯ ಬೇಕಾಗಲಿದೆ. ಇದಕ್ಕೂ 1 ವಾರ ಮುನ್ನ ದೇಗುಲದ ಪಕ್ಕದಲ್ಲೇ (ತಾತ್ಕಾಲಿಕ ಮಂದಿರ) ನಿರ್ಮಿಸಿ ಅಲ್ಲಿ ವೆಂಕಟೇಶ್ವರನ ಪ್ರತಿಕೃತಿ ಇರಿಸಲಾಗುತ್ತದೆ. ಈ 6 ತಿಂಗಳೂ ಮೂಲ ಮೂರ್ತಿಯ ದರ್ಶನ ಭಕ್ತರಿಗೆ ಲಭ್ಯವಿರುತ್ತದೆ. ಆದರೆ ಸುಪ್ರಭಾತದಿಂದ ಏಕಾಂತ ಸೇವೆವರೆಗಿನ ಸೇವೆಗಳನ್ನು ಏಕನಾಥಂನಲ್ಲಿ ಮಾಡಲಾಗುತ್ತದೆ ಎಂದಿದ್ದಾರೆ.

    ಕಲ್ಯಾಣೋತ್ಸವದಂಥ ಅರಿಜಿತ ಸೇವೆಯನ್ನು ಉತ್ಸವಮೂರ್ತಿಗಳಿಗೆ ಮಾಡಲಾಗುತ್ತದೆ. ಗರ್ಭಗುಡಿ ಮುಚ್ಚುತ್ತದೆ. ಆದ್ದರಿಂದ ಗರ್ಭಗೂಡಿ ಲೇಪನ ಕಾರ್ಯ ನಡೆಯುತ್ತಿದ್ದರೂ ವಿರಾಟ ಮೂರ್ತಿಯ ದರ್ಶನ ಭಕ್ತರಿಗೆ ಸಿಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿಕೆಟ್‍ಗಾಗಿ ಕಾಂಗ್ರೆಸ್ ಕಾರ್ಯಕರ್ತರ ಸಮರ- ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭುಗಿಲೆದ್ದ ಆಕ್ರೋಶ

    1957-58ರಲ್ಲಿ ಹಾಗೂ 2018ರಲ್ಲೂ ಚಿನ್ನದ ಲೇಪನ ಕಾರ್ಯ ಯಾವುದೇ ಅಡೆತಡೆಗಳಿಲ್ಲದೇ ನಡೆದಿದೆ. ಈ ಬಾರಿಯೂ ಚಿನ್ನದ ಲೇಪನ ಕಾರ್ಯ ಮುಕ್ತವಾಗಿ ನಡೆಯಲಿದೆ. ಭಕ್ತರು ಎಂದಿನಂತೆ ದರ್ಶನ ಪಡೆದುಕೊಳ್ಳಬಹುದಾಗಿದೆ ಎಂದು ಮುಖ್ಯ ಅರ್ಚಕರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 8 ತಿಂಗಳು ಬಂದ್ ಆಗಲಿದೆ ತಿರುಪತಿಯ ಗರ್ಭಗುಡಿ!

    8 ತಿಂಗಳು ಬಂದ್ ಆಗಲಿದೆ ತಿರುಪತಿಯ ಗರ್ಭಗುಡಿ!

    ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ (Tirupati Tirumala Temple) ಮುಖ್ಯ ಗರ್ಭಗುಡಿಯನ್ನು (Sanctum) 2023ರ ಹೊಸ ವರ್ಷದಲ್ಲಿ ಕನಿಷ್ಠ 6 ರಿಂದ 8 ತಿಂಗಳು ಮುಚ್ಚುವ ಸಾಧ್ಯತೆಯಿದೆ.

    ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ (ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು (Gold Plating) ಬದಲಿಸಲು ತಿರುಮಲ ತಿರುಪತಿ ದೇವಸ್ಥಾನಂ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪಾಸಿಟಿವ್ ಬಂದ್ರೆ ಕ್ವಾರಂಟೈನ್‌

    ನೂತನ ಚಿನ್ನದ ಲೇಪನ (Gold Plating) ಕಾರ್ಯ ಪೂರ್ಣಗೊಳ್ಳುವವರೆಗೆ ದೇವಸ್ಥಾನದ ಸಮೀಪ ತಾತ್ಕಾಲಿಕವಾಗಿ ವೆಂಕಟೇಶ್ವರ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಫೆಬ್ರವರಿಯಲ್ಲಿ ಕೆಲಸ ಆರಂಭಗೊಳ್ಳಲಿದ್ದು, ಈ ಚಿನ್ನದ ಲೇಪನದ ಕಾರ್ಯ ಪೂರ್ಣಗೊಳ್ಳಲು 6 ತಿಂಗಳು ಬೇಕಾಗಬಹುದು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್ ತಿಳಿಸಿದ್ದಾರೆ.

    ಈ ಸಮಯದಲ್ಲಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯೋದಕ್ಕಾಗಿ ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಟ್ರಸ್ಟ್ನ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಬ್ಲಾಸ್ಟ್- ಅಂಗಡಿಯಲ್ಲಿದ್ದ ವ್ಯಕ್ತಿಗೆ ಗಂಭೀರ ಗಾಯ

    `ಆಗಮ ಶಾಸ್ತç’ ಸಲಹೆಗಾರರು (ಆಗಮ ಶಾಸ್ತ್ರವು ದೇವಾಲಯದ ನಿರ್ಮಾಣಗಳು ಮತ್ತು ಆಚರಣೆಗಳ ನಡವಳಿಕೆಯ ಬಗ್ಗೆ ವ್ಯವಹರಿಸುವ ಪುರಾತನ ಗ್ರಂಥವಾಗಿದೆ), ಪುರೋಹಿತರು, ಸಿವಿಲ್ ಎಂಜಿನಿಯರ್‌ಗಳು ಮತ್ತು ಇತರ ತಜ್ಞರೊಂದಿಗೆ ಸುದೀರ್ಘ ಚರ್ಚೆ ಮತ್ತು ಸಮಾಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಮೂಲ ದೇವಾಲಯವನ್ನು ಪುನಃಸ್ಥಾಪಿಸುವವರೆಗೆ, ಎಲ್ಲಾ ದೈನಂದಿನ ಆಚರಣೆಗಳನ್ನು ತಾತ್ಕಾಲಿಕ ದೇವಾಲಯದಲ್ಲಿ ಮಾಡಲಾಗುವುದು ಮತ್ತು ಭಕ್ತರಿಗೆ ದೇವರ ದರ್ಶನವನ್ನು ಇಲ್ಲೇ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]