Tag: ತಾವರೆಗೆರೆ

  • ಮಂಡ್ಯ| ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಕೋಟಿ ಕೋಟಿ ವಂಚನೆ

    ಮಂಡ್ಯ| ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಕೋಟಿ ಕೋಟಿ ವಂಚನೆ

    – ಸರ್ಕಾರಿ ಅಧಿಕಾರಿ ಹೆಸರಲ್ಲಿ 30ಕ್ಕೂ ಹೆಚ್ಚು ಮಂದಿಗೆ ದೋಖಾ

    ಮಂಡ್ಯ: ಸರ್ಕಾರಿ ಕೆಲಸ (Govt Job) ಪಡೆಯಬೇಕು ಎಂದರೆ ಅರ್ಹತೆ ಜೊತೆಗೆ ಪರೀಕ್ಷೆಯಲ್ಲಿ ಪಾಸ್ ಆಗಬೇಕು. ಆದರೆ ಇಲ್ಲೊಬ್ಬ ನೀವು ಲಕ್ಷ ಲಕ್ಷ ಹಣ ಕೊಡಿ ಸಾಕು, ನಿಮ್ಮ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಕೋಟಿ ಕೋಟಿ ರೂ. ವಂಚನೆ ಮಾಡಿರೋದು ಮಂಡ್ಯದಲ್ಲಿ (Mandya) ಬೆಳಕಿಗೆ ಬಂದಿದೆ.

    ಮಂಡ್ಯ ನಗರದ ತಾವರೆಗೆರೆ ನಿವಾಸಿ ಹೆಚ್.ಸಿ.ವೆಂಕಟೇಶ್ ವಂಚಿಸಿದ ವ್ಯಕ್ತಿ. ತಾನೊಬ್ಬ ದೊಡ್ಡ ಅಧಿಕಾರಿ ಎಂದು ಬಿಂಬಿಸಿಕೊಂಡು ನಿಮ್ಮ ಮಕ್ಕಳಿಗೆ, ನಿಮ್ಮ ಹೆಂಡತಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಲಕ್ಷ ಲಕ್ಷ ಪೀಕಿ ವಂಚಿಸೋದು ಈತನ ಕೆಲಸ. ವಿಧಾನಸೌಧದಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಬಿಲ್ಡಪ್ ಕೊಟ್ಟು ಈ ಭೂಪ ಮಂಡ್ಯದ ಹಲವರಿಗೆ ವಂಚಿಸಿದ್ದಾನೆ. ಇದನ್ನೂ ಓದಿ: ಜಸ್ಟ್ ಮಿಸ್, ಮರ ಹತ್ತಿ ಆನೆ ದಾಳಿಯಿಂದ ತಪ್ಪಿಸಿಕೊಂಡ ಇಟಿಎಫ್ ಸಿಬ್ಬಂದಿ!

    ವೆಂಕಟೇಶ್ ತಾವರಗೆರೆಯ ಗಾಯತ್ರಿ ಎಂಬವರಿಗೆ ನಿಮ್ಮ ಮೂವರು ಮಕ್ಕಳಿಗೆ ಅಬಕಾರಿ ಇಲಾಖೆಯಲ್ಲಿ ಡ್ರೈವರ್ ಕೆಲಸ ಕೊಡಿಸುತ್ತೇನೆ. ತಲಾ ಒಬ್ಬರಿಗೆ 6 ಲಕ್ಷದಂತೆ 18 ಲಕ್ಷ ಕೊಡಿ ಎಂದಿದ್ದ. ಇದನ್ನು ನಂಬಿದ್ದ ಗಾಯತ್ರಿ 14 ಲಕ್ಷ ಹಣವನ್ನ ಹಂತ-ಹಂತವಾಗಿ ನೀಡಿದ್ದರು. ಆದರೆ ಹಣ ಕೊಟ್ಟು ಒಂದೂವರೆ ವರ್ಷ ಕಳೆದರೂ ಕೆಲಸ ಸಿಕ್ಕಿಲ್ಲ. ಕೊಟ್ಟಿದ್ದ ಹಣವೂ ವಾಪಸ್ ಸಿಗಲಿಲ್ಲ. ಇದರಿಂದ ಕಂಗಾಲಾದ ಗಾಯತ್ರಿ ಹಣ ಕೊಟ್ಟ ದಾಖಲೆ ಸಮೇತ ಮಂಡ್ಯ ಪೂರ್ವ ಠಾಣೆಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಮಲ್ಲೇಶ್ ಎಂಬವರಿಂದ ಹೆಂಡತಿಗೆ ಕೆಲಸ ಕೊಡಿಸುವುದಾಗಿ 19 ಲಕ್ಷ ಹಾಗೂ ನೇತ್ರಾವತಿ ಎಂಬವರ ಪುತ್ರನಿಗೆ ನೌಕರಿ ಕೊಡಿಸುವುದಾಗಿ 18 ಲಕ್ಷ ಹಣ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದೇ ತಡ ಈತನ ವಂಚನೆ ಪುರಾಣ ಒಂದೊಂದೇ ಬೆಳಕಿಗೆ ಬಂದಿದೆ. ಇದನ್ನೂ ಓದಿ: 2,000 ಕೋಟಿ ರೂ. ಭ್ರಷ್ಟಾಚಾರ ಆರೋಪ; ಡಿಸಿಎಂ ವಿರುದ್ಧ ಮುನಿರತ್ನ ದೂರು

    ಈ ಆಸಾಮಿ ಹಣ ಕೊಟ್ಟಿದ್ದವರಿಗೆ ನಂಬಿಸಿದ್ದೆ ರೋಚಕ. ಹಣ ಪಡೆಯುತ್ತಿದ್ದಂತೆ ಈತ, ನೀವು ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ನೇಮಕವಾಗಿದ್ದೀರಿ ಎಂದು ನಕಲಿ ನೇಮಕಾತಿ ಪತ್ರ ನೀಡುತ್ತಿದ್ದ. ಅಲ್ಲದೇ ಅಂಕಪಟ್ಟಿ, ದಾಖಲೆ ಪರಿಶೀಲನೆ ಇದೆ ಎಂದು ನೇರ ವಿಧಾನಸೌಧಕ್ಕೂ ಕರೆದುಕೊಂಡು ಹೋಗಿ, ತಾನೇ ಅಧಿಕಾರಿ ಬಳಿ ಓಡಾಡುವಂತೆ ಹೋಗಿ ನಂಬಿಸುತ್ತಿದ್ದ. ಇನ್ನೊಂದು ವಾರದಲ್ಲಿ ನಿಮಗೆ ಪೋಸ್ಟಿಂಗ್ ಆಗುತ್ತೆ ಎಂದು ನಂಬಿಸುತ್ತಿದ್ದ. ಅಷ್ಟೇ ಅಲ್ಲದೇ ಸಿಎಂ, ಸಚಿವರು, ಚೀಫ್ ಸೆಕ್ರೆಟರಿ ಸೇರಿದಂತೆ ಹಲವರ ಸಹಿಯಲ್ಲದೇ ವಿವಿಧ ಇಲಾಖೆಗಳ ಲೆಟರ್ ಹೆಡ್, ಸೀಲುಗಳನ್ನ ಮನೆಯಲ್ಲಿಯೇ ನಕಲು ಮಾಡುತ್ತಿರುವುದು ಮಹಜರು ವೇಳೆ ಪತ್ತೆಯಾಗಿದೆ. ಹತ್ತು ಹಲವು ಐಡಿ ಕಾರ್ಡ್‌ಗಳು ಸಿಕ್ಕಿವೆ. ಇದನ್ನೂ ಓದಿ: ಬೆಳಗಾವಿ: ಮರಾಠಿ ಬರಲ್ಲ.. ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ

    ವಂಚಕ ವೆಂಕಟೇಶ್ ಕೇವಲ ಮೂವರಿಗಷ್ಟೇ ಅಲ್ಲ, ಬರೋಬ್ಬರಿ 30ಕ್ಕೂ ಹೆಚ್ಚು ಜನರಿಂದ 2 ಕೋಟಿಗೂ ಅಧಿಕ ಹಣ ಪಡೆದು ವಂಚನೆ ಮಾಡಿರುವ ಶಂಕೆ ಇದೆ. ದೊಡ್ಡ ಜಾಲವೂ ಇದರ ಹಿಂದೆ ಇದೆ ಎಂಬ ಮಾಹಿತಿಯಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಅಟಲ್‌ಜೀ ಸಂಘಟನೆ, ಹೋರಾಟವು ಕಾರ್ಯಕರ್ತರಿಗೆ ಪ್ರೇರಣಾಶಕ್ತಿ: ಯಡಿಯೂರಪ್ಪ

  • ಈ ವಸತಿ ಶಾಲೆಯಲ್ಲಿ ಮುಟ್ಟಾದ್ರೆ ಮಾತ್ರ ಸ್ನಾನಕ್ಕೆ ನೀರು – ಇಲ್ಲದಿದ್ರೆ ವಾರಕ್ಕೊಮ್ಮೆ ವಿದ್ಯಾರ್ಥಿನಿಯರ ಸ್ನಾನ

    ಈ ವಸತಿ ಶಾಲೆಯಲ್ಲಿ ಮುಟ್ಟಾದ್ರೆ ಮಾತ್ರ ಸ್ನಾನಕ್ಕೆ ನೀರು – ಇಲ್ಲದಿದ್ರೆ ವಾರಕ್ಕೊಮ್ಮೆ ವಿದ್ಯಾರ್ಥಿನಿಯರ ಸ್ನಾನ

    ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರದಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಕೇವಲ ಮುಟ್ಟಾದ್ರೆ ಮಾತ್ರ ಪ್ರತಿದಿನ ಸ್ನಾನ, ಇಲ್ಲವಾದ್ರೆ ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಯಿದೆ.

    300 ಮಕ್ಕಳಿರುವ ವಸತಿ ಶಾಲೆಗೆ ಪ್ರತಿದಿನ 3 ಟ್ಯಾಂಕರ್ ನೀರು ಪೂರೈಕೆ ಮಾಡಿಸ್ತಿದ್ದಾರೆ. ಆದ್ರೆ ಈ ನೀರು ಮಕ್ಕಳ ಮುಖ ತೊಳೆಯಲು ಸಾಕಾಗ್ತಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತಾವರಗೇರಾದಿಂದ 2 ಕಿಲೋಮೀಟರ್ ದೂರದಲ್ಲಿದ್ದು, ನಿರ್ಜನ ಪ್ರದೇಶವಾಗಿದೆ.

    ಇಲ್ಲಿ ಓಡಾಡಲು ಸೂಕ್ತ ರಸ್ತೆಯೂ ಇಲ್ಲ. ಇನ್ನೂ ಇದೇ ಕ್ಯಾಂಪಸ್‍ ನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಆರಂಭವಾಗಿದ್ದು, ಹೆಚ್ಚುವರಿಯಾಗಿ 50 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಹೀಗಾಗಿ ಶಾಲೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.