Tag: ತಿಮಿಂಗಲ

  • ಅಕ್ರಮವಾಗಿ ಮಾರಾಟ ಮಾಡ್ತಿದ್ದ 1 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ವಶ – ಮೂವರು ಅರೆಸ್ಟ್‌

    – ತಿಮಿಂಗಲ ವಾಂತಿಗೆ ಯಾಕಿಷ್ಟು ಬೇಡಿಕೆ? – ಇದರಿಂದ ಪ್ರಯೋಜನ ಏನು?

    ಬೀದರ್‌: ಕಾಳಸಂತೆಯಲ್ಲಿ ತಿಮಿಂಗಲ ವಾಂತಿ (Ambergris) ಮಾರಾಟ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ಗೆ ಹೆಡೆಮುರಿ ಕಟ್ಟಿರುವ ಪೊಲೀಸರು ಸುಮಾರು 1 ಕೋಟಿ ರೂ. ಮೌಲ್ಯದ 980 ಗ್ರಾಂ ನಷ್ಟು ಅಂಬರ್‌ಗ್ರಿಸ್ ವಶಪಡಿಸಿಕೊಂಡಿದ್ದಾರೆ.

    ಭರ್ಜರಿ ಕಾರ್ಯಾಚರಣೆ ಮಾಡಿದ ಬೀದರ್ ಪೊಲೀಸರು (Bidar Police) ಸೌಂದರ್ಯ ವರ್ಧಕ ಹಾಗೂ ಸುಗಂಧ ದ್ರವ್ಯ ತಯಾರಿಸಲು ಬಳಕೆ ಮಾಡುತ್ತಾರೆ. ಹಾಗಾಗಿ ತಿಮಿಂಗಲ ವಾಂತಿಯನ್ನು ಗೋವಾದಿಂದ ಅಕ್ರಮವಾಗಿ ಬೀದರ್‌ಗೆ ತಂದಿದ್ದ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಮೂವರು ಆರೋಪಿಗಳನ್ನು ಅರೆಸ್ಟ್ ಬಂಧಿಸಿ ಜೈಲಿಗಟ್ಟಿದ್ದಾರೆ.

    15 ದಿನಗಳಲ್ಲಿ 28 ಕೇಸ್‌:
    ಕಳೆದ 15 ದಿನಗಳಲ್ಲಿ 28 ಕಳ್ಳತನ ಪ್ರಕರಣ ಭೇದಿಸಿದ್ದಾರೆ. ಜಿಲ್ಲೆಯ 13 ಠಾಣೆಗಳಲ್ಲಿ ದಾಖಲಾಗಿದ್ದ ಜಾನುವಾರು ಮತ್ತು ವಿವಿಧ ಸ್ವತ್ತಿನ 28 ಪ್ರಕರಣಗಳನ್ನು ಭೇದಿಸಿ ಅಂತಾರಾಜ್ಯ ಕಳ್ಳರು ಸೇರಿ 28 ಆರೋಪಿಗಳನ್ನ ಬಂಧಿಸಿದ್ದಾರೆ.

    ಒಟ್ಟಾರೆಯಾಗಿ ಬಂಧಿತ ಆರೋಪಿಗಳಿಂದ 53 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಅದರಲ್ಲಿ 7.76 ಲಕ್ಷ ನಗದು, 23.91 ಲಕ್ಷ ಮೌಲ್ಯದ 396 ಗ್ರಾಂ ಚಿನ್ನ, 320 ಗ್ರಾಂ ಬೆಳ್ಳಿ, 7 ಜಾನುವಾರು, 6 ಪಂಪ್ ಸೆಟ್, 7 ವಾಹನಗಳು, 16 ಸಾವಿರ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಬೀದರ್‌ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಶ್ಲಾಘಿಸಿದ್ದಾರೆ.

    ತಿಮಿಂಗಲ ವಾಂತಿಗೆ ಯಾಕಿಷ್ಟು ಬೇಡಿಕೆ?
    ಅಂಬರ್ ಗ್ರೀಸ್ ಎಂಬ ವಸ್ತುವು ಮೇಣದಂಥ ವಸ್ತುವಾಗಿದ್ದು, ಇದನ್ನ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳ ತಯಾರಿಕೆಯಲ್ಲೂ ಇದನ್ನ ಬಳಸಲಾಗುತ್ತದೆ.

    ತಿಮಿಂಗಿಲ ವಾಂತಿ ಸಿಗುವುದು ಬಹಳ ಅಪರೂಪ. ಏಕೆಂದರೆ, ತಿಮಿಂಗಿಲಗಳು ಸಮುದ್ರದಲ್ಲಿ ವಾಂತಿ ಮಾಡಿಕೊಳ್ಳುವುದು ಅಪರೂಪ. ಆದ್ದರಿಂದ ಇವು ಜನಸಾಮಾನ್ಯರಿಗೆ ಸಿಗುವುದು ತುಂಬಾ ವಿರಳ. ಹಾಗಾಗಿ ಈ ವಸ್ತುವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಆದರೆ ಕಳ್ಳಸಾಗಣೆದಾರರು ಅಂಬರ್‌ಗ್ರೀಸ್‌ಗಾಗಿ ಸಮುದ್ರಗಳಿಗೆ ದಾಂಗುಡಿ ಇಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಇದರ ಮಾರಾಟ ನಿಷೇಧಿಸಿವೆ. ಹಾಗಾಗಿ ಇದು ಕಳ್ಳಸಾಗಣೆಯಾಗುತ್ತಿದೆ.

  • ಭಾರೀ ಗಾತ್ರದ ತಿಮಿಂಗಲ ಕಳೇಬರ ಪತ್ತೆ

    ಭಾರೀ ಗಾತ್ರದ ತಿಮಿಂಗಲ ಕಳೇಬರ ಪತ್ತೆ

    ಭುವನೇಶ್ವರ: ಭಾರೀ ಗಾತ್ರದ ತಿಮಿಂಗಲ ಶಾರ್ಕ್ ಕಳೇಬರವು ಒಡಿಶಾದ ಹಳ್ಳಿಯೊಂದರ ನಾಲೆಯಲ್ಲಿ ಪತ್ತೆಯಾಗಿದೆ.

    ಬಾಲಾಸೋರ್ ಜಿಲ್ಲೆಯ ಖಾಂತಪಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಂತಿಛೇರಾ ಗ್ರಾಮ ಸಮೀಪ ಕಳೆಬರ ಕಾಣಿಸಿಕೊಂಡಿದೆ. ಸಮುದ್ರದಿಂದ ಸಂಪರ್ಕ ಕಲ್ಪಿಸುವ ನಾಲೆಯೆಲ್ಲಿ ತಿಮಿಂಗಲ ಹೇಗೆ ಬಂತು ಎನ್ನುವ ಮಾಹಿತಿ ಇಲ್ಲ.

    ತಿಮಿಂಗಲದ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ನಾಲೆಯಲ್ಲಿರುವ ತಿಮಿಂಗಲ ಕಳೇಬರವನ್ನು ಹೊರಗೆ ತೆಗೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಾರೀ ಗಾತ್ರದ ತಿಮಿಂಗಲು ನೋಡಲು ಸ್ಥಳೀಯರು ಸೇರಿದ್ದರು.

    ಮೂರು ದಿನಗಳ ಹಿಂದೆ ಮೀನುಗಾರರು ಒಂದು ತಿಮಿಂಗಲವನ್ನು ಹಿಡಿದು ತಂದಿದ್ದರು. ಆದರೆ ಈ ವಿಚಾರವಾಗಿ ಸ್ಥಳೀಯರು ಭಾರಿ ವಿರೋಧವನ್ನು ವ್ಯಕ್ತಪಡಿಸಿದ ಹಿನ್ನೆಲೆ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

  • ಕರಾವಳಿಗೂ ಕಾಲಿಟ್ಟ ಬ್ಲೂವೇಲ್ – ತಿಮಿಂಗಿಲ ಆಕಾರದಲ್ಲಿ ಕೈ ಕುಯ್ದುಕೊಂಡ ವಿದ್ಯಾರ್ಥಿ

    ಕರಾವಳಿಗೂ ಕಾಲಿಟ್ಟ ಬ್ಲೂವೇಲ್ – ತಿಮಿಂಗಿಲ ಆಕಾರದಲ್ಲಿ ಕೈ ಕುಯ್ದುಕೊಂಡ ವಿದ್ಯಾರ್ಥಿ

    ಮಂಗಳೂರು: ಈಗಾಗಲೇ ಸಾಕಷ್ಟು ಮಕ್ಕಳು ಹಾಗೂ ಯುವಕ ಯುವತಿಯರನ್ನ ಬಲಿಪಡೆದಿರುವ ಸೂಸೈಡ್ ಗೇಮ್ ಬ್ಲೂವೇಲ್ ಇದೀಗ ಮಂಗಳೂರಿಗೂ ಕಾಲಿಟ್ಟಿದೆ. ಬ್ಲೂವೇಲ್ ಗೇಮ್ ಆಡಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಕೈ ಕೊಯ್ದುಕೊಂಡಿದ್ದಾನೆ.

    ಇದನ್ನೂ ಓದಿ: ಬ್ಲೂ ವೇಲ್‍ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು

    ತಿಮಿಂಗಿಲ ಆಕಾರದಲ್ಲಿ ಕೈ ಕೊಯ್ದುಕೊಂಡಿದ್ದು, ಹೆತ್ತವರು ವಿಚಾರಿಸಿದಾಗ ಬ್ಲೂವೇಲ್ ಗೇಮ್ ಆಟವಾಡಿದ್ದನ್ನು ಬಾಯ್ಬಿಟ್ಟಿದ್ದಾನೆ. ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

    ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಶಾಲಾ ಬಾಲಕಿ ಕೈ ಕುಯ್ದುಕೊಂಡಿದ್ಲು. ಇದುವರೆಗೂ ದೇಶ, ವಿದೇಶಗಳಲ್ಲಿ ನೂರಾರು ಜನ ಬ್ಲೂವೆಲ್ ಗೇಮ್‍ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕೇಂದ್ರ ಸರ್ಕಾರ ಈಗಾಗಲೇ ಬ್ಲೂ ವೇಲ್ ಗೇಮ್‍ನ ಎಲ್ಲಾ ಲಿಂಕ್‍ಗಳನ್ನು ತೆಗೆದುಹಾಕಲು ಸೂಚಿಸಿದೆ.

    ಇದನ್ನೂ ಓದಿ:  ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್‍ಗಾಗಿ ಕೈ ಕುಯ್ದುಕೊಂಡ 11 ರ ಪೋರಿ

    https://www.youtube.com/watch?v=NatlGJr24Go