ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಇಂದು (ಆ.22) 69ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪತ್ನಿ ಸುರೇಖಾ (Wife Surekha) ಜೊತೆ ತಿರುಪತಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:Kantara Chapter 1: ಕಳರಿಪಯಟ್ಟು ಕಲಿಕೆಯ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚಿರಂಜೀವಿ ಅವರು ತಿರುಪತಿ ಸನ್ನಿಧಿಗೆ ಭೇಟಿ ಕೊಡುವ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ನಟನ ಹುಟ್ಟುಹಬ್ಬದ ಹಿನ್ನೆಲೆ ‘ವಿಶ್ವಾಂಭರ’ (Vishwambhara) ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಮೆಗಾ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದೆ ಚಿತ್ರತಂಡ.
ತ್ರಿಶೂಲ ಹಿಡಿದು ಸಖತ್ ಮಾಸ್ ಲುಕ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಜೊತೆಗೆ ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ.
ಅಂದಹಾಗೆ, ‘ವಿಶ್ವಾಂಭರ’ ಸಿನಿಮಾದಲ್ಲಿ ಚಿರಂಜೀವಿ ಜೊತೆ ತ್ರಿಷಾ, ಮೀನಾಕ್ಷಿ ಚೌಧರಿ, ಕನ್ನಡದ ನಟಿ ಆಶಿಕಾ ರಂಗನಾಥ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಜ.25ರಂದು ಸಿನಿಮಾ ಬಿಡುಗಡೆಯಾಗಲಿದೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಪುನೀತ್ ರಾಜ್ ಕುಮಾರ್ ಫೋಟೋ ಮತ್ತು ನಾಡಧ್ವಜವನ್ನು ತೆರುವುಗೊಳಿಸಿರುವ ಟಿಟಿಡಿ ನಡೆಗೆ ಕರ್ನಾಟಕ ರಾಜ್ಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತು ದೊಡ್ಮನೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಸ್ಪಷ್ಟನೆಗಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
ಕಾರಿನ ಮೇಲಿದ್ದ ಅಪ್ಪು ಫೋಟೋ ಮತ್ತು ನಾಡಧ್ವಜವನ್ನು ತೆಗೆಸುತ್ತಿರುವ ವಿಡಿಯೋ ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲೇ ಅಕ್ಷರ ರೂಪದ ಪ್ರತಿಭಟನೆಯ ದಾಖಲಿಸಲಾಗುತ್ತಿತ್ತು. ಇದೀಗ ದೇವಸ್ಥಾನಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ
ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ದೇವರ ರೀತಿಯಲ್ಲೇ ಆರಾಧಿಸುತ್ತಿದ್ದಾರೆ. ಅವರು ಮಾಡಿದ ಪುಣ್ಯದ ಕೆಲಸಗಳು ದೇವರಿಗೆ ಮಾಡಿದ ಸೇವೆಯಷ್ಟೇ ಪವಿತ್ರವಾಗಿವೆ. ಹೀಗಿದ್ದಾಗಲೂ ಅವರ ಫೋಟೋವನ್ನು ತಗೆದರೆ ಮಾತ್ರ ದೇವಸ್ಥಾನಕ್ಕೆ ಹೋಗಬಹುದು ಎನ್ನುವ ನಡೆ ಸರಿಯಾದದ್ದಲ್ಲ. ಇದನ್ನು ಪ್ರಶ್ನಿಸಿ, ಸ್ಪಷ್ಟನೆಗಾಗಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಾರೆ.
ಅಮರಾವತಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಿತ್ತಿರುವ ಜಿಲೇಬಿ ಪ್ರಸಾದದ ಬೆಲೆಯನ್ನು 100 ರಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ದೇವಸ್ಥಾನದಲ್ಲಿ ಆರ್ಜಿತ ಸೇವೆ ಸಂದರ್ಭದಲ್ಲಿ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಈ ಗುರುವಾರ ವಿಶೇಷ ಪ್ರಸಾದವನ್ನು ತೆರೆದ ಕೌಂಟರ್‌ಗಳಿಂದ ಭಕ್ತರಿಗೆ ವಿತರಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸುವ ಸ್ಥಳವನ್ನು ತಿರುಮಲ ದೇವಾಲಯದ ಒಳಗಿನ ಪಾಡಿ ಪೋಟುನಿಂದ ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್‍ಗೆ ಬದಲಾಯಿಸಲಾಗುತ್ತದೆ ಎಂದು ದೇವಸ್ಥಾನ ಟ್ರಸ್ಟ್ ಹೇಳಿದೆ.
ಟಿಟಿಡಿ ವಿಶ್ವದ ಅತ್ಯಂತ ಗೌರವಾನ್ವಿತ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಸಬ್ಸಿಡಿ ದರದಲ್ಲಿ ಅಥವಾ ಕನಿಷ್ಠ ವೆಚ್ಚದ ಆಧಾರದ ಮೇಲೆ ಪ್ರಸಾದವನ್ನು ನೀಡಬೇಕು. ಆದರೆ ಇಲ್ಲಿ ಜಿಲೇಬಿಯನ್ನು ಮಾರಾಟ ಮಾಡುವ ಮೂಲಕ ಶೇ.239 ಲಾಭ ಗಳಿಸಲು ಪ್ರಯತ್ನಿಸುತ್ತಿದೆ. ಪ್ರಸಾದವು ಅದರ ತಯಾರಿಕೆಯ ವೆಚ್ಚಕ್ಕಿಂತ ಹೆಚ್ಚು, ಇದು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಟಿಡಿಪಿ ಶಾಸಕ ತಿಳಿಸಿದ್ದಾರೆ. ಇದನ್ನೂ ಓದಿ:ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ- ವೆಲ್ಲೂರಿನಲ್ಲಿ ತೃತೀಯಲಿಂಗಿಗೆ ಗೆಲುವು
ಮಧ್ಯವರ್ತಿಗಳು ಕಾಳ ದಂಧೆಯಲ್ಲಿ ಒಂದು ಸೆಟ್‍ಗೆ 2,000 ರೂ.ನಂತೆ ಮಾರುವುದನ್ನು ತಡೆಯಲು ಜೂನ್ 2021 ರಲ್ಲಿ, ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್‍ಗೆ ಪ್ರಸ್ತುತ 100 ಕ್ಕೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲ ಸೆಟ್ ಅನ್ನು 2,000ಕ್ಕೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿ ಮಾಡುವ ವೆಚ್ಚ 147.50 ಆಗಿದೆ. ಇದನ್ನೂ ಓದಿ:ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ
ಟ್ರಸ್ಟ್ ಬೋರ್ಡ್ ಈ ಸಂಬಂಧ ವಿವರವಾದ ಚರ್ಚೆಯನ್ನು ನಡೆಸಿದೆ. ಬೆಲೆಯನ್ನು 500 ರೂ.ಗೆ ಹೆಚ್ಚಿಸಲು ನಿರ್ಧರಿಸಿತು. ಬೆಲೆ ಏರಿಕೆಯಿಂದಾಗಿ ಟಿಟಿಡಿ ಶೇ.239 ರಷ್ಟು ಹೆಚ್ಚುವರಿ ಲಾಭವನ್ನು ಪಡೆಯುತ್ತದೆ. ಟಿಟಿಡಿ ಟ್ರಸ್ಟ್ ಬೋರ್ಡ್ ಕಾಳದಂಧೆ ನಿಲ್ಲಿಸುವ ಉದ್ದೇಶದಿಂದ ಐದು ಪಟ್ಟು ಹೆಚ್ಚಿಸಿದ್ದಾರೆ ಎಂದು ಆಂಧ್ರಪ್ರದೇಶದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷ ಪಯ್ಯವುಲ ಕೇಶವ್ ಹೇಳಿದ್ದಾರೆ.
ಟಿಟಿಡಿ ಟ್ರಸ್ಟ್‍ನ ಮಾಜಿ ಸದಸ್ಯ ಜಿ.ಭಾನುಪ್ರಕಾಶ್ ರೆಡ್ಡಿ ಕೂಡ ಬೆಲೆ ಏರಿಕೆ ತಪ್ಪು ಎಂದಿದ್ದಾರೆ. ಭಕ್ತರಿಗೆ ಸಬ್ಸಿಡಿ ದರದಲ್ಲಿ ಪ್ರಸಾದವನ್ನು ಯಾವಾಗಲೂ ನೀಡಬೇಕು. ಆದರೆ ಇಲ್ಲಿ ಟಿಟಿಡಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣಕ್ಕೆ ಭಕ್ತರನ್ನು ಸುಲಿಗೆ ಮಾಡುತ್ತಿದೆ. ಇದು ಆಕ್ಷೇಪಾರ್ಹವಾಗಿದೆ ಎಂದು ವಿರೋಧಿಸಿದ್ದಾರೆ.
ಹೈದರಾಬಾದ್: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಈ ವರ್ಷ ಕೋಟಿ, ಕೋಟಿ ಹಣ ಹರಿದು ಬಂದಿದ್ದು, ಸುಮಾರು 833 ಕೋಟಿ ರೂಪಾಯಿ ಸಂಗ್ರಹವಾಗಿದೆ.
ತಿರುಪತಿ ದೇವಾಲಯದ (ಟಿಟಿಡಿ) ಮಂಡಳಿಯು ನಡೆಸಿದ ಹುಂಡಿ ಎಣಿಕೆಯಲ್ಲಿ 2021ರ ಜನವರಿ 1 ರಿಂದ ಡಿಸೆಂಬರ್ 30ರವರೆಗೂ 833 ಕೋಟಿ ರೂ. ಸಂಗ್ರಹವಾಗಿದೆ. ಕೊರೊನಾ ಎರಡನೇ ಅಲೆಯ ನಂತರ ಈ ವರ್ಷದಲ್ಲಿ ಸುಮಾರು 1.4 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯ ಆಡಳಿತ ಮಂಡಳಿಯು 5.96 ಕೋಟಿ ಲಡ್ಡು ಪ್ರಸಾದವನ್ನು ಭಕ್ತರಿಗೆ ನೀಡಿದೆ ಮತ್ತು ಸುಮಾರು 1.37 ಕೋಟಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ 1.4 ಕೋಟಿ ಭಕ್ತರಲ್ಲಿ 48.75 ಲಕ್ಷ ಮಂದಿ ದೇವರಿಗೆ ಮುಡಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