Tag: ತಿಮ್ಮರಾಯಪ್ಪ

  • ವರ್ತೂರ್ ಸಂತೋಷ್ ಗೆ ಸನ್ಮಾನ ಮಾಡಿದ್ದ ಅಧಿಕಾರಿ ಎತ್ತಂಗಡಿ

    ವರ್ತೂರ್ ಸಂತೋಷ್ ಗೆ ಸನ್ಮಾನ ಮಾಡಿದ್ದ ಅಧಿಕಾರಿ ಎತ್ತಂಗಡಿ

    ಬಿಗ್ ಬಾಸ್ (Big Boss) ಮನೆಯಿಂದ ಬಂದಿರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿರುವ ವರ್ತೂರ್ ಸಂತೋಷ್ (Varthur Santhosh) ಅವರನ್ನು ನಿನ್ನೆ ಅವರ ಮನೆಯಲ್ಲಿ ಸನ್ಮಾನ ಮಾಡಿದ್ದ ವರ್ತೂರು ಠಾಣೆಯ ಎಸ್.ಐ ತಿಮ್ಮರಾಯಪ್ಪ (Thimmarayappa) ಅವರನ್ನು ಎತ್ತಂಗಡಿ ಮಾಡಲಾಗಿದೆ.

    ವರ್ತೂರು ಠಾಣೆಯಿಂದ ತಿಮ್ಮರಾಯಪ್ಪ ಅವರನ್ನು ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ನಿನ್ನ ವರ್ತೂರು ಮನೆಗೆ ತೆರಳಿದ್ದ ತಿಮ್ಮರಾಯಪ್ಪ, ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಸನ್ಮಾನ ಮಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ಕೇವಲ ವರ್ತೂರು ಪೊಲೀಸ್ ಠಾಣೆಯ ಎಸ್ಐ ತಿಮ್ಮರಾಯಪ್ಪ ಮಾತ್ರವಲ್ಲ,  ಠಾಣೆಯ ಸಿಬ್ಬಂದಿ ಕೂಡ ಈ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ನಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತೀಚಿಗೆ ಕೆಲ ತಿಂಗಳ ಹಿಂದೆ ವರ್ತೂರು ಸಂತೋಷ್ ಹುಲಿ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದಿದ್ದ.

     

    ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದಿರೋ ವಿಚಾರ ಗೊತ್ತಿದ್ದರು ಸಹ ಸನ್ಮಾನ ಮಾಡಿರುವ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು. ಸ್ವತಃ ಹಿರಿಯ ಅಧಿಕಾರಿಗಳು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಅದರಲ್ಲೂ ಯೂನಿಫಾರ್ಮ್ ನಲ್ಲಿಯೇ, ಸಿಬ್ಬಂದಿ ಗಳ ಜೊತೆಗೆ ಹೋಗಿ ಅಧಿಕಾರಿ ಸನ್ಮಾನ ಮಾಡಿದ್ದು ಬೇಸರಕ್ಕೂ ಕಾರಣವಾಗಿತ್ತು.

  • ಭಾಷಣದುದ್ದಕ್ಕೂ ಜೆಡಿಎಸ್ ಶಾಸಕ ತಿಮ್ಮರಾಯಪ್ಪರಿಗೆ ಕಾಮಿಡಿ ಪಂಚ್ ಕೊಟ್ಟ ಸಿಎಂ

    ಭಾಷಣದುದ್ದಕ್ಕೂ ಜೆಡಿಎಸ್ ಶಾಸಕ ತಿಮ್ಮರಾಯಪ್ಪರಿಗೆ ಕಾಮಿಡಿ ಪಂಚ್ ಕೊಟ್ಟ ಸಿಎಂ

    ತುಮಕೂರು: ಪಾವಗಡದ ತಿರುಮಣಿ ಸೋಲಾರ್ ಪಾರ್ಕ್ ವೀಕ್ಷಣೆ ಸಂದರ್ಭದ ಕಾರ್ಯಕ್ರಮದಲ್ಲಿ ತಮ್ಮ ಭಾಷಣದುದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕ ತಿಮ್ಮರಾಯಪ್ಪರನ್ನು ಕಿಚಾಯಿಸಿದ್ದಾರೆ.

    ಪದೇ ಪದೇ ತಿಮ್ಮರಾಯಪ್ಪರ ಹೆಸರನ್ನು ಪ್ರಸ್ತಾಪಿಸಿ ಕಾಮಿಡಿ ಪಂಚ್ ನೀಡಿದ್ದಾರೆ. ತುಂಗಭದ್ರಾ ನೀದಿಯ ಯೋಜನೆ ಕುರಿತಂತೆ ಪ್ರಸ್ತಾಪಿಸಿದ ಸಿಎಂ ಏ ತಿಮ್ಮರಾಯಪ್ಪ ತುಂಗಭದ್ರಾ ಯೋಜನೆ ನಮ್ಮ ಸರ್ಕಾರದ್ದು, ನಿಮ್ದು ಅಂತಾ ಹೇಳ್ಕೊಬೇಡ ಎಂದು ತಮಾಷೆಯಾಗಿಯೇ ಟಾಂಗ್ ನೀಡಿದರು.

    ಐದು ತಾಲೂಕಿಗೂ ಎಂಎಲ್‍ಎ ನಾ ನೀವು ಎಂದು ತಮಾಷೆಯಾಗಿ ಪಂಚ್ ನೀಡಿದರು. ಭಾಷಣದುದ್ದಕ್ಕೂ ತಿಮ್ಮರಾಯಪ್ಪರ ಹೆಸರು ತಮಾಷೆಯಾಗಿ ಸಿಎಂ ಬಳಸುತ್ತಿದ್ದರಿಂದ ಸಭೆಗೆ ಸೇರಿದವರೆಲ್ಲ ಶಿಳ್ಳೆ ಚಪ್ಪಾಳೆ ಹಾಕುತ್ತಿದ್ದರು.