Tag: ತಿರುಪತಿ ತಿಮ್ಮಪ್ಪ

  • ತಿರುಮಲ ಘಾಟ್‍ನಲ್ಲಿ ಉರುಳಿದ ಬೃಹತ್ ಬಂಡೆ – ತಿಮ್ಮಪ್ಪನ ದರ್ಶನಕ್ಕೆ ನೋ ಎಂಟ್ರಿ

    ತಿರುಮಲ ಘಾಟ್‍ನಲ್ಲಿ ಉರುಳಿದ ಬೃಹತ್ ಬಂಡೆ – ತಿಮ್ಮಪ್ಪನ ದರ್ಶನಕ್ಕೆ ನೋ ಎಂಟ್ರಿ

    ತಿರುಪತಿ: ತಮಿಳುನಾಡು, ಆಂಧ್ರದ ರಾಯಲಸೀಮೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಮತ್ತೊಮ್ಮೆ ತಿರುಮಲ ಘಾಟ್‍ನಲ್ಲಿ ಬೃಹತ್ ಬಂಡೆ ಉರುಳಿದೆ.

    ಅತೀವೃಷ್ಠಿಯ ಪರಿಣಾಮ ತಿರುಪತಿಯಿಂದ ತಿರುಮಲಕ್ಕೆ ತೆರಳುವ ಘಾಟ್ ರಸ್ತೆ ಮೇಲೆ ಬೃಹತ್ ಬಂಡೆ ಕಲ್ಲುಗಳು ಉರುಳಿ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದ್ದು, ತಾತ್ಕಾಲಿಕವಾಗಿ ತಿರುಪತಿ ತಿಮ್ಮಪ್ಪನ ದರ್ಶನ ರದ್ದು ಮಾಡಲಾಗಿದೆ. ಇದನ್ನೂ ಓದಿ: ಜಗ್ಗೇಶ್ ಅಭಿಮಾನಿಗಳಿಂದ ಪುನೀತ್ ಹೆಸರಲ್ಲಿ ವೃದ್ಧೆಗೆ ಸೂರು

    ತಿರುಮಲಕ್ಕೆ ತೆರಳುವ 2ನೇ ಘಾಟ್‍ದ ರಸ್ತೆಯಲ್ಲಿ ಎಂದರೆ ತಿಮ್ಮಪ್ಪನ ದೇಗುಲದಿಂದ ಸುಮಾರು 16 ಕಿ.ಮೀ ದೂರದಲ್ಲಿ ಭೂಕುಸಿತ ಉಂಟಾಗಿದೆ. ಒಂದು ತಿಂಗಳ ಅವಧಿಯಲ್ಲಿ ತಿರುಮಲ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು ಇದು ಎರಡನೇ ಬಾರಿ. ಈ ಭೂಕುಸಿತಕ್ಕೆ ಭಾರೀ ಮಳೆಯೇ ಕಾರಣವಾಗಿದ್ದು, ನವೆಂಬರ್ 11ರಂದು ಘಾಟ್ ರಸ್ತೆಗಳನ್ನು ಮುಚ್ಚಲಾಗಿತ್ತು. ನವೆಂಬರ್ 20ರಂದು ಮತ್ತೆ ಘಾಟ್ ರಸ್ತೆಯನ್ನು ತೆರೆಯಲಾಗಿತ್ತು. ಆದರೆ ಇದೀಗ ಮತ್ತೆ ಭೂಕುಸಿತವಾಗಿದೆ.

    ನವೆಂಬರ್‌ನಲ್ಲಿ ದೇಶಾದ್ಯಂತ 645 ಬಾರಿ ಹೆಚ್ಚು ಮಳೆ, 168 ಬಾರಿ ಅತೀ ಹೆಚ್ಚು ಮಳೆ ಆಗಿದೆ. 11 ಬಾರಿ 204 ಸೆಂಟಿಮೀಟರ್‍ಗಿಂತ ಹೆಚ್ಚು ಮಳೆ ಬಿದ್ದಿದೆ. ಇದು ಕಳೆದ ವರ್ಷದ ಮಳೆ ಸಮವಾಗಿದೆ. ಐದು ವರ್ಷಗಳಲ್ಲಿಯೇ ನವೆಂಬರ್‌ನಲ್ಲಿ ಅತೀ ಮಳೆ ಆಗಿದೆ ಎಂದು ಐಎಂಡಿ ತಿಳಿಸಿದೆ.

  • ಕ್ಷೇತ್ರದ ಒಳಿತಿಗಾಗಿ ಕೈ ಶಾಸಕಿ ನಿಂಬಾಳ್ಕರ್ ತಿರುಪತಿ ಪಾದಯಾತ್ರೆ

    ಕ್ಷೇತ್ರದ ಒಳಿತಿಗಾಗಿ ಕೈ ಶಾಸಕಿ ನಿಂಬಾಳ್ಕರ್ ತಿರುಪತಿ ಪಾದಯಾತ್ರೆ

    ಕೋಲಾರ: ನೆರೆಯಿಂದ ತತ್ತರಿಸಿರುವ ಕ್ಷೇತ್ರದ ಜನರನ್ನ ಕಾಪಾಡು ತಿಮ್ಮಪ್ಪ ಎಂದು ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಬೆಂಗಳೂರಿನಿಂದ ತಿರುಪತಿಗೆ ಮಾಡುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

    ಶನಿವಾರ ಕೋಲಾರ ತಾಲೂಕಿನ ಮೂಲಕ ಹಾದುಹೋಗಿ ಇಂದು ಮುಳಬಾಗಿಲು ತಾಲೂಕಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಿಂದ ತಿರುಪತಿಗೆ ಪಾದಯಾತ್ರೆ ಮಾಡುತ್ತಿರುವ ಶಾಸಕಿ, ಇಂದು ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಪ್ರಾರ್ಥನಾ ಯಾತ್ರೆ ಮಾಡಿದರು.

    ನೆರೆಯಿಂದ ತತ್ತರಿಸಿರುವ ಬೆಳಗಾವಿ ಹಾಗೂ ಖಾನಾಪುರ ಕ್ಷೇತ್ರದ ಸಂತ್ರಸ್ತರಿಗೆ ತಿರುಪತಿ ತಿಮ್ಮಪ್ಪ ದಯೆ ತೋರಬೇಕು. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಂತ್ರಸ್ತರ ಬದುಕನ್ನು ಹಸನುಗೊಳಿಸಬೇಕೆಂದು ತಿಮ್ಮಪ್ಪನ ದರ್ಶಕ್ಕೆ ಪ್ರಾರ್ಥನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

    ತಮ್ಮ ಪತಿ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರೊಂದಿಗೆ ದರ್ಶನಕ್ಕೆ ತೆರಳಿರುವ ಶಾಸಕಿ, ಪ್ರತಿದಿನ 30 ಕಿಲೋಮೀಟರ್‍ಗಳಷ್ಟು ಪಾದಯಾತ್ರೆ ಮಾಡುತ್ತಿದ್ದಾರೆ.