Tag: ತಿನಿಸು

  • ಇನ್ಮುಂದೆ ಏರ್‌ಪೋರ್ಟ್‌ಗಳಲ್ಲಿ ಸಿಗುತ್ತೆ ಅಗ್ಗದ ಟೀ, ತಿಂಡಿಗಳು

    ಇನ್ಮುಂದೆ ಏರ್‌ಪೋರ್ಟ್‌ಗಳಲ್ಲಿ ಸಿಗುತ್ತೆ ಅಗ್ಗದ ಟೀ, ತಿಂಡಿಗಳು

    ನವದೆಹಲಿ: ದೇಶದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ಟೀ ಹಾಗೂ ತಿಂಡಿಗಳನ್ನು ಮಾರಾಟ ಮಾಡುವ ಕೌಂಟರ್‌ಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ತಿಳಿಸಿದೆ.

    ಹೌದು, ಎಎಐಯು ತನ್ನ ಅಧೀನಕ್ಕೆ ಒಳಪಡುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಟೀ ಹಾಗೂ ಸ್ನ್ಯಾಕ್ಸ್ ಗಳನ್ನು ಮಾರಾಟ ಮಾಡುವ ಕೌಂಟರ್‌ಗಳನ್ನು ಸ್ಥಾಪಿಸಲಿದೆ. ವಿಮಾನ ನಿಲ್ದಾಣಗಳಲ್ಲಿ ಟೀ, ಕಾಫಿ ಹಾಗೂ ಇನ್ನಿತರೆ ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದಿಂದ ಪ್ರಯಾಣಿಕರು ದಿನೇ ದಿನೇ ದೂರು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಎಯು ತನ್ನದೇ ಆದ ಕೌಂಟರ್‌ಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದೆ.

    ಈಗಾಗಲೇ ದೇಶದ ಕೆಲವು ಆಯ್ದ ವಿಮಾನ ನಿಲ್ದಾಣಗಳಲ್ಲಿ ಪ್ರಾಯೋಗಿಕ ಕೌಂಟರ್‌ಗಳನ್ನು ತೆರೆದಿದ್ದು, ಅಲ್ಲಿ ಎಂಆರ್‌ಪಿ ಬೆಲೆಗೆ ಆಯ್ದ ತಂಪು ಪಾನೀಯ ಹಾಗೂ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಲದೇ ಇಂಥಹ ಸಣ್ಣ ಸಣ್ಣ ಕೌಂಟರ್‌ಗಳನ್ನು ಎಲ್ಲೆಡೆ ತೆರೆಯಲಾಗುತ್ತದೆ ಎಂದು ಎಎಐ ಮಾಹಿತಿ ನೀಡಿದೆ.

    ವಿಮಾನ ನಿಲ್ದಾಣಗಳಲ್ಲಿ ಆಹಾರ ಪದಾರ್ಥಗಳನ್ನು ದುಪ್ಪಟ್ಟು ಮಾರಾಟ ಮಾಡುವ ವಿಚಾರ ಕಳೆದ ಮಾರ್ಚ್ ತಿಂಗಳಲ್ಲಿ ಸಂಸತ್ತಿನಲ್ಲಿಯೂ ಭಾರೀ ಚರ್ಚೆ ಮಾಡಿತ್ತು. ಅಲ್ಲದೇ ಕಾಂಗ್ರೆಸ್ಸಿನ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv