Tag: ತಿಮ್ಮೇಗೌಡ

  • 1 ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆ – ಈಗ ಇನ್ಸ್‌ಪೆಕ್ಟರ್‌ ನೇಣಿಗೆ ಶರಣು

    1 ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆ – ಈಗ ಇನ್ಸ್‌ಪೆಕ್ಟರ್‌ ನೇಣಿಗೆ ಶರಣು

    ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ತಿಮ್ಮೇಗೌಡ (Thimme Gowda) ಒಂದು ತಿಂಗಳ ಹಿಂದೆಯಷ್ಟೇ ಸಿಸಿಬಿಯ (CCB) ಆರ್ಥಿಕ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ ಆಗಿ ವರ್ಗಾವಣೆಯಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ

    98ರ ಬ್ಯಾಚ್‌ ಅಧಿಕಾರಿಯಾಗಿದ್ದ ತಿಮ್ಮೇಗೌಡ ಬಿಡದಿಯಲ್ಲಿ(Bidadi) ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ತಿಮ್ಮೇಗೌಡ ಬಹಳ ಟೆನ್ಶನ್‌ನಲ್ಲಿ ಇದ್ದರು.

    ಬಿಡದಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಯಾವ ಕಾರಣಕ್ಕೆ ಟೆನ್ಷನ್‌ನಲ್ಲಿ ಇದ್ದೇನೆ ಎನ್ನುವುದರ ಬಗ್ಗೆ ಯಾರ ಜೊತೆಗೂ ಹೇಳಿಕೊಂಡಿರಲಿಲ್ಲ. ಇದನ್ನೂ ಓದಿ: ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ದಿಢೀರ್‌ ರದ್ದು

    ವಾಸವಾಗಿದ್ದ ಮನೆಯಿಂದ 15 ಕಿ.ಮೀ ದೂರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಲ್ನೋಟಕ್ಕೆ ಹಣಕಾಸು ತೊಂದರೆಯಿಂದ ಆತ್ಮಹತ್ಮೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

  • BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿಗೆ ಪಿತೃ ವಿಯೋಗ

    BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿಗೆ ಪಿತೃ ವಿಯೋಗ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ತಂದೆ ನಿಧನರಾಗಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ನನ್ನಾತ್ಮಬಲದ ಭಾಗವೊಂದು ಇಂದು ನನ್ನನ್ನಗಲಿದೆ. ಮೊದಲ ಬಾರಿಗೆ ಅಪ್ಪನಿಲ್ಲದೆ ಲೋಕವನ್ನು ನಾನೆದುರಿಸಬೇಕಾಗಿದೆ. ಓಂಶಾಂತಿ ಅಣ್ಣ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ತಿಮ್ಮೇಗೌಡ(92) ವಯಸ್ಸಿನವರಾಗಿದ್ದು, ವಯೋಸಹಜವಾದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಸಲಾಗಿತ್ತ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

    ರವಿವಾರ ಸ್ವಗ್ರಾಮ ಚಿಕ್ಕಮಾಗರಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮೃತರು ಪತ್ನಿ, ಸಿ.ಟಿ ರವಿ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

  • ಅಜೇಯ್ ರಾವ್ ಈಗ ಶೋಕಿವಾಲ

    ಅಜೇಯ್ ರಾವ್ ಈಗ ಶೋಕಿವಾಲ

    ಬೆಂಗಳೂರು: ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ, ಅಜೇಯ್ ರಾವ್ ನಾಯಕರಾಗಿ ಅಭಿನಯಿಸುತ್ತಿರುವ ಪ್ರೊಡಕ್ಷನ್ ನಂ.7 ಚಿತ್ರಕ್ಕೆ ‘ಶೋಕಿವಾಲ’ ಎಂದು ಹೆಸರಿಡಲಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಚನ್ನಪಟ್ಟಣ, ಮಾಗಡಿ, ಮಂಡ್ಯ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

     

    View this post on Instagram

     

    Watch the motion poster of SHOKIWALA on YouTube released today

    A post shared by Krishna Ajai Rao (@krishna_ajai_rao) on


    ಜಾಕಿ (ಬಿ.ತಿಮ್ಮೇಗೌಡ) ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಭಾಗ್ಯದ ಬಳೆಗಾರ’, ‘ತಮಸ್ಸು’ ‘ದೇವರು ಕೊಟ್ಟ ತಂಗಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಲಕ್ಕಿ, ಅಧ್ಯಕ್ಷ, ರನ್ನ, ವಿಕ್ಟರಿ, ಕೆಜಿಎಫ್ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ತಿಮ್ಮೇಗೌಡ ಈ ಚಿತ್ರದ ಮೂಲಕ ಜಾಕಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.

    ಈ ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣವಿರುವ ಶೋಕಿವಾಲನಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ.ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್‍ಪೀರ್ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಾಲು ಕುಮುಟ ಅವರ ನಿರ್ಮಾಣ ಮೇಲ್ವಿಚಾರಣೆಯಿದೆ.

    ಅಜೇಯ್ ರಾವ್ ಅವರಿಗೆ ನಾಯಕಿಯಾಗಿ ಸಂಜನ ಆನಂದ್ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್ ಶೆಟ್ಟಿ, ತಬಲ ನಾಣಿ, ಅರುಣ ಬಾಲರಾಜ್, ನಾಗರಾಜಮೂರ್ತಿ, ಲಾಸ್ಯ, ವಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಬೆಂಗ್ಳೂರು ವಿವಿ ಕುಲಪತಿ ಹುದ್ದೆಗೆ ಭಾರೀ ಡಿಮ್ಯಾಂಡ್- 150 ಆಕಾಂಕ್ಷಿಗಳಿಂದ ಅರ್ಜಿ

    ಬೆಂಗ್ಳೂರು ವಿವಿ ಕುಲಪತಿ ಹುದ್ದೆಗೆ ಭಾರೀ ಡಿಮ್ಯಾಂಡ್- 150 ಆಕಾಂಕ್ಷಿಗಳಿಂದ ಅರ್ಜಿ

    -ಶ್ರೀನಿವಾಸ್ ರಾವ್ ದಳವೆ
    ಬೆಂಗಳೂರು: ವಿಶ್ವ ವಿದ್ಯಾಲಯದ ಕುಲಪತಿ ಪೋಸ್ಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿಸಿ ಪೋಸ್ಟ್ ಗೆ ಯಾವ ಸಿಎಂ ಪೋಸ್ಟ್ ಗಿಂತಲೂ ಕಡಿಮೆ ಇಲ್ಲ ಅನ್ನುವಷ್ಟು ಮಟ್ಟಿಗೆ ಡಿಮ್ಯಾಂಡ್.

    ಕುಲಪತಿಯಾಗಿದ್ದ ಪ್ರೊ.ತಿಮ್ಮೇಗೌಡರ ಅವಧಿ ಫೆಬ್ರವರಿ ಮೊದಲ ವಾರದಲ್ಲಿ ಮುಗಿದಿದೆ. ಈ ಹುದ್ದೆಗೆ ಈಗ ಹತ್ತಲ್ಲ ಇಪ್ಪತ್ತಲ್ಲ, ಬರೋಬ್ಬರಿ 150 ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.

    ಯಾಕಿಷ್ಟು ಅರ್ಜಿ ಸಲ್ಲಿಕೆ?: ಕಳೆದ ಜನವರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ, ಖಾಲಿಯಾಗಲಿರುವ ಬೆಂಗಳೂರು ಹಾಗೂ ಮೈಸೂರು ವಿವಿಗಳ ಕುಲಪತಿ ಹುದ್ದೆಗಾಗಿ ಜಾಹೀರಾತು ನೀಡಿತ್ತು. ಹೀಗಾಗಿ ಇಷ್ಟೊಂದು ಅರ್ಜಿಗಳು ಸಲ್ಲಿಕೆಯಾಗಿವೆ.

    ಯಾಕಿಷ್ಟು ಡಿಮ್ಯಾಂಡ್!: ಬೆಂಗಳೂರು ಹೇಳಿ ಕೇಳಿ ಹೈಟೆಕ್ ಸಿಟಿ, ಯಾವುದಕ್ಕೂ ಕೊರತೆ ಇಲ್ಲ. ಹೀಗಾಗಿ ಹೆಚ್ಚು ಜನ ಇಲ್ಲೆ ಕುಲಪತಿ ಆಗಬೇಕು ಅಂತ ಇಚ್ಛಿಸುತ್ತಾರೆ. ಇದಲ್ಲದೆ ಅತೀ ಹೆಚ್ಚು ಕಾಲೇಜುಗಳು ಬೆಂಗಳೂರು ವಿವಿ ಕೆಳಗೆ ಬರುತ್ತವೆ. ಮಾತ್ರವಲ್ಲ ಸರ್ಕಾರದಿಂದ ಹೆಚ್ಚು ಅನುದಾನ ಬರುತ್ತೆ. ಇಷ್ಟೆಲ್ಲದರ ಜೊತೆ ನೆಮ್ಮದಿಯ ಜೀವನ ಸಿಗುತ್ತೆ. ಹೀಗಾಗಿ ಎಲ್ರಿಗೂ ಬೆಂಗಳೂರು ವಿವಿನೇ ಬೇಕು.

    ಆಯ್ಕೆ ಹೇಗೆ?: ಸದ್ಯ ಆಕಾಂಕ್ಷಿಗಳು ಏನೋ ಅರ್ಜಿ ಸಲ್ಲಿಸಿದ್ದಾರೆ. ವಿಸಿ ನೇಮಕ ಸಂಬಂಧ ಸರ್ಚ್ ಕಮಿಟಿಯನ್ನು ರಚಿಸಲಾಗಿದೆ. ಈ ಕಮಿಟಿ ಸದಸ್ಯರು 150 ಆಕಾಂಕ್ಷಿಗಳ ವಿವರ ನೋಡಿ ಅಂತಿಮವಾಗಿ ಮೂವರ ಹೆಸರು ಫೈನಲ್ ಮಾಡಬೇಕು.