Tag: ತಿಪ್ಪೇಸ್ವಾಮಿ

  • ಹಾಲಿ, ಮಾಜಿ ಶಾಸಕರ ಮಧ್ಯೆ ಜನಮನ ಗೆದ್ದವರ್ಯಾರು? ಹೇಗಿದೆ ಮೊಳಕಾಲ್ಮೂರು ಅಖಾಡ?

    ಹಾಲಿ, ಮಾಜಿ ಶಾಸಕರ ಮಧ್ಯೆ ಜನಮನ ಗೆದ್ದವರ್ಯಾರು? ಹೇಗಿದೆ ಮೊಳಕಾಲ್ಮೂರು ಅಖಾಡ?

    ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ (Molakalmuru constituency) ಬಿಜೆಪಿ (BJP) ಅಭ್ಯರ್ಥಿಯಾಗಿ ಮಾಜಿ ಶಾಸಕ ತಿಪ್ಪೇಸ್ವಾಮಿ (Thippeswamy), ಕಾಂಗ್ರೆಸ್‌ನಿಂದ (Congress) ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಹಾಗೂ ಜೆಡಿಎಸ್‌ನಿಂದ (JDS) ವೀರಭದ್ರ ಬಾಬು (Veerabhadra Babu) ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಹಾಗೂ ತಿಪ್ಪೇಸ್ವಾಮಿ ಹಿಂದಿನಿಂದಲೂ ಬದ್ಧ ವೈರಿಗಳಾಗಿದ್ದು, ಇಬ್ಬರು ಸಹ ಸಮಬಲದ ಹೋರಾಟ ನಡೆಸುತಿದ್ದಾರೆ. ಆದರೆ ಜೆಡಿಸ್‌ನ ಅಭ್ಯರ್ಥಿ ವಲಸಿಗರಾಗಿದ್ದು, ಕ್ಷೇತ್ರದಲ್ಲಿ ಅಷ್ಟು ಪರಿಚಯವಿಲ್ಲ.

    ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದು ಸಚಿವರಾಗಿದ್ದ ಶ್ರೀರಾಮುಲು ಅವರ ಎದುರಾಳಿಯಾಗಿದ್ದ ತಿಪ್ಪೇಸ್ವಾಮಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ, ಅವರನ್ನು ಗೆಲ್ಲಿಸಲು ಬೆಂಗಾವಲಾಗಿ ನಿಂತಿದ್ದಾರೆ. ಈ ಮಧ್ಯೆ ಕೂಡ್ಲಿಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಗೋಪಾಲಕೃಷ್ಣ ಕೂಡಾ ಸತತ 6 ಬಾರಿ ಶಾಸಕರಾಗಿದ್ದು, ತಿಪ್ಪೇಸ್ವಾಮಿ ವಿರುದ್ಧ ಭಾರೀ ಕಸರತ್ತು ಆರಂಭಿಸಿದ್ದಾರೆ.

    ಇಬ್ಬರು ನಾಯಕರು ಸಹ ಸ್ಥಳೀಯರಾಗಿದ್ದು, ದಿಗ್ಗಜರ ಮಧ್ಯೆ ಜಿದ್ದಾಜಿದ್ದಿನ 50:50 ಸ್ಪರ್ಧೆ ನಡೆಯುತ್ತಿದೆ. ಈ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಬುಡಕಟ್ಟು ಸಂಪ್ರದಾಯದ ಮ್ಯಾಸನಾಯಕ ಸಮುದಾಯ ಹೆಚ್ಚಾಗಿದೆ. ಅವರೇ ಫಲಿತಾಂಶದ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇಲ್ಲಿ ಊರು ನಾಯಕ ಸಮುದಾಯ ಅವರಿಗಿಂತ ಕಡಿಮೆ ಇದೆ. ಹೀಗಾಗಿ ಈ ಇಬ್ಬರು ಸ್ಪರ್ಧಿಗಳಲ್ಲಿ ತಿಪ್ಪೇಸ್ವಾಮಿ ಮ್ಯಾಸನಾಯಕ ಬೇಡರ ಸಮುದಾಯದವರಾಗಿದ್ದು, ಗೋಪಾಲಕೃಷ್ಣ ಊರು ನಾಯಕರಾಗಿರುವುದು ಬಿಜೆಪಿಗೆ ವರದಾನವಾಗಿದೆ.

    ಕಾಂಗ್ರೆಸ್ ಟಿಕೆಟ್ ವಂಚಿತ ಯೋಗೇಶ್ ಬಾಬು ಸಹ ಮ್ಯಾಸನಾಯಕ ಬುಡಕಟ್ಟಿನವರಾಗಿದ್ದು, ಗೋಪಾಲಕೃಷ್ಣ ಜೊತೆ ಗುರುತಿಸಿಕೊಂಡಿರುವುದು ಬಿಜೆಪಿಗೆ ತೀವ್ರ ಪೈಪೋಟಿ ಎನಿಸಿದೆ. ಈ ಜಿದ್ದಾಜಿದ್ದಿನ ಕಣದಲ್ಲಿ ಇಬ್ಬರು ಸ್ಪರ್ಧಿಗಳು ಸಹ ಭಾರೀ ಪೈಪೋಟಿಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ತಿಪ್ಪೇಸ್ವಾಮಿ ಪರ ಕಳೆದ ಬಾರಿ ಸೋತಿರುವ ಅನುಕಂಪ ಹಾಗೂ ಇತ್ತೀಚೆಗೆ ಅವರ ಏಕೈಕ ಪುತ್ರನ ಅಕಾಲಿಕ ಸಾವು ಸಹ ಮತದಾರರ ಮನ ಕರಗಿಸಿದೆ.

    ಕ್ಷೇತ್ರದಲ್ಲಿನ ಮತದಾರರೊಂದಿಗಿನ ಒಡನಾಟ ವರ್ಕೌಟ್ ಆದರೆ ಬಿಜೆಪಿ ಗೆಲುವು ಸುಲಭವಾಗಲಿದೆ. ಆದರೆ ತುಂಬಾ ಬುದ್ಧಿವಂತ ಹಾಗೂ ಚುನಾವಣಾ ತಂತ್ರಗಾರಿಕೆ ಬಲ್ಲ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ವಿರುದ್ಧ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ ಎಂಬ ಚರ್ಚೆ ಸಹ ಕ್ಷೇತ್ರದಲ್ಲಿದೆ.

    ಇನ್ನು ಮಾಜಿ ಶಾಸಕ ತಿಪ್ಪೇಸ್ವಾಮಿ ಪರ ಮಾಜಿ ಸಚಿವ ಶ್ರೀರಾಮುಲು ಆಪ್ತ ಪಾಪೇಶ್ ನಾಯಕ ಓಡಾಡುತ್ತಿರುವುದು ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಕಳೆದ ಬಾರಿ ಗೆದ್ದಿದ್ದ ಶ್ರೀ ರಾಮುಲು ಪರ ಎಲ್ಲಾ ಕೆಲಸಗಳನ್ನು ಪಾಪೇಶ್ ನಾಯಕ ನೆರವೇರಿಸುತ್ತಿದ್ದು, ಕ್ಷೇತ್ರದಲ್ಲಿ ಜನವಿರೋಧಿ ಅಲೆ ಪರಿಣಾಮ ರಾಮುಲು ಕ್ಷೇತ್ರ ಬದಲಾವಣೆ ಮಾಡಿದ್ದರು. ಹೀಗಾಗಿ ಅದರ ಎಫೆಕ್ಟ್ ತಿಪ್ಪೇಸ್ವಾಮಿ ಮೇಲೆ ತಟ್ಟಿದರೆ ಬಿಜೆಪಿ ಗೆಲುವು ಕಷ್ಟವಾಗಲಿದೆ. ಇದನ್ನೂ ಓದಿ: ‘ಕೈ’, ‘ಕಮಲ’ದ ನಡುವೆ ಟಫ್ ಫೈಟ್ – ಕಾಗವಾಡ ಅಖಾಡ ಹೇಗಿದೆ?

    ಮತದಾರರು ಎಷ್ಟಿದ್ದಾರೆ?
    ಒಟ್ಟು ಮತದಾರರು: 2,43,027
    ಪುರುಷರು: 1,22,622
    ಮಹಿಳೆಯರು: 1,20,393

    ಯಾರ ವೋಟು ಎಷ್ಟು?
    ನಾಯಕ : 1,10,000
    ಎಸ್‌ಸಿ : 55,000
    ರೆಡ್ಡಿ ಲಿಂಗಾಯತ : 25,000
    ಗೊಲ್ಲ : 16,000
    ಮುಸ್ಲಿಂ : 9,000
    ಕುರುಬ : 10,000
    ನೇಕಾರ : 5,000
    ಇತರೆ: 13,000 ಇದನ್ನೂ ಓದಿ: ಕಾಂಗ್ರೆಸ್ 10 ಪರ್ಸೆಂಟ್ ಕೆಲಸ ಮಾಡಿದ್ರೆ ವೋಟ್ ಕೇಳೋ ಅವಶ್ಯತೆ ಇರ್ತಿರಲಿಲ್ಲ : ಶಾ ಗುಡುಗು

  • ಶಾಲೆಗಳಲ್ಲಿ ಮೊಟ್ಟೆ ಕೊಡುವುದು ನಿಲ್ಲಿಸುವುದಿಲ್ಲ: ಬಿ.ಸಿ ನಾಗೇಶ್

    ಶಾಲೆಗಳಲ್ಲಿ ಮೊಟ್ಟೆ ಕೊಡುವುದು ನಿಲ್ಲಿಸುವುದಿಲ್ಲ: ಬಿ.ಸಿ ನಾಗೇಶ್

    – ಸಾತ್ವಿಕ ಆಹಾರದ ಬಗ್ಗೆ ಚರ್ಚೆ ಆಗಿಲ್ಲ

    ಬೆಂಗಳೂರು: ಶಾಲೆಗಳಲ್ಲಿ (School) ಮೊಟ್ಟೆ (Egg) ಕೊಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಸ್ಪಷ್ಟಪಡಿಸಿದರು.

    ವಿಧಾನ ಪರಿಷತ್‌ನ (Vidhan Parishad) ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ (JDS) ತಿಪ್ಪೇಸ್ವಾಮಿ ಪ್ರಶ್ನೆ ಕೇಳಿದರು. ಶಾಲಾ ಮಕ್ಕಳಿಗೆ ಸರಿಯಾಗಿ ಮೊಟ್ಟೆ ವಿತರಣೆ ಆಗುತ್ತಿಲ್ಲ. ಬೆಲೆ ಜಾಸ್ತಿ ಆಯ್ತು ಅಂತ ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ಮೊಟ್ಟೆ ವಿತರಣೆ ಆಗಿಲ್ಲ. ಸರ್ಕಾರ ಸಮರ್ಪಕವಾಗಿ ಮೊಟ್ಟೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ವಿಪಕ್ಷ ನಾಯಕ ಹರಿಪ್ರಸಾದ್ ಧ್ವನಿಗೂಡಿಸಿ, ಕೆಲ ಶಾಲೆಗಳಲ್ಲಿ ಉದ್ದೇಶ ಪೂರ್ವಕವಾಗಿ ಮೊಟ್ಟೆ ಕೊಡುತ್ತಿಲ್ಲ. ಬಾಳೆಹಣ್ಣು, ಚಿಕ್ಕಿ ಮಾತ್ರ ಕೊಡಲಾಗುತ್ತಿದೆ. ಕೆಲ ಶಾಲೆಗಳಲ್ಲಿ ಮೊಟ್ಟೆ ಕೊಡಬೇಡಿ ಅಂತ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮೊಟ್ಟೆ ಕೊಡುವುದನ್ನು ನಿಲ್ಲಿಸಬಾರದು ಎಂದು ಆಗ್ರಹಿಸಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಬಿ.ಸಿ ನಾಗೇಶ್, ಬಿಸಿಯೂಟದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬೇಕು ಎಂದು 2007ರಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಆದರೆ ಈವರೆಗೂ ಮೊಟ್ಟೆ ಕೊಡದಂತೆ ನೋಡಿಕೊಳ್ಳಲಾಯಿತು. ಯಾರ ಒತ್ತಡಕ್ಕೆ ಹೀಗೆ ಆಯ್ತೋ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ನಮ್ಮ ಸರ್ಕಾರವು ಧೈರ್ಯ ಮಾಡಿ ಮೊಟ್ಟೆ ಕೊಡುವ ನಿರ್ಧಾರ ಜಾರಿಗೆ ತಂದೆವು. ಎಲ್ಲ ಕಡೆ ಒಟ್ಟಿಗೆ ಜಾರಿಗೆ ತರುವ ಬದಲು ಅಪೌಷ್ಟಿಕತೆ ಇರುವ ಕಡೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲು ಜಾರಿಗೆ ತರಲಾಗಿದೆ. ನಂತರ ಇತರ ಜಿಲ್ಲೆಗೆ ವಿಸ್ತರಿಸಲಾಗಿದೆ. ಮೊಟ್ಟೆ ಕೊಟ್ಟ ನಂತರ ಪೌಷ್ಟಿಕತೆಯಲ್ಲಿನ ಬದಲಾವಣೆ ಕುರಿತು ಅಧ್ಯಯನ ವರದಿ ಪಡೆಯಲಾಗಿದೆ. ಅದರಂತೆ ಪೌಷ್ಟಿಕತೆ ಹೆಚ್ಚಾಗಿದ್ದನ್ನು ಮನಗಂಡು ಮೊಟ್ಟೆ ಕೊಡುವುದನ್ನು ಮುಂದುವರಿಸಲಾಗುತ್ತದೆ. ಯಾರಿಗೂ ಮೊಟ್ಟೆ, ಬಾಳೆಹಣ್ಣು ತಿನ್ನಿ ಎಂದು ಒತ್ತಾಯ ಇಲ್ಲ. ಯಾರಿಗೆ ಯಾವುದು ಬೇಕೋ ಅದನ್ನು ಕೊಡಲಾಗುತ್ತದೆ. ಮೊಟ್ಟೆ ಬೇಡ ಅಂದವರಿಗೆ ಮಾತ್ರ ಬಾಳೆಹಣ್ಣು, ಚಿಕ್ಕಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಕೆಟ್ಟು ನಿಂತ ಅಂಬುಲೆನ್ಸ್ – ನಡುರಸ್ತೆಯಲ್ಲೇ 2 ಗಂಟೆ ನರಳಾಡಿದ ತುಂಬು ಗರ್ಭಿಣಿ

    ನೈತಿಕ ಶಿಕ್ಷಣ ಕೊಡಬೇಕು ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಆದರೆ ಸಾತ್ವಿಕ ಆಹಾರದ ಬಗ್ಗೆ ಇಲಾಖೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಶಾಲೆಗಳಲ್ಲಿ ಮಕ್ಕಳಿಗೆ ಮಾರಲ್ ಎಜುಕೇಶನ್ ಇರಬೇಕು. ವಾರಕ್ಕೆ ಒಂದು ಪೀರಿಯಡ್ ಆದರೂ ಇದನ್ನು ಮಾಡಬೇಕು. ನನ್ನ ಸಲಹೆ ಪರಿಗಣಿಸಿ ಎಂದರು. ಇದನ್ನೂ ಓದಿ: Air Show ಬಡತನ ಓಡಿಸುತ್ತಾ – ಪ್ರಧಾನಿ ಮೋದಿಗೆ ಹೆಚ್‌ಡಿಕೆ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ನಿಧನ

    ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ನಿಧನ

    ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೆರ್ಲಗುಂಟೆ ಎನ್. ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ಅವರು ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. 32 ವರ್ಷದ ಶಿವಕುಮಾರ್ ಅವರು ನಿಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

    ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ; ಕೆನಡಾದಲ್ಲಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ: ಕನ್ನಡಿಗ ಸಂಸದ ಬೇಸರ

    ಮಾಜಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಶಿವಕುಮಾರ್ ಹಾಗೂ ಓರ್ವ ಸುಪುತ್ರಿ ಇದ್ದರು. ಇಪ್ಪತ್ತು ವರ್ಷಗಳ ಹಿಂದೆ ಮಗಳು ಸಹ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಇವರ ಬಲಗೈ ಆಗಿದ್ದಂತಹ ಪುತ್ರ ಶಿವಕುಮಾರ್ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಎಲ್ಲಾ ಚುನಾವಣೆಗಳಲ್ಲೂ ತಂದೆಯ ವಾರಿಸುದಾರರಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿ ಶಿವಣ್ಣ ಅಂತ ಖ್ಯಾತಿಯಾಗಿದ್ದರು.

    ಕಳೆದ ವಿಧಾನಸಭಾ ಚುನಾವಣೆ ವೇಳೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಸ್ಪರ್ಧಿಸಿದ ಕಾರಣ ಎನ್. ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಶ್ರೀರಾಮುಲು ವಿರುದ್ಧ ಅತ್ಯಧಿಕ ಮತಗಳಿಂದ ಸೋಲು ಅನುಭವಿಸಿದ್ದರು. ಆಗ ತಮ್ಮ ತಂದೆಯ ಪರ ತಮ್ಮ ಜೀವದ ಹಂಗು ತೊರೆದು ಚುನಾವಣೆ ಎದುರಿಸಿದ್ದರು.

    ಇತ್ತೀಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ತಮ್ಮ ತಂದೆಯವರಿಗೆ ಬೆನ್ನುಲುಬಾಗಿದ್ದ ಶಿವಕುಮಾರ್ ಅನುಪಸ್ಥಿತಿಯು ಮಾಜಿ ಶಾಸಕ ತಿಪ್ಪೇಸ್ವಾಮಿಯವರಿಗೆ ತುಂಬಲಾರದ ನಷ್ಟ ಎನಿಸಿದೆ.ಮೃತರ ಅಂತ್ಯ ಕ್ರಿಯೆ ನಾಳೆ ಅವರ ಸ್ವಗ್ರಾಮ ನೇರಲುಗುಂಟೆಯಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಈಶ್ವರಪ್ಪಗೆ ಒಂದು ನ್ಯಾಯ, ಶ್ರೀರಾಮುಲುಗೆ ಒಂದು ನ್ಯಾಯನಾ: ತಿಪ್ಪೇಸ್ವಾಮಿ

    ಈಶ್ವರಪ್ಪಗೆ ಒಂದು ನ್ಯಾಯ, ಶ್ರೀರಾಮುಲುಗೆ ಒಂದು ನ್ಯಾಯನಾ: ತಿಪ್ಪೇಸ್ವಾಮಿ

    ಚಿತ್ರದುರ್ಗ: ಭೂ ಕಬಳಿಕೆ ಆರೋಪ ಹೊತ್ತಿರೋ ಭ್ರಷ್ಟಮಂತ್ರಿ ಶ್ರೀರಾಮುಲು ಅವರನ್ನು ಕ್ಯಾಬಿನೆಟ್‍ನಿಂದ ಕೈಬಿಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಆಗ್ರಹಿಸಿದರು.

    ಸಚಿವ ಶ್ರೀರಾಮುಲು ಅಕ್ರಮ ಕುರಿತು ವಿವರಿಸಿದ ಅವರು, ಶ್ರೀರಾಮುಲು ಬಳ್ಳಾರಿಯ ಶಾಸಕರಾಗಿದ್ದ ಅವಧಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷ್ಮಮ್ಮ ಮಹಿಳೆಗೆ ವಂಚಿಸಿದ್ದಾರೆ. ಲಕ್ಷ್ಮಮ್ಮ ಅವರ 27 ಎಕರೆ 25 ಗುಂಟೆ ಜಮೀನಿನಲ್ಲಿ 10 ಎಕರೆ ಜಮೀನು ನೀರಾವರಿ ಯೋಜನೆಯ ಕೆನಾಲ್ ವಶಪಡಿಸಿಕೊಳ್ಳಲಾಗಿದೆ. ಉಳಿದ 17 ಎಕರೆ 25 ಗುಂಟೆ ಜಮೀನನ್ನು ಶ್ರೀರಾಮುಲು ಬಳ್ಳಾರಿ ಶಾಸಕರಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗದಿಂದ ಡಿಸಿ, ಎಸಿ, ಸಬ್‍ರಿಜಿಸ್ಟ್ರಾರ್ ಹಾಗೂ ತಹಶೀಲ್ದಾರ್ ಒಳಗೊಂಡಂತೆ ಎಲ್ಲರೂ ಶಾಮೀಲಾಗಿ ಅಮಾಯಕ ಮಹಿಳೆಗೆ ವಂಚಿಸಿದ್ದಾರೆ. ಮಹಿಳೆಗೆ ತಿಳಿಯದಂತೆ ಕೃಷ್ಣಮೂರ್ತಿ ಎನ್ನುವವರಿಂದ ಕ್ರಯ ಮಾಡಿಸಿಕೊಂಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ ಎಂದರು. ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿಲ್ಲ, ಫೋನ್‍ನಲ್ಲಿ ಮಾತುಕತೆ: ಸಿಎಂ ಬೊಮ್ಮಾಯಿ 

    ಈ ಹಿಂದೆ ಸಂಪುಟದಲ್ಲಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ಅವರ ತಲೆದಂಡವಾಗಿದೆ. ಆದರೆ ಶ್ರೀರಾಮುಲು ವಿಚಾರದಲ್ಲಿ ಸಿಎಂ ಮೀನಾಮೇಷ ಎಣಿಸುವುದು ಸರಿಯಲ್ಲ. ಈಶ್ವರಪ್ಪ ಅವರಿಗೆ ಒಂದು ನ್ಯಾಯ, ಶ್ರೀರಾಮುಲು ಅವರಿಗೆ ಒಂದು ನ್ಯಾಯನಾ! ಈಗಾಗಲೇ ಭೂ ಕಬಳಿಕೆ ಆರೋಪದಡಿ ಶ್ರೀರಾಮುಲು ವಿರುದ್ಧ ಬಳ್ಳಾರಿಯಲ್ಲಿ ಚಾರ್‍ಶೀಟ್ ಆಗಿದೆ ಎಂದು ಕಿಡಿಕಾರಿದರು.

    ಭ್ರಷ್ಟಾಚಾರದ ಅಲೆಯಲ್ಲಿ ಸಚಿವ ಶ್ರೀರಾಮುಲು ತೇಲುತ್ತಿದ್ದಾರೆ. ಆದರೂ ಸಚಿವ ಸ್ಥಾನದಿಂದ ತೆಗೆಯಲು ತಾರತಮ್ಯ ಮಾಡಲಾಗ್ತಿದೆ. ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿ ಜಾಮೀನು ಪಡೆದಿರೋ ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

    ಈ ಕೇಸು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ಇನ್ಯಾವ ತಿರುವು ಪಡೆಯಲಿದೆ ನೋಡಬೇಕು. ಇಂತಹ ಭ್ರಷ್ಟ ಶ್ರೀರಾಮುಲು ಸಚಿವರಾಗಿದ್ರೆ, ಅನೇಕ ಜನ ಅಮಾಯಕರಿಗೆ ಅನ್ಯಾಯವಾಗಲಿದೆ. ಹೀಗಾಗಿ ಇಂತಹ ಭ್ರಷ್ಟಮಂತ್ರಿಯನ್ನು ಸಂಪುಟದಿಂದ ಕೈಬಿಡುವಂತೆ ಬೊಮ್ಮಾಯಿ ಅವರನ್ನು ಆಗ್ರಹಿಸಿದರು. ಇದನ್ನೂ ಓದಿ: ಆಜಾನ್ ವಿರೋಧಿಸಿ ಜಮ್ಮು ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ

    ಶ್ರೀರಾಮುಲು ನಾಯಕ ಸಮುದಾಯದವನಲ್ಲ
    ಎಸ್.ಟಿ ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶ್ರೀರಾಮುಲು ವಂಚಿಸಿದ್ದಾರೆ. ಸೆಷನ್‍ನಲ್ಲಿ ಮೀಸಲಾತಿ ಬಗ್ಗೆ ಶಾಸಕರು ಕೇಳಬೇಕಿತ್ತು. ವಾಲ್ಮೀಕಿ ಶ್ರೀಗಳನ್ನು ಪ್ರತಿಭಟಿಸಲು ಮುಂದೆ ಬಿಟ್ಟು ಸುಮ್ಮನಾಗಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಅಗೌರವ ತೋರಿದ್ದಾರೆ. ಶ್ರೀರಾಮುಲುಗೆ ವಾಲ್ಮೀಕಿ ಸಮುದಾಯ ಪಾಠ ಕಲಿಸಬೇಕು. ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು. ಶ್ರೀರಾಮುಲು ನಾಯಕ ಸಮುದಾಯದವನೇ ಅಲ್ಲ ಅನ್ನೋದನ್ನ ತಿಳ್ಕೊಬೇಕು ಎಂದು ಕುಟುಕಿದರು.

  • ಸುಳ್ಳು ಆರೋಪ ಮಾಡಿದ ಮಾಜಿ ಶಾಸಕನ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ: ಪಾಪೇಶ್

    ಸುಳ್ಳು ಆರೋಪ ಮಾಡಿದ ಮಾಜಿ ಶಾಸಕನ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ: ಪಾಪೇಶ್

    ಚಿತ್ರದುರ್ಗ: ಆಧಾರ ರಹಿತವಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಸಚಿವ ಶ್ರೀರಾಮುಲು ಆಪ್ತ ಸಹಾಯಕ ಪಾಪೇಶ್ ಗುಡುಗಿದ್ದಾರೆ.

    ನಿನ್ನೆ ಮಾಜಿ ಶಾಸಕ ತಿಪ್ಪೇಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸಚಿವರ ಪಿಎಗಳಾದ ಹನುಮಂತ ರಾಯ ಹಾಗೂ ಪಾಪೇಶ್ ವಿರುದ್ಧ 772 ಜನ ಫಲಾನುಭವಿಗಳ ನೇರ ಸಾಲದ ಹಣವನ್ನು ನುಂಗಿದ್ದಾರೆಂಬ ಆರೋಪ ಮಾಡಿದ ಬೆನ್ನಲ್ಲೇ ಇಂದು ಶ್ರೀರಾಮುಲು ಪಿಎ ಪಾಪೇಶ್ ಹಾಗೂ ಬೆಂಬಲಿಗ ಜಯಪಾಲಯ್ಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: ಪೊಲೀಸ್‍ಗೆ ಕಪಾಳಮೋಕ್ಷ ಮಾಡಿದ ಮಾಜಿ ಶಾಸಕ ಎ.ಪಾಪಾರೆಡ್ಡಿ

    ಈ ವೇಳೆ ಮಾತನಾಡಿದ ಪಾಪೇಶ್, ಮಾಜಿ ಶಾಸಕ ತಿಪ್ಪೇಸ್ವಾಮಿ ಸುಖಾಸುಮ್ಮನೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಹೇಳಲು ಹೆಸರಿಲ್ಲದಂತಾಗಿದ್ದ ತಿಪ್ಪೇಸ್ವಾಮಿಗೆ ನಮ್ಮ ಸಚಿವರಾದ ಶ್ರೀರಾಮುಲು ಅವರು ಇವರಿಗೆ ಕೊಟ್ಟ ಭಿಕ್ಷೆಯಿಂದ ಬಿಎಸ್‍ಆರ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಈಗ ಮಾಜಿ ಶಾಸಕರಾಗಿರೋದು ಸಹ ಸಚಿವರ ಕೃಪೆಯಿಂದಲೇ ಎಂಬುದನ್ನು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ

    ನಮ್ಮ ಮೇಲೆ ಬಂದಿರುವ ಆರೋಪಗಳೆಲ್ಲಾ ಸುಳ್ಳು. ಮಾಜಿ ಶಾಸಕರನ್ನು ಜನರು ಮರೆಯುತ್ತಾರೆಂದು ಈ ರೀತಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನೇರ ಸಾಲ ಫಲಾನುಭವಿಗಳಿಗೆ ಹಣ ತಲುಪದ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಅಕ್ರಮವಾಗಿದ್ದರೆ, ಸಚಿವರ ಗಮನಕ್ಕೆ ತಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ. ಅಲ್ಲದೇ ನಮ್ಮ ಮೇಲೆ ಮರಳು ದಂಧೆ ಆರೋಪ ಸಹ ಮಾಡಿರುವ ಮಾಜಿ ಶಾಸಕರು, ಒಮ್ಮೆ ಭೂ ವಿಜ್ಞಾನ ಇಲಾಖೆ ಹಾಗೂ ಡಿಸಿ ಕಚೇರಿಯಿಂದ ಮಾಹಿತಿ ಪಡೆಯಬೇಕು. ಅವುಗಳೆಲ್ಲವೂ ಅವರ ಅವಧಿಯಲ್ಲೇ ಪರ್ಮಿಟ್ ಪಡೆದ ಪ್ರದೇಶಗಳಾಗಿವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್

    ಮಾಜಿ ಶಾಸಕರು ಪದೇ ಪದೇ ನಮ್ಮ ಸಚಿವರ ವಿರುದ್ಧ ಏಕವಚನದಲ್ಲಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಪಿಎಗಳು ಕೇವಲ ಸಚಿವರ ಪಟ್ಟಿಯನ್ನು ಅಧಿಕಾರಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಆದರೆ ತಿಪ್ಪೇಸ್ವಾಮಿ ಪೂರ್ವಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ. ಒಂದು ವೇಳೆ ಮಾಜಿ ಶಾಸಕರ ಆರೋಪ ಸಾಭೀತಾದ್ರೆ ಅವರ ಮನೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಸವಾಲು ಹಾಕಿದರು.

    ಸುದ್ದಿಗೋಷ್ಠಿಯಲ್ಲಿ ರಾಮುಲು ಬೆಂಬಲಿಗರಾದ ಜಯಪಾಲಯ್ಯ, ಮಂಜುನಾಥ್, ತಾಯಮ್ಮ ಉಪಸ್ಥಿತರಿದ್ದರು. ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಭದ್ರತೆ

  • ರಾಮಮಂದಿರ ನಿರ್ಮಾಣಕ್ಕೆ ನಿಧಿ ಅರ್ಪಿಸಿದ ಎಸ್ಎಂ ‌ಕೃಷ್ಣ

    ರಾಮಮಂದಿರ ನಿರ್ಮಾಣಕ್ಕೆ ನಿಧಿ ಅರ್ಪಿಸಿದ ಎಸ್ಎಂ ‌ಕೃಷ್ಣ

    ಬೆಂಗಳೂರು: ಇಂದು ಮಾಜಿ ವಿದೇಶಾಂಗ ಸಚಿವ,ಮಾಜಿ ಮುಖ್ಯಮಂತ್ರಿ ಎಸ್ಎಂ ‌ಕೃಷ್ಣ ಅವರು ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಮಾಡಿದ್ದಾರೆ.

    ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ನಾ.ತಿಪ್ಪೇಸ್ವಾಮಿ ಅವರು ಇಂದು ಕೃಷ್ಣ ಅವರ ಮನೆಗೆ ಭೇಟಿ ನೀಡಿದರು. ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶುಭ ಹಾರೈಕೆಯೊಂದಿಗೆ ಎಸ್.ಎಂ.ಕೃಷ್ಣ ರವರು ತಮ್ಮ ಪಾಲಿನ ನಿಧಿ ಸಮರ್ಪಣೆ ಕೂಡ ಮಾಡಿದರು.

    ಈ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದ ‘ಶ್ರೀರಾಮ ಶಿಲಾ ಪೂಜನ’ ಕಾರ್ಯಕ್ರಮಗಳಿಗೆ ಹೇಗೆ ತಮ್ಮ ಸರ್ಕಾರ ಕೂಡ ಸಹಕಾರ ನೀಡಿತ್ತು ಎಂಬುದನ್ನು ಸ್ಮರಿಸಿದರು. ಅವರ ಮನೆಗೆ ಭೇಟಿ ನೀಡಿದಾಗ ಡಾ.ಕರುಣಾಕರ ರೈ, ಡಾ.ಜಯಕರ ಶೆಟ್ಟಿ , ಉಮೇಶ್ ಕೂಡ ಉಪಸ್ಥಿತರಿದ್ದರು.

  • ಅಭಿವೃದ್ಧಿಯೂ ಇಲ್ಲ, ಜನಗಳ ಪ್ರಾಣ ರಕ್ಷಣೆಯೂ ಇಲ್ಲ- ರಾಮುಲು ವಿರುದ್ಧ ತಿಪ್ಪೆಸ್ವಾಮಿ ವಾಗ್ದಾಳಿ

    ಅಭಿವೃದ್ಧಿಯೂ ಇಲ್ಲ, ಜನಗಳ ಪ್ರಾಣ ರಕ್ಷಣೆಯೂ ಇಲ್ಲ- ರಾಮುಲು ವಿರುದ್ಧ ತಿಪ್ಪೆಸ್ವಾಮಿ ವಾಗ್ದಾಳಿ

    ಚಿತ್ರದುರ್ಗ: ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ದಗಾಕೋರ, ಲಂಚಕೋರ, ಭ್ರಷ್ಟ. ಆತನಿಂದ ಅಭಿವೃದ್ಧಿಯೂ ಇಲ್ಲ, ಜನಗಳ ಪ್ರಾಣ ರಕ್ಷಣೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ.

    ಶ್ರೀರಾಮುಲು ಮತ್ತು ಅವರ ಪಿಎಗಳಿಗೆ ಸುಲಿಗೆ ಮಾತ್ರ ಗೊತ್ತಿದೆ. ಬಳ್ಳಾರಿಯಲ್ಲಿ ಒಂದೇ ಗುಂಡಿಯಲ್ಲಿ 8 ಜನರನ್ನು ಹೂಳಲಾಗಿದೆ. ಶ್ರೀರಾಮುಲು ತವರು ಜಿಲ್ಲೆಯಲ್ಲಿ ನಡೆದ ಕೃತ್ಯ ನಾಚಿಕೆಗೇಡು ಎಂದು ಗರಂ ಆದರು.

    ಪರಶುರಾಂಪುರದಲ್ಲಿ ಶ್ರೀರಾಮುಲು ಸಾವಿರಾರು ಜನರ ಜೊತೆ ಮೆರವಣಿಗೆ ಮಾಡಿದ್ದಾರೆ. ಆದರೂ ಸಚಿವರ ವಿರುದ್ಧ ಡಿಸಿ, ಎಸ್ಪಿ ಯಾವುದೇ ದೂರು ದಾಖಲಿಸಿಲ್ಲ. ಆದರೆ ಪುತ್ರನ ಮದುವೆ ಮಾಡಿದ ಹೊಸದುರ್ಗದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ವಿರುದ್ಧ ಕೇಸು ದಾಖಲಿಸಿದ್ದಾರೆ. ಒಬ್ಬರಿಗೊಂದು ನ್ಯಾಯ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

  • ಮಂತ್ರಿಗಿರಿ ನಿಭಾಯಿಸಲು ಬರಲ್ಲ, ಬಿಲ್ಡಪ್ ಕೊಡಲು ಬರ್ತಾನೆ – ರಾಮುಲು ವಿರುದ್ಧ ತಿಪ್ಪೇಸ್ವಾಮಿ ಕಿಡಿ

    ಮಂತ್ರಿಗಿರಿ ನಿಭಾಯಿಸಲು ಬರಲ್ಲ, ಬಿಲ್ಡಪ್ ಕೊಡಲು ಬರ್ತಾನೆ – ರಾಮುಲು ವಿರುದ್ಧ ತಿಪ್ಪೇಸ್ವಾಮಿ ಕಿಡಿ

    ಚಿತ್ರದುರ್ಗ: ಸಚಿವ ಶ್ರೀರಾಮುಲುಗೆ ಮಂತ್ರಿಗಿರಿ ನಿಭಾಯಿಸಲು ಬರಲ್ಲ. ಇಲ್ಲಿಗೆ ಬಿಲ್ಡಪ್ ಕೊಡಲು ಬರುತ್ತಾನೆ. ಅವನ ಬುಡುಬುಡುಕೆ ಮಾತುಗಳಿಗೆ ಇಲ್ಲಿ ಯಾರೂ ಹೆದರಲ್ಲ ಎಂದು ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಏಕವಚನದದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಪಡೆಯುವ ವಿಚಾರದಲ್ಲಿ ಆರಂಭವಾದ ಸಚಿವ ಶ್ರೀರಾಮುಲು ಹಾಗೂ ತಿಪ್ಪೇಸ್ವಾಮಿ ನಡುವಿನ ವಾಕ್ಸಮರ, ವಿಧಾನಸಭಾ ಚುನಾವಣೆ ಮುಗಿದು ಹಲವು ವರ್ಷಗಳೇ ಕಳೆದಿದ್ದರು ಸಹ ಇವರ ಸಮರ ಮಾತ್ರ ನಿಲ್ಲೋ ಲಕ್ಷಣಗಳು ಕಾಣ್ತಿಲ್ಲ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಸಚಿವ ಶ್ರೀರಾಮುಲು ಸ್ವಕ್ಷೇತ್ರ ಮೊಳಕಾಲ್ಮೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಹೀಗಾಗಿ ಆಕ್ರೋಶಗೊಂಡಿರೋ ತಿಪ್ಪೇಸ್ವಾಮಿಯವರು, ಆ ಕಾಮಗಾರಿಗಳಿಗೆ ನಾನು ಶಂಕು ಸ್ಥಾಪನೆ ಮಾಡಿದ್ದು, ನಾನು ಶಾಸಕನಾಗಿದ್ದಾಗ ನಿರ್ಮಿಸಿದ್ದ ಕಟ್ಟಡಗಳನ್ನು ಉದ್ಘಾಟನೆ ಮಾಡಲು ರಾಮುಲು ಬರುತ್ತಾನೆಂದು ಆರೋಪಿಸಿದ್ದಾರೆ.

    ಬಳ್ಳಾರಿಯಲ್ಲೂ ಶ್ರೀರಾಮುಲು ವರ್ಚಸ್ಸು ಬಿದ್ದು ಹೋಗಿದೆ. ಆದರೆ ತಾನೊಬ್ಬ ದೊಡ್ಡ ಲೀಡರ್ ಅಂತ ಫೋಸ್ ಕೊಡುವ ಈ ಮಹಾನುಭಾವ ನಾಯಕ ಸಮುದಾಯದ ಲೀಡರ್ ಆಗಿದ್ದಾರೆ. ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸುವ ಗಂಡಸುತನ ತೋರಬೇಕಿತ್ತು ಅಂತ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಆರೋಗ್ಯ ಸಚಿವ ಶ್ರೀ ರಾಮುಲು ಹಣ ಮಾಡಲು ಮೊಳಕಾಲ್ಮೂರು ಕ್ಷೇತ್ರದ ಶಾಸಕನಾಗಿದ್ದು, ತನ್ನೊಂದಿಗೆ 20 ಜನ ಆಪ್ತ ಸಹಾಯಕರನ್ನ ಇಟ್ಟುಕೊಂಡಿದ್ದಾನೆ. ಇಲಾಖೆಗೋರ್ವ ಪಿಎಗಳನ್ನು ನೇಮಿಸಿರುವ ಈ ಪುಣ್ಯಾತ್ಮ, ತನ್ನ ಹೊಟ್ಟೆಪಾಡಿಗಾಗಿ ದುಡ್ಡು ವಸೂಲಿ ಮಾಡಲು ಮೊಳಕಾಲ್ಮೂರಿಗೆ ಬಂದಿದ್ದಾನೆಂದು ಆರೋಪಿಸಿದ್ದಾರೆ.

    ವಿಧಾನಸಭಾ ಚುನಾವಣೆ ವೇಳೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಶ್ರೀ ರಾಮುಲುಗೆ ಟಿಕೇಟ್ ನೀಡಿದ ಪರಿಣಾಮ ತೀವ್ರ ಆಕ್ರೋಶಕ್ಕೊಳಗಾಗಿದ್ದ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರ ಬೆಂಬಲಿಗರಿಂದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲದ ಕಲ್ಲು ತೂರಾಟ ಹಾಗೂ ರಾಮುಲು ಮೇಲೆ ಚಪ್ಪಲಿ ಎಸೆದು ಹೆದರಿಸಿ ಟಿಕೇಟ್ ಪಡೆಯಲು ಬಾರಿ ಪ್ರಯತ್ನ ಮಾಡಿದ್ದರು.

    ಆದರೆ ಈ ಗಲಭೆ ಹಾಗೂ ಸ್ಥಳೀಯರ ವಿರೋಧದ ನಡುವೆಯೂ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆದ್ದು ಆರೋಗ್ಯ ಸಚಿವರಾಗಿದ್ದಾರೆ. ಅಲ್ಲದೆ ಮಾಜಿ ಶಾಸಕ ತಿಪ್ಪೇಸ್ವಾಮಿ ಸಹ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಆದರೂ ಇವರಿಬ್ಬರ ನಡುವಿನ ದ್ವೇಷ ಮಾತ್ರ ಇನ್ನೂ ಶಮನವಾಗದೇ ಪರಸ್ಪರ ಆರೋಪ, ಪ್ರತ್ಯಾರೋಪ ಮುಂದುವರಿಸಿದ್ದಾರೆ.

