Tag: ತಿಮಿಳುನಾಡು

  • ಬಸ್-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ್ರೂ ಬದುಕುಳಿದ ಸವಾರರು: ವಿಡಿಯೋ ನೋಡಿ

    ಬಸ್-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ್ರೂ ಬದುಕುಳಿದ ಸವಾರರು: ವಿಡಿಯೋ ನೋಡಿ

    ಚೆನ್ನೈ: ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಸವಾರರು ಸುಮಾರು ಮೀಟರ್ ದೂರಕ್ಕೆ ಬಿದ್ದರೂ ಬದುಕುಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮೂರು ರಸ್ತೆಗಳು ಸೇರುವ ವೃತ್ತದ ಒಂದು ಕಡೆಯಿಂದ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬರುತ್ತಿತ್ತು. ಅದರ ಎಡ ಭಾಗದ ರಸ್ತೆಯಿಂದ ಬೈಕ್‍ನಲ್ಲಿ ಮೂವರು ಸವಾರರು ಬಂದಿದ್ದಾರೆ. ವೇಗವಾಗಿದ್ದ ಇಬ್ಬರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮೂವರು ಸವಾರರು ಬೈಕ್ ಸಮೇತ ಸುಮಾರು ಮೀಟರ್ ದೂರಕ್ಕೆ ಹಾರಿ ಬಿದ್ದಿದ್ದಾರೆ.

    ಭಾರೀ ಅನಾಹುತದಿಂದ ಎಚ್ಚೆತ್ತುಕೊಂಡ ಚಾಲಕ, ಬಸ್ಸನ್ನು ನಿಯಂತ್ರಕ್ಕೆ ತಂದಿದ್ದಾನೆ. ಇಲ್ಲದಿದ್ದರೇ ಬಸ್ ಮೂವರ ಮೇಲೂ ಹರಿದು ಹೋಗುತ್ತಿತ್ತು. ತಕ್ಷಣವೇ ಕೆಳಗೆ ಇಳಿದು ಬಂದ ಕೆಲ ಪ್ರಯಾಣಿಕರು, ಬಸ್ ಅಡಿಗೆ ಹಾಗೂ ರಸ್ತೆ ಮೇಲೆ ಬಿದ್ದಿದ್ದ ಸವಾರರನ್ನು ಹೊರಕ್ಕೆ ಏಳೆದು, ಆರೈಕೆ ಮಾಡಿದ್ದಾರೆ. ಬಳಿಕ ಸಣ್ಣ ಪುಟ್ಟ ಗಾಯಗಳಾಗಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸವಾರರ ಅಜಾಗೃತಿಯಿಂದಲೇ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv