Tag: ತಿರುಪತಿ ತಿಮ್ಮಪ್ಪ ಸನ್ನಿಧಿ

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಗಿಣಿ ದ್ವಿವೇದಿ

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಗಿಣಿ ದ್ವಿವೇದಿ

    ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ (Ragini Dwivedi) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ನಟಿ ತೆರಳಿದ್ದಾರೆ. ಇದನ್ನೂ ಓದಿ:ಒಮನ್‌ನಲ್ಲಿ ವಿಜಯ್, ರಶ್ಮಿಕಾ ಸುತ್ತಾಟ- ಬೀಚ್‌ ಫೋಟೋದಿಂದ ಸಿಕ್ಕಿಬಿದ್ದ ಜೋಡಿ

    ಸಿನಿಮಾಗೆ ಕೆಲಸಗಳಿಗೆ ನಟಿ ಬ್ರೇಕ್ ಹಾಕಿ ರಾಮ ನವಮಿಯಂದು (ಏ.6) ರಾಗಿಣಿ ತಿರುಪತಿ ತಿಮ್ಮಪ್ಪನ (Tirupati Tirumala Temple) ದರ್ಶನ ಪಡೆದಿದ್ದಾರೆ. ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಅದಷ್ಟೇ ಅಲ್ಲ, ಶ್ರೀಕಾಳಹಸ್ತಿ ಮತ್ತು ಪದ್ಮಾವತಿ ದೇವಸ್ಥಾನಕ್ಕೂ ಅವರು ತೆರಳಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಗಣೇಶ್‌, ಅಮೃತಾ ಅಯ್ಯರ್‌ ಸಿನಿಮಾಗೆ ಸಿಕ್ತು ಅದ್ಧೂರಿ ಚಾಲನೆ

    ಅಂದಹಾಗೆ, ‘ಪೊಗರು’ ಡೈರೆಕ್ಟರ್ ನಂದ ಕಿಶೋರ್ ಅವರು ಮೋಹನ್ ಲಾಲ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟಿ ರಾಗಿಣಿ ದ್ವಿವೇದಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷ ಅ.16ರಂದು ರಿಲೀಸ್ ಆಗಲಿದೆ.

    ಬಾಲಿವುಡ್, ತೆಲುಗು ಸಿನಿಮಾಗಳಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ಉತ್ತಮ ಪಾತ್ರ ಎಂದೆನಿಸಿದರೆ ಪರಭಾಷಾ ಸಿನಿಮಾದಲ್ಲೂ ನಟಿ ಕಾಣಿಸಿಕೊಳ್ತಿದ್ದಾರೆ.

  • ತಿಮ್ಮಪ್ಪನ ಸನ್ನಿಧಿಯಲ್ಲಿ ದಾಖಲೆಯ ಕೆಎಂಎಫ್ ತುಪ್ಪ ರವಾನೆ – ಯುಗಾದಿಗಾಗಿ ತುರ್ತು 2 ಸಾವಿರ ಟನ್‌ಗೆ ಡಿಮ್ಯಾಂಡ್

    ತಿಮ್ಮಪ್ಪನ ಸನ್ನಿಧಿಯಲ್ಲಿ ದಾಖಲೆಯ ಕೆಎಂಎಫ್ ತುಪ್ಪ ರವಾನೆ – ಯುಗಾದಿಗಾಗಿ ತುರ್ತು 2 ಸಾವಿರ ಟನ್‌ಗೆ ಡಿಮ್ಯಾಂಡ್

    -ವಾರ್ಷಿಕವಾಗಿ 5 ಸಾವಿರ ಟನ್ ತುಪ್ಪಕ್ಕೆ ಬೇಡಿಕೆಯಿಟ್ಟಿರುವ ಟಿಟಿಡಿ

    ಅಮರಾವತಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ (Tirupati Timmappa Temple) ದಾಖಲೆಯ ಕೆಎಂಎಫ್ (KMF) ನಂದಿನಿ ತುಪ್ಪ ರವಾನೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ.

    ಹೌದು, ತಿರುಪತಿಯಲ್ಲಿ ಈ ಹಿಂದೆ ಬೇರೆ ಬ್ರ‍್ಯಾಂಡ್ ತುಪ್ಪ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ಆದರೆ ಇದೀಗ ಲಡ್ಡು ತಯಾರಿಕೆಗಾಗಿ ಕೆಎಂಎಫ್ ನಂದಿನಿ ತುಪ್ಪವನ್ನು ಮಾತ್ರ ಬಳಸುತ್ತಿದ್ದು, ಇದರ ಹೊರತಾಗಿ ಬೇರೆ ಯಾವುದೇ ತುಪ್ಪವನ್ನು ಬಳಸುತ್ತಿಲ್ಲ. ಸದ್ಯ ಯುಗಾದಿ ಸಮೀಪಿಸುತ್ತಿದ್ದು, ಈ ಹಿನ್ನೆಲೆ ಲಡ್ಡು ತಯಾರಿಕೆಗಾಗಿ ತುರ್ತು 2 ಸಾವಿರ ಟನ್ ತುಪ್ಪವನ್ನು ಕಳುಹಿಸಿಕೊಡುವಂತೆ ಟಿಟಿಡಿ (TTD) ಕೆಎಂಎಫ್‌ಗೆ ಸೂಚಿಸಿದ್ದು, ಈ ತಿಂಗಳಲ್ಲಿ ಸಪ್ಲೈ ಮಾಡುವಂತೆ ತಿಳಿಸಿದೆ.ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿ- ಕನ್ನಡಕ್ಕೆ ಬಂದ ‘ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್

    ಸತತವಾಗಿ ಕೆಎಂಎಫ್ ನಂದಿನಿಗೆ ಮಾತ್ರ ಟಿಟಿಡಿ ಟೆಂಡರ್ ಕೊಡುತ್ತಿದೆ. ಈ ಮೊದಲು ತಿಮ್ಮಪ್ಪನ ಸನ್ನಿಧಾನಕ್ಕೆ ಎರಡು ದಿನಕ್ಕೆ ಒಮ್ಮೆ ತುಪ್ಪ ರವಾನೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ದಿನವೂ ತುಪ್ಪ ರವಾನೆಯಾಗುತ್ತಿದೆ. ಈ ವರ್ಷ 5 ಸಾವಿರ ಟನ್ ತುಪ್ಪವನ್ನು ರವಾನಿಸುವಂತೆ ಟಿಟಿಡಿ ಕೆಎಂಎಫ್‌ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ 600 ಟನ್ ತುಪ್ಪ ಕಳುಹಿಸಿಕೊಡಲಾಗಿದೆ.

    ಬೇಸಿಗೆ ಕಾಲವಾಗಿರುವುದರಿಂದ ಹಾಲಿನ ಸಂಗ್ರಹದಲ್ಲಿಯೂ ಕುಸಿತ ಕಂಡಿದ್ದು, ಸಂಗ್ರಹವಿರುವ ಬೆಣ್ಣೆಯಲ್ಲಿ ಶೀಘ್ರ ತುಪ್ಪ ತಯಾರಿಕೆ ಮಾಡುವಂತೆ ಕೆಎಂಎಫ್ ಯೂನಿಯನ್‌ಗಳಿಗೆ ಸೂಚನೆ ನೀಡಿದೆ.ಇದನ್ನೂ ಓದಿ: ನಟಿ ರನ್ಯಾಗೆ ಸರ್ಕಾರ ಕ್ಲೀನ್‌ಚಿಟ್‌ ಕೊಟ್ಟರೂ ಆಶ್ಚರ್ಯ ಇಲ್ಲ: ಸುರೇಶ್‌ ಬಾಬು