  • ಶ್ರೀರಾಮುಲು ನಾಯಕ ಜನಾಂಗದವರೇ ಅಲ್ಲ: ಮಾಜಿ ಶಾಸಕ ತಿಪ್ಪೇಸ್ವಾಮಿ

    ಶ್ರೀರಾಮುಲು ನಾಯಕ ಜನಾಂಗದವರೇ ಅಲ್ಲ: ಮಾಜಿ ಶಾಸಕ ತಿಪ್ಪೇಸ್ವಾಮಿ

    ಬಳ್ಳಾರಿ: ಲೋಕಸಭಾ ಉಪಚುನಾಣೆಯಲ್ಲಿ ಬಳ್ಳಾರಿಯಲ್ಲಿ ಈಗ ಜಾತಿ ಜಗಳ ಆರಂಭವಾಗಿದೆ. ಗೌಡ ಜಾತಿಯ ಕುರಿತು ಶಾಸಕ ಬಿ.ಶ್ರೀರಾಮುಲು ಅವರು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆದರೆ, ಮತ್ತೊಂದೆಡೆ ಶ್ರೀರಾಮುಲು ಅವರು ನಾಯಕ ಜನಾಂಗದವರೇ ಅಲ್ಲ ಅಂತಾ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

    ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಬಿ.ಶ್ರೀರಾಮುಲು ಕರ್ನಾಟಕದವರೇ ಅಲ್ಲ. ಅವರು ಆಂಧ್ರ ಪ್ರದೇಶದ ಬೊಯಸ್ ಜನಾಂಗದವರು. ರಾಜಕೀಯ ಹಿತಾಸಕ್ತಿಗೆ ತಾವು ನಾಯಕ ಜನಾಂಗವರು ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಅವರು ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

    ಶ್ರೀರಾಮುಲು ಒಬ್ಬ ಮೋಸಗಾರ, ತಗಾದೆಕೋರ ವ್ಯಕ್ತಿ. ರಾಜ್ಯದಲ್ಲಿ ಕೇವಲ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿ ಸೋಲಲು ಶ್ರೀರಾಮುಲು ಒಬ್ಬರೇ ಸಾಕು. ಅವರು ಅಭಿವೃದ್ಧಿ ಕಾರ್ಯಬಿಟ್ಟು, ಮಾಟ ಮಂತ್ರ ಮಾಡುತ್ತಾರೆ ಎಂದ ಅವರು, ಬಳ್ಳಾರಿ ಉಪ ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಸ್ವಗ್ರಾಮದಿಂದಲೇ ನಿತ್ಯವೂ ಇಲ್ಲಿಗೆ ಬಂದು ಜಿಲ್ಲೆಯ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ತಿಪ್ಪೇಸ್ವಾಮಿ ಟಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ತಿಪ್ಪೇಸ್ವಾಮಿ ಅವರು ಬಿಜೆಪಿ ವಿರುದ್ಧವೇ ಕಿಡಿಕಾರುತ್ತಿದ್ದು, ಈಗ ಬಳ್ಳಾರಿ ಉಪಚುನಾವಣೆ ಸ್ಪರ್ಧೆಗೆ ಇಳಿದಿದ್ದಾರೆ. ಈ ಮೂಲಕ ಬಿಜೆಪಿ ವೋಟ್ ಬ್ಯಾಂಕ್ ಒಡೆಯಲೆಂದೇ ಅವರು ಕಣಕ್ಕೆ ಇಳಿದಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಸಚಿವ ತಿಪ್ಪೇಸ್ವಾಮಿ, ಸುಮತೀಂದ್ರ ನಾಡಿಗ, ಕರುಣಾನಿಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ!

    ಮಾಜಿ ಸಚಿವ ತಿಪ್ಪೇಸ್ವಾಮಿ, ಸುಮತೀಂದ್ರ ನಾಡಿಗ, ಕರುಣಾನಿಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ!

    ಬೆಂಗಳೂರು: ಮಾಜಿ ಸಚಿವ ತಿಪ್ಪೇಸ್ವಾಮಿ, ಸುಮತೀಂದ್ರ ನಾಡಿಗರ ಹಾಗೂ ಕರುಣಾನಿಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

    ತಿಪ್ಪೇಸ್ವಾಮಿ ಮತ್ತು ಸುಮೀಂದ್ರ ನಾಡಿಗರ ನಿಧನದ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ನಿಧನದ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ

    ಕರುಣಾನಿಧಿ ಅವರ ನಿಧನಕ್ಕೆ ಸಿಎಂ ಸಂತಾಪ ಸೂಚಿಸಿ, ದೇವೇಗೌಡರು ಪ್ರಧಾನಿ ಆಗೋದಕ್ಕೆ ಕರುಣಾನಿಧಿ ಪ್ರಮುಖ ಪಾತ್ರವಹಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿ ಸಂತಾಪ ಸೂಚಿಸಿದರು. ಇದನ್ನೂ ಓದಿ: ಹಿರಿಯ ಸಾಹಿತಿ ಡಾ. ಸುಮತೀಂದ್ರ ನಾಡಿಗ ನಿಧನ

    ಕರುಣಾನಿಧಿ ದಕ್ಷಿಣ ಭಾರತದ ಪ್ರಮುಖ ಮುತ್ಸದ್ದಿ ರಾಜಕಾರಣಿಯಾಗಿದ್ದು, ಐದು ಬಾರಿ ಸಿಎಂ ಆಗಿ ತಮಿಳುನಾಡಿನ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕರುಣಾನಿಧಿ ರೈತ ಕುಟುಂಬದಿಂದ ಹುಟ್ಟಿ ಲೇಖಕರಾಗಿ ನಂತರ ರಾಜಕೀಯ ಪ್ರವೇಶ ಮಾಡಿದ್ದರು. ಅವರ ದುಡಿಮೆ ಶ್ರಮ ನಮಗೆಲ್ಲ ಮಾದರಿಯಾಗಿದೆ. ಇದನ್ನೂ ಓದಿ: ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಇನ್ನಿಲ್ಲ

    1996ರ ಸಮ್ಮಿಶ್ರ ಸರ್ಕಾರ ರಚನೆ ಆಗಲು ಕರುಣಾನಿಧಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡಿಗ ಪ್ರಧಾನಿಯಾಗಲು ಕರುಣಾನಿಧಿ ಬೆಂಬಲ ನೀಡಿದ್ದರು. ಅವರ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಸಿಎಂ ಸಂತಾಪ ಕೋರಿದ್ದಾರೆ. ಇದನ್ನೂ ಓದಿ: ಬದುಕಿರುವಾಗಲೇ ದಂತಕಥೆಯಂತಿದ್ದ ಕರುಣಾನಿಧಿ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಚ್‍ಡಿಕೆ