Tag: ತಾವರೆಕೊಪ್ಪ ಹುಲಿ-ಸಿಂಹಧಾಮ

  • ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಕಳೆ- ಬನ್ನೇರುಘಟ್ಟದಿಂದ ಬಂದ್ವು 2 ಸಿಂಹಗಳು

    ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಕಳೆ- ಬನ್ನೇರುಘಟ್ಟದಿಂದ ಬಂದ್ವು 2 ಸಿಂಹಗಳು

    ಶಿವಮೊಗ್ಗ: ಸಿಂಹಗಳು ಇಲ್ಲದೆ ಸೊರಗಿದ್ದ ಶಿವಮೊಗ್ಗದ ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಈಗ ಹೊಸ ಕಳೆ ಬಂದಿದೆ.

    ಈ ಕಳೆ ನೀಡಿರುವುದು ಬನ್ನೆರುಘಟ್ಟ ಸಫಾರಿಯಿಂದ ಬಂದಿರುವ ನಾಲ್ಕು ವರ್ಷದ ಸರ್ವೇಶ, ನಾಲ್ಕೂವರೆ ವರ್ಷದ ಸುಶ್ಮಿತ ಎಂಬ ಎರಡು ಸಿಂಹಗಳು. ಒಂದು ಕಾಲದಲ್ಲಿ ಎಂಟು ಸಿಂಹಗಳಿದ್ದ ಇಲ್ಲಿ ಈಗ ಕೇವಲ ಮುದಿಯಾಗಿರುವ ಆರ್ಯ ಹಾಗೂ ಮಾನ್ಯ ಎಂಬ ಎರಡೇ ಸಿಂಹಗಳಿವೆ.

    ಈ ಸಿಂಹಗಳ ಕೊರತೆ ನೀಗಲು ಮೃಗಾಲಯ ಪ್ರಾಧಿಕಾರ ಇಲ್ಲಿಗೆ ಬನ್ನೇರುಘಟ್ಟದಿಂದ ಸಿಂಹಗಳನ್ನು ಕಳುಹಿಸಿದೆ. ಈ ಸಿಂಹಗಳು ಇಲ್ಲಿ ವಂಶೋದ್ಧಾರ ಮಾಡಿ, ಸಿಂಹಗಳ ಸಂಖ್ಯೆ ಹೆಚ್ಚಿಸಲಿವೆ ಎಂಬ ವಿಶ್ವಾಸ ಅರಣ್ಯ ಇಲಾಖೆ ಅಧಿಕಾರಿಗಳಿದ್ದಾಗಿದೆ. ಇಲ್ಲಿರುವ ಸಿಂಹಗಳ ಜೊತೆ ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಹೊಸ ಸಿಂಹಗಳನ್ನು ಇನ್ನೂ ಕೇಜ್ ನಲ್ಲೇ ಇಡಲಾಗಿದೆ. ಇನ್ನೊಂದು ವಾರದಲ್ಲಿ ಮುಕ್ತವಾಗಿ ಬಿಡುವ ಸಾಧ್ಯತೆ ಇದ್ದು ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.