ಮಂಡ್ಯ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾತ್ರವೇ ಇಲ್ಲದ ಪೊಲೀಸ್ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಅಡಿಷನಲ್ ಎಸ್ಪಿ ತಿಮ್ಮಯ್ಯ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗೃಹ ಇಲಾಖೆ ವರ್ಗಾವಣೆ ಮಾಡಿ ಇನ್ನೂ ಜಾಗ ತೋರಿಸಿಲ್ಲ.
ಮದ್ದೂರು ಪ್ರಕರಣದಲ್ಲಿ ತಿಮ್ಮಯ್ಯಗೆ ಹೆಚ್ಚುವರಿ ಜವಾಬ್ದಾರಿ ನೀಡಿಯೇ ಇರಲಿಲ್ಲ. ಹೀಗಿದ್ದರೂ ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಲ್ಲು ತೂರಾಟ ತಡೆಯಬೇಕಿದ್ದು ಮದ್ದೂರು ಇನ್‌ಸ್ಪೆಕ್ಟರ್ ಹಾಗೂ ಇತರ ಪೊಲೀಸರ ಕರ್ತವ್ಯವಾಗಿತ್ತು. ಸೋಮವಾರ ಪ್ರತಿಭಟನೆ ಬಂದೋಬಸ್ತ್ ನೇತೃತ್ವ ವಹಿಸಿದ್ದು ಎಸ್ಪಿ. ಕೇವಲ ಸ್ಥಳದಲ್ಲಿ ಬಂದೋಬಸ್ತ್ ಕೆಲಸ ಮಾಡುತ್ತಿದ್ದವರು ತಿಮ್ಮಯ್ಯ. ಹೀಗಿದ್ದರೂ ಸಹ ಅಮಾಯಕ ಅಧಿಕಾರಿಯನ್ನು ಸರ್ಕಾರ ಬಲಿಪಶು ಮಾಡಿದೆ ಎಂಬ ದೂಷಣೆ ಕೇಳಿಬಂದಿದೆ.
ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ಅನಂತನಾಗ್ ಹಾಗೂ ದೂದ್ ಪೇಡ ಎಂದೇ ಖ್ಯಾತರಾಗಿರುವ ದಿಗಂತ್ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ “ತಿಮ್ಮಯ್ಯ & ತಿಮ್ಮಯ್ಯ” ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಇತ್ತೀಚಿಗೆ ಈ ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಅನಂತನಾಗ್ ಹಾಗೂ ದಿಗಂತ್, ತಾತ – ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಬಾಂಧವ್ಯದ ಸನ್ನಿವೇಶಗಳೇ ಚಿತ್ರದ ಹೈಲೆಟ್. ಮೂವತ್ತು ವರ್ಷಗಳ ನಂತರ ತಾತ ಹಾಗೂ ಮೊಮ್ಮಗ ಭೇಟಿಯಾದಾಗ ಯಾವ ರೀತಿ ಇರಬಹುದು? ಎಂಬುದನ್ನು ಟೀಸರ್ ಮೂಲಕ ನಿರ್ದೇಶಕ ಸಂಜಯ್ ಶರ್ಮ ಮನಮುಟ್ಟುವಂತೆ ತೋರಿಸಿದ್ದಾರೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಪ್ರಶಂಸೆ ದೊರಕುತ್ತಿದೆ. ಇದನ್ನೂ ಓದಿ:ಸಾರಾ ಜೊತೆಗಿನ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ಕ್ರಿಕೆಟಿಗ ಶುಭಮನ್ ಗಿಲ್
ಗರುಡ ಮೋಷನ್ ಪಿಕ್ಚರ್ಸ್ ಪ್ರೈ ಲಿ ಲಾಂಛನದಲ್ಲಿ ರಾಜೇಶ್ ಶರ್ಮ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೂಲತಃ ಕನ್ನಡದವರೇ ಆಗಿರುವ ನಿರ್ದೇಶಕ ಸಂಜಯ್ ಶರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಸಂಜಯ್ ಶರ್ಮ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ. ಬಾಲಕೃಷ್ಣ ತೋಟ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಕೊಡಗು ಹಾಗೂ ಕುಣಿಗಲ್ ನಲ್ಲಿ ಚಿತ್ರೀಕರಣ ನಡೆದಿದೆ. ಅನಂತನಾಗ್, ದಿಗಂತ್, ಶುಭ್ರ ಅಯ್ಯಪ್ಪ, ರುಕ್ಮಿಣಿ ವಿಜಯಕುಮಾರ್, ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮ್ಮಿನಾಡ್, ಕೆ.ಎಸ್.ಶ್ರೀಧರ್, ಮಿಮಿಕ್ರಿ ಗೋಪಿ, ಅಂಬುಜಾಕ್ಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾವ ವಯೋ ಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ತಿಮ್ಮಯ್ಯ ಕುಟುಂಬವನ್ನು ಅಗಲಿದ್ದಾರೆ. ಮೈಸೂರಿನ ಇಟ್ಟಿಗೆಗೂಡು ನಿವಾಸಿಯಾಗಿದ್ದ ತಿಮ್ಮಯ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇದನ್ನೂ ಓದಿ: ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್
20 ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಂದು ವಯೋ ಸಹಜ ಖಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿಯ ಬಳಿಕ ಇದೀಗ ಅವರ ಮಾವ ತಿಮ್ಮಯ್ಯ ಅವರಿಗೂ ಇಡಿ ಸಮನ್ಸ್ ನೀಡಿದೆ.
ಮೈಸೂರಿನಲ್ಲಿರುವ ಡಿಕೆಶಿ ಮಾವ ತಿಮ್ಮಯ್ಯಗೆ ಮಾತ್ರವಲ್ಲದೇ ಸ್ನೇಹಿತ ಶಶಿಕುಮಾರ್, ಆಡಿಟರ್ ಚಂದ್ರಶೇಖರ್ ತಿಮ್ಮಯ್ಯ, ಸಿಂಗಾಪುರದ ಗೆಳೆಯ ರಜನೀಶ್ ಗೋಪಿನಾಥ್ ಹಾಗೂ ವ್ಯವಹಾರಿಕ ಸಂಬಂಧಿ ಅನಿಲ್ ಜೈನ್ ಗೂ ಇಡಿ ಸಮನ್ಸ್ ಜಾರಿ ಮಾಡಿದೆ. ಮತ್ತೊಂದೆಡೆ ಪುತ್ರಿ ಐಶ್ವರ್ಯಾ ಹೆಸರಿನಲ್ಲಿದ್ದ ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ.
ಐಟಿ ದಾಳಿ ಬಳಿಕ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇನ್ನು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಇಡಿ ಹೇಳಿತ್ತು.
ಇತ್ತ ಮಾವ ತಿಮ್ಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಹಣ ವರ್ಗಾವಣೆಯ ಬಗ್ಗೆ ಮಾಹಿತಿ ಸಿಗಬಹುದು ಅಥವಾ ವ್ಯವಹಾರಿಕ ಸಂಬಂಧಗಳ ಮಾಹಿತಿ ಕಲೆ ಹಾಕಬಹುದು ಎಂಬ ನಿಟ್ಟಿನಲ್ಲಿ ಇಡಿ ಸಮನ್ಸ್ ನೀಡಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಐಶ್ವರ್ಯಾ ಖಾತೆಯಿಂದ 108 ಕೋಟಿ ವರ್ಗಾವಣೆ – ಕೋರ್ಟಿಗೆ ಇಡಿ ಮಾಹಿತಿ